ಕಂಗಳ ಮೇಕಪ್‌ಗೆ ನಿಮಿಷಗಳಲ್ಲಿ ಅತ್ಯಾಕರ್ಷಕ ಲುಕ್ಸ್ ನೀಡಲು ಐ ಲೈನರ್‌ಗಿಂತ ಉತ್ಕೃಷ್ಟ ಮೇಕಪ್‌ ಪ್ರಾಡಕ್ಟ್ ಇನ್ನೊಂದಿಲ್ಲ. ಹೀಗಾಗಿ ಮಹಿಳೆಯರು ತಮ್ಮ ಸೌಂದರ್ಯ ಸಂವರ್ಧಿಸಲು ಬ್ಲ್ಯಾಕ್‌ ಮಾತ್ರವೇ ಅಲ್ಲದೆ, ಬಗೆಬಗೆಯ ಕಲರ್‌ ಫುಲ್ ಐ ಲೈನರ್‌ಗಳನ್ನೂ ಬಿಂದಾಸ್‌ ಬಳಸುತ್ತಾರೆ. ಆದರೆ ವೈಟ್‌ ವಿಷಯ ಬಂದಾಗ ಮಾತ್ರ ಅವರು ತುಸು ಹಿಂಜರಿಯುತ್ತಾರೆ. ಈ ವೈಟ್‌ ಎಲ್ಲಿ ತಮ್ಮ ಲುಕ್ಸ್ ಕೆಡೆಸಿಬಿಡುತ್ತದೋ….. ಎಂದು ಭಯಪಡುತ್ತಾರೆ. ನೀವು ಸಹ ಹೀಗೆಯೇ ಭಾವಿಸಿದ್ದರೆ ಅದನ್ನು ಬದಲಾಯಿಸಿ. ಇದು ಕಂಗಳ ಸೌಂದರ್ಯ ಮಾತ್ರವಲ್ಲದೆ, ಐಬ್ರೋ ಬೋನ್‌, ತುಟಿಗಳಂಥ ಫೇಶಿಯಲ್ ಫೀಚರ್ಸ್‌ನ್ನೂ ಹೈಲೈಟ್‌ಗೊಳಿಸುತ್ತದೆ.

ಬ್ರೈಟ್‌ ಲುಕ್ಸ್ ನಿಮ್ಮ ಕಂಗಳು ಚಿಕ್ಕದಾಗಿದ್ದರೆ, ಐ ಮೇಕಪ್‌ನ ಆರಂಭವನ್ನು ಪೆನ್ಸಿಲ್ ‌ವೈಟ್‌ ಐ ಲೈನರ್‌ನಿಂದಲೇ ಮಾಡಿ. ಕಂಗಳ ಕೆಳರೆಪ್ಪೆ ಮೇಲೆ ವೈಟ್‌ ಐ ಲೈನರ್‌ನ ಸಿಂಗಲ್ ಕೋಟ್‌ ಹಚ್ಚಿರಿ. ಅದಾದ ಮೇಲೆ (ನೇರ ಇದರ ಮೇಲಲ್ಲ, ಅದರ ಹಿಂಭಾಗದಲ್ಲಿ) ಕಾಜಲ್ ಬ್ಲ್ಯಾಕ್‌ ಯಾ ಬೇರೆ ಬಣ್ಣದ ಐ ಲೈನರ್‌ ಹಚ್ಚಿರಿ. ಇದರಿಂದ ಚಿಕ್ಕದಾದ ನಿಮ್ಮ ಕಂಗಳು ದೊಡ್ಡದಾಗಿ ಕಾಣಿಸುತ್ತವೆ.

ವಿಂಟೇಜ್‌ ಲುಕ್ಸ್

ನೀವು ಕಂಗಳಿಗೆ  ವಿಂಟೇಜ್‌ ಲುಕ್ಸ್ ನೀಡಬಯಸಿದರೆ, ಲಿಕ್ವಿಡ್‌ ವೈಟ್‌ ಐ ಲೈನರ್‌ನ್ನು ನಿಮ್ಮ ವ್ಯಾನಿಟಿಗೆ ಮರೆಯದೆ ಹಾಕಿಡಿ. ಕಂಗಳ ರೆಪ್ಪೆ ಬಳಿ ಮೊದಲು ಬ್ಲ್ಯಾಕ್‌ ಐ ಲೈನರ್‌ನ 2 ಕೋಟ್‌ ಹಚ್ಚಿರಿ. ಅದು ಒಣಗಿದ ಮೇಲೆ ಅದರ ಬದಿಯಲ್ಲೇ ವೈಟ್‌ನ ಡಬಲ್ ಕೋಟ್‌ ಹಚ್ಚಿರಿ. ಈ ರೀತಿಯ ಬ್ಲ್ಯಾಕ್‌ವೈಟ್‌ಕಾಂಬಿನೇಶನ್‌ ನಿಮಗೆ ಉತ್ತಮ ವಿಂಟೇಜ್‌ ಲುಕ್ಸ್ ನೀಡಬಲ್ಲದು.

