``ಧನ್ಯವಾದಗಳು ಪಾವನಿ. ಮುಂದಿನ ವಾರ ಮತ್ತೆ ಸಿಗೋಣ,'' ರೆಸ್ಟೋರೆಂಟ್‌ನ ರೆಗ್ಯುಲರ್‌ ಕಸ್ಟಮರ್‌ ಆಗಿದ್ದ ಗೌತಮ್ ಹೇಳಿದ. ಎಂದಿನ ಮುಗುಳ್ನಗುವಿನೊಂದಿಗೆ ಪಾವನಿ ಅವನನ್ನು ಬೀಳ್ಕೊಟ್ಟಳು.

ಪಾವನಿ ನಗರದ ಪ್ರಖ್ಯಾತ ಮಾಲ್‌ನಲ್ಲಿದ್ದ ರೆಸ್ಟೋರೆಂಟ್‌ ಒಂದರಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದಳು. ಯಾವಾಗಲೂ ಗಿಜಿಗುಡುತ್ತಿದ್ದ ರೆಸ್ಟೋರೆಂಟ್‌ನಲ್ಲಿ ಪಾವನಿಗೆ ಬಿಡುವು ಸಿಗುತ್ತಿದ್ದುದೇ ಅಪರೂಪವಾಗಿತ್ತು. ಇಂದೂ ಸಹ ಅವಳು ಬೇಗನೆ ಕೆಲಸಕ್ಕೆ ಬಂದಿದ್ದಳು.

ಗ್ರಾಹಕ ರಾಕೇಶ್‌ ರೆಸ್ಟೋರೆಂಟ್‌ಗೆ ಬಂದು ಬ್ರೇಕ್‌ಫಾಸ್ಟ್ ಗೆ ಆರ್ಡರ್‌ ನೀಡಿ ಕಾಯುತ್ತಿದ್ದ. ಆರ್ಡರ್‌ ತುಸು ವಿಳಂಬವಾದ್ದರಿಂದ ಅವನು ಆಗಾಗ ಗಡಿಯಾರದತ್ತ ನೋಡುತ್ತಿದ್ದ. ಇದನ್ನು ಗಮನಿಸಿದ ಪಾವನಿ ಅವನ ಬಳಿ ಬಂದು, ``ವಿಳಂಬಕ್ಕಾಗಿ ಕ್ಷಮೆ ಇರಲಿ,'' ಎಂದಳು.

``ಇಲ್ಲ. ನನಗೇನೂ ಅವಸರವಿಲ್ಲ. ನಿಮ್ಮ ಕಾಳಜಿಗಾಗಿ ಧನ್ಯವಾದಗಳು,'' ಎಂದ ರಾಕೇಶ್‌.

ಅಂದಿನಿಂದ ಪ್ರತಿ ವಾರ ಅವನು ರೆಸ್ಟೋರೆಂಟ್‌ಗೆ ಬರಲು ಪ್ರಾರಂಭಿಸಿದ. ಆಗೆಲ್ಲಾ ಪಾವನಿಯೇ ಅವನನ್ನು ವಿಚಾರಿಸಿಕೊಳ್ಳುತ್ತಿದ್ದಳು. ಅವನು ಯಾವಾಗಲೂ ತನ್ನ ಬ್ರೇಕ್‌ಫಾಸ್ಟ್ ಗಾಗಿ ರೋಟಿ ಇಲ್ಲವೇ ನಾನ್‌ ಆರ್ಡರ್‌ ಮಾಡುತ್ತಿದ್ದ. ಆಗೆಲ್ಲ ಪಾವನಿಗೆ ಅವನಿಗೆ ಆ ದಿನದ ಸ್ಪೆಷಲ್‌ಗಳ ಬಗ್ಗೆ ಹೇಳುತ್ತಿದ್ದಳು. ಅವನು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದ.

ಕೆಲವೊಮ್ಮೆ ಸಂಜೆ ಸಮಯದಲ್ಲಿ ರೆಸ್ಟೋರೆಂಟ್‌ಗೆ ಬರುತ್ತಿದ್ದ ರಾಕೇಶ್‌ ಪಾವನಿಯೊಂದಿಗೆ ಅಲ್ಲೇ ಪಕ್ಕದಲ್ಲಿದ್ದ ಪಬ್‌ಗೆ ಹೋಗಿ ಅಲ್ಲಿನ ವಿನೋದದಲ್ಲಿ ಭಾಗವಹಿಸುತ್ತಿದ್ದ. ಹೀಗೆ ಪಾವನಿ ಮತ್ತು ರಾಕೇಶ್‌ ನಡುವೆ ಸರಳ ಸ್ನೇಹವೊಂದು ಬೆಳೆಯಿತು.

ಒಂದು ದಿನ ಇಬ್ಬರೂ ರೆಸ್ಟೋರೆಂಟ್‌ ಹೊರಗೆ ಭೇಟಿಯಾಗಲು ನಿರ್ಧರಿಸಿದ್ದರು. ಆದರೆ ರಾಕೇಶ್‌ ಕೊನೆಯ ಕ್ಷಣದಲ್ಲಿ ಭೇಟಿಯನ್ನು ರದ್ದು ಮಾಡಿದ. ಅಂದಿನಿಂದ ಕೆಲವು ವಾರಗಳ ಕಾಲ ಪಾವನಿಯನ್ನು ಭೇಟಿಯಾಗಲೇ ಇಲ್ಲ. ರೆಸ್ಟೋರೆಂಟ್‌ಗೂ ಬರಲಿಲ್ಲ.

