ನಮ್ಮ ಆಹಾರದಲ್ಲಿ ಹಣ್ಣು ತರಕಾರಿಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಇವುಗಳಿಂದ ನಮ್ಮ ದೇಹಕ್ಕೆ ವಿಟಮಿನ್‌ ಸಹಿತ ಪೌಷ್ಟಿಕ ಖನಿಜಗಳು ಸಿಗುತ್ತವೆ. ಇದು ನಮ್ಮ ದೇಹವನ್ನು ಆರೋಗ್ಯವಾಗಿಡಲು ಅತ್ಯಗತ್ಯ. ಪ್ರತಿ ಹಣ್ಣು ತರಕಾರಿ ಎಲ್ಲಾ ಸೀಸನ್‌ನಲ್ಲೂ ಸಿಗುವುದಿಲ್ಲ. ಆದ್ದರಿಂದ ಆಯಾ ಋತುವಿನಲ್ಲಿ ಲಭ್ಯವಿರುವ ತಾಜಾ ಹಣ್ಣು ತರಕಾರಿ ಬಳಸಿ ಆಗಾಗ ಜ್ಯಾಂ, ಜೆಲ್ಲಿ, ಉಪ್ಪಿನಕಾಯಿ, ಸಾಸ್‌, ಸ್ಕ್ವಾಶ್‌ಇತ್ಯಾದಿ ತಯಾರಿಸಿಕೊಳ್ಳಿ. ಅಡುಗೆ ಮಾಡುವಾಗ ಈ ಹಣ್ಣು ತರಕಾರಿಗಳ ರುಚಿ ಮತ್ತು ಗುಣಮಟ್ಟ ಹೆಚ್ಚು ಬಾಳಿಕೆ ಬರುವಂತೆ ಮಾಡಲು ಸಕ್ಕರೆ, ಉಪ್ಪು, ಎಣ್ಣೆ, ಮಸಾಲೆ, ವಿನಿಗರ್‌, ಕೆಮಿಕಲ್ಸ್ ಇತ್ಯಾದಿಗಳನ್ನು ಅತಿ ನಿರ್ದಿಷ್ಟ ಪ್ರಮಾಣದಲ್ಲಿ ಬಳಸಬೇಕು.

ಉಪ್ಪಿನಕಾಯಿ ತಯಾರಿಸಲು ಹುಳಿಯಾದ ಹಣ್ಣು ತರಕಾರಿಗಳಿಗೆ 15-20% ಮಾತ್ರ ಉಪ್ಪು ಬಳಸಬೇಕು. ಜ್ಯಾಂ ಇತ್ಯಾದಿಗಳಿಗೆ 70-80% ಸಕ್ಕರೆ ಬಳಸಬೇಕು. ವಿನಿಗರ್‌ನಿಂದ ಆಹಾರ ಪದಾರ್ಥಗಳನ್ನು ಹೆಚ್ಚು ಕಾಲ ಸುರಕ್ಷಿತವಾಗಿ ಇಡಬಹುದು. ಜ್ಯಾಂ, ಜೆಲ್ಲಿ, ಸಾಸ್‌ ಇತ್ಯಾದಿ ಸೋಡಿಯಂ ಬೆನ್‌ರೋಯೇಟ್‌ ಹಾಗೂ ಸೋಡಿಯಂ ಪೊಟ್ಯಾಶಿಯಂ ಮೆಟಾಬೈಸಲ್ಫೇಟ್‌ನ್ನು ಸಹ ಬಳಸಬೇಕು. ಉಪ್ಪಿನಕಾಯಿ, ಜ್ಯಾಂ, ಜೆಲ್ಲಿಗಳನ್ನು ತಯಾರಿಸುವಾಗ ಈ ವಿಷಯಗಳನ್ನು  ನೆನೆಪಿಡಿ.

ಹಣ್ಣು ತರಕಾರಿಗಳನ್ನು ಜ್ಯಾಂ, ಜೆಲ್ಲಿಗಳ ರೂಪದಲ್ಲಿ ಪ್ರಿಸರ್ವ್ ಮಾಡಿ ಇಡಲು ಸೂಕ್ತ ಸಮಯ ಎಂದರೆ, ಅವು ಧಾರಾಳವಾಗಿ ಹೆಚ್ಚಿನ ಪ್ರಮಾಣದಲ್ಲಿ ಸಿಗಬೇಕು ಹಾಗೂ ಅಗ್ಗವಾಗಿಯೂ ಇರಬೇಕು.

