ಮಳೆಗಾಲದಲ್ಲಿ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಫಂಗಲ್ ಇನ್ಛೆಕ್ಷನ್‌ ಆಗದಿರಲು ವಿಧಾನಗಳನ್ನು ಈ ಅನುಸರಿಸಿ ಮಾನ್‌ಸೂನ್‌ ಹನಿಗಳು ಬಿಸಿಲಿನಲ್ಲಿ ನಮಗೆ ಎಷ್ಟು ನೆಮ್ಮದಿಯನ್ನು ಕೊಡುತ್ತವೆ ಅಷ್ಟೇ ತೊಂದರೆಗಳನ್ನೂ ತರುತ್ತವೆ. ಮಾನ್‌ಸೂನ್‌ನಲ್ಲಿ ತ್ವಚೆಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ತ್ವಚೆಯಲ್ಲಿ ಒಮ್ಮೊಮ್ಮೆ ಫಂಗಲ್ ಇನ್ಛೆಕ್ಷನ್‌ ಕೂಡ ಆಗುತ್ತದೆ. ಖ್ಯಾತ ಡರ್ಮೆಟಾಲಜಿಸ್ಟ್ ಡಾ. ನಿರ್ಮಲಾ ಹೀಗೆ ಹೇಳುತ್ತಾರೆ. ಮಳೆಗಾಲದಲ್ಲಿ ತ್ವಚೆಯಲ್ಲಿ ಹೆಚ್ಚು ಸಮಯದವರೆಗೆ ಆರ್ದ್ರತೆ ಇರುವುದರಿಂದ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಫಂಗಲ್ ಇನ್ಛೆಕ್ಷನ್‌ ಹೆಚ್ಚಾಗುತ್ತದೆ. ಇವುಗಳಿಂದ ಪಾರಾಗಲು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು, ಆ್ಯಂಟಿ ಫಂಗಲ್ ಕ್ರೀಂ, ಸೋಪು ಮತ್ತು ಪೌಡರ್‌ ಉಪಯೋಗಿಸುವುದು ಸೂಕ್ತ. ಕೆಳಗೆ ಕೊಟ್ಟಿರುವ ಟಿಪ್ಸ್ ಉಪಯೋಗಿಸಿ.

ತ್ವಚೆಯನ್ನು 3-4 ಬಾರಿ ಸೋಪ್

ಇಲ್ಲದ ಫೇಸ್‌ ವಾಶ್‌ನಿಂದ ಸ್ವಚ್ಛಗೊಳಿಸಿ. ಅದರಿಂದ ತ್ವಚೆಯ ಮೇಲೆ ಜಮೆಗೊಂಡಿರುವ ಜಿಡ್ಡಿನ ಪದಾರ್ಥಗಳು ದೂರಾಗುತ್ತವೆ.

ಆ್ಯಂಟಿ ಬ್ಯಾಕ್ಟೀರಿಯಲ್ ಟೋನರ್‌ನ್ನು ಮಾನ್‌ಸೂನ್‌ನಲ್ಲಿ ಉಪಯೋಗಿಸಿದರೆ ಹೆಚ್ಚು ಲಾಭ. ಅದು ಚರ್ಮವನ್ನು ಸೋಂಕು ಮತ್ತು ಒಡೆಯುವುದರಿಂದ ರಕ್ಷಿಸುತ್ತದೆ.

ಮಾನ್‌ಸೂನ್‌ನಲ್ಲಿ ಅನೇಕ ಬಾರಿ ಜನರು ಸನ್‌ಸ್ಕ್ರೀನ್‌ ಹಚ್ಚುವುದನ್ನು ಇಷ್ಟಪಡುವುದಿಲ್ಲ. ಮೋಡಗಳಿಂದಲೂ ಯುವಿ ಕಿರಣಗಳು ನಮ್ಮನ್ನು ತಲುಪುತ್ತವೆ. ಆದ್ದರಿಂದ ಸನ್‌ಸ್ಕ್ರೀನ್‌ ಲೋಶನ್‌ ಅಥವಾ ಕ್ರೀಂ ಅಗತ್ಯವಾಗಿ ಹಚ್ಚಿ.

