“ಧನ್ಯವಾದಗಳು ಪಾವನಿ. ಮುಂದಿನ ವಾರ ಮತ್ತೆ ಸಿಗೋಣ,” ರೆಸ್ಟೋರೆಂಟ್‌ನ ರೆಗ್ಯುಲರ್‌ ಕಸ್ಟಮರ್‌ ಆಗಿದ್ದ ಗೌತಮ್ ಹೇಳಿದ. ಎಂದಿನ ಮುಗುಳ್ನಗುವಿನೊಂದಿಗೆ ಪಾವನಿ ಅವನನ್ನು ಬೀಳ್ಕೊಟ್ಟಳು.

ಪಾವನಿ ನಗರದ ಪ್ರಖ್ಯಾತ ಮಾಲ್‌ನಲ್ಲಿದ್ದ ರೆಸ್ಟೋರೆಂಟ್‌ ಒಂದರಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದಳು. ಯಾವಾಗಲೂ ಗಿಜಿಗುಡುತ್ತಿದ್ದ ರೆಸ್ಟೋರೆಂಟ್‌ನಲ್ಲಿ ಪಾವನಿಗೆ ಬಿಡುವು ಸಿಗುತ್ತಿದ್ದುದೇ ಅಪರೂಪವಾಗಿತ್ತು. ಇಂದೂ ಸಹ ಅವಳು ಬೇಗನೆ ಕೆಲಸಕ್ಕೆ ಬಂದಿದ್ದಳು.

ಗ್ರಾಹಕ ರಾಕೇಶ್‌ ರೆಸ್ಟೋರೆಂಟ್‌ಗೆ ಬಂದು ಬ್ರೇಕ್‌ಫಾಸ್ಟ್ ಗೆ ಆರ್ಡರ್‌ ನೀಡಿ ಕಾಯುತ್ತಿದ್ದ. ಆರ್ಡರ್‌ ತುಸು ವಿಳಂಬವಾದ್ದರಿಂದ ಅವನು ಆಗಾಗ ಗಡಿಯಾರದತ್ತ ನೋಡುತ್ತಿದ್ದ. ಇದನ್ನು ಗಮನಿಸಿದ ಪಾವನಿ ಅವನ ಬಳಿ ಬಂದು, “ವಿಳಂಬಕ್ಕಾಗಿ ಕ್ಷಮೆ ಇರಲಿ,” ಎಂದಳು.

“ಇಲ್ಲ. ನನಗೇನೂ ಅವಸರವಿಲ್ಲ. ನಿಮ್ಮ ಕಾಳಜಿಗಾಗಿ ಧನ್ಯವಾದಗಳು,” ಎಂದ ರಾಕೇಶ್‌.

ಅಂದಿನಿಂದ ಪ್ರತಿ ವಾರ ಅವನು ರೆಸ್ಟೋರೆಂಟ್‌ಗೆ ಬರಲು ಪ್ರಾರಂಭಿಸಿದ. ಆಗೆಲ್ಲಾ ಪಾವನಿಯೇ ಅವನನ್ನು ವಿಚಾರಿಸಿಕೊಳ್ಳುತ್ತಿದ್ದಳು. ಅವನು ಯಾವಾಗಲೂ ತನ್ನ ಬ್ರೇಕ್‌ಫಾಸ್ಟ್ ಗಾಗಿ ರೋಟಿ ಇಲ್ಲವೇ ನಾನ್‌ ಆರ್ಡರ್‌ ಮಾಡುತ್ತಿದ್ದ. ಆಗೆಲ್ಲ ಪಾವನಿಗೆ ಅವನಿಗೆ ಆ ದಿನದ ಸ್ಪೆಷಲ್‌ಗಳ ಬಗ್ಗೆ ಹೇಳುತ್ತಿದ್ದಳು. ಅವನು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದ.

ಕೆಲವೊಮ್ಮೆ ಸಂಜೆ ಸಮಯದಲ್ಲಿ ರೆಸ್ಟೋರೆಂಟ್‌ಗೆ ಬರುತ್ತಿದ್ದ ರಾಕೇಶ್‌ ಪಾವನಿಯೊಂದಿಗೆ ಅಲ್ಲೇ ಪಕ್ಕದಲ್ಲಿದ್ದ ಪಬ್‌ಗೆ ಹೋಗಿ ಅಲ್ಲಿನ ವಿನೋದದಲ್ಲಿ ಭಾಗವಹಿಸುತ್ತಿದ್ದ. ಹೀಗೆ ಪಾವನಿ ಮತ್ತು ರಾಕೇಶ್‌ ನಡುವೆ ಸರಳ ಸ್ನೇಹವೊಂದು ಬೆಳೆಯಿತು.

