ತಮ್ಮ ವಯಸ್ಸಿಗಿಂತ ಕಿರಿಯವರಾಗಿ ಕಾಣಿಸಬೇಕೆಂದು ಯಾವ ಮಹಿಳೆಗೆ ತಾನೇ ಇಷ್ಟವಿಲ್ಲ? ಪ್ರೌಢಾವಸ್ಥೆ ತಲುಪಿದ ಮಹಿಳೆಯರು ತಮ್ಮ ವಯಸ್ಸನ್ನು ತಗ್ಗಿರುವಂತೆ ತೋರಿಸಲು ಎಂಥ ಪ್ರಯತ್ನಕ್ಕೂ ರೆಡಿ!

ಹೀಗಾಗಿಯೇ ಕಾಸ್ಮೆಟಿಕ್‌ ಇಂಡಸ್ಟ್ರಿ ವಯಸ್ಸನ್ನು ತಗ್ಗಿಸುವ ಹಲವಾರು ಬಗೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಉತ್ಪನ್ನಗಳು ಮುಖದಲ್ಲಿ ಮೂಡಿರುವ ಗೆರೆಗಳನ್ನು ಮರೆಯಾಗಿಸಲು ಮಹಿಳೆಯರಿಗೆ ಹೆಚ್ಚು ನೆರವಾಗುತ್ತವೆ. ಆದರೆ ಈ ಉತ್ಪನ್ನಗಳನ್ನು ಬಳಸುವ ಮೊದಲು ಮಹಿಳೆಯರು ಇವುಗಳ ಸಮರ್ಪಕ ಬಳಕೆಯ ಬಗ್ಗೆ ಹೆಚ್ಚು ತಿಳಿದುಕೊಂಡಿರುವುದು ಲೇಸು, ಇಲ್ಲದಿದ್ದರೆ ಇವು ಚರ್ಮದ ಮೇಲೆ ವಿರುದ್ಧ ಪರಿಣಾಮ ಬೀರಬಹುದು. ಈ ಕುರಿತು ಕಾಸ್ಮೆಟಾಲಜಿಸ್ಟ್ ತಜ್ಞರು ಏನು ಹೇಳುತ್ತಾರೆ? ಕಾಸ್ಮೆಟಿಕ್‌ ಪ್ರಾಡಕ್ಟ್ಸ್ ಇರುವುದೇ ಬ್ಯೂಟಿ ಹೆಚ್ಚಿಸಲು. ಇದರಿಂದ ಮುಖದಲ್ಲಿನ ಕುಂದುಕೊರತೆಗಳನ್ನು ನಿವಾರಿಸಬಹುದು. ಆದರೆ ಆ ಕೊರತೆಗಳೇನು ಎಂಬುದು ಸ್ಪಷ್ಟ ಗೊತ್ತಿರಬೇಕು. ಯಾವ ಉತ್ಪನ್ನ ಬಳಸಿ ಅವನ್ನು ಸರಿಪಡಿಸಬೇಕು ಎಂಬುದೂ ಗೊತ್ತಿರಬೇಕು. ಇಲ್ಲದಿದ್ದರೆ ವಯಸ್ಸು ಕಡಿಮೆ ಕಾಣಿಸುವ ಬದಲು ಹೆಚ್ಚಾಗಿ ಕಂಡು ಆಭಾಸವಾದೀತು.

