ಇಂದು ನಗರಗಳಲ್ಲಿ ಅತಿ ವೇಗವಾಗಿ ಹೆಚ್ಚುತ್ತಿರುವ ಸಮಸ್ಯೆ ಎಂದರೆ ಸ್ಮಾಗ್. ಇದು ನಮ್ಮ ಆರೋಗ್ಯದ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಕೊಂಚ ಅಜಾಗರೂಕತೆ ವಹಿಸಿದರೂ ನಮ್ಮ ಚರ್ಮ ಅದರ ದುಷ್ಪ್ರಭಾವಕ್ಕೆ ಒಳಗಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳುವ ಬಗೆ ಹೇಗೆಂದು ತಿಳಿಯಿರಿ :
ಪ್ರಭಾವ
ಸ್ಮಾಗ್‌ನಲ್ಲಿ ಕಾರ್ಬನ್ ಮಾನಾಕ್ಸೈಡ್, ಸಲ್ಛರ್ ಡೈ ಆಕ್ಸೈಡ್, ನೈಟ್ರೋಜಿನ್ ಡೈ ಆಕ್ಸೈಡ್‌ನಂತಹ ಹಾನಿಕಾರಕ ಗ್ಯಾಸ್‌ಗಳಲ್ಲದೆ ಧೂಳು ಮತ್ತು ಹೊಗೆಯ ಮಿಶ್ರಣ ಕೂಡ ಸೇರಿರುತ್ತದೆ. ಹೀಗಾಗಿ ಸ್ಮಾಗ್‌ನ ಸಂಪರ್ಕದಿಂದ ಚರ್ಮದಲ್ಲಿ ನವೆ, ಶುಷ್ಕತೆ, ಮೊಡವೆ, ರಾಶೆಸ್ ಮುಂತಾದ ಸಮಸ್ಯೆಗಳು ತಲೆದೋರುತ್ತವೆ.
ಸ್ಮಾಗ್ ಚರ್ಮದಲ್ಲಿನ ಆಕ್ಸಿಜನ್ ಪ್ರಮಾಣವನ್ನು ಕ್ಷೀಣಗೊಳಿಸುವುದರಿಂದ ಚರ್ಮ ಕಾಂತಿಹೀನವಾಗುತ್ತದೆ. ಇದಲ್ಲದೆ ಚರ್ಮದಲ್ಲಿ ಸುಕ್ಕುಗಳೂ ಕಾಣಿಸಿಕೊಳ್ಳುತ್ತವೆ. ಚರ್ಮದ ಆರೋಗ್ಯವೇ ಸೌಂದರ್ಯದ ಮೂಲ ಸೋಪಾನ. ಆದರೆ ಸ್ಮಾಗ್‌ನ ಕೆಟ್ಟ ಪ್ರಭಾವದಿಂದಾಗಿ ಚರ್ಮ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತದೆ.
ಸ್ಮಾಗ್‌ನಿಂದ ಬಿಡುಗಡೆ
ನಗರದ ಸ್ಕಿನ್ ಕೇರ್ ಸೆಂಟರ್‌ನ ಡರ್ಮಟಾಲಜಿಸ್ಟ್ ಡಾ. ವಿವೇಕ್, ಸ್ಮಾಗ್‌ನಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ತಿಳಿಸುತ್ತಾರೆ.
ನೀವು ಹೊರಗಿನಿಂದ ಬಂದಾಗ ತಪ್ಪದೆ ಒಳ್ಳೆಯ ಫೇಸ್ ವಾಶ್‌ನಿಂದ ಮುಖವನ್ನು ತೊಳೆಯಬೇಕು. ಇದರಿಂದ ಮುಖದ ಮೇಲಿನ ಧೂಳು ಸ್ವಚ್ಛವಾಗುವುದಲ್ಲದೆ, ಚರ್ಮ ಒಣಗುವುದೂ ತಪ್ಪುತ್ತದೆ.
ಒಳ್ಳೆಯ ಕ್ಲೆನ್ಸರ್‌ನಿಂದಲೂ ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಿ. ಇದು ಚರ್ಮದ ಆಳದವರೆಗೆ ಸ್ವಚ್ಛಗೊಳಿಸಿ, ಮಾಲಿನ್ಯದ ಹಾನಿಕಾರಕ ಪ್ರಭಾವದಿಂದ ಮುಕ್ತಗೊಳಿಸುತ್ತದೆ.
ಮುಖವನ್ನು ತೊಳೆದ ನಂತರ ವಿಟಮಿನ್ `ಇ' ಯುಕ್ತವಾದ ಮಾಯಿಶ್ಚರೈಸರ್ ಹಚ್ಚಿರಿ.
