ಗಂಡ : ಇವತ್ತು ಹೊರಗೆ ಊಟ ಮಾಡೋಣ.

ಹೆಂಡತಿ : ಹಾಗಿದ್ರೆ ಇರಿ… ನಾನು ಬೇಗ 2 ನಿಮಿಷದಲ್ಲಿ ರೆಡಿ ಆಗಿ ಬರ್ತೀನಿ.

ಗಂಡ : ನಾನು ಹೇಳಿದ್ದು ಹೊರಗೆ ಅಂಗಳದಲ್ಲಿ ತಣ್ಣಗೆ ಗಾಳಿ ಬೀಸ್ತಿದೆ. ಅಲ್ಲಿ ಚಾಪೆ ಹಾಸ್ತೀನಿ, ಅಲ್ಲೇ ಊಟ ಮಾಡೋಣ ಅಂತ.

ಪತ್ನಿ ತನ್ನ ಪತಿಗೆ ಮೆಸೇಜ್‌ ಕಳುಹಿಸಿದಳು, ಐ ಆ್ಯಮ್ ಡೈಯಿಂಗ್‌.

ಪತಿ ಖುಷಿಯಿಂದ ಸಂಭ್ರಮಿಸುತ್ತಾ  ರಿಪ್ಲೈ ಕೊಟ್ಟ, ಸ್ವೀಟ್‌ ಹಾರ್ಟ್‌, ಹೌ ಕ್ಯಾನ್‌ ಐ ಲಿವ್ ‌ವಿತ್‌ಔಟ್‌ ಯೂ?

ಅವಳು ತಕ್ಷಣ ಜಬರಿಸಿದಳು, `ರೀ… ನಾನು ಹೇಳಿದ್ದು ಡೈ ಹಚ್ಚಿಕೊಳ್ತಾ ಇದ್ದೀನಿ,’ ಅಂತ.

ಪತಿ : ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ 4ಜಿ ಬಳಸಿದರು ಯಾರು?

ಪತ್ನಿ : ಬಹುಶಃ … ಅನಿಲ್ ‌ಕಪೂರ್‌ ಇರಬೇಕು. `ರಾಮ್ ಲಖನ್‌` ಚಿತ್ರದಲ್ಲಿ ಏಜಿ, ಓಜಿ, ಯೋಜಿ, ಸುನೋಜಿ ಅಂತ 4 ಸಲ….

ಪತ್ನಿ : ಏನ್ರಿ, ಕೇಳಿಸ್ಕೊಳ್ಳಿ. ನಮ್ಮ ಮಗ ಸಹ ಮುಂದೆ ನಿಮ್ಮ ತರಹ ಪುಢಾರಿ ಆಗ್ತಾನೇ ಅನ್ಸುತ್ತೆ.

ಪತಿ : ಅದನ್ನು ಹೇಗೆ ಹೇಳ್ತೀಯಾ?

ಪತ್ನಿ : ನೀವು ಸಂಸತ್ತಿನಿಂದ ಹೇಗೆ ಲಾಕ್‌ಔಟ್‌ ಮಾಡ್ತೀರೋ ಹಾಗೇ, ತನ್ನ ಪಾಠ ಅರ್ಥವಾಗದಿದ್ದಾಗೆಲ್ಲ ಅವನು ಕ್ಲಾಸಿನಿಂದ ಲಾಕ್‌ಔಟ್‌ ಮಾಡ್ತಿರ್ತಾನೆ ಅಂತ ಟೀಚರ್‌ ಶಾಲೆಯ ಡೈರೀಲಿ ಬರೆದು ಕಳಿಸಿದ್ದಾರೆ!

ಒಬ್ಬ ಮಹಿಳೆಯನ್ನು ಸಂದರ್ಶಿಸುತ್ತಾ ಒಬ್ಬ ವರದಿಗಾರ ಪ್ರಶ್ನೆಗಾರಂಭಿಸಿದ.

ಪತ್ರಕರ್ತ : ನಿಮ್ಮ ಹುಟ್ಟಿದ ದಿನಾಂಕ?

