ಪ್ರಾಬ್ಲಂ ಫ್ರೀ ಸ್ಕಿನ್‌ ಬಯಕೆ ಪ್ರತಿ ಮಹಿಳೆಯ ಹಕ್ಕು. ಆದರೆ ಎಷ್ಟೇ ಪ್ರಯತ್ನಿಸಿದರೂ ಸಹ, ಒಮ್ಮೆ ಆಯ್ಲಿ ಸ್ಕಿನ್‌ ಪ್ರಾಬ್ಲಮ್ಸ್ ಹೆಚ್ಚಿದರೆ, ಮತ್ತೊಮ್ಮೆ ಸ್ಕಿನ್‌ನಲ್ಲಿ ಆ್ಯಕ್ನೆ ಕಾಡುತ್ತದೆ. ಇವಂತೂ ಮುಖದ ಕಾಂತಿ, ಸೌಂದರ್ಯವನ್ನು ಕೂಡಲೇ ನಾಶ ಮಾಡುತ್ತವೆ. ಜೊತೆಗೆ ಇದರ ದೆಸೆಯಿಂದ ಮುಖದಲ್ಲಿ ಹೆಚ್ಚಿನ ಉರಿ, ನವೆ ಹೆಚ್ಚಿ ಅದನ್ನು ಸಹಿಸುವುದೇ ಅತಿಕಷ್ಟವಾಗುತ್ತದೆ. ಈ ಪ್ರಾಬ್ಲಂ ಯಾವ ಋತುವಿನಲ್ಲಾದರೂ ಕಾಡಬಹುದು, ಆದರೆ ಬೇಸಿಗೆಯಲ್ಲಿ ಆಯ್ಲಿ ಸ್ಕಿನ್‌ ಹಾಗೂ ಅದರ ಮೇಲೆ ಆ್ಯಕ್ನೆ ಪ್ರಾಬ್ಲಮ್ಸ್ ಬಹು ಹೆಚ್ಚುತ್ತದೆ. ಏಕೆಂದರೆ ಬೇಸಿಗೆಯಲ್ಲಿ ಸೆಬಿಶಿಯಸ್‌ ಗ್ಲಾಂಡ್ಸ್ ಚರ್ಮವನ್ನು ಹೈಡ್ರೇಟ್‌ ಆಗಿರಿಸಲು, ಹೆಚ್ಚು ಪ್ರಮಾಣದ ಸೀಬಮ್ ಸ್ರವಿಸುತ್ತದೆ, ಅದರಿಂದಾಗಿ ಆ್ಯಕ್ನೆ ಕಾಟ ಹೆಚ್ಚುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಆಯ್ಲಿ ಕಾಂಬಿನೇಶನ್‌ ಸ್ಕಿನ್‌ನ ಆರೈಕೆ ಅತಿ  ಮುಖ್ಯ.

ಆಯ್ಲಿ & ಕಾಂಬಿನೇಶನ್‌ ಸ್ಕಿನ್‌ಗೆ ಕಾರಣಗಳು

ಇಂದು ಆಯ್ಲಿ ಸ್ಕಿನ್‌ ಸಮಸ್ಯೆ ಮಾಮೂಲಿ ಆಗಿದೆ. ಇದರಲ್ಲಿ ಲಿಕ್ವಿಡ್‌ ಮಟ್ಟ, ನೀರು ಮತ್ತು ಕೊಬ್ಬಿನಾಂಶ ಬಹಳ ಹೆಚ್ಚಿರುತ್ತದೆ. ಸೆಬೆಶಿಯಸ್‌ ಗ್ಲಾಂಡ್ಸ್ ಅಗತ್ಯಕ್ಕಿಂತ ಹೆಚ್ಚಾಗಿ ಸೀಬಮ್ ಸ್ರವಿಸಲು ಆರಂಭಿಸಿದರೆ ಆ್ಯಕ್ನೆ, ಬ್ರೇಕ್‌ಔಟ್ಸ್, ವೈಟ್‌ ಹೆಡ್ಸ್, ಬ್ಲಾಕ್‌ ಹೆಡ್ಸ್ ಸಮಸ್ಯೆ ಹೆಚ್ಚುತ್ತದೆ. ಮುಖ್ಯವಾಗಿ ಬ್ರೇಕ್‌ಔಟ್ಸ್ ಕಾರಣ ಸೀಬಮ್ ಡೆಡ್‌ ಸ್ಕಿನ್‌ ಸೆಲ್ಸ್ ಜೊತೆ ಬೆರೆತು ಪೋರ್ಸ್‌ನ್ನು ಬ್ಲಾಕ್ ಮಾಡುತ್ತದೆ. ಇದು ಚರ್ಮದ ದುಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತದೆ. ಅದೇ ಕಾಂಬಿನೇಶನ್‌ ಸ್ಕಿನ್‌ನಲ್ಲಿ ಟೀಝೋನ್‌ ಅಂದ್ರೆ ಫೋರ್‌ಹೆಡ್‌, ನೋಸ್‌, ಚಿನ್‌ನಲ್ಲಿ ಆಯಿಲ್ ‌ಗ್ಲಾಂಡ್ಸ್ ಓವರ್‌ ಆ್ಯಕ್ಟಿವ್‌ ಆಗುತ್ತವೆ. ಆದರೆ ಮುಖದ ಬೇರೆ ಭಾಗ ನಾರ್ಮಲ್ ಡ್ರೈ ಆಗಿರುತ್ತದೆ. ಹೀಗಾಗಿ ಇಂಥ ಚರ್ಮದ ಮಧ್ಯೆ ಬ್ಯಾಲೆನ್ಸ್ ಸರಿ ಇರದ ಕಾರಣ, ಇಂಥ ಚರ್ಮ ಡ್ಯಾಮೇಜ್‌ ಆಗುವ ಅವಕಾಶ ಹೆಚ್ಚುತ್ತದೆ. ಹೀಗಾಗಿ ಇಂಥ ಸ್ಕಿನ್‌ಕೇರ್‌ಗೆ ಹೆಚ್ಚಿನ ಆದ್ಯತೆ ನೀಡಬೇಕು.

