ಡ್ರೆಸಿಂಗ್‌ ಟೇಬಲ್ ಮೇಲಿರುತ್ತಿದ್ದ ತನ್ನ ತಾಯಿಯ ಕಡುಕೆಂಪು ಬಣ್ಣದ ಲಿಪ್‌ಸ್ಟಿಕ್‌ ನೇಹಾಳನ್ನು ಸದಾ ಆಕರ್ಷಿಸುತ್ತಿತ್ತು. ಆದರೆ ಅದನ್ನು ಬಳಸಿದರೆ ತನ್ನ ಗೆಳತಿಯರು `ಆಂಟಿ’ ಎಂದು ರೇಗಿಸುವರೆಂದು ಅವಳು ಅದಕ್ಕೆ ಕೈ ಹಾಕುತ್ತಿರಲಿಲ್ಲ. ಆದರೆ ಕಾಲ ಬದಲಾದಂತೆ ಫ್ಯಾಷನ್‌ ಕೂಡ ಬದಲಾಗಿದೆ. ಇಂದು ಡಾರ್ಕ್‌ ಲಿಪ್‌ಸ್ಟಿಕ್‌ ಶೇಡ್‌ಗಳು ಯುವತಿಯರಲ್ಲಿ ಹಾಟ್‌ ಟ್ರೆಂಡ್‌ ಆಗಿವೆ.

ಕಾಸ್ಮೆಟಾಲಜಿಸ್ಟ್ ಅಖಿಲಾ ಹೇಳುತ್ತಾರೆ, “ಡಾರ್ಕ್‌ ಲಿಪ್‌ಸ್ಟಿಕ್‌ ಟ್ರೆಂಡೀ ಲುಕ್‌ ನೀಡುತ್ತದೆ. ಮುಖ್ಯವಾದ  ವಿಷಯವೆಂದರೆ ಡಾರ್ಕ್‌ ಲಿಪ್ಸ್ ಜನರ ಗಮನವನ್ನು ಸೆಳೆಯುತ್ತದೆ. ಆದ್ದರಿಂದ ಡಾರ್ಕ್‌ ಲಿಪ್‌ಸ್ಟಿಕ್‌ ಬಳಸುವಾಗ ಎಚ್ಚರಿಕೆ ವಹಿಸಬೇಕು.

ವಾಸ್ತವಾಗಿ ಮೇಕಪ್‌ಗೆ ಯಾವುದೇ ನಿಯಮಗಳಿಲ್ಲ. ಆದರೆ ಡಾರ್ಕ್‌ ಲಿಪ್‌ಸ್ಟಿಕ್‌ನ ವಿಷಯದಲ್ಲಿ ಕೆಲವು ಅಂಶಗಳನ್ನು ಗಮನಿಸಬೇಕಾಗುತ್ತದೆ.

ಸ್ಕಿನ್‌ ಕಾಂಪ್ಲೆಕ್ಷನ್‌

ಗಮನಿಸಬೇಕಾದ ಮುಖ್ಯ ಅಂಶವೆಂದರೆ ಸ್ಕಿನ್‌ ಟೋನ್‌ ಕಲರ್‌. ಭಾರತದಲ್ಲಿ ಹೆಚ್ಚಿನ ಮಹಿಳೆಯರ ಚರ್ಮ ಗೋಧಿ ಬಣ್ಣದ್ದಾಗಿರುತ್ತದೆ. ಈ ಬಣ್ಣವನ್ನು ವಾರ್ಮ್ ಸ್ಕಿನ್‌ ಟೋನ್‌ ಎಂದು ಹೇಳಲಾಗುತ್ತದೆ. ಇಂತಹ ಸ್ಕಿನ್‌ ಟೋನ್‌ಗೆ ಪ್ಲಮ್ ಮತ್ತು ಬ್ರೌನ್‌ ಕಲರ್‌ನ ಶೇಡ್‌ಗಳು ಹೊಂದಿಕೆಯಾಗುತ್ತವೆ. ಕೂಲ್ ‌ಸ್ಕಿನ್‌ ಟೋನ್‌ಗಾದರೆ ರೆಡ್‌ ಕಲರ್‌ಗೆ ವಿಭಿನ್ನ ಡಾರ್ಕ್‌ ಶೇಡ್‌ಗಳನ್ನು ಆರಿಸಿಕೊಳ್ಳಬಹುದು.

