ತಮ್ಮ ವಯಸ್ಸಿಗಿಂತ ಕಿರಿಯವರಾಗಿ ಕಾಣಿಸಬೇಕೆಂದು ಯಾವ ಮಹಿಳೆಗೆ ತಾನೇ ಇಷ್ಟವಿಲ್ಲ? ಪ್ರೌಢಾವಸ್ಥೆ ತಲುಪಿದ ಮಹಿಳೆಯರು ತಮ್ಮ ವಯಸ್ಸನ್ನು ತಗ್ಗಿರುವಂತೆ ತೋರಿಸಲು ಎಂಥ ಪ್ರಯತ್ನಕ್ಕೂ ರೆಡಿ!

ಹೀಗಾಗಿಯೇ ಕಾಸ್ಮೆಟಿಕ್‌ ಇಂಡಸ್ಟ್ರಿ ವಯಸ್ಸನ್ನು ತಗ್ಗಿಸುವ ಹಲವಾರು ಬಗೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಉತ್ಪನ್ನಗಳು ಮುಖದಲ್ಲಿ ಮೂಡಿರುವ ಗೆರೆಗಳನ್ನು ಮರೆಯಾಗಿಸಲು ಮಹಿಳೆಯರಿಗೆ ಹೆಚ್ಚು ನೆರವಾಗುತ್ತವೆ. ಆದರೆ ಈ ಉತ್ಪನ್ನಗಳನ್ನು ಬಳಸುವ ಮೊದಲು ಮಹಿಳೆಯರು ಇವುಗಳ ಸಮರ್ಪಕ ಬಳಕೆಯ ಬಗ್ಗೆ ಹೆಚ್ಚು ತಿಳಿದುಕೊಂಡಿರುವುದು ಲೇಸು, ಇಲ್ಲದಿದ್ದರೆ ಇವು ಚರ್ಮದ ಮೇಲೆ ವಿರುದ್ಧ ಪರಿಣಾಮ ಬೀರಬಹುದು. ಈ ಕುರಿತು ಕಾಸ್ಮೆಟಾಲಜಿಸ್ಟ್ ತಜ್ಞರು ಏನು ಹೇಳುತ್ತಾರೆ? ಕಾಸ್ಮೆಟಿಕ್‌ ಪ್ರಾಡಕ್ಟ್ಸ್ ಇರುವುದೇ ಬ್ಯೂಟಿ ಹೆಚ್ಚಿಸಲು. ಇದರಿಂದ ಮುಖದಲ್ಲಿನ ಕುಂದುಕೊರತೆಗಳನ್ನು ನಿವಾರಿಸಬಹುದು. ಆದರೆ ಆ ಕೊರತೆಗಳೇನು ಎಂಬುದು ಸ್ಪಷ್ಟ ಗೊತ್ತಿರಬೇಕು. ಯಾವ ಉತ್ಪನ್ನ ಬಳಸಿ ಅವನ್ನು ಸರಿಪಡಿಸಬೇಕು ಎಂಬುದೂ ಗೊತ್ತಿರಬೇಕು. ಇಲ್ಲದಿದ್ದರೆ ವಯಸ್ಸು ಕಡಿಮೆ ಕಾಣಿಸುವ ಬದಲು ಹೆಚ್ಚಾಗಿ ಕಂಡು ಆಭಾಸವಾದೀತು.