ನಿಮ್ಮ ಡಯೆಟ್‌ನಲ್ಲಿ ಆ್ಯಂಟಿ ಆಕ್ಸಿಂಡೆಂಟ್ ಅಂಶ ಇರುವಂತಹ ತಿನಿಸುಗಳನ್ನು ಸೇರಿಸಿಕೊಳ್ಳಿ. ಉದಾ : ಶುಂಠಿ, ಕ್ಯಾರೆಟ್, ಬೀನ್ಸ್, ಟೊಮೇಟೊ, ಡಾರ್ಕ್ ಚಾಕೋಲೇಟ್ ಇತ್ಯಾದಿ. ಇವುಗಳಿಂದ ಚರ್ಮಕ್ಕೆ ಆಂತರಿಕ ಪೋಷಣೆ ದೊರೆತು ಸ್ಮಾಗ್‌ನ ಪ್ರಭಾವ ಕಡಿಮೆಯಾಗುತ್ತದೆ.
ದಿನಕ್ಕೆ 10-12 ಲೋಟ ನೀರು ಕುಡಿಯಿರಿ. ಇದರಿಂದ ಚರ್ಮದಲ್ಲಿನ ಹಾನಿಕಾರಕ ಧೂಳಿನ ಕಣಗಳು ಹೊರಹೋಗಿ ಚರ್ಮದ ಆರೋಗ್ಯ ಉತ್ತಮಗೊಳ್ಳುತ್ತದೆ.
ಬಿಸಿಲಿಗೆ ಹೋಗುವಾಗ 30 SPF ಸನ್‌ಸ್ಕ್ರೀನ್ ಹಚ್ಚಲು ಮರೆಯದಿರಿ. ಇದು ಚರ್ಮವನ್ನು ಬಿಸಿಲಿನ ಪ್ರಭಾವದಿಂದ ರಕ್ಷಿಸುತ್ತದೆ.
ವಿಟಮಿನ್ `ಇ' ಮತ್ತು `ಸಿ' ಚರ್ಮಕ್ಕೆ ಆ್ಯಂಟಿ ಪೊಲ್ಯೂಶನ್ ಇನ್‌ಗ್ರೀಡಿಯೆಂಟ್ಸ್ ನಂತೆ ಕೆಲಸ ಮಾಡುತ್ತವೆ. ಅಲ್ಲದೆ ಇವು ಚರ್ಮದಲ್ಲಿ ಹೊಸ ಸೆಲ್‌ಗಳ ಉತ್ಪತ್ತಿ ಕಾರ್ಯದಲ್ಲೂ ನೆರವಾಗುತ್ತವೆ. ಆದ್ದರಿಂದ ಯಾವುದೇ ಸ್ಕಿನ್ ಕೇರ್ ಪ್ರಾಡಕ್ಟ್ ಕೊಳ್ಳುವಾಗ ಈ ಎರಡು ವಿಟಮಿನ್‌ಗಳು ಇವೆಯೇ ಎಂದು ಪರೀಕ್ಷಿಸಿ.
ಆ್ಯಲೋವೆರಾ ಜೆಲ್‌ನ ಬಳಕೆಯಿಂದಲೂ ಸ್ಮಾಗ್‌ನ ಹಾನಿಕಾರಕ ಪ್ರಭಾವದಿಂದ ಬಿಡುಗಡೆ ಪಡೆಯಬಹುದು.
ನಿಮ್ಮ ಸ್ಕಿನ್ ಟೈಪ್‌ಗೆ ತಕ್ಕಂತೆ ಕಾಲಕಾಲಕ್ಕೆ ಫೇಶಿಯಲ್ ಮಾಡಿಸಿಕೊಳ್ಳಿ. ಇದರಿಂದ ಚರ್ಮದ ಕೊಳೆಯು ದೂರವಾಗುವುದಲ್ಲದೆ, ವಾಯು ಮಾಲಿನ್ಯದಿಂದಾಗಿ ಚರ್ಮದ ಮೇಲೆ ಮೂಡಿರುವ ಬ್ಲ್ಯಾಕ್ ಹೆಡ್ಸ್ ಕೂಡ ನಿವಾರಣೆಯಾಗುತ್ತದೆ ಮತ್ತು ಚರ್ಮದ ಕಾಂತಿ ಹೆಚ್ಚುತ್ತದೆ.
ಟ್ರೀಟ್‌ಮೆಂಟ್
ಮೈಕ್ರೋ ಡರ್ಮಾಬ್ರೇಶನ್ ಟ್ರೀಟ್‌ಮೆಂಟ್ ಇಂದು ಹೆಚ್ಚು ಪ್ರಚಲಿತವಾಗಿದೆ. ಮಾಲಿನ್ಯ ಮತ್ತು ಸ್ಮಾಗ್‌ನಿಂದ ಚರ್ಮದ ಮೇಲ್ಪದರದಲ್ಲಿ ಉಂಟಾಗಿರುವ ಪ್ರಭಾವವನ್ನು ಪಾಲಿಶ್ ಮಾಡುವ ಕಾರ್ಯ ಈ ಟ್ರೀಟ್‌ಮೆಂಟ್‌ನಿಂದ ಆಗುತ್ತದೆ.