ಪರದೆಗಳು ಮನೆಯ ಒಳಾಂಗಣದ ಪ್ರಮುಖ ಭಾಗವೇ ಆಗಿಹೋಗಿವೆ. ಅವು ಮನೆಯಲ್ಲಿ ಪ್ರವೇಶಿಸುವ ಅತಿಥಿಗಳ ಮನಸ್ಸಿನಲ್ಲಿ ಮನೆಯ ಅಲಂಕಾರದ ಕುರಿತಂತೆ ಜಿಜ್ಞಾಸೆ ಹುಟ್ಟಿಸುತ್ತವೆ. ಇದರರ್ಥ ಪ್ರವೇಶ ದ್ವಾರದ ವಿಶೇಷತೆಯೇ ಈ ಪರದೆಗಳಾಗಿರುತ್ತವೆ. ಸಪ್ತವರ್ಣದ ಈ ಪರದೆಗಳು ಮನೆಯ ಅಲಂಕಾರವನ್ನಷ್ಟೆ ಹೆಚ್ಚಿಸುವುದಿಲ್ಲ, ಕೋಣೆಯ ಪಾರ್ಟಿಶನ್‌ ಹಾಗೂ ಪ್ರೈವೆಸಿಯನ್ನು ಕಾಯ್ದು ಕೊಂಡು ಹೋಗಲೂ ನೆರವಾಗುತ್ತವೆ. ಆಕರ್ಷಕ ಪರದೆಗಳಿಂದಾಗಿ ಮನೆಯ ಗೋಡೆ, ಬಾಗಿಲು, ಕಿಟಕಿ ಹಾಗೂ ಪೀಠೋಪಕರಣಗಳ ಶೋಭೆಯೂ ಹೆಚ್ಚುತ್ತವೆ. ಪರದೆಗಳ ಆಯ್ಕೆ ಹೇಗೆ ಮಾಡ ಬೇಕೆಂದರೆ, ಅದು ನಿಮ್ಮ ಕ್ರಿಯಾಶೀಲತೆಯನ್ನಷ್ಟೆ ಅಲ್ಲ, ಮನೆಯ ಸೌಂದರ್ಯವನ್ನು ಕೂಡ ಹೆಚ್ಚಿಸುವಂತಿರಬೇಕು.

ಪರದೆಗಳನ್ನು ಆಯ್ಕೆ ಮಾಡುವಾಗ ಒಂದು ಸಂಗತಿ ಗಮನದಲ್ಲಿರಲಿ. ಅವು ಮನೆಯ ಗೋಡೆ, ಪೀಠೋಪಕರಣ, ನೆಲಹಾಸುಗಳಿಗೆ ಹೊಂದಾಣಿಕೆ ಆಗುವಂತಿರಲಿ.

ನಿಮ್ಮ ಮನೆಯೊಳಗೆ ಬಿಸಿಲು ಬರುತ್ತಿದ್ದಲ್ಲಿ, ಲೈನಿಂಗ್‌ ಇರುವ ಪರದೆಗಳನ್ನು ಆಯ್ಕೆ ಮಾಡಿ. ಇವು ಬಿಸಿಲಿನಿಂದ ರಕ್ಷಣೆ ನೀಡುವುದರ ಜೊತೆಗೆ ಕೋಣೆಗೆ ಸೋಬರ್‌ ಲುಕ್‌ ನೀಡುತ್ತವೆ.

ನೀವು 2 ಲೇಯರ್‌ ಇರುವ ಪರದೆಗಳನ್ನು ಆಯ್ಕೆ ಮಾಡುತ್ತಿದ್ದಲ್ಲಿ, ಒಂದರ ಫ್ಯಾಬ್ರಿಕ್‌ ಲೈಟ್‌ ಆಗಿರಲಿ, ಇನ್ನೊಂದರ ಫ್ಯಾಬ್ರಿಕ್ ಗಾಢವಾಗಿರಲಿ.

ಹಗಲು ಹೊತ್ತಿನಲ್ಲಿ ಪರದೆಗಳನ್ನು ಆಕರ್ಷಕ ರೀತಿಯಿಂದ ವಿಶಿಷ್ಟ ಬಣ್ಣದ ದಾರವೊಂದರಿಂದ ಕಟ್ಟಿ ಇಡಬಹುದು.

ನಿಮ್ಮ ಕೋಣೆಯಲ್ಲಿ ಬಿಸಿಲು ಪ್ರವೇಶ ಮಾಡದೇ ಇದ್ದರೆ ಕಿಟಕಿಗಳಿಗೆ ಸೌಮ್ಯ ವರ್ಣದ ಪರದೆಗಳನ್ನು ಆಯ್ಕೆ ಮಾಡಿ. ಕಮಾನಿನ ಆಕಾರದ ಕಿಟಕಿಗಳಿಗೆ ನೆಟ್‌, ಕಸೂತಿ, ಬಾರ್ಡರ್‌ ಹಾಗೂ ಲೇಸ್‌ನಿಂದ ಸಿಂಗರಿಸಿದ ಆಕರ್ಷಕ ಪರದೆಗಳ ಆಯ್ಕೆ ಮಾಡಬಹುದು.