ಮೇಕಪ್ಗಾಗಿ ಚರ್ಮವನ್ನು ಸಿದ್ಧಗೊಳಿಸಿ

ಚರ್ಮದ ಮೇಲೆ ಯಾವುದೇ ಕಾಸ್ಮೆಟಿಕ್‌ ಉತ್ಪನ್ನ ಹಚ್ಚುವ ಮೊದಲು ಅದು ಯಾವ ಬಗೆಯದು ಎಂದು ತಿಳಿದಿರಬೇಕಾದುದು ಅತ್ಯಗತ್ಯ. ಏಕೆಂದರೆ ಚರ್ಮಕ್ಕೆ ಅನುಸಾರವಾಗಿ ಮೇಕಪ್‌ ಪ್ರಾಡಕ್ಟ್ಸ್ ಆರಿಸಿಕೊಂಡಾಗ ಮಾತ್ರ ನಿಮಗೆ ಪರ್ಫೆಕ್ಟ್ ಲುಕ್ಸ್ ಸಿಗಲು ಸಾಧ್ಯ. ಮಾರುಕಟ್ಟೆಯಲ್ಲಿ ನಿಮಗೆ ಡ್ರೈ, ಆಯ್ಲಿ ಹಾಗೂ ಮಿಶ್ರ ಚರ್ಮಕ್ಕಾಗಿ ವಿಭಿನ್ನ ಬಗೆಯ ಕಾಸ್ಮೆಟಿಕ್‌ ಉತ್ಪನ್ನಗಳು ಲಭ್ಯ. ಹೀಗೆ ಸರಿಯಾದ ಆಯ್ಕೆ ಮಾಡಿಕೊಂಡ ನಂತರವೇ ಚರ್ಮವನ್ನು ಮೇಕಪ್‌ಗೆ ಸಿದ್ಧಗೊಳಿಸಬೇಕು. ಚರ್ಮವನ್ನು ಸ್ವಚ್ಛಗೊಳಿಸದೆಯೇ ಮೇಕಪ್‌ ಶುರು ಮಾಡಿದರೆ, ಕೊಳೆ ಸ್ಕಿನ್‌ ಪೋರ್ಸ್‌ ಒಳಗೇ ಇದ್ದುಬಿಡುತ್ತದೆ, ಮೇಕಪ್‌ ಲೇಯರ್‌ಗಳು ಪೋರ್ಸ್‌ನ್ನು ಕ್ಲೋಸ್‌ ಮಾಡಿಬಿಡುತ್ತವೆ. ಇದರಿಂದ ಸೋಂಕಿನ ಭೀತಿ ತಪ್ಪಿದ್ದಲ್ಲ. ಆದ್ದರಿಂದ ಮೇಕಪ್‌ಗೆ ಮೊದಲು ಚರ್ಮದ ಕ್ಲೀನಿಂಗ್‌, ಟೋನಿಂಗ್‌, ಮಾಯಿಶ್ಚರೈಸಿಂಗ್‌ ಇತ್ಯಾದಿಗಳು ಕ್ರಮಬದ್ಧವಾಗಿ ನಡೆಯಬೇಕು. ಇದರಿಂದ ಮೇಕಪ್‌ನ ಸ್ಮೂತ್‌ನೆಸ್‌ ಹೆಚ್ಚುತ್ತದೆ.

