ನೀವು ನಿಮ್ಮ ವೈವಾಹಿಕ ಸಂಬಂಧದ ಬಗ್ಗೆ ಸದಾ ಚಿಂತಿತರಾಗಿರುತ್ತೀರಾ? ಒಂದು ವೇಳೆ ನಿಮ್ಮ ಉತ್ತರ `ಹೌದು' ಎಂದಾದರೆ,  ನೀವು ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ. ನಿಮ್ಮ ಚಿಂತೆಯ ಕಾರಣ ನಿಮ್ಮದೇ ಆದ ಆ್ಯಟಿಟ್ಯೂಡ್‌ ಅಥವಾ ನಿಮ್ಮಿಬ್ಬರ ಕೆಮಿಸ್ಟ್ರಿ ಕಾರಣವಾಗಿರಬಹುದು. ಇಂತಹದರಲ್ಲಿ ನೀವು ಕೆಲವೊಂದು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ವೈವಾಹಿಕ ಜೀವನವನ್ನು ಸಮರ್ಪಕವಾಗಿ ಮುಂದುವರಿಸಿಕೊಂಡು ಹೋಗಬಹುದು.

ಕಮ್ಯುನಿಕೇಶನ್‌ :  ನಿಮ್ಮ ಭಾವನೆಗಳು, ವಿಚಾರ, ಸಮಸ್ಯೆಗಳನ್ನು ಪರಸ್ಪರ ಹಂಚಿಕೊಳ್ಳಿ. ವರ್ತಮಾನದ ಬಗ್ಗೆ, ಭವಿಷ್ಯದ ಬಗ್ಗೆ ಚರ್ಚಿಸಿ. ಮಾತನಾಡುವುದಷ್ಟೇ ಅಲ್ಲ, ಕೇಳಿಸಿಕೊಳ್ಳುವುದು ಕೂಡ ಅತ್ಯವಶ್ಯ. ಮೌನ ಕೂಡ ಒಂದು ರೀತಿಯ ಸಂಭಾಷಣೆಯೇ ಆಗಿದೆ. ಸ್ಪರ್ಶದ ಮುಖಾಂತರ ಸಂಗಾತಿಯ ಬಗ್ಗೆ ಪ್ರೀತಿ ಹಾಗೂ ಆದರದ ಭಾವನೆ ತೋರಿಸಿ.

ಅತಿಯಾದ ಅಪೇಕ್ಷೆ ಇಟ್ಟುಕೊಳ್ಳಬೇಡಿ : ನೀವು ನಿಮ್ಮ ಸಂಗಾತಿಯಿಂದ ಈಡೇರಿಸಲಾಗದ ಅಪೇಕ್ಷೆಗಳನ್ನು ಇಟ್ಟುಕೊಂಡರೆ ನಿಮಗೆ ನಿರಾಶೆ ಆಗುವುದು ಸ್ವಾಭಾವಿಕ. ಸಂಗಾತಿಯಿಂದ ಈಡೇರಿಸಬಹುದಾದ ಅಪೇಕ್ಷೆಗಳನ್ನಷ್ಟೇ ಈಡೇರಿಸಿಕೊಳ್ಳಿ. ಬೇರೆ ಕೆಲವು ಅಪೇಕ್ಷೆಗಳನ್ನು ಇನ್ನೊಂದು ಸಲಕ್ಕೆ ಇಟ್ಟುಕೊಳ್ಳಿ. ಸಂಗಾತಿಗೆ ಸ್ಪೇಸ್‌ಕೊಡಿ, ಅವರ ಒಳ್ಳೆಯ ಕೆಟ್ಟದ್ದನ್ನು ಮನಃಪೂರ್ವಕ ಸ್ವೀಕರಿಸಿ.

ವಾದವಿವಾದದಿಂದ ದೂರ ಇರಿ : ಆರೋಗ್ಯಕರ ಸಂಬಂಧಕ್ಕೆ ಒಂದಿಷ್ಟು ವಾದವಿವಾದ ಇರಬೇಕು. ಆದರೆ ಯಾವುದೇ ವಿಷಯದ  ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಕಡ್ಡಿಯನ್ನು ಗುಡ್ಡ ಮಾಡಿದಂತೆಯೇ ಹೌದು. ಕೆಲವೊಂದು ವಿಷಯಗಳನ್ನು ಮನಸ್ಸಿನಲ್ಲಿಯೇ ಇಟ್ಟು ಕೊರಗಬೇಡಿ. ಅದನ್ನು ಹೊರ ಹಾಕಿಬಿಡಿ. ಸಂಗಾತಿ ಜಗಳವಾಡುವಾಗ ನೀವು ಮಾತನಾಡದೇ ಹಾಗೆಯೇ ಇರಬೇಡಿ ಹಾಗೂ ಕೆಟ್ಟದಾಗಿ ಪ್ರತಿಕ್ರಿಯೆ ಕೂಡ ವ್ಯಕ್ತಪಡಿಸಬೇಡಿ. ಗಮನವಿಟ್ಟು ಕೇಳಿ ಹಾಗೂ ಸಮಾಧಾನದಿಂದ ತಿಳಿಸಿ ಹೇಳಿ. ಅಪಶಬ್ದಗಳ ಬಳಕೆ ಖಂಡಿತ ಮಾಡಬೇಡಿ.