ಈ ಹವಾಮಾನದಲ್ಲಿ ಜನರು ನೀರನ್ನು ಕುಡಿಯುವುದು ಕಡಿಮೆ. ಅದರಿಂದ ತ್ವಚೆಯಲ್ಲಿ ಆರ್ದ್ರತೆ ಕಡಿಮೆಯಾಗುತ್ತದೆ.  ನಿಯಮಿತವಾಗಿ 7-8 ಗ್ಲಾಸ್‌ ನೀರನ್ನು ಅಗತ್ಯವಾಗಿ ಕುಡಿಯಿರಿ.

ನಿಮ್ಮ ಮುಖವನ್ನು ದಿನ ಒಳ್ಳೆಯ ಸ್ಕಿನ್‌ ಸ್ಕ್ರಬರ್‌ನಿಂದ ಸ್ವಚ್ಛಗೊಳಿಸಿ.

ಆಹಾರದಲ್ಲಿ ಜೂಸ್‌ ಮತ್ತು ಸೂಪ್‌ನ್ನು ಹೆಚ್ಚಾಗಿ ತೆಗೆದುಕೊಳ್ಳಿ. ಯಾವುದೇ ತರಕಾರಿಯನ್ನು ಬೇಯಿಸುವ ಮೊದಲು ಚೆನ್ನಾಗಿ ತೊಳೆಯಿರಿ. ಸಾಧ್ಯವಾದರೆ ಕೊಂಚ ಬಿಸಿನೀರಿನಲ್ಲಿ ತೊಳೆಯಿರಿ.

ನೀವು ಹೊರಗಿನಿಂದ ಮನೆಗೆ ಬಂದಾಗ ಬೆಚ್ಚಗಿನ ನೀರು ಮತ್ತು ಸೋಪ್‌ನಿಂದ ಕೈಕಾಲುಗಳನ್ನು ತೊಳೆದುಕೊಂಡು ನಂತರ ಮಾಯಿಶ್ಚರೈಸರ್‌ ಹಚ್ಚಿ.

ಈ ಹವಾಮಾನದಲ್ಲಿ ಕಾಲುಗಳ ಬಗ್ಗೆ ವಿಶೇಷ ಗಮನ ನೀಡಬೇಕು. ಅಧಿಕ ಸಮಯ ಒದ್ದೆಯಾಗಿರುವುದರಿಂದ ಅವುಗಳಲ್ಲಿ ಹೆಚ್ಚು ಫಂಗಲ್ ಇನ್ಛೆಕ್ಷನ್‌ ಆಗುತ್ತದೆ. ಈ ಹವಾಮಾನದಲ್ಲಿ ಮುಚ್ಚಿದ ಹಾಗೂ ಒದ್ದೆ ಶೂಸನ್ನು ಎಂದೂ ಧರಿಸಬೇಡಿ. ಒಂದು ವೇಳೆ ನಿಮ್ಮ ಶೂಸ್‌ ಒದ್ದೆಯಾದರೆ ಅವನ್ನು ತೆಗೆದು ಒಣಗಿಸಿ. ಆಗಾಗ್ಗೆ ಪೆಡಿಕ್ಯೂರ್‌ನ್ನು ಅಗತ್ಯವಾಗಿ ಮಾಡಿಸಿ.

