ಉರಿದೆದ್ದ ದೇಶ… ಉಳಿದವರಾರು?
ಬುಡಕಟ್ಟು ಜಾತಿ ಮತ್ತು ಜನಾಂಗದ ಕಾಯ್ದೆಯಲ್ಲಿ ದೂರು ನೀಡಿದಾಗ ಮೇಲ್ಜಾತಿ ವ್ಯಕ್ತಿಯ ಬಂಧನದ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನಿರ್ಬಂಧ ಹೇರಿದ್ದನ್ನು ಖಂಡಿಸಿ ದಲಿತರು ರೊಚ್ಚಿಗೆದ್ದಿದ್ದರು. ಏಪ್ರಿಲ್ 2 ರಂದು ಭಾರತ ಬಂದ್ ಸಂದರ್ಭದಲ್ಲಿ 10 ಜನರಷ್ಟೇ ಸಾಯಲಿಲ್ಲ, ಅಲ್ಲಲ್ಲಿ ಬೆಂಕಿ ಹಚ್ಚುವ ಘಟನೆಗಳು ನಡೆದವು. ಅದೆಷ್ಟೋ ನಗರಗಳು ಸ್ತಬ್ಧವಾದವು. ಕೆಲವು ನಗರಗಳಲ್ಲಂತೂ ಅನೇಕ ದಿನಗಳ ಕಾಲ ಪ್ರತಿಭಟನೆಗಳು ಮುಂದುವರಿದವು.
ಮೋದಿ ಸರ್ಕಾರ ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ತನ್ನದೇ ಗೆಲುವು ಎಂದುಕೊಂಡು ಹೊರಟಿತ್ತು. ಪ್ರತಿಭಟನೆಗಳು ಶುರುವಾಗುತ್ತಿದ್ದಂತೆ ಅದು ಇಕ್ಕಟ್ಟಿಗೆ ಸಿಲುಕಿತು, ದಲಿತರಲ್ಲಿ ಇಷ್ಟೊಂದು ಧೈರ್ಯ ಎಲ್ಲಿಂದ ಬಂತು ಎಂದು ಗಲಿಬಿಲಿಗೊಂಡಿತು. ಅವರ ಇಬ್ಬರು ಮೂವರು ಮುಖಂಡರು ಕೆಲವು ದಿನ ಕಣ್ಣಿಗೇ ಬೀಳಲಿಲ್ಲ.
ಸರ್ಕಾರ ಸುಪ್ರಿಂ ಕೋರ್ಟ್‌ಗೆ ಧಾವಿಸಿ ತನ್ನನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿತು. ಆದರೆ ಸುಪ್ರೀಂ ಕೋರ್ಟ್ ತನ್ನ ನಿರ್ಧಾರ ಸ್ಪಷ್ಟಪಡಿಸುತ್ತ, ಬಂಧನಕ್ಕೆ ಯಾವುದೇ ಆಧಾರ ಇರದೇ ಇದ್ದರೆ ಅದನ್ನು ಕೋರ್ಟ್ ಒಪ್ಪುವುದಿಲ್ಲ. ಹೀಗಾಗಿ ತನ್ನ ತೀರ್ಪಿಗೆ ನಿರ್ಬಂಧ ಹೇರಲು ಒಪ್ಪಲಿಲ್ಲ.
