ಇಂದಿನ ಫ್ಯಾಷನೆಬಲ್ ಯುಗದಲ್ಲಿ ಸೌಂದರ್ಯದ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಹೆಚ್ಚುತ್ತಿದೆ. ಅವಳು ರಿಸೆಪ್ಶನಿಸ್ಟ್ ಆಗಲಿ ಅಥವಾ ಗ್ಲಾಮರ್ ಲೋಕದೊಂದಿಗೆ ಸಂಬಂಧಿಸಿದ ಆ್ಯಂಕರ್, ಹೋಸ್ಟ್, ಕಾರ್ಪೋರೇಟ್ ಆಫೀಸ್‌ನಲ್ಲಿ ಕೆಲಸ ಮಾಡುವ ಮಹಿಳೆ ಅಥವಾ ಏರ್‌ಹೋಸ್ಟೆಸ್ ಆಗಿರಬಹುದು. ಇವರೆಲ್ಲರಿಗೂ ಮೇಕಪ್ ಬಹಳ ವಿಶೇಷವಾಗಿರುತ್ತದೆ. ಅದು ಅವರಿಗೆ ಕೆಲಸ ಮಾಡುವಾಗ ಅಟ್ರಾಕ್ಟಿವ್ ಮತ್ತು ಫ್ರೆಶ್ ಲುಕ್ ಕೊಡುತ್ತದೆ. ಅಷ್ಟೇ ಅಲ್ಲ, ಈ ಲುಕ್ ಅವರಲ್ಲಿ ಕಾನ್ಛಿಡೆನ್ಸ್ ಕೂಡ ಉಂಟು ಮಾಡುತ್ತದೆ.
ಈ ವರ್ಷದ ಇಂತಹ 5 + 5 ಮೇಕಪ್ ಮತ್ತು ಹೇರ್‌ಸ್ಟೈಲ್ ಟಿಪ್ಸ್ ಗಳನ್ನು ತಿಳಿದುಕೊಳ್ಳಿ. ಅವು ನಿಮಗೊಂದು ಹೊಸ ಗುರುತು ಕೊಡುತ್ತವೆ. ಬ್ಯೂಟಿ ಎಕ್ಸ್ ಪರ್ಟ್ಸ್ ರಹೀಮಾ ಖಾನ್ ಹಾಗೂ ರೇಣು ಮಹೇಶ್ವರಿ ಈ ಟಿಪ್ಸ್ ಕೊಡುತ್ತಿದ್ದಾರೆ.
ಕಾರ್ಪೋರೇಟ್ ಮೇಕಪ್
ಕಾರ್ಪೋರೇಟ್ ಆಫೀಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರಲ್ಲಿ ಕಾನ್ಛಿಡೆನ್ಸ್ ಉಂಟು ಮಾಡುವಂತಹ ಲುಕ್ ಇರಬೇಕು.
ಮೇಕಪ್ ಹೇಗೆ ಮಾಡಬೇಕು? : ಮೊದಲು ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಇಡೀ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ. ಆಮೇಲೆ ಎಸ್‌ಪಿಎಫ್ 18 ಫ್ಲೂಯಿಡ್ ಟಿಂಟ್ ಲೋಶನ್ ಹಚ್ಚಿ. ಮುಖಕ್ಕೆ ಕನ್ಸೀಲರ್ ಉಪಯೋಗಿಸಿ.
ಐಸ್ ಮೇಕಪ್: ಸ್ಮೋಕಿ ಐಸ್ ಮೇಕಪ್ ಮಾಡಿ. ಅದಕ್ಕೆ ಬ್ರೌನ್ ಗ್ರೇ ಶ್ಯಾಡೋ ಉಪಯೋಗಿಸಿ. ಐ ಲ್ಯಾಶಸ್ ಮೇಲೆ ಮಸ್ಕರಾವನ್ನು ಚೆನ್ನಾಗಿ ಉಪಯೋಗಿಸಿ.
ಲಿಪ್, ಚೀಕ್ ಮೇಕಪ್: ರಿಸೆಪ್ಶನಿಸ್ಟ್ ಮತ್ತು ಏರ್‌ಹೋಸ್ಟೆಸ್‌ಗಳು ಗ್ಲಾಸಿ ಡಾರ್ಕ್ ಲಿಪ್‌ಸ್ಟಿಕ್ ಆಯ್ದುಕೊಳ್ಳಿ ಮತ್ತು ಚೀಕ್ಸ್ ಮೇಲೆ ಪಿಂಕ್ ಬ್ಲಶರ್ ಹಾಕಿ ಅದನ್ನು ಮರ್ಜ್ ಮಾಡಿ.
ಹೇರ್ಸ್ಟೈಲ್
ಕಾರ್ಪೋರೇಟ್ ಆಫೀಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರ ಹೇರ್‌ಸ್ಟೈಲ್‌ನಲ್ಲಿ ನೀಡ್ ಲುಕ್ ಇರಬೇಕು. ಚಿಕ್ಕ ಕೂದಲಿಗಾಗಿ ಅರ್ಧ ಕೂದಲನ್ನು ಎತ್ತಿ ಪಿನ್‌ನಿಂದ ಸೆಟ್ ಮಾಡಿ ಮತ್ತು ಅರ್ಧ ಕೂದಲನ್ನು ಹಾಗೆಯೇ ಬಿಡಿ. ಉದ್ದ ಕೂದಲಿನಿಂದ ಎತ್ತರದ ಪೋನಿ ಮಾಡಿ. ಸಿಂಪಲ್ ಆದ ಜಡೆಯನ್ನೂ ಹಾಕಬಹುದು. ಏರ್‌ಹೋಸ್ಟೆಸ್ ಮತ್ತು ರಿಸೆಪ್ಶನಿಸ್ಟ್ ತಮ್ಮ ಕೂದಲಿಗೆ ಮುಂದಿನಿಂದ ಡಿಫರೆಂಟ್ ಸ್ಟೈಲ್ ಮಾಡಿ ಬೇರೆ ಲುಕ್ ಕೊಡಬಹುದು.
