ತಿಂಗಳು ಸರಿಯುತ್ತಿದ್ದಂತೆ ಋತು ಬದಲಾದಂತೆ ಹವಾಮಾನದಲ್ಲೂ ಸಾಕಷ್ಟು ಬದಲಾಣೆಯಾಗುತ್ತದೆ. ಅಂತಹ ಸಮಯದಲ್ಲಿ ನಮ್ಮ ಮುಖ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಒಂದು ಸವಾಲಿನಂತಿರುತ್ತದೆ. ವರ್ಷವಿಡೀ ನಿಮಗೆ ಪರ್ಫೆಕ್ಟ್ ಲುಕ್ ಒದಗಿಸಲು ಇಲ್ಲಿದೆ ಒಂದು ಬ್ಯೂಟಿ ಕ್ಯಾಲೆಂಡರ್‌.

ಮಾರ್ಚ್‌ : ಉತ್ತರ ಭಾರತದಲ್ಲಿ ಪ್ರಚಲಿತವಾಗಿರುವ ರಂಗಿನ ಹಬ್ಬ ಈಗ ನಮ್ಮಲ್ಲಿಗೂ ಪಸರಿಸಿದೆ. ಆ ಸಮಯದಲ್ಲಿ ನ್ಯಾಚುರಲ್ ಕಲರ್ಸ್ ಮೇಕಪ್‌ನ್ನೇ ಬಳಸಿ ಮತ್ತು ನಿಮ್ಮ ಚರ್ಮಕ್ಕೆ ಆಯಿಲ್ ಮತ್ತು ಮೇಕಪ್‌ ಕೋಟ್‌ನಿಂದ ರಕ್ಷಣೆ ನೀಡಿ. ಇದರಿಂದ ಚರ್ಮದ ಮೇಲೆ ರಂಗಿನ ಪ್ರಭಾವ ಹೆಚ್ಚಾಗಿ ಆಗುವುದಿಲ್ಲ ಮತ್ತು ಸ್ನಾನ ಮಾಡಿದಾಗ ಬಣ್ಣವನ್ನು ತೊಳೆದು ಹಾಕುವುದೂ ಸುಲಭವಾಗುತ್ತದೆ.

ಏಪ್ರಿಲ್ ‌: ಇದು ಬಿರು ಬೇಸಿಗೆಯ ತಿಂಗಳು. ಆದ್ದರಿಂದ ನಿಮ್ಮ ಚರ್ಮವನ್ನು ಬಿಸಿಲಿನ ಬೇಗೆಯಿಂದ ರಕ್ಷಿಸಲು ಸನ್‌ಸ್ಕ್ರೀನ್‌ ಲೋಶನ್‌ ಬಳಸಿ. ನೀವು ಸ್ಲೀವ್ ಲೆಸ್‌ ಔಟ್‌ಫಿಟ್‌ ಬಳಸಲು ಬಯಸುವಿರಾದರೆ ಲೈಟ್‌ ಟ್ರೀಟ್‌ಮೆಂಟ್‌ ಮಾಡಿಸಿಕೊಳ್ಳಬಹುದು. ಶರೀರದ ಅನಗತ್ಯ ಕೂದಲನ್ನು ಶಾಶ್ವತವಾಗಿ ನಿವಾರಿಸಿಕೊಳ್ಳಲು ಇದೊಂದು ಸುಲಭ ಮತ್ತು ಪ್ರಭಾವೀ ಟೆಕ್ನಿಕ್‌ ಆಗಿದೆ. ಇದರಿಂದ ಮತ್ತೆ ಮತ್ತೆ ವ್ಯಾಕ್ಸ್ ಮಾಡಿಕೊಳ್ಳುವ ಜಂಜಾಟ ನಿಮಗೆ ತಪ್ಪುತ್ತದೆ.

ಮೇ : ಬೆವರಿಳಿಸುವ ಬಿಸಿಲಿನ ಈ ಕಾಲದಲ್ಲಿ ನಿಮ್ಮ ಮುಖ ಸೌಂದರ್ಯವನ್ನು ಹೆಚ್ಚಿಸಲು ಪೇಸ್ಟಲ್ ಕಲರ್ಸ್ ಬಳಸಿ. ಶಾರ್ಟ್‌ ಹೇರ್ ಮಾಡಿಸಿಕೊಳ್ಳುವ ಆಸೆ ನಿಮ್ಮ ಮನಸ್ಸಿನಲ್ಲಿ ಹುದುಗಿದ್ದರೆ, ಆ ಆಸೆಯನ್ನು ಪೂರೈಸಿಕೊಳ್ಳಲು ಇದು ಸುಸಮಯ.

