ನೀವು ನಿಮ್ಮ ಕಿಚನ್‌ಗೆ ವಿಭಿನ್ನ ಲುಕ್ಸ್ ಕೊಡಲು ಬಯಸಿದ್ದರೆ ಅದರಲ್ಲಿ ಅಳವಡಿಸುವ ಎಲ್ಲ ವಸ್ತುಗಳ ಮೇಲೆ ವಿಶೇಷ ಗಮನ ನೀಡಬೇಕು. ಕಿಚನ್‌ ಕ್ಯಾಬಿನೆಟ್ಸ್ ಬಗ್ಗೆ ಮಾತಾಡುವುದಾದರೆ ಆ ವಸ್ತುಗಳಿಗೆ ಸ್ಟೋರ್‌ ಮಾಡಲು ಜಾಗ ಕೊಡುವುದಲ್ಲದೆ, ಕಿಚನ್‌ಗೆ ಸ್ಟೈಲಿಶ್‌ ಲುಕ್‌ ಕೊಡುತ್ತದೆ. ಇಂದು ಮಾರುಕಟ್ಟೆಯಲ್ಲಿ ಕಿಚನ್‌ ಕ್ಯಾಬಿನೆಟ್ಸ್ ನ ಬಹಳಷ್ಟು ವೆರೈಟಿಗಳು ಲಭ್ಯವಿವೆ. ಬಣ್ಣಗಳು ಹಾಗೂ ಸೈಜ್‌ ಬಗ್ಗೆ ಹೇಳುವುದಾದರೆ ಅವನ್ನು ನಿಮ್ಮ ಕಿಚನ್‌ಗೆ ತಕ್ಕಂತೆ ಸೆಟ್‌ ಮಾಡಬಹುದು.

ಸ್ಟೇನ್ಲೆಸ್ಸೀಲ್ ಕ್ಯಾಬಿನೆಟ್ಸ್

ನೀವು ಗೆದ್ದಲಿನ ಭಯಕ್ಕೆ ಮರದ ಕ್ಯಾಬಿನೆಟ್ಸ್ ಹಾಕಿಸಲು ಇಚ್ಛಿಸದಿದ್ದರೆ, ಸ್ಟೀಲ್ ಕ್ಯಾಬಿನೆಟ್ಸ್ ಹಾಕಿಸಬಹುದು. ಅವು ಈಗ ಸಾಕಷ್ಟು ಟ್ರೆಂಡ್‌ನಲ್ಲಿವೆ. ಅದಕ್ಕೆ ಗೆದ್ದಲು ಹಿಡಿಯುವುದಿಲ್ಲ, ಬೇಗನೆ ಹಾಳಾಗುವುದಿಲ್ಲ. ಜೊತೆಗೆ ಸ್ಟೈಲಿಶ್‌ ಲುಕ್‌ ಕೂಡ ಇರುತ್ತದೆ.

ಸ್ಟೋರೇಜ್ಕ್ಯಾಬಿನೆಟ್ಸ್

ನಿಮ್ಮ ಕಿಚನ್‌ನೊಂದಿಗೆ ಯಾವುದೇ ಸ್ಟೋರ್‌ ಇರದೆ ಕಿಚನ್‌ ವಸ್ತುಗಳನ್ನಿಡಲು ತೊಂದರೆ ಆಗುತ್ತಿದ್ದರೆ ಸ್ಟೋರೇಜ್‌ ಕ್ಯಾಬಿನೆಟ್ಸ್ ಕೊಳ್ಳಿ. ಅದರಲ್ಲಿ ಡ್ರಾಯರ್‌ಗಳು ಮತ್ತು ಅಲ್ಮೇರಾಗಳು ಸಾಕಷ್ಟು ಇರುತ್ತವೆ. ಅವುಗಳಲ್ಲಿ ನೀವು ಆರಾಮವಾಗಿ ವಸ್ತುಗಳನ್ನು ಇಡಬಹುದು. ಇಡೀ ತಿಂಗಳಿಗಾಗುವಷ್ಟು ವಸ್ತುಗಳನ್ನು ಅದಲ್ಲಿ ಸ್ಟೋರ್‌ ಮಾಡಬಹುದು. ಅದನ್ನು ಕೊಳ್ಳುವಾಗ ಅವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಇದೆಯೇ ಎಂದು ಪರೀಕ್ಷಿಸಿ. ಅವನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಡಿಸೈನ್‌ ಕೂಡ ಮಾಡಿಸಬಹುದು.