ಕನ್ಸೀಲರ್ಬಳಕೆ ತಪ್ಪಿಸಿ

ಸಾಮಾನ್ಯವಾಗಿ ಕನ್ಸೀಲರ್‌ನ್ನು ಮುಖದಲ್ಲಿನ ಕಪ್ಪು ಕಲೆಗಳನ್ನು ಮರೆಮಾಚಲು ಬಳಸುತ್ತಾರೆ. ಮುಖದಲ್ಲಿ ಕಂಡು ಬರುವ ಕಪ್ಪು ಉಂಗುರ, ಕಪ್ಪು ಕಲೆಗಳಿರುವ ಭಾಗಕ್ಕೆ ಮಾತ್ರ ಇದನ್ನು ಸವರಲಾಗುತ್ತದೆ. ಆದರೆ ಕೆಲವು ಮಹಿಳೆಯರು ಮುಖಕ್ಕೆ ಹೆಚ್ಚಿನ ಲಾಭ ಸಿಗಲಿ ಎಂಬ ದುರಾಸೆಯಲ್ಲಿ ಇಡೀ ಮುಖಕ್ಕೆ ಇದನ್ನು ಹಚ್ಚುತ್ತಾರೆ. ಆದರೆ ಹೀಗೆ ಮಾಡುವುದರಿಂದ ಮುಖದಲ್ಲಿನ ಸುಕ್ಕುಗಳು ಎದ್ದು ಕಾಣಿಸುತ್ತವೆ. ತಜ್ಞೆಯರ ಪ್ರಕಾರ, ಕನ್ಸೀಲರ್‌ ಥಿಕ್‌ ಆಗಿರುವುದರಿಂದ, ಅದನ್ನು ಸ್ವಲ್ಪ ಹಚ್ಚಿದರೆ ಸಾಕು. ಶೀಘ್ರ ಪರಿಣಾಮ ತೋರುತ್ತದೆ. ಹೆಚ್ಚು ಬಳಿಯುವುದರಿಂದ ಇದು ಮುಖದಲ್ಲಿ ವಕ್ರ ಗೆರೆಗಳನ್ನು ತೋರಬಹುದು. ಕೆಲವು ಮಹಿಳೆಯರು ಕಪ್ಪು ಗೆರೆಗಳನ್ನು ಅಡಗಿಸಲು ಸಹ ಕನ್ಸೀಲರ್‌ ಬಳಸುತ್ತಾರೆ. ಆದರೆ ಇದು ತಪ್ಪು. ಕಂಗಳ ಕೆಳಗೆ ಕನ್ಸೀಲರನ್ನು ಸದಾ ಇನ್ನರ್‌ ಕಾರ್ನರ್‌ನಲ್ಲಿಯೇ ಬಳಸಬೇಕು. ಹೆಚ್ಚು ಕನ್ಸೀಲರ್‌ ಬಳಸುವುದರಿಂದ ಕಂಗಳು ವಿಭಿನ್ನವಾಗಿ ಹೊಳೆಯಲು ಆರಂಭಿಸುತ್ತವೆ, ಅದರಿಂದಾಗಿ ಕಂಗಳ ಬಳಿ ಕನ್ಸೀಲರ್‌ ಬಳಸಿದ್ದಾರೆಂದು ತಿಳಿಯುತ್ತದೆ.

ಹೆಚ್ಚಿನ ಫೌಂಡೇಶನ್ಬೇಡ

ಎಲ್ಲಕ್ಕೂ ಮೊದಲು ನಿಮ್ಮ ಸ್ಕಿನ್‌ ಟೈಪ್‌ ನೋಡಿಕೊಂಡು ನಿಮಗೊಪ್ಪುವ ಫೌಂಡೇಶನ್‌ ಆರಿಸಿ. ಅಂದರೆ, ನಾರ್ಮಲ್ ಸ್ಕಿನ್‌ವುಳ್ಳವರು ಮಿನರಲ್ ಬೇಸ್ಡ್ ಯಾ ಮಾಯಿಶ್ಚರೈಸರ್‌ಯುಕ್ತ ಫೌಂಡೇಶನ್‌ನ್ನೇ ಬಳಸಬೇಕು. ಅದೇ ಡ್ರೈ ಸ್ಕಿನ್‌ವುಳ್ಳವರು ಹೈಡ್ರೇಟಿಂಗ್‌ ಫೌಂಡೇಶನ್‌ ಬಳಸಬೇಕು. ಫೌಂಡೇಶನ್‌ ಸದಾ ಸೇಮ್ ಸ್ಕಿನ್‌ ಕಲರ್‌ ಟೋನ್‌ದೇ ಆಗಿರಬೇಕು, ಇಲ್ಲದಿದ್ದರೆ ಸ್ಕಿನ್ ಗ್ರೇ ಆಗಿಬಿಡುತ್ತದೆ. ಆಯ್ಲಿ ಸ್ಕಿನ್‌ಗಾಗಿ ಪೌಡರ್‌ ಡಬಲ್ ಫೌಂಡೇಶನ್‌ ಬಳಸಬೇಕು. ಇದು ಚರ್ಮವನ್ನು ಮ್ಯಾಟಿಫೈ ಮಾಡುತ್ತದೆ.