ಮೇಕಪ್ಗಾಗಿ ಚರ್ಮವನ್ನು ಸಿದ್ಧಗೊಳಿಸಿ

ಚರ್ಮದ ಮೇಲೆ ಯಾವುದೇ ಕಾಸ್ಮೆಟಿಕ್‌ ಉತ್ಪನ್ನ ಹಚ್ಚುವ ಮೊದಲು ಅದು ಯಾವ ಬಗೆಯದು ಎಂದು ತಿಳಿದಿರಬೇಕಾದುದು ಅತ್ಯಗತ್ಯ. ಏಕೆಂದರೆ ಚರ್ಮಕ್ಕೆ ಅನುಸಾರವಾಗಿ ಮೇಕಪ್‌ ಪ್ರಾಡಕ್ಟ್ಸ್ ಆರಿಸಿಕೊಂಡಾಗ ಮಾತ್ರ ನಿಮಗೆ ಪರ್ಫೆಕ್ಟ್ ಲುಕ್ಸ್ ಸಿಗಲು ಸಾಧ್ಯ. ಮಾರುಕಟ್ಟೆಯಲ್ಲಿ ನಿಮಗೆ ಡ್ರೈ, ಆಯ್ಲಿ ಹಾಗೂ ಮಿಶ್ರ ಚರ್ಮಕ್ಕಾಗಿ ವಿಭಿನ್ನ ಬಗೆಯ ಕಾಸ್ಮೆಟಿಕ್‌ ಉತ್ಪನ್ನಗಳು ಲಭ್ಯ. ಹೀಗೆ ಸರಿಯಾದ ಆಯ್ಕೆ ಮಾಡಿಕೊಂಡ ನಂತರವೇ ಚರ್ಮವನ್ನು ಮೇಕಪ್‌ಗೆ ಸಿದ್ಧಗೊಳಿಸಬೇಕು. ಚರ್ಮವನ್ನು ಸ್ವಚ್ಛಗೊಳಿಸದೆಯೇ ಮೇಕಪ್‌ ಶುರು ಮಾಡಿದರೆ, ಕೊಳೆ ಸ್ಕಿನ್‌ ಪೋರ್ಸ್‌ ಒಳಗೇ ಇದ್ದುಬಿಡುತ್ತದೆ, ಮೇಕಪ್‌ ಲೇಯರ್‌ಗಳು ಪೋರ್ಸ್‌ನ್ನು ಕ್ಲೋಸ್‌ ಮಾಡಿಬಿಡುತ್ತವೆ. ಇದರಿಂದ ಸೋಂಕಿನ ಭೀತಿ ತಪ್ಪಿದ್ದಲ್ಲ. ಆದ್ದರಿಂದ ಮೇಕಪ್‌ಗೆ ಮೊದಲು ಚರ್ಮದ ಕ್ಲೀನಿಂಗ್‌, ಟೋನಿಂಗ್‌, ಮಾಯಿಶ್ಚರೈಸಿಂಗ್‌ ಇತ್ಯಾದಿಗಳು ಕ್ರಮಬದ್ಧವಾಗಿ ನಡೆಯಬೇಕು. ಇದರಿಂದ ಮೇಕಪ್‌ನ ಸ್ಮೂತ್‌ನೆಸ್‌ ಹೆಚ್ಚುತ್ತದೆ.

ಕನ್ಸೀಲರ್ಬಳಕೆ ತಪ್ಪಿಸಿ

ಸಾಮಾನ್ಯವಾಗಿ ಕನ್ಸೀಲರ್‌ನ್ನು ಮುಖದಲ್ಲಿನ ಕಪ್ಪು ಕಲೆಗಳನ್ನು ಮರೆಮಾಚಲು ಬಳಸುತ್ತಾರೆ. ಮುಖದಲ್ಲಿ ಕಂಡು ಬರುವ ಕಪ್ಪು ಉಂಗುರ, ಕಪ್ಪು ಕಲೆಗಳಿರುವ ಭಾಗಕ್ಕೆ ಮಾತ್ರ ಇದನ್ನು ಸವರಲಾಗುತ್ತದೆ. ಆದರೆ ಕೆಲವು ಮಹಿಳೆಯರು ಮುಖಕ್ಕೆ ಹೆಚ್ಚಿನ ಲಾಭ ಸಿಗಲಿ ಎಂಬ ದುರಾಸೆಯಲ್ಲಿ ಇಡೀ ಮುಖಕ್ಕೆ ಇದನ್ನು ಹಚ್ಚುತ್ತಾರೆ. ಆದರೆ ಹೀಗೆ ಮಾಡುವುದರಿಂದ ಮುಖದಲ್ಲಿನ ಸುಕ್ಕುಗಳು ಎದ್ದು ಕಾಣಿಸುತ್ತವೆ. ತಜ್ಞೆಯರ ಪ್ರಕಾರ, ಕನ್ಸೀಲರ್‌ ಥಿಕ್‌ ಆಗಿರುವುದರಿಂದ, ಅದನ್ನು ಸ್ವಲ್ಪ ಹಚ್ಚಿದರೆ ಸಾಕು. ಶೀಘ್ರ ಪರಿಣಾಮ ತೋರುತ್ತದೆ. ಹೆಚ್ಚು ಬಳಿಯುವುದರಿಂದ ಇದು ಮುಖದಲ್ಲಿ ವಕ್ರ ಗೆರೆಗಳನ್ನು ತೋರಬಹುದು. ಕೆಲವು ಮಹಿಳೆಯರು ಕಪ್ಪು ಗೆರೆಗಳನ್ನು ಅಡಗಿಸಲು ಸಹ ಕನ್ಸೀಲರ್‌ ಬಳಸುತ್ತಾರೆ. ಆದರೆ ಇದು ತಪ್ಪು. ಕಂಗಳ ಕೆಳಗೆ ಕನ್ಸೀಲರನ್ನು ಸದಾ ಇನ್ನರ್‌ ಕಾರ್ನರ್‌ನಲ್ಲಿಯೇ ಬಳಸಬೇಕು. ಹೆಚ್ಚು ಕನ್ಸೀಲರ್‌ ಬಳಸುವುದರಿಂದ ಕಂಗಳು ವಿಭಿನ್ನವಾಗಿ ಹೊಳೆಯಲು ಆರಂಭಿಸುತ್ತವೆ, ಅದರಿಂದಾಗಿ ಕಂಗಳ ಬಳಿ ಕನ್ಸೀಲರ್‌ ಬಳಸಿದ್ದಾರೆಂದು ತಿಳಿಯುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