ದುರ್ವರ್ತನೆಗೆ ಸವಾಲು ಹಾಕಿ :  ಸಂಗಾತಿಯ ದುರ್ವರ್ತನೆಗೆ ಬೇಸತ್ತು ನಿಮ್ಮ ಸ್ವಾಭಿಮಾನವನ್ನು ಕಳೆದುಕೊಳ್ಳಬೇಡಿ. ಒಮ್ಮೊಮ್ಮೆ ನಾವು ಸಂಗಾತಿಯ ವರ್ತನೆಯಿಂದ ಅದೆಷ್ಟು ಘಾಸಿಗೊಳ್ಳುತ್ತೇವೆಂದರೆ, ನಮ್ಮ ನೋವನ್ನು ಹೇಳಿಕೊಳ್ಳುವ ಬದಲು ನಮ್ಮನ್ನೇ ನಾವು ತಪ್ಪಿತಸ್ಥರೆಂದು ಭಾವಿಸತೊಡಗುತ್ತೇವೆ. ಸಂಗಾತಿ ನಮಗೆ ದೈಹಿಕವಾಗಿ, ಮಾನಸಿಕವಾಗಿ ನೋವನ್ನುಂಟು ಮಾಡಿದರೂ ಕೂಡ ಅದನ್ನು ಸಹಿಸಿಕೊಳ್ಳುತ್ತೇವೆ. ಅದು ಒಳ್ಳೆಯದಲ್ಲ. ದುರ್ವರ್ತನೆಯನ್ನು ಖಂಡಿತ ಸಹಿಸಿಕೊಳ್ಳಬೇಡಿ. ಅದರಿಂದ ಸಂಬಂಧದಲ್ಲಿ ಯಾವ ರೀತಿಯ ಬಿರುಕು ಉಂಟಾಗುತ್ತದೆಯೆಂದರೆ, ಅದನ್ನು ಪುನಃ ಸರಿಪಡಿಸಲು ಆಗದು.

ಪರಸ್ಪರರಿಗೆ ಸಮಯ ಕೊಡಿ : ಪರಸ್ಪರರ ಜೊತೆ ಸಮಯ ಕಳೆಯಲು ಹಾಗೂ ಕ್ವಾಲಿಟಿ ಟೈಮ್ ಶೇರ್‌ ಮಾಡುವುದರಿಂದ ಪ್ರೀತಿ ಹೆಚ್ಚುತ್ತದೆ. ಆ ಸಮಯವನ್ನು ಕೇವಲ ಒಳ್ಳೆಯ ಸಂಗತಿಯನ್ನು ನೆನಪಿಸಿಕೊಳ್ಳಲು ಬಳಸಿಕೊಳ್ಳಿ. ಅಲ್ಲಿ ಮನಸ್ತಾಪದ ಮಾತುಗಳನ್ನು ಆಡಬೇಡಿ.

ನಂಬಿಕೆ ಇಡಿ ಮತ್ತು ಗೌರವಿಸಿ : ನೀವು ಸದಾ ಸಂಗಾತಿಯನ್ನು ಹಂಗಿಸುವ ರೀತಿಯಲ್ಲಿ ಮಾತನಾಡುತ್ತೀರಾ? ಸದಾ ಸಂಶಯ ವ್ಯಕ್ತಪಡಿಸುತ್ತಾ ಇರ್ತೀರಾ? ಹೀಗಿದ್ದರೆ ನಿಮ್ಮ ಸಂಬಂಧ ಎಂದೂ ಸುಲಲಿತವಾಗಿ ಸಾಗದು. ಪರಸ್ಪರರ ಮೇಲೆ ವಿಶ್ವಾಸ ಇಡುವುದು ಎಲ್ಲಕ್ಕೂ ಮುಖ್ಯ. ಪರಸ್ಪರರನ್ನು ಗೌರವಿಸುವುದು ಕೂಡ ಅತ್ಯವಶ್ಯ. ನಂಬಿಕೆ ಹಾಗೂ ಗೌರವ ಇವು ಯಾವುದೇ ಒಂದು ಸಂಬಂಧದ ಮೂಲ ಅಡಿಪಾಯ. ಹೀಗಾಗಿ ಅವೆರಡನ್ನು ಬಲಿಷ್ಠಗೊಳಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