ನಾವು ಆಹಾರದಲ್ಲಿ ಗಿಡ ಮೂಲಿಕೆ ಅಥವಾ ಗ್ರೀನ್‌ ಹರ್ಬ್ಸ್ ನ್ನು ಬಳಸುತ್ತೇವೆ. ಇವು ನಮ್ಮ ಆಹಾರಕ್ಕೆ ಸುವಾಸನೆಯನ್ನಷ್ಟೇ ನೀಡುವುದಿಲ್ಲ. ಅದರ ರುಚಿಯನ್ನು ಕೂಡ ಹೆಚ್ಚಿಸುತ್ತವೆ. ಇದರ ಹೊರತಾಗಿ ಈ ಗಿಡಮೂಲಿಕೆಗಳು ಹಲವು ರೋಗಗಳಿಂದ ನಮಗೆ ರಕ್ಷಣೆಯನ್ನೂ ನೀಡುತ್ತವೆ. ಯಾವ ಗಿಡಮೂಲಿಕೆಗಳಿಂದ ನಮಗೆ ಯಾವ ರೀತಿಯ ವಾಭವಿದೆ ಎಂದು ತಿಳಿದುಕೊಳ್ಳುವ ಅಗತ್ಯವಿದೆ.

ಪಲಾವ್ ಎಲೆ

ಲವಂಗದೆಲೆ ಅಥವಾ ಪಲಾವ್ ‌ಎಲೆಯನ್ನು ನಾವು ಆಹಾರ ತಯಾರಿಕೆಯಲ್ಲಿ ಬಳಸುತ್ತೇವೆ. ಪಲಾವ್‌, ಬಿರಿಯಾನಿ, ಸೂಪ್‌, ಸೀಫುಡ್‌ಗಳಲ್ಲಿ ರುಚಿಗಾಗಿ ಇದನ್ನು ಬಳಸಲಾಗುತ್ತದೆ.

ಲವಂಗದೆಲೆಗಳನ್ನು ನೀರಿನಲ್ಲಿ ಕುದಿಸಿದ ಬಳಿಕ, ಆ ನೀರಿನಲ್ಲಿ ಬಟ್ಟೆ ಅದ್ದಿ ಎದೆಯ ಮೇಲೆ ಇಟ್ಟುಕೊಳ್ಳುವುದರಿಂದ ಚೆಸ್ಟ್ ಇನ್‌ಫೆಕ್ಷನ್‌, ಫ್ಲ್ಯೂ, ಶೀತ ನೆಗಡಿ, ಕ್ಷಯ ಮುಂತಾದ ರೋಗಗಳಿದ್ದವರಿಗೆ ಸಾಕಷ್ಟು ಹಿತ ಎನಿಸುತ್ತದೆ. ಏಟು ಬಿದ್ದಾಗ, ಉಳುಕಿದಾಗ, ಊತ ಬಂದಾಗ, ಬೆನ್ನು ನೋವಿದ್ದಾಗ ಲವಂಗದೆಲೆಯ ಎಣ್ಣೆಯಿಂದ ಮಸಾಜ್‌ ಮಾಡಿದರೆ ನೋವಿನಿಂದ ಸಾಕಷ್ಟು ನಿರಾಳತೆ ದೊರಕುತ್ತದೆ.

ಪಚ್ಚಕರ್ಪೂರದ ಎಲೆ

ಇದು ಅತ್ಯಂತ ಚಿಕ್ಕ ಗಾತ್ರದ ಗಿಡವಾಗಿರುತ್ತದೆ. ಇದರ ಎಲೆಗಳು ಉದ್ದ ಹಾಗೂ ಮೃದುವಾಗಿರುತ್ತವೆ. ವಿಜಿಟೆಬಲ್ ಸೂಪ್‌, ಸಾಸ್‌ ಮುಂತಾದವುಗಳಲ್ಲಿ ಇದನ್ನು ಉಪಯೋಗಿಸಲಾಗುತ್ತದೆ. ಟೊಮೇಟೊ ಹಾಗೂ ಚೀಸ್‌ ಸಲಾಡ್‌ ಹೊರತಾಗಿ ಚೀಸ್ ಆಮ್ಲೆಟ್‌ ಮತ್ತು ಪಿಜ್ಜಾದಲ್ಲೂ ಇದನ್ನು ಉಪಯೋಗಿಸಲಾಗುತ್ತದೆ. ರೋಸ್ಟೆಡ್‌ ಚಿಕನ್‌ ಹಾಗೂ ಫಿಶ್‌ಗೆ ಸುವಾಸನೆ ನೀಡಲು ಕೂಡ ಇದನ್ನು ಬಳಸಲಾಗುತ್ತದೆ. ಹಲವು ದೇಶಗಳಲ್ಲಿ ಪಿಜ್ಜಾವನ್ನು ಗಾರ್ನಿಶ್‌ ಮಾಡಲು ಕರ್ಪೂರದ ಎಲೆಗಳನ್ನು ಬಳಸಲಾಗುತ್ತದೆ.