ವಾಸ್ತವದಲ್ಲಿ ಇದು ರಾಜಕೀಯ ವಿಷಯವಲ್ಲ, ಧಾರ್ಮಿಕ ವಿಷಯ. ಅಸ್ಪೃಶ್ಯರ ಮತ ರಾಜಕೀಯದ್ದಲ್ಲ, ಹಿಂದೂ ಧರ್ಮದ ಉಡುಗೊರೆ. ಯಾವುದನ್ನೂ ಪರಿಶೀಲಿಸದೆ ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟಿರುವವರು ಆಸ್ಪೃಶ್ಯತೆಯನ್ನು ತೊರೆಯಲು ತಯಾರಿಲ್ಲ. ಅವರ ಧರ್ಮಗುರುಗಳು ಕೂಡ ಇದನ್ನು ಧರ್ಮ ಮೂಲದ ಪಾಪಪುಣ್ಯ ಅಥವಾ ಪ್ರಾಯಶ್ಚಿತ್ತ ಎಂಬ ಸಂಕೇತ ನೀಡುತ್ತಾರೆ. ಕೆಲವು ಉದಾರ ಹೃದಯದವರು ಅದನ್ನು ಬಿಡಬೇಕೆಂದರೂ, ಅವರ ಮನೆಯ ಮಹಿಳೆಯರು ಧರ್ಮಮೂಲದ ಈ ಭೇದಭಾವ ಕಡೆಗಣಿಸಬಾರದೆಂದು ಅವರ ಮೇಲೆ ಒತ್ತಡ ತರುತ್ತಾರೆ.
ಭಾರತೀಯ ಜನತಾ ಪಾರ್ಟಿ ಗೆದ್ದಿರುವುದೇ ಈ ಕಂದಾಚಾರಗಳನ್ನು ವಾಪಸ್ ತರಲು. ಅದು ಮತ ಬ್ಯಾಂಕಿನ ದೇಣಿಗೆ.
ವಾಸ್ತವದಲ್ಲಿ ಜಾತಿ ಆಧಾರಿತ ಭೇದಭಾವ ರಾಜಕೀಯ, ಆಡಳಿತ ಶಕ್ತಿ, ವ್ಯಾಪಾರ, ಸಾಮಾಜಿಕ ಸಂಘಟನೆಗಿಂತ ಹೆಚ್ಚಾಗಿ ಮಹಿಳೆಯರನ್ನು ಪ್ರಭಾವಿತಗೊಳಿಸುವುದಾಗಿದೆ. ವಿಚಿತ್ರ ಹಾಗೂ ಖೇದದ ಸಂಗತಿಯೇನೆಂದರೆ, ಮಹಿಳೆಯರಿಗೆ ಈ ವಿಷಯ ಅರಿವಿಗೇ ಬರುವುದಿಲ್ಲ. ಮೇಲ್ವರ್ಗದ ಮಹಿಳೆಯರು ಕೆಳಜಾತಿಯ ಮಹಿಳೆಯರ ಮೇಲೆ ನಡೆಸುವ ಜಾತಿ ಆಧಾರಿತ ಭೇದಭಾವ ಅಸಹನೀಯವಾಗಿರುತ್ತದೆ. ಏಕೆಂದರೆ ಇದೇ ರೀತಿಯ ಅನ್ಯಾಯ ಹಾಗೂ ಅತ್ಯಾಚಾರವನ್ನು ಆಕೆಯ ಮನೆಯ ಪುರುಷರು ಹಾಗೂ ಮನೆಯ ಇತರರು ಕೂಡ ನಡೆಸುತ್ತಾರೆ.
ಮೇಲ್ಜಾತಿಯ ಹೆಂಗಸರು ತಮ್ಮ ಮಕ್ಕಳನ್ನು ಕೆಳಜಾತಿಯ ಮಕ್ಕಳ ಜೊತೆ ಆಟ ಆಡಲು ಸಹ ಕಳಿಸುವುದಿಲ್ಲ. ಅಸ್ಪೃಶ್ಯತೆಯ ಭೂತ ಅವರ ತಲೆಯ ಮೇಲೆ ಹೇಗೆ ಸವಾರಿ ಮಾಡುತ್ತಿದೆಯೆಂದರೆ, ದಲಿತರಿಂದ ಕೆಲವು ಸೇವೆಗಳನ್ನು ಸ್ವೀಕರಿಸಲು ಕೂಡ ಅವರು ಸಿದ್ಧರಿಲ್ಲ.
