ರೇಖಾ ಎರಡು ವರ್ಷಗಳ ನಂತರ ತಾಯ್ನಾಡಿಗೆ ತೆರಳುತ್ತಿದ್ದಳು. ಲಾಸ್‌ ಏಂಜಲೀಸ್‌ನಲ್ಲಿ ಮಹಿಳಾ ನಿಯತಕಾಲಿಕವೊಂದರಲ್ಲಿ ಕೆಲಸ ಮಾಡುತ್ತಿದ್ದ ರೇಖಾ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ನಾಲ್ಕು ಗಂಟೆಗಳ ಕಾಲ ವಿಳಂಬವಾಗಲಿದೆ ಎಂದು ತಿಳಿಯಿತು.

ರೇಖಾ ಯಾವಾಗಲೂ ಬಿಡುವಿಲ್ಲದಂತಹ ಕೆಲಸದಲ್ಲಿ ನಿರತಳಾಗಿದ್ದಳು. ಹೆಚ್ಚಿನ ಸಮಯವನ್ನು ಬರವಣಿಗೆಯಲ್ಲಿ ಕಳೆಯುತ್ತಿದ್ದ ಅವಳಿಗೆ ನಾಲ್ಕು ಗಂಟೆಗಳ ಕಾಲವನ್ನು ಹೇಗೆ ಕಳೆಯುವುದೆಂದು ತೋಚದಾಯಿತು. ಏರ್‌ಪೋರ್ಟ್‌ನ ಹೊರಗಿನ ರಸ್ತೆಯನ್ನು ನೋಡುತ್ತಾ ಕುಳಿತಿರಲು ಬೇಸರವಾಗಿ ಬ್ಯಾಗ್‌ನಲ್ಲಿದ್ದ ಪ್ಯಾಡ್‌ ಹಾಗೂ ಪೆನ್‌ ತೆಗೆದು ಏನನ್ನೋ ಬರೆಯತೊಡಗಿದಳು.

ಕೆಲವು ಸಮಯದ ನಂತರ ಹಿಂದಿನಿಂದ ಬಂದ ದನಿಯಿಂದ ಹಿಂದೆ ತಿರುಗಿ ನೋಡಿದಳು. ಹಿಂದೆ ದೇವರಾಜ್‌ ನಿಂತಿದ್ದ.

``ಓಹ್‌! ದೇವ್... ನೀನು ಇಲ್ಲಿ?''

``ರೇಖಾ....?!''

``ಹಾಂ.... ರೇಖಾನೇ...... ನೀನೆಲ್ಲಿದ್ದೀಯಾ?''

``ನಾನು ಇಲ್ಲಿಯೇ ಟೆಕ್‌ ಸಂಸ್ಥೆಯೊಂದರಲ್ಲಿ ಕೆಲಸದಲ್ಲಿದ್ದೆ. ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುತ್ತಿದ್ದೇನೆ.''

``ಐಸಿ! ನಾನು ಸಹ ಇಲ್ಲೇ ಕೆಲಸದಲ್ಲಿದ್ದೇನೆ. ನಮ್ಮ ಸಹಪಾಠಿ ಶ್ವೇತಾಳ ಮದುವೆಗಾಗಿ ಊರಿಗೆ ಹೋಗುತ್ತಿದ್ದೇನೆ.''

``ಶ್ವೇತಾ! ಅವಳು ಹೇಗಿದ್ದಾಳೆ?''

`` ಅವಳು ಬ್ಯಾಂಕ್‌ನಲ್ಲಿ ಮ್ಯಾನೇಜರ್‌ ಆಗಿದ್ದಾಳೆ. ಅವಳ ಪೋಷಕರು ಅವಳೇ ಆಯ್ದುಕೊಂಡ ಬ್ರಿಟಿಷ್‌ ಅಧಿಕಾರಿಯೊಂದಿಗೆ ಅವಳ ಮದುವೆಗೆ ಒಪ್ಪಿಕೊಂಡಿದ್ದಾರೆ.''

``ಹೌದಾ! ಇದೊಂದು ಒಳ್ಳೆಯ ಸುದ್ದಿ.''

``ಹೌದು.''

``ಮತ್ತೆ ನೀನು ಎಂತಹವಳನ್ನು ಮದುವೆಯಾಗಬೇಕೆಂದಿದ್ದೀ?''

``ನಾನು? ನಾನಿನ್ನು ನಿರ್ಧರಿಸಿಲ್ಲ. ನನ್ನ ತಾಯಿ ಯಾರನ್ನು ಹೇಳುವರೋ ಅವಳನ್ನು ಮದುವೆಯಾಗುತ್ತೇನೆ.''

