ನಾನು ಕೃಷಿ ಇಲಾಖೆ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೆ. ನಾನೊಬ್ಬ ಸತ್ಯಾನಿಷ್ಠ ಬ್ರಹ್ಮಚಾರಿ. ನನ್ನ ತಂದೆ ತಾಯಿ ನನ್ನ ಮದುವೆ ವಿಚಾರವನ್ನು ಎತ್ತಿದಾಗೆಲೆಲ್ಲಾ ಏನೇನೋ ಸಬೂಬು ಹೇಳಿ ಮುಂದೆ ಹಾಕುತ್ತಿದ್ದೆ. ನನಗೆ ಮೊದಲಿನಿಂದಲೂ ಇಂತಹುವುದರಲ್ಲಿ ಆಸಕ್ತಿ ಇರಲಿಲ್ಲ.

ಆಫೀಸಿನಲ್ಲಿ ನನಗೆ ಓಡಾಡಲು ಜೀಪ್‌ ನೀಡಿದ್ದರೂ ಕೆಲಸದ ವಿಚಾರವಾಗಿ ಹೊರ ಹೋಗಬೇಕಾದಾಗ ಮಾತ್ರವೇ ನಾನು ಅದನ್ನು ಬಳಸುತ್ತಿದೆ. ಉಳಿದ ದಿನಗಳಲ್ಲಿ ನನ್ನ ಯಮಾಹಾವನ್ನೇ ನನ್ನ ಕಛೇರಿಗೆ ಒಯ್ಯುತ್ತಿದ್ದೆ.

ಇಂದು ಕಛೇರಿಯಲ್ಲಿ ಮುಖ್ಯವಾದ ಕೆಲಸವಿದ್ದ ಕಾರಣ ಎಂದಿಗಿಂತ ತುಸು ಬೇಗನೇ ಹೊರಟಿದ್ದೆ. ಮಾರ್ಗ ಮಧ್ಯೆ ನನಗೆ ಚಪ್ಪಾಳೆಯ ದನಿ ಕೇಳಿಸಿತು. ಬೈಕ್‌ನ ಕನ್ನಡಿ ಮೂಲಕ ನೋಡಿದಾಗ ಒಬ್ಬ ಯುವತಿ ನನ್ನನ್ನೇ ಕರೆಯುತ್ತಿರುವುದು ಕಂಡಿತು. ನಾನು ನಿಧಾನವಾಗಿ ಬೈಕ್‌ ನಿಲ್ಲಿಸಿ, ``ಹೇಳಿ,'' ಎಂದೆ.

``ಇಂದು ನನ್ನ ಫೈನಲ್ ಎಗ್ಸಾಮ್. ಆದರೆ ಇಂದು ಬಸ್‌ಗಳಿಲ್ಲ, ಆಟೋ ಸಹ ಬರುತ್ತಿಲ್ಲ. ನನ್ನನ್ನು ಕಾಲೇಜಿನ ಬಳಿ ಬಿಡುತ್ತೀರಾ?''

ಕ್ರೀಮ್ ಕಲರ್‌ ಸೀರೆ, ಕೆಂಪು ಬಣ್ಣದ ರವಿಕೆ ಧರಿಸಿದ್ದ ಯುವತಿ ಕುತ್ತಿಗೆಯಲ್ಲಿ ಬಿಳಿಯ ಮುತ್ತಿನ ನೆಕ್‌ಲೇಸ್‌, ಕೈಯಲ್ಲಿ ಕೆಂಪು ಗಾಜಿನ ಬಳೆಗಳು, ಹಣೆಯಲ್ಲಿ ಬಿಂದಿ ಇದ್ದವು. ಅವಳು ಕೂದಲನ್ನು ತುರುಬು ಕಟ್ಟಿ, ಹಳದಿ ಬಣ್ಣದ ಗುಲಾಬಿ ಮುಡಿದಿದ್ದಳು. ಹಳದಿ ಬಣ್ಣದ ವ್ಯಾನಿಟಿ ಬ್ಯಾಗ್‌ ಹಿಡಿದಿದ್ದ ಅವಳು ನೋಡಲು ಮಧ್ಯಮ ವರ್ಗದ ಕುಟುಂಬದಿಂದ ಬಂದವಳೆನ್ನುವಂತೆ ಕಾಣುತ್ತಿತ್ತು. ಅವಳು ನನ್ನ ಉತ್ತರಕ್ಕಾಗಿ ಕಾಯುತ್ತಿದ್ದಳು. ನಾನು ಅವಳ ಕೋರಿಕೆಗೆ ಒಪ್ಪಿ, ``ಸರಿ ಕುಳಿತುಕೊಳ್ಳಿ,'' ಎಂದೆ. ಅವಳು ಕುಳಿತುಕೊಳ್ಳುತ್ತಿದ್ದಂತೆ ನಾನು ನಿಧಾನವಾಗಿ ಬೈಕ್‌ ಚಲಾಯಿಸಿದೆ.  ಸುಮಾರು 10 ನಿಮಿಷಗಳ ದೂರ ಕ್ರಮಿಸುತ್ತಿದ್ದಂತೆ, ಅವಳ ಕಾಲೇಜು ಸಿಕ್ಕಿತು.