ಮಹಿಳೆ : 15ನೇ ಜೂನ್‌.

ಪತ್ರಕರ್ತ : ಮತ್ತೆ ವರ್ಷ….?

ಮಹಿಳೆ : ವರ್ಷ ವರ್ಷ ಅದೇ ದಿನ! ನಾನು ಹಾಗೆಲ್ಲ ಒಮ್ಮೆ ಕೊಟ್ಟ ಮಾಹಿತಿಯನ್ನು ಬದಲಾಯಿಸೋಲ್ಲ.

ನ್ಯಾಯಾಧೀಶರು : ನಿಮ್ಮ ಕುರಿತಾಗಿ ಏನು ಹೇಳಲು ಬಯಸುವಿರಿ?

ಆಪಾದಿತೆ : ಏನೆಂದು ಹೇಳಲಿ… ಏನೇನು ಹೇಳಿ? ನನ್ನ ಬಗ್ಗೆ ನಾನೇ ಹೊಗಳಿಕೊಳ್ಳಬಾರದು. ನನ್ನ ಬಾಲ್ಯದಿಂದ ಆರಂಭಿಸಿ ಇಲ್ಲಿಯವರೆಗಿನ ಎಲ್ಲಾ ವಿಷಯ ಹೇಳಬಯಸುತ್ತೇನೆ. ಆದರೆ ಕೋರ್ಟಿಗೆ ಅಷ್ಟೂ ಕೇಳಿಸಿಕೊಳ್ಳಲು ಧಾರಾಳ ಸಮಯ ಇರಬೇಕಷ್ಟೆ.

ಇಬ್ಬರು ಹೆಂಗಸರಿಗೆ 1-1 ವರ್ಷದ ಕಠಿಣ ಶಿಕ್ಷೆಯ ನಂತರ ಬಿಡುಗಡೆ ಆಯಿತು. 1 ವರ್ಷ ಜೈಲು ಶಿಕ್ಷೆ ಅನುಭವಿಸಿದ ನಂತರ ಅಗಲಬೇಕಾದಾಗ ಇಬ್ಬರೂ ಹೇಳಿಕೊಂಡರು, “ಬಿಡು, ಉಳಿದ ವಿಷಯವನ್ನು ವಿವರವಾಗಿ ಫೋನಿನಲ್ಲಿ ಮಾತನಾಡಿಕೊಳ್ಳೋಣ.”

ನೀರಜಾಳ ಬರ್ತ್‌ಡೇ ಬಂದಿತು. ಗಂಡ ರಂಗನನ್ನು ಏನಾದರೂ ಗಿಫ್ಟ್ ಕೊಡಿಸುವಂತೆ ಪೀಡಿಸುತ್ತಲೇ ಇದ್ದಳು. ಬರ್ತ್‌ಡೇ ದಿನ ಗಂಡ ಅವಳಿಗಾಗಿ ಹಾಡತೊಡಗಿದ.

ರಂಗ : ಬಂಗಾರದೊಡವೆ ಬೇಕೇ… ನೀರೇ… ಬಂಗಾರದೊಡವೆ ಬೇಕೇ….

ನೀರಜಾ : ಹೂಂ… ಹೂಂ… ಅದನ್ನೇ ಕೊಡಿಸಿ ಸಾಕು.

ರಂಗ : ಆಯ್ತಲ್ಲ ಗಿಫ್ಟ್ ಕೊಟ್ಟಿದ್ದು?

ನೀರಜಾ : ಎಲ್ಲಿ ಕೊಟ್ರಿ?

ರಂಗ : ಹಾಡನ್ನೇ ಗಿಫ್ಟ್ ಆಗಿ ಕೊಟ್ಟಿದ್ದು!