ಗ್ಲಾಸ್ಕ್ಯಾಬಿನೆಟ್ಸ್

ನಿಮ್ಮ ಕಿಚನ್‌ಗೆ ವಿಭಿನ್ನ ಲುಕ್‌ ಕೊಡಲು ಬಯಸಿದ್ದರೆ ನಿಮ್ಮ ಕಿಚನ್‌ನಲ್ಲಿ ಗ್ಲಾಸ್‌ ಕ್ಯಾಬಿನೆಟ್ಸ್ ಅಳವಡಿಸಿ. ಅವುಗಳ ವಿಶೇಷತೆ ಎಂದರೆ ಅದರಲ್ಲಿ ಆಲ್ಮೆರಾಗಳ ಬಾಗಿಲು ಗ್ಲಾಸ್‌ನಾಗಿರುತ್ತವೆ. ಅವುಗಳ ಒಳಗೆ ಇಟ್ಟಿರುವ ವಸ್ತುಗಳು ಸುಲಭವಾಗಿ ಕಾಣುತ್ತವೆ. ನಿಮ್ಮ ಕ್ರಾಕರಿ ಸ್ಟೈಲಿಶ್‌ ಆಗಿದ್ದರೆ ಅವನ್ನು ಆಲ್ಮೇರಾದಲ್ಲಿಟ್ಟು ಕಿಚನ್‌ಗೆ ಅಟ್ರ್ಯಾಕ್ಟಿವ್ ‌ಲುಕ್‌ ಕೊಡಬಹುದು. ಅದರಲ್ಲಿ ನಿಮಗೆ ಬಹಳಷ್ಟು ವೆರೈಟಿಗಳು ಸಿಗುತ್ತವೆ. ಗ್ಲಾಸ್‌ಗಳಿಗೆ ಸ್ಟೈಲಿಶ್‌ ಲುಕ್‌ ಕೊಡಲು ಅವುಗಳ ಮೇಲೆ ಡಿಸೈನಿಂಗ್‌ ಕೂಡ ಮಾಡಿಸಬಹುದು.

ಮಾಡರ್ನ್ಕ್ಯಾಬಿನೆಟ್ಸ್

ಇದು ಮಾಡರ್ನ್‌ ಕಿಚನ್‌ನ ಕಾಲ. ಕಿಚನ್‌ನ ಎಲ್ಲ ವಸ್ತುಗಳೂ ಮಾಡರ್ನ್‌ ಲುಕ್‌ನಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತಿವೆ. ನಿಮ್ಮ ಲಿವಿಂಗ್‌ ಹಾಗೂ ಬೆಡ್‌ ರೂಮಿನಂತೆ ನಿಮ್ಮ ಕಿಚನ್‌ಗೂ ಮಾಡರ್ನ್‌ ಲುಕ್‌ ಕೊಡಲು ಇಷ್ಟವಾದರೆ ಮಾರುಕಟ್ಟೆಯಲ್ಲಿ ಕ್ಯಾಬಿನೆಟ್ಸ್ ನ ಬಹಳಷ್ಟು ಡಿಸೈನ್‌ಗಳು ಮತ್ತು ಕಲರ್ಸ್‌ ಲಭ್ಯವಿವೆ.