ಒಂದು ದಿನ ಇಬ್ಬರೂ ರೆಸ್ಟೋರೆಂಟ್‌ ಹೊರಗೆ ಭೇಟಿಯಾಗಲು ನಿರ್ಧರಿಸಿದ್ದರು. ಆದರೆ ರಾಕೇಶ್‌ ಕೊನೆಯ ಕ್ಷಣದಲ್ಲಿ ಭೇಟಿಯನ್ನು ರದ್ದು ಮಾಡಿದ. ಅಂದಿನಿಂದ ಕೆಲವು ವಾರಗಳ ಕಾಲ ಪಾವನಿಯನ್ನು ಭೇಟಿಯಾಗಲೇ ಇಲ್ಲ. ರೆಸ್ಟೋರೆಂಟ್‌ಗೂ ಬರಲಿಲ್ಲ.

ಒಮ್ಮೆ ಇದ್ದಕ್ಕಿದ್ದಂತೆ ರೆಸ್ಟೋರೆಂಟ್‌ಗೆ ಬಂದ ರಾಕೇಶ್‌ ರೋಟಿಗೆ ಬದಲಾಗಿ ಚೈನೀಸ್‌ ಫುಡ್‌ಗೆ ಆರ್ಡರ್‌ ಮಾಡಿದ. ನಂತರದಲ್ಲಿ ರಾಕೇಶ್‌ ಯಾವಾಗಲೂ ಚೈನೀಸ್‌ ಫುಡ್‌ಗೆ ಆರ್ಡರ್‌ ಮಾಡುತ್ತಿದ್ದ. ಮಾತ್ರವಲ್ಲದೆ ಪಾವನಿಯೊಂದಿಗೆ ಮೊದಲಿನಂತೆ ಸರಳ ಸ್ನೇಹದಿಂದ ಮಾತನಾಡುವುದನ್ನೂ ನಿಲ್ಲಿಸಿಬಿಟ್ಟ.

ಅಂದು ಪಾವನಿ ಉಪಾಹಾರಕ್ಕೆಂದು ಕುಳಿತಿದ್ದಳು. ಅದೇ ಸಮಯಕ್ಕೆ ಸರಿಯಾಗಿ ರಾಕೇಶ್‌ ಸಹ ರೆಸ್ಟೋರೆಂಟ್‌ಗೆ ಬಂದು ಚೈನೀಸ್‌ ಪುಡ್‌ಗೆ ಆರ್ಡರ್‌ ಮಾಡಿ ಪಾವನಿ ಎದುರಿನ ಸೀಟಿನಲ್ಲಿ ಕುಳಿತ. “ನಿಮಗೆ ಚೈನೀಸ್‌ ಫುಡ್‌ ಇಷ್ಟವಾಗುವುದೇ…?” ಎಂದು ಪಾವನಿಯನ್ನು ಕೇಳಿದ.

“ತಿನ್ನುವುದಿಲ್ಲ ಎಂದೇನೂ ಇಲ್ಲ. ಆದರೆ ರೋಟಿ ತಿಂದಂತೆ ಆಗುವುದಿಲ್ಲ,” ಅವಳು ಉತ್ತರಿಸಿದಳು. ಅವನ್ನೊಮ್ಮೆ ತುಟಿ ಕೊಂಕಿಸಿ ನಕ್ಕ. ಆದರೆ ಅದನ್ನು ಅವಳ ಕಣ್ಣುಗಳು ಗುರುತಿಸಲಿಲ್ಲ. ಕೆಲವು ದಿನಗಳ ನಂತರ ಪುನಃ ಅವನು ರೋಟಿ ತಿನ್ನಲು ಆರಂಭಿಸಿದ್ದ.

“ಏಕೆ, ಚೈನೀಸ್‌ ಪುಡ್‌ ಬೇಸರಾಯಿತೆ?” ಪಾವನಿ ಕುಚೋದ್ಯವಾಗಿ ಕೇಳಿದಳು.

