ರಶ್ಮಿಯನ್ನು ಆಫೀಸ್‌ನಲ್ಲಿ ಪ್ರತಿಯೊಬ್ಬರೂ ನೋಟೀಸ್ ಮಾಡುತ್ತಾರೆ. ಮಹಿಳೆಯರೂ ಸಹ. ಏಕೆಂದರೆ ಅವಳು ಬಹಳ ಸ್ಟೈಲಿಶ್ ಆಗಿದ್ದಾಳೆ. ಪ್ರತಿದಿನ ಬ್ರ್ಯಾಂಡೆಡ್ ಡ್ರೆಸ್ ಧರಿಸಿ ಆಫೀಸಿಗೆ ಬರುತ್ತಾಳೆ. ಕಾಲೇಜ್‌ನಲ್ಲಿ ಆರತಿ ಮಾತಾಡುತ್ತಿದ್ದರೆ ಎಲ್ಲರ ದೃಷ್ಟಿಯೂ ಅವಳ ಮೇಲೆ ಹೋಗುತ್ತದೆ. ಅದಕ್ಕೆ ಕಾರಣ ಅವಳು ಮಾತನಾಡುವ ಸ್ಟೈಲ್. ಅವಳು ಇಂಗ್ಲಿಷ್‌ನ್ನು ಸುಸೂತ್ರವಾಗಿ ಮಾತಾಡುತ್ತಾಳೆ. ಮಾಲಾ ಅತ್ತಿಗೆ ಎಲ್ಲರ ಫೇವರಿಟ್. ಮನೆಯಲ್ಲಿ ಎಲ್ಲ ಕೆಲಸಗಳಿಗೂ ಅವಳ ಸಲಹೆಯನ್ನೇ ಕೇಳಿ ಮಾಡುತ್ತಾರೆ. ಎಲ್ಲಿಯವರೆಗೆಂದರೆ ಯಾರಿಗೆ ಯಾವ ಗಿಫ್ಟ್ ಕೊಡಬೇಕು ಎಂದು ಸಹ ಅವರನ್ನೇ ಕೇಳುತ್ತಾರೆ. ಅಂದಹಾಗೆ ಅವರು ಬಹಳ ಸ್ಟೈಲಿಶ್ ಆಗಿದ್ದಾರೆ.
ಸ್ಟೈಲಿಶ್ ಆಗುವುದೆಂದರೆ ಏನು?
ಬರೀ ಒಳ್ಳೆಯ ಬ್ರ್ಯಾಂಡ್‌ನ ಬಟ್ಟೆ ಧರಿಸುವುದರಿಂದ ಯಾರೇ ಆಗಲಿ ಸ್ಟೈಲಿಶ್ ಆಗಬಹುದು ಅಥವಾ ಇಂಗ್ಲಿಷ್‌ನಲ್ಲಿ `ಧಸ್ ಪುಸ್’ ಎಂದು ಮಾತಾಡುವುದರಿಂದ ಅಥವಾ ಎಲ್ಲರ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುವುದರಿಂದ ಯಾರನ್ನಾದರೂ ಸ್ಟೈಲಿಶ್ ಎನ್ನುವ ಶ್ರೇಣಿಯಲ್ಲಿಡುತ್ತದೆಯೇ? ಬಹುಶಃ ಇಲ್ಲ. ಸ್ಟೈಲಿಶ್ ಆಗುವುದೆಂದರೆ, ನಿಮ್ಮ ಅಂದಾಜನ್ನು ಬೇರೊಂದು ಅಂದಾಜಿನಲ್ಲಿ ಜನರ ಮುಂದೆ ಪ್ರಸ್ತುತಪಡಿಸುವುದು. ಇದನ್ನು ಸಾದಾ ಉಡುಪು ಧರಿಸಿದರು, ಕನ್ನಡದಲ್ಲಿ ಮಾತಾಡುವವರು ಕೂಡ ಮಾಡಬಹುದು. ಆದರೆ ಮಹಿಳೆಯ ವಿಷಯ ಬಂದಾಗ ಸ್ಟೈಲಿಶ್ ಪ್ರಮಾಣ ಕೊಂಚ ಬದಲಾಗುತ್ತದೆ. ಏಕೆಂದರೆ ಮಹಿಳೆಯರಲ್ಲಿ ಸೌಂದರ್ಯ ಮತ್ತು ಶಾರೀರಿಕ ಅಲಂಕಾರಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಮಹಿಳೆಯರಲ್ಲಿ ತಾವು ಸುಂದರವಾಗಿದ್ದರೆ ಸ್ಟೈಲಿಶ್ ಕೂಡ ಆಗಿದ್ದೇವೆಂಬ ಭ್ರಮೆ ಇರುತ್ತದೆ. ವಾಸ್ತವವೇನೆಂದರೆ ಎಲ್ಲ ಸುಂದರ ಮಹಿಳೆಯರೂ ಸ್ಟೈಲಿಶ್ ಆಗಿರುವುದಿಲ್ಲ. ಅದಕ್ಕೆ ಕಾರಣ ಹೇಳುತ್ತಾ, ಓರಿಫ್ಲೇಮ್ ಇಂಡಿಯಾದ ಬ್ಯೂಟಿ ಮತ್ತು ಮೇಕಪ್ ತಜ್ಞೆ ಆಕೃತಿ ಹೀಗೆ ಹೇಳುತ್ತಾರೆ, “ನಾವು ದೈಹಿಕ ಸೌಂದರ್ಯವನ್ನು ಸ್ಟೈಲಿಶ್‌ಆಗುವ ಪ್ರಮಾಣವೆಂದು ಒಪ್ಪುವುದಿಲ್ಲ. ಏಕೆಂದರೆ ಸುಂದರವಾಗಿ ಇರುವುದರೊಂದಿಗೆ ನಿಮ್ಮ ವರ್ತನೆ, ಸಂಗಾತಿಯೊಂದಿಗೆ ಬಾಳುವಿಕೆ, ಆಹಾರ, ಉಡುಗೆ, ಮಾತು ಸ್ಟೈಲಿಶ್ ಆಗಿರುವುದು ಅಗತ್ಯ.”
