ಪ್ರತಿಯೊಬ್ಬ ಹೆಣ್ಣು ತನ್ನ ಸ್ಕಿನ್‌ ಗ್ಲೋಯಿಂಗ್‌, ಅಟ್ರಾಕ್ಟಿವ್ ‌ಆಗಿರುವುದರ ಜೊತೆ, ಎಲ್ಲಾ ತರಹದ ಪ್ರಾಬ್ಲಮ್ಸ್ ನಿಂದಲೂ ಫ್ರೀ ಆಗಿರಬೇಕೆಂದು ಬಯಸುತ್ತಾಳೆ. ಆದರೆ ಲಕ್ಷ ಸಲ ಯೋಚಿಸಿದರೂ ಎಲ್ಲಾ ಹೆಂಗಸರ ಸ್ಕಿನ್‌ ಸರಿಯಾಗಿರುತ್ತದೆ ಎಂದು ಹೇಳಲಾಗದು. ಏಕೆಂದರೆ ಸ್ಕಿನ್‌ ಒಂದು ಪ್ರೊಟೆಕ್ಟಿವ್ ಲೇಯರ್‌ನಿಂದ ಆಗಿರುತ್ತದೆ. ಆದರೆ ಋತು ಬದಲಾವಣೆ, ಕೆಮಿಕಲ್ಸ್ ಯುಕ್ತ ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್, ಧೂಳು ಮಣ್ಣು, ಕೊಳಕಿನ ಹೆಚ್ಚಿನ ಸಂಪರ್ಕಕ್ಕೆ ನಾವು ಬಂದಾಗ, ಅದು ನಮ್ಮ ಸ್ಕಿನ್‌ ಸೆನ್ಸಿಟಿವಿಟಿಯ ತೊಂದರೆಗೆ ಕಾರಣವಾಗುತ್ತದೆ, ಅದರಿಂದಾಗಿ ನಾವು ಅನೇಕ ಸ್ಕಿನ್‌ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಹೀಗಾಗಿ ಸೂಕ್ತ ಸ್ಕಿನ್‌ ಕೇರ್‌ ಜೊತೆಗೆ ಉತ್ತಮ ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ಬಳಸಬೇಕು. ಆಗ ಮಾತ್ರ ನಮ್ಮ ಸ್ಕಿನ್ ಹೊಳೆಯುತ್ತಿರುತ್ತದೆ. ಹೀಗಾಗಿ ಬಯೋಡರ್ಮಾದ ಸೆನ್ಸಿಬಯೋ H 2O   ಕ್ಲೆನ್ಸರ್‌, ಒಂದು ವಿಶೇಷ ಪ್ರಾಡಕ್ಟ್ ಆಗಿದ್ದು, ನಿಮ್ಮ ಸ್ಕಿನ್ನಿನ ವಿಶೇಷ ಎಚ್ಚರಿಕೆ ವಹಿಸುತ್ತದೆ.

ಹಾಗಾದರೆ ಬನ್ನಿ, ವಿವರವಾಗಿ ತಿಳಿಯೋಣ, ಸ್ಕಿನ್‌ ಕೇರ್‌ ಪ್ರಕ್ರಿಯೆ :

ಸ್ಕಿನ್ಸೆನ್ಸಿಟಿವಿಗೆ ಕಾರಣಗಳು

ಹಾನಿಕಾರಕ ಘಟಕಗಳು : ದೀರ್ಘಕಾಲ ಮಿನರಲ್ ಆಯಿಲ್‌, ಸಿಲಿಕಾನ್‌, ಸ್ಕಿನ್‌ಗೆ ಹಾನಿ ಮಾಡುವ ಘಟಕಗಳು ತುಂಬಿರುವ ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ಬಳಸುವುದರಿಂದ, ಚರ್ಮದ ಪೋರ್ಸ್‌ ಕ್ಲೋಸ್‌ ಆಗುವುದರ ಜೊತೆಯಲ್ಲೇ ಚರ್ಮದಲ್ಲಿ ಹೆಚ್ಚು ಆ್ಯಕ್ನೆ, ಉರಿಯಂಥ ಸಮಸ್ಯೆಗಳು ಹೆಚ್ಚುತ್ತವೆ. ಇದರ ಪರಿಹಾರಕ್ಕಾಗಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ನೀವು ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ಕೊಳ್ಳುವಾಗ ಅದರಲ್ಲಿನ ಘಟಕಗಳನ್ನು ಗಮನಿಸಿಯೇ ಕೊಳ್ಳಬೇಕು. ಆದಷ್ಟೂ ನೀವು ನೈಸರ್ಗಿಕ ಘಟಕಗಳಿಂದ ತುಂಬಿದ ಪ್ರಾಡಕ್ಟ್ಸ್ ಮತ್ತು ಮೈಲ್ಡ್ ಪ್ರಾಡಕ್ಟ್ಸ್ ನ್ನೇ ಬಳಸಬೇಕು. ರಾತ್ರಿ ಮಲಗುವ ಮುನ್ನ ಮೇಕಪ್‌ ಕಳಚಲು ಮರೆಯದಿರಿ.