ಟ್ರೆಂಡ್‌ನಲ್ಲಿರುವ ಶೇಡ್ಸ್

ಡಾರ್ಕ್‌ ಲಿಪ್‌ಸ್ಟಿಕ್‌ ಟ್ರೆಂಡ್‌ನಲ್ಲಿ ಇಂದು ಹೊಸ ಬಣ್ಣಗಳು ಹೇರಳವಾಗಿವೆ. ಅಖಿಲಾ ಕೆಲವು ವಿಶೇಷ ಬಣ್ಣಗಳ ಬಗ್ಗೆ ಹೇಳುತ್ತಾರೆ, “ಬ್ಲ್ಯಾಕ್‌ ಕರೆಂಟ್‌, ಬರ್ಗಂಡಿ, ಬ್ಲಡ್‌ ರೆಡ್‌, ರಸ್ಕ್, ಮೆರೂನ್‌ ರೆಡ್‌, ಬ್ಲಾಕ್‌ ಚೆರಿ, ಕ್ರಿಂಸನ್‌ ಮತ್ತು ಪಿಂಕ್‌ ಕಟಿಂಗ್‌ ಏಜ್‌ ಮುಂತಾದ ಶೇಡ್‌ಗಳು ಯೂತ್‌ ಫುಲ್ ಲುಕ್‌ನ ಜೊತೆಗೆ ಟ್ರೆಂಡಿ ಅಂಡ್‌ ಗ್ಲಾಮರಸ್‌ ಲುಕ್‌ ಸಹ ನೀಡುತ್ತವೆ.”

ವಿಧಾನ

ಡಾರ್ಕ್‌ ಶೇಡ್ಸ್ ಲಿಪ್‌ಸ್ಟಿಕ್‌ನ್ನು ಸರಿಯಾದ ರೀತಿಯಲ್ಲಿ ಹಚ್ಚಿದರೆ ಅದು ಎಲ್ಲ ವಯಸ್ಸಿನ ಮಹಿಳೆಯರಿಗೂ ಹೊಂದುತ್ತದೆ. ಅಂತಹ ಟೆಕ್ನಿಕ್‌ ಬಗ್ಗೆ ಅಖಿಲಾ ಹೀಗೆ ಹೇಳುತ್ತಾರೆ :

ಡಾರ್ಕ್‌ ಲಿಪ್‌ಸ್ಟಿಕ್‌ನಿಂದ ಫೇಶಿಯಲ್ ಫೀಚರ್ಸ್ ಎದ್ದು ಕಾಣುತ್ತದೆ. ತುಟಿಗಳು ಹೆಚ್ಚು ಅಗಲವಾಗಿದ್ದರೆ ಲುಕ್‌ ಹಾಳಾಗುತ್ತದೆ. ಆದ್ದರಿಂದ ಅಗಲವಾದ ತುಟಿಗಳಿಗೆ ಮೊದಲು ಬ್ಲ್ಯಾಕ್‌ ಲಿಪ್‌ ಲೈನರ್‌ನಿಂದ ಲಿಪ್‌ ಕಾಂಟೂರಿಂಗ್‌ ಮಾಡಿ. ನಂತರ ಲಿಪ್‌ಸ್ಟಿಕ್‌ ಹಚ್ಚಿ ಚೆನ್ನಾಗಿ ಬ್ಲೆಂಡ್‌ ಮಾಡಿ. ಹಾಗೆಯೇ ತುಟಿಗಳು ತೆಳುವಾಗಿದ್ದರೆ ಲೈನರ್‌ನಿಂದ ಲಿಪ್‌ ಲೈನ್‌ ಮೇಲೆ ಲೈನ್‌ ಡ್ರಾ ಮಾಡಿ ಮತ್ತು ಬ್ರಶ್‌ನಿಂದ ಡಾರ್ಕ್‌ ಶೇಡ್‌ನ್ನು ಹಚ್ಚಿ.

ಮ್ಯಾಟ್‌ ಮತ್ತು ಗ್ಲಾಸೀ ಎರಡೂ ಬಗೆಯ ಲಿಪ್‌ಸ್ಟಿಕ್‌ಗಳಲ್ಲಿ ಡಾರ್ಕ್‌ ಶೇಡ್ಸ್ ದೊರೆಯುತ್ತದೆ. ಈ ಲಿಪ್‌ಸ್ಟಿಕ್‌ಗಳು ಕಿಸ್‌ ಪ್ರೂಫ್‌ ಮತ್ತು ಟ್ರಾನ್ಸ್ ಫರ್‌ ಫ್ರೀ ಆಗಿರುತ್ತವೆ. ಮ್ಯಾಟ್‌ ಲಿಪ್‌ಸ್ಟಿಕ್‌ ಬಳಸುವಾಗ ಮೊದಲು ತುಟಿಗಳಿಗೆ ಕಂಡೀಶನಿಂಗ್‌ ಮಾಡಿ.