ಹಸಿವು ಹೆಚ್ಚಿಸಲು ಇದರ ಎಲೆಗಳನ್ನು ಉಪಯೋಗಿಸಲಾಗುತ್ತದೆ. ಇತ್ತೀಚಿನ ಕೆಲವು ಸಂಶೋಧನೆಗಳು ಕರ್ಪೂರದ ಎಲೆಗಳ ಸೇವನೆ ನೆನಪಿನ ಶಕ್ತಿ ಹೆಚ್ಚಿಸಲು ಕಾರಣವಾಗುತ್ತವೆ ಎಂದು ಹೇಳಿವೆ. ಗಂಟಲು ಕಿರಿಕಿರಿ ಋತುಚಕ್ರವನ್ನು ನಿಯಮಿತಗೊಳಿಸುವಿಕೆ, ಒತ್ತಡ, ಖಿನ್ನತೆ ಕಡಿಮೆಗೊಳಿಸುವಲ್ಲೂ ಪಚನಕ್ರಿಯೆ ಸುಗಮಗೊಳಿಸಲು ಇದು ನೆರವಾಗುತ್ತದೆ  ಎಂದು ಹೇಳಲಾಗಿದೆ.

ಮುಟ್ಟಂತ್ಯದ ಕಾರಣ ಮಹಿಳೆಯರಿಗೆ ವಿಪರೀತ ಬೆವರು ಬರುತ್ತಿದ್ದರೆ, ಕರ್ಪೂರದ ಎಲೆ ಹಾಕಿ ಮಾಡಿದ ಚಹಾವನ್ನು ದಿನಕ್ಕೆ ಹಲವು ಸಲ ಕುಡಿಯುವುದರಿಂದ ಸಾಕಷ್ಟು ಒಳ್ಳೆಯ ಪರಿಣಾಮ ಕಂಡುಬರುತ್ತದೆ. ಇದರ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಉಸಿರಿನ ದುರ್ವಾಸನೆಗೆ ಸಂಬಂಧಪಟ್ಟ ತೊಂದರೆಗಳಲ್ಲದೆ ಕ್ಷಯ ಹಾಗೂ ಕಫದ ನಿವಾರಣೆ ಆಗುತ್ತದೆ.

ತುಳಸಿ

ಇದರ ಎಲೆಗಳು ರುಚಿಯಲ್ಲಿ ತೀಕ್ಷ್ಣವಾಗಿರುತ್ತವೆ. ಸಲಾಡ್‌, ಸೂಪ್‌, ಪಾಸ್ತಾ ಮತ್ತು ಸಾಸ್‌ನಲ್ಲಿ ಇದನ್ನು ಬಳಸಲಾಗುತ್ತದೆ.

ತುಳಸಿ ಸೇವನೆಯಿಂದ ಹಲವು ಆರೋಗ್ಯ ಲಾಭಗಳು ದೊರೆಯುತ್ತವೆ. ಹಸಿವನ್ನು ಹೆಚ್ಚಿಸುತ್ತದೆ, ಹೊಟ್ಟೆ ಕೆಟ್ಟಿದ್ದರೆ ಇದು ಸುಧಾರಣೆ ಮಾಡುವಲ್ಲಿ ನೆರವಾಗುತ್ತದೆ. ಚೀನಾದ ಔಷಧಿಗಳಲ್ಲಿ ಇದನ್ನು ಕಿಡ್ನಿಯ ತೊಂದರೆ ಹಾಗೂ ಒಸಡಿನ ಅಲ್ಸರ್‌ಗಾಗಿ ಬಳಸಲಾಗುತ್ತದೆ. ಉಸಿರಿನ ದುರ್ವಾಸನೆಗೆ ಸಂಬಂಧಪಟ್ಟ ತೊಂದರೆಗಳಲ್ಲದೆ ಕ್ಷಯ ಹಾಗೂ ಕಫದ ತೊಂದರೆಯಲ್ಲೂ ಇದು ಲಾಭಕರವಾಗಿದೆ.

