ನಿಮಗೆ ಗೊತ್ತೇ? ಕರೀನಾ ಕಪೂರ್ ತನ್ನ ಮದುವೆಯಲ್ಲಿ ಅತ್ತೆ ಶರ್ಮಿಳಾ ಟ್ಯಾಗೋರ್‌ಳ ಅದೇ ಶರಾರಾ ಧರಿಸಿ, ವಿವಾಹದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಟೌಡಿ ಪರಿವಾರದ ಅಚ್ಚುಮೆಚ್ಚಿನ ಸೊಸೆ ಆದಳು. ಬಾಲಿವುಡ್‌ನ ಈ ಹೊಸ ಟ್ರೆಂಡ್ ಅನುಸರಿಸುತ್ತಾ ಇಂದಿನ ಯುವತಿಯರು ತಮ್ಮ ಹಳೆಯ ಸೀರೆಗಳು ಹಾಗೂ ಲಹಂಗಾಗಳನ್ನು ರೀಸೈಕಲ್ ಮಾಡಿ ಅವಕ್ಕೆ ಹೊಸ ರೂಪ ನೀಡಿ, ಅವನ್ನು ಧರಿಸಿ ಪ್ರದರ್ಶಿಸುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಇದರಿಂದ ಭಾವನಾತ್ಮಕ ನಂಟು ಉಳಿಯುತ್ತದೆ. ಜೊತೆಗೆ ಹಳೆಯ ಫ್ಯಾಷನ್ ಸಹ ಅಕ್ಷರಶಃ ವಾಪಸ್ ಮರಳಿರುತ್ತದೆ. ಫ್ಯಾಷನ್ ಡಿಸೈನರ್‌ಗಳ ಪ್ರಕಾರ ತಾಯಿ, ಅಜ್ಜಿ ಅಥವಾ ಅತ್ತೆಯವರ ಲಹಂಗಾ, ರೇಷ್ಮೆ ಸೀರೆಯನ್ನು ಮಾಡಿಫೈ ಮಾಡಿ ಮುಹೂರ್ತದ ದಿನ ಉಡುವ ಕ್ರಮ ಹೆಚ್ಚು ಜನಪ್ರಿಯವಾಗುತ್ತಿದೆ.
ಬಾಲ್ಯದಿಂದಲೂ ನಿಮಗೆ ಅಮ್ಮ, ಅಜ್ಜಿಯರ ಸೀರೆ ಉಡುವ ಅಭ್ಯಾಸವಂತೂ ಇದ್ದೇ ಇರುತ್ತದೆ. ಅದರಲ್ಲೂ ಮೈಸೂರು ಸಿಲ್ಕ್, ಕಾಂಜೀವರಂ, ಬನಾರಸ್ ರೇಷ್ಮೆ ಸೀರೆಗಳನ್ನು ಉಟ್ಟು ಮೆರೆಯಲು ಯಾರಿಗೆ ತಾನೇ ಇಷ್ಟಾವಾಗದು? ಹೀಗಿರುವಾಗ ಮದುವೆಯ ದಿನ ಇಂಥದೇ ಹಳೆಯ ಸೀರೆ, ಲಹಂಗಾಗಳನ್ನು ಮಾಡಿಫೈ ಮಾಡಿ ಏಕೆ ಉಡಬಾರದು? ಹಳೆಯ ಸೀರೆಗೆ ಹೊಸ ಲುಕ್ಸ್ ಬಂದಿರುವುದರಿಂದ, ಜೊತೆಗೆ ಸಂಬಂಧದ ಭಾವನಾತ್ಮಕ ಜೋಡಣೆಯೂ ಹೆಚ್ಚು ಬಲಗೊಳ್ಳುವುದರಿಂದ ಇದು ಸ್ವಾಗತಾರ್ಹ ಕ್ರಮ.