ಸರಿಯಾದ ಕ್ರಮದಲ್ಲಿ ಫೌಂಡೇಶನ್‌ ಆರಿಸಿಕೊಂಡ ನಂತರ ಇದರ ಸಮರ್ಪಕ ಬಳಕೆಯೂ ಅಷ್ಟೇ ಅಗತ್ಯ. ಸಾಮಾನ್ಯವಾಗಿ ಮಹಿಳೆಯರು ಇಡೀ ಮುಖಕ್ಕೆ ಫೌಂಡೇಶನ್‌ ಪದರ ಮೆತ್ತಿಕೊಳ್ಳುತ್ತಾರೆ, ಇದು ತಪ್ಪು. ಫೌಂಡೇಶನ್‌ನ್ನು ಮುಖಕ್ಕೆ ಹಚ್ಚಿಕೊಳ್ಳುವ ಸರಿಯಾದ ಕ್ರಮವೆಂದರೆ, ತುಸು ಮಾತ್ರ ಅದನ್ನು ಬೆರಳಿಗೆ ತೆಗೆದುಕೊಂಡು ಡೆಬ್‌ ಮಾಡುತ್ತಾ ಚೆನ್ನಾಗಿ ಮುಖದ ಮೇಲೆ ಹಚ್ಚಬೇಕು. ಇದು ಚರ್ಮದ ವಯೋಸಹಜ ಡಿಸ್‌ ಕಲರೇಶನ್‌ನ್ನೂ ದೂರ ಮಾಡಬಲ್ಲದು.

ಕಾಂಪ್ಯಾಕ್ಟ್ ನಿಂದ ಫಿನಿಶಿಂಗ್ನೀಡಿ

ಬಹಳಷ್ಟು ಮಹಿಳೆಯರು ಫೌಂಡೇಶನ್‌ ನಂತರ ಕಾಂಪ್ಯಾಕ್ಟ್ ಪೌಡರ್‌ ಹಚ್ಚುವುದಿಲ್ಲ. ಸೌಂದರ್ಯ ತಜ್ಞೆಯರು ಇದನ್ನು ಮೇಕಪ್ ಬ್ಲಂಡರ್‌ ಎನ್ನುತ್ತಾರೆ. ಕಾಂಪ್ಯಾಕ್ಟ್ ಪೌಡರ್‌ ಮೇಕಪ್‌ಗೆ ಫಿನಿಶಿಂಗ್‌ ನೀಡುತ್ತದೆ. ಇದನ್ನು ಸಹ ಎಚ್ಚರಿಕೆಯಿಂದ ಆರಿಸಬೇಕು. ಎಲ್ಲಕ್ಕೂ ಮೊದಲು ಸ್ಕಿನ್‌ ಕಲರ್‌ ಟೋನ್‌ಗೆ ಅನುಸಾರ ಶೇಡ್‌ ಆರಿಸಿ. ನಿಮ್ಮ ಸ್ಕಿನ್‌ ಟೈಪ್‌ ಸಹ ಗಮನದಲ್ಲಿರಲಿ. ಅಂದರೆ, ಆಯ್ಲಿ ಚರ್ಮಕ್ಕಾಗಿ ಆಯಿಲ್ ‌ಕಂಟ್ರೋಲ್ ಮ್ಯಾಟ್‌ ಫಿನಿಶಿಂಗ್‌ನ ಕಾಂಪ್ಯಾಕ್ಟ್ ಪೌಡರ್‌ ಹಾಗೂ ಡ್ರೈ ಸ್ಕಿನ್‌ಗಾಗಿ ಕ್ರೀಮೀ ಕಾಂಪ್ಯಾಕ್ಟ್ ಆರಿಸಿ. ಇದು ಚರ್ಮ ಹೊಳೆಯುವಂತೆ ಮಾಡುತ್ತದೆ. ಸೆನ್ಸಿಟಿವ್ ‌ಸ್ಕಿನ್‌ಗಾಗಿ ಎಮೋಲಿಯೆಂಟ್‌ ಆಯಿಲ್ ‌ವಿತ್‌ ವ್ಯಾಕ್ಸ್ ಯುಕ್ತ ಕಾಂಪ್ಯಾಕ್ಟ್ ಎಲ್ಲಕ್ಕೂ ಉತ್ತಮ ಆಯ್ಕೆ.

