ಮಾನ್‌ಸೂನ್‌ನಲ್ಲಿ ಉಂಟಾಗುವ ಕೆಲವು ಸಮಸ್ಯೆಗಳಿಗೆ ಪರಿಹಾರ ತಿಳಿಯದೆ ಜನ ಕಂಗೆಡುತ್ತಾರೆ. ಈ ಸಮಸ್ಯೆಗಳಿಂದ ಪಾರಾಗಲು ಉಪಾಯಗಳನ್ನು ತಿಳಿಯೋಣ ಬನ್ನಿ.

ಹೈಪರ್ಥರ್ಮಿಯಾ

ಮಳೆ ಸುರಿದ ನಂತರ ಬರುವ ಬಿಸಿಲಿನಿಂದಾಗಿ ಬಹಳಷ್ಟು ಬಲಹೀನತೆಯ ಅನುಭವ ಅಥವಾ ಹೀಟ್‌ ಸ್ಟ್ರೋಕ್‌ವರೆಗೆ ಸಮಸ್ಯೆ ಉಂಟಾಗುತ್ತದೆ. ವಯಸ್ಸಾದವರು ಹಾಗೂ ಮಕ್ಕಳಿಗೆ ಹೈಪರ್‌ ಥರ್ಮಿಯಾ ಉಂಟಾಗುವ ಅಪಾಯ ಹೆಚ್ಚು. ಏಕೆಂದರೆ ಅವರ ಶರೀರದಲ್ಲಿ ಇಂತಹ ತಾಪಮಾನ ನಿಭಾಯಿಸುವ ಸಾಮರ್ಥ್ಯ ಕಡಿಮೆಯಾಗಿರುತ್ತದೆ. ಅದಲ್ಲದೆ, ಹಳೆಯ ಆರೋಗ್ಯ ಸಮಸ್ಯೆಗಳು ಉದಾಹರಣೆಗೆ ಹೃದಯದ ಕಾಯಿಲೆಗಳು, ರಕ್ತ ಸಂಚಾರದಲ್ಲಿ ಏರುಪೇರು, ಸ್ಥೂಲತೆ, ಹೈ ಬ್ಲಡ್‌ ಪ್ರೆಷರ್‌ ಮತ್ತು ಡಿಪ್ರೆಷನ್ ಇತ್ಯಾದಿಗಳಿಗೆ ಔಷಧ ತೆಗೆದುಕೊಳ್ಳುವ  ವಯಸ್ಕರ ಶರೀರದಲ್ಲಿ ತಾಪಮಾನದೊಂದಿಗೆ ಸಮತೋಲನ ಸಾಧಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಒಂದುವೇಳೆ ಯಾರಾದರೂ ವಯಸ್ಸಾದವರ ಶರೀರದಲ್ಲಿ ನೋವುಂಟಾಗುತ್ತಿದ್ದರೆ ಅಥವಾ ಹೀಟ್‌ ಎಕ್ಸಾರ್ಷನ್‌ನ ಆರಂಭಿಕ ಲಕ್ಷಣ ಉದಾ: ಹೆಚ್ಚು ಬೆವರುವುದು, ಬಲಹೀನತೆ, ಸುಸ್ತು, ನಾಸಿಯಾ ಉಂಟಾಗುವುದು ಇತ್ಯಾದಿಗಳಿಗೆ ಕೂಡಲೇ ಚಿಕಿತ್ಸೆ ಕೊಡಿಸಿ. ತಾಪಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪಾರಾಗಲು ತೀವ್ರ ಬಿಸಿಲಿರುವಾಗ ಹೊರಗೆ ಹೋಗಬೇಡಿ. ಚೆನ್ನಾಗಿ ಗಾಳಿ ಬರುವ ಕಡೆ ಇದ್ದು ದಿನಕ್ಕೆ ಕನಿಷ್ಠ 8-10 ಗ್ಲಾಸ್‌ ನೀರು ಕುಡಿಯಿರಿ. ಒಂದುವೇಳೆ ಏನಾದರೂ ಕಾರಣಕ್ಕೆ ಲಿಕ್ವಿಡ್ ಕಡಿಮೆ ಪ್ರಮಾಣದಲ್ಲಿ ಸೇವಿಸಲು ಸಲಹೆ ನೀಡಿದ್ದರೆ ಆಗ ನೀವು ಎಷ್ಟು ನೀರನ್ನು ಕುಡಿಯಬೇಕೆಂದು ನಿಮ್ಮ ವೈದ್ಯರನ್ನು ಕೇಳಿ. ಸಾಮಾನ್ಯವಾಗಿ ಕಂಜೆಸ್ಟಿವ್ ‌ಹಾರ್ಟ್‌ ಫೇಲ್ಯೂರ್‌, ಕಿಡ್ನಿ ಅಥವಾ ಲಿವರ್‌ಗೆ ಸಂಬಂಧಿಸಿದ ಕಾಯಿಲೆಗಳಲ್ಲಿ ದ್ರವ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ.