ಪತಿ : ಇವತ್ತು ಬೆಳಗ್ಗೆ ಎದ್ದಾಗ ಯಾರ ಮುಖ ನೋಡಿದೆನೋ ಗೊತ್ತಿಲ್ಲ. ಇಷ್ಟು ಹೊತ್ತಾದ್ರೂ ಕಾಫಿ ಇಲ್ಲ ತಿಂಡಿ ಇಲ್ಲ. ಸ್ವಲ್ಪ ಹೊತ್ತಿಗೆ ಮಧ್ಯಾಹ್ನದ ಊಟದ ಸಮಯ ಆಗಿಬಿಡುತ್ತೆ.

ಪತ್ನಿ : ಅವತ್ತಿನಿಂದ ಬಡ್ಕೊಂಡೆ, ಮಂಚದ ಪಕ್ಕದಲ್ಲೇ ಕನ್ನಡಿ ಇಟ್ಕೊಬೇಡಿ ಅಂತ.

ಪತಿ ಹೇಳುತ್ತಿದ್ದ, “ನನಗೆ ತುಂಬಾ ಕೆಲಸವಿದೆ. ನನ್ನ ಫೋನಿಗೆ ಯಾರೇ ಕಾಲ್ ‌ಮಾಡಿದರೂ ನಾನು ಮನೆಯಲ್ಲಿ ಇಲ್ಲ ಅಂತ ಹೇಳಿಬಿಡು,” ಪತ್ನಿ ಆಯ್ತು ಎಂದಳು.

ಸ್ವಲ್ಪ ಹೊತ್ತಾದ ಮೇಲೆ ಯಾರೋ ಫೋನ್‌ ಮಾಡಿದರು, “ಇವರು ಮನೆಯಲ್ಲೇ ಇದ್ದಾರೆ” ಎಂದು ಹೇಳಿ ಆಕೆ ಲೈನ್‌ ಕಟ್ ಮಾಡಿದಳು.

ಪತಿಗೆ ಮಹಾ ಸಿಟ್ಟು ಬಂತು, “ನಾನು ಇಲ್ಲ ಅಂತ ಹೇಳು ಅಂದ್ರೆ… ಇದ್ದಾರೆ ಅಂತಿದ್ದೀಯಲ್ಲ?”

“ಅದು ನನಗೂ ಗೊತ್ತು. ಈಗ ಫೋನ್‌ ಬಂದಿದ್ದು ನಿಮಗಲ್ಲ…. ನನಗೆ,” ಎಂದಳು ಆಕೆ ಶಾಂತಳಾಗಿ.

ಪತ್ನಿ : ಮದುವೆಗೆ ಮೊದಲು ನೀನು ನನ್ನನ್ನು ಬಹಳ ಪ್ರೀತಿಸುವುದಾಗಿ, ಮದುವೆ ನಂತರ ಬಹಳ ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳ್ತಿದ್ರಿ.

ಪತಿ : ಹೇಳ್ತಾ ಇದ್ದದ್ದು ನಿಜ… ಆದರೆ ನನ್ನ ಮದುವೆ ನಿನ್ನ ಜೊತೆಯೇ ನಡೆಯುತ್ತೆ ಅಂತ ಆಗ ನನಗೆ ಗೊತ್ತಿರಲಿಲ್ಲ, ಬಿಡು.

ಪತಿ : ಜೈಲಿನಲ್ಲಿ ವಾಸಿಸುವುದರಲ್ಲೂ ಒಂದು ಸುಖ ಇದೆ.

ಪತ್ನಿ : ಹೆಂಡತಿಯ ಕಾಟ ಇರಲ್ಲ ಅಂತಾನಾ?

ಪತಿ : ಓಹ್‌….. ಇದು ಎರಡನೇದು, ಥ್ಯಾಂಕ್ಸ್. ನಾನು ಹೇಳಿದ ಮೊದಲನೆಯದು, ಯಾರೂ ಅರ್ಧ ರಾತ್ರಿಯಲ್ಲಿ ಎಬ್ಬಿಸಿ `ಮುಂಬಾಗಿಲು ಹಾಕಿದೆಯೋ ಇಲ್ಲವೋ ನೋಡಿ,’ ಅಂತ ಡಿಸ್ಟರ್ಬ್‌ ಮಾಡಲ್ಲ.