ಮಹಿಳೆ ಸ್ಟೈಲಿಶ್ ಆಗಿ ಕಾಣಿಸುವ ನಿಟ್ಟಿನಲ್ಲಿ ದುಬಾರಿ ಹಾಗೂ ಬ್ರ್ಯಾಂಡೆಡ್ ಉಡುಪನ್ನು ತೊಡುತ್ತಾರೆ. ಆದರೆ ಅದನ್ನು ಕ್ಯಾರಿ ಮಾಡುವ ವಿಧಾನ ಅವರಿಗೆ ತಿಳಿದಿರುವುದಿಲ್ಲ. ಆ ಔಟ್‌ಫಿಟ್‌ನ್ನು ಕಾಂಪ್ಲಿಮೆಂಟ್ ಮಾಡುವ ಆ್ಯಕ್ಸೆಸರೀಸ್, ಫುಟ್‌ವೇರ್ ಮತ್ತು ಸ್ಟೈಲ್‌ನ ಅಭಾವದಲ್ಲಿ ಅವರ ಲುಕ್ಸ್ ಸಪ್ಪಗೆ ಕಾಣುತ್ತದೆ. ಕೆಲವು ಮಹಿಳೆಯರು ಲುಕ್ಸ್ ನಲ್ಲಿ ಸ್ಟೈಲಿಶ್ ಆಗಿರುತ್ತಾರೆ. ಆದರೆ ಅವರ ನಡವಳಿಕೆ ಅವರನ್ನು ಇನ್‌ಡೀಸೆಂಟ್ ಮಾಡಿಬಿಡುತ್ತದೆ. ಸ್ಟೈಲಿಶ್ ಔಟ್‌ಫಿಟ್ ಮತ್ತು ಆ್ಯಕ್ಸೆಸರೀಸ್‌ನ್ನು ಕ್ಯಾರಿ ಮಾಡಿದರೂ ಕೂರುವ, ಏಳುವ ವಿಧಾನ ಸರಿಯಾಗಿಲ್ಲದೆ ಅವರು ಸ್ಟೈಲಿಶ್ ಆಗುವ ರೇಸ್‌ನಿಂದ ಹೊರಗೆ ಉಳಿಯುತ್ತಾರೆ. ಅಂತಹ ಮಹಿಳೆಯರ ಬಗ್ಗೆ ಆಕೃತಿ ಹೀಗೆ ಹೇಳುತ್ತಾರೆ, “ಔಟ್‌ಫಿಟ್‌ಗೆ ಮ್ಯಾಚ್ ಆಗುವ ಆ್ಯಕ್ಸೆಸರೀಸ್ ಇದ್ದರೆ ಸಾಲದು. ಅದನ್ನು ಕ್ಯಾರಿ ಮಾಡುವ ವಿಧಾನ, ಕೂರುವ ಏಳುವ ವಿಧಾನ, ಜೊತೆಗೆ ಮಾತನಾಡುವ ವಿಧಾನ ಬರಬೇಕು. ನೀವು ಒನ್‌ಪೀಸ್ ಧರಿಸಿ ನಿಮ್ಮ ಕೈಕಾಲುಗಳನ್ನು ನಿಯಂತ್ರಿಸಿ ಮಾತಾಡಲು ಸಾಧ್ಯವಾಗದಿದ್ದರೆ ಅದನ್ನು ಇನ್‌ಡೀಸೆಂಟ್ ವಿಧಾನವೆಂದು ಹೇಳುತ್ತಾರೆ. ಒಂದುವೇಳೆ ಸ್ಟೈಲಿಶ್ ಔಟ್‌ಫಿಟ್ ಧರಿಸಿದರೂ ಅದಕ್ಕೆ ತಕ್ಕನಾದ ಪರಿಸರ ಇಲ್ಲದಿದ್ದರೆ ನಿಮ್ಮನ್ನು ಸ್ಟೈಲಿಶ್ ಅಲ್ಲ ಮೂರ್ಖರ ಶ್ರೇಣಿಯಲ್ಲಿ ಇಡಲಾಗುವುದು.
ಇಲ್ಲಿ ಸ್ಟೈಲಿಶ್ ಆಗುವುದು ಅಗತ್ಯವಿತ್ತೇ ಎಂಬ ಪ್ರಶ್ನೆ ಏಳುತ್ತದೆ. ಸರಳವಾಗಿ ಇರುವುದರಲ್ಲಿ ತಪ್ಪೇನಿದೆ? ಈ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಆಕೃತಿ ಹೀಗೆ ಹೇಳುತ್ತಾರೆ, “ಆಧುನಿಕ ಯುಗದಲ್ಲಿ ಸ್ಟೈಲಿಶ್ ಆಗಿರುವುದು ಅಗತ್ಯವಷ್ಟೇ ಅಲ್ಲ, ಅನಿವಾರ್ಯ ಕೂಡ. ಏಕೆಂದರೆ ನೀವು ಸ್ಟೈಲಿಶ್ ಆಗದಿದ್ದರೆ ನಿಮ್ಮನ್ನು ಅನ್‌ಫ್ಯಾಷನೆಬಲ್ ಜನರ ಪಟ್ಟಿಗೆ ಸೇರಿಸಲಾಗುವುದು. ಹೊಳಪಿನಿಂದ ಕೂಡಿದ್ದರೆ ಸ್ಟೈಲಿಶ್ ಎಂದು ಅರ್ಥವಲ್ಲ. ಸ್ಟೈಲಿಶ್ ಜನರೂ ಸರಳವಾಗಿ ಕಂಡುಬಂದು ಅವರ ನಡವಳಿಕೆಯೂ ಸರಳವಾಗಿರುತ್ತದೆ. ಬದುಕು ಸರಿಯಾದ ವಿಧಾನ ಅವರನ್ನು ಸ್ಟೈಲಿಶ್‌ಗಳ ಶ್ರೇಣಿಯಲ್ಲಿ ನಿಲ್ಲಿಸುತ್ತದೆ. ಒಳ್ಳೆಯ ಲೈಫ್ ಸ್ಟೈಲ್‌ನವರಾಗುವುದರಲ್ಲಿ ಯಾವುದೇ ತೊಂದರೆ ಇಲ್ಲ. ಏಕೆಂದರೆ ಅದರಿಂದ ನಿಮ್ಮ ಮಾನಸಿಕ ವಿಕಾಸ ಉಂಟಾಗುತ್ತದೆ ಮತ್ತು ಮುಂದುವರಿಯಲು ನಿಮಗೆ ಪ್ರೇರಣೆ ಸಿಗುತ್ತದೆ. ಕೆಲವು ಮಹಿಳೆಯರು ಅವುಗಳಿಂದ ಬಹಳ ಖರ್ಚಾಗುತ್ತದೆ ಎಂಬ ತಪ್ಪು ತಿಳಿವಳಿಕೆಯಿಂದ ಸ್ಟೈಲಿಶ್ ಆಗಿ ಕಾಣುವುದು ಅಗತ್ಯವಿಲ್ಲ ಎಂದುಕೊಂಡಿರುತ್ತಾರೆ. ಅದೊಂದು ಭ್ರಮೆ. ಒಳ್ಳೆಯ ಜೀವನಶೈಲಿಗೆ ಖರ್ಚಿಗಿಂತ ಒಳ್ಳೆಯ ಆಲೋಚನೆ ಅಗತ್ಯ. ಮನೆ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ವ್ಯವಸ್ಥಿತವಾಗಿದ್ದರೆ ಮಾತ್ರ ನೀವು ಸ್ಟೈಲಿಶ್ ಆಗಿ ಜೀವಿಸುತ್ತಿದ್ದೀರೆಂದು ಅರ್ಥ. ಅಲ್ಲದೆ ನೀವು ವರ್ಷದಲ್ಲಿ 2 ಸಾರಿ ಮಾತ್ರ ಶಾಪಿಂಗ್ ಮಾಡಿದರೂ ನಿಮಗೆ ಸೂಟ್ ಆಗುವಂತಹ ಬಟ್ಟೆಯನ್ನು ಒಳ್ಳೆಯ ಮಾಲ್‌ನಿಂದಲೇ ಖರೀದಿಸಿ. ಆಗ ಅವನ್ನು ಬಹಳ ದಿನಗಳವರೆಗೆ ಧರಿಸಬಹುದು.
ಆಕೃತಿ ಹೀಗೆ ಹೇಳುತ್ತಾರೆ, “ಮಹಿಳೆಯರು ಒಮ್ಮೊಮ್ಮೆ ಅಗ್ಗದ ಉಡುಪುಗಳನ್ನು ಕಂಡು ಆಸೆಪಡುತ್ತಾರೆ. ಆ ಉಡುಪುಗಳು ಅವರಿಗೆ ಒಪ್ಪದಿದ್ದರೂ ಅವನ್ನು ಖರೀದಿಸುತ್ತಾರೆ. ಅನೇಕ ಬಾರಿ ಅವರು ಫ್ಯಾಷನೆಬಲ್ ಆಗಿ ಕಾಣಲು ತಮಗೆ ಕೆಟ್ಟದಾಗಿ ಕಾಣುವ ಉಡುಪುಗಳನ್ನು ಆರಿಸಿಕೊಳ್ಳುತ್ತಾರೆ. ಆದರೂ ತಮ್ಮನ್ನು ತಾವು ಬಹಳ ಅಪ್‌ಡೇಟ್ ಆಗಿದ್ದೇವೆ ಎಂದುಕೊಳ್ಳುತ್ತಾರೆ.