ಒಡೆದ ತುಟಿಗಳಿಗೆ ಡಾರ್ಕ್‌ ಲಿಪ್‌ಸ್ಟಿಕ್‌ ಹಚ್ಚಬೇಡಿ. ಏಕೆಂದರೆ ತುಟಿಯ ಚರ್ಮ ಕಿತ್ತು ಬರುವಾಗ ಲಿಪ್‌ಸ್ಟಿಕ್‌ ಸಹ ಹೊರ ಬಂದು ಕೆಟ್ಟದಾದ ಪ್ಯಾಚ್‌ ಕಾಣಿಸುತ್ತದೆ.

ಒಡೆದ ತುಟಿಗಳಿಗೆ ಟೂತ್‌ ಬ್ರಶ್‌ ಮೇಲೆ ಪೆಟ್ರೋಲಿಯಂ ಜೆಲ್ಲಿ ಸವರಿ ಮಸಾಜ್‌ ಮಾಡಿ. ನಂತರ ಲಿಪ್‌ಸ್ಟಿಕ್‌ ಹಚ್ಚಿ.

ಪ್ರತಿದಿನ ತುಟಿಗಳಿಗೆ ತುಪ್ಪ ಮತ್ತು ಸಕ್ಕರೆಯಿಂದ ಮಸಾಜ್‌ ಮಾಡಿದರೆ ತುಟಿಗಳ ಕಪ್ಪು ಬಣ್ಣ ದೂರವಾಗುತ್ತದೆ ಮತ್ತು ಬ್ಲಡ್ ಸರ್ಕ್ಯುಲೇಶನ್‌ ಕೂಡ ಚೆನ್ನಾಗಿರುತ್ತದೆ.

ಯಾವ ಬಣ್ಣ ಯಾವ ಸಮಯಕ್ಕೆ

ಸ್ಕಿನ್‌ ಟೋನ್‌ಗೆ ಅನುಗುಣವಾಗಿ ಡಾರ್ಕ್‌ ಶೇಡ್‌ ಆರಿಸುವುದರೊಂದಿಗೆ ಯಾವ ಬಣ್ಣವನ್ನು ಯಾವಾಗ ಹಚ್ಚಬೇಕೆಂಬುದನ್ನು ಯೋಚಿಸಬೇಕು. ಇದರ ಬಗ್ಗೆ ಅಖಿಲಾ ಹೀಗೆ ಹೇಳುತ್ತಾರೆ, “ಡಾರ್ಕ್‌ ಲಿಪ್‌ಸ್ಟಿಕ್‌ನಲ್ಲಿಯೂ ನ್ಯೂಡ್‌ ಮತ್ತು ಪೇಸ್ಟಲ್ ಶೇಡ್ಸ್ ಸೇರಿಸಲಾಗಿದೆ. ಆದ್ದರಿಂದ ರೆಡ್‌ ಮತ್ತು ಬ್ರೌನ್‌ ಶೇಡ್ಸ್ ಸಾಯಂಕಾಲದ ಕನ್ಸೀಲಿಂಗ್‌ ಲೈಟ್ಸ್ ನಲ್ಲಿ ಚೆನ್ನಾಗಿ ಕಂಡರೆ, ಪಿಂಕ್‌ ಮತ್ತು ಬರ್ಗಂಡೀ ಮಧ್ಯಾಹ್ನದ ಸಮಯದಲ್ಲಿ ಸಾಫ್ಟ್ ಲುಕ್‌ ನೀಡುತ್ತವೆ.”

ನಿಯಾನ್‌ ಕಲರ್ಸ್ ಕೂಡ ಇಂದು ಟ್ರೆಂಡ್‌ನಲ್ಲಿವೆ. ಇವು ಸಾಫ್ಟ್ ಕಲರ್ಸ್ ಆಗಿದ್ದರೂ ಇವುಗಳ ರಿಫ್ಲೆಕ್ಷನ್‌ ಡಾರ್ಕ್‌ ಆಗಿರುತ್ತದೆ. ಈ ಶೇಡ್ಸ್ ನ ಲಿಪ್‌ಸ್ಟಿಕ್‌ನ್ನು ಮಧ್ಯಾಹ್ನದ ಸಮಯದಲ್ಲಿ ಬಳಸಬಹುದು.