ಕ್ಯಾಟ್‌ ಲುಕ್ಸ್

ಕ್ಯಾಟ್‌ ಐ ಲುಕ್ಸ್ ಗಾಗಿ ಕಣ್ಣು ರೆಪ್ಪೆಗಳ ಮೇಲೆ ಲಿಕ್ವಿಡ್‌ ಬ್ಲ್ಯಾಕ್‌ ಐ ಲೈನರ್‌ನ ಡಬಲ್ ಕೋಟ್‌ ಹಚ್ಚಿರಿ. ಇದರ ತುದಿವರೆಗೆ ಬಂದಾಗ, ಮೇಲ್ಭಾಗಕ್ಕೆ ಎಳೆದುಬಿಡಿ. ಈಗ ಕೆಳಗಿನ ರೆಪ್ಪೆಯ ಕಾರ್ನರ್‌ ಭಾಗದಲ್ಲಿ ಲಿಕ್ವಿಡ್‌ ವೈಟ್‌ ಐ ಲೈನರ್‌ ಹಚ್ಚಿ ಅದನ್ನು ಕೆಳಭಾಗಕ್ಕೆ ತಂದು ತಿರುಚಿಬಿಡಿ.

ವೀ ಲುಕ್ಸ್

ಇದಕ್ಕಾಗಿ ಐ ಕಾರ್ನರ್‌ (ಮುಂಭಾಗದ್ದು) ಮೇಲೆ ಪೆನ್ಸಿಲ್ ವೈಟ್‌ ಐ ಲೈನರ್‌ನಿಂದ ವೀ ಶೇಪ್‌ ನೀಡಿ. ಅದಾದ ಮೇಲೆ ಬ್ಲ್ಯಾಕ್‌, ಬ್ರೌನ್‌ ಮುಂತಾದ ಐ ಲೈನರ್‌ಗಳನ್ನು ಬಳಸಿರಿ. ವೈಟ್‌ ಐ ಲೈನರ್‌ನಿಂದ ಐ ಕಾರ್ನರ್‌ನ್ನು ಇನ್ನಷ್ಟು ಚೂಪಾಗಿ ತೋರ್ಪಡಿಸಿ. ಇದರಿಂದ ಕಂಗಳು ಇನ್ನಷ್ಟು ಆಕರ್ಷಕ ಎನಿಸುತ್ತವೆ.

ಕೂಲ್ ಲುಕ್ಸ್

ನೀವು ಮಿಸ್‌ ಕೂಲ್ ‌ಆಗಬೇಕೇ? ನಿಮ್ಮ ಐ ಮೇಕಪ್‌ಗೂ ಕೂಲ್ ‌ಲುಕ್ಸ್ ನೀಡಿ. ಇದಕ್ಕಾಗಿ ಮೊದಲು ರೆಪ್ಪೆಗಳ ಮೇಲೆ ಬ್ಲ್ಯಾಕ್‌ಕಲರ್‌ನ ಲಿಕ್ವಿಡ್‌ ಐ ಲೈನರ್‌ ಹಚ್ಚಿರಿ. ಆಮೇಲೆ ಪೆನ್ಸಿಲ್ ‌ಶಿಮರೀ ವೈಟ್‌ ಐ ಲೈನರ್‌ ಹಚ್ಚಿ, ಲೈಟ್‌ ಆಗಿ ಸ್ಮಜ್‌ ಮಾಡಿ. ಇದರಿಂದ ಐ ಮೇಕಪ್‌ಗೆ ಐಸೀ (ಐಸ್‌ ನಂತಹ) ಎಫೆಕ್ಟ್ ಬರುತ್ತದೆ, ನೀವು ಕೂಲ್ ‌ಗರ್ಲ್ ಎನಿಸುವಿರಿ.