ಪರ್ಸನಾಲಿಟಿ ಅಪ್ ಟು ಡೇಟ್ ಆಗಿರಲಿ
ಅಪ್ ಟು ಡೇಟ್ ಆಗಿರುವುದರಲ್ಲಿ ಏನೂ ತಪ್ಪಿಲ್ಲ. ಆದರೆ ಎಲ್ಲ ವರ್ಗ, ವಯಸ್ಸು ಹಾಗೂ ಶರೀರಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೇರೆ ಬೇರೆ ವಸ್ತುಗಳಿವೆ. ಅವುಗಳ ಆಯ್ಕೆಗೆ ಸ್ಮಾರ್ಟ್‌ನೆಸ್ ಅಗತ್ಯ. ಆ ಸ್ಮಾರ್ಟ್‌ನೆಸ್ ನಿಮ್ಮನ್ನು ಸ್ಟೈಲಿಶ್ ಮಾಡುತ್ತದೆ. ಹೀಗೆ ನಿಮ್ಮ ಲೈಫ್ ಸ್ಟೈಲ್ ಅಪ್ ಟು ಡೇಟ್ ಆಗಿರುವುದು ಬಹಳ ಅಗತ್ಯ. ಉದಾಹರಣೆಗೆ ಮಾರುಕಟ್ಟೆಯಲ್ಲಿ ಹೊಸ ಫರ್ನೀಚರ್ ಬರುತ್ತಿದೆ. ಆದರೆ ನಿಮ್ಮ ಮನೆಯಲ್ಲಿ ಹಳೆಯ ಕಾಲದ ಸೋಫಾಸೆಟ್ ಇದ್ದರೆ ನೀವು ಪೂರ್ಣ ರೀತಿಯಲ್ಲಿ ಅಪ್ ಟು ಡೇಟ್ ಆಗಿಲ್ಲ ಎಂದು ಅರ್ಥ.
ಹೀಗೆಯೇ ನಿಮ್ಮ ಮಾತಿನಲ್ಲಿಯೂ ಹೊಸ ಶಬ್ದಗಳನ್ನು ಉಪಯೋಗಿಸಿ. ನಿಮಗೆ ಇಂಗ್ಲಿಷ್ ಮಾತನಾಡಲು, ಅರ್ಥ ಮಾಡಿಕೊಳ್ಳಲು ಸಾಧ್ಯವಿದ್ದರೆ ನಿಮಗೆ ಬಹಳಷ್ಟು ಉತ್ತಮ ಆಯ್ಕೆಗಳು ಇರುತ್ತವೆ. ಒಂದುವೇಳೆ ತಿಳಿಯದಿದ್ದರೆ ಆಗಲೂ ಕಠಿಣ ಭಾಷೆ ಉಪಯೋಗಿಸಬೇಡಿ. ಜೊತೆಗೆ ಆಹಾರದ ಬಗ್ಗೆಯೂ ನೀವು ಅಪ್ ಟು ಡೇಟ್ ಆಗಿರುವುದು ಅಗತ್ಯ. ವಿಶೇಷವಾಗಿ ನಿಮ್ಮ ಈಟಿಂಗ್ ಹ್ಯಾಬಿಟ್ ಚೆನ್ನಾಗಿರಬೇಕು ಹಾಗೂ ಸಮಯಕ್ಕೆ ತಕ್ಕಂತೆ ಇರಬೇಕು. ಬರೀ ಅನ್ನ ಸಾರು, ದೋಸೆ, ರೊಟ್ಟಿ ಮಾಡಬೇಡಿ. ನಿಮ್ಮ ಆಹಾರ ವೆರೈಟಿ ಆಗಿರಲಿ.
ನ್ಯೂಟ್ರಿಷನಿಸ್ಟ್ ಸೋನಿಯಾ ಹೀಗೆ ಹೇಳುತ್ತಾರೆ, “ಶುದ್ಧ ಭಾರತೀಯ ಆಹಾರ ಸ್ವಾದಿಷ್ಟವಾಗಿ, ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೂ ವಿದೇಶಿ ಆಹಾರ ಸಹ ಹಾನಿಕರಲ್ಲ. ಅನೇಕ ಬಾರಿ ಆರೋಗ್ಯಕ್ಕೆ ಬಹಳ ಉತ್ತಮವಾಗಿರುತ್ತದೆ. ಇಟ್ಯಾಲಿಯನ್, ಜಾಪನೀಸ್, ಚೈನೀಸ್, ಲೆಬನೀಸ್‌ಗಳಲ್ಲಿ ಅನೇಕ ಡಿಶೆಸ್ ಇರುತ್ತವೆ. ಅವನ್ನು ಸುಲಭವಾಗಿ ಮನೆಯಲ್ಲೇ ಮಾಡಬಹುದು. ಆದರೆ ಅದನ್ನು ತಿನ್ನುವ ಸರಿಯಾದ ವಿಧಾನ ಹಾಗೂ ಸರಿಯಾದ ಪಾತ್ರೆಗಳು ಯಾವುದೆಂದು ತಿಳಿದುಕೊಳ್ಳುವುದು ಬಹಳ ಅಗತ್ಯ. ಏಕೆಂದರೆ ಸರಿಯಾದ ವಿಧಾನದಿಂದ ಬೇಯಿಸಿದ ಡಿಶ್ ನಿಮಗೆ ರುಚಿ ಹಾಗೂ ಆರೋಗ್ಯ ಕೊಡುತ್ತದೆ. ಜೊತೆಗೆ ಸೇವಿಸುವ ಸರಿಯಾದ ವಿಧಾನ ನಿಮ್ಮನ್ನು ಸ್ಟೈಲಿಶ್ ಮಾಡುತ್ತದೆ.
ಗೃಹಿಣಿಯರು ಮತ್ತು ಹೋಟೆಲ್‌ಗಳಿಗೆ ಹೆಚ್ಚು ಹೋಗದ ಮಹಿಳೆಯರಿಗೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ. ಹೀಗಾಗಿ ವಿದೇಶಿ ಆಹಾರ ತಿನ್ನುವ ಸಂದರ್ಭಗಳಲ್ಲಿ ಅದನ್ನು ತಿನ್ನುವ ಸರಿಯಾದ ವಿಧಾನ ತಿಳಿಯದಿರುವುದರಿಂದ ಜನರ ಮುಂದೆ ನಾಚಿಕೆಯಾಗುತ್ತದೆ. ಆದ್ದರಿಂದ ಈಟಿಂಗ್ ಹ್ಯಾಬಿಟ್‌ನಲ್ಲಿ ಅಪ್ ಡೇಟ್ ಆಗಿರುವುದು ಬಹಳ ಅಗತ್ಯವಾಗಿದೆ.