ರೋಹನ್‌ : ನಿನ್ನನ್ನು ನೋಡಿ ಬಹಳ ದಿನಗಳಾಯಿತು. ಹೇಗಿದ್ದೀ ಗೆಳೆಯ?

ಮೋಹನ್‌ : ಮನೆಯಲ್ಲಿ ನನ್ನ ಮದುವೆಯ ವಿಷಯ ಶುರುವಾದಾಗ, ಎಲೆಕ್ಷನ್‌ ಟಿಕೆಟ್‌ ಸಿಕ್ಕಿದ್ದಷ್ಟೇ ಸಂತೋಷವಾಗಿದ್ದೆ. ನಂತರ ಹುಡುಗಿ ನೋಡಲು ಹೋದಾಗ ಪ್ರಚಾರದ ಕೆಲಸ ಬಹಳ ಭರದಿಂದ ಸಾಗಿದೆ ಅಂದುಕೊಂಡೆ. ಹುಡುಗಿ `ಹೂಂ’ ಅಂತ ಒಪ್ಪಿಕೊಂಡಾಗ ನಾನು ಎಂ.ಎಲ್.ಎ ಆದಷ್ಟೇ ಖುಷಿಪಟ್ಟೆ. ಮದುವೆಯಾದ ಮೊದಲ ವಾರದಲ್ಲಿ ಮುಖ್ಯಮಂತ್ರಿ ಆದಷ್ಟೆ ಖುಷಿಯಾಗಿದ್ದೆ. ಆದರೆ ಈಗ 1 ವರ್ಷ ಆದಮೇಲೆ…..

ರೋಹನ್‌ : 1 ವರ್ಷ ಆದ ಮೇಲೆ ಏನೀಗ?

ಮೋಹನ್‌ : ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ ಅಭ್ಯರ್ಥಿ ಆಗಿದ್ದೇನೆ…..

ರಾಮಪ್ಪ : ಬ್ಯಾಂಕನ್ನೇ ಲೂಟಿ ಹೊಡೆದಂಥ ನಿನ್ನಂಥ ಕಿಲಾಡಿ ಅದು ಹೇಗೆ ಪೊಲೀಸರ ಕೈಲಿ ಸಿಕ್ಕಿಬಿದ್ದೆ?

ಸೋಮಪ್ಪ : ಲೂಟಿ ಪ್ಲ್ಯಾನಿಂಗ್‌ ಸರಿಯಾಗೇ ಇತ್ತು. ಆದರೆ ಕೊನೆಯಲ್ಲಿ ಒಂದು ಸಣ್ಣ ತಪ್ಪು ಮಾಡಿದೆ. `ಕೌಂಟರ್‌ ಬಿಡುವ ಮುನ್ನ ನಿಮ್ಮ ಕ್ಯಾಶ್‌ ಸರಿಯಾಗಿದೆಯೇ ಎಂದು ಎಣಿಸಿಕೊಳ್ಳಿ’ ಅಂತ ಬೋರ್ಡ್‌ ಹಾಕಿದ್ದಾರಲ್ಲ ಅಂತ ಅಲ್ಲೇ ಎಣಿಸೋಕೆ ನಿಂತದ್ದೇ ತಪ್ಪಾಯ್ತು ನೋಡು…

ಈಗೆಲ್ಲ ಇರುವ ಕ್ರಿಕೆಟ್‌ ವಿಶ್ವ ಕಪ್‌, ಟಿ20, ಆಮೇಲೆ ಐಪಿಎಲ್ ನೋಡಿದಾಗಿನಿಂದ ಏರಿಸಿಕೊಂಡ ಕ್ರಿಕೆಟ್‌ ಜ್ವರದಿಂದ, ಮನೆಯಲ್ಲಿ ವಾಶಿಂಗ್‌ ಮೆಶೀನ್‌ ಇದ್ದರೂ ಹೀಗೇ ಮಾಡುತ್ತಾರೆ….

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