ಆಹಾರಕ್ಕೆ ಸಂಬಂಧಿಸಿದ ಕಾಯಿಲೆಗಳು

ಕಲ್ಮಶಭರಿತ ನೀರಿನಿಂದ ಉಂಟಾಗುವ ಕಾಲರಾ, ಟೈಫಾಯಿಡ್‌, ಜಾಂಡೀಸ್‌, ಡೀಸೆಂಟ್ರಿ, ಆಮೀಬಿಯಾಸಿಸ್‌, ಡಯೇರಿಯಾ ಮತ್ತು ಇತರ ಅನೇಕ ಸಮಸ್ಯೆಗಳು ಈ ದಿನಗಳಲ್ಲಿ ಸಾಮಾನ್ಯ. ಹೊರಗೆ ತಿನ್ನುವವರಿಗೆ ಅಪಾಯ ಹೆಚ್ಚು. ತಾಪದ  ಹಾಗೂ ಆರ್ದ್ರತೆಯ ವಾತಾವರಣದಲ್ಲಿ ಬ್ಯಾಕ್ಟೀರಿಯಾ ವೇಗವಾಗಿ ಉತ್ಪತ್ತಿಯಾಗುತ್ತದೆ. ಫುಡ್‌ ಪಾಯಿಸನಿಂಗ್‌ ಸುಲಭವಾಗಿ ಉಂಟಾಗುತ್ತದೆ.

ವಯಸ್ಸಾದವರು, ಮಕ್ಕಳು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಫುಡ್‌ ಪಾಯಿಸನ್‌ ಆಗುವ ಅಪಾಯ ಹೆಚ್ಚಾಗಿರುತ್ತದೆ. ಯಾರಿಗಾದರೂ ಹೈಪರ್‌ ಟೆನ್ಷನ್‌, ಡಯಾಬಿಟೀಸ್‌ನಂತಹ ಕ್ರಾನಿಕಲ್ ಕಾಯಿಲೆಗಳಿದ್ದರೆ, ಅಂತಹವರಿಗೆ ಸುಲಭವಾಗಿ ಫುಡ್‌ ಪಾಯಿಸನ್‌ ಆಗುತ್ತದೆ. ಡಯೇರಿಯಾದ ಸೋಂಕಿನಲ್ಲಿ ದ್ರವ ಹಾಗೂ ಎಲೆಕ್ಟ್ರೋಲೈಚ್ಸ್ ನ ಕೊರತೆಯಿಂದ ವ-ವೃದ್ಧರಿಗೆ ಡೀಹೈಡ್ರೇಶನ್‌, ಕಿಡ್ನಿ, ಹಾರ್ಟ್‌ ಮತ್ತು ಮಾಂಸಖಂಡಗಳಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ. ಫುಡ್ ಪಾಯಿಸನ್‌ನಿಂದ ಪಾರಾಗಲು ನಿಮ್ಮ ಕೈಗಳಿಂದಲೇ ಆಹಾರ ತಯಾರಿಸಿ. ಪಾತ್ರೆಗಳನ್ನು ಪದೇ ಪದೇ ಚೆನ್ನಾಗಿ ಸ್ವಚ್ಛಗೊಳಿಸಿ. ಆಹಾರ ಪದಾರ್ಥಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಬೇಯಿಸಿ ತಿನ್ನಿ. ಐಸ್‌ಕ್ರೀಂ, ಹಾಲು, ಮೊಸರಿನಂತಹ ಪದಾರ್ಥಗಳನ್ನು ಉಪಯುಕ್ತ ತಾಪಮಾನದಲ್ಲಿಡಿ. 2 ಗಂಟೆಗಳಿಗಿಂತಲೂ ಹೆಚ್ಚು ಸಮಯದವರೆಗೆ ಫ್ರಿಜ್‌ನಿಂದ ಹೊರಗಿಡುವಂತಹ ವಸ್ತುಗಳು ಸುರಕ್ಷಿತವಾಗಿರುವುದಿಲ್ಲ. ಒಂದುವೇಳೆ ಉಷ್ಣತೆ 90 ಡಿಗ್ರಿ ಫ್ಯಾರನ್‌ಹೀಟ್‌ಗಿಂತ  ಹೆಚ್ಚಾಗಿದ್ದರೆ ಆಹಾರ ಪದಾರ್ಥಗಳನ್ನು ಫ್ರಿಜ್‌ನಿಂದ ಹೊರಗೆ ಒಂದು ಗಂಟೆಗಿಂತ ಹೆಚ್ಚಾಗಿ ಇಡಬಾರದು.