ಫಿಟ್ ಆಗಿದ್ದರೆ ಹಿಟ್
ಫಿಟ್ನೆಸ್ ಕೂಡ ಸ್ಟೈಲಿಶ್ ಆಗುವ ಒಂದು ಭಾಗವೆಂದು ಸೋನಿಯಾ ಹೇಳುತ್ತಾರೆ, “ಆರೋಗ್ಯವಂತ ಶರೀರಕ್ಕೆ ಫಿಟ್ ಆಗಿರುವುದು ಅಗತ್ಯ. ಫಿಟ್ನೆಸ್‌ಗೆ ವ್ಯಾಯಾಮ ಮುಖ್ಯ. ನೀವು ಆರೋಗ್ಯವಾಗಿದ್ದರೆ ಅದರ ಪ್ರಭಾವ ನಿಮ್ಮ ಸೌಂದರ್ಯದ ಮೇಲೆ ಬೀರುತ್ತದೆ. ನಿಮ್ಮ ಶರೀರ ಶೇಪ್‌ನಲ್ಲಿರುತ್ತದೆ. ವ್ಯಾಯಾಮದಿಂದ ದೈಹಿಕ ಸೌಂದರ್ಯದ ಜೊತೆ ಜೊತೆಗೆ ಮಾನಸಿಕ ಶಾಂತಿಯೂ ಸಿಗುತ್ತದೆ. ಅದು ನಿಮಗೆ ಸ್ಟೈಲಿಶ್ ಆಲೋಚನೆ ಕೊಡುತ್ತದೆ.
ಮನಸ್ಸು ಅಶಾಂತವಾಗಿದ್ದರೆ ಯಾವ ಕೆಲಸ ಸುಲಲಿತವಾಗಿ ಆಗುವುದಿಲ್ಲ. ಮನಸ್ಸು ಶಾಂತವಾಗಿದ್ದಾಗ ಅದೇ ಕೆಲಸವನ್ನು ಸುಸೂತ್ರವಾಗಿ ಹಾಗೂ ಸ್ಟೈಲ್‌ನೊಂದಿಗೆ ಮಾಡಬಹುದು. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಇಂದಿನ ಧಾವಂತದ ಬದುಕಿನಲ್ಲಿ ವ್ಯಾಯಾಮ ಮಾಡಲು ಯಾರಿಗೂ ಸಮಯವಿಲ್ಲ. ಮನೆ ಹಾಗೂ ಆಫೀಸಿನ ಕೆಲಸಗಳಲ್ಲಿ ಎಷ್ಟೊಂದು ವ್ಯಸ್ತವಾಗಿರುತ್ತೇವೆ. ಇನ್ನು ಮತ್ತೆ ವ್ಯಾಯಾಮ ಮಾಡುವ ಅಗತ್ಯವಾದರೂ ಏನಿದೆ ಎಂದು ಕೆಲವು ಮಹಿಳೆಯರು ಹೇಳುತ್ತಾರೆ.
ಅದರ ಬಗ್ಗೆ ಸೋನಿಯಾ ಹೀಗೆನ್ನುತ್ತಾರೆ, “ಮನೆ ಹಾಗೂ ಆಫೀಸಿನ ಕೆಲಸಗಳಲ್ಲಿ ದೇಹಕ್ಕೆ ಆಯಾಸವಾಗುವುದೇನೋ ನಿಜ. ಆದರೆ ಅದರ ಜೊತೆ ಮಾನಸಿಕ ಆಯಾಸ ಆಗುತ್ತದೆ. ಅದನ್ನು ದೂರ ಮಾಡಲು ಸ್ವಲ್ಪ ಹೊತ್ತಿನ ವ್ಯಾಯಾಮ ಬೇಕಾಗುತ್ತದೆ. ನೀವು ದಿನ 20 ರಿಂದ 30 ನಿಮಿಷಗಳು ಬಿಡುವು ಮಾಡಿಕೊಂಡು ವ್ಯಾಯಾಮ ಮಾಡಿದರೆ ನೀವು ಫಿಟ್ ಆಗಿರುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.
“ಆದರೆ ವ್ಯಾಯಾಮದ ವಿಧಾನ ಸರಿ ಇರಬೇಕು. ಖಾಲಿ ಜಾಗದಲ್ಲಿ ಒಂದು ಜಮಖಾನ ಹಾಸಿಕೊಂಡು ವ್ಯಾಯಾಮ ಮಾಡಬಹುದು. ವ್ಯಾಯಾಮದ ನಿಯಮಗಳನ್ನು ಅನುಸರಿಸುವುದರಿಂದ ಜೀವನಶೈಲಿ ಶಿಸ್ತಿನಿಂದ ಕೂಡಿರುತ್ತದೆ. ಶಿಸ್ತಿನಿಂದ ಜೀವನಶೈಲಿ ಸ್ಟೈಲಿಶ್ ಆಗುತ್ತದೆ.”
ಸ್ಟೈಲ್‌ನೊಂದಿಗೆ ಎಫಿಶಿಯೆನ್ಸಿ
ಯಾರಾದರೂ ನೋಡಲು ಎಷ್ಟೇ ಸುಂದರವಾಗಿರಲಿ, ಟ್ರೆಂಡಿ ಔಟ್‌ಫಿಟ್ ಧರಿಸಲಿ, ಶ್ರೀಮಂತ ಜೀವನ ನಡೆಸುತ್ತಿರಲಿ, ಅವರಲ್ಲಿ ಕಾರ್ಯ ಕುಶಲತೆ ಇಲ್ಲದಿದ್ದರೆ ಉಳಿದಕ್ಕೆ ಏನೂ ಬೆಲೆ ಇಲ್ಲ. ಒಂದು ಕ್ಷಣ ಯೋಚಿಸಿ. ಒಬ್ಬರು ಆಫೀಸಿಗೆ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಹೋಗುತ್ತಿರಬಹುದು. ಜನರನ್ನು ತಮ್ಮತ್ತ ಆಕರ್ಷಿಸಬಹುದು. ಅವರು ನೋಡಲು ಸ್ಟೈಲಿಶ್ ಆಗಿರಬಹುದು. ಆದರೆ ಕೆಲಸದಲ್ಲಿ ಝೀರೋ. ಒಂದು ಕೆಲಸವಾದರೂ ಸರಿಯಾಗಿ ಮಾಡಲು ಬರುವುದಿಲ್ಲ. ದಿನ ಬಾಸ್‌ನಿಂದ ಬೈಗುಳ ಕೇಳುತ್ತಾರೆ. ಹೀಗಿರುವಾಗ ಜನ, ಅವರ ಸ್ಟೈಲ್ ಬಗ್ಗೆ ಕಡಿಮೆ ಹಾಗೂ ಅವರ ಲೋ ಎಫಿಶಿಯೆನ್ಸಿ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಅದೇ ಇನ್ನೊಂದು ಕಡೆ ಒಬ್ಬಾತ ಕಾರ್ಯಕುಶಲಿಯಾಗಿದ್ದು ತನ್ನನ್ನು ಅಪ್ ಟುವಡೇಟ್ ಆಗಿಟ್ಟುಕೊಳ್ಳುತ್ತಾನೆ. ಆಗ ಜನ ಅವನ ಸ್ಟೈಲ್‌ನ್ನು ಕಾಪಿ ಮಾಡಲು ಇಚ್ಛಿಸುತ್ತಾರೆ. ಅಲ್ಲದೆ ಅವನ ಕಾರ್ಯ ಕುಶಲತೆಯನ್ನು ತಮ್ಮಲ್ಲೂ ಅಳಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಅಂದಹಾಗೆ ಎಫಿಶಿಯೆನ್ಸ್ ನೊಂದಿಗೆ ಕೆಲಸ ಮಾಡುವುದರಲ್ಲೂ ಸ್ಟೈಲ್ ಇರುವುದು ಬಹಳ ಮುಖ್ಯ. ಉದಾಹರಣೆಗೆ ಮೇಲ್ ಟೈಪ್ ಮಾಡುವಾಗ ನೀವು ಎಷ್ಟು ಚೆನ್ನಾಗಿ ಮೇಲ್ ಟೈಪ್ ಮಾಡಬಲ್ಲಿರಿ ಅಥವಾ ನೀವು ಉಪಯೋಗಿಸುವ ಶಬ್ದಗಳ ಆಯ್ಕೆ ನಿಮ್ಮ ಸ್ಟೈಲ್‌ನ್ನು ತೋರಿಸುತ್ತದೆ.
