ಇತ್ತೀಚೆಗೆ ಮನೆಗಳನ್ನು ಅಲಂಕರಿಸಲು ಎಷ್ಟು ಹೊಸ ಹೊಸ ಸಾಮಗ್ರಿಗಳು ಬರುತ್ತಿವೆ ಎಂದರೆ, ಅಷ್ಟು ಹಿಂದೆಲ್ಲ ಇರಲೇ ಇಲ್ಲ. ಈಗ ನಡೆಯುತ್ತಿರುವ ಟ್ರೆಂಡ್ ಖಂಡಿತಾ ಮ್ಯಾಚಿಂಗ್ ಮ್ಯಾಚಿಂಗ್ ಮಾದರಿಯದಲ್ಲ. ನೀವು ಸಹ ನಿಮ್ಮ ಮನೆಯನ್ನು ಈ ರೀತಿ ಅಲಂಕರಿಸುವಾಗ ವಿಭಿನ್ನ ಬಗೆಯ ಸಾಮಗ್ರಿಗಳನ್ನು ಬಳಸಿಕೊಳ್ಳಲು ಹಿಂಜರಿಯದಿರಿ. ಮತ್ತೊಂದು ನೆನಪಿಡತಕ್ಕ ಅಂಶವೆಂದರೆ, ಮನೆ ಅತಿ ಪರ್ಫೆಕ್ಟ್ ಆಗಿಯೂ ಕಾಣಿಸಬಾರದು.
ಮನೆ ಅಲಂಕರಿಸುವಾಗ ಯಾವ ಟ್ರೆಂಡ್ ಚಾಲ್ತಿಯಲ್ಲಿದೆ ಎಂಬುದನ್ನು ತಿಳಿದಿರಬೇಕು. ನಿಮ್ಮ ಬಜೆಟ್ ಎಷ್ಟು? ಎಷ್ಟು ಸಮಯದೊಳಗೆ ನಿಮಗೆ ಮನೆ ರೆಡಿ ಆಗಬೇಕು ಎಂಬುದರ ಜೊತೆ ಜೊತೆಗೆ ನೀವು ಯಾವ ರೀತಿ ಮನೆಯಲ್ಲಿ ವಾಸಿಸಿದರೆ ಹೆಚ್ಚು ಕಂಫರ್ಟೆಬಲ್ ಆಗಿರಬಲ್ಲಿರಿ ನೋಡಿಕೊಳ್ಳಿ. ಟ್ರೆಂಡ್ ಜೊತೆಗೆ ನಿಮ್ಮ ಆಯ್ಕೆಯನ್ನೂ ಗಮನಿಸಿ. ಆಗ ನಿಮ್ಮ ಆಯ್ಕೆಗೆ ತಕ್ಕಂಥ ಮನೆ ಟ್ರೆಂಡಿಯಾಗಿ ಸಿದ್ಧವಾಗುತ್ತದೆ.
ಸಿಮೆಟ್ರಿಯ ಕಡೆ ಗಮನವಿರಲಿ
ಮನೆಯ ಅಲಂಕಾರಕ್ಕೆ ಜ್ಯಾಮಿತೀಯ ವಿನ್ಯಾಸ (ಸಿಮೆಟ್ರಿ) ಬಲು ಮುಖ್ಯ. ಇದರಿಂದ ಮನೆ ಸುಂದರವಾಗುತ್ತದೆ, ಬದಲಿಗೆ ಡೆಕೋರೇಟಿವ್ ಪೀಸ್‌ಗಳ ಆಕರ್ಷಣೆ ಹೆಚ್ಚುತ್ತದೆ. ನೀವು ಎಷ್ಟೇ ಸುಂದರ ಹಾಗೂ ಕಲಾತ್ಮಕ ವಸ್ತುಗಳನ್ನು ಖರೀದಿಸಿರಲಿ, ನೀವು ಅವನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳದಿದ್ದರೆ ಮನೆಯ ಲುಕ್ಸ್ ಹೆಚ್ಚಿಸುವ ಬದಲು ಕಡಿಮೆ ಆಗುತ್ತದೆ.