ಕರೆಕ್ಟಿವ್ ಮೇಕಪ್
ಈ ಮೇಕಪ್‌ನ್ನು ಹೆಚ್ಚಾಗಿ ಆ್ಯಂಕರ್, ನ್ಯೂಸ್ ರೀಡರ್‌ಗಳಿಗೆ ಬೆಸ್ಟ್ ಎನ್ನಲಾಗುತ್ತದೆ. ಅದು ಅವರಿಗೆ ಕ್ಯಾಮೆರಾದಲ್ಲಿ ಬೆಸ್ಟ್ ಲುಕ್‌ಕೊಡುತ್ತದೆ.
ಬೇಸ್‌ನ ಆಯ್ಕೆ : ಮುಖವನ್ನು ಸ್ವಚ್ಛಗೊಳಿಸಿ ಇಡೀ ಮುಖದ ಮೇಲೆ ಬ್ರಶ್‌ನಿಂದ ಪ್ರೈಮರ್ ಹಚ್ಚಿ. ಸ್ಕಿನ್‌ಗೆ ತಕ್ಕಂತೆ ಡರ್ಮಾ ಬೇಸ್‌ಕಲರ್‌ನ್ನು ಆಯ್ದುಕೊಳ್ಳಿ. ಡರ್ಮಾ ಬೇಸ್ ಹಾರ್ಡ್ ಆಗಿರುತ್ತದೆ. ಅದನ್ನು ಸಾಫ್ಟ್ ಮಾಡಲು ಅದರಲ್ಲಿ 1 ತೊಟ್ಟು ಮೇಕಪ್ ಬ್ಲೆಂಡ್ ಹಾಕಿ ಲಿಕ್ವಿಡ್ ಮಾಡಿ. ಬೇಸ್‌ನ್ನು ಮುಖದ ಮೇಲೆ ಯಾವಾಗಲೂ ತಪತಪನೆ ಹಚ್ಚಿ. ಡರ್ಮಾದ ಕಾಂಟೂರಿಂಗ್ ಕಲರ್‌ನಿಂದ ಮುಖದ ಫೋರ್‌ಹೆಡ್, ಚೀಕ್ಸ್, ಚಿನ್ ಇತ್ಯಾದಿ ವಿಂಗಡಿಸಿ.
ಐಸ್ ಮೇಕಪ್ : ಐ ಶ್ಯಾಡೋ ಹಚ್ಚುವ ಮೊದಲು ಐ ಶ್ಯಾಡೋ ಪ್ರೈಮರ್‌ನ 1 ಹನಿ ಹಚ್ಚಿ. ಇದರಿಂದ ಬ್ಲೆಂಡಿಂಗ್ ಚೆನ್ನಾಗಿ ಆಗುತ್ತದೆ. ಬ್ರಶ್‌ನ ಬದಲು ಇದನ್ನು ಬೆರಳುಗಳಿಂದ ಹಚ್ಚಿ ಬ್ಲೆಂಡ್ ಮಾಡಿ. ನಂತರ ಇದರ ಮೇಲೆ ಕಾಪರ್ ಅಥವಾ ಗೋಲ್ಡನ್ ಬ್ರೌನ್ ಶ್ಯಾಡೋ ಹಚ್ಚಿ. ಕಣ್ಣುಗಳ ಕಾರ್ನರ್‌ಗಳ ಮೇಲೆ ಡಾರ್ಕ್ ಬ್ರೌನ್ ಶ್ಯಾಡೋ ಹಚ್ಚಿ. ಒಳಗಡೆಗೆ ಬ್ಲೆಂಡ್ ಮಾಡಿ. ಐ ಬ್ರೋಸ್ ಕೆಳಗೆ ಹೈಲೈಟರ್ ಸಿಲ್ವರ್ ಅಥವಾ ಗೋಲ್ಡನ್ ಯಾವುದಾದರೂ ಹಚ್ಚಬಹುದು. ನಂತರ ಐ ಬ್ರೋಸ್‌ಗೆ ಬ್ಲ್ಯಾಕ್ ಅಥವಾ ಬ್ರೌನ್ ಪೆನ್ಸಿಲ್‌ನಿಂದ ಅಥವಾ ಬ್ರಶ್‌ನಿಂದ ಕಲರ್‌ನ್ನು ಹಚ್ಚಿ ಹೈರೆಸ್ಟ್ ಪಾಯಿಂಟ್‌ನಿಂದ ಹಚ್ಚುತ್ತಾ ಒಳಭಾಗದತ್ತ ಬನ್ನಿ. ಈಗ ಬ್ರಶ್ ನಿಂದ ಐ ಲೈನರ್ ಹಚ್ಚಿ. ಕಣ್ಣುಗಳ ಆಕಾರಕ್ಕೆ ತಕ್ಕಂತೆ ಕಾಜಲ್‌ನ್ನು ಅಗತ್ಯವಿದ್ದರೆ ಉಪಯೋಗಿಸಿ.
ಲಿಪ್ ಮೇಕಪ್: ಲಿಪ್ ಮೇಲೆ ಮಾಯಿಶ್ಚರೈಸರ್ ಹಚ್ಚಿ ನಂತರ ಔಟ್ ಲೈನ್ ಬ್ರಶ್ ಅಥವಾ ಪೆನ್ಸಿಲ್‌ನಿಂದ ಹಚ್ಚಿ. ಇದನ್ನು ಲಿಪ್‌ಸ್ಟಿಕ್‌ನಿಂದ ಫಿಲ್ ಮಾಡಿ. ಲಿಪ್‌ಸ್ಟಿಕ್ ಹೆಚ್ಚು ಡಾರ್ಕ್ ಕಲರ್ ಆಗಿರಬಾರದು.