ಬ್ಲ್ಯಾಕ್‌ವೈಟ್‌ ಲುಕ್ಸ್

ನೀವು ಬ್ಲ್ಯಾಕ್‌ವೈಟ್‌ ಡ್ರೆಸ್‌ ಧರಿಸುತ್ತಿರುವಿರಾದರೆ, ಅದರ ಜೊತೆ ಬ್ಲ್ಯಾಕ್‌ವೈಟ್‌ ಆ್ಯಕ್ಸೆಸರೀಸ್‌ ಕ್ಯಾರಿ ಮಾಡುವ ಹಾಗೆ, ಈ ಐ ಮೇಕಪ್‌ ಪ್ರಾಡಕ್ಟ್ ನ್ನೂ ಮರೆಯದೆ ತೆಗೆದುಕೊಳ್ಳಿ. ಇದಕ್ಕಾಗಿ ಮೇಲ್ಭಾಗದ ರೆಪ್ಪೆಗಳ ಮೇಲೆ ಬ್ಲ್ಯಾಕ್‌ ಲಿಕ್ವಿಡ್‌ ಐ ಲೈನರ್‌ ಹಾಗೂ ಕೆಳಭಾಗದ ರೆಪ್ಪೆ ಮೇಲೆ ವೈಟ್‌ ಲಿಕ್ವಡ್‌ ಐ ಲೈನರ್‌ ಹಚ್ಚಿರಿ. ಅಗತ್ಯವೆನಿಸಿದರೆ ಇದನ್ನು ಬದಲಿಸಿ ಸಹ ಬಳಸಬಹುದು.

ಡ್ರಮಾಟಿಕ್‌ ಲುಕ್ಸ್

ಪಾರ್ಟಿ ಯಾ ಫಂಕ್ಷನ್‌ಗಳಲ್ಲಿ ಡ್ರಾಮಾ ಕ್ವೀನ್‌ ಆಗಬಯಸುವಿರಾ? ಇದಕ್ಕಾಗಿ ಮೊದಲು ರೆಪ್ಪೆಗಳ ಮೇಲೆ ಬ್ಲ್ಯಾಕ್‌ ಯಾ ಬ್ರೌನ್ ಬಣ್ಣದ ಸಿಂಗಲ್ ಕೋಟ್‌ ಹಚ್ಚಿರಿ. ಅದಾದ ಮೇಲೆ ಲಿಕ್ವಿಡ್‌ ವೈಟ್‌ ಐ ಲೈನರ್‌ ಹಚ್ಚಿರಿ. ನಂತರ ಬ್ಲೂ, ಗ್ರೀನ್‌ ಯಾ ಪರ್ಪಲ್ ಶೇಡ್‌ನ ಐ ಲೈನರ್‌ ಹಚ್ಚಿ, ಅದರ ಮೇಲೆ ಗ್ಲಿಟರ್‌ ಸಹ ಹಚ್ಚಬೇಕು. ಆಗ ಪಾರ್ಟಿಗೆ ಬಂದವರ ಕಣ್ಣೋಟವೆಲ್ಲ ನಿಮ್ಮ ಕಂಗಳತ್ತಲೇ!

ಡಿಫರೆಂಟ್‌ ಐ ಲುಕ್ಸ್ ನೀಡುವುದರ ಜೊತೆ ವೈಟ್‌ ಐ ಲೈನರ್‌ ಮುಖದ ಕೆಲವು ಲೋಪದೋಷಗಳನ್ನೂ ನಿವಾರಿಸುತ್ತದೆ. ಬನ್ನಿ, ವೈಟ್‌ ಐ ಲೈನರ್‌ ಬಳಸಿ ನೀವು ಯಾವ ರೀತಿ ನಿಮ್ಮ ಸೌಂದರ್ಯ ಸಂವರ್ಧಿಸಬಹುದು ಎಂಬುದನ್ನು ನೋಡೋಣ.

ಐ ಲೈನರ್‌ ಕಂ ಐ ಶ್ಯಾಡೋ

ನೀವು ವೈಟ್‌ ಐ ಶ್ಯಾಡೋ ಇಲ್ಲದೆಯೂ ಪೆನ್ಸಿಲ್ ವೈಟ್‌ ಐ ಲೈನರ್‌ನ್ನು ಬಳಸಬಹುದು. ನೀವು ವೈಟ್‌ ಐ ಲೈನರ್‌ನ್ನು ಐ ಶ್ಯಾಡೋ ತರಹ ಬಳಸಿ, ಅದರ ಮೇಲೆ ಬೇರೆ ಇತರ ಬಣ್ಣದ ಐ ಶ್ಯಾಡೋಗಳನ್ನು ಬಳಸುವಿರಾದರೆ, ಆಗ ಅದರ ಶೇಡ್‌ ಇನ್ನಷ್ಟು ಡೀಪ್‌ ಆಗಿ ಕಂಗೊಳಿಸುತ್ತದೆ, ಜೊತೆಗೆ ಹೆಚ್ಚು ಬಾಳಿಕೆಯೂ ಬರುತ್ತದೆ.