ಸರಳವಾಗಿ ಅಲಂಕರಿಸಿ
ಮನೆಯನ್ನು ಅಲಂಕರಿಸುವಾಗ ನಿಮಗೆ ಸರಳತೆಯಲ್ಲೇ ಸೌಂದರ್ಯ ಇರುವುದು ಗೊತ್ತಾಗುತ್ತದೆ. ನೀವು ತುಸು ವ್ಯಾವಹಾರಿಕವಾಗಿ ವರ್ತಿಸಿ, ಏನನ್ನೂ ಯೋಚಿಸದೆ ವ್ಯಾಪಾರ ಮಾಡಬೇಡಿ. ನೀವು ಬೇಕಾದಷ್ಟು ಆ್ಯಕ್ಸೆಸರೀಸ್ ಖರೀದಿಸಿರಬಹುದು. ಮೂರ್ತಿಗಳು, ಕ್ಯಾಂಡಲ್ ಹೋಲ್ಡರ್, ಆರ್ಟ್ ಪೀಸಸ್ ಇತ್ಯಾದಿ. ಯಾವಾಗ ಆ್ಯಂಟಿಕ್ ಪೀಸ್ ಖರೀದಿಸಿದರೂ, ಅದು ನಿಮ್ಮ ಇಂಟೀರಿಯರ್‌ಗೆ ಮ್ಯಾಚ್ ಆಗುತ್ತದೆಯೋ ಇಲ್ಲವೋ ನೋಡಿಕೊಳ್ಳಿ. ಕೋಣೆಯಲ್ಲಿ ಎಂದೂ ಹೆಚ್ಚಿನ ವಸ್ತುಗಳನ್ನು ತುರುಕಿಡಬೇಡಿ. ಈಗೆಲ್ಲ ಸಿಂಪಲ್ ಲುಕ್ಸ್ ಹೆಚ್ಚು ಚಾಲ್ತಿಯಲ್ಲಿದೆ.
ಪೇಂಟ್ : ಕಲರ್ ಥೆರಪಿಸ್ಟ್ ಹೇಳುವುದೆಂದರೆ, ಯಾವ ಬಣ್ಣವನ್ನು ನೀವು ಮನೆಯಲ್ಲಿ ಬಳಸುತ್ತೀರೋ ಅದು ನಿಮ್ಮ ಭಾವನಾತ್ಮಕ ಸ್ಥಿತಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಡಲ್ ಕಲರ್ ಮನೆಗೆ ಉದಾಸೀನತೆಯ ಲುಕ್ ನೀಡುತ್ತದೆ. ಗೋಡೆಗಳಿಗೆ ಬ್ರೈಟ್‌ಬಣ್ಣ ಹಚ್ಚಿಸಿ. ಈಗೆಲ್ಲ ಪಿಂಕ್ ಪರ್ಪಲ್ ಹೆಚ್ಚು ಚಾಲ್ತಿಯಲ್ಲಿದೆ. ನೀವು ಲೈಟ್ ಕಲರ್ ಥೀಮ್ ಕೂಡ ಇಟ್ಟುಕೊಳ್ಳಬಹುದು. ಆದರೆ ಅದರಲ್ಲಿ ತುಸು ಬ್ರೈಟ್‌ನೆಸ್ ಇರಬೇಕು. ಬ್ರೈಟ್ ಕಲರಿಂಗ್ ಹಾಗೂ ಉತ್ತಮ ಲೈಟಿಂಗ್ ಕೋಣೆಯಲ್ಲಿ ಪಾಸಿಟಿವಿಟಿ ಹೆಚ್ಚಿಸುತ್ತದೆ. ಕೋಣೆಯ ಒಂದು ಗೋಡೆಯನ್ನು ನಿಮ್ಮ ಮೆಚ್ಚಿನ ಬಣ್ಣದಿಂದ ಪೇಂಟ್ ಮಾಡಿ. ಇದನ್ನು ಪೇಕ್ ಪಾಯಿಂಟ್ ಮಾಡಿಕೊಂಡು, ಅದರ ಮೇಲೆ ಏನಾದರೂ ಆರ್ಟ್ ಪೀಸ್ ಮಾಡಿಸಿ.
ಫರ್ನೀಚರ್ : ವುಡನ್ ಫರ್ನೀಚರ್‌ಗಾಗಿ ವುಡ್ ಪಾಲಿಶ್‌ಗೆ ಬದಲಾಗಿ ಫ್ಯಾಬ್ರಿಕ್‌ನ ಬಳಕೆಯನ್ನು ಮಾಡಿ. ಇದನ್ನು ನೀವು ಹಳೆಯ ಮತ್ತು ಹೊಸತು, ಎರಡೂ ಬಗೆಯ ಫರ್ನೀಚರ್‌ಗೆ ಬಳಸಬಹುದು. ಫ್ಲೋರ್, ಪ್ಲೇನ್, ಜ್ಯಾಮಿಟ್ರಿಕ್ ಪ್ಯಾಟರ್ನ್ ಇತ್ಯಾದಿ ಯಾವುದು ನಿಮಗೆ ಇಷ್ಟವೋ ಅದನ್ನೇ ಅರಿಸಿ. ಎಷ್ಟೋ ಜನ ಕ್ಯಾನ್ವಾಸ್ ಸಹ ಬಳಸುತ್ತಾರೆ.