ಜೂನ್‌ : ವೆಕೇಶನ್‌ ವೇಳೆಯಲ್ಲಿ ಮೇಕಪ್‌ಗಾಗಿ ಕಾಲಹರಣ ಮಾಡುವಿರಿ. ಇದಕ್ಕಾಗಿ ಪರ್ಮನೆಂಟ್‌ ಮೇಕಪ್‌ ಟೆಕ್ನಿಕ್‌ ಬಳಸಿಕೊಳ್ಳಿ. ಕಣ್ಣಿನ ಸೌಂದರ್ಯಕ್ಕಾಗಿ ಪರ್ಮನೆಂಟ್‌ ಐಬ್ರೋಸ್‌, ಪರ್ಮನೆಂಟ್‌ ಐ ಲೈನರ್‌ ಮತ್ತು ಪರ್ಮನೆಂಟ್‌ ಕಾಜಲ್ ಇದೆ. ಹಾಗೇ ತುಟಿಗಳ ಸೆಕ್ಸೀ ಲುಕ್‌ಗಾಗಿ ಲಿಪ್‌ ಲೈನರ್‌ ಮತ್ತು ಲಿಪ್‌ಸ್ಟಿಕ್‌ ಬಳಸಿ. ಲ್ಯುಕೋಡರ್ಮಾದ ಪ್ಯಾಚೆಸ್‌ನ್ನು ಮರೆಮಾಚಲು ಪರ್ಮನೆಂಟ್‌ ಕಲರಿಂಗ್‌ನ ಆಪ್ಶನ್‌ ಇದೆ. ನೇಲ್ಸ್ ಗಾಗಿ ಸೆಮಿಪರ್ಮನೆಂಟ್‌ ಸಲ್ಶೂಶನ್‌ಗಳಾದ ನೇಲ್ ಎಕ್ಸ್ ಟೆನ್ಶನ್‌ ಮತ್ತು ನೇಲ್ ‌ಆರ್ಟ್‌ನ ಟೆಕ್ನಿಕ್‌ಗಳಿವೆ. ಈ ಸೌಲಭ್ಯಗಳನ್ನು ಬಳಸಿಕೊಂಡು ಟ್ರಿಪ್‌ನಲ್ಲಿ  ನಿಮ್ಮ ಅಮೂಲ್ಯ ಸಮಯವನ್ನು ಉಳಿಸಬಹುದು.

ಜುಲೈ : ಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ ಟೀನ್‌ ಏಜ್‌ ಯುವತಿಯರು ಕಾಲೇಜು ಮೆಟ್ಟಿಲು ಹತ್ತುವ ಸಮಯ ಇದು. ಸ್ಟೈಲಿಶ್‌ ಲುಕ್‌ಗಾಗಿ ಸ್ಟ್ರೇಟ್‌ನಿಂಗ್‌ ಅಥವಾ ಕರ್ಲಿಂಗ್‌ ಮಾಡಿಸಿಕೊಳ್ಳಬಹುದು. ಇಲ್ಲವೇ ಸ್ಟ್ರೀಕ್ಸ್ ಕಲರ್‌ ಸಹ ಮಾಡಿಸಬಹುದು. ಗರ್ಲಿಶ್‌ಲುಕ್‌ಗಾಗಿ ಕಲರ್‌ಫುಲ್ ಲೈನರ್‌ನ್ನು ಬಳಸಬಹುದು.