ಮನೆಗೆಲಸದವಳನ್ನು ನೇಮಿಸಿಕೊಳ್ಳುವ ಮುಂಚೆ ಆಕೆ ದಲಿತೆ ಅಲ್ಲ ತಾನೆ ಎಂದು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಹೀಗೆ ಮಾಡುವುದರ ಮೂಲಕ ಸಮರ್ಥವಾಗಿ ಕೆಲಸ ಮಾಡಲು ಸಿದ್ಧರಿರುವ ಕೋಟ್ಯಂತರ ಮಹಿಳೆಯರಿಗೆ ಅನ್ಯಾಯ ಎಸಗುತ್ತಿದ್ದಾರೆ.
20 ಕೋಟಿಯಷ್ಟು ದಲಿತರನ್ನು ಹಿಮ್ಮೆಟ್ಟಿ ಜೀವನ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಮೀಸಲಾತಿಯ ಕಾರಣದಿಂದ ಉನ್ನತ ಹುದ್ದೆಗೇರಿ ತಮ್ಮ ಪರಿಶ್ರಮದ ಬಲದಿಂದ, ತಿಳಿವಳಿಕೆಯ ಬಲದಿಂದ ಅವರು ಸಮಾನತೆ ಬಯಸಬಹುದು.
ಭೇದಭಾವ ಎನ್ನುವುದು ಮನೆಯಿಂದ ಶುರುವಾಗುತ್ತದೆ. ಅದು ಮುಖಂಡರ ತನಕ ಸಾಗುತ್ತದೆ. ಸುಪ್ರೀಂ ಕೋರ್ಟ್‌ನ ಈ ತಿದ್ದುಪಡಿ ಮೇಲ್ಜಾತಿಯವರಿಗೆ ಸಮಾಧಾನ ತರುವಂಥದ್ದಾಗಿದ್ದು ತಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ ಅದು ಅವರಿಗೆ ಆಶ್ಚರ್ಯ ಅನಿಸುದಿಲ್ಲ.
ಇದು ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರ ಕಾರಣದಿಂದಲೇ ಆಗಿದೆ. ಅವರು ಕಳೆದ 70 ವರ್ಷಗಳಿಂದ ದಲಿತರನ್ನು ಸಹಜವಾಗಿ ಸ್ವೀಕರಿಸಿಲ್ಲ. ಸುಪ್ರೀಂ ಕೋರ್ಟ್‌ನ ತೀರ್ಪು ಸರಿಯೇ ಇರಬಹುದು, ಆದರೆ ಅದೆಷ್ಟೋ ವರ್ಷಗಳಿಂದ ತುಳಿಯುತ್ತ ಬಂದಿರುವುದನ್ನು ತಮ್ಮ ಹಕ್ಕು ಎಂದು ಭಾವಿಸಿದ್ದರೊ, ಈಗ ಅದನ್ನು ಕಿತ್ತುಕೊಳ್ಳುತ್ತಿರುವಂತೆ ಅನಿಸುತ್ತಿದೆ. ಉದಾಹರಣೆಗೆ, ಮಹಿಳೆಯರು ಬಲಾತ್ಕಾರದ ಬಗ್ಗೆ ಭಯಭೀತರಾಗಿರುತ್ತಾರೆ. ಆದರೆ ದಲಿತರು ಅದರಲ್ಲೂ ಮಹಿಳೆಯರು ಭೇಧಭಾವದ ಬಗ್ಗೆ ಭಯಭೀತರಾಗಿರುತ್ತಾರೆ. ಈ ದಂಗೆಗಳು ಅದರ ಪರಿಣಾಮವೇ ಆಗಿದೆ. ಎಲ್ಲಿಯವರೆಗೆ ದೇಶದಲ್ಲಿ ಧರ್ಮ ಪ್ರಚಾರ ಮತ್ತು ಮೂಢನಂಬಿಕೆಗಳ ದಂಧೆ ಭರ್ಜರಿಯಾಗಿ ನಡೆಸುತ್ತಿರುತ್ತವೆ, ಅಲ್ಲಿಯವರೆಗೆ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಒಂದು ವೇಳೆ ಮೇಲ್ಜಾತಿಯ ಮಹಿಳೆಯರಿಗೆ ತರ್ಕ, ಸಮಾನತೆ ಸ್ವಾತಂತ್ರ್ಯ ಭಾವನೆಯ ಅನುಭೂತಿ ಉಂಟಾದರೆ ಅದರ ಮಾತೇ ಬೇರೆ.