ಕ್ಯಾಬಿನೆಟ್‌ಗಳ ಡಿಸೈನಿಂಗ್‌ನಲ್ಲಿ ಆಲ್ಮೇರಾಗಳ ಶೇಪ್ಸ್ ಮತ್ತು ಕಲರ್ಸ್‌ಗಳ ವರ್ಕ್‌ ಸಾಕಷ್ಟು ಮಾಡರ್ನ್‌ ಆಗಿ ಮಾಡಲಾಗುತ್ತದೆ. ಕೆಲವು ಶೆಲ್ಫ್ ಗಳನ್ನು ಮುಂದುಗಡೆ ಮಾಡಿದ್ದು ಕೆಲವು ಡೆಕೋರೇಟಿವ್ ‌ಐಟಂಗಳನ್ನು ಇಡಬಹುದು. ಜೊತೆಗೆ ಅವುಗಳಲ್ಲಿ ನೀವು ಸುಲಭವಾಗಿ ಉಪಯೋಗಿಸುವಂತೆ ಡ್ರಾಯರ್‌ಗಳನ್ನು ಮಾಡಿಸಬಹುದು. ಅದರಲ್ಲಿ ಕಿಚನ್‌ ಅಟ್ರ್ಯಾಕ್ಟಿವ್ ‌ಆಗಿ ಕಾಣುವಂತೆ ವಿಭಿನ್ನವಾಗಿ ಲೈಟ್‌ ಉಪಯೋಗಿಸಬಹುದು. ಕಿಚನ್‌ನ ಪ್ರತಿ ವಸ್ತುವಿಗೆ ಸರಿಯಾದ ಆಲ್ಮೇರಾಗಳು ಮತ್ತು ಡ್ರಾಯರ್‌ಗಳನ್ನು ಡಿಸೈನ್ ಮಾಡಲಾಗುತ್ತದೆ.

ಸಿಂಪಲ್ ಕ್ಯಾಬಿನೆಟ್ಸ್

ನಿಮ್ಮ ಕಿಚನ್‌ ಸಿಂಪಲ್ ಅಂಡ್‌ ಸೋಬರ್‌ ಆಗಿರಬೇಕೆಂದರೆ ಸಿಂಪಲ್ ಅಂಡ್‌ ಸೋಬರ್‌ ಲುಕ್‌ ಕೊಡುವ ಕ್ಯಾಬಿನೆಟ್ಸ್ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಅವಕ್ಕೆ ಕಡಿಮೆ ಜಾಗ ಸಾಕು. ಡ್ರಾಯರ್‌ ಮತ್ತು ಆಲ್ಮೇರಾಗಳು ಕಡಿಮೆ ಇರುತ್ತವೆ. ನಿಮಗೆ ವಸ್ತುಗಳನ್ನು ಹುಡುಕುವ ಅಗತ್ಯವಿರುವುದಿಲ್ಲ. ಇವುಗಳಲ್ಲಿ ಹೆಚ್ಚೆಂದರೆ 12 ಬಣ್ಣಗಳನ್ನು ಉಪಯೋಗಿಸಿರುತ್ತಾರೆ. ಏಕೆಂದರೆ ಕಿಚನ್‌ ಸಿಂಪಲ್ ಆಗಿ ಕಾಣಬರಲೆಂದು. ಅವುಗಳ ಹ್ಯಾಂಡಲ್ ಕೂಡ ಸಿಂಪಲ್ ಲುಕ್ಸ್ ನಲ್ಲಿರುತ್ತದೆ.

ಕೊಳ್ಳುವಾಗ ಗಮನಿಸಿ

ಟೈಪ್ಅಂಡ್ಸ್ಟೈಲ್ : ಮಾರುಕಟ್ಟೆಯಲ್ಲಿ ನಿಮಗೆ ಕ್ಯಾಬಿನೆಟ್‌ಗಳ ಬಹಳಷ್ಟು ಮಾಡೆಲ್‌ಗಳು ಮತ್ತು ಸ್ಟೈಲ್‌ಗಳು ಸಿಗುತ್ತವೆ. ಆದರೆ ನಿಮ್ಮ ಕಿಚನ್‌ಗೆ ತಕ್ಕಂತೆ ಕ್ಯಾಬಿನೆಟ್ಸ್ ಖರೀದಿಸಿ. ನಿಮಗೆ ವಸ್ತುಗಳನ್ನಿಡಲು ಎಷ್ಟು ಜಾಗ ಬೇಕು ಎಂದು ಗಮನದಲ್ಲಿಟ್ಟುಕೊಂಡು ಅವನ್ನು ಡಿಸೈನ್‌ ಮಾಡಿಸಬಹುದು. ಕ್ಯಾಬಿನೆಟ್ಸ್ ಫ್ರೇಮ್ ಅಥವಾ ಫ್ರೇಮ್ಸ್ ಎರಡೂ ಸಿಗುತ್ತವೆ. ಅದು ನೀವು ಯಾವ ರೀತಿಯ ಕ್ಯಾಬಿನೆಟ್ಸ್ ಅಳವಡಿಸಲು ಇಷ್ಟಪಡುತ್ತೀರಿ ಎಂಬುವನ್ನು ಅವಲಂಬಿಸುತ್ತದೆ.