ಸೀರೆ ಲಹಂಗಾ ರೀ ಡಿಸೈನಿಂಗ್
ಇಂದಿನ ಆಧುನಿಕ ಫ್ಯಾಷನ್ ಡಿಸೈನರ್‌ಗಳ ಪ್ರಕಾರ, ಯುವತಿಯರು ಇಂಥ ಹಳೆಯ ಲಹಂಗಾ, ಸೀರೆಗಳನ್ನೇ ಮತ್ತೆ ಹೊಸದಾಗಿ ರೀಡಿಸೈನ್ ಮಾಡಿಸುತ್ತಿದ್ದಾರಂತೆ. ಫ್ಯಾಬ್ರಿಕ್ ದೃಷ್ಟಿಯಿಂದ ನೋಡಿದರೆ ಬ್ರೊಕೆಡ್ ಟಿಶ್ಯು, ಚಂದೇರಿ, ಶಿಫಾನ್, ಜಾರ್ಜೆಟ್‌ನ ಲಹಂಗಾಗಳ ಮೇಲೆ ಅತ್ಯುತ್ತಮ ಡಿಸೈನಿಂಗ್, ಬ್ಯೂಟಿಫುಲ್ ಕಸೂತಿ, ಮಿರರ್ ವರ್ಕ್ ಇತ್ಯಾದಿ ಮಾಡಿಸಬಹುದು. ಇವುಗಳ ಮೇಲೆ ಗೋಟಾ ಲೇಸ್, ಚಿನ್ನ, ಬೆಳ್ಳಿ, ಕಲರ್ಡ್ ಸ್ಟೋನ್ಸ್ ಇತ್ಯಾದಿಗಳ ಬ್ಯೂಟಿಫುಲ್ ಲುಕ್ಸ್ ಒದಗಿಸಬಹುದು.
ಈ ಕೆಳಗಿನ ಸಲಹೆಗಳನ್ನು ಅನುಸರಿಸಿ, ನೀವು ಸಹ ನಿಮ್ಮ ಅಮ್ಮ, ಅಜ್ಜಿ, ಅತ್ತೆಯರ ಹಳೆಯ ರೇಷ್ಮೆ ಸೀರೆ, ಲಹಂಗಾಗಳಿಗೆ ಹೊಸ ರೂಪ ನೀಡಬಹುದು :
ಲಹಂಗಾದ ಬಾರ್ಡರ್ ಚೇಂಜ್ ಮಾಡಿ ಅದಕ್ಕೆ ಹೊಸ ಲುಕ್ಸ್ ಕೊಡಬಹುದು. ಅಂದರೆ ಮ್ಯಾಚಿಂಗ್ ಚೋಲಿ ಬದಲು ಪೋಂಚು, ಶರ್ಟ್ ಯಾ ಕಾಂಟ್ರಾಸ್ಟ್ ಕಲರ್ ಟ್ರೈ ಮಾಡಿ. ಇದರಿಂದ ಈಝಿ ಲುಕ್ಸ್ ಸಿಗುತ್ತದೆ.
ಕಾಂಜೀವರಂ ಅಥವಾ ಬನಾರಸ್ ಸೀರೆಯಿಂದ ಬ್ಯೂಟಿಫುಲ್ ಅನಾರ್ಕಲಿ ಮಾಡಿಸಬಹುದು. ಇದರಿಂದ ನಿಮ್ಮ ಸೀರೆಗೆ ಹೊಸ ಲುಕ್ ದೊರೆಯುವುದಲ್ಲದೆ, ಅದನ್ನು ಧರಿಸುವುದು ಸುಲಭ ಆಗುತ್ತದೆ.
ನೀವು ಇಂಥ ಭಾರಿ ಹಳೆ ಪ್ಲೇನ್ ರೇಷ್ಮೆ ಸೀರೆಯಿಂದ ಗೌನ್ ಕೂಡ ಮಾಡಿಸಬಹುದು. ಇಂಥವು ಆರತಕ್ಷತೆ, ಈವ್ನಿಂಗ್ ಎಂಗೇಜ್‌ಮೆಂಟ್‌ಗಳಿಗೆ ಹೆಚ್ಚು ಒಪ್ಪುತ್ತವೆ.