ಮಾನ್‌ಸೂನ್‌ನಲ್ಲಿ ಕೂದಲಿಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಈ ಹವಾಮಾನದಲ್ಲಿ ಬೆವರಿನ ಜೊತೆ ಜೊತೆಗೆ ಕೂದಲು ಸಹ ಹಲವಾರು ಬಾರಿ ಒದ್ದೆಯಾಗುತ್ತದೆ. ಆದ್ದರಿಂದ ವಾರದಲ್ಲಿ 2-3 ಬಾರಿ ಶ್ಯಾಂಪೂ ಮಾಡಿ. ಜೊತೆಗೆ ಕಂಡೀಷನರ್‌ ಹಚ್ಚಲು ಮರೆಯದಿರಿ. ಇದಲ್ಲದೆ ಮಳೆ ನೀರಿನಿಂದ ಕೂದಲು ಒದ್ದೆಯಾದರೆ ಅನ್ನುವ ಟವೆಲ್‌ನಿಂದ ಚೆನ್ನಾಗಿ ಒರೆಸಿ ಒಣಗಿಸಿ. ವಾರದಲ್ಲಿ 1 ದಿನ ಕೂದಲಿಗೆ ಎಣ್ಣೆ ಹಚ್ಚಲು ಮರೆಯದಿರಿ. ಡಾ. ನಿರ್ಮಲಾ ಹೀಗೆ ಹೇಳುತ್ತಾರೆ, “ಮಾನ್‌ಸೂನ್‌ನಲ್ಲಿ ಬಿಗಿಯಾದ ಉಡುಪುಗಳನ್ನು ಧರಿಸಬೇಡಿ. ನೈಲಾನ್‌ ಫ್ಯಾಬ್ರಿಕ್‌ಗೆ ಬದಲು ಹತ್ತಿ ಬಟ್ಟೆ ಧರಿಸಿ. ನಿಮ್ಮ ತ್ವಚೆಗೆ ಉಸಿರಾಡಲು ಸಾಧ್ಯವಾಗುವಂತೆ ಮಾಡಿ.”

ಮಾನ್‌ಸೂನ್‌ನಲ್ಲಿ ಆಗಾಗ್ಗೆ ಕೆಳಕಂಡ ಕೆಲವು ಮನೆಯ ಪ್ಯಾಕ್‌ ಹಾಕಬಹುದು.

ದಾಳಿಂಬೆ ಆ್ಯಂಟಿ ಏಜಿಂಗ್‌ನ ಕೆಲಸ ಮಾಡುತ್ತದೆ. ಅದರಲ್ಲಿ ವಿಟಮಿನ್‌ ಸಿ ಹೆಚ್ಚಾಗಿ ಇರುವುದರಿಂದ ಒಣ ತ್ವಚೆಗೆ ಲಾಭಕಾರಿ. ಬೀಸಿದ 2 ಚಮಚ ದಾಳಿಂಬೆ ಬೀಜ ಮತ್ತು 1 ಕಪ್‌ ರಾ ಓಟ್‌ಮೀಲ್‌‌ನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು, ಅದಕ್ಕೆ 2 ಚಮಚ ಜೇನುತುಪ್ಪ ಮತ್ತು ಸ್ವಲ್ಪ ಮಜ್ಜಿಗೆ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಮುಖದ ಮೇಲೆ ಹಚ್ಚಿ 10 ನಿಮಿಷ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಒಂದು ಸೇಬನ್ನು ರುಬ್ಬಿಕೊಳ್ಳಿ. ಅದಕ್ಕೆ 1-1 ಚಮಚ ಸಕ್ಕರೆ ಮತ್ತು ಹಾಲು ಸೇರಿಸಿ ಬೆರೆಸಿ. ಅದಕ್ಕೆ ಕೆಲವು ಹನಿ ಕ್ಯಾಮೋಮಿಲ್ ಸೇರಿಸಿ ಫೇಸ್‌ ಪ್ಯಾಕ್‌ ತಯಾರಿಸಿ ಮುಖದ ಮೇಲೆ ಹಚ್ಚಿ 15 ನಿಮಿಷ ಬಿಡಿ. ನಂತರ ಮುಖನ್ನು ಸ್ವಚ್ಛಗೊಳಿಸಿ. ಅದರಿಂದ ನಿಮ್ಮ ತ್ವಚೆಯ ಡಲ್‌ನೆಸ್‌ ಕಡಿಮೆಯಾಗುತ್ತದೆ.

ಎನ್‌. ವಿನುತಾ    

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