ಮೆಟೀರಿಯಲ್ : ಕಿಚನ್‌ ಕ್ಯಾಬಿನೆಟ್ಸ್ ನಲ್ಲಿ ನಿಮಗೆ ಅನೇಕ ರೀತಿಯ ಮೆಟೀರಿಟಲ್ಸ್ ಮಾರುಕಟ್ಟೆಯಲ್ಲಿ ಸಿಗುತ್ತದೆ. ಯಾವ ಮೆಟೀರಿಯಲ್‌ನಿಂದ ನಿಮ್ಮ ಕಿಚನ್‌ಗೆ ವಿಭಿನ್ನ ಲುಕ್ಸ್ ಕೊಡಬೇಕೆಂದು ಗಮನಿಸಿ. ನಿಮ್ಮ ಕಂಫರ್ಟ್‌ ಹಾಗೂ ರೇಂಜ್‌ ಗಮನಿಸಿ ಅವನ್ನು ಕೊಳ್ಳಬಹುದು.

ಕಲರ್ಸ್‌ : ಮನೆಯ ಯಾವುದೇ ಮೂಲೆಯಾಗಲಿ, ಅದರಲ್ಲಿ ಕಲರ್‌ ಬಹಳ ಮುಖ್ಯ. ಕಿಚನ್‌ ಕ್ಯಾಬಿನೆಟ್ಸ್ ನ್ನು ಕಿಚನ್‌ನ ಕಲರ್‌ಗೆ ತಕ್ಕಂತೆ ಕೊಳ್ಳಬಹುದು. ಕ್ಯಾಬಿನೆಟ್ಸ್ ನಲ್ಲಿ ಕೆಲವು ಕಲರ್‌ಗಳು ಅಂದರೆ ವೈಟ್‌, ಸಿಲ್ವರ್‌, ಬ್ರೌನ್‌, ಬ್ಲ್ಯಾಕ್‌ ಕಾಮನ್‌ ಆಗಿದ್ದು ಅವನ್ನು ಮ್ಯಾಚಿಂಗ್‌ ಇಲ್ಲದೆಯೂ ಹಾಕಿಸಬಹುದು. ಈಗ ಕಲರ್‌ ಕಾಂಬಿನೇಶನ್‌ ಕೂಡ ಟ್ರೆಂಡ್‌ನಲ್ಲಿದೆ. 2 ಅಥವಾ 3 ಬಣ್ಣಗಳನ್ನು ಉಪಯೋಗಿಸಿ ಕ್ಯಾಬಿನೆಟ್ಸ್ ನ್ನು ಅಟ್ರ್ಯಾಕ್ಟಿವ್ ಮಾಡಿಸಬಹುದು.

ಬಾಳಿಕೆ : ಕ್ಯಾಬಿನೆಟ್ಸ್ ಖರೀದಿಸುವಾಗ ಅವುಗಳ ಮೆಟೀರಿಯಲ್ಸ್ ಬಾಳಿಕೆ ಬರುತ್ತದೆಯೇ ಎಂದು ಗಮನಿಸಿ. ಮರದ ಕ್ಯಾಬಿನೆಟ್ ಆಗಿದ್ದರೆ ಆ ಮರ ಒಳ್ಳೆಯ ಕ್ವಾಲಿಟಿಯದ್ದಾಗಿರಬೇಕು. ಸ್ಟೇನ್‌ಲೆಸ್‌ ಸ್ಟೀಲ್ ಕ್ಯಾಬಿನೆಟ್‌ ಆಗಿದ್ದರೆ ಅದೂ ಉತ್ತಮ ಕ್ವಾಲಿಟಿಯದ್ದಾಗಿರಬೇಕು. ಮಾರುಕಟ್ಟೆಯಲ್ಲಿ ವೈಟ್‌, ಹೆವಿ ಎಲ್ಲ ರೀತಿಯ ಸಿಗುತ್ತದೆ.