ಸರ್ಕಾರವನ್ನೇ ಅನುಕರಿಸುವ ಬಿಲ್ಡರ್ಸ್
ತನ್ನ ತಪ್ಪನ್ನು ಇತರರ ಮೇಲೆ ಹೊರಿಸುವುದು ಸರ್ಕಾರಕ್ಕೆ ಅಭ್ಯಾಸವೇ ಆಗಿಹೋಗಿದೆ. ಬಿಲ್ಡರ್ಸ್ ಮೇಲೆ ಗೂಬೆ ಕೂರಿಸುವುದು ಇತ್ತೀಚೆಗೆ ಸಾಮಾನ್ಯ ವಿಷಯ ಎಂಬಂತಾಗಿದೆ. ದೆಹಲಿಯ ಹೌಸಿಂಗ್ ಹಾಗೂ ಅರ್ಬನ್ ಅಫೇರ್ಸ್ ಸಚಿವ ಹರದೀಪ್ ಸಿಂಗ್ ಪುರಿ ಇತ್ತೀಚೆಗೆ ಹೇಳಿದ್ದೇನೆಂದರೆ, “ರಿಯಲ್ ಎಸ್ಟೇಟ್ ರೆಗ್ಯುಲೇಶನ್ ಅಥಾರಿಟಿ(ರೇರಾ)ಯನ್ನು ಸುಖಾಸುಮ್ಮನೇ ಟೀಕೆ ಮಾಡುಲಾಗುತ್ತದೆ. ಬಿಲ್ಡರ್ಸ್ ತಪ್ಪಿತಸ್ಥರು. ಅವರು ಜನರ ಕೋಟ್ಯಂತರ ರೂಪಾಯಿಗಳನ್ನು ತಮ್ಮ ಜೇಬಿಗಿಳಿಸಿಕೊಂಡಿದ್ದಾರೆ.”
ದೇಶಾದ್ಯಂತ ಮನೆ ಕೊಂಡುಕೊಳ್ಳಬೇಕೆಂಬ ಲಕ್ಷಾಂತರ ಜನರ ಕೊಟ್ಯಂತರ ಹಣ ಬಿಲ್ಡರ್ಸ್ ಬಳಿ ಕೊಳೆಯುತ್ತಿದೆ ಎನ್ನುವುದು ಎಷ್ಟು ಸತ್ಯ? ಮನೆಗಳು, ಪ್ಲಾಟ್‌ಗಳು, ಫ್ಲಾಟ್‌ನ ಮಾರಾಟಕ್ಕಾಗಿ ಬಣ್ಣಬಣ್ಣದ ಜಾಹೀರಾತುಗಳನ್ನು ಕೊಟ್ಟ ಮುಂಗಡ ವಸೂಲು ಮಾಡುವುದು ಹಾಗೂ ಅನೇಕ ವರ್ಷಗಳ ಕಾಲ ಮನೆ ಹಸ್ತಾಂತರಿಸದೇ ಇರುವುದು ಅವರಿಗೆ ಅಭ್ಯಾಸವೇ ಆಗಿಹೋಗಿದೆ.