ಪಾರ್ಸ್ಲೆ

ಇದು ಗಾಢ ಹಸಿರುವರ್ಣದ್ದಾಗಿದ್ದು, ಪ್ರತಿಯೊಂದು ಬಗೆಯ ಸಲಾಡ್‌ನಲ್ಲೂ ಉಪಯೋಗಿಸಲಾಗುತ್ತದೆ. ಸೂಪ್‌ ಗಾರ್ನಿಶ್‌ಮಾಡುವುದಿರಲಿ, ಫಿಶ್‌ ಕರಿಯನ್ನು ಗಾರ್ನಿಶ್‌ ಮಾಡುವುದಿರಲಿ ಇದನ್ನು ಬಳಸಲಾಗುತ್ತದೆ. ಇದನ್ನು ಹೆಚ್ಚು ಬೇಯಿಸಬಾರದು. ಏಕೆಂದರೆ ಇದು ತನ್ನ ಬಣ್ಣ ಹಾಗೂ ಸತ್ವ ಕಳೆದುಕೊಳ್ಳುತ್ತದೆ. ಪಾರ್ಸ್ಲೆಯ ತೈಲದಲ್ಲಿ ಔಷಧೀಯ ಗುಣವಿರುತ್ತದೆ.

ಮೂತ್ರನಾಳದ ಚಿಕಿತ್ಸೆಗಾಗಿ ಪಾರ್ಸ್ಲೆಯನ್ನು ಬಳಸಲಾಗುತ್ತದೆ. ಕಿಡ್ನಿ ಹಾಗೂ ಗಾಲ್‌ಬ್ಲ್ಯಾಡರ್‌ನ ಕಲ್ಲುಗಳಲ್ಲೂ ಇದರ ಬಳಕೆ ಉಪಯುಕ್ತವಾಗಿದೆ. ಋತುಚಕ್ರ ಅಸ್ತವ್ಯಸ್ತವಾಗಿದ್ದರೆ ಪಾರ್ಸ್ಲೆಯನ್ನು ಸೇವಿಸಬಹುದು.

ಟಾರಾಗನ್ಸಸ್ಯ

ಇದರ ಎಲೆಗಳು ಉದ್ದ ಹಾಗೂ ಆಕರ್ಷಕವಾಗಿರುತ್ತವೆ, ಸುವಾಸನೆಯಿಂದ ಕೂಡಿರುತ್ತದೆ. ಫ್ರೆಂಚ್‌ ಕುಕಿಂಗ್‌ನಲ್ಲಿ ಟಾರಾಗನ್‌ವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಫ್ರೆಂಚ್‌ ಸಾಸ್‌, ವಿನಿಗರ್‌, ಉಪ್ಪಿನಕಾಯಿಯ ಹೊರತಾಗಿ ರೋಸ್ಟೆಡ್‌ ಚಿಕನ್‌ನಲ್ಲೂ ಇದನ್ನು ವಿಶೇಷವಾಗಿ ಉಪಯೋಗಿಸಲಾಗುತ್ತದೆ. ಇದನ್ನು ಟೊಮೇಟೊ, ಮೊಟ್ಟೆ ಅಥವಾ ಚೀಸ್‌ನ ಡಿಷ್‌ನಲ್ಲೂ ಮಿಶ್ರಣ ಮಾಡಬಹುದಾಗಿದೆ.

ಹಲ್ಲುನೋವು, ಹೊಟ್ಟೆನೋವಿನಂತಹ ಸಂದರ್ಭಗಳಲ್ಲಿ ಟಾರಾಗನ್‌ನ ಬಳಕೆ ಉಪಯುಕ್ತವಾಗಿರುತ್ತದೆ. ಹಸಿವು ಹೆಚ್ಚಿಸಲು, ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಸಬ್ಬಸಿಗೆ ಸೊಪ್ಪು