ಒಮ್ಮೆ ಇದ್ದಕ್ಕಿದ್ದಂತೆ ರೆಸ್ಟೋರೆಂಟ್‌ಗೆ ಬಂದ ರಾಕೇಶ್‌ ರೋಟಿಗೆ ಬದಲಾಗಿ ಚೈನೀಸ್‌ ಫುಡ್‌ಗೆ ಆರ್ಡರ್‌ ಮಾಡಿದ. ನಂತರದಲ್ಲಿ ರಾಕೇಶ್‌ ಯಾವಾಗಲೂ ಚೈನೀಸ್‌ ಫುಡ್‌ಗೆ ಆರ್ಡರ್‌ ಮಾಡುತ್ತಿದ್ದ. ಮಾತ್ರವಲ್ಲದೆ ಪಾವನಿಯೊಂದಿಗೆ ಮೊದಲಿನಂತೆ ಸರಳ ಸ್ನೇಹದಿಂದ ಮಾತನಾಡುವುದನ್ನೂ ನಿಲ್ಲಿಸಿಬಿಟ್ಟ.

ಅಂದು ಪಾವನಿ ಉಪಾಹಾರಕ್ಕೆಂದು ಕುಳಿತಿದ್ದಳು. ಅದೇ ಸಮಯಕ್ಕೆ ಸರಿಯಾಗಿ ರಾಕೇಶ್‌ ಸಹ ರೆಸ್ಟೋರೆಂಟ್‌ಗೆ ಬಂದು ಚೈನೀಸ್‌ ಪುಡ್‌ಗೆ ಆರ್ಡರ್‌ ಮಾಡಿ ಪಾವನಿ ಎದುರಿನ ಸೀಟಿನಲ್ಲಿ ಕುಳಿತ. ``ನಿಮಗೆ ಚೈನೀಸ್‌ ಫುಡ್‌ ಇಷ್ಟವಾಗುವುದೇ...?'' ಎಂದು ಪಾವನಿಯನ್ನು ಕೇಳಿದ.

``ತಿನ್ನುವುದಿಲ್ಲ ಎಂದೇನೂ ಇಲ್ಲ. ಆದರೆ ರೋಟಿ ತಿಂದಂತೆ ಆಗುವುದಿಲ್ಲ,'' ಅವಳು ಉತ್ತರಿಸಿದಳು. ಅವನ್ನೊಮ್ಮೆ ತುಟಿ ಕೊಂಕಿಸಿ ನಕ್ಕ. ಆದರೆ ಅದನ್ನು ಅವಳ ಕಣ್ಣುಗಳು ಗುರುತಿಸಲಿಲ್ಲ. ಕೆಲವು ದಿನಗಳ ನಂತರ ಪುನಃ ಅವನು ರೋಟಿ ತಿನ್ನಲು ಆರಂಭಿಸಿದ್ದ.

``ಏಕೆ, ಚೈನೀಸ್‌ ಪುಡ್‌ ಬೇಸರಾಯಿತೆ?'' ಪಾವನಿ ಕುಚೋದ್ಯವಾಗಿ ಕೇಳಿದಳು.

``ಇಲ್ಲ, ಚೈನೀಸ್‌ ಫುಡ್‌ ಮೆಚ್ಚುವ ಹುಡುಗಿ ದೂರವಾದಳು,''  ತಾನು `ಏಕಾಂಗಿ' ಎನ್ನುವ ಭಾವ ಅವನ ದನಿಯಲ್ಲಿ ಇಣುಕುತ್ತಿತ್ತು. ಅರೆಕ್ಷಣ ಅವಳು ಅವನ ಕಣ್ಣುಗಳನ್ನು ನೋಡಿದಳು.

``ಇಂದು ನೀವು ಕೊಂಚ ಬಿಡುವಾಗಿದ್ದರೆ ಹೊರಗೆ ಕಾಫಿಗೆ ಹೋಗೋಣವೇ?'' ಅವನೂ ಒಪ್ಪಿದ. ಇಬ್ಬರೂ ಕೆಫೆಗೆ ಹೋದರು. ಅವನು ತನ್ನ ಪರಿಚಯ ನೀಡುತ್ತಾ ಹೆಸರು ರಾಕೇಶ್‌, ನಗರದ ಸಾಫ್ಟ್ ಫೇರ್‌ ಸಂಸ್ಥೆಯೊಂದರಲ್ಲಿ ಮ್ಯಾನೇಜರ್‌. ಯಾವಾಗಲೂ ಚೈನೀಸ್‌ ಫುಡ್‌ ಮೆಚ್ಚುವ ಸಹೋದ್ಯೋಗಿ ತನು ಬಹಳ ಚೆಲುವೆ. ರಾಕೇಶ್‌ನೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಳು. ಆದರೆ ಯಾವ ಕಾರಣಕ್ಕೋ ಏನೋ ಅವರ ಈ ಮಧುರ ಸಂಬಂಧ ಹೆಚ್ಚು ದಿನ ಬಾಳಲಿಲ್ಲ, ಎಂದು ಚುರುಕಾಗಿ ವಿವರಿಸಿದ  ರಾಕೇಶ್‌ಕಾಫಿ ಬಿಲ್ಲನ್ನು ತಾನೇ ಪಾವತಿಸಿ ಪಾವನಿಯೊಂದಿಗೆ ಹೊರಬಂದ. ನಂತರದಲ್ಲಿ ಪಾವನಿ ಹಾಗೂ ರಾಕೇಶ್‌ ಇನ್ನಷ್ಟು ಹತ್ತಿರವಾದರು. ತಮ್ಮಿಬ್ಬರ ನಡುವಿನ ಈ ಅಪೂರ್ವ ಸ್ನೇಹ ಸಂಬಂಧದ ಕುರುಹಾಗಿ ರಾಕೇಶ್‌ ಗುಲಾಬಿ ಹೂವಿನ ಬೊಕೆಯನ್ನು ಪಾವನಿಗೆ ನೀಡಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