ಪ್ಯೂರ್‌ ಶೇಡ್‌

ಯಾವಾಗ ನೀವು ಬ್ಲೂ, ಗ್ರೀನ್‌, ಪರ್ಪಲ್‌ನಂಥ ಕಲರ್‌ ಫುಲ್ ಐ ಲೈನರ್‌ ಬಳಸುತ್ತೀರೋ, ಅದಕ್ಕೆ ಮೊದಲು ತಪ್ಪದೆ ಲಿಕ್ವಿಡ್ ವೈಟ್‌ ಐ ಲೈನರ್‌ ಹಚ್ಚಿರಿ. ಅದರ ಮೇಲೆ ನಿಮ್ಮ ಆಯ್ಕೆಯ ಕಲರ್‌ ಫುಲ್ ಐ ಲೈನರ್‌ ಹಚ್ಚಬೇಕು. ಬೇಸ್‌ ವೈಟ್‌ ಆಗಿರುವುದರಿಂದ ನಿಮಗೆ ಕಲರ್‌ ಫುಲ್ ಐ ಲೈನರ್‌ನ ಪ್ಯೂರ್‌ ಶೇಡ್‌ ಸಿಗುತ್ತದೆ.

ಹೈಡ್‌ ಡಾರ್ಕ್‌ ಸರ್ಕಲ್ಸ್

ನಿಮ್ಮ ಕಂಗಳ ಕೆಳಗೆ ಡಾರ್ಕ್‌ ಸರ್ಕಲ್ಸ್ ಇದ್ದರೆ, ಅವನ್ನು ಅಡಗಿಸಿಡಲು ಪೆನ್ಸಿಲ್ ವೈಟ್‌ ಐ ಲೈನರ್‌ ಹಚ್ಚಿ, ಅದನ್ನು ಲಘುವಾಗಿ ಸ್ಮಜ್‌ ಮಾಡುತ್ತಾ ಹರಡಿಬಿಡಿ. ಯಾವಾಗ ಐ ಲೈನರ್‌ನಿಂದ ಡಾರ್ಕ್‌ ಸರ್ಕಲ್ಸ್ ಇಡಿಯಾಗಿ ಕವರ್‌ ಆಗುತ್ತದೋ, ಆಗ ಮೇಕಪ್

ಶುರುಮಾಡಿ.

ಹೈಲೈಟ್‌ ಐ ಬ್ರೋಸ್‌

ನಿಮ್ಮ ಐ ಬ್ರೋಸ್‌ನ್ನು ಹೈಲೈಟ್‌ಗೊಳಿಸಲು ಐ ಬ್ರೋ ಬೋನ್‌ ಮೇಲೆ ಪೆನ್ಸಿಲ್ ವೈಟ್‌ ಐ ಲೈನರ್‌ ಹಚ್ಚಿರಿ. ಇದನ್ನು ಚೆನ್ನಾಗಿ ಸ್ಮಜ್‌ ಮಾಡಿ. ಇದರಿಂದ ಕಂಗಳು ಮತ್ತು ಐ ಬ್ರೋಸ್‌ ನಡುವಿನ ಗ್ಯಾಪ್‌ ಹೆಚ್ಚುತ್ತದೆ, ಹಾಗಾಗಿ ಐ ಬ್ರೋಸ್‌ ಸಹಜವಾಗಿ ಎಂದಿಗಿಂತ ಹೆಚ್ಚು ಆಕರ್ಷಕ ಎನಿಸುತ್ತದೆ.

ಕರೆಕ್ಟ್ ಐ ಬ್ರೋಸ್

ನಿಮ್ಮ ಐ ಬ್ರೋಸ್‌ ಬಹು ತೆಳ್ಳಗೆ ಅಥವಾ ಆಕಾರ ಸರಿಯಾಗಿ ಇಲ್ಲದಿದ್ದರೆ, ಪೆನ್ಸಿಲ್ ವೈಟ್‌ ಐ ಲೈನರ್‌ನ್ನು ಬಳಸಿ, ಐ ಬ್ರೋಸ್‌ಗೆ ಕರೆಕ್ಟ್ ಶೇಪ್‌ ನೀಡಿ. ನಂತರ ಇದರ ಒಳಗೆ ಬ್ಲ್ಯಾಕ್‌ ಯಾ ಬ್ರೌನ್‌ ಶೇಡ್‌ನ ಐ ಶ್ಯಾಡೋ ಹಚ್ಚಿ, ಐ ಬ್ರೋಸ್‌ಗೆ ಪವರ್‌ ಫುಲ್ ಲುಕ್‌ಕೊಡಿ.

– ಚಂದ್ರಕಲಾ

और कहानियां पढ़ने के लिए क्लिक करें...