ಬಿಲ್ಡರ್ಸ್ ಸದಾ ಒಮ್ಮುಖ ಕರಾರು ಮಾಡಿಕೊಳ್ಳುತ್ತಾರೆ. ಗ್ರಾಹಕರ ಹಣ ಬಂದುಬಿಟ್ಟರೆ ಸಾಕು, ಮುಂದೆ ಅವರ ಅಳಲನ್ನು ಕೇಳಿಸಿಕೊಳ್ಳಲು ತಯಾರಿರುವುದಿಲ್ಲ. ವಾಸ್ತವದಲ್ಲಿ ಸರ್ಕಾರವೇ ಮುಖ್ಯ ತಪ್ಪಿತಸ್ಥ. ಸರ್ಕಾರವೇ ಅವರಿಗೆ ಇದನ್ನು ಅಭ್ಯಾಸ ಮಾಡಿಸಿಬಿಟ್ಟಿದೆ. ಮೊದಲು ಸಾಮಾನ್ಯ ಉಪಯೋಗದ ವಸ್ತುಗಳನ್ನು ಕಡಿಮೆ ಉತ್ಪಾದಿಸಿ, ಬಳಿಕ ಅಗ್ಗದಲ್ಲಿ ಮಾರುವ ಆಮಿಷ ತೋರಿಸಿ, ಆ ಬಳಿಕ ಅರ್ಧ ಅಥವಾ ಪೂರ್ತಿ ಮೊತ್ತ ವಸೂಲಿ ಮಾಡಿಕೊಂಡು ಸುಮ್ಮನಿದ್ದುಬಿಡಿ ಎಂದು ಹೇಳುತ್ತದೆ. ಸರ್ಕಾರ ಮೊದಲು ಭಾರಿ ಉತ್ಸಾಹದಿಂದ ಗೃಹ ನಿರ್ಮಾಣದಲ್ಲಿ ಇಳಿದಿತ್ತು. ಆದರೆ ಅದು ನಿರ್ಮಿಸಿದ ಕಾಲೋನಿಗಳು ಎಷ್ಟು ಸುರಕ್ಷಿತ ಎನ್ನುವುದನ್ನು ಆ ಕಟ್ಟಡಗಳೇ ಹೇಳುತ್ತವೆ.
ಸರ್ಕಾರಿ ಪ್ಲಾಟ್, ಫ್ಲಾಟ್, ಮನೆಗಳು ಕೈಗೆ ಬಂದದ್ದು ವರ್ಷಗಳ ಬಳಿಕ. ರಸ್ತೆಗಳು, ಒಳಚರಂಡಿಗಳು ಏನೇನೂ ಇರಲಿಲ್ಲ. ಅಕ್ಕಪಕ್ಕದಲ್ಲಿ ಗುಡಿಸಲುಗಳು ಹುಟ್ಟಿಕೊಂಡವು. ಅವನ್ನೇನೂ ತೆಗೆಸಿಹಾಕಲಿಲ್ಲ. ಶಾಲೆಗಳ ಬಗ್ಗೆ ಕೇಳಲೇಬೇಡಿ. ವಿದ್ಯುತ್ ಸ್ಥಿತಿ ಅಯೋಮಯ. ಒಂದೆಡೆ ಕೊರತೆ, ಇನ್ನೊಂದೆಡೆ ತಂತಿ ತಗುಲಿ ಮನೆಯಲ್ಲಿನ ಉಪಕರಣಗಳು ಭಸ್ಮವಾದವು. ಹಣ ವಸೂಲಿ ಮಾಡಿದವರು ಎಲ್ಲಿದ್ದಾರೊ ಗೊತ್ತಿಲ್ಲ ಎನ್ನುವ ಸ್ಥಿತಿ. ಈ ಪಾಠವನ್ನು ಸರ್ಕಾರ ಪ್ರೈವೇಟ್ ಬಿಲ್ಡರ್ಸ್‌ಗೆ ಚೆನ್ನಾಗಿ ಕಲಿಸಿಕೊಟ್ಟಿತು.