ಎಚ್ಚರಿಕೆಯಿಂದ ಮೇಕಪ್ಮಾಡಿ

ಯಂಗ್‌ ಆಗಿ ಕಾಣಿಸಲು ಎಲ್ಲಕ್ಕೂ ಮುಖ್ಯವೆಂದರೆ ಐ ಮೇಕಪ್‌ ಚೆನ್ನಾಗಿರಬೇಕಾದುದು. ಹೆಚ್ಚಿನ ಮಹಿಳೆಯರ ಭ್ರಮೆ ಎಂದರೆ, ಕಂಗಳಿಗೆ ಡಾರ್ಕ್‌ ಮೇಕಪ್‌ ಮಾಡುವುದರಿಂದ ಯಂಗ್‌ ಲುಕ್ಸ್ ಬಂದುಬಿಡುತ್ತದೆ ಎಂಬುದು. ಆದರೆ ಅದು ನಿಜವಲ್ಲ. ನಮ್ಮ ದೇಶದ ಮಹಿಳೆಯರ ಸ್ಕಿನ್‌ ಕಲರ್‌ ಟೋನ್‌ಗೆ ಅರ್ಥಿ ಕಲರ್‌ ನ್ಯಾಚುರಲ್ ಎನಿಸುತ್ತದೆ. ಮುಖ್ಯವಾಗಿ ವಯಸ್ಸನ್ನು ತಗ್ಗಿದಂತೆ ಮಾಡಲು ಕಾಪರ್‌, ಬ್ರೌನ್‌, ರಸ್ಟ್ ಕಲರ್‌ ಹೆಚ್ಚು ಸೂಕ್ತ. ಐ ಶೇಡ್ಸ್ ಗೆ ಈ ಬಣ್ಣಗಳನ್ನೇ ಹೆಚ್ಚು ಬಳಸಬೇಕು. ಆದರೆ ಕ್ರೀಮೀ ಐ ಶೇಡ್ಸ್ ಆರಿಸಬಾರದೆಂದು ನೆನಪಿಡಿ, ಏಕೆಂದರೆ ಇವು ಕಂಗಳ ಕೆಳಗಿನ ಸುಕ್ಕನ್ನು ಅಡಗಿಸಲು ಸಹಕರಿಸಲಾರವು. ಐ ಶೇಡ್ಸ್ ಜೊತೆ ಐ ಲೈನರ್‌ ಸಹ ಬ್ರೌನ್‌ನ್ನೇ ಆರಿಸಿ.

ಕಾಡಿಗೆ ಮಸ್ಕರಾ ಇಲ್ಲದೆ ಕಂಗಳ ಮೇಕಪ್‌ ಅಪೂರ್ಣ. ಕಾಡಿಗೆ ಕಂಗಳನ್ನು ಹೈಲೈಟ್‌ಗೊಳಿಸುತ್ತದೆ. ಇತ್ತೀಚೆಗೆ ಸ್ಮಜ್‌ ಪ್ರೂಫ್ ಕಾಜಲ್ ಫ್ಯಾಷನ್‌ನಲ್ಲಿದೆ. ಹೀಗಾಗಿ ಇದನ್ನೇ ಆರಿಸಿ. ಮಸ್ಕರಾ ಆರಿಸುವಾಗಲೂ ತುಸು ಎಚ್ಚರಿಕೆಯಿಂದಿರಿ. ವಯಸ್ಸು ಹೆಚ್ಚಿದಂತೆ ಕಣ್ಣೆವೆಗಳು ಉದುರತೊಡಗುತ್ತವೆ. ಅನಗತ್ಯ ಮಸ್ಕರಾ ಬಳಸುವುದರಿಂದ ಇದು ಹೆಚ್ಚಬಹುದು, ಬದಲಿಗೆ ಹೈಡ್ರೇಟಿಂಗ್‌ ಮಸ್ಕರಾ ಬಳಸುವುದರಿಂದ ಕಣ್ಣೆವೆಗಳಿಗೆ ಹೆಚ್ಚಿನ ಶಕ್ತಿ ದೊರಕುತ್ತದೆ. ಸಮರ್ಪಕ ಮಸ್ಕರಾ ಆರಿಸಿ, ಅದನ್ನು ಬಳಸುವುದರಿಂದ ಮಾತ್ರ ಯಂಗ್‌ ಲುಕ್ಸ್ ಪಡೆಯಲು ಸಾಧ್ಯ. ಆದ್ದರಿಂದ ಮಸ್ಕರಾವನ್ನು ಸದಾ ಅಪ್ಪರ್‌ ಲೋವರ್‌ ಲ್ಯಾಶೆಸ್‌ ಮೇಲೆ ಮಾತ್ರ ಹಚ್ಚಬೇಕು, ಹುಬ್ಬುಗಳಿಗಲ್ಲ. ಇದರಿಂದ ಕಂಗಳಿಗೆ ಅತಿ ಉತ್ತಮ ಲುಕ್ಸ್ ದೊರಕುತ್ತದೆ.