ಹೀಗೆಯೇ ಮನೆ ಕೆಲಸ ಮಾಡುವಾಗಲೂ ನಿಮ್ಮದೇ ಆದ ಒಂದು ಪ್ರತ್ಯೇಕ ಸ್ಟೈಲ್ ಇರಬಹುದು. ಅಡುಗೆಮನೆಯಲ್ಲಿ ಅಡುಗೆ ಮಾಡುವಾಗ ಸ್ವಚ್ಛತೆಯ ಕಡೆ ಗಮನ ಕೊಡಬೇಕು. ಸ್ವಚ್ಛವಾಗಿರುವುದೂ ಒಂದು ಸ್ಟೈಲ್ ಆಗಿರುತ್ತದೆ. ಕೆಲವು ಮಹಿಳೆಯರು ಕೆಲಸ ಮಾಡುವ ರೀತಿ ಹೇಗಿರುತ್ತದೆಂದರೆ. ಮನೆ ಕೆಲಸ ಮಾಡುತ್ತಾ ಮಾಡುತ್ತಾ ಅವರ ರೂಪವೇ ಹಾಳಾಗುತ್ತದೆ. ಕೆಲಸವನ್ನು ಕೊಂಚ ಜಾಣ್ಮೆಯಿಂದ ಮಾಡಿದರೆ ಕೆಲಸ ಚೆನ್ನಾಗಿ ಆಗುತ್ತದೆ ಮತ್ತು ನಿಮ್ಮ ಗೆಟಪ್ ಬಗ್ಗೆಯೂ ಯಾವುದೇ ತೊಂದರೆ ಬರುವುದಿಲ್ಲ.
ಇಲ್ಲಿ ಒಂದು ವಿಷಯ ತಿಳಿಯಬೇಕಾದದ್ದು ಅಗತ್ಯ. ಕೆಲಸ ಮಾಡುವ ರೀತಿಯನ್ನು ನಿಮ್ಮ ಆಲೋಚನೆ ಸ್ಟೈಲಿಶ್ ಆಗಿ ಮಾಡುತ್ತದೆ. ಆದ್ದರಿಂದ ಆಲೋಚನೆಯ ರೀತಿ ಸ್ಟೈಲಿಶ್ ಆಗಿರುವುದು ಮುಖ್ಯ. ನಾವು ಆಗಾಗ್ಗೆ ಹೆಚ್ಚು ಯೋಚಿಸುವ ವ್ಯಕ್ತಿಯನ್ನು ನೋಡಿ ನಗುತ್ತೇವೆ. ಆದರೆ ನಿಜಕ್ಕೂ ಅಂತಹ ಜನರ ಯೋಚನೆಯಲ್ಲಿ ಬಹಳ ವೆರೈಟಿ ಇರುತ್ತದೆ. ಅದು ಅವರನ್ನು ಹೆಚ್ಚು ಕಾರ್ಯಕುಶಲಿಗಳನ್ನಾಗಿ ಮಾಡುತ್ತದೆ.
ವಾರ್ಡ್ರೋಬ್/ಮೇಕಪ್ ಕಿಟ್ ಅಪ್‌ಡೇಟ್
ಒಬ್ಬ ವ್ಯಕ್ತಿಯ ಲುಕ್ಸ್ ಆತನ ವ್ಯಕ್ತಿತ್ವವನ್ನು ತೋರಿಸುತ್ತದೆ. ಯಾರಾದರೂ ನೋಡಲು ಸ್ಟೈಲಿಶ್ ಆಗಿದ್ದರೆ ಅವರ ಆಲೋಚನೆ ಮತ್ತು ಕೆಲಸ ಮಾಡುವ ವಿಧಾನ ಮೊದಲ ನೋಟದಲ್ಲೇ ಸ್ಟೈಲಿಶ್ ಅನ್ನಿಸುತ್ತದೆ.
ಆಕೃತಿ ಹೀಗೆ ಹೇಳುತ್ತಾರೆ, “ಕಾಸ್ಮೆಟಿಕ್ ಮತ್ತು ಔಟ್‌ಫಿಟ್ ಟ್ರೆಂಡ್ ದಿನ ಬದಲಾಗುತ್ತಿದೆ. ಪ್ರತಿದಿನ ಟ್ರೆಂಡ್‌ನೊಂದಿಗೆ ಹೆಜ್ಜೆಯಿಡುವುದು ಅಸಾಧ್ಯ. ಆದರೆ ವಾರ್ಡ್‌ರೋಬ್ ಮತ್ತು ಮೇಕಪ್ ಕಿಟ್‌ನಲ್ಲಿ ಕೆಲವು ಬೇಸಿಕ್ ವಸ್ತುಗಳು ಅಗತ್ಯವಾಗಿ ಇರಬೇಕು. ಅವು ನಿಮ್ಮನ್ನು ಸ್ಟೈಲಿಶ್ ಜನರ ಸಾಲಿನಲ್ಲಿ ನಿಲ್ಲಿಸುತ್ತವೆ. ಉದಾಹರಣೆಗೆ ಔಟ್‌ಫಿಟ್ಸ್ ನಲ್ಲಿ ಆಫೀಸ್, ಮನೆ ಹಾಗೂ ಕ್ಯಾಶುಯಲ್ ಡ್ರೆಸ್‌ಗಳಲ್ಲಿ ಎಂತಹ ಪೀಸ್‌ಗಳು ಇರಬೇಕೆಂದರೆ ಅವುಗಳ ಫ್ಯಾಷನ್ ಎಂದೂ ಔಟ್ ಆಗಬಾರದು. ಒಂದು ವೇಳೆ ಔಟ್ ಆದರೂ ಮತ್ತೆ ವಾಪಸ್ ಬರುವಂತಿರಬೇಕು.”
“ಫ್ಯಾಷನ್ ಇನ್ ಆಗುತ್ತಿರುತ್ತದೆ, ಔಟ್ ಆಗುತ್ತಿರುತ್ತದೆ. ಪ್ರತಿಬಾರಿ ಹೊಸ ಟ್ರೆಂಡ್ ಬರಬೇಕಾದ ಅಗತ್ಯವಿಲ್ಲ. ಅನೇಕ ಬಾರಿ ಹಳೆಯ ಫ್ಯಾಷನ್ ಮತ್ತೆ ಬರುತ್ತದೆ. ಅದರ ಸ್ಟೈಲ್ ಮಾತ್ರ ಬದಲಾಗುತ್ತದೆ. ಸ್ಕರ್ಟ್, ಪ್ಯಾಂಟ್ ಮತ್ತು ಜೀನ್ಸ್ ಗಳ ಫ್ಯಾಷನ್‌ಎಂದೂ ಔಟ್ ಆಗುವುದಿಲ್ಲ. ಅವಗಳ ಟಾಪ್ಸ್ ನಲ್ಲಿ ಟ್ರೆಂಡ್ ಬದಲಾಗುತ್ತಿರುತ್ತದೆ. ಅವನ್ನು ಯಾವುದೇ ಸ್ಟೈಲಿಶ್ ಮತ್ತು ಇನ್‌ಟ್ರೆಂಡ್ ಟಾಪ್‌ನೊಂದಿಗೆ ಇನ್‌ಕಾರ್ಪೊರೇಟ್ ಮಾಡಬಹುದು.
