ಪತ್ನಿ : ಏನ್ರಿ….. ನಿಮ್ಮ ತಲೆಯ ಕೂದಲು ಹೀಗೆ ಉದುರುತ್ತಾ ಹೋದರೆ ಒಂದು ದಿನ ತಲೆ ತಾಮ್ರದ ಚೊಂಬಾಗುತ್ತೆ. ಆಗ ನಾನು ನಿಮಗೆ ಡೈವೋರ್ಸ್ ಕೊಟ್ಟು ಹೋಗಿಬಿಡ್ತೀನಷ್ಟೆ…..
ಪತಿ : ಅಯ್ಯೋ ಹೌದಾ….? ಇದನ್ನು ಮೊದಲೇ ಹೇಳಬಾರದೇ? ನಾನು ಹುಚ್ಚನಂತೆ ತಲೆಯ ಮೇಲಿನ ಕೂದಲು ಉಳಿಸಿಕೊಳ್ಳಲು ಸಾವಿರಾರು ರೂ. ಖರ್ಚು ಮಾಡಿ ಚಿಕಿತ್ಸೆ ಪಡೆಯುತ್ತಿದ್ದೇನೆ.
ಹೊಸದಾಗಿ ಮದುವೆಯಾಗಿದ್ದ ಮಗಳು ತಾಯಿಗೆ ಫೋನ್ ಮಾಡಿ, “ಅಮ್ಮಾ, ನಾನು ಇವರೊಂದಿಗೆ ಸಿಕ್ಕಾಪಟ್ಟೆ ಜಗಳ ಆಡಿಬಿಟ್ಟೆ! ಅದಕ್ಕೆ ಗಂಟುಮೂಟೆ ಕಟ್ಟಿಕೊಂಡು 3-4 ತಿಂಗಳು ನಮ್ಮ ಮನೆಗೇ ಬಂದುಬಿಡೋಣ ಅಂತಿದ್ದೀನಿ…” ಎಂದಳು.
ಅದಕ್ಕೆ ತಕ್ಷಣ ಅವಳ ತಾಯಿ ಹೇಳಿದರು, “ಇರು ಇರು…. ಜಗಳ ಶುರು ಮಾಡಿದನು ಅವನು. ಅಂದಮೇಲೆ, ಅವನಿಗೇ ತಾನೇ ಶಿಕ್ಷೆ ಆಗಬೇಕು? 5-6 ತಿಂಗಳು ನಾನು ಅಲ್ಲೇ ಬಂದು ಇದ್ದುಬಿಡ್ತೀನಿ ತಾಳು….” ಎನ್ನುವುದೇ?
ಟೀನಾ : ನಾನು ಯಾವುದೇ ಪಾರ್ಟಿಗೆ ಹೋಗಲಿ, ಇವತ್ತಿನವರೆಗೂ ಯಾರಿಗೂ ನನ್ನ ವಯಸ್ಸು ಎಷ್ಟು ಎಂದು ನಿಖರವಾಗಿ ಹೇಳಲಾಗುವುದಿಲ್ಲ ಗೊತ್ತೇ? ಕೆಲವರು 20 ಅಂತಾರೆ, ಮತ್ತೆ ಕೆಲವರು 22 ಇರಬಹುದೇನೋ ಅಂತಾರೆ.
ರೀನಾ : ಅಯ್ಯೋ… ಅಪ್ಪಿತಪ್ಪಿ ನೀನೇ ಎಲ್ಲಾದರೂ ಬಾಯಿ ಬಿಟ್ಟೀಯ, ಮೊದಲೇ ಪಾರ್ಟಿ ಮೂಡ್‌ನಲ್ಲಿ ಇರ್ತೀಯ.
ಟೀನಾ : ನನ್ನನ್ನೇನು ಅಂಥ ಗುಗ್ಗು ಅಂದ್ಕೊಂಡಿದ್ದೀಯಾ? ಯಾವ ಗುಟ್ಟನ್ನು ನಾನು ಕಳೆದ 40 ವರ್ಷಗಳಿಂದ ಬಿಟ್ಟುಕೊಡಲಿಲ್ಲವೋ ಅದನ್ನು ಅಷ್ಟು ಸುಲಭವಾಗಿ ಹೇಳಿಬಿಡ್ತೀನಾ?