ಲೈಟ್ಸ್ : ನಿಮ್ಮ ಮನೆಯ ಲ್ಯಾಂಪ್ ಹಳೆಯದಾಗಿದ್ದರೆ ಅದನ್ನು ಬದಲಾಯಿಸಿ. ಏಕೆಂದರೆ ಇದನ್ನು ನೋಡುವವರಿಗೆ ನಿಮ್ಮ ಮನೆ ಔಟ್‌ಡೇಟೆಡ್ ಎಂದು ಗೊತ್ತಾಗಿಬಿಡುತ್ತದೆ. ತಕ್ಷಣ ಹೊಸ ಡಿಸೈನಿನ ಲ್ಯಾಂಪ್ ಅಳವಡಿಸಿ.
ಲಿವಿಂಗ್ ರೂಮಿನಲ್ಲಿ ಸದಾ ಸಾಫ್ಟ್ ಲೈಟ್ ಬಳಕೆ ಮಾಡಿ, ಕ್ಯಾಂಡಲ್ಸ್ ಉತ್ತಮ. ಬೆಡ್‌ರೂಮಿನ ಲ್ಯಾಂಪ್ ಮೇಲೆ ಲ್ಯಾಂಪ್ ಶೇಡ್‌ನ್ನು ಅಗತ್ಯ ಹಾಕಿಸಿ. ಇದರಿಂದ ಬೆಡ್ ರೂಮಿನ ಆಕರ್ಷಣೆ ಹೆಚ್ಚುತ್ತದೆ. ನಿಮ್ಮ ಡೈನಿಂಗ್ ಟೇಬಲ್ ಮೇಲೆ ಶ್ಯಾಂಡ್‌ಲಿಯರ್ಸ್ ತೂಗುಬಿಡಿ. ಇದರಿಂದ ಊಟ ಮಾಡುವಗ ನೇರವಾಗಿ ಗ್ಲೇರ್ಸ್ ಕಣ್ಣಿಗೆ ತಗುಲುವುದಿಲ್ಲ.
ಸೀಲಿಂಗ್ ಲೈಟ್‌ಗೆ ಬದಲಾಗಿ ಹ್ಯಾಂಗಿಂಗ್ ಲೈಟ್‌ನ ಬಳಕೆ ಮಾಡಿ. ಸಣ್ಣ ಲೈಟ್ಸ್ ಸೇರಿಸಿ ನೀವೇ ಶ್ಯಾಂಡಲಿಯರ್ಸ್ ರೂಪಿಸಬಹುದು. ನೀವು ಮನೆಯನ್ನು ಸಿಂಗರಿಸಲು ಬಣ್ಣಬಣ್ಣದ ಲೈಟ್ಸ್ ನ್ನೂ ಬಳಸಬಹುದು.
ಅಡುಗೆಮನೆ : ಅಡುಗೆಮನೆ ಆದಷ್ಟು ಓಪನ್ ಆಗಿರಲಿ. ನಿಮ್ಮ ಕಟ್ಲೆರಿ, ಕ್ರಾಕರಿಗಳನ್ನು ಗಾಜಿನ ಬಾಗಿಲುಳ್ಳ ಶೋಕೇಸ್‌ನಸಲ್ಲೇ ಜೋಡಿಸಿ. ಅಡುಗೆಮನೆಯಲ್ಲಿ ನೈಸರ್ಗಿಕ ಬೆಳಕುವ ಧಾರಾಳ ಬರುವಂತಿರಲಿ. ಇದರಿಂದ ಕಿಚನ್ ಆಕರ್ಷಕ ಮಾತ್ರವಲ್ಲ, ಅದರಲ್ಲಿ ತಾಜಾತನ ಹೆಚ್ಚುತ್ತದೆ. ಕಟ್ಲೆರಿ ಕ್ರಾಕರಿ ಡಿಸ್ ಪ್ಲೇ ಮಾಡಲು ನೀವು ಕಿಚನ್‌ನಲ್ಲಿ ಬೇರೆ ಶೆಲ್ಫ್ ಮಾಡಿಸಬಹುದು.