“ಅಂದಹಾಗೆ ಔಟ್‌ಫಿಟ್‌ನಲ್ಲಿ ಟ್ರೆಂಡ್ ಮತ್ತು ಸ್ಟೈಲ್ ಮಾತ್ರ ಗಮನಕೊಡುವುದಲ್ಲಿ, ಬಣ್ಣಗಳ ಬಗ್ಗೆಯೂ ಫೋಕಸ್ ಮಾಡಬೇಕು. ಯಾರಿಗೆ ಯಾವ ಬಣ್ಣ ಸೂಟ್ ಆಗುತ್ತದೆಂದು ತಿಳಿದುಕೊಳ್ಳಬೇಕು.”
ಆಕೃತಿ ಮುಂದುವರಿಸುತ್ತಾ, “ಮಾರುಕಟ್ಟೆಯಲ್ಲಿ ಬಂದ ಹೊಸ ಕಲರ್ಸ್ ಪ್ಯಾಟರ್ನ್ ನಿಮಗೆ ಸೂಟ್ ಆಗದಿರಬಹುದು. ಹೀಗಿರುವಾಗ ಸ್ಟೈಲಿಶ್ ಆಗಿ ಕಾಣುವ ಸ್ಪರ್ಧೆಯಲ್ಲಿ ಅವನ್ನು ನಿಮ್ಮ ಮೇಲೆ ಹೇರಿಕೊಳ್ಳಬೇಡಿ. ಜೊತೆಗೆ ಹಗಲು ಮತ್ತು ರಾತ್ರಿಗಾಗಿ ಬೇರೆ ಬೇರೆ ಬಣ್ಣಗಳಿವೆ ಎಂದು ತಿಳಿದುಕೊಳ್ಳಬೇಕು. ಹಗಲಿನಲ್ಲಿ ನೀವು ಬ್ರೈಟ್ ಕಲರ್‌ಗಳನ್ನು ಧರಿಸಬಹುದು. ಆದರೆ ರಾತ್ರಿ ಡಾರ್ಕ್ ಕಲರ್ ಮಾತ್ರ ನಿಮಗೆ ಸ್ಟೈಲಿಶ್ ಲುಕ್ ಕೊಡುತ್ತದೆ.”
ಔಟ್‌ಫಿಟ್ಸ್ ಅಲ್ಲದೆ, ನಿಮ್ಮ ಮೇಕಪ್ ಹಾಗೂ ಹೇರ್‌ಸ್ಟೈಲ್‌ನಲ್ಲೂ ಒಂದು ಹಂತದವರೆಗೆ ನೀವು ಸ್ಟೈಲಿಶ್ ಆಗಿ ಕಾಣುವುದನ್ನು ಅವಲಂಬಿಸಿರುತ್ತದೆ. ಒಳ್ಳೆಯ ಬಟ್ಟೆ ಧರಿಸಿದ್ದು ಹರಡಿದ ಕೂದಲು ಮತ್ತು ಬಾಡಿದ ಮುಖವಿದ್ದರೆ ಸ್ಟೈಲಿಶ್ ಎನ್ನಲಾಗುವುದಿಲ್ಲ. ಆಕೃತಿ ಇಲ್ಲಿಯೂ ಕೊಂಚ ಮಹತ್ವಪೂರ್ಣ ಟಿಪ್ಸ್ ಕೊಡುತ್ತಾರೆ, “ಮೇಕಪ್ ನಿಮ್ಮ ಸ್ಟೈಲ್‌ನ್ನು ಡಿಫೈನ್ ಮಾಡುತ್ತದೆ. ನೀವು ಗ್ಲಾಮರಸ್ ಔಟ್‌ಫಿಟ್‌ನಲ್ಲಿರಿ ಅಥವಾ ಎಥ್ನಿಕ್ ಡ್ರೆಸ್‌ನಲ್ಲಿರಿ. ಎರಡಕ್ಕೂ ಬೇರೆ ಬೇರೆ ಮೇಕಪ್ ಮತ್ತು ಹೇರ್‌ಸ್ಟೈಲ್ ಇರಬೇಕು. ಗಮನ ಕೊಡಬೇಕಾದ ವಿಷಯವೆಂದರೆ ನೀವು ಒಂದೇ ಸ್ಟೈಲ್‌ನ್ನು ರಿಪೀಟ್ ಮಾಡಬಾರದು. ಒಂದೇ ಕಲರ್‌ನ ಲಿಪ್‌ಸ್ಟಿಕ್, ಒಂದೇ ರೀತಿಯ ಹೇರ್‌ಸ್ಟೈಲ್ ನಿಮ್ಮ ಲುಕ್ಸ್ ನಲ್ಲಿ ವೆರೈಟಿ ತರುವುದಿಲ್ಲ. ಆದ್ದರಿಂದ ನೀವೇ 3-4 ರೀತಿಯ ಹೇರ್‌ಸ್ಟೈಲ್ ಕಲಿತುಕೊಳ್ಳಬೇಕು. ಅದು ಸುಲಭವಾಗಿದ್ದು ನಿಮಗೆ ಒಪ್ಪುವಂತಿರಬೇಕು ಹಾಗೂ ನಿಮ್ಮ ಲುಕ್ಸ್ ನಲ್ಲೂ ವೆರೈಟಿ ತರಬೇಕು. ಹೀಗೆಯೇ ಲಿಪ್‌ಸ್ಟಿಕ್‌ನಲ್ಲಿ ಬೇರೆ ಬಣ್ಣ ನಿಮ್ಮ ಮೂಡ್ ಮತ್ತು ಸ್ಟೈಲ್ ಎರಡನ್ನೂ ಪ್ರದರ್ಶಿಸುತ್ತದೆ. ಈಗ ಬೆರಿ, ಬಬ್‌ಗಂ ಪಿಂಕ್, ರೆಡ್ ಇತ್ಯಾದಿ ಬಣ್ಣಗಳ ಲಿಪ್‌ಸ್ಟಿಕ್‌ಗಳು ಬರುತ್ತಿವೆ.
ಫ್ಯಾಮಿಲಿಯೂ ಸ್ಟೈಲಿಶ್ ಒಂದು ವೇಳೆ ನೀವು ಸ್ಟೈಲಿಶ್ ಆಗಿದ್ದು ನಿಮ್ಮ ಪ್ಯಾಮಿಲಿ ಸ್ಟೈಲಿಶ್ ಆಗಿರದಿದ್ದರೆ ಅದು ನಿಮ್ಮ ಸ್ಟೈಲಿಶ್‌ಆ್ಯಟಿಟ್ಯೂಡ್ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಕುಟುಂಬದ ಸದಸ್ಯರನ್ನೂ ಸ್ಟೈಲಿಶ್ ಮಾಡಲು ಪ್ರಯತ್ನಿಸಿ. ಕೆಲವು ಟಿಪ್ಸ್ ಇಲ್ಲಿವೆ :
ಯಾವುದೇ ವಯಸ್ಸಿರಲಿ ಫಿಟ್ನೆಸ್ ಇರುವುದು ಬಹಳ ಅಗತ್ಯ. ಆದ್ದರಿಂದ ಮನೆಯಲ್ಲಿರುವ ವೃದ್ಧರಿಗೆ ನಿಯಮಿತವಾಗಿ ವ್ಯಾಯಾಮ ಮಾಡಲು ಪ್ರೇರೇಪಿಸಿ.