ಸೊಳ್ಳೆಗಳಿಂದ ಬರುವ ಕಾಯಿಲೆಗಳು

ಅತ್ತಿತ್ತ ಕಲ್ಮಶಭರಿತ ನೀರು ಮತ್ತು ಕಸ ಸೇರುವುದರಿಂದ ಸೊಳ್ಳೆಗಳ ಉತ್ಪತ್ತಿಗೆ ಅನುಕೂಲವಾದ ಜಾಗ ಸಿಗುತ್ತದೆ. ಅದರಿಂದ ಡೆಂಗ್ಯೂ, ಮಲೇರಿಯಾ ಮತ್ತು ಇತರ ಕಾಯಿಲೆಗಳು ಬರುತ್ತವೆ. ಹೀಗಾಗಲೂ ಬಿಡದಿರಿ. ತೆಳು ಬಣ್ಣದ ಬಟ್ಟೆಗಳನ್ನು ಧರಿಸಿ. ಯಾವುದೇ ರೀತಿಯ ಸೆಂಟ್‌ ಉಪಯೋಗಿಸಬೇಡಿ. ಏಕೆಂದರೆ ಗಾಢ ಬಣ್ಣಗಳು ಮತ್ತು ಸೆಂಟ್‌ ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಸೊಳ್ಳೆಗಳು ಹೆಚ್ಚಾಗಿರುವ ಕಡೆ ಹೋಗಬೇಡಿ. ಸಂಜೆಯಲ್ಲಿ ಕಿಟಕಿಗಳು ಮತ್ತು ಬಾಗಿಲನ್ನು ಮುಚ್ಚಿಡಿ. ರಾತ್ರಿ ಮಲಗುವಾಗ ಸೊಳ್ಳೆ ಪರದೆ ಕಟ್ಟಿಕೊಳ್ಳಿ.

ಈ ಹವಾಮಾನದಲ್ಲಿ ನೈಗ್ಲೇರಿಯಾ ಫಾಲರಿ ಇದ್ದು, ಅಮೀಬಿಕ್‌ ಮೆನಿಂಗೊ ಇನ್‌ಸೆಫೆಲೈಟಿಸ್‌ ಉಂಟಾಗಿ ಅದು ಮಾರಣಾಂತಿಕವಾಗಿರುತ್ತದೆ. ಕೊಳೆಯಾದ ನಿಂತ ನೀರಿನಲ್ಲಿ ಈಜು ಮಕ್ಕಳಲ್ಲಿ ಸಾಮಾನ್ಯವಾಗಿ ಇದು ಕಂಡುಬರುತ್ತದೆ. ಉದಾ: ಕೆರೆ, ಸರೋವರ ಅಥವಾ ಕೊಳಕು ಸ್ವಿಮ್ಮಿಂಗ್‌ ಪೂಲ್‌. ಅವರನ್ನು ಅಲ್ಲೆಲ್ಲ ಈಜಲು ಬಿಡಬೇಡಿ.

ಅದಲ್ಲದೆ ಮಾನ್‌ಸೂನ್‌ ಸಮಸ್ಯೆಗಳಿಂದ ಪಾರಾಗಲು ಈ ಕೆಳಗಿನ ಟಿಪ್ಸ್ ಅನುಸರಿಸಿ.

ರಸ್ತೆ ಬದಿಯಲ್ಲಿ ಮಾರುವ ಹಣ್ಣು ಅಥವಾ ಇತರ ಆಹಾರ ಪದಾರ್ಥಗಳನ್ನು ತಿನ್ನಬೇಡಿ. ಹೆಚ್ಚು ಮಸಾಲೆಯುಕ್ತ ಅಥವಾ ಕರಿದ ಪದಾರ್ಥ ತಿನ್ನಬೇಡಿ. ತಾಜಾ ಹಣ್ಣು, ಹಸಿ ತರಕಾರಿ, ತಾಜಾ ಹಣ್ಣಿನ ಜೂಸ್‌ ಉಪಯೋಗಿಸಿ.

ಹೆಚ್ಚು ನೀರು ಕುಡಿಯಿರಿ. ಆದರೆ ನೀರು ಸ್ವಚ್ಛವಾಗಿರಬೇಕು. ನಿಂಬೆ ಜೂಸ್‌, ಎಳನೀರು ಮತ್ತು ಇತರ ಪ್ರಾಕೃತಿಕ ಪದಾರ್ಥಗಳು ಯಾವಾಗಲೂ ಒಳ್ಳೆಯದು.

ಹೆಚ್ಚು ಫೈಬರ್‌ ಇರುವ ಆಹಾರ ವಸ್ತುಗಳನ್ನು ಸೇವಿಸಿ. ನಿಮ್ಮ ಡಯೆಟ್‌ ಹಾಗೂ ಪೌಷ್ಟಿಕಾಂಶಭರಿತ ಆಹಾರದ ಕಡೆ ಗಮನಹರಿಸಿ.

ಸದಾ ಹಗುರ ಹಾಗೂ ಸಡಿಲ ಡ್ರೆಸೆಸ್‌ ಧರಿಸಿ, ಆದಷ್ಟೂ ಇವು ನ್ಯಾಚುರಲ್ ಫೈಬರ್‌ನದೇ ಆಗಿರಬೇಕು.

ಸುಸ್ತಿನಿಂದ ಮುಕ್ತರಾಗಲು ನಿಯಮಿತ ವ್ಯಾಯಾಮ ಮಾಡಿ.

ಸೂರ್ಯನ ಅತಿನೇರಳೆ ಕಿರಣಗಳು ಹಾಗೂ ಕಲುಷಿತ ನೀರಿನ ಬಾಧೆ ಕಾಡದಂತೆ ಸುರಕ್ಷಿತರಾಗಿರಿ.

ಡಾ. ರಾಧಿಕಾ ಕುಮಾರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