``ಧನ್ಯವಾದಗಳು. ನಿಮ್ಮ ಈ ಸಹಾಯವನ್ನು ನಾನೆಂದಿಗೂ ಮರೆಯಲಾರೆ,'' ಎಂದಳು.

``ಇರಲಿ ಬಿಡಿ. ಈ ಪಾರ್ಕರ್‌ ಪೆನ್‌ ತೆಗೆದುಕೊಳ್ಳಿ. ನಿಮಗೆ ಶುಭವಾಗಲಿ,'' ನನ್ನ ಬಳಿಯಿದ್ದ ಪೆನ್ನನ್ನು ಅವಳಿಗೆ ನೀಡಿದೆ. ಅದನ್ನು ತೆಗೆದುಕೊಂಡ ಆಕೆ ಮತ್ತೊಮ್ಮೆ ಧನ್ಯವಾದ ಹೇಳುತ್ತಾ ಕಾಲೇಜಿನತ್ತ ಹೆಜ್ಜೆ ಹಾಕಿದಳು. ನಾನೂ ಕಛೇರಿಯತ್ತ ತೆರಳಿದೆ. ಅಂದು ಸಂಜೆ ಮನೆಗೆ ಬಂದ ನಂತರ ತಾಯಿ ತಂದಿತ್ತ ಕಾಫಿ ಹೀರುತ್ತಾ ಕುಳಿತಿದ್ದಾಗ ಪುನಃ ಆ ಚೆಲುವೆಯ ಮುಖ ಕಣ್ಮುಂದೆ ಬಂದಿತು. `ಛೇ! ನಾನೆಂತಹ ಕೆಲಸ ಮಾಡಿದೆ. ಅವಳ ಹೆಸರು, ಊರು ಏನನ್ನೂ ಕೇಳಲಿಲ್ಲವಲ್ಲ,' ಎಂದುಕೊಂಡೆ. ಆದರೆ ಏನೂ ಮಾಡುವಂತಿರಲಿಲ್ಲ. ಆಗಲೇ ಕಾಲ ಮಿಂಚಿತ್ತು. ಒಂದು ವರ್ಷ ಕಳೆಯಿತು. ಆದರೆ ಮತ್ತೆಂದೂ ಅವಳ ಭೇಟಿ ಆಗಲಿಲ್ಲ. ಆದರೆ ಆ ಚೆಲುವಾದ ಮುಖ ಆಗಾಗ ನನ್ನ ಕನಸಿನಲ್ಲಿ ಬರುತ್ತಿತ್ತು. ಆಕೆಯ ಹೆಸರು, ಪರಿಚಯ ಇರದ ಕಾರಣ ಅವಳನ್ನು ಪತ್ತೆ ಮಾಡಲು ಆಗಲಿಲ್ಲ.

ಹೀಗಿರಲು ಅದೊಂದು ಭಾನುವಾರ ನನ್ನ ಕೆಲಸದ ಮೇಲೆ ಸೆಂಟ್ರಲ್ ಲೈಬ್ರರಿಗೆ ಹೋಗಿದ್ದೆ. ಅಲ್ಲಿ ಕುಳಿತು ಪುಸ್ತಕ ಓದುತ್ತಿರುವಾಗ, ``ಎಕ್ಸ್ ಕ್ಯೂಸ್‌ ಮಿ ಸರ್‌,'' ಎನ್ನುವ ಸುಮಧುರ ಕಂಠವೊಂದು ಕೇಳಿಸಿತು. ನಾನು ಧ್ವನಿ ಬಂದತ್ತ ತಿರುಗಿ ನೋಡಿದೆ, ಅದೇ ಯುವತಿ! ನನ್ನತ್ತಲೇ ನೋಡುತ್ತಾ, ``ಹೋ... ಹೇಗಿದ್ದೀರಿ?'' ಎಂದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