ಐ ಲೈನರ್‌ ಮತ್ತು ಐ ಶ್ಯಾಡೋ ಮಾತ್ರವಲ್ಲ, ಇದೀಗ ಮಾರುಕಟ್ಟೆಯಲ್ಲಿ ಯೆಲ್ಲೋ, ಬ್ಲೂ, ಪಿಂಕ್‌, ಗ್ರೀನ್‌ ಶೇಡ್‌ಗಳಲ್ಲಿ ಮಸ್ಕರಾದ ಸಂಗ್ರಹದಲ್ಲಿ ಏನೂ ಕೊರತೆ ಇಲ್ಲ. ಹೀಗಿರುವಾಗ ನೀವು ನಿಯಮಿತವಾಗಿ ಬ್ಲ್ಯಾಕ್‌ಟ್ರಾನ್ಸ್ ಪರೆಂಟ್‌ ಶೇಡ್‌ನ ಮಸ್ಕರಾ ಬಳಸುತ್ತಾ ಬೇಸತ್ತಿದ್ದರೆ, ಈ ಹೊಸ ವರ್ಷಕ್ಕೆ ಹೊಸ ಕೊಡುಗೆಯಾಗಿ ಈ ಕಲರ್‌ಫುಲ್ ಮಸ್ಕರಾ ಬಳಸಲು ಆರಂಭಿಸಿ. ಈ ಮಸ್ಕರಾದ ಕಲರ್‌ಫುಲ್ ಶೇಡ್ಸ್ ಕಂಗಳಿಗೆ ಬಿಗ್‌ಬ್ರೈಟ್‌ ಲುಕ್ಸ್ ನೀಡುತ್ತವೆ. ಬ್ಲ್ಯಾಕ್‌ಗೆ ಬದಲಾಗಿ ಇವು ಸಾಕಷ್ಟು ಆಕರ್ಷಕ ಎನಿಸುತ್ತವೆ. ಇವನ್ನು ಆರಿಸುವಾಗ ನಿಮ್ಮ ಸ್ಕಿನ್‌ ಟೋನ್‌ ಜೊತೆಗೆ ಕಂಗಳ ಬಣ್ಣವನ್ನೂ ವಿಶೇಷವಾಗಿ ಗಮನದಲ್ಲಿಡಬೇಕು.

ಬ್ಲೂ ಮಸ್ಕರಾ

ನಿಮ್ಮ ಕಂಗಳ ಬಣ್ಣ ಗ್ರೇ, ಬ್ರೌನ್‌ ಯಾ ಲೈಟ್‌ ಗ್ರೀನ್‌ ಆಗಿದ್ದರೆ, ಆಗ ನೀವು ನಿಮ್ಮ ವ್ಯಾನಿಟಿ ಬ್ಯಾಗಿಗೆ ಬ್ಲೂ ಶೇಡ್‌ನ ಮಸ್ಕರಾ ಹಾಕಿಕೊಳ್ಳಿ. ಇಂದಿನ ಮಾರುಕಟ್ಟೆಯಲ್ಲಿ ಬ್ಲೂ ಬಣ್ಣದ ಹಲವು ಶೇಡ್ಸ್ ನ ಮಸ್ಕರಾ ಲಭ್ಯ. ಅಂದರೆ ರಾಯಲ್ ಬ್ಲೂ, ನೇವಿ ಬ್ಲೂ, ಸೀ ಬ್ಲೂ, ಇತ್ಯಾದಿ. ಬ್ಲೂ ಬಣ್ಣದ ಈ ಎಲ್ಲಾ ಶೇಡ್‌ಗಳೂ ಫೇರ್‌ ಕಾಂಪ್ಲೆಕ್ಷನ್‌ವುಳ್ಳ ಮಹಿಳೆಯರಿಗೆ ಮಾತ್ರವಲ್ಲದೆ, ಡಾರ್ಕ್‌ಮೀಡಿಯಂ ಕಾಂಪ್ಲೆಕ್ಷನ್‌ನವರಿಗೂ ಅನ್ವಯಿಸುತ್ತದೆ. ಆದರೆ ಬ್ಲೂ ಶೇಡ್‌ನ ಮಸ್ಕರಾವನ್ನು  ಡೇ ಪಾರ್ಟಿಗಳಿಗೆ ಬಳಸುವುದು ಲೇಸು.