ಚೀಕ್ಸ್ ಮೇಕಪ್ : ಚೀಕ್ಸ್ ಬೋನ್ ಮೇಲೆ ಪೀಚ್ ಅಥವಾ ಪಿಂಕ್ ಬ್ಲಶರ್ ಹಚ್ಚಿ. ಒಳಗಿನಿಂದ ಹೊರಗಿನ ಕಡೆಗೆ ಬ್ರಶ್‌ನ ಸ್ಟ್ರೋಕ್ ಕೊಡಿ.
ಹೇರ್ಸ್ಟೈಲ್
ಆ್ಯಂಕರ್ ಹೇರ್‌ಸ್ಟೈಲ್‌ನಲ್ಲಿ ಹೆಚ್ಚಾಗಿ ತೆರೆದ ಸ್ಟ್ರೇಟ್ ಕೂದಲು ಇರುತ್ತದೆ. ಒಂದುವೇಳೆ ಹೇರ್ ಕರ್ಲಿ ಆಗಿದ್ದರೆ ಅದನ್ನು ಚೆನ್ನಾಗಿ ಬ್ಲೋ ಡ್ರೈ ಮಾಡಿ ಫ್ರಂಟ್‌ನ ಕೂದಲಿನಲ್ಲಿ ಸಿಂಪಲ್ ಮತ್ತು ಸೋಬರ್ ಸ್ಟೈಲ್‌ನಲ್ಲಿ ತೆಳುವಾಗಿ ಪಫ್ ಮಾಡಿ.
ಪಾರ್ಟಿ ಮೇಕಪ್
ಡೇ ಮೇಕಪ್‌ಗಾಗಿ ಸ್ಕಿನ್ ಮೂರ್‌ನಿಂದ ಮುಖ ತಾಜಾ ಆಗಿ ಕಂಡುಬರುತ್ತದೆ. ಪಾರ್ಟಿ ಮೇಕಪ್ ಬಗ್ಗೆ ಮಾತಾಡುವುದಾದರೆ ಸಿಲಿಕಾನ್ ಬೇಸ್ ಫೌಂಡೇಶನ್ ಚಳಿಗಾಲದಲ್ಲಿ ತ್ವಚೆಯ ಮೇಲೆ ಉತ್ತಮ ಕೆಲಸ ಮಾಡುತ್ತದೆ. ಮಿನರಲ್ ಮೇಕಪ್ ಪ್ರಾಡಕ್ಟ್ ನ್ನೇ ಹಚ್ಚಿ. ಏಕೆಂದರೆ ಈ ಹವಾಮಾನದಲ್ಲಿ ತ್ವಚೆಯಲ್ಲಿ ಎಳೆತವಿರುತ್ತದೆ. ಮಾಯಿಶ್ಚರೈಸರ್‌ನಲ್ಲಿ ಫೌಂಡೇಶನ್ ಮಿಕ್ಸ್ ಮಾಡಿ ಹಚ್ಚಬಹುದು. ಡಾರ್ಕ್ ಸರ್ಕಲ್ಸ್ ಗಾಗಿ ಕನ್ಸೀಲರ್ ಸ್ಟಿಕ್ ಉಪಯೋಗಿಸಿ. ಬೇಸ್‌ನ್ನು ಚೆನ್ನಾಗಿ ಮರ್ಜ್ ಮಾಡಿ. ಅದು ಫೇಸ್ ಸ್ಕಿನ್‌ನ್ನು ಶೈನ್ ಮಾಡುವಂತಿರಬೇಕು. ಫೇಸ್ ಪೌಡರ್‌ನಿಂದ ತೆಳುವಾದ ಟಚ್ ಕೊಡಿ.
ಐ ಮೇಕಪ್ : ಕಣ್ಣುಗಳಿಗೆ ಉತ್ತಮ ಲುಕ್ ಕೊಡಲು ಗ್ಲಿಟರಿ ಮತ್ತು ಮೆಟ್ಯಾಲಿಕ್ ಐ ಶ್ಯಾಡೋ ಹಚ್ಚಿ. ನಿಮ್ಮ ಕಣ್ಣುಗಳ ಅನುಸಾರವಾಗಿ ದಪ್ಪಗೆ ಅಥವಾ ತೆಳುವಾಗಿ ಕಲರ್‌ಫುಲ್ ಲೈನರ್ ಹಚ್ಚಿ. ಕಣ್ಣುಗಳ ವಾಟರ್ ಲೈನ್ ಏರಿಯಾದಲ್ಲಿ ಕಾಜಲ್ ಹಚ್ಚಿ. ನಂತರ ಕಣ್ಣುಗಳ ಮೇಲೆ ಕೊಂಚ ಗೋಲ್ಡ್, ಬ್ರಾಂಝ್ ಅಥವಾ ಗ್ರೇ ಮೆಟ್ಯಾಲಿಕ್‌ಹಚ್ಚಿ.
ಲಿಪ್ ಕಲರ್ : ಮ್ಯಾಟ್ ಕಲರ್‌ನ ಲಿಪ್‌ಸ್ಟಿಕ್ ಬದಲು ರೆಡ್ ವೈನ್ ಡೀಪ್ ಪಿಂಕ್ ಕಲರ್‌ನ ಲಿಪ್‌ಸ್ಟಿಕ್ ಹಚ್ಚಿ. ಬೆಳಗ್ಗೆ ಮತ್ತು ರಾತ್ರಿಯ ಮೇಕಪ್‌ಗಾಗಿ ಬೇರೆಬೇರೆ ಕಲರ್ ಉಪಯೋಗಿಸಿ. ಆದರೆ ಎರಡೂ ಸಮಯದಲ್ಲಿ ಶೈನ್ ಮತ್ತು ಗ್ಲಾಸ್‌ನ್ನು ಉಪಯೋಗಿಸಿ. ಹಗಲಿನಲ್ಲಿ ವೋವ್, ಪಿಂಕ್ ರೋಸ್ ಮತ್ತು ಲೈಟ್‌ಶೇಡ್ಸ್ ನ್ನೇ ಆರಿಸಿ.