ಮಿರರ್ ಪೇಂಟಿಂಗ್ಸ್ : ಪ್ರತಿ ಕೋಣೆಯಲ್ಲೂ ಒಂದೊಂದು ಕನ್ನಡಿ ಇರಲಿ. ಆ ಕೋಣೆಯಲ್ಲಿನ ಸುಂದರ ವಸ್ತು ಅದರಲ್ಲಿ ಪ್ರತಿಫಲನಗೊಳ್ಳುವಂತೆ ಕನ್ನಡಿ ಅಳವಡಿಸಿ. ಕನ್ನಡಿಯ ಫ್ರೇಮ್ ಕೋಣೆಯ ಫರ್ನೀಚರ್‌ಗೆ ಮ್ಯಾಚ್ ಆಗುವಂತಿರಲಿ. ನೀವು ಸಣ್ಣಪುಟ್ಟ ಅಥವಾ ದೊಡ್ಡ ಪೇಂಟಿಂಗ್ಸ್ ಬಳಸಿ ಮನೆ ಸಿಂಗರಿಸಿ. ಆದರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇವನ್ನು ತುರುಕಬೇಡಿ.
ಡೆಕೋರೇಟಿವ್ ಪಿಲ್ಲೋ ಕುಶನ್ : ಬೆಡ್ ಸೋಫಾ ಎರಡಕ್ಕೂ ಕಲರ್‌ಫುಲ್ ಕುಶನ್ ಪಿಲ್ಲೋ ಬಳಸಬೇಕು. ಇಂದಿನ ಮಾರುಕಟ್ಟೆಯಲ್ಲಿ ಇದು ಸುಲಭ ಲಭ್ಯ. ಇದು ನಿಮ್ಮ ಕೋಣೆಯ ಟೆಕ್ಸ್ಸಚರ್ ಪ್ಯಾಟರ್ನ್ ಹೆಚ್ಚಿಸುವಲ್ಲಿ ಪೂರಕ.
ಪರದೆಗಳು : ಇವು ಕೋಣೆಯ ಅಂದವನ್ನು ಹೈಲೈಟ್ ಮಾಡುತ್ತವೆ. ಆದ್ದರಿಂದ ಇವನ್ನು ಬಹು ಎಚ್ಚರಿಕೆಯಿಂದ ಆರಿಸಬೇಕು. ಇವನ್ನು ಆರಿಸುವಾಗ ಗಮನಿಸಬೇಕಾದುದು ಎಂದರೆ, ನಿಮ್ಮ ಗೋಡೆಯ ಬಣ್ಣ, ಯಾವ ಕೋಣೆ (ಹಾಲ್, ಬೆಡ್‌ರೂಂ ಇತ್ಯಾದಿ), ಅಲ್ಲಿನ ಫರ್ನೀಚರ್ ಎಂಥದು…. ಇತ್ಯಾದಿ. ಪರದೆಗಳು ಹಲವು ಪ್ಯಾಟರ್ನ್ ಪ್ರಿಂಟ್ಸ್ ನಲ್ಲಿ ಲಭ್ಯ. ಫ್ಲೋರ್, ಪ್ಲೇನ್, ಜ್ಯಾಮಿಟ್ರಿಕ್ ಇತ್ಯಾದಿ. ಇತ್ತೀಚೆಗಂತೂ ನೆಟೆಡ್ ಪರದೆಗಳು ಬಹು ಜನಪ್ರಿಯ.
ಬೆಡ್ ಶೀಟ್ಸ್ : ಕಾಟನ್ ಯಾ ಲಿನೆನ್ ಬೆಡ್ ಶೀಟ್‌ಗಳನ್ನು ಹೆಚ್ಚಾಗಿ ಬಳಸಿರಿ. ಬೆಡ್ ಶೀಟ್ಸ್ ಜೊತೆ ಮ್ಯಾಚಿಂಗ್ ಪಿಲ್ಲೋ ಕವರ್ ಸಹ ಕೊಳ್ಶಿರಿ. ಬೆಡ್ ರೂಮಿನ ಗೋಡೆಗಳಿಗೆ ಮ್ಯಾಚ್ ಆಗುವಂಥ ಯಾ ಕಾಂಟ್ರಾಸ್ಟ್ ಕಲರ್‌ನ ಬೆಡ್ ಶೀಟ್ಸ್ ನ್ನೇ ಖರೀದಿಸಿ.
