ನಿಮ್ಮ ಜೀವನ ಸಂಗಾತಿಯೊಂದಿಗಿನ ಪ್ರಥಮ ಮಿಲನ ಸದಾ ನೆನಪಿನಲ್ಲಿ ಉಳಿಯುವಂತಾಗ ಬೇಕಾದರೆ, ಅದಕ್ಕಾಗಿ ನೀವು ಕೊಂಚ ಸಿದ್ಧತೆ ಮಾಡಬೇಕು. ಜೊತೆಗೆ ಕೆಲವು ವಿಷಯಗಳ ಕಡೆಗೆ ಗಮನವನ್ನೂ ಹರಿಸಬೇಕಾಗುತ್ತದೆ.

ವಿಶೇಷ ಸಿದ್ಧತೆ : ಪ್ರಥಮ ಮಿಲನದಂದು ಸಂಪೂರ್ಣ ಸಂತೋಷದಿಂದಿರಲು ವಿಶೇಷ ಸಿದ್ಧತೆ ಮಾಡಬೇಕಾಗುತ್ತದೆ. ಅದರಿಂದ ಪರಸ್ಪರರನ್ನು ಇಂಪ್ರೆಸ್‌ ಮಾಡಲು ಸಾಧ್ಯವಾಗುತ್ತದೆ.

ಸ್ಪೆಷಲ್ ಡೆಕೊರೇಶನ್‌ : ನಿಮ್ಮ ಪ್ರಥಮ ಮಿಲನದ ಕೋಣೆಯ ವಾತಾವರಣ ನೀವು ಚೆನ್ನಾಗಿ ಎಂಜಾಯ್‌ ಮಾಡಲು ಅನುಕೂಲವಾಗಿ ಇರುವಂತೆ ನೋಡಿಕೊಳ್ಳಬೇಕು.

ಕೋಣೆ ವಿಶೇಷವಾದ ಬಣ್ಣ ಮತ್ತು ಪರಿಮಳದಿಂದ ಕೂಡಿರಲಿ. ಬೇಕಾದರೆ ಕೋಣೆಯಲ್ಲಿ ಆಟೋಮ್ಯಾಟಿಕ್‌ ಫ್ಲೋರಿಂಗ್‌ ಕ್ಯಾಂಡಲ್ಸ್ ನ ರೋಮಾಂಚಕ ವಾತಾರಣ ಉಂಟು ಮಾಡಬಹುದು. ಮಂದವಾದ ಬೆಳಕು ಮತ್ತು ಮೆಲುದನಿಯ ಸಂಗೀತ ಉತ್ತೇಜನದ ವಾತಾವರಣವನ್ನೂ ರೂಪಿಸಬಲ್ಲದು. ರೆಡ್‌ ಹಾರ್ಟ್‌ ಶೇಪ್‌ನ ಕುಶನ್ಸ್ ಮತ್ತು ಬಲೂನ್‌ಗಳಿಂದ ಕೋಣೆಯನ್ನು ಅಲಂಕರಿಸಿ. ಬೇಕಾದರೆ ಸೆಕ್ಸೀ ಪೇಂಟಿಂಗ್‌ಗಳನ್ನೂ ತೂಗು ಹಾಕಬಹುದು.

ಹೂಗಳ ಅಲಂಕಾರ ಕೋಣೆಗೆ ವಿಶೇಷ ಪ್ರಭಾವವನ್ನು ನೀಡುತ್ತದೆ. ಇವೆಲ್ಲ ಸಿದ್ಧತೆಗಳು ಸೆಕ್ಸ್ ಹಾರ್ಮೋನ್‌ನ ಸ್ರಾವವನ್ನು ಉತ್ತೇಜಿಸಿ ನಿಮ್ಮ ಪ್ರಥಮ ಮಿಲನದ ನೆನಪು ಸದಾ ಉಳಿಯುವಂತೆ ಮಾಡುತ್ತದೆ.

ಸೆಲ್ಫ್ ಗ್ರೂಮಿಂಗ್‌ : ನಿಮ್ಮ ಪ್ರಥಮ ಮಿಲನಕ್ಕಾಗಿ ಸೆಲ್ಫ್ ಗ್ರೂಮಿಂಗ್‌ ಬಗ್ಗೆಯೂ ಗಮನ ನೀಡಿ. ನಿಮ್ಮನ್ನು ಶಾರೀರಿಕ ಮತ್ತು ಮಾನಸಿಕವಾಗಿ ಸಿದ್ಧತೆಗೊಳಿಸಿಕೊಳ್ಳಿ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ನೀವು ಸ್ಟ್ರೆಸ್‌ ಫ್ರೀ ಆಗಿ ಉತ್ತಮ ಪ್ರದರ್ಶನ ನೀಡಬಲ್ಲಿರಿ. ಈ ಸಮಯದಲ್ಲಿ ಪರ್ಸನಲ್ ಹೈಜೀನ್‌ ಸಹ ಬಹಳ ಮುಖ್ಯ. ಅದರಿಂದ ನೀವು ಸಂಬಂಧ ಬೆಳೆಸುವಾಗ ಯಾವುದೇ ಹಿಂಜರಿಕೆ ಇಲ್ಲದೆ ನಿಮ್ಮ ಪ್ರಥಮ ಮಿಲನವನ್ನು ಸಂಪೂರ್ಣವಾಗಿ ಎಂಜಾಯ್‌ ಮಾಡಲು ಸಾಧ್ಯವಾಗುತ್ತದೆ.