ಚೀಕ್ಸ್ ಮೇಕಪ್ : ಕೆನ್ನೆಗಳ ಸೌಂದರ್ಯಕ್ಕಾಗಿ ಶೈನಿಂಗ್ ಇರುವ ಬ್ಲಶರ್ ಉಪಯೋಗಿಸಿ. ಪಿಂಕ್ ಶೈನಿಂಗ್ ಬ್ಲಶರ್ ಬೆಸ್ಟ್ ಆಗಿರುತ್ತದೆ. ನಾರ್ಮಲ್ ಬ್ಲಶರ್ ಹಚ್ಚಿ ಅದರ ಮೇಲೆ ಶೈನಿಂಗ್‌ನ 1 ಕೋಟ್ ಹಚ್ಚಿ.
ಹೇರ್ಸ್ಟೈಲ್
ಪಾರ್ಟಿ ಹೇರ್‌ಸ್ಟೈಲ್ ನಿಮ್ಮ ಸಂಪೂರ್ಣ ಲುಕ್‌ನ್ನು ವಿಶೇಷಗೊಳಿಸಬೇಕು. ಅದಕ್ಕಾಗಿ ಸೈಡ್‌ನಲ್ಲಿ ಬೈತಲೆ ತೆಗೆದು ಹಿಂದಿನ ಟಾಪ್‌ನ ಕೂದಲಿನಿಂದ ಒಂದು ಪೋನಿ ಮಾಡಿ. ಕೆಳಗಿನ ಕೂದಲನ್ನು ಬಿಟ್ಟು ಒಂದು ಕುಚ್ಚು ತೆಗೆದುಕೊಡು ರಬ್ಬರ್ ಬ್ಯಾಂಡ್‌ನ್ನು ಚೆನ್ನಾಗಿ ಕವರ್ ಮಾಡಿ. ನಂತರ ಫ್ರಂಟ್ ಕೂದಲನ್ನು ಬ್ಯಾಕ್ ಕೂಂಬಿಂಗ್ ಮಾಡಿ ಮತ್ತು ಪಫ್ ಮಾಡುತ್ತಾ ಪೋನಿಯ ಬಳಿಯಲ್ಲೇ ಪಿನ್‌ನಿಂದ ಸೆಟ್ ಮಾಡಿ. ನಂತರ ಮುಂದಿನಿಂದ ಕೂದಲಿನ 1-1 ಕುಚ್ಚು ತೆಗೆದುಕೊಂಡು ಟ್ವಿಸ್ಟ್ ಮಾಡುತ್ತಾ ಸೆಟ್ ಮಾಡಿ. ಉಳಿದ ಕೂದಲನ್ನೂ ಹೀಗೆಯೇ ಸೆಟ್ ಮಾಡಿ ಮತ್ತು ಪಫ್‌ವರೆಗೆ ತಂದು ಸೆಟ್ ಮಾಡಿ. ನಂತರ ಹಿಂದಿನಿಂದ ಒಂದು ಸೆಕ್ಷನ್ ತೆಗೆದುಕೊಂಡು ಗಂಟು ಹಾಕಿ ಮತ್ತು ಸ್ಪ್ರೇ ಮಾಡಿ.
ಕಾಕ್‌ಟೇಲ್ ಮೇಕಪ್
ಫೇಸ್‌ನ್ನು ಕ್ಲೀನ್ ಮಾಡಿ. ಕ್ರೈಲಾನ್‌ನ ಐವರಿ ಶೇಡ್ ಹಚ್ಚಿ. ಇದು ಸಾಕಷ್ಟು ಥಿನ್ ಬೇಸ್ ಆಗಿದೆ. ಇದನ್ನು ಬ್ರಶ್‌ನಿಂದ ಗುಂಡಗೆ ತಿರುಗಿಸುತ್ತಾ ಹಚ್ಚಿ. ನಂತರ ಒದ್ದೆಯಾದ ಸ್ಪಾಂಜ್ ತೆಗೆದುಕೊಂಡು ಮುಖದ ಮೇಲೆ ತಪತಪನೆ ಒತ್ತಿ. ಇದನ್ನು ಟೆಂಪಲ್ ಏರಿಯಾದಲ್ಲಿ ಹೆಚ್ಚು ಉಪಯೋಗಿಸಿ. ಕ್ರೈಲಾನ್‌ನ 070 ಪ್ಯೂರ್ ವೈಟ್ ಕ್ರೀಂ ಏಸ್‌ನ್ನು ಚೀಕ್ಸ್ ಮೇಲೆ ಬ್ರಶ್‌ನಿಂದ ಹಚ್ಚಿ. ಇದನ್ನು ಹೈಲೈಟಿಂಗ್ ಏರಿಯಾದಲ್ಲಿ ಅಂದರೆ ಫೋರ್‌ಹೆಡ್, ಚೀಕ್ಸ್ ಮತ್ತು ಚಿನ್ ಮೇಲೆ ಹಚ್ಚಿ. ಲೈಟ್ ಮತ್ತು ಪಿಂಕ್ ಟೋನ್‌ನ ಟ್ರಾನ್ಸ್ ಲೂಶನ್ ಪೌಡರ್‌ನ್ನು ಮಿಕ್ಸ್ ಮಾಡಿ ಪೌಡರ್ ಬ್ರಶ್‌ನಿಂದ ಫೇಸ್ ಮೇಲೆ ಹಚ್ಚಿ. ಫೇಸ್ ಟೋನರ್‌ನಿಂದ ಫೇಸ್ ಮೇಲೆ ಸ್ಪ್ರೇ ಮಾಡಿ. ಅದರಿಂದ ಮೇಕಪ್ ವಾಟರ್ ಪ್ರೂಫ್ ಆಗುತ್ತದೆ. ಅದನ್ನು ಪಫ್‌ನಿಂದ ಒಣಗಿಸಿ. ಬೇಸ್ ಪೂರ್ತಿಯಾದ ನಂತರ ಐ ಮೇಕಪ್ ಶುರು ಮಾಡಿ.