“ಇಲ್ಲ, ಚೈನೀಸ್‌ ಫುಡ್‌ ಮೆಚ್ಚುವ ಹುಡುಗಿ ದೂರವಾದಳು,”  ತಾನು `ಏಕಾಂಗಿ’ ಎನ್ನುವ ಭಾವ ಅವನ ದನಿಯಲ್ಲಿ ಇಣುಕುತ್ತಿತ್ತು. ಅರೆಕ್ಷಣ ಅವಳು ಅವನ ಕಣ್ಣುಗಳನ್ನು ನೋಡಿದಳು.

“ಇಂದು ನೀವು ಕೊಂಚ ಬಿಡುವಾಗಿದ್ದರೆ ಹೊರಗೆ ಕಾಫಿಗೆ ಹೋಗೋಣವೇ?” ಅವನೂ ಒಪ್ಪಿದ. ಇಬ್ಬರೂ ಕೆಫೆಗೆ ಹೋದರು. ಅವನು ತನ್ನ ಪರಿಚಯ ನೀಡುತ್ತಾ ಹೆಸರು ರಾಕೇಶ್‌, ನಗರದ ಸಾಫ್ಟ್ ಫೇರ್‌ ಸಂಸ್ಥೆಯೊಂದರಲ್ಲಿ ಮ್ಯಾನೇಜರ್‌. ಯಾವಾಗಲೂ ಚೈನೀಸ್‌ ಫುಡ್‌ ಮೆಚ್ಚುವ ಸಹೋದ್ಯೋಗಿ ತನು ಬಹಳ ಚೆಲುವೆ. ರಾಕೇಶ್‌ನೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಳು. ಆದರೆ ಯಾವ ಕಾರಣಕ್ಕೋ ಏನೋ ಅವರ ಈ ಮಧುರ ಸಂಬಂಧ ಹೆಚ್ಚು ದಿನ ಬಾಳಲಿಲ್ಲ, ಎಂದು ಚುರುಕಾಗಿ ವಿವರಿಸಿದ  ರಾಕೇಶ್‌ಕಾಫಿ ಬಿಲ್ಲನ್ನು ತಾನೇ ಪಾವತಿಸಿ ಪಾವನಿಯೊಂದಿಗೆ ಹೊರಬಂದ. ನಂತರದಲ್ಲಿ ಪಾವನಿ ಹಾಗೂ ರಾಕೇಶ್‌ ಇನ್ನಷ್ಟು ಹತ್ತಿರವಾದರು. ತಮ್ಮಿಬ್ಬರ ನಡುವಿನ ಈ ಅಪೂರ್ವ ಸ್ನೇಹ ಸಂಬಂಧದ ಕುರುಹಾಗಿ ರಾಕೇಶ್‌ ಗುಲಾಬಿ ಹೂವಿನ ಬೊಕೆಯನ್ನು ಪಾವನಿಗೆ ನೀಡಿದ.

ಮತ್ತೂ ಕೆಲವು ಸಮಯ ಕಳೆಯಿತು. ಒಮ್ಮೆ  ರಾಕೇಶ್‌ನೊಂದಿಗೆ ಹೊಸ ಹುಡುಗಿ ರೆಸ್ಟೋರೆಂಟ್‌ಗೆ ಬಂದಿದ್ದಳು. ಅಳ ಹೆಸರು ರುಚಿತಾ. ರಾಕೇಶ್‌ ಅವಳನ್ನೂ ಪಾವನಿಗೆ ಪರಿಚಯಿಸಿದ. ರುಚಿತಾ ಪಾವನಿಯೊಂದಿಗೆ ಸ್ನೇಹದಿಂದ ಮಾತನಾಡಿದಳು. ಆದರೆ ಪಾವನಿಗೆ ಮಾತ್ರ ರಾಕೇಶನೊಂದಿಗೆ ಸ್ನೇಹ ಸಂಬಂಧವನ್ನು ಮುಂದುವರಿಸುವುದು ಕಷ್ಟವಾಗತೊಡಗಿತು. `ರಾಕೇಶ್‌ಮೊದಲಿನಂತಿಲ್ಲ. ಅವನು ಬೇರೆ ಬೇರೆ ಹುಡುಗಿಯರೊಂದಿಗೆ ಸ್ನೇಹ ಬೆಳೆಸುತ್ತಿದ್ದಾನೆ. ತಾನು ಅವನಿಂದ ದೂರ ಸರಿಯಬೇಕು,’ ಎಂದು ನಿರ್ಧರಿಸಿದಳು. ಇದಕ್ಕಾಗಿ ಪಾವನಿ ತನ್ನ ಹಿರಿಯ ಮ್ಯಾನೇಜರನ್ನು ಭೇಟಿ ಮಾಡಿ ಬೇರೆ ವಿಭಾಗಕ್ಕೆ ತನ್ನನ್ನು ವರ್ಗಾವಣೆ ಮಾಡುವಂತೆ ವಿನಂತಿಸಿದಳು. ಇದರಿಂದಾಗಿ ಪಾವನಿ ರಾಕೇಶನನ್ನು ಪ್ರತಿ ದಿನ ಭೇಟಿಯಾಗುವುದು ತಪ್ಪಿತು.