ಇದರ ಸಸ್ಯ ಉದ್ದ ಹಾಗೂ ಕೊತ್ತಂಬರಿ ಸೊಪ್ಪಿನ ಹಾಗೆ ಆಕರ್ಷಕವಾಗಿರುತ್ತದೆ. ಬೀಟ್‌ರೂಟ್‌ ಸೂಪ್‌ನಲ್ಲಿ ಇದನ್ನು ಬಳಸಲಾಗುತ್ತದೆ. ಸಲಾಡ್‌ನ ಡ್ರೆಸ್ಸಿಂಗ್‌, ಸೀಫುಡ್‌, ಸ್ಯಾಂಡ್‌ವಿಚ್‌, ಸ್ಟಫ್ಡ್ ಚಿಕನ್‌ನಲ್ಲಿ ಸಬ್ಬಸಿಗೆ ಸೊಪ್ಪನ್ನು ಉಪಯೋಗಿಸುತ್ತಾರೆ. ಆಂಗ್ಲ ಭಾಷೆಯಲ್ಲಿ ಅದನ್ನು `ಡಿ್‌’ ಎಂದು ಕರೆಯಲಾಗುತ್ತದೆ.

ಹೊಟ್ಟೆಯ ತೊಂದರೆ ಮತ್ತು ಗ್ಯಾಸ್ಟ್ರೋ ಇಂಟೆಸ್ಟೈನ್ ‌ಡಿಸಾರ್ಡರ್‌ನಲ್ಲೂ ಸಬ್ಬಸಿಗೆ ಸೊಪ್ಪಿನ ಬಳಕೆ ಲಾಭಕರವಾಗಿರುತ್ತದೆ. ನಿದ್ರಾಹೀನತೆಗೂ ಇದನ್ನು ಪರಿಣಾಮಕಾರಿ ಔಷಧ ಎಂದು ಹೇಳಲಾಗುತ್ತದೆ. ಏಟು ತಗುಲಿದಾಗ ಇದು ಆ್ಯಂಟಿಸೆಪ್ಟಿಕ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಇದರ ಸೇವನೆಯಿಂದ ಬಿಕ್ಕಳಿಕೆ ನಿಲ್ಲುತ್ತದೆ.

ಲ್ಯಾವೆಂಡರ್

ಇದರ ಸಸ್ಯ ಅತ್ಯಂತ ಚಿಕ್ಕದಾಗಿರುತ್ತದೆ. ಅದರ ಟೊಂಗೆಗಳು ಉದ್ದವಾಗಿರುತ್ತವೆ. ಇದರಲ್ಲಿ ಪರ್ಪಲ್ ಬಣ್ಣದ ಹೂಗಳು ಅರಳುತ್ತವೆ. ಅವನ್ನೇ ಲ್ಯಾವೆಂಡರ್ ಹೂಗಳೆಂದು ಹೇಳಲಾಗುತ್ತದೆ. ಇದನ್ನು ಚಹಾ, ಕುಕೀಸ್‌ ಮತ್ತು ಸಿಹಿತಿಂಡಿಗಳಲ್ಲಿ ಬಳಸಲಾಗುತ್ತದೆ.

ಹಸಿವೆ ಆಗದಿರುವುದು, ನಿದ್ರಾಹೀನತೆ, ಸರ್ಕ್ಯುವೇಟರಿ ಡಿಸಾರ್ಡರ್‌ನಂತಹ ರೋಗಗಳಲ್ಲಿ ಇದರ ಬಳಕೆ ಉಪಯುಕ್ತ. ಅರೆತಲೆ ನೋವು ಹಾಗೂ ನಿದ್ರೆಗೆ ಸಂಬಂಧಿಸಿದ ರೋಗಗಳಲ್ಲಿ ಪ್ರಾಚೀನ ಕಾಲದಿಂದಲೂ ಇದನ್ನು ಬಳಸಲಾಗುತ್ತಿದೆ.

ಓರಿಗ್ಯಾನೊ (ಅಜವಾನ)