ಗ್ರೀನ್ಮಸ್ಕರಾ

ಡಾರ್ಕ್‌ ಬ್ರೌನ್‌ ಶೇಡ್ಸ್ ವುಳ್ಳ ಕಂಗಳಿಗೆ ಗ್ರೀನ್‌ ಶೇಡ್‌ನ ಮಸ್ಕರಾ ಚೆನ್ನಾಗಿ ಒಪ್ಪುತ್ತದೆ. ಆದರೆ ವಿಷಯ ಸ್ಕಿನ್‌ ಟೋನ್ ಕುರಿತಾಗಿದ್ದರೆ, ಬ್ಲೂ ತರಹ ಗ್ರೀನ್‌ ಕಲರ್‌ ಮಸ್ಕರಾ ಸಹ ಡಾರ್ಕ್‌, ಫೇರ್‌, ಮೀಡಿಯಂ…. ಹೀಗೆ ಎಲ್ಲಾ ಬಗೆಯ ಸ್ಕಿನ್‌ ಟೋನ್‌ನವರಿಗೂ ಅನ್ವಯಿಸುತ್ತದೆ. ಗ್ರೀನ್‌ ಮಸ್ಕರಾ ನಿಮ್ಮ ಕಂಗಳಿಗೆ ಎದ್ದು ಕಾಣಿಸಬೇಕೆಂದರೆ, ಯಾವಾಗ ಗ್ರೀನ್‌ ಕಲರ್‌ ಮಸ್ಕರಾ ಹಚ್ಚಿದರೂ, ಅದರ ಜೊತೆ ಡಾರ್ಕ್‌ ಶೇಡ್‌ನ ಐ ಶ್ಯಾಡೋ ಯಾ ಐ ಲೈನರ್‌ ಹಚ್ಚಲು ಹೋಗಬೇಡಿ. ಇಲ್ಲದಿದ್ದರೆ ಡಾರ್ಕ್‌ ಶೇಡ್ ಮುಂದೆ ನಿಮ್ಮ ಮಸ್ಕರಾ ಬಣ್ಣ ಡಲ್ ಆಗಿಹೋಗುತ್ತದೆ.

ಬ್ರೌನ್ಮಸ್ಕರಾ

ಬ್ಲ್ಯಾಕ್‌ ಆದ ನಂತರ ಕಲರ್‌ಫುಲ್ ಮಸ್ಕರಾ ಬಳಸಲು ನೀವು ಹಿಂಜರಿಯುತ್ತಿದ್ದರೆ, ನೀವು ಈ ಬ್ರೌನ್‌ ಮಸ್ಕರಾದಿಂದಲೇ ಆರಂಭಿಸಿ. ಇದು ಬ್ಲ್ಯಾಕ್‌ ಶೇಡ್‌ಗಿಂತ ತುಸು ಲೈಟ್‌ ಆಗಿರುತ್ತದೆ. ಆದರೆ ಇದರ ಪರಿಣಾಮ ಸಾಕಷ್ಟು ನ್ಯಾಚುರಲ್ ಎನಿಸುತ್ತದೆ. ಮೀಡಿಯಂ ಫೇರ್‌ ಕಾಂಪ್ಲೆಕ್ಷನ್ನಿನ ಹೆಂಗಸರಿಗೆ ಮಾತ್ರವಲ್ಲದೆ, ಬ್ರೌನ್‌ ಕಂಗಳ ಹೆಂಗಸರಿಗೂ ಇದು ಚೆನ್ನಾಗಿ ಒಪ್ಪುತ್ತದೆ. ಇದನ್ನು ಪಾರ್ಟಿ, ಫಂಕ್ಷನ್‌ಗಳಂಥ ವಿಶೇಷ ಸಂದರ್ಭಗಳಿಗೆ ಮಾತ್ರವಲ್ಲದೆ, ದೈನಂದಿನ ಬಳಕೆಗೂ ಯೂಸ್‌ ಮಾಡಿ. ಹಗಲು ಅಥವಾ ಇರುಳು ಎರಡು ಹೊತ್ತಿಗೂ ಇದು ನಡೆಯುತ್ತದೆ.