ಇದಾಗಿ ಎರಡು ವಾರಗಳು ಉರುಳಿದವು. ಪಾವನಿ ರಾಕೇಶನ ಕಣ್ಣಿಗೇ ಬೀಳಲಿಲ್ಲ. ರಾಕೇಶ್‌ಗೆ ಮಾತ್ರ ರೆಸ್ಟೋರೆಂಟ್‌ಗೆ ಬಂದಾಗೆಲ್ಲ ಅವಳ ನೆನಪಾಗುತ್ತಿತ್ತು.

ಒಮ್ಮೆ ರುಚಿತಾ ಶಾಪಿಂಗ್‌ಗೆ ಬಂದಿದ್ದ ಸಂದರ್ಭದಲ್ಲಿ ಪಾವನಿಯ ಭೇಟಿಯಾಯಿತು. “ಹಾಯ್‌ ಪಾವನಿ….”

“ಓಹೋ ರುಚಿತಾ, ನಿನಗೇನಾದರೂ ಸಹಾಯ ಬೇಕೇ?”

“ರಾಕೇಶ್‌ಗೆ ಆ್ಯಕ್ಸಿಡೆಂಟ್‌ ಆಗಿದೆ. ಈಗಲಾದರೂ ನೀನು ಬರಬಹುದಲ್ಲಾ…..”

“ಆ್ಯಕ್ಸಿಡೆಂಟ್‌? ಈಗ ಹೇಗಿದ್ದಾರೆ….?”

“ಈಗ ಸ್ವಲ್ಪ ಸುಧಾರಿಸಿದ್ದಾರೆ. ಆದರೆ ಅವರೊಂದಿಗೆ ಯಾರೂ ಇರಲಿಲ್ಲ. ನಾನು ಸಹ ನಮ್ಮ ಮನೆಯಲ್ಲಿದ್ದೆ.”

“ನೀನು….?!”

“ಹೌದು, ಅವನು ನನ್ನ ಸೋದರನಾದರೂ ಅವನೊಂದಿಗೆ ಹೆಚ್ಚ ದಿನಗಳಿರಲು ಸಾಧ್ಯವಾಗಲಿಲ್ಲ.”

“ಸೋದರ….?!”

“ಏಕೆ…. ಅಚ್ಚರಿಯಾಯಿತೇ? ಹೌದು ರಾಕೇಶ್‌ ಸೋದರ ಸಂಬಂಧಿ…..” ಎನ್ನುತ್ತಾ ರುಚಿತಾ ಪಾವನಿಯನ್ನು ಕಾಫಿಗೆ ಕರೆದೊಯ್ದಳು. ಕಾಫಿ ಕುಡಿಯುತ್ತಿರುವಾಗ ರುಚಿತಾ, ರಾಕೇಶನ ಬಗ್ಗೆ ಇನ್ನಷ್ಟು ವಿವರ ನೀಡಿದಳು.

ಆ್ಯಕ್ಸಿಡೆಂಟ್‌ನಲ್ಲಿ ರಾಕೇಶ್‌ಗೆ ಕಾಲಿಗೆ ಪೆಟ್ಟಾಗಿದೆ. ಅವನಿಗೆ ತಂದೆತಾಯಿ ಪೋಷಕರಾರು ಜೊತೆಯಲ್ಲಿರದ ಕಾರಣ ರುಚಿತಾ ಅವನಿಗೆ ಹತ್ತಿರವಾಗಿದ್ದಳು. ರುಚಿತಾ ಕೆಲವು ದಿನಗಳ ಮಟ್ಟಿಗೆ ಊರಿಗೆ ಹೊರಟಿದ್ದಳು. ಆದರೆ ತಾನು ಸಂಪೂರ್ಣ ಗುಣವಾಗುವವರೆಗೂ ತನ್ನೊಬ್ಬನನ್ನೇ ಬಿಟ್ಟುಹೋಗದಂತೆ ರಾಕೇಶ್‌ ಅವಳಲ್ಲಿ ವಿನಂತಿಸಿಕೊಂಡಿದ್ದ. ಆತ ಒಳ್ಳೆಯ ವ್ಯಕ್ತಿ. ಹಿಂದೊಮ್ಮೆ ನಾನು ಮನೆ ಬದಲಾಯಿಸುವ ಸಮಯದಲ್ಲಿ ಮನೆಯ ಸಾಮಾನುಗಳನ್ನು ಸಾಗಿಸಲು ಅವನು ಬಹಳ ನೆರವು ನೀಡಿದ್ದ. ಅವನಿಗೆ ಆ್ಯಕ್ಸಿಡೆಂಟ್‌ ಆಗಿರುವ ಈ ಸಂದರ್ಭದಲ್ಲಿ ಅವನೊಡನೆ ಯಾರೂ ಇರಲಿಲ್ಲ ಎಂದರೆ…?