ಇದೊಂದು ಪುಟ್ಟ ಸಸ್ಯ. ದಕ್ಷಿಣ ಕರ್ನಾಟಕದಲ್ಲಿ ಓಮ ಕಾಳು ಉತ್ತರ ಕರ್ನಾಟಕ ಭಾಗದಲ್ಲಿ `ಅಜವಾನ’ ಎಂದು ಹೇಳಲಾಗುತ್ತದೆ. ಇದರ ಎಲೆಗಳು ಚಿಕ್ಕ ಹಾಗೂ ಗಾಢ ಹಸಿರು ವರ್ಣದ್ದಾಗಿರುತ್ತವೆ. ಆದರೆ ಇದರ ಕಾಳನ್ನು ಹೆಚ್ಚಾಗಿ ಶುಷ್ಕ ರೂಪದಲ್ಲಿಯೇ ಬಳಸಲಾಗುತ್ತದೆ. ವಾಸ್ತವದಲ್ಲಿ ಅದರ ತಾಜಾ ಹಸಿರು ಎಲೆಗಳೇ ಹೆಚ್ಚು ತೀಕ್ಷ್ಣವಾಗಿರುತ್ತವೆ. ಆಲಿವ್ ‌ಆಯಿಲ್‌, ಟೊಮೇಟೊ ಸಾಸ್‌, ಚೀಸ್‌ ಮುಂತಾದವುಗಳಿಗೆ ಸುವಾಸನೆ ಬರಲು ಇದನ್ನು ಬಳಸಲಾಗುತ್ತದೆ.

ಕಟ್ಟಿದ ಮೂಗು ಹಾಗೂ ಕಫದ ನಿವಾರಣೆಗೆ ಓಮದ ಕಾಳನ್ನು ಉಪಯೋಗಿಸಲಾಗುತ್ತದೆ. ಋತುಚಕ್ರದಲ್ಲಿ ಉಂಟಾಗುವ ನೋವಿಗೂ ಇದು ಲಾಭಕರವಾಗಿದೆ.

ರೋಸ್ಮೆರಿ

ಇದರ ಟೊಂಗೆಗಳು ಉದ್ದವಾಗಿದ್ದು, ಎಲೆಗಳು ಚಿಕ್ಕ ಗಾತ್ರದ ಚೂಪಾಗಿರುತ್ತವೆ. ಹರ್ಬಲ್ ವಿನಿಗರ್‌ ತಯಾರಿಸುವದಿದ್ದರೆ ಅಥವಾ ರೋಸ್ಟ್ ಮಾಡುವುದಾಗಿದ್ದರೆ ರೋಸ್‌ಮೆರಿಯ ಸುವಾಸನೆಯ ಹೊರತಾಗಿ ಅದಕ್ಕೆ ರುಚಿಯೇ ಬರದು. ಅಪಚನದ ಸಮಸ್ಯೆ ಇದ್ದಲ್ಲಿ ಅಥವಾ ಅರೆತಲೆನೋವಿನ ತೊಂದರೆಯಲ್ಲಿ ಇದು ಬಹಳ ಉಪಯುಕ್ತ.

ಪುದೀನಾ

ಇದರ ಎಲೆಗಳು ಗಾಢ ಹಸಿರು ವರ್ಣದ್ದಾಗಿರುತ್ತವೆ. ಸಿಹಿ ತಿಂಡಿ, ಫ್ರೂಟ್‌ ಸಲಾಡ್‌, ಚಹಾದ ಹೊರತಾಗಿ ಗಾರ್ನಿಶಿಂಗ್‌ಗಾಗಿ ಪುದೀನಾ ಬಳಸಲಾಗುತ್ತದೆ. ಇದನ್ನು ಅಪಚನ, ಶೀತ ನೆಗಡಿ, ಮೂಗು ಕಟ್ಟಿರುವ ಸಂದರ್ಭದಲ್ಲಿ ಉಪಯೋಗಿಸಲಾಗುತ್ತದೆ.

ಚರ್ವಿಲ್

ಇದು ಸಾಮಾನ್ಯ ಗಿಡಮೂಲಿಕೆ ಅಲ್ಲ. ಆದರೂ ಇದರ ಸ್ವಾದ ಅತ್ಯತ ರುಚಿಕರವಾಗಿರುತ್ತದೆ. ತ್ವಚೆಯ ಮೇಲಿನ ರಫ್‌ ನೆಸ್‌ದೂರಗೊಳಿಸಲು, ಆ್ಯಕ್ನೆ ಮತ್ತು ಎಕ್ಸಿಮಾಗಾಗಿ ಇದು ಉಪಯುಕ್ತವಾಗಿದೆ. ಸ್ಕಿನ್‌ ಟೋನರ್‌ ಮತ್ತು ಫ್ರೆಶನರ್‌ನ ರೂಪದಲ್ಲಿ ಇದನ್ನು ಬಳಸಿ.

ಶೈಲಜಾ ಪ್ರಭು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