ಅದೊಂದು ಕಾಲವಿತ್ತು, ಆಗ ಮಹಿಳೆಯರು ನಾಲ್ಕು ಗೋಡೆಗಷ್ಟೇ ಸೀಮಿತಗೊಂಡಿದ್ದರು. ಪುರುಷರು ಹೊರಗೆ ದುಡಿಯಲು ಹೋಗುತ್ತಿದ್ದರು. ಮಹಿಳೆಯರು ಮನೆ ನೋಡಿಕೊಳ್ಳುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮಹಿಳೆಯರು ಮನೆಯ ಜವಾಬ್ದಾರಿಯ ಜೊತೆಗೆ ನೌಕರಿಯ ಜವಾಬ್ದಾರಿಯನ್ನು ಕೂಡ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಗಂಡಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿರುವುದರಿಂದ ಮನೆಯ ಆದಾಯವೇನೋ ಹೆಚ್ಚುತ್ತದೆ. ಆದರೆ ಇಬ್ಬರೂ ಪರಸ್ಪರರಿಗೆ ಸಮಯ ಕೊಡಲು ಆಗುವುದಿಲ್ಲ.

ಇದರ ತಾತ್ಪರ್ಯ ಇಷ್ಟೆ, ಇಬ್ಬರೂ ತಮ್ಮ ಉದ್ಯೋಗದಲ್ಲಿ ಎಷ್ಟೊಂದು ವ್ಯಸ್ತರಾಗಿಬಿಡುತ್ತಾರೆಂದರೆ, ಅವರಿಗೆ ಪರಸ್ಪರ ಸಮಾಲೋಚನೆ ನಡೆಸಲು ಕೂಡ ಸಮಯ ಸಿಗುವುದಿಲ್ಲ.

ಗಂಡ, ಮಕ್ಕಳಿಗೆ ಸಮಯ ಕೊಡಲು ಆಗದವಳಿಗೆ, ಕಿಟಿ ಪಾರ್ಟಿಗಳಿಗೆ, ಗೆಳತಿಯರ ಮನೆ ಕಾರ್ಯಕ್ರಮಗಳಿಗೆ ಹೋಗಲು ಸಮಯವಾದರೂ ಎಲ್ಲಿರುತ್ತದೆ?

ಹೆಂಡತಿಯನ್ನು ಅವಲಂಬಿಸಿದ ಪತಿ

ಭಾರತೀಯ ಸಮಾಜದಲ್ಲಿ ಪುರುಷ ಮನೆಯ ಯಜಮಾನನಾಗಿರಬಹುದು. ಆದರೆ ಅವನು ಪ್ರತಿಯೊಂದಕ್ಕೂ ಹೆಂಡತಿಯ ಮೇಲೆ ಅವಲಂಬಿತನಾಗಿರುತ್ತಾನೆ. ಅಷ್ಟೇ ಏಕೆ, ತನ್ನ ವೈಯಕ್ತಿಕ ಅಗತ್ಯಗಳಿಗೂ ಅವನಿಗೆ ಹೆಂಡತಿಯ ಸಹಾಯ ಬೇಕಾಗುತ್ತದೆ. ಹೆಂಡತಿ ಅವನ ಬಗ್ಗೆ ಎಷ್ಟೆಂದು ಗಮನಹರಿಸಲು ಆಗುತ್ತದೆ? ಗಂಡ ತನ್ನ ದರ್ಪ ತೋರಿಸಲು ತಡ ಮಾಡುವುದಿಲ್ಲ. ಹೆಂಡತಿ ತಕ್ಷಣವೇ ಅವನ ಸೇವೆಗೆ ಸನ್ನದ್ಧಳಾಗಬೇಕಾಗುತ್ತದೆ. ಇಲ್ಲದಿದ್ದರೆ ಅವನ ಕೊಂಕು ಮಾತುಗಳನ್ನು ರಾತ್ರಿ ತನಕ ಕೇಳಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ. ಗಂಡನ ಬಗ್ಗೆ ನಿನಗೆ ಎಳ್ಳಷ್ಟೂ ಗೌರವ ಇಲ್ಲವೇ ಎಂಬ ಮಾತುಗಳನ್ನು ಕೇಳಬೇಕಾಗುತ್ತದೆ. ಈಗ ಅವಳಿಗೆ ಕೆಲಸದ ಒತ್ತಡ ಎಷ್ಟೊಂದು ಇದೆಯೆಂದರೆ, ಅವಳು ತಾನು ಸ್ವತಃ ಖುಷಿಯಿಂದಿರುವುದಿಲ್ಲ. ಬೇರೆಯವರನ್ನೂ ಖುಷಿಯಿಂದ ಇಡಲು ಆಗುವುದಿಲ್ಲ. ಎಂತಹ ವಿಡಂಬನೆ ನೋಡಿ, ಗಂಡನ ಎಲ್ಲ ಅವಶ್ಯಕತೆಗಳನ್ನು ಪೂರೈಸುವ ಹೆಂಡತಿ ಗಂಡನ ದೌರ್ಜನ್ಯಗಳನ್ನೂ ಸಹಿಸಿಕೊಳ್ಳಬೇಕಾಗುತ್ತದೆ. ಗಂಡ ತನ್ನ ಹೆಂಡತಿಯ ಅವಶ್ಯಕತೆಗಳನ್ನು ಅವಳ ಬೇಕುಬೇಡಗಳನ್ನು ಗಮನಿಸಲು ಸಾಧ್ಯವಾಗುತ್ತದೆಯೇ? ಗಂಡನಷ್ಟೇ ದಣಿಯುತ್ತಾನೆಯೇ? ಹೆಂಡತಿಗೆ ದಣಿವೇ ಆಗುದಿಲ್ಲವೇ?