ಮಾಡರ್ನ್ ಮಾಲತಿಯ ಮದುವೆ ಗ್ರಾಂಡಾಗಿ ನಡೆಯುತ್ತಿತ್ತು. ಆಗ ಡಿ.ಜೆ. ಡ್ಯಾನ್ಸ್ ಬಗ್ಗೆ ಘೋಷಣೆ ಮಾಡುತ್ತಾ, “ಯಾರಿಗೆ ಡ್ಯಾನ್ಸ್ ಬರುವುದಿಲ್ಲವೋ ಅವರು ತಮ್ಮ ಎಮ್ಮೆಗಳನ್ನು ಮೇಯಿಸಲು ಹೋಗಬಹುದು….” ಎಂದು ಹಾಸ್ಯ ಮಾಡಿದ.
ತಕ್ಷಣ ಪುಟ್ನಂಜ ಹೆಂಡತಿಗೆ ಹೇಳಿದ, “ನಡಿ ಕಣಮ್ಮಿ, ಬೇಗ ಬಫೆ ಊಟಕ್ಕೆ ಹೋಗೋಣ….”
ಶೀಲಾ : ಹೆಂಡತಿ ಅಂದರೆ ಹೇಗಿರಬೇಕು?
ಲೋಲಾ : ಪೇಪರ್ ವೆಯ್ಟ್ ತರಹ ಇರಬೇಕು. ಪೇಪರ್ ಪಟಪಟನೆ ಹೊಡೆದುಕೊಳ್ಳುವಂತೆ ಗಂಡನನ್ನು ಒದ್ದಾಡಿಸುತ್ತಾಳೆಯೇ ವಿನಾ, ಹಾರಿ ಹೋಗಲು ಬಿಡುವುದಿಲ್ಲ.
ಸುರೇಶ್ : ನನಗೆ ಇನ್ನೂ ಅರ್ಥವಾಗದ ವಿಷಯ ಅಂದ್ರೆ, ವಾಟ್ಸ್ಆ್ಯಪ್‌ನಿಂದ ದೊಡ್ಡ ಲಾಭವೇನು ಅಂತ?
ಮಹೇಶ್ : ಅದೇ…. ಹೆಂಗಸರು ಗುಸುಗುಸು ಅಂತ ಗುಟ್ಟು ಹಂಚಿಕೊಳ್ಳುತ್ತಲೇ ಇರುತ್ತಾರೆ, ಆದರೆ ಒಂದಿಷ್ಟೂ ಸದ್ದು ಹೊರಗೆ ಬರಲ್ಲವಲ್ಲ… ಹಾಗೇ!
ಪತಿ : ಇವತ್ತಿನ ಡಿನ್ನರ್‌ಗೆ ಬಿಗ್ ಚಾಯ್ಸ್ ಇದೆ ಅಂತ ಹೇಳ್ತಿದ್ದೆ… ಇಲ್ಲಿ ನೋಡಿದರೆ ರೊಟ್ಟಿಗೆ ಒಂದೇ ಒಂದು ಪಲ್ಯ ಇದೆಯಲ್ಲ….?
ಪತ್ನಿ : ಈಗಲೂ ಚಾಯ್ಸ್ ಇದ್ದೇ ಇದೆ… ಬೇಕಾದರೆ ತಿನ್ನೋದು, ಬೇಡಾದ್ರೆ ಬಿಡೋದು!
ಶಂಕ್ರು : ಹೆಂಡತಿ ಅನ್ನೋಳು ಮಾಫಿಯಾಗಿಂತ ಹೆಚ್ಚು ಅಪಾಯಕಾರಿ…. ಗೊತ್ತಾ?
ಸುಂದ್ರು : ಅದು ಹೇಗೆ?