ಬ್ರೈಟ್ಶೇಡೆಡ್ಲಿಪ್ಸ್ಟಿಕ್

ವೈಜ್ಞಾನಿಕವಾಗಿ ಹೇಳುವುದಾದರೆ ಡಾರ್ಕ್‌ ಶೇಡ್ಸ್ ಯಾವುದೇ ಸರ್ಫೇಸ್‌ನ್ನು ಸಣ್ಣದಾಗಿ ಮಾಡಿ ತೋರಿಸಬಲ್ಲವು. ಆದರೆ ನಾವು ತುಟಿಗಳ ಬಣ್ಣದ ವಿಷಯ ಮಾತಾಡುವಾಗ, ಇದರ ತದ್ವಿರುದ್ಧ ಭಾವ ಕಂಡುಬರುತ್ತದೆ. ಅಂದರೆ ಡಾರ್ಕ್‌ ಶೇಡ್ಸ್, ತುಟಿಗಳನ್ನು ಇನ್ನಷ್ಟು ದೊಡ್ಡದಾಗಿ ತೋರಿಸುತ್ತವೆ. ಆದ್ದರಿಂದ ನಿಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣಬೇಕೆಂದರೆ ನ್ಯೂಡ್‌ ಗ್ಲಾಸಿ ಲಿಪ್‌ಸ್ಟಿಕ್‌ನ್ನೇ ಆರಿಸಬೇಕು. ಜೊತೆಗೆ ಲಿಪ್‌ ಲೈನರ್‌ ಲಿಪ್‌ಸ್ಟಿಕ್‌ ಶೇಡ್‌ಗೆ ಮ್ಯಾಚ್‌ ಆಗುತ್ತಿದೆಯೇ ಇಲ್ಲವೇ ಗಮನಿಸಬೇಕು. ಒಡೆದ ತುಟಿಗಳಿಗೆ ಎಂದೂ ಲಿಪ್‌ಸ್ಟಿಕ್‌ ತೀಡಬೇಡಿ. ತುಟಿಗಳು ಒಡೆದಿದ್ದರೆ, ಮೊದಲು ವ್ಯಾಸಲೀನ್‌ (ಯಾ ಅಂಥದೇ ಇತರ ಪೆಟ್ರೋಲಿಯಂ ಜೆಲ್ಲಿ) ಹಚ್ಚಿ ಸ್ಮೂತ್‌ ಆಗಿಸಿ. ಈ ರೀತಿ ಎಚ್ಚರಿಕೆಯಿಂದ ನೀವು ಮೇಕಪ್‌ ಮಾಡಿಕೊಂಡರೆ, ನಿಮ್ಮ ವಯಸ್ಸಿಗಿಂತ ನೀವು ಯಂಗ್‌ ಆಗಿ ಕಾಣಿಸುವುದರಲ್ಲಿ ಸಂದೇಹವೇ ಇಲ್ಲ.

ಜಿ. ಅನುರಾಧಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