ಐ ಮೇಕಪ್ : ಬ್ರಶ್ ಸಹಾಯದಿಂದ ಫಿರೋಜಿ ಕಲರ್‌ನ ಐ ಶ್ಯಾಡೋ ಕಣ್ಣಿನ ಒಂದು ಕೊನೆಯಿಂದ ಹಚ್ಚಲು ಶುರು ಮಾಡಿ. ನಂತರ ಐ ಸಾಕೆಟ್‌ನ ಮಧ್ಯಭಾಗ ಬಿಟ್ಟು ಮಿಕ್ಕ ಏರಿಯಾದಲ್ಲಿ ಪರ್ಪಲ್ ಐ ಶ್ಯಾಡೋ ಹಚ್ಚಿ. ನಂತರ ಐ ಲ್ಯಾಶಸ್ ಮೇಲೆ ಮಸ್ಕರಾ ಹಚ್ಚಿ. ನಂತರ ಮ್ಯಾಕ್‌ನ ಕಾಜಲ್ ಹಚ್ಚಿ. ಬ್ಲೆಂಡಿಂಗ್ ಬ್ರಶ್‌ನಿಂದ ಐ ಬ್ರೋಸ್ ಮೇಲೆ ಬ್ಲ್ಯಾಕ್ ಶ್ಯಾಡೋನಿಂದ ಹೈಲೈಟಿಂಗ್ ಮಾಡಿ. ಮೇಕಪ್ ಸ್ಟುಡಿಯೋದ ಲೈನರ್ ಬ್ರಶ್‌ನಿಂದ ಹಚ್ಚಿ. ಸೀಲರ್‌ನಲ್ಲಿ ಬ್ರಶ್‌ನ್ನು ಡಿಪ್ ಮಾಡಿ ಐ ಶ್ಯಾಡೋ ಮಿಡಲ್‌ನಿಂದ ಬ್ಲ್ಯಾಕ್ ಶ್ಯಾಡೋ ತೆಗೆದುಕೊಳ್ಳಿ. ಅದನ್ನು ಕಣ್ಣುಗಳ ಹೊರಗಿನ ಮೂಲೆಗಳಲ್ಲಿ ಹಚ್ಚಿ. ನಂತರ ಫೈನ್ ಬ್ರಶ್‌ನಿಂದ ಹೆಚ್ಚುವರಿ ಪ್ರಾಡಕ್ಟ್ ನ್ನು ತೆಗೆಯಿರಿ. ಐಸ್‌ನ ಕೆಳಗೆ ವಾಟರ್ ಲೈನ್ ಏರಿಯಾದ ಹೊರಗೆ ತೆಳುವಾದ ಬ್ರಶ್‌ನಿಂದ ಫಿರೋಜಿ ಕಲರ್‌ನ ಲೈನರ್ ಹಚ್ಚಿ.
ಈಗ ಕಣ್ಣುಗಳ ಮೇಲೆ ನ್ಯೂಟ್ರಲ್ ಶಿಮರ್ ಹಚ್ಚಿ. ಇದನ್ನು ಜೆಲ್‌ಹಚ್ಚಿದ ನಂತರ ಹಚ್ಚಿ. ನಂತರ ಐ ಲ್ಯಾಶಸ್ ಮೇಲೆ ಮಸ್ಕರಾದ 2 ಕೋಟ್ ಹಚ್ಚಿ.
ಲಿಪ್ ಮೇಕಪ್ : ಲಿಪ್ ಕಲರ್‌ನ ಅನೇಕ ಶೇಡ್ಸ್ ಸೇರಿಸಿಯೂ ನ್ಯೂ ಶೇಡ್ಸ್ ಮಾಡಬಹುದು. ಮೊದಲು ಲಿಪ್ ಮೇಲೆ ಬೇಸ್ ಕಲರ್ ಹಚ್ಚಿ, ನಂತರ ಯಾವುದಾದರೂ ಬ್ರೈಟ್ ಕಲರ್‌ನ ಲಿಪ್‌ಸ್ಟಿಕ್ ಹಚ್ಚಿ. ಅದರ ಮೇಲೆ ಸಿಲ್ವರ್ ಕಲರ್‌ನ ವಿಓವಿ ಪೌಡರ್ ಹಾಕಿ. ಅದರಿಂದ ಲಿಪ್ಸ್ ಸ್ಪೆಷಲ್ ಹೈಲೈಟ್ ಆಗುತ್ತವೆ. ಮೇಕಪ್ ಸ್ಟುಡಿಯೋ ಕಿಟ್‌ನಿಂದ ಬ್ಲಶರ್ ತೆಗೆದುಕೊಂಡು ಚೀಕ್ಸ್ ಬೋನ್ ಮೇಲೆ ಹಚ್ಚಿ.