ವಾಲ್ ಪೇಪರ್ ಯಾ ಫೋಟೋ ವಾಲ್ : ಮನೆಗೆ ಸ್ಪೋರ್ಟಿವ್ ಲುಕ್ ನೀಡಲು ವಾಲ್ ಪೇಪರ್ ಯಾ ಫೋಟೋ ವಾಲ್ ಕ್ರಿಯೇಟ್ ಮಾಡಬಹುದು. ಇದರಿಂದ ಕೋಣೆಗೆ ಹೊಸ ಲುಕ್ಸ್ ಸಿಗುತ್ತದೆ. ವಾಲ್ ಪೇಪರ್ ಕ್ಯಾನ್ವಾಸ್‌ನ ಬಳಕೆ ಮಾಡಿ.
ಫ್ಲೋರ್ : ಇತ್ತೀಚೆಗೆ ಫ್ಲೋರ್ ಮೇಲೆ ಡೆಕ್ ವುಡ್ ಹೆಚ್ಚು ಚಾಲ್ತಿಯಲ್ಲಿದೆ. ಇದನ್ನು ಹೆಚ್ಚಾಗಿ ಲಿವಿಂಗ್ ರೂಮಿನಲ್ಲೇ ಬಳಸುತ್ತಾರೆ.
ಇನ್‌ಡೋರ್ ಪ್ಲಾಂಟ್ಸ್ : ನ್ಯಾಚುರಲ್ ಫೀಲ್ ನೀಡಲು ಇನ್‌ಡೋರ್ ಪ್ಲಾಂಟ್ ಅಳವಡಿಸಿ. ಇತ್ತೀಚೆಗೆ ಮನೆಗಳು ತುಂಬಾ ಕ್ಲೋಸ್ಡ್ ಆಗಿರುತ್ತವೆ ಪರಿಸರ ಮಾಲಿನ್ಯದ್ದೂ ಹೆಚ್ಚಿನ ಪಾಲಿದೆ. ಹೀಗಾಗಿ ಈ ಗಿಡಗಳು ಅಲ್ಲಿನ ವಾತಾವರಣವನ್ನು ಅತಿ ಶುದ್ಧವಾಗಿಡುತ್ತವೆ, ಮನೆಯಲ್ಲಿ ತಾಜಾತನ ತಂತಾನೇ ಹರಡುತ್ತದೆ. ಇವು ಕೇವಲ ಮನೆಯ ಅಲಂಕಾರ ಹೆಚ್ಚಿಸುವುದಲ್ಲದೆ, ನಿಮ್ಮ ಆರೋಗ್ಯ ರಕ್ಷಣೆಯನ್ನೂ ಮಾಡುತ್ತವೆ. ಇವನ್ನು ಕೊಳ್ಳುವ ಮೊದಲು ಯಾವ ಗಿಡವನ್ನು ಎಲ್ಲಿ ಇಡಬೇಕು ಎಂಬುದರತ್ತ ವಿಚಾರ ಮಾಡಿ. ಸ್ಪೈಡರ್ ಪ್ಲಾಂಟ್, ಸ್ನೇಕ್ ಪ್ಲಾಂಟ್, ಫಿಲೋಡೆಂಡ್ರಾನ್, ಲಿಲೀ, ಜರ್ಬೇರಾ, ಡೇಝಿ, ಮನಿಪ್ಲಾಂಟ್, ಪೋಥೋಸ್ ಗಿಡಗಳಿಂದ ಮನೆಯನ್ನು ಸಿಂಗರಿಸಿ.
ನಿಮಗೆ ಗಿಡಗಳ ಮ್ಯಾನೇಜ್‌ಮೆಂಟ್‌ನಲ್ಲಿ ಅಭಿರುಚಿ ಇಲ್ಲದಿದ್ದರೆ, ಕೇವಲ ಸೌಂದರ್ಯಕ್ಕಾಗಿ ಇವನ್ನು ಬಳಸಿದರೆ, ಕೃತಕ ಗಿಡಗಳನ್ನೂ ಆರಿಸಬಹುದು.