ಉದ್ಯೋಗಸ್ಥ ದಂಪತಿಗಳ ಪರಸ್ಪರರ ಆಸಕ್ತಿ ಅನಾಸಕ್ತಿ, ವ್ಯಸ್ತತೆ ಮತ್ತು ವಿವಶತೆಯ ಬಗ್ಗೆ ಅರಿತುಕೊಳ್ಳಬೇಕಾಗುತ್ತದೆ. ಆಗಲೇ ಅವರು ಸುಖಿಯಾಗಿರಲು ಸಾಧ್ಯ.

ಉದ್ಯೋಗಸ್ಥ ದಂಪತಿಗಳು ಎಲ್ಲೋ ಹೋಗುವ ಕಾರ್ಯಕ್ರಮ ಹಾಕಿಕೊಳ್ಳುತ್ತಾರೆ. ಆದರೆ ಇಬ್ಬರಲ್ಲಿ ಒಬ್ಬರಿಗೆ ರಜೆ ಸಿಗದೇ ಹೋದರೆ, ಅವರು ತಮ್ಮ ಟೂರ್‌ ಪ್ರೋಗ್ರಾಮ್ ನ್ನೇ ರದ್ದುಗೊಳಿಸಬೇಕಾಗುತ್ತದೆ. ಇದನ್ನು ಸಹಜವಾಗಿ ಸ್ವೀಕರಿಸಬೇಕು. ಅದೇ ರೀತಿ ಸಂಜೆ ಹೊತ್ತು ಹೋಟೆಲ್ ಪಾರ್ಟಿ ಅಂತ ಏನೇನೋ ಯೋಜನೆ ಹಾಕುತ್ತಾರೆ. ಆದರೆ ಆಫೀಸ್‌ನಿಂದ ಮನೆಗೆ ಹೋಗಲು ತಡವಾದ ಕಾರಣದಿಂದ ಅಲ್ಲಿಗೆ ಹೋಗಲು ಆಗುವುದಿಲ್ಲ. ಅದನ್ನು ವಿವಶತೆಯಿಂದ ಭಾವಿಸಬೇಕು.

ಉದ್ಯೋಗಸ್ಥ ದಂಪತಿಗಳಲ್ಲಿ ಆಫೀಸಿನ ಒತ್ತಡವಂತೂ ಇದ್ದೇ ಇರುತ್ತದೆ. ಅದರಲ್ಲಿ ಒಬ್ಬರ ಆಫೀಸಿನ ಬಾಸ್‌ ಬಹಳ ಸ್ಟ್ರಿಕ್ಟ್ ಆಗಿರಬಹುದು. ಏನೇನೋ ತೊಂದರೆಗಳನ್ನು ಸಹಿಸಿ ಮನೆಗೆ ಬರಬೇಕಾಗುತ್ತದೆ. ಇಂತಹದರಲ್ಲಿ ಅವರು ತಮ್ಮ ಕೋಪವನ್ನು ಮಕ್ಕಳ ಮೇಲೆ ತೋರಿಸುತ್ತಾರೆ. ಇಂತಹದರಲ್ಲಿ ಗಂಡಹೆಂಡತಿ ಇಬ್ಬರೂ ಪರಸ್ಪರರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಪರಸ್ಪರರನ್ನು ಸ್ನೇಹಿತರೆಂಬಂತೆ ಭಾವಿಸಿದರೆ, ಸಮಸ್ಯೆ ಆಲಿಸಿ ಅದರ ಬಗ್ಗೆ ಏನಾದರೂ ಪರಿಹಾರ ಸೂಚಿಸಿದರೆ ಅರ್ಧದಷ್ಟು ಒತ್ತಡ ಕಡಿಮೆಯಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