ಆಗಸ್ಟ್ : ಮಳೆ ಸುರಿಯುವ ಈ ಸಮಯದಲ್ಲಿ ಫ್ರೆಶ್‌ ಆಗಿರಲು ಬೆಳಗ್ಗೆ ಮತ್ತು ಸಾಯಂಕಾಲ ಆ್ಯರೋಮ್ಯಾಟಿಕ್‌ ಸ್ನಾನ ಮಾಡಬಹುದು. ಮಳೆಯಲ್ಲಿ ನೆನೆದಿದ್ದರೆ ಕೂದಲನ್ನು ಹಾಗೇ ಬಿಡಬೇಡಿ. ಶ್ಯಾಂಪೂ ವಾಶ್‌ ಮಾಡಿ. ಆಗ ಕೂದಲು ಅಂಟುವುದಿಲ್ಲ ಮತ್ತು ಡ್ಯಾಂಡ್ರಫ್‌ನ ಭಯ ಇರುವುದಿಲ್ಲ. ದಿನದಲ್ಲಿ 2-3 ಸಲವಾದರೂ ಸ್ಕಿನ್‌ ಟೋನರ್‌ನಿಂದ ಮುಖವನ್ನು ಸ್ವಚ್ಛಗೊಳಿಸಿ. ಇದರಿಂದ ಮುಖದಲ್ಲಿನ ತೈಲಾಂಶ ಕಡಿಮೆಯಾಗಿ ಫ್ರೆಶ್‌ ಲುಕ್‌ ಇರುತ್ತದೆ.

ಸೆಪ್ಟೆಂಬರ್‌ : ಸದ್ಯದಲ್ಲೇ ಮದುಮಗಳಾಗಲಿರುವ ಹುಡುಗಿಯರು ಈ ತಿಂಗಳಲ್ಲಿ ಒಂದು ಒಳ್ಳೆಯ ಬ್ಯೂಟಿ ಕ್ಲಿನಿಕ್‌ನಲ್ಲಿ ಪ್ರೀ ಬ್ರೈಡಲ್ ಟ್ರೀಟ್‌ಮೆಂಟ್‌ ಪ್ರಾರಂಭಿಸಬಹುದು.

ಅಕ್ಟೋಬರ್‌ : ದೀಪಗಳ ಹಬ್ಬದ ದಿನಗಳಲ್ಲಿ ಆಕರ್ಷಕವಾಗಿ ಕಾಣಲು ಟ್ರೆಡಿಶನಲ್ ಲುಕ್‌ ಪಡೆಯಬಹುದು. ಕಾರ್ಡ್‌ ಪಾರ್ಟಿಯ ಸಂದರ್ಭವಾದರೆ, ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗಲು ಕಣ್ಣುಗಳಿಗೆ ಸ್ಮೋಕಿ ಮೇಕಪ್‌ ಮತ್ತು ಉಗುರುಗಳಿಗೆ 3ಡಿ ನೇಲ್ ‌ಆರ್ಟ್ ಮಾಡಿಸಲು ಮರೆಯದಿರಿ.

ನವೆಂಬರ್‌ : ಮದುವೆಯ ಮಧುರ ಸ್ಮೃತಿಗಳನ್ನು ಉಳಿಸಿಕೊಳ್ಳಲು ಏರ್‌ ಬ್ರಶ್‌ ಮೇಕಪ್‌ ಮಾಡಿಸಿಕೊಳ್ಳಿ. ಇದು ಬಹಳ ಹಗುರ ಮತ್ತು ಸ್ಮೂತ್‌ ಆಗಿದ್ದು ಚರ್ಮದ ಮೇಲಿನ ಕಲೆಯನ್ನು ಸಂಪೂರ್ಣವಾಗಿ ಮರೆಮಾಚುತ್ತದೆ. ಈ ಟೆಕ್ನಿಕ್‌ನಲ್ಲಿ ಏರ್‌ಗನ್‌ ಮೂಲಕ ಮೇಕಪ್‌ ಮಾಡಲಾಗುತ್ತದೆ. ಇದು ಆಟೋಮ್ಯಾಟಿಕಲೀ ಟ್ರೆಂಡ್‌ ಆಗುವುದರಿಂದ ಮುಖದ ಮೇಲೆ ಯಾವುದೇ ಗುರುತು ಉಳಿಯುವುದಿಲ್ಲ.

ಡಿಸೆಂಬರ್‌ : ಕ್ರಿಸ್‌ಮಸ್‌ ಸೆಲೆಬ್ರೇಶನ್‌ನಲ್ಲಿ ಪಾಲ್ಗೊಳ್ಳಲು ಕೊಂಚ ಕಲರ್‌ಫುಲ್ ಆಗಿರಲು ಪ್ರಯತ್ನಿಸಿ. ಕಾಂತಿಯುತ ತ್ವಚೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಬಾಡಿ ಪಾಲಿಶಿಂಗ್‌ ಮಾಡಿಸಿಕೊಳ್ಳಿ.

– ವನಿತಾ

Tags:
COMMENT