ನೀತಿ ನಡಾವಳಿಗಳೇ ಹೀಗೆ ರೂಪುಗೊಂಡರೆ ಕೇಳುವವರಾರು? ಪ್ರತಿದಿನ ಒಂದೊಂದು ಕಷ್ಟ. ಮನೆ ಪಡೆದುಕೊಳ್ಳಲು ಏನೇನು ಸಂಕಷ್ಟ ಅನುಭವಿಸಬೇಕೊ, ಅದನ್ನೆಲ್ಲ ಅನುಭವಿಸಲೇಬೇಕು. ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಹೋಮ ಮಾಡಿಸುವ ಪುರೋಹಿತನ ಎದುರು ಬೆಂಕಿ ಕೆಂಡದ ಎದುರು ಕೂತಂತೆ ಇವರ ಸ್ಥಿತಿ. ಮನೆ ಪಡೆಯುವುದೆಂದರೆ ಒಂದು ರೀತಿಯ ಅಗ್ನಿಪರೀಕ್ಷೆಯೇ ಹೌದು. ಹರದೀಪ್ ಪುರಿಯ ಸರ್ಕಾರ ಗ್ರಾಹಕರನ್ನು ಪಾಪಿ ಎಂದು ಭಾವಿಸಿದರೆ ಸರಿ, ಆದರೆ ಬಿಲ್ಡರ್ಸ್ ನಕಲು ಮಾಡಿದರೆ ಗೂಂಡಾಗಿರಿ!
ಇದು ದ್ವಂದ್ವಗಳ ಮೂಲ. ಬಿಲ್ಡರ್ಸ್ 4 ಕಾಸು ಗಳಿಸಬೇಕೆಂದು ಬರುತ್ತಾರೆ. ತಮ್ಮ ಹಿತಾಸಕ್ತಿಗೆ ಮನೆಗಳು ನಿರ್ಮಾಣವಾಗಬೇಕು ಎನ್ನುವುದು ಅವರ ಯೋಚನೆ. ಜನರು ಕೊಡ್ತಾ ಇರಬೇಕು, ಮುಂದೆ ಹೋಗ್ತಿರಬೇಕು. ಹೊಸ ಮನೆಗಳು ನಿರ್ಮಾಣ ಆಗಬೇಕು. ಹಳೆಯ ಮನೆಗಳ ಖರ್ಚು ನಿರರ್ಥಕವಾಗಿ ಹೆಚ್ಚುತ್ತದೆ. ಅವರು ಮನೆ ನಿರ್ಮಾಣ ತಡ ಮಾಡಲು ಕಾರಣ ಏನೆಂದರೆ, ನೂರಾರು ನಿರ್ಮಾಣಗಳಿಗೆ ಅನುಮತಿ ಬೇಕಿರುತ್ತದೆ. ಆ ಬಗ್ಗೆ ಹರದೀಪ್‌ಪುರಿ ಬಿಲ್‌ಕುಲ್‌ಚುಪ್. ಅವರ ಮೆದುಳಿಗೆ ಲಕ್ವಾ ಹೊಡೆದಿರಬಹುದೇನೋ…. ಸರ್ಕಾರದಲ್ಲಿ ಯಾರೇ ಇದ್ದರೂ ಈ ರೋಗಕ್ಕೆ ತುತ್ತಾಗುತ್ತಾರೆ.
ಬಿಲ್ಡರ್ಸ್ ಪ್ರತಿಯೊಂದು ನಿಟ್ಟಿನಲ್ಲಿ ಸ್ಪರ್ಧೆ ಎದುರಿಸಬೇಕಾಗುತ್ತದೆ. ಯಾರಿಗೆ ಸಮಸ್ಯೆಯ ಅರಿವು ಇರುವುದಿಲ್ಲವೋ ಅವರಿಗೆ ಆರೋಪ ಹೊರಿಸುವುದು ಸುಲಭ. ಶಿಕ್ಷಕರು ಹಣ ಪಡೆದು ಕಲಿಸದೇ ಇದ್ದರೆ ಯಾರೂ ಏನೂ ಹೇಳುವುದಿಲ್ಲ. ಏಕೆಂದರೆ ಅವರು ಗುರುಗಳು, ವಂದನೀಯರು ಪೂಜ್ಯರು, ದೇವರು. ಬಿಲ್ಡರ್ಸ್ ಮಾಫಿಯಾಗಳು. ಅವರನ್ನೇಕೆ ಕ್ಷಮಿಸಬೇಕು?