ಪರಿಸರ ಮಾಲಿನ್ಯ : ನಾವು ಮನೆಯಲ್ಲೇ ಇರಲಿ, ಹೊರಗೇ ಹೋಗಲಿ, ಸದಾ ಮಾಲಿನ್ಯದಿಂದ ಸುತ್ತುವರಿದಿರುತ್ತೇವೆ. ಇದರ ಕಾರಣ ನಮ್ಮ ಸ್ಕಿನ್‌ ಕೊಳಕು ಅನಿಸುವುದಷ್ಟೇ ಅಲ್ಲ, ಮಾಲಿನ್ಯದ ಕಾರಣ, ಅದರಲ್ಲಿನ ಕೆಲವು ಕೆಮಿಕಲ್ಸ್ ಚರ್ಮದ ಪದರ ಪ್ರವೇಶಿಸಿ, ಆಕ್ಸಿಡೇಶನ್‌ ಸ್ಟ್ರೆಸ್‌ ಉಂಟು ಮಾಡುತ್ತದೆ. ಈ ಕಾರಣ ನಮ್ಮ ಚರ್ಮದ ಹೊರ ಪದರ ದುರ್ಬಲ ಆಗುವುದಲ್ಲದೆ, ಊತ, ಏಜಿಂಗ್‌ನ ಹಿಂಸೆಯೂ ಸೇರಿಕೊಳ್ಳುತ್ತದೆ. ಇದರಿಂದ ಸೆನ್ಸಿಬಯೋ H 2O   ಕ್ಲೆನ್ಸರ್‌ ನಿಮಗೆ ಫುಲ್ ಪ್ರೊಟೆಕ್ಷನ್ ನೀಡುತ್ತದೆ.

ಕೊಳಕು : ನಿಮ್ಮ ಸ್ಕಿನ್‌ ಕೆಮಿಕಲ್ಸ್ ಮತ್ತು ರೋಗಕಾರಕಗಳ ವಿರುದ್ಧ ಒಂದು ನೈಸರ್ಗಿಕ ಗೋಡೆಯಾಗಿ ಕೆಲಸ ಮಾಡುತ್ತದೆ. ಹೀಗಾಗಿ ನೀವು ಸ್ಕಿನ್‌ಗೆ ಹೈಜೀನ್‌ ಅಂದ್ರೆ ಅದಕ್ಕೆ ಪ್ರಾಪರ್‌ ಕ್ಲೆನ್ಸಿಂಗ್‌ ಒದಗಿಸಿದರೆ, ಆಗ ಅದು ಚರ್ಮದ ಪದರದಲ್ಲಿನ ಡೆಡ್‌ ಸ್ಕಿನ್‌ ಸೆಲ್ಸ್, ಕೊಳಕು, ರೋಗಾಣುಗಳನ್ನು ತೊಲಗಿಸುವಲ್ಲಿ ಸಕ್ಷಮಗೊಳ್ಳುತ್ತದೆ.

ಟ್ಯಾಪ್ವಾಟರ್‌ : ನಲ್ಲಿ ನೀರಲ್ಲಿ ಬ್ಯಾಕ್ಟೀರಿಯಾ, ಕ್ಯಾಲ್ಶಿಯಂ, ಇತರ ಕೆಮಿಕಲ್ಸ್ ತುಂಬಿರುತ್ತವೆ. ಇದು ನಮ್ಮ ಚರ್ಮದ ಹೊರಪದರ ಎಪಿಡರ್ಮಿಸ್‌ಗೆ ಹಾನಿ ಮಾಡಬಹುದು. ಇದರಿಂದ ಚರ್ಮಕ್ಕೆ ಉರಿ, ಅಲರ್ಜಿ ತಪ್ಪಿದ್ದಲ್ಲ. ಹೀಗಾಗಿ ಸೂಕ್ತ ಫೇಸ್‌ಕ್ಲೆನ್ಸರ್‌ ಬಳಸಿ ನೀವು ಸೆನ್ಸಿಟಿವ್ ‌ಸ್ಕಿನ್‌ ಸಮಸ್ಯೆಯಿಂದ ಪಾರಾಗಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