ಸೀರೆಯ ಬಾರ್ಡರ್ ಸವೆದಿದ್ದರೆ, ಹರಿದಿದ್ದರೆ ಅದಕ್ಕೆ ಹೊಸ ಬಾರ್ಡರ್ ಹೊಲಿಸಿಬಿಡಿ. ಪ್ರತಿಯೊಂದು ನಗರದ ಪ್ರಮುಖ ಪೇಟೆ ಬೀದಿಗಳು ಈಗ ಇದಕ್ಕಾಗಿಯೇ ಸಿದ್ಧಗೊಂಡಿವೆ. ಇಂಥ ಕಡೆ ಎಲ್ಲಾ ಬಗೆಯ ಸ್ಟೈಲಿಶ್ ಬಾರ್ಡರ್‌ಗಳೂ ಸಿಗುತ್ತವೆ. ಬಾರ್ಡರ್ ಚೇಂಜ್ ಆದನಂತರ ಸೀರೆಯ ಗೆಟಪ್ ಬಿಲ್‌ಕುಲ್ ಬದಲಾಗುತ್ತದೆ, ಹೊಚ್ಚ ಹೊಸದರಂತೆ ಕಾಣಿಸುತ್ತದೆ. ಇಂಥ ಸೀರೆ ಈಗಿನ ಹೊಸ ಮಳಿಗೆಗಳಲ್ಲಿ ಖಂಡಿತಾ ಸಿಗಲಾರವು. ಅಕಸ್ಮಾತ್ ಸೀರೆಯ ನಡು ಭಾಗ ತುಸು ಹರಿದಿದ್ದರೆ, ಆ ಭಾಗಕ್ಕೆ ನೀವು ಕಾಂಟ್ರಾಸ್ಟ್ ಬಣ್ಣದ ಜಾರ್ಜೆಟ್ ಯಾ ಶಿಫಾನ್ ಫ್ಯಾಬ್ರಿಕ್ ಹಾಕಿಸಬಹುದು. ಇದರಿಂದ ನಿಮ್ಮ ಸೀರೆ ಡಿಸೈನರ್ ಆಗುತ್ತದೆ.
ಎಕ್ಸ್ ಪೆರಿಮೆಂಟ್ ಮಾಡಿ : ಮದುವೆ ಸಂದರ್ಭದಲ್ಲಿ ನೀವು ಅಮ್ಮನ ಲಹಂಗಾವನ್ನು ಕ್ರಾಪ್ ಟಾಪ್ ಯಾ ಕೋರ್ಸೆಟ್ ಜೊತೆ ಧರಿಸಿ ಇಂಡೋ ವೆಸ್ಟರ್ನ್ ಲುಕ್ ಪಡೆಯಬಹುದು. ಅಗತ್ಯವೆನಿಸಿದರೆ ನೀವು ಈ ಲಹಂಗಾವನ್ನು ಶಿಯರ್ ಜ್ಯಾಕೆಟ್ ಜೊತೆಯಲ್ಲೂ ಧರಿಸಬಹುದು. ಇದರಿಂದ ಲಹಂಗಾಗೆ ಹೊಸ ಲುಕ್ ಸಿಗುತ್ತದೆ.
ಲಹಂಗಾ ಆಗಲಿದೆ ಅನಾರ್ಕಲಿ : ನಿಮ್ಮ ಹಳೆಯ ಲಹಂಗಾ ಯಾ ಚೋಲಿಯಿಂದ ಅನಾರ್ಕಲಿ ಮಾಡಿಸಬಹುದು. ಇದಕ್ಕಾಗಿ ನಿಮ್ಮಿಷ್ಟದ ಫ್ಯಾಬ್ರಿಕ್‌ನ್ನು ಲಹಂಗಾದ ಫ್ರಿಲ್ಸ್ ಜೊತೆ ಹೊಲಿಸಿರಿ. ಇದೇ ತರಹ ನಿಮ್ಮ ಬಳಿ ಯಾವುದಾದರೂ ಹಳೆಯ ಸ್ಟೈಲಿಶ್ ಚೋಲಿ ಇದ್ದರೆ, ನೀವು ಅದರ ಜೊತೆ ನಿಮ್ಮದೇ ಆಯ್ಕೆಯ ಫ್ಯಾಬ್ರಿಕ್ ಜೋಡಿಸಿ ಅನಾರ್ಕಲಿ ಸಿದ್ಧ ಮಾಡಿಸಬಹುದು.