ಪ್ರೀತಿಯ ಉಡುಗೊರೆ : ಪ್ರಥಮ ಮಿಲನದ ಸವಿನೆನಪಿಗಾಗಿ ನೀವು ಗಿಫ್ಟ್ ಸಹ ಕೊಡಬಹುದು. ಒಂದು ಪರ್ಸನಲೈಸ್ಡ್ ಫೋಟೋ ಫ್ರೇಮ್, ವಿಶಿಷ್ಟ ಕೇರಿಂಗ್‌ ಅಥವಾ ಸೆಕ್ಸೀ ಇನ್ನರ್‌ವೇರ್‌ ಸಹ ಆಗಬಹುದು. ಇದರಿಂದ ವಾತಾವರಣ ರೊಮ್ಯಾಂಟಿಕ್‌ ಮತ್ತು ಉತ್ತೇಜನಕಾರಕವಾಗುತ್ತದೆ.

ಮನಬಿಚ್ಚಿ ಮಾತನಾಡಿ : ಪ್ರಥಮ ಮಿಲನ ಸ್ವಾರಸ್ಯಕರವಾಗಿರಲು ನಿಮ್ಮನ್ನು ಮಾನಸಿಕವಾಗಿ ಸಿದ್ಧಗೊಳಿಸಿಕೊಳ್ಳಿ. ಈ ಬಗ್ಗೆ ನಿಮ್ಮ ಪಾರ್ಟ್‌ನರ್‌ ಜೊತೆ ಮನಬಿಚ್ಚಿ ಮಾತನಾಡಿ. ನಿಮ್ಮ ಮನಸ್ಸಿನ ಸಂದೇಹಗಳ ಬಗ್ಗೆ ಪ್ರಶ್ನೆ ಕೇಳಿ. ಪರಸ್ಪರರ ಇಚ್ಛೆಗಳನ್ನು ತಿಳಿದುಕೊಳ್ಳಿ. ಸಾಧ್ಯವಾದಷ್ಟೂ ಪಾಸಿಟಿವ್ ‌ಆಗಿರಲು ಪ್ರಯತ್ನಿಸಿ.

ಸೆಕ್ಸ್ ಸುರಕ್ಷೆ : ಸಂಬಂಧ ಬೆಳೆಸುವ ಮುನ್ನ ಸೆಕ್ಶುಯಲ್ ಸುರಕ್ಷೆಯ ಬಗ್ಗೆ ಸಿದ್ಧತೆ ಮಾಡಿಕೊಳ್ಳಿ. ಸೆಕ್ಸ್ ಪ್ರಿಕಾಶನ್ಸ್ ಬಗ್ಗೆ ಗಮನ ನೀಡಿ. ನಿಮ್ಮ ಜೀವನ ಸಂಗಾತಿಯು ಕಾಂಡೋಮ್ ನ್ನು ಬಳಸಬಹುದು. ಇದರಿಂದ ಇಷ್ಟವಿಲ್ಲದ ಪ್ರೆಗ್ನೆನ್ಸಿಯ ಭಯವಿರುವುದಿಲ್ಲ ಮತ್ತು ಯೋನಿ ರೋಗದ ಶಂಕೆಯೂ ಇರುವುದಿಲ್ಲ.

ಸೆಕ್ಸ್ ಸಂದಂರ್ಭದಲ್ಲಿ ಸೆಕ್ಸೀ ಫುಡ್‌ಗಳಾದ ಸ್ಟ್ರಾಬೆರಿ, ದ್ರಾಕ್ಷಿ, ಚಾಕಲೇಟ್‌ಗಳಿಂದ ನಿಮ್ಮ ಸೆಕ್ಸೀ ಕ್ಷಣಗಳನ್ನು ಪ್ರಾರಂಭಿಸಿ.

ಹೆಚ್ಚು ಕಾಲ ಕಾಯುವಂತೆ ಮಾಡಬೇಡಿ. ಮಿಲನದ ಕಾಲದಲ್ಲಿ ಪರಸ್ಪರರ ಮೂಡ್‌ ಹಾಳಾಗುವಂತಹ ಅಥವಾ ಬೇಸರವಾಗುವಂತಹ ಮಾತುಗಳನ್ನಾಡಬೇಡಿ. ಈ ಸಮಯದಲ್ಲಿ ವರ್ಜಿನಿಟಿ ಅಥವಾ ಹಳೆಯ ಗರ್ಲ್ ಫ್ರೆಂಡ್‌, ಬಾಯ್‌ಫ್ರೆಂಡ್‌ ಬಗೆಗಿನ ಮಾತು ಬೇಡವೇ ಬೇಡ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