ಕ್ಷಣ ಕಾಲ ಅವನ ಮುಖವನ್ನೇ ನೋಡುತ್ತಿದ್ದ ರೇಖಾಗೆ, `ಶ್ವೇತಾ, ತಾನೊಬ್ಬ ಹೆಣ್ಣಾಗಿಯೂ ಬ್ರಿಟಿಷ್‌ರನನ್ನು ಮದುವೆಯಾಗುತ್ತಿದ್ದಾಳೆ. ಆದರೆ ದೇವ್ ‌ಮಾತ್ರ ತನ್ನ ತಾಯಿಯ ನಿರ್ಧಾರದಂತೆ ಮದುವೆಯಾಗುತ್ತಾನಂತೆ......' ವಿಚಿತ್ರವೆನಿಸಿತು.

ಆ ಮಾತನ್ನು ಆಡಿ ಮುಗಿಸಿದ ರೇಖಾ ಮಾತು ಬದಲಿಸುತ್ತಾ, ``ನಿನ್ನ ಅಂಕಲ್ ಹೇಗಿದ್ದಾರೆ?'' ಎಂದು ಕೇಳಿದಳು.

``ಅವರು ಬೆಂಗಳೂರಿಲ್ಲೇ ಇದ್ದಾರೆ.''

``ಮತ್ತೆ ನಮ್ಮ ಕಾಲೋನಿ ಹೇಗಿದೆ?''

``ಅದು ಏನೇನೂ ಬದಲಾಗಿಲ್ಲ. ಜನರೆಲ್ಲರೂ ಹಾಗೆಯೇ ಇದ್ದಾರೆ. ಭೀಮಪ್ಪನೇ ವಾಚ್‌ಮನ್‌ ಆಗಿ ಮುಂದುವರಿದಿದ್ದಾನೆ. ಒಟ್ಟಾರೆ ಎಲ್ಲಾ ಮನೆ ಪರಿಸರ ಹಾಗೆಯೇ ಇದೆ.''

ರೇಖಾ ಸ್ವಲ್ಪ ಹೊತ್ತು ಮೌನವಾದಳು. ಅವಳಿಗೆ ತಾನು ಬಾಲ್ಯದಲ್ಲಿ ಕಳೆದ ದಿನಗಳು ನೆನಪಾದವು. ತನ್ನ ತಂದೆ ತಾಯಿಯರೊಂದಿಗಿದ್ದ ಬೀದಿ, ಅಲ್ಲಿದ್ದ ಪುಟ್ಟ ಮಕ್ಕಳ ಜೊತೆಗಿನ ಆಟಪಾಠಗಳು ನೆನಪಾದವು.

ಕೆಲವು ಹೊತ್ತಿನ ನಂತರ ದೇವರಾಜ್‌, ``ನಿನ್ನ ತಾಯಿ ತಂದೆ ಹೇಗಿದ್ದಾರೆ? ನಾನು ಅವರನ್ನು ನೋಡಿ ಎಷ್ಟೋ ವರ್ಷಗಳಾದವು. ಅವರು ನಿವೃತ್ತರಾಗಿ ಮೈಸೂರಿಗೆ ಹೋದ ನಂತರ ನವನಗರ ಭೇಟಿ ಆಗಲೇ ಇಲ್ಲ,'' ಎಂದ.

``ನನ್ನ ತಂದೆ ತೀರಿಹೋಗಿ ಎರಡು ವರ್ಷಗಳಾದವು. ತಾಯಿ ಮೈಸೂರಿನಲ್ಲಿಯೇ ಇದ್ದಾರೆ. ಅಲ್ಲಿ ನಮ್ಮ ಸ್ನೇಹಿತರು, ಬಂಧುಗಳು ಇರುವುದರಿಂದ ಅವರಿಗೆ ನನ್ನೊಂದಿಗೆ ಬರಲು ಇಷ್ಟವಿಲ್ಲ.''

``ಹೌದಾ! ನನ್ನನ್ನು ಕ್ಷಮಿಸು. ನಿನ್ನ ತಂದೆ ತೀರಿಹೋದ ವಿಚಾರ ನನಗೆ ತಿಳಿದಿರಲಿಲ್ಲ. ನಾನು ಸಾಕಷ್ಟು ಬಾರಿ ಅವರೊಂದಿಗೆ ಮಾತನಾಡಿದ್ದೆ. ನಾವಿಬ್ಬರೂ ಕೂಡಿ ನಿನ್ನ ಭವಿಷ್ಯದ ವಿಚಾರ ಚರ್ಚಿಸಿದ್ದೆವು.''

``ಹೌದು ನೀನು ಆಗಾಗ ನನ್ನ ಮನೆಗೆ ಬರುತ್ತಿದ್ದೆ.''

``ಆಗೆಲ್ಲ ನಾನು ನೀನು ಸಹ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