ರಾಕೇಶ್‌ ರುಚಿತಾಳನ್ನು ಎಷ್ಟರಮಟ್ಟಿಗೆ ಅವಲಂಬಿಸಿಕೊಂಡಿದ್ದಾನೆಂದು ಅವಳ ಮಾತುಗಳಿಂದ ಪಾವನಿಗೆ ಅರ್ಥವಾಗಿತ್ತು. “ನನಗೆ ತಿಳಿಸಿದ್ದರೆ ನಾನು ಬರುತ್ತಿರಲಿಲ್ಲವೇ…?”

“ನೀನು…?”

“ಹೌದು ನಾನು ಬರುತ್ತಿದ್ದೆ. ಏಕೆ ಅನುಮಾನವೇ?”

“ಇಲ್ಲ… ನಾನು ನಿನ್ನನ್ನು ಅರ್ಥ ಮಾಡಿಕೊಳ್ಳಬಲ್ಲೆ. ರಾಕೇಶ್‌ ಸಹ ನಿನ್ನನ್ನು ಆಗಾಗ ನೆನೆಸಿಕೊಳ್ಳುತ್ತಿದ್ದ.”

“ನನಗೂ ಹಾಗೇ ಅನ್ನಿಸಿದೆ,” ಎಂದಳು ಪಾವನಿ.

“ಇದೇ ಹದಿನೈದು ದಿನಗಳ ಹಿಂದೆ ನಾನು ಮತ್ತು ರಾಕೇಶ್‌ಶಾಪಿಂಗ್‌ಗೆ ಬಂದಿದ್ದೆವು. ಅಂದು ನೀನೂ ಸಹ ಅದೇ ಮಾಲ್‌‌ನಲ್ಲಿ ಇದ್ದೆ. ನಮಗೆ ಸಂಸ್ಥೆಯ ವತಿಯಿಂದ ಕೆಲವು ರಿಯಾಯಿತಿ ದೊರಕಿತ್ತು. ನಾವು ಬಿಲ್ ‌ಪಾವತಿಸುವ ಸಮಯದಲ್ಲಿ ನೀನೂ ಬಿಲ್ ಪಾತಿಸುತ್ತಿದ್ದೆ. ನೀನು ಖರೀದಿಸಿದ್ದ ಸಾಮಗ್ರಿಯಲ್ಲಿ ರೇಝರ್‌ ಸಹ ಇತ್ತು……” ಎಂದು ರುಚಿತಾ ತುಸು ಅನುಮಾನದಿಂದ ಮಾತು ನಿಲ್ಲಿಸಿದಳು.

“ಹೌದು. ಅದು ನನ್ನ ತಮ್ಮನಿಗೆಂದು ಖರೀದಿಸಿದ್ದೆ.”

“ಓಹೋ…! ಆದರೆ ನಾವು ನಿನಗೆ ಬೇರೊಬ್ಬ ಸ್ನೇಹಿತನಿದ್ದಾನೆಂದು ಅವನಿಗಾಗಿ ನೀನು ಅದನ್ನು ಖರೀದಿಸಿದ್ದೀ ಎಂದು ತಿಳಿದುಕೊಂಡೆವು. ಹೀಗಾಗಿ ನಾವು ನಿನ್ನನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ,” ಎಂದಳು ರುಚಿತಾ.

“ಓಹೋ… ನಿನಗೀಗ ಸತ್ಯ ತಿಳಿಯಿತು. ಇದು ರಾಕೇಶ್‌ಗೂ ತಿಳಿಯಬೇಕಿದೆ. ಆದರೆ ಅದು ಹೇಗೆ?”