ಬನಾರಸ್ ಸೀರೆಯ ಹೆವಿ ದುಪಟ್ಟಾ : ನೀವು ಹಳೆಯ ಬನಾರಸ್ ಸೀರೆಯ ಹೆವಿ ದುಪಟ್ಟಾವನ್ನೂ ಸಹ ಹೊಸ ಟಚ್ ಕೊಟ್ಟು ರೆಡಿ ಮಾಡಿಸಬಹುದು. ಇದನ್ನು ಪ್ಲೇನ್ ಸ್ಕರ್ಟ್ ಅಥವಾ ಸಲ್ವಾರ್ ಸೂಟ್ ಜೊತೆ ಧರಿಸಬಹುದು. ಹೀಗೆ ಮಾಡುವುದರಿಂದ ನಿಮ್ಮ ಹಣ ಉಳಿಯುತ್ತದೆ, ಹೊಸದಾದ ಎಕ್ಸ್ ಕ್ಲೂಸಿವ್ ಲುಕ್ಸ್ ಸಹ ಸಿಗುತ್ತದೆ. ಈ ದುಪಟ್ಟಾ ಸ್ಟ್ರೇಟ್ ಫಿಟ್‌ನ ಸಲ್ವಾರ್ ಸೂಟ್, ಅನಾರ್ಕಲಿ, ಪಟಿಯಾಲಾ ಸಲ್ವಾರ್ ಕಮೀಜ್ ಇತ್ಯಾದಿಗಳ ಜೊತೆ ಚೆನ್ನಾಗಿ ಹೊಂದುತ್ತದೆ.
ಲೇಟೆಸ್ಚ್ ಕಲರ್ ಇನ್ ಟ್ರೆಂಡ್ : ಕೆಂಪು ಬಣ್ಣ ಇದೀಗ ಔಟ್ ಆಫ್ ಟ್ರೆಂಡ್ ಆಗಿದೆ. ಆದರೆ ಕೆಂಪು ಬಣ್ಣ ಎಲ್ಲದರಲ್ಲೂ ಇರಲೇಬೇಕು ಎಂಬ ನಿಯಮವೇನಿಲ್ಲ. ಇದೀಗ ಹುಡುಗಿಯರು ಹೊಸ ಹೊಸ ಬಣ್ಣಗಳನ್ನು ಆರಿಸುತ್ತಾರೆ. ಇಂದಿನ ನವ ವಧು ಪೇಸ್ಟಲ್ ಬಣ್ಣಗಳು ಅಂದರೆ ತೆಳು ಗುಲಾಬಿ, ಸೀ ಗ್ರೀನ್, ಕ್ರೀಂ ಬಣ್ಣ, ಗಾಢ ಕಿತ್ತಳೆ ಬಣ್ಣ ಇತ್ಯಾದಿಗಳನ್ನು ಹೆಚ್ಚು ಆತ್ಮವಿಶ್ವಾಸದಿಂದ ಆರಿಸುತ್ತಾಳೆ.
ಲೈಟ್ ವೆಲ್ವೆಟ್ ನೆಟ್ ಲಹಂಗಾ : ಭಾರಿ ಭಾರಿ ಲಹಂಗಾಗಳ ಬದಲಿಗೆ ಇದೀಗ ಲೈಟ್ ವೆಲ್ವೆಟ್ ನೆಟ್ ಮತ್ತು ವೆಲ್ವೆಟ್ ಲಹಂಗಾಗಳು ಹೆಚ್ಚು ಜನಪ್ರಿಯಾಗುತ್ತಿವೆ. ಇವು ಡಾರ್ಕ್ ಲೈಟ್ ಎರಡೂ ಕಲರ್ ಕಾಂಬಿನೇಶನ್‌ನಲ್ಲಿ ಲಭ್ಯ. ಲೈಟ್ ಪಿಂಕ್, ಪರ್ಪಲ್, ಕ್ರೀಂ ರಿಚ್ ಯೆಲ್ಲೋ, ಬ್ಲೂ, ಗ್ರೀನ್, ಮೆರೂನ್, ಮೆಜೆಂತಾ ಇತ್ಯಾದಿಗಳೆಲ್ಲ ನೆಟ್ ಕಾಂಬಿನೇಶನ್‌ನಲ್ಲಿ ಲಹಂಗಾಗಳು ಆಕರ್ಷಣೆಯ ಕೇಂದ್ರಬಿಂದು ಆಗಿವೆ. ಸ್ಟೈಲಿಶ್ ಲುಕ್ ಡಿಸೈನರ್ ಆದಕಾರಣ ಇವು ಹೆಚ್ಚು ಬ್ಯೂಟಿಫುಲ್ ಆಗಿವೆ.
– ಲಲಿತಾ ಗೋಪಾಲ್