ನಿಧಿ ಗೋಪಾಲ್

ಕ್ಯಾಬಿನೆಟ್ಸ್ ರಕ್ಷಣೆ ಕಿಚನ್ನಲ್ಲಿ ಅಳವಡಿಸಿ

ಕ್ಯಾಬಿನೆಟ್ಸ್ ನ ರಕ್ಷಣೆ ಬಹಳ ಅಗತ್ಯ. ಅವುಗಳ ಸ್ವಚ್ಛತೆ ಬಗ್ಗೆ ಸರಿಯಾಗಿ ಗಮನ ಕೊಡದಿದ್ದರೆ ಅವುಗಳ ಮೇಲೆ ಸ್ವಲ್ಪ ಸಮಯದಲ್ಲೇ ಕೊಳೆ ಸೇರಿಕೊಳ್ಳುತ್ತದೆ. ಅದರಿಂದ ಆಹಾರ ಪದಾರ್ಥಗಳ ಮೇಲೆ ಪರಿಣಾಮ ಬೀರುತ್ತದೆಯಲ್ಲದೆ, ನಿಮ್ಮ ಮನೆಗೆ ಬಂದ ಅತಿಥಿಗಳು ಮತ್ತು ಗೆಳೆಯರಿಗೂ ತಪ್ಪು ಇಂಪ್ರೆಶನ್‌ ಬೀಳುತ್ತದೆ. ಆದ್ದರಿಂದ ಕೆಳಗಿನ ಸಂಗತಿಗಳನ್ನು ಗಮನಿಸಿ.

ಕ್ಯಾಬಿನೆಟ್‌ನ ಹೊರಗಿನ ಭಾಗದಲ್ಲಿ ದಿನ ಡಸ್ಟಿಂಗ್‌ ಮಾಡಿ. ಅದರಿಂದ ಯಾವುದೇ ರೀತಿಯ ಕಲೆಗಳುಂಟಾಗುವುದಿಲ್ಲ. ವಾರಕ್ಕೊಮ್ಮೆ ಅಥವಾ 15 ದಿನಗಳಿಗೊಮ್ಮ ಡ್ರಾಯರ್ ಗಳು ಮತ್ತು ಆಲ್ಮೇರಾಗಳ ಒಳಗೂ ಸ್ವಚ್ಛಗೊಳಿಸಿ. ನೀವು ಡಸ್ಟಿಂಗ್‌ ಮಾಡುವ ಬಟ್ಟೆ ಸಾಫ್ಟ್ ಮತ್ತು ಕ್ಲೀನ್‌ ಆಗಿರಲಿ.

ಕ್ಯಾಬಿನೆಟ್‌ನ ಪಾಲಿಶ್‌ ಫೇಡ್‌ ಆಗುತ್ತಿದ್ದರೆ ಅದರ ಹೊಳಪು ಮಾಸದಂತೆ ಅದಕ್ಕೆ ಪಾಲಿಶ್‌ ಮಾಡಿಸಿ.

ಗ್ಲಾಸ್‌ಕ್ಯಾಬಿನೆಟ್‌ನಲ್ಲಿ ಹೆಚ್ಚಾಗಿ ಬಾಗಿಲುಗಳ ಮೇಲೆ ಗ್ಲಾಸ್‌ ಉಪಯೋಗಿಸಲಾಗುತ್ತದೆ. ಹೀಗಿರುವಾಗ ಅವುಗಳ ಸ್ವಚ್ಛತೆಯ ಬಗ್ಗೆಯೂ ಸಂಪೂರ್ಣ ಗಮನ ನೀಡಬೇಕು. ಅವುಗಳ ಮೇಲೆ ಸ್ಕ್ರ್ಯಾಚ್‌ ಬೀಳಬಾರದು.

ಒಂದು ವೇಳೆ ಕ್ಯಾಬಿನೆಟ್‌ ಎಲ್ಲಾದರೂ ಡ್ಯಾಮೇಜ್‌ ಆದರೆ, ಡ್ರಾಯರ್‌ ಅಥವಾ ಬಾಗಿಲು ಹಾಳಾದರೆ ಕೂಡಲೇ ರಿಪೇರಿ ಮಾಡಿಸಿ.

ಕ್ಯಾಬಿನೆಟ್ಸ್ ನ್ನು ಯಾವಾಗಲೂ ನೀರಿನಿಂದ ದೂರವಿಡಿ. ಏಕೆಂದರೆ ನೀರು ಬಿದ್ದರೆ ಅವು ಹಾಳಾಗುವ ಭಯವಿರುತ್ತದೆ. ಗೆದ್ದಲು ಬೇಗ ಹಿಡಿಯುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