ಶಂಕ್ರು : ಮಾಫಿಯಾಗೆ ಕೇವಲ ನಿಮ್ಮ ಆಸ್ತಿ ಅಥವಾ ಪ್ರಾಣ ಎರಡಲ್ಲೊಂದು ಮಾತ್ರ ಬೇಕಾಗುತ್ತೆ. ಆದರೆ ಹೆಂಡತಿ ಹಾಗಲ್ಲ, ಅವಳು ಗಂಡನ ಆಸ್ತಿ ಎಗರಿಸಿ ಪ್ರಾಣ ತೆಗೆಯುವವರೆಗೂ ಬಿಡಲ್ಲ!
ಪತ್ನಿ : ನೋಡ್ರಿ, ಈ ಸಲದ ನನ್ನ ಬರ್ತ್‌ಡೇಗೆ ನೀವು ನನಗೆ ಬ್ಲ್ಯಾಕ್‌ಬೆರಿ ಅಥವಾ ಆ್ಯಪ್ ಕೊಡಿಸಲೇಬೇಕು!
ಪತಿ : ಅಯ್ಯೋ ಹುಚ್ಚಿ, ಕೇಳೋದು ಕೇಳಿದೆ. ದೊಡ್ಡದಾಗಿ ಕಲ್ಲಂಗಡಿ ಹಣ್ಣೋ, ಹಲಸಿನ ಹಣ್ಣೋ ಕೇಳಬಾರದಿತ್ತೇ?
ಕಠ್ಮಂಡುವಿಗೆ ವರ್ಗಾವಣೆ ಆಗಿ ಹೋಗಿದ್ದ ತಮ್ಮ ಅಳಿಯನಿಗೆ ಅತ್ತೆ ವಿಶಾಲಾಕ್ಷಮ್ಮ ಫೋನ್ ಮಾಡಿ ಕೇಳಿದರು, “ಏನಪ್ಪ… ಭೂಕಂಪದ ಸಮಾಚಾರವೇನು?”
“ಒಳಗೆ ಅಡುಗೆ ಮಾಡುತ್ತಿರಬೇಕು. ಕರೆದು ಫೋನ್ ಕೊಡಲೇ… ಮಾತಾಡ್ತೀರಾ?” ಅಳಿಯ ಕೇಳಿದ.
ಅಜಯ್ : ಹೆಂಗಸರು ಬೈತಲೆಗೆ ಸಿಂಧೂರ ಹಚ್ಚಿಕೊಳ್ಳುವುದೇಕೆ?
ವಿಜಯ್ : ಈ ಫ್ಲಾಟ್‌ನ ರೆಜಿಸ್ಟ್ರೇಷನ್ ಆಗಿಹೋಗಿದೆ ಎಂದು ಜನರಿಗೆ ಸಾರುವುದಕ್ಕಾಗಿ.
ತಂದೆ : ಏನಪ್ಪ ಮಗು… ನಿನ್ನ ರಿಸಲ್ಟ್ ಏನಾಯ್ತು?
ಮಗ : ಅಪ್ಪ…80% ಮಾರ್ಕ್ಸ್ ಬಂದಿದೆ.
ತಂದೆ : ಆದರೆ ಮಾರ್ಕ್ಸ್ ಕಾರ್ಡ್‌ನಲ್ಲಿ 40% ಅಂತ ಮಾತ್ರ ತೋರಿಸಲಾಗಿದೆ….
ಮಗ : ಉಳಿದದ್ದನ್ನು ಆಧಾರ್‌ಕಾರ್ಡ್‌ಗೆ ಲಿಂಕ್ ಮಾಡಿದಾಗ, ನಮ್ಮ ಅಕೌಂಟ್‌ನಲ್ಲಿ 40% ಸಬ್ಸಿಡಿ ಸಿಗುತ್ತದಂತೆ.
ಯಾರೋ ತುರ್ತಾಗಿ ಪೊಲೀಸ್ ಠಾಣೆಗೆ ಫೋನ್ ಮಾಡಿದರು.
ಧ್ವನಿ : ರೀ ಸ್ವಾಮಿ, ಇಲ್ಲೊಬ್ಬ ಹೆಂಗಸು ತನ್ನ ಗಂಡನಿಗೆ ಗುಂಡಿಟ್ಟು ಕೊಂದುಬಿಟ್ಟಿದ್ದಾಳೆ!
ಪೊಲೀಸ್ : ಆದರೆ ಯಾಕೆ ಅಂತ?