ಜ್ಯಾಂ, ಜೆಲ್ಲಿ, ಮುರಬ್ಬಾ ತಯಾರಿಸಲು ಅತಿ ಉನ್ನತ ಮಟ್ಟದ ಮಸಾಲೆ, ಎಣ್ಣೆ, ಕೆಮಿಕಲ್ಸ್ ನ್ನೇ ಬಳಸಬೇಕು ಹಾಗೂ ಇದರ ಶುದ್ಧತೆ ಕುರಿತು ಡಬ್ಬಲ್ ಎಚ್ಚರ ವಹಿಸಬೇಕು.

ಜ್ಯಾಂ, ಜೆಲ್ಲಿ ಇತ್ಯಾದಿಗಳನ್ನು ಆ ವರ್ಷಕ್ಕೆ ಆಗುವಷ್ಟು ಮಾತ್ರವೇ ತಯಾರಿಸಿಡಿ. ಅದಕ್ಕಿಂತ ಹೆಚ್ಚು ದಿನ ಬಳಸಲು ಹೋದರೆ ಅದರ ರುಚಿಯೂ ಕೆಡುತ್ತದೆ, ಪೌಷ್ಟಿಕತೆಯೂ ಕೆಡುತ್ತದೆ.

ಸಕ್ಕರೆ, ಉಪ್ಪು, ವಿನಿಗರ್‌, ಎಣ್ಣೆ, ಮಸಾಲೆ ಇತ್ಯಾದಿಗಳನ್ನು ಸರಿಯಾದ ಪ್ರಮಾಣದಲ್ಲೇ ಬಳಸಬೇಕು.

ಕಬ್ಬಿಣದ ಚಾಕು ಅಥವಾ ಪಾತ್ರೆಗಳನ್ನು ಇದರ ತಯಾರಿಗೆ ಬಳಸಬೇಡಿ. ಇದರಿಂದ ಜ್ಯಾಂ ಇತ್ಯಾದಿ ಕಪ್ಪವಾಗುತ್ತವೆ.

ಜ್ಯಾಂ, ಜೆಲ್ಲಿ, ಉಪ್ಪಿನಕಾಯಿಗಳನ್ನು ಅತಿ ಪರಿಶುದ್ಧ ಬಾಟಲ್, ಜಾರ್‌ಗಳಲ್ಲೇ ಏರ್‌ಟೈಟ್‌ ಮಾಡಿ ಮುಚ್ಚಿಡಬೇಕು. ಫ್ರಿಜ್‌ನಲ್ಲಿರಿಸುವ ಅಗತ್ಯವಿಲ್ಲ.

ಇನ್ನು ಎಂದೂ ಒದ್ದೆ ಚಮಚ ಅಥವಾ ಕೈಯಲ್ಲಿ ಮುಟ್ಟದಿರಿ. ಒದ್ದೆ ಚಮಚ ಅದರಲ್ಲಿ ಹಾಕಿ ಬಿಟ್ಟರೆ ಫಂಗಸ್‌ ಬೆಳೆಯುತ್ತದೆ.

ಇದನ್ನು ತಯಾರಿಸಿದ ಮೇಲೆ ಅದರ ತುಸು ಭಾಗ ಹೊರತೆಗೆದು ಅಗತ್ಯ ರುಚಿ ನೋಡಿ, ಅದರ ಲೋಪದೋಷ ಗಮನಿಸಿದಾಗ ಮಾತ್ರ ಮತ್ತೊಮ್ಮೆ ಅದನ್ನು ತಯಾರಿಸುವಾಗ ಸುಧಾರಣೆ ಸಾಧ್ಯ.

ಸಾಧ್ಯವಾದ ಮಟ್ಟಿಗೂ ಇನ್ನು ತಯಾರಿಸಿದ ನಂತರ ಸಂಪೂರ್ಣ ಆರುವವರೆಗೂ ಗಾಳಿಗಿಟ್ಟು, ನಂತರ ಬಾಟಲಿಗೆ ತುಂಬಿಸುವುದೇ ಸರಿ.

ಬಿ.ಜ್ಯೋತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