ಬಾಲ್ಕನಿ : ಹೆಚ್ಚಾಗಿ ಇಂದಿನ ಅಪಾರ್ಟ್‌ಮೆಂಟ್ಸ್ ನಲ್ಲಿ ಬಾಲ್ಕನಿ ಇದ್ದೇ ಇರುತ್ತದೆ. ಆದರೆ ಎಷ್ಟೋ ಜನಕ್ಕೆ ತಮ್ಮ ಬಾಲ್ಕನಿಯನ್ನು ಸುಂದರವಾಗಿಟ್ಟುಕೊಳ್ಳಲು ಗೊತ್ತಿಲ್ಲ. ಇದನ್ನು ಸುಂದರಗೊಳಿಸುವುದಕ್ಕಾಗಿ ಅದನ್ನು ಒಪ್ಪವಾಗಿ ಜೋಡಿಸಿ, ಉಳಿದ ಸ್ಪೇಸ್‌ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಬಾಲ್ಕನಿಯಲ್ಲಿ ಆ್ಯಂಟಿಕ್ ಫರ್ನೀಚರ್ ಎಲ್ಲಕ್ಕಿಂತ ಉತ್ತಮ ಆಯ್ಕೆ. ಆದ್ದರಿಂದ ಮಾಡರ್ನ್ ಬದಲು ಆ್ಯಂಟಿಕ್ ಫರ್ನೀಚರ್ ಬಳಸಿರಿ. ಬಾಲ್ಕನಿಯ ಗೋಡೆಗೆ ಯಾವುದಾದರೂ ಆರ್ಟ್ ಪೀಸ್ ಅಳವಡಿಸಿ. ಬಾಲ್ಕನಿ ಪೂರ್ತಿ ಕವರ್ ಆಗಿಹೋಗಬಾರದು, ಪೂರ್ತಿ ಓಪನ್ ಸಹ ಆಗಿರಬಾರದು.
ಕಾರಿಡಾರ್: ನಿಮ್ಮ ಮನೆ ಬಹಳ ದೊಡ್ಡದಾಗಿದ್ದು, ಅದಕ್ಕೆ ಕಾರಿಡಾರ್ ಸಹ ಇದ್ದರೆ, ಅದನ್ನು ಹಾಗೇ ಖಾಲಿ ಬಿಡಬೇಡಿ. ಇಲ್ಲಿನ ಗೋಡೆಗಳಿಗೆ ಯಾವುದಾದರೂ ಪೇಂಟಿಂಗ್ ಯಾ ಫೋಟೋ ವಾಲ್ ಕ್ರಿಯೇಟ್ ಮಾಡಿ. ಕಾರಿಡಾರ್‌ನಲ್ಲಿ ಜಾಗ ಹೆಚ್ಚಾಗಿದೆ ಎನಿಸಿದರೆ 2-3 ಕಡೆ ಬೇರೆ ಬೇರೆ ಜಾಗಗಳಲ್ಲಿ ಶೋಪೀಸ್‌ಗಳನ್ನು ಇರಿಸಬಹುದು.
ಟೆರೇಸ್ : ನಿಮ್ಮದು ಟೆರೇಸ್‌ವುಳ್ಳ ಮನೆಯಾಗಿದ್ದರೆ, ಅದಕ್ಕೆ ಒಂದು ಔಟಿಂಗ್ ಸ್ಪಾಟ್‌ನ ಲುಕ್ ಕೊಡಿ. ನೀವು ಇಲ್ಲಿ ಒಂದು ಸಣ್ಣ ಗಾರ್ಡನ್ ಸಹ ಮಾಡಿಕೊಳ್ಳಬಹುದು, ಸುಂದರ ಲ್ಯಾಂಪ್ ಅಳವಡಿಸಬಹುದು. ಸ್ವಲ್ಪ ಜಾಗವನ್ನು ಕವರ್ ಮಾಡಿ. ಅಲ್ಲಿ ಫರ್ನೀಚರ್ ಇರಿಸಬಹುದು. ಮಹಡಿಯಲ್ಲಿ ಗಾರ್ಡನ್ ಜೊತೆ ಇದರ ಕಾಂಬಿನೇಶನ್ ನಿಮ್ಮ ಟೆರೇಸ್‌ಗೊಂದು ವಿಭಿನ್ನ ಲುಕ್‌ನೀಡುತ್ತದೆ. ಇನ್ನೂ ಹೆಚ್ಚಿನ ಜಾಗವಿದ್ದರೆ, ಒಂದು ಬೆತ್ತದ/ಲೋಹದ ಉಯ್ಯಾಲೆ, ಬೆಳಗಿನ ಚಹಾ ಸೇವಿಸಲು ಕುರ್ಚಿ ಟೀಪಾಯಿ, ಸಹ ಏರ್ಪಡಿಸಬಹುದು.
– ಸುನಂದಾ