ಧರ್ಮದ ನೆರಳಲ್ಲಿ ಟೀಕೆ ಸಹನೀಯವಲ್ಲ
ಆ ಹುಡುಗಿಯರ ಧೈರ್ಯ ಮೆಚ್ಚಲೇಬೇಕು, ಅವರು ಕಲ್ಲಂಗಡಿ ಮೇಲ್ಭಾಗದ ಸಿಪ್ಪೆ ತುಂಡುಗಳನ್ನು ಇಟ್ಟುಕೊಂಡು ಮುಕ್ತ ಮೆರವಣಿಗೆ ಮಾಡಿದರು. ಕೆಟ್ಟ ಸೆಕ್ಸಿ ಕಮೆಂಟ್ ಮಾಡಿದ ಮತಾಂಧ ಮುಸ್ಲಿಂ ಪ್ರೊಫೆಸರ್ ನಾಚಿ ನೀರಾಗುವಂತೆ ಮಾಡಿದರು. ಈ ಮಹಾಶಯ ಧರ್ಮ ರಕ್ಷಣೆಯ ಹೆಸರಿನಲ್ಲಿ ಹೇಗೆ ಹೇಳಿಕೆ ಕೊಟ್ಟಿದ್ದನೆಂದರೆ, ಹಿಜಾಬ್ ಧರಿಸಿರುವುದರ ಹೊರತಾಗಿ ತಮ್ಮ ಎದೆಯನ್ನು ಕತ್ತರಿಸಿದ ಕಲ್ಲಂಗಡಿಯ ಹಾಗೆ ತೋರಿಸುತ್ತಾ ತಿರುಗುತ್ತಿರುತ್ತಾರೆ ಎಂಬುದಾಗಿ.
ಆ ಮಹಾನ್ ಪ್ರವಚನಕಾರನ ವಿಡಿಯೋ ಲಾಂಚ್ ಆಗುತ್ತಿದ್ದಂತೆ ಹುಡುಗಿಯರ ಗುಂಪು ಕತ್ತರಿಸಿದ ಕಲ್ಲಂಗಡಿಗಳನ್ನು ಕೈಯಲ್ಲಿ ಹಿಡಿದುಕೊಂಡು ಕೇರಳದ ಕೋಳಿಕೋಡ್‌ನ ಫಾರೂಖ್ ಟ್ರೇನಿಂಗ್ ಕಾಲೇಜಿನಲ್ಲಿ ಜಮೆಗೊಂಡಿತು. ಅವರ ಆಗ್ರಹ ಒಂದೇ, ಜೌಹರ್ ಮುನ್ವರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದಾಗಿತ್ತು. ಪ್ರತಿಯೊಂದು ಧರ್ಮದ ಧರ್ಮಾಂಧರು ತಮ್ಮ ಪುರುಷತ್ವದ ಪ್ರತಾಪ ತೋರಿಸಿಕೊಳ್ಳಲು ಮಹಿಳೆಯರ ಅಂಗಗಳ ಕುರಿತಂತೆ ಬೇಕಾಬಿಟ್ಟಿ ಟೀಕೆ ಮಾಡುತ್ತಿರುತ್ತಾರೆ. ಅವರು ಹೇಳಿದ್ದನ್ನು ಕೇಳಿ ಮಹಿಳೆಯರು ತಲೆ ತಗ್ಗಿಸಿ ನಡೆಯುತ್ತಾರೆ. ಮಹಿಳೆಯರ ಈ ಮೌನವೇ ಕಂದಾಚಾರಿಗಳಿಗೆ ಗುಲಾಮಗಿರಿಯ ಕೈಕೋಳ ತೊಡಿಸಲು ಧರ್ಮದ ನೆರವು ಪಡೆದುಕೊಳ್ಳಬೇಕೆಂಬ ಪ್ರೇರಣೆ ನೀಡುತ್ತದೆ. ಹಾಗೆ ನೋಡಿದರೆ ಧರ್ಮದ ಹಸ್ತಕ್ಷೇಪ ಪ್ರತಿಯೊಂದು ಮನೆಯಲ್ಲಿ ಬಾಲ್ಯದಲ್ಲೇ ಆರಂಭವಾಗುತ್ತದೆ. ಹೀಗಾಗಿ ಧಾರ್ಮಿಕ ಆದೇಶಗಳು ಎಂಥವರನ್ನೂ ತಡೆದು ನಿಲ್ಲಿಸುತ್ತವೆ. ಈ ರೀತಿಯ ಕಮೆಂಟ್‌ಗಳು ಮಹಿಳೆಯರ ನೆಮ್ಮದಿಯನ್ನು ಭಂಗಗೊಳಿಸುತ್ತವೆ.