“ನೋಡೋಣ,” ಎಂದು ರುಚಿತಾ ಚುರುಕಾಗಿ ಪ್ರತಿಕ್ರಿಯಿಸಿದಳು. ಮಾತ್ರವಲ್ಲ ಮರುದಿನ ತನ್ನ ಮನೆಗೆ ಬರುವಂತೆ ಪಾವನಿಗೆ ಆಹ್ವಾನ ಇತ್ತಳು. ರುಚಿತಾಳ ಆಹ್ವಾನದ ಮೇರೆಗೆ ಮರುದಿನ ಪಾವನಿ ಅವಳ ಮನೆಗೆ ಹೋದಳು. ರುಚಿತಾ ಪಾವನಿಯನ್ನು ಹಾರ್ದಿಕವಾಗಿ ಬರಮಾಡಿಕೊಂಡಳು. ರುಚಿತಾ ಅವಳೊಂದಿಗೆ ಹರಟುತ್ತಾ ರಾಕೇಶನ ಕುರಿತಾಗಿ ಇನ್ನಷ್ಟು ವಿವರಗಳನ್ನು ನೀಡಿದಳು. ರಾಕೇಶನಿಗೆ ಯಾವ ರೀತಿಯ ತಿಂಡಿಗಳಿಷ್ಟ, ಅವನ ಆದ್ಯತೆಗಳೇನು ಎಲ್ಲವನ್ನೂ ತಿಳಿಸಿದಳು.

“ಬಾ…. ರಾಕೇಶನನ್ನು ನೋಡೋಣ,” ಎಂದಳು. ಪಾವನಿ ತಾನು ತಯಾರಿಸಿ ತಂದಿದ್ದ ಚಪಾತಿ ಪಲ್ಯ ಹಾಗೂ ರುಚಿತಾ ಮಾಡಿಕೊಟ್ಟ ಟೀ ಎಲ್ಲವನ್ನೂ ತೆಗೆದುಕೊಂಡು ರುಚಿತಾಳನ್ನು ಹಿಂಬಾಲಿಸಿದಳು. ರುಚಿತಾ ತನ್ನ ಮನೆಯ ಮಹಡಿ ಮೇಲಿನ ಕೋಣೆಗೆ ಪಾವನಿಯನ್ನು ಕರೆದೊಯ್ದಳು.

ರಾಕೇಶ್‌ ಅವಳನ್ನು ಕಂಡೊಡನೆ, “ಪಾವನಿ…. ನೀನಿಲ್ಲಿ…..?!” ಎಂದು ಅಚ್ಚರಿ ಹಾಗೂ ಸಂತೋಷದಿಂದ ಕೂಗಿದ.

“ಹೌದು. ರುಚಿತಾ ನಿನ್ನ ವಿಚಾರವನ್ನೆಲ್ಲಾ ತಿಳಿಸಿದಳು. ಆದರೆ ನೀನು ಇಲ್ಲೇ ಉಳಿದುಕೊಂಡಿರುವುದು ಮಾತ್ರ ಗೊತ್ತಿರಲಿಲ್ಲ.” ಎಂದಳು.

“ನಾನು ರೋಟಿ ತಿನ್ನದೆ ಹಲವಾರು ದಿನಗಳಾದವು. ರುಚಿತಾಗೆ ರೋಟಿ ಮಾಡಲು ಬರುವುದಿಲ್ಲ,” ಎಂದ ರಾಕೇಶ್‌.

ಪಾವನಿ ತಾನು ತಂದಿದ್ದ ಚಪಾತಿಯನ್ನು ಅವನಿಗೆ ಕೊಟ್ಟಳು. ನಂತರ “ಇಂದಿನ ಉಪಾಹಾರ ಹೇಗಿದೆ?” ಎಂದು ಕೇಳಿದಳು.

“ಓಹೋ…. ಬಹಳ ಚೆನ್ನಾಗಿದೆ. ಹಾಗೆಯೇ ನೀನೂ ಕೂಡ ನನಗೆ ಬಹಳ ಇಷ್ಟವಾಗಿದ್ದೀಯ,” ಎಂದ ರಾಕೇಶ್‌. ಪಾವನಿ ಮುಗುಳ್ನಕ್ಕಳು. ಅವಳ ಕೆನ್ನೆ ನಾಚಿಕೆಯಿಂದ ಕೆಂಪೇರಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