ಪತಿ ಹೆಚ್ಚು ಫ್ಯಾಷನ್ ಫ್ರೀಕ್ ಆಗದಿದ್ದರೆ ನೀವು ಅವರಿಗಾಗಿ ಶಾಪಿಂಗ್ ಮಾಡಿ. ಹೊಸದಾದ ಹಾಗೂ ಟ್ರೆಂಡಿ ಉಡುಪುಗಳನ್ನು ಧರಿಸಲು ಅವರಿಗೆ ಹಿಂಜರಿಕೆ ಇರಬಹುದು. ಆದರೆ ಅವರು ಬಹಳ ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆಂದು ಅವರಿಗೆ ಆತ್ಮವಿಶ್ವಾಸ ಮೂಡಿಸಿ.
ಕುಟುಂಬದ ಜನರಲ್ಲಿ ಶಿಸ್ತನ್ನು ಮೂಡಿಸಲು ಪ್ರಯತ್ನಿಸಿ. ಉದಾಹರಣೆಗೆ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಡುವುದು, ಮನೆಯನ್ನು ಸ್ವಚ್ಛವಾಗಿಡುವುದು ಇತ್ಯಾದಿ ಅಭ್ಯಾಸಗಳು ಅವರಲ್ಲಿ ಸ್ಟೈಲಿಶ್ ಆ್ಯಟಿಟ್ಯೂಡ್ ತರುತ್ತವೆ.
ಮನೆಯಲ್ಲಿ ಮಾತಾಡುವ ವಿಧಾನ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಆದರೆ ಒಳ್ಳೆಯ ಭಾಷೆ ಉಪಯೋಗಿಸುವುದರಿಂದ ನಿಮ್ಮ ಮಾತುಕಥೆಯಲ್ಲಿ ಒಂದು ಸ್ಟೈಲ್ ಬರುತ್ತದೆ. ಆದ್ದರಿಂದ ಮನೆಯವರೊಂದಿಗೂ ಸ್ವರಗಳ ಏರಿಳಿತದೊಂದಿಗೆ ಮಾತನಾಡಿ.
ಕುಟುಂಬದ ಸದಸ್ಯರಿಗೆ ಹೊಸ ಟೆಕ್ನಿಕ್‌ಗಳನ್ನು ಪರಿಚಯಿಸಿ. ನಿಮ್ಮ ತಂದೆ ತಾಯಿಗೆ ಸ್ಮಾರ್ಟ್‌ಫೋನ್ ಉಪಯೋಗಿಸಲು ಕಲಿಸಿ. ಸಮಯ ಬಂದಾಗ ಅವರಿಗೆ ಕೆಲಸಕ್ಕೆ ಬರುತ್ತದೆ.
ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಸ್ವಚ್ಛವಾಗಿರಲು ಮತ್ತು ಒಳ್ಳೆಯ ಅಭ್ಯಾಸಗಳನ್ನು ಕಲಿಸಿ. ಮಕ್ಕಳು ಯಾವಾಗಲೂ ತಮ್ಮ ಹೇರ್‌ಸ್ಟೈಲ್‌ನ್ನು ಆಟವಾಡುವಾಗ ಕೆಡಿಸಿಕೊಳ್ಳುತ್ತಾರೆ. ಇಲ್ಲದ್ದಿದರೆ ಬರಿಗಾಲಲ್ಲಿ ಎಲ್ಲ ಕಡೆ ಓಡಾಡುತ್ತಾರೆ. ಇವೆಲ್ಲ ವಿಷಯಗಳು ಅವರ ಸ್ಟೈಲ್‌ನ್ನು ಪ್ರಭಾವಿತಗೊಳಿಸುತ್ತವೆ. ಅವರಿಗೆ ಒಳ್ಳೆಯ ಅಭ್ಯಾಸಗಳನ್ನು ಕಲಿಸುವುದು ನಿಮ್ಮ ಕರ್ತವ್ಯ.
ಲೈಫ್ನಲ್ಲಿ ಸ್ಟೈಲ್ ಇರಲಿ
ಒಳ್ಳೆಯ ಉಡುಪು, ಒಡವೆ, ಟಿಪ್‌ಟಾಪ್ ಮೇಕಪ್ ಮತ್ತು ಫಿಟ್ ಶರೀರ. ಇವೆಲ್ಲ ಇದ್ದೂ ನಿಮ್ಮ ಲೈಫ್ ಸ್ಟೈಲ್ ಸ್ಟೈಲಿಶ್ ಆಗಿರದಿದ್ದರೆ, ಅದನ್ನು ಸ್ಟೈಲಿಶ್ ಮಾಡಲು ಈ ಟಿಪ್ಸ್ ಮೇಲೆ ಗಮನಹರಿಸಿ :
ವಾರ್ಡ್‌ರೋಬ್‌ನಲ್ಲಿ ಟ್ರೆಂಡಿ ಉಡುಪುಗಳಿವೆ. ಆದರೆ ವಾರ್ಡ್‌ರೋಬ್ ಅವ್ಯವಸ್ಥಿತವಾಗಿದೆ. ಅಂದರೆ ಬಟ್ಟೆಗಳು ತುರುಕಲ್ಪಟ್ಟಿವೆ. ಯಾವಾಗ ಯಾವುದನ್ನು ಧರಿಸಬೇಕೋ ಅದನ್ನು ಪ್ರೆಸ್ ಮಾಡಿದರಾಯ್ತು. ಒಂದು ವೇಳೆ ನೀವು ಹೀಗೆ ಮಾಡಿದರೆ ನೀವು ಸ್ಟೈಲಿಶ್‌ಅಲ್ಲ. ಎಲ್ಲ ವಸ್ತುಗಳನ್ನೂ ಆರ್ಗನೈಜ್ಡ್ ವಿಧಾನದಲ್ಲಿ ಇಡುವುದರಿಂದಲೂ ನೀವು ಸ್ಟೈಲಿಶ್ ಆಗಬಹುದು.
ಊಟದ ಮೇಜಿನ ಮೇಲೆ ಜನ ಆಗಾಗ್ಗೆ ಆಹಾರ ಪದಾರ್ಥಗಳ ಜಾಗದಲ್ಲಿ ಮನೆಯಲ್ಲಿನ ಬೇಡದ ವಸ್ತುಗಳನ್ನು ಇಟ್ಟಿರುತ್ತಾರೆ. ಹಾಗೆ ಮಾಡಿದರೆ ನಿಮ್ಮ ಮನೆಯ ಇಂಟೀರಿಯರ್ ಹಾಳಾಗುತ್ತದೆ. ಒಂದು ವೇಳೆ ನೀವು ಅದರಲ್ಲಿ ಸುಧಾರಣೆ ತರದಿದ್ದರೆ ನೀವು ಸ್ಟೈಲಿಶ್ ಅಲ್ಲ.
ಲೈಫ್ ಸ್ಟೈಲ್‌ನ್ನು ಸ್ಟೈಲಿಶ್ ಮಾಡಲು ನಿಮ್ಮ ಸುತ್ತಮುತ್ತ ನಡೆಯುತ್ತಿರುವ ಎಲ್ಲ ಘಟನೆಗಳ ಬಗ್ಗೆ ಅರಿವಿರಬೇಕು. ಅಂದರೆ ನಿಮ್ಮ ಮಾಹಿತಿ ಅಪ್‌ಡೇಟ್ ಆಗಿರಬೇಕು.