ಮೇಕಪ್‌ ಬ್ಯಾಲೆನ್ಸಿಂಗ್‌

ಡಾರ್ಕ್‌ ಲಿಪ್‌ಸ್ಟಿಕ್‌ ಜೊತೆಗೆ ಮೇಕಪ್‌ನ್ನು ಬ್ಯಾಲೆನ್ಸ್ ಮಾಡಲಾಗುತ್ತದೆ. ತುಟಿಗಳು ಡಾರ್ಕ್‌ ಆಗಿದ್ದಾಗ ಫೇಶಿಯಲ್ ಮೇಕಪ್ ಸಾಫ್ಟ್ ಆಗಿರಬೇಕು. ಮುಖ್ಯವಾಗಿ ಕಣ್ಣುಗಳ ಮೇಕಪ್‌ ಹೆವಿ ಆಗಿರಬಾರದು. ಡಾರ್ಕ್‌ ಶೇಡ್ಸ್ ನಿಂದ ಫೇಶಿಯಲ್ ಫೀಚರ್ಸ್ ಎದ್ದು ತೋರುವುದರಿಂದ ಕಾಂಟೂರಿಂಗ್‌ ಚೆನ್ನಾಗಿರಬೇಕು. ತುಟಿಗಳಿಗೆ ಡಾರ್ಕ್‌ ಶೇಡ್‌ ಮತ್ತು ಕಣ್ಣುಗಳಿಗೆ ಹೆವಿ ಮೇಕಪ್‌ ಇದ್ದರೆ ಗಾಢ ಲುಕ್‌ ಬರುತ್ತದೆ. ಜೊತೆಗೆ ಇತರೆ ಫೀಚರ್ಸ್ ಮರೆಯಾಗುತ್ತವೆ. ಆದ್ದರಿಂದ ಡಾರ್ಕ್‌ ಲಿಪ್‌ಸ್ಟಿಕ್‌ ಹಚ್ಚಿದಾಗ ಕಣ್ಣಿನ ಮೇಕಪ್‌ಸರಳವಾಗಿರಲಿ ಮತ್ತು ಮುಖದ ಕಾಂಟೂರಿಂಗ್‌ ಸರಿಯಾಗಿರಲಿ. ಆಗ ಡಾರ್ಕ್‌ ಲಿಪ್ಸ್ ಮತ್ತಷ್ಟು ಆಕರ್ಷಕವಾಗಿ ಕಾಣುತ್ತವೆ.

– ಜಿ. ಅನುರಾಧಾ

ಈ ಎಕ್ಸ್ ಪೆರಿಮೆಂಟ್‌ನ್ನು ಪ್ರಯತ್ನಿಸಿ

ತುಟಿಗಳ ಔಟರ್‌ ಪಾರ್ಟ್ಸ್ ಗೆ ಡಾರ್ಕ್‌ ಲಿಪ್‌ಸ್ಟಿಕ್‌ ಹಚ್ಚಿ ಮತ್ತು ಪೌಟ್‌ ಏರಿಯಾದಲ್ಲಿ ಅದೇ ಬಣ್ಣದ ಲೈಟ್‌ ಶೇಡ್‌ ಹಚ್ಚಿ. ನಂತರ ಚೆನ್ನಾಗಿ ಬ್ಲೆಂಡ್‌ ಮಾಡಿ.

ಡಾರ್ಕ್‌ ಮ್ಯಾಟ್‌ ಶೇಡ್‌ನ್ನು ತುಟಿಗಳಿಗೆ ಹಚ್ಚಿ. ಅದೇ ಕಲರ್‌ನ ಗ್ಲಿಟರ್‌ನ್ನು ಪೌಟ್‌ ಏರಿಯಾಗೆ ಹಚ್ಚಿ.

ಅಪರ್‌ ಲಿಪ್‌ಗೆ ಡಾರ್ಕ್‌ ಶೇಡ್‌ ಮತ್ತು ಲೋವರ್‌ ಲಿಪ್‌ಗೆ ಲೈಟ್‌ ಶೇಡ್‌ ಕೂಡ ಇಂದಿನ ಟ್ರೆಂಡ್‌ ಆಗಿದೆ.

ತುಟಿ ಮತ್ತು ಕಣ್ಣುಗಳ ಮೇಕಪ್‌ನ್ನು ಮ್ಯಾಚ್‌ ಮಾಡಲು ತುಟಿಗೆ ಹಚ್ಚಿರುವ ಲಿಪ್‌ಸ್ಟಿಕ್‌ ಬಣ್ಣದ ಶೇಡ್ಸ್ ಗ್ಲಿಟರ್‌ ಐ ಲೈನರ್‌ ಹಚ್ಚಿ. ಬ್ಲ್ಯಾಕ್‌ ಐ ಲೈನರ್‌ನೊಂದಿಗೆ ಗ್ಲಿಟರ್‌ ಔಟ್‌ ಲೈನ್‌ನಂತೆಯೂ ಹಚ್ಚಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