ಈಗ ಜನರ ಧ್ವನಿಯನ್ನು ಯಾರೂ ಹತ್ತಿಕ್ಕಲಾಗದು. ಆದರೆ ಈ ತೆರನಾದ ಮಾತುಗಳಿಗಾಗಿ ನೇಮಿಂಗ್ ಹಾಗೂ ಶೇಮಿಂಗ್‌ಆಗಬೇಕು, ಅವರು ಪಶ್ಚಾತ್ತಾಪಪಡುವಂತಾಗಬೇಕು. `ಹಿಜಾಬ್’ ಒಂದು ರೀತಿಯಲ್ಲಿ ಇಸ್ಲಾಂನಲ್ಲಿ ತಮ್ಮದೇ ಆದ ಪುರುಷರಿಂದ ನಿಯಂತ್ರಣಕ್ಕೆ ತರದೇ ಇರಲಾರದಂತಹ ವೈಫಲ್ಯದ ಪ್ರತೀಕ. ಯಾವುದೇ ಮಹಿಳೆಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ದಿಟ್ಟಿಸಿ ನೋಡಬಾರದೆಂದು ಇಸ್ಲಾಂನಲ್ಲಿ ಹೇಳಿರುತ್ತಿದ್ದರೆ, ಆಗ `ಹಿಜಾಬ್’ನ ಅವಶ್ಯಕತೆಯೇ ಇರುತ್ತಿರಲಿಲ್ಲ. ಸೆರಗು ಕೂಡ ಅದೇ ಪರಂಪರೆಯ ಒಂದು ಭಾಗ.
ಧರ್ಮ ಉಪದೇಶಿಸುತ್ತದೆ, ಸಮಾಜವನ್ನು ನಿಯಂತ್ರಿಸುತ್ತದೆ ಎಂದೇನೋ ಹೇಳಿಕೊಳ್ಳುತ್ತದೆ. ಆದರೆ ಪ್ರತಿಯೊಂದು ಧರ್ಮದಲ್ಲೂ ಧಾರ್ಮಿಕವಲ್ಲದ ಸಮಾಜದಲ್ಲಿ ನಡೆಯುವಂತೆ ಅಪರಾಧ. ಸ್ತ್ರೀಯರ ಅವಹೇಳನ, ಬಲಾತ್ಕಾರ, ಕಳ್ಳತನ, ಹತ್ಯೆಯಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ, ಈಗಂತೂ ಜಗತ್ತಿನಾದ್ಯಂತ ಧರ್ಮ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದನ್ನು ಹೆಚ್ಚುಕಡಿಮೆ ನಿಲ್ಲಿಸಿಬಿಟ್ಟಿದೆ. ಆ ಕೆಲಸವನ್ನು ಸರ್ಕಾರ ಸೃಷ್ಟಿಸಿದ ನ್ಯಾಯಾಲಯಗಳು ಮಾಡುತ್ತಿವೆ. ಧರ್ಮ ಕಂದಾಚಾರದ ಮಾತುಗಳನ್ನು ಹೇರುತ್ತದೆ. ಈ ಹೇಳಿಕೆಗಳನ್ನು ವಿರೋಧ ಮಾಡುವುದು ಅತ್ಯವಶ್ಯ.
ಕೋಳಿಕೋಡ್‌ನ ಹುಡುಗಿಯರ ಧೈರ್ಯ ಮೆಚ್ಚಲೇಬೇಕು, ಅವರು ಅವಹೇಳನಕಾರಿ ಹೇಳಿಕೆಯನ್ನು ಮುಕ್ತವಾಗಿ ಖಂಡಿಸಿದರು.