ಹೇರ್ಸ್ಟೈಲ್
ಕಾಕ್‌ಟೇಲ್ ಲುಕ್‌ನೊಂದಿಗೆ ಹೇರ್‌ಸ್ಟೈಲ್ ಕೂಡ ಡಿಫರೆಂಟ್ ಆಗಿರಬೇಕು. ಕೂದಲನ್ನು ಚೆನ್ನಾಗಿ ಬಾಚಿ ಲೆಫ್ಟ್ ಸೈಡ್‌ನಲ್ಲಿ `ವಿ’ ಶೇಪ್‌ನಲ್ಲಿ ಕೊಂಚ ಕೂದಲು ತೆಗೆದುಕೊಂಡು ಪೋನಿ ಮಾಡಿ ಮತ್ತೆ ಸ್ಪ್ರೇ ಮಾಡಿ. ಇನ್ನೊಂದು ಕಡೆಯೂ ಹಾಗೆಯೇ ಪೋನಿ ಮಾಡಿ ಮತ್ತು ಸ್ಪ್ರೇ ಮಾಡಿ. ಈಗ ಉಳಿದಿರುವ ಕೂದಲಿನ ಸೆಂಟರ್‌ನಲ್ಲಿ ರಬ್ಬರ್ ಬ್ಯಾಂಡ್‌ನಿಂದ ಹೈ ಪೋನಿ ಮಾಡಿ. ಪೋನಿಯ ಕೂದಲನ್ನು ಚೆನ್ನಾಗಿ ಬಾಚಿ ರಬ್ಬರ್ ಬ್ಯಾಂಡ್‌ನ ಮೂಲೆಯಲ್ಲಿ ಬಾಲ್ ಪಿನ್ ಸಿಕ್ಕಿಸಿ. ಸೆಂಟರ್ ಪೋನಿಯಲ್ಲಿ ಒಂದು ಕುಚ್ಚು ಎತ್ತಿಕೊಂಡು ಬ್ಯಾಕ್ ಕೂಂಬಿಂಗ್ ಮಾಡಿ ಸ್ಪ್ರೇ ಮಾಡಿ. ಹೀಗೆಯೇ 3 ಪೋನಿಗಳ 3 ಕುಚ್ಚು ಮಾಡಿ ಅವಕ್ಕೆ ಸ್ಪ್ರೇ ಮಾಡಿ. ಅವನ್ನು ಒಳಗಿನ ಕಡೆಗೆ ರೋಲ್ ಮಾಡಿ ಮತ್ತು ಪಿನ್‌ನಿಂದ ಸೆಟ್ ಮಾಡಿ. 2 ಅಕ್ಕಪಕ್ಕ ಮತ್ತು ಮಧ್ಯದಲ್ಲಿ ರೈಟ್ ಸೈಡ್‌ನ ಒಂದು ತೆಳು ಜುಟ್ಟು ತೆಗೆದು ಅದನ್ನು ಕರ್ಲ್ ಮೆಶಿನ್‌ನಿಂದ ಕರ್ಲ್ ಮಾಡಿ ಮತ್ತು ಇಡೀ ಕೂದಲನ್ನು ಸ್ಟ್ರೇಟ್ ಮಾಡಿ.
ಈಗ ಕೂದಲನ್ನು ಅಲಂಕರಿಸಲು ಆರ್ಟಿಫಿಶಿಯಲ್ ಫ್ಲವರ್ ಸಿಕ್ಕಿಸಿ ಮತ್ತು ಪ್ರತಿ ರೋಲ್‌ನ ಮೇಲೆ ಸ್ಪಾರ್ಕ್ಸ್ ಸಿಕ್ಕಿಸಿ.
ಮಿನರಲ್ ಮೇಕಪ್
ಇದನ್ನು ನ್ಯೂಡ್ ಮೇಕಪ್ ಎಂದೂ ಹೇಳುತ್ತಾರೆ. ಈ ಮೇಕಪ್‌ಗೆ ಮೊದಲ ಫೇಸ್‌ನ್ನು ಸಿಟಿಎಂ (ಕ್ಲೆನ್ಸಿಂಗ್, ಟೋನಿಂಗ್, ಮಾಯಿಶ್ಚರೈಸಿಂಗ್) ಮಾಡಿ. ನಂತರ ಮುಖಕ್ಕೆ ಪ್ರೈಮರ್ ಹಚ್ಚಿ. ಎಲ್ಲಾದರೂ ಹೋಗುತ್ತಿದ್ದರೆ ಶೈನಿಂಗ್ ಇರುವ ಸ್ಟ್ರೋಕ್ ಕ್ರೀಂ ಪ್ರೈಮರ್‌ನ್ನು ಉಪಯೋಗಿಸಿ. ಅದನ್ನು ಬೆರಳುಗಳಿಂದಲೇ ಹಚ್ಚಿ. ಒಂದು ವೇಳೆ ಡಾರ್ಕ್ ಸರ್ಕಲ್ಸ್ ಇದ್ದರೆ ಕನ್ಸೀಲರ್‌ಉಪಯೋಗಿಸಿ. ಹೆಚ್ಚು ಡೀಪ್ ಡಾರ್ಕ್ ಸರ್ಕಲ್ಸ್ ಗಾಗಿ ಆರೆಂಜ್ ಕನ್ಸೀಲರ್‌ನ್ನು ಮೊದಲು ಅಂಡರ್ ಐಸ್ ನಂತರ ಫೋರ್‌ಹೆಡ್ ಮೇಲೆ ಹಚ್ಚಿ ನಂತರ ಇದರ ಮೇಲೆ ಬೇಸ್ ಹಚ್ಚಿ. ಕ್ರೈಲಾನ್‌ನ ಬೇಸ್ 626 ಸಿ + ಬಿ ಯನ್ನು ಮಿಕ್ಸ್ ಮಾಡಿ ಹಚ್ಚಿ. ಅದರಿಂದ ಸ್ಕಿನ್ ಟೋನ್ ಉತ್ತಮವಾಗಿರುತ್ತದೆ. ಲ್ಯಾಕ್ಮೆಯ ಕ್ರೀಮ್ ಬೇಸ್ ಬ್ಲಶ್ ಚೀಕ್ಸ್ ಬೋನ್ ಮೇಲೆ ಹಚ್ಚಿ. ಇದನ್ನು ಬೆರಳುಗಳಿಂದ ತಪತಪನೆ ಹಚ್ಚಿ. ಹೆಚ್ಚು ಫೇರ್ ಲುಕ್ ಕೊಡಬೇಕಿದ್ದರೆ ಡಿಯೋನ ಫೌಂಡೇಶನ್ ಬ್ರಶ್‌ನಿಂದ ಹಚ್ಚಿ. ಈಗ ಕ್ರೋೈನ್‌ನ ಪಿ5 ಡರ್ಮಾ ಲೂಸ್ ಪೌಡರ್ ಹಚ್ಚಿ. ಚಿನ್‌ನಿಂದ ಶುರು ಮಾಡಿ ತಪತಪನೆ ಹಚ್ಚಿ ಮೇಲಿನವರೆಗೆ ಹೋಗಿ. ಎಕ್ಸ್ ಟ್ರಾ ಪೌಡರ್‌ನ್ನು ಬ್ರಶ್‌ನಿಂದ ತೆಗೆದು ಡರ್ಮಾ ಫಿಕ್ಸರ್‌ನಿಂದ ಬೇಸ್‌ನ್ನು ಲಾಕ್ ಮಾಡಿ.