ಊಟ ಮಾಡುವಾಗ ಬಹಳಷ್ಟು ಜನ ಊಟದ ಕಡೆ ಗಮನ ಕೊಡುವುದಿಲ್ಲ. ಸುತ್ತಮುತ್ತ ಊಟ ಚೆಲ್ಲಿರುತ್ತಾರೆ. ಹಾಗೆ ಚೆಲ್ಲಬಾರದು ಮತ್ತು ಊಟವಾದ ನಂತರ ಆ ಜಾಗವನ್ನು ಸ್ವಚ್ಛಗೊಳಿಸುವ ಅಭ್ಯಾಸ ನಿಮ್ಮನ್ನು ಸ್ಟೈಲಿಶ್ ಮಾಡುತ್ತದೆ.
ಈ ಸಣ್ಣಪುಟ್ಟ ಆದರೆ ಗಂಭೀರ ವಿಷಯಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೀವು ಸ್ಟೈಲಿಶ್ ಆಗಬಹುದು. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುವುದಲ್ಲದೆ, ಯಶಸ್ಸು ನಿಮ್ಮ ಪಾದದಡಿಯಲ್ಲಿರುವುದು. ಹಾಗಾದರೆ ಇನ್ನೇಕೆ ತಡ? ಸ್ಟೈಲಿಶ್ ಆಗಲು ಇಂದಿನಿಂದಲೇ ಶುರು ಮಾಡಿ.
– ಜಿ. ಅನುರಾಧಾ
ದೀಪಿಕಾ ಪಡುಕೋಣೆ
ಹಾಟ್ ಡಸ್ಕಿ ಬ್ಯೂಟಿ ದೀಪಿಕಾ ಪಡುಕೋಣೆ ಸ್ಟೈಲಿಶ್ ಆ್ಯಕ್ಟಿಂಗ್‌ನೊಂದಿಗೆ ತಮ್ಮ ಸ್ಟೈಲಿಶ್ ಮ್ಯಾಸಿ ಹೇರ್‌ಸ್ಟೈಲ್‌ಗಾಗಿ ಇಡೀ ಬಾಲಿವುಡ್‌ನಲ್ಲಿ ಪ್ರಸಿದ್ಧರಾಗಿದ್ದಾರೆ. ಈಗ ಅವರ ಈ ಲುಕ್ಸ್ ನ್ನು ಸಾಮಾನ್ಯ ಹುಡುಗಿಯರೂ ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ದೀಪಿಕಾರ ಈ ಲುಕ್ಸ್ ನ ವಿಶೇಷತೆಯೆಂದರೆ ಸಂದರ್ಭ ಯಾವುದೇ ಆಗರಲಿ ಈ ಹೇರ್‌ಸ್ಟೈಲ್ ಎಲ್ಲ ಸ್ಥಳಗಳಲ್ಲಿ ಫಿಟ್‌ಆಗಿರುತ್ತದೆ.
ಸೋನಮ್ ಕಪೂರ್
ಸೋನಮ್ ಕಪೂರ್‌ರ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಸದ್ದು ಮಾಡದಿದ್ದರೂ ಅವರ ಡ್ರೆಸಿಂಗ್ ಸ್ಟೈಲ್‌ನ್ನು ಎಲ್ಲರೂ ಒಪ್ಪಿ ಕೊಂಡಿದ್ದಾರೆ. ಸೋನಮ್ ರ ವಿಶೇಷತೆಯೆಂದರೆ ಅವರೆಂದೂ ಹೊಸ ಔಟ್‌ಫಿಟ್‌ನ್ನು ಟ್ರೈ ಮಾಡಲು ಹೆದರುವುದಿಲ್ಲ. ಯಾವ ರೀತಿಯ ಔಟ್‌ಫಿಟ್ ಧರಿಸುತ್ತಾರೋ ಅದೇ ರೀತಿ ಆ್ಯಟಿಟ್ಯೂಡ್ ತಮ್ಮದಾಗಿಸಿಕೊಳ್ಳುತ್ತಾರೆ. ವಿಶೇಷವಾಗಿ ಫಿಲ್ಮ್ ಫೆಸ್ಟಿವ್ ಸಮಯದಲ್ಲಿ ಸೋನಮ್ ರ ವಿಭಿನ್ನ ಲುಕ್ಸ್ ನ ಔಟ್‌ಫಿಟ್ಸ್ ನೋಡಲು ಸೊಗಸಾಗಿರುತ್ತದೆ. ಅದರಿಂದಲೇ ಅವರಿಗೆ ಬಾಲಿವುಡ್‌ನ ಮೋಸ್ಟ್ ಸ್ಟೈಲಿಶ್ ನಟಿ ಎಂಬ ಪ್ರಶಸ್ತಿ ಸಿಕ್ಕಿದೆ.
ಆಧುನಿಕ ಕಾಲದಲ್ಲಿ ಸ್ಟೈಲಿಶ್ ಆಗುವುದು ಅಗತ್ಯವಷ್ಟೇ ಅಲ್ಲ. ಅನಿವಾರ್ಯ ಹೌದು. ಒಳ್ಳೆಯ ಲೈಫ್ ಸ್ಟೈಲ್‌ನಿಂದ ಮಾನಸಿಕ ಮತ್ತು ವೈಯಕ್ತಿಕ ವಿಕಾಸವಾಗುತ್ತದೆ. ಮುಂದುವರಿಯಲು ಪ್ರೇರಣೆಯೂ ಸಿಗುತ್ತದೆ.
– ಆಕೃತಿ ಕೋಚರ್ ಬ್ಯೂಟಿ/ಮೇಕಪ್ ತಜ್ಞೆ,
ಓರಿಫ್ಲೇಮ್ ಇಂಡಿಯಾ ಸ್ಟೈಲಿಶ್
ಸ್ಟೈಲಿಶ್ ಆಗುವುದರ ಅರ್ಥ ನಿಮ್ಮ ಶೈಲಿಯನ್ನು ವಿಭಿನ್ನ ಶೈಲಿಯಲ್ಲಿ ಜನರ ಮುಂದೆ ಪ್ರಸ್ತುತಪಡಿಸುವುದಾಗಿದೆ. ಈ ಕೆಲಸವನ್ನು ಶುದ್ಧ ಭಾಷೆಯಲ್ಲಿ ಮಾತಾಡುವವರು ಮತ್ತು ಸರಳ ಬಟ್ಟೆ ತೊಡುವವರೂ ಮಾಡುತ್ತಾರೆ.
ಆರೋಗ್ಯವಂತ ಶರೀರಕ್ಕಾಗಿ ಫಿಟ್ ಆಗಿರುವುದು ಅಗತ್ಯ. ಫಿಟ್ನೆಸ್‌ಗೆ ವ್ಯಾಯಾಮ ಅಗತ್ಯ. ನೀವು ಆರೋಗ್ಯವಾಗಿದ್ದರೆ ಅದರ ಪ್ರಭಾವ ನಿಮ್ಮ ಸೌಂದರ್ಯದ ಮೇಲೆ ಬೀಳುತ್ತದೆ. ನಿಮ್ಮ ಶರೀರ ಶೇಪ್‌ನಲ್ಲೂ ಇರುತ್ತದೆ.
– ಸೋನಿಯಾ ಬಜಾಜ್ ನ್ಯೂಟ್ರಿಷನಿಸ್ಟ್