ಗೋಲ್ಡನ್ಮಸ್ಕರಾ

ನೀವು ಯಾವುದೇ ಸಂಜೆಯ ಪಾರ್ಟಿಗೆ ಹೊರಡುತ್ತಿರುವಿರಾದರೆ ಗ್ರೀನ್‌, ಬ್ಲೂ, ಪರ್ಪಲ್ ಮಸ್ಕರಾಗಳನ್ನು ಬಿಟ್ಟು ಗೋಲ್ಡನ್ ಆರಿಸುವುದೇ ಸೂಕ್ತ. ಆಗ ನೀವು ಪಾರ್ಟಿಯ ಕೇಂದ್ರಬಿಂದು ಆಗುತ್ತೀರಿ. ಇದು ಎಲ್ಲಾ ಬಗೆಯ ಕಂಗಳ ಶೇಡ್ಸ್ ಗೂ ಒಪ್ಪುತ್ತದೆ. ಡಾರ್ಕ್‌, ಮೀಡಿಯಂ, ಫೇರ್‌ ಸ್ಕಿನ್‌ ಟೋನ್‌ವುಳ್ಳ ಮಹಿಳೆಯರಿಗೂ ಗೋಲ್ಡನ್‌ ಶೇಡ್‌ನ ಮಸ್ಕರಾ ಹೆಚ್ಚು ಒಪ್ಪುತ್ತದೆ. ಅಂದರೆ ಬೇರೆ ಶೇಡ್ಸ್ ನ ಮಸ್ಕರಾ ಇಟ್ಟುಕೊಳ್ಳಿ ಬಿಡಿ, ಪಾರ್ಟಿಯ ಕೇಂದ್ರಬಿಂದು ಆಗಲು ನೀವು ಗೋಲ್ಡನ್‌ ಶೇಡ್‌ ಮಸ್ಕರಾವನ್ನು ನಿಮ್ಮ ವ್ಯಾನಿಟಿ ಬ್ಯಾಗಿಗೆ ಸೇರಿಸಲು ಮರೆಯದಿರಿ.

ಪರ್ಪಲ್ ಮಸ್ಕರಾ

ನಿಮ್ಮ ಕಂಗಳು ಚಿಕ್ಕದಾಗಿದ್ದರೆ, ಅದನ್ನು ನೀವು ದೊಡ್ಡದಾಗಿ ತೋರಿಸಬಯಸಿದರೆ, ನಿಮ್ಮ ಆಯ್ಕೆ ಈ ಪರ್ಪಲ್ ಮಸ್ಕರಾ ಆಗಿರಲಿ. ಇದು ಗ್ರೀನ್‌, ಬ್ರೌನ್‌, ಬ್ಲೂ ಬಣ್ಣದ ಕಂಗಳಿಗೆ ಚೆನ್ನಾಗಿ ಸೂಟ್‌ ಆಗುತ್ತದೆ. ಮುಖ್ಯವಾಗಿ ಇದರ 3 ಶೇಡ್ಸ್ ನ್ನು ಹೆಚ್ಚು ಬಳಸುತ್ತಾರೆ. ರಾಯಲ್, ಪ್ಲಮ್ ಮತ್ತು ವೆಲ್ವೆಟ್‌ ಪರ್ಪಲ್. ನಿಮ್ಮ ಸ್ಕಿನ್‌ ಟೋನ್‌ ಡಾರ್ಕ್‌ ಆಗಿದ್ದರೆ, ರಾಯಲ್ ಪರ್ಪಲ್ ಶೇಡ್ ಮಸ್ಕರಾ ಅಗತ್ಯ ಬೇಕು. ನೀವು ಫೇರ್‌ ಆಗಿದ್ದರೆ ವೆಲ್ವೆಟ್‌ ಶೇಡ್‌. ಮೀಡಿಯಂ ಆಗಿದ್ದರೆ, ಪ್ಲಮ್ ಶೇಡ್‌ ಬಳಸಿರಿ. ಪಾರ್ಟಿಗಂತೂ ಇಂಥ ಶೇಡ್ಸ್ ಮೋಸ್ಟ್ ಸೂಟೆಬಲ್!

ಸಿ. ಪೂರ್ಣಿಮಾ 

ಸೂಪರ್ಸ್ಟೈಲಿಶ್ಐಡಿಯಾಸ್

ಆರ್ಟಿಫಿಶಿಯಲ್ ಐ ಲ್ಯಾಶೆಸ್‌ ಬಳಸಿದ ನಂತರ ಅದಕ್ಕೆ ಮಸ್ಕರಾ ಹಚ್ಚಿರಿ. ಉದ್ದ ದಟ್ಟ ಎವೆಗಳಿಗೆ ಹಚ್ಚಿದ ಮಸ್ಕರಾ ಮೋಸ್ಟ್ ಬ್ಯೂಟಿಫುಲ್ ಎನಿಸುತ್ತದೆ.

ಸೂಪರ್‌ ಸ್ಟೈಲಿಶ್‌ ಲುಕ್ಸ್ ಗಾಗಿ, ಯಾವ ಶೇಡ್‌ನ ಮಸ್ಕರಾ ಬಳಸುತ್ತಿದ್ದೀರೋ ಅದೇ ಶೇಡ್‌ನ ಐ ಶ್ಯಾಡೋ ಹಚ್ಚಿಕೊಳ್ಳಿ.