ಐ ಮೇಕಪ್ : ಎಲ್ಲಕ್ಕೂ ಮೊದಲು ಕಣ್ಣುಗಳ ಮೇಲೆ ಲೂಸ್ ಪೌಡರ್ ಹಚ್ಚಿ. ಕ್ರೈಲಾನ್‌ನ ರಾಂಬೋ ಶ್ಯಾಡೋನಲ್ಲಿ ಗೋಲ್ಡನ್ ಶ್ಯಾಡೋವನ್ನು ಬೆರಳು ಅಥವಾ ಬ್ರಶ್‌ನಿಂದ ಹಚ್ಚಿ. ಐ ಬ್ರೋಸ್‌ನ ಕೆಳಗೆ ಗೋಲ್ಡ್ ನಲ್ಲಿ ಸಿಲ್ವರ್ ಹೈಲೈಟರ್ ಮಿಕ್ಸ್ ಮಾಡಿ ಹಚ್ಚಿ. ಐ ಪೆನ್ಸಿಲ್‌ನಿಂದ ಲೈನರ್ ಹಚ್ಚಿ. ಇದನ್ನು ಕಣ್ಣುಗಳಿಗೆ ಅನುಸಾರವಾಗಿ ಮುಂದಿನಿಂದ ತೆಳುವಾಗಿ, ಹಿಂದಿನಿಂದ ದಪ್ಪನಾಗಿ ಹಚ್ಚಿ ಐ ಬ್ರೋಸ್‌ಗೆ ಪೆನ್ಸಿಲ್‌ನಿಂದ ಶೇಪ್ ಕೊಡಿ. ವಾಟರ್ ಲೈನ್ ಏರಿಯಾದಲ್ಲಿ ಕಾಜಲ್ ಹಚ್ಚಿ. ನಂತರ ಐ ಲ್ಯಾಶಸ್ ಮೇಲೆ ಮಸ್ಕರಾದ 2 ಕೋಟ್ ಹಚ್ಚಿ. ಈಗ ಬ್ರೌನ್ ಬೇಸ್‌ನಿಂದ ನೋಸ್‌ಗೆ ತೆಳುವಾಗಿ ಕಾಂಟೂರಿಂಗ್ ಮಾಡಿ. ಇದರಿಂದ ನೋಸ್ ಶಾರ್ಪ್ ಆಗುತ್ತದೆ.
ಹೇರ್ಸ್ಟೈಲ್
ಎಲ್ಲ ಕೂದಲನ್ನು ಒನ್‌ಸೈಡ್ ಮಾಡಿ ಬ್ಯಾಕ್ ಕೂಂಬಿಂಗ್ ಮಾಡಿ. ನಂತರ ಸೈಡ್ ಪೋನಿ ಮಾಡಿ. ನಂತರ ಕರ್ಲ್ ರಾಡ್‌ನಿಂದ ಪೋನಿಯ ಕೂದಲಿನ 1-1 ಜುಟ್ಟು ತೆಗೆದುಕೊಂಡು ಕರ್ಲ್ ಮಾಡಿ. ನಂತರ ಕರ್ಲ್ ಮಾಡಿರುವ ಕೂದಲನ್ನು ಟೆ್ ಕೋಂಬ್‌ನ ಸಹಾಯದಿಂದ ಪೋನಿಯಲ್ಲಿ ಬಾಬ್‌ಪಿನ್‌ನಿಂದ ಸೆಟ್ ಮಾಡಿ. ಇದು ಒಂದು ಫಂಕಿ ಜಡೆ ಆಗುತ್ತದೆ. ಹೀಗೆಯೇ ಬಾಕಿ ಇರುವ ಕರ್ಲ್ ಮಾಡಿದ ಜಡೆಗಳನ್ನು ಹಾಕಿ. ಬೇಕಾದರೆ ಅದನ್ನು ತೆರೆದಂತೆಯೇ ಬಿಡಬಹುದು. ಎರಡರ ಲುಕ್ ಉತ್ತಮವಾಗಿರುತ್ತದೆ. ಇದನ್ನು ಮ್ಯಾಚಿಂಗ್ ಆ್ಯಕ್ಸೆಸರೀಸ್‌ಗಳಿಂದ ಅಲಂಕರಿಸಿ.