ಧ್ವನಿ : ಯಾಕಂದ್ರೆ…. ಅವಳು ಒರೆಸಿದ್ದ ನೆಲದ ಮೇಲೆ ಗಮನಿಸದೆ ಗಂಡ ಕಾಲಿಟ್ಟಿದ್ದನಂತೆ.
ಪೊಲೀಸ್ : ಹಾಗಿದ್ದರೆ ತಕ್ಷಣ ಆ ಹೆಂಗಸನ್ನು ಬಂಧಿಸಿ!
ಧ್ವನಿ : ಆ ಧೈರ್ಯ ಯಾರಿಗುಂಟು? ಆ ನೆಲ ಇನ್ನೂ ಆರಿಲ್ಲ.
ಪತ್ನಿ : ರೀ…. ಥೂ ನಿಮ್ಮ! ಸ್ವಲ್ಪ ನಾಚಿಕೆ ಇಲ್ಲವೆ ಬೀದೀಲಿ ಹೋಗೋ ಹೆಂಗಸರನ್ನು ಬಾಯಿ ಬಿಟ್ಟುಕೊಂಡು ಹಾಗಾ ನೋಡುವುದು? ನಿಮಗೀಗ ಮದುವೆ ಆಗಿದೆ ಅಂತ ನೆನಪಿರಲಿ.
ಪತಿ : ಅಯ್ಯೋ ನಿನ್ನ…. ಉಪವಾಸ ಇರೋವಾಗ ಮೆನು ಕಾರ್ಡ್ ಸಹ ನೋಡಬಾರದು ಅಂತ ಯಾರೂ ರೂಲ್ಸ್ ಮಾಡಿಲ್ಲ ಬಿಡು.
ಗುಂಡ ರಾತ್ರಿ ಸೆಕೆಂಡ್ ಶೋ ಮುಗಿಸಿಕೊಂಡು ಸೈಕಲ್‌ನಲ್ಲಿ ಮನೆಗೆ ಹೊರಟಿದ್ದ. ಕರೆಂಟ್ ಹೋಯ್ತು, ಆ ದಿನ ಅಮಾವಾಸ್ಯೆ ಬೇರೆ. ಗಾಡಾಂಧಕಾರದಲ್ಲಿ ದಾರಿ ತಪ್ಪಿ ಸ್ಮಶಾನದ ಹಾದಿ ಹಿಡಿದು, ಅಂತೂ ಹೇಗೋ ಕಷ್ಟಪಟ್ಟು ಸೈಕಲ್ ಹೊಡೆಯುತ್ತಾ ಆಚೆ ಬಂದ. ಏದುಸಿರು ಬಿಡುತ್ತಾ, ತನ್ನ ಬೆವರು ಒರೆಸಿಕೊಳ್ಳುತ್ತಾ ಎದುರಿಗೆ ಸಿಕ್ಕವರನ್ನು ಕೇಳಿದ, “ಇದೆಂಥ ರೋಡು? ಇಷ್ಟೊಂದು ಸ್ಪೀಡ್ ಬ್ರೇಕರ್ಸ್ ತುಂಬಿತ್ತಲ್ಲ…..?”
ಸುದ್ದಿ : ಜನತೆ ತಾವಾಗಿ ಅಡುಗೆ ಗ್ಯಾಸ್ ಸಿಲಿಂಡರ್‌ನ ಸಬ್ಸಿಡಿ ಬಿಟ್ಟುಕೊಡುವೆತೆ ಮನವಿ.
“ಆಹಾ, ಇವರಲ್ಲವೇ ನಿಜವಾದ ರಾಜಕಾರಣಿಗಳು… ತಾವಂತೂ ಸಂಸದರಾಗಿ ಸಬ್ಸಿಡಿಯಲ್ಲಿ ಸಿಗುವ 20/ ರೂ.ಗಳ ಊಟ ಮಾಡಿ ಜನತೆಗೆ ಮಾತ್ರ ಸಿಲಿಂಡರ್ ಸಬ್ಸಿಡಿ ಬಿಡಿ ಅಂತ ಹೀಗಾ ಮನವಿ ಮಾಡುವುದು?”