ಆಯ್ಲಿ ಸ್ಕಿನ್‌ ಆಗಲು ಮೂಲಕಾರಣ ಆನುವಂಶಿಕತೆ, ಈ ಕಾರಣ ಸೆಬೆಶಿಯಸ್‌ ಗ್ಲಾಂಡ್ಸ್ ಓವರ್‌ ಆ್ಯಕ್ಟಿವ್‌ ಆಗಿ ಸದಾ ಸೀಬಮ್ ಸ್ರವಿಸುತ್ತಿರುತ್ತದೆ. ಅದುವೇ ಆ್ಯಕ್ನೆಗೆ ನಾಂದಿ.

ಹೈಪರ್‌ ಕೆರಾಟಿನೈಝೇಶನ್‌ & ಬ್ಯಾಕ್ಟೀರಿಯಲ್ ಪ್ರೊಲಿಫಿರೇಶನ್‌, ಯೌವನದ ಕಾರಣ ಟ್ರಿಗರ್‌ ಆಗುವ ಹಾರ್ಮೋನ್ ಚಟುವಟಿಕೆಗಳಿಂದಾಗಿ ಸೀಬಮ್ ಹೆಚ್ಚು ಸ್ರವಿಸಲ್ಪಡುತ್ತದೆ. ಈ ಕಾರಣ ಸ್ಕಿನ್‌ ಹೆಚ್ಚು ಆಯ್ಲಿ & ಶೈನಿ ಅನಿಸುತ್ತದೆ. ಜೊತೆಗೆ ಸ್ವಸ್ಥ ಸೀಬಮ್ ನಿಂದಾಗಿ ಇದರ ಸಂರಚನೆ ಬೇರೆ ಆಗುತ್ತದೆ, ಆ ಕಾರಣ ಇದು ದಪ್ಪಗಾಗಿ, ಇದನ್ನು ಫಾಲಿಕ್‌ನಿಂದ ಹೊರತೆಗೆಯಲು ಕಷ್ಟವಾಗುತ್ತದೆ. ಇದರಿಂದ ಕೊಮೆಡೋಮ್ ಮೂಡಿ, ಅದರಿಂದ ಅಕ್ಕಪಕ್ಕದ ಸ್ಕಿನ್‌ ಪಿಗ್ಮೆಂಟ್‌ ದಟ್ಟವಾಗಿ ಕಾಣಿಸತೊಡಗುತ್ತದೆ.

ಆ್ಯಕ್ನೆಯ ಬ್ಯಾಕ್ಟೀರಿಯಾ ಮೂಡಲು, ಸೀಬಮ್ ನ್ಯೂಟ್ರಿಯೆಂಟ್‌ನ ಕೆಲಸ ಮಾಡುತ್ತದೆ. ಈ ಕಾರಣ ಕೊಮೆಡೋಮ್ ಕೆಂಪು ಮೊಡವೆಗಳಾಗಿ ಬದಲಾಗಿ, ಉರಿ ನೋವು ಹೆಚ್ಚಿಸುತ್ತದೆ.

ಎಷ್ಟೋ ಸಲ ಯೌವನದ ಕಾರಣ ದೊಡ್ಡ ಪೋರ್ಸ್‌, ಬ್ರೇಕ್‌ಔಟ್ಸ್ ಆಗುತ್ತವೆ. ಈ ಕಾರಣ ಇದರಲ್ಲಿ ಹೆಚ್ಚು ಆಯಿಲ್ ಜಿನುಗುತ್ತದೆ. ಇಂಥ ಸ್ಥಿತಿಯಲ್ಲಿ ಪೋರ್ಸ್‌ನ್ನು ಶ್ರಿಂಕ್‌ ಮಾಡಲಾಗದು. ಆದರೆ ಚರ್ಮದ ವಿಶೇಷ ಆರೈಕೆಯಿಂದ ಇದನ್ನು ಎಷ್ಟೋ ಪಟ್ಟು ತಗ್ಗಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