ಲಿಪ್ಸ್ ಮೇಕಪ್ : ತುಟಿಗಳನ್ನು ಕ್ಲೀನ್ ಮಾಡಿ ಔಟ್‌ಲೈನ್ ಮಾಡಿ. ಅದನ್ನು ಬ್ರಶ್‌ನ ಸಹಾಯದಿಂದ ಮ್ಯಾಕ್‌ನ ಹಾಟ್ ಪಿಂಕ್ ಲಿಪ್‌ಸ್ಟಿಕ್ ಫಿಲ್‌ಮಾಡಿ. ಇದರ ಮೇಲೆ ಲಿಪ್ ಕೋಟ್ ಸೀಲರ್ ಅಗತ್ಯವಾಗಿ ಹಚ್ಚಿ. ಮೇಕಪ್ ಫಿಕ್ಸ್ ಮಾಡಲು ಇಡೀ ಫೇಸ್ ಮೇಲೆ ಡರ್ಮಾ ಫಿಕ್ಸರ್‌ಸ್ಪ್ರೇ ಮಾಡಿ.
– ರಾಧಾ ಮಾಧವ
ಎಚ್ಚರಿಕೆಗಳು
ಮೇಕಪ್‌ಗೆ ಮ್ಯಾಚ್ ಆಗುವ ನೇಲ್ ಪೇಂಟ್ ಗಮನದಲ್ಲಿಡಿ. ಒಂದು ವೇಳೆ ಪಾರ್ಟಿಗೆ ಹೋಗುತ್ತಿದ್ದರೆ ನೇಲ್ ಆರ್ಟ್ ಮಾಡಬಹುದು. ಅರ್ಧಂಬರ್ಧ ನೇಲ್ ಪೇಂಟ್ ಸೌಂದರ್ಯವನ್ನು ಕಡಿಮೆಗೊಳಿಸುತ್ತದೆ.
ಜಾಹೀರಾತುಗಳಿಂದ ಪ್ರಭಾವಿತರಾಗಿ ಎಂದೂ ಬ್ಯೂಟಿ ಪ್ರಾಡಕ್ಟ್ ಗಳನ್ನು ಖರೀದಿಸಬೇಡಿ. ಬ್ರ್ಯಾಂಡೆಡ್ ಪ್ರಾಡಕ್ಟ್ ಗಳನ್ನೇ ಖರೀದಿಸಿ.
ಬ್ಯೂಟಿ ಸ್ಟೋರ್‌ಗಳಿಂದಲೇ ಬ್ಯೂಟಿ ಪ್ರಾಡಕ್ಟ್ಸ್ ಖರೀದಿಸಿ. ಎಕ್ಸ್ ಪೈರಿ ಡೇಟ್‌ನ್ನು ಅಗತ್ಯವಾಗಿ ಚೆಕ್ ಮಾಡಿ.
ನಿಮ್ಮ ಸ್ಕಿನ್ ಟೋನ್, ಹೇರ್ ಟೈಪ್ ಮತ್ತು ನಿಮ್ಮ ಬಜೆಟ್ ಗಮನದಲ್ಲಿಟ್ಟುಕೊಂಡೇ ಬ್ಯೂಟಿ ಪ್ರಾಡಕ್ಟ್ ಗಳನ್ನು ಖರೀದಿಸಿ.
ಯಾವಾಗಲೂ ರಾತ್ರಿ ಮೇಕಪ್ ತೆಗೆದೇ ಮಲಗಿ.
ಉಪಯೋಗವಿಲ್ಲದ ಬ್ಯೂಟಿ ಪ್ರಾಡಕ್ಟ್ ಗಳನ್ನು ಖರೀದಿಸಬೇಡಿ. ಯಾವಾಗಲೂ ಫ್ರೆಶ್ ಸ್ಟಾಕ್‌ನ ಪ್ರಾಡಕ್ಟ್ ಗಳನ್ನು ಖರೀದಿಸಿ.
ಯಾವಾಗಲೂ ಮೇಕಪ್‌ನ್ನು ನಮ್ಮ ವಯಸ್ಸು ಹಾಗೂ ಸಮಯಕ್ಕೆ ತಕ್ಕಂತೆ ಮಾಡಿಕೊಳ್ಳಿ.
ಹೌಸ್ ವೈಫ್ ಮೇಕಪ್
ದಿನನಿತ್ಯದ ಮೇಕಪ್‌ನಲ್ಲಿ ಗೃಹಿಣಿಯರು ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಮಾಯಿಶ್ಚರೈಸರ್‌ನ್ನು ಚೆನ್ನಾಗಿ ಉಪಯೋಗಿಸಬೇಕು. ನಂತರ ಇದರ ಮೇಲೆ ತೆಳುವಾಗಿ ಪ್ಯಾನ್‌ಸ್ಟಿಕ್ ಬೇಸ್‌ನ ಟಚ್ ಕೊಟ್ಟು ಕಾಂಪ್ಯಾಕ್ಟ್ ಹಚ್ಚಿ. ಬ್ಲ್ಯಾಕ್ ಅಥವಾ ಬ್ರೌನ್ ಐ ಲೈನರ್ ಅಥವಾ ಬರೀ ಕಾಜಲ್ ಕೂಡ ಹಾಕಬಹುದು. ಗೃಹಿಣಿಯರಿಗೆ ತೆಳುವಾದ ಲಿಪ್‌ಸ್ಟಿಕ್ ಅಥವಾ ಬರೀ ಗ್ಲಾಸ್ ಚೆನ್ನಾಗಿರುತ್ತದೆ. ಇದಲ್ಲದೆ ಹೇರ್‌ಸ್ಟೈಲ್ ಸಿಂಪಲ್ ಮತ್ತು ಸೋಬರ್ ಆಗಿರಬೇಕು. ಒಂದು ಕ್ಲಚ್ ಮತ್ತು ಬ್ಯಾಂಡ್ ಸಿಕ್ಕಿಸಿ ಕೂದಲನ್ನು ಕಟ್ಟಿ.