ಒಂದೇ ಬಣ್ಣದ ಮಸ್ಕರಾ ಐ ಲೈನರ್‌ ಬಳಸಿಯೂ ಸಹ ನೀವು ನಿಮ್ಮ ಕಂಗಳಿಗೆ ಆಕರ್ಷಕ ಲುಕ್ಸ್ ನೀಡಬಹುದು.

ಡ್ರಮಾಟಿಕ್‌ ಐ ಮೇಕಪ್‌ಗಾಗಿ, 2 ವಿಭಿನ್ನ ಶೇಡ್‌ನ ಮಸ್ಕರಾ ಬಳಸಿರಿ, ಅಂದರೆ ಮೇಲ್ಭಾಗದ ರೆಪ್ಪೆಗೆ ಬ್ಲೂ ಮತ್ತು ಕೆಳಭಾಗಕ್ಕೆ ಗ್ರೀನ್‌, ಹೀಗೆ ಟ್ರೈ ಮಾಡಿ.

ಟ್ರೆಂಡ್‌ ಸೆಟರ್‌ ಆಗಬಯಸಿದರೆ, ಐ ಲ್ಯಾಶೆಸ್‌ನ್ನು 3 ಭಾಗ ವಿಂಗಡಿಸಿ, ಮೂರರ ಮೇಲೂ 3 ವಿಭಿನ್ನ ಶೇಡ್ಸ್ ಮಸ್ಕರಾ ಬಳಸಿರಿ.

ನೀವು ಸಂಜೆಯ ಪಾರ್ಟಿಗೆ ಹೊರಟಿದ್ದರೆ, ಗ್ಲಿಟರ್‌ವುಳ್ಳ ಕಲರ್‌ಫುಲ್ ಮಸ್ಕರಾ ಬಳಸಿರಿ. ಇದನ್ನು ಬಳಸುವುದರಿಂದ ನಿಮ್ಮ ಐ ಮೇಕಪ್‌ ಹೆಚ್ಚು ಕಲರ್‌ಫುಲ್ ಬ್ರೈಟ್‌ನೆಸ್‌ ಹೊಂದುತ್ತದೆ.

ನೀವು ಕಲರ್‌ಫುಲ್ ಮಸ್ಕರಾದಿಂದ ಐ ಮೇಕಪ್‌ಗೆ ಹೆವಿ ಲುಕ್‌ ನೀಡುತ್ತಿರುವುದರಿಂದ, ಲಿಪ್‌ಸ್ಟಿಕ್‌ ಬ್ಲಶ್‌ ಆನ್‌ಗಾಗಿ ನ್ಯಾಚುರಲ್ ಶೇಡ್ಸ್ ನ್ನೇ ಆರಿಸಿ, ಇಲ್ಲದಿದ್ದರೆ ನಿಮ್ಮ ಲುಕ್ಸ್ ಗಾಡೀ ಎನಿಸುತ್ತದೆ.

ಮಸ್ಕರಾ ಹಚ್ಚಲಿದ್ದೀರಾ?

ನೀವು ನಿಮ್ಮ ಮಸ್ಕರಾ ದೀರ್ಘಾವಧಿ ಬಾಳಿಕೆ ಬರಲಿ ಎಂದು ಬಯಸಿದರೆ, ವಾಟರ್‌ ಪ್ರೂಫ್‌ ಮಸ್ಕರಾ ಬಳಸಿರಿ.

ಮಸ್ಕರಾವನ್ನು ಮೊದಲು ಮೇಲ್ಭಾಗದ ಐ ಲ್ಯಾಶೆಸ್‌ಗೆ ಬಳಸಿ ನಂತರ ಕೆಳಭಾಗಕ್ಕೆ ಬಳಸಬೇಕು.

ಮಸ್ಕರಾ ಗಾಳಿ ಸಂಪರ್ಕಕ್ಕೆ ಬರಬಾರದು. ಇಲ್ಲದಿದ್ದರೆ ಅದು ಬೇಗ ಒಣಗಿ ಹೋದೀತು, ಅಪ್ರಯೋಜಕ ಆದೀತು.

ಉತ್ತಮ ಪರಿಣಾಮಕ್ಕಾಗಿ ಮಸ್ಕರಾ ಸಿಂಗಲ್ ಬದಲಿಗೆ ಡಬಲ್ ಕೋಟ್‌ ಹಚ್ಚಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