ಕಿಚನ್‌, ಬೆಡ್‌ ರೂಮ್ ಹಾಗೂ ಲಿವಿಂಗ್‌ ರೂಮಿಗೆ ಬೇರೆ ಬೇರೆ ಪರದೆಗಳನ್ನು ಆಯ್ಕೆ ಮಾಡಿ. ಅಡುಗೆಮನೆಗೆ ತೆಳ್ಳನೆಯ ಲೈನಿಂಗ್‌ ಇರುವಂಥದು, ಬೆಡ್‌ರೂಮಿಗೆ ಕಾಟನ್‌ದ್ದು ಮತ್ತು ಲಿವಿಂಗ್‌ ರೂಮಿಗೆ ಸ್ಯಾಟಿನ್‌ ಮತ್ತು ಕಾಟನ್‌ ಪಾಲಿಯೆಸ್ಟರ್‌ನ ತೆಳು ವರ್ಣದ ಮಿಶ್ರ ಫ್ಯಾಬ್ರಿಕ್‌ನದ್ದು ಆಯ್ಕೆ ಮಾಡಬಹುದು.

ಬೆಡ್‌ರೂಮಿನ ಕಿಟಕಿಗಳಿಗೆ ಸೌಮ್ಯ ವರ್ಣದ ಕಾಟನ್‌ ಪರದೆಗಳನ್ನು ಆಯ್ಕೆ ಮಾಡಿ. ಏಕೆಂದರೆ ಹೊರಗಿನ ತಣ್ಣನೆಯ ಗಾಳಿಯ ಮಜವನ್ನು ಕೂಡ ಸವಿಯುವಂತಾಗಬೇಕು.

ಪರದೆಗಳಿಗೆ ಹೊಸ ಲುಕ್‌ ಕೊಡಲು ಅದಕ್ಕೆ ಲೇಸ್‌ ಹಾಗೂ ಬಟನ್‌ ಹಚ್ಚಿ. ನಿಮಗೆ ಇಷ್ಟವಾಗುವುದಾದರೆ ಪರದೆಗಳಿಗೆ ಗೆಜ್ಜೆ ಕೂಡ ಅಳವಡಿಸಬಹುದು. ಗಾಳಿ ಬಂದಾಗ ಅಲ್ಲಾಡುವ ಪರದೆಗಳು `ವಿಂಡ್‌ ಚೈಮ್'ನಂತೆ ಸದ್ದು ಮಾಡುತ್ತವೆ.

ಪರದೆಗಳನ್ನು ಆಯ್ಕೆ ಮಾಡುವ ಮುನ್ನ ಬಾಗಿಲು ಕಿಟಕಿಗಳ ಉದ್ದಗಲ ಎಷ್ಟಿದೆ ಎಂದು ಒಂದು ಚೀಟಿಯಲ್ಲಿ ಬರೆದಿಟ್ಟುಕೊಂಡು ಹೋಗಿ. ನೀವು ಆಯ್ಕೆ ಮಾಡುವ ಪರದೆ ಹೆಚ್ಚು ಉದ್ದ ಅಥವಾ ಅಗಲ ಆಗದಿರಲಿ.

ಫ್ಯಾಬ್ರಿಕ್ಮತ್ತು ಮೆಟೀರಿಯಲ್ ಆಯ್ಕೆು

ಮಾರುಕಟ್ಟೆಯಲ್ಲಿ ಅನೇಕ ಬಗೆಯ ಪರದೆಗಳು ಲಭ್ಯವಿವೆ. ನೀವು ನಿಮ್ಮ ಇಷ್ಟ ಹಾಗೂ ಅಗತ್ಯಕ್ಕೆ ಅನುಗುಣವಾಗಿ. ಖರೀದಿಸಿ.

ಪರದೆಗಳಲ್ಲಿ ವೆಲ್ವೆಟ್‌, ಪಾಲಿಯೆಸ್ಟರ್‌, ಕ್ರಶ್‌, ಕಾಟನ್‌, ಸಿಂಥೆಟಿಕ್‌ ಮಿಕ್ಸ್, ವಿಸ್ಕೋಸ್‌, ಸ್ಯಾಟಿನ್‌, ಸಿಲ್ಕ್ ಹೀಗೆ ಅನೇಕ ಬಗೆಗಳಿವೆ.

ಅರಮನೆಯಂಥ ರಾಯಲ್ ಲುಕ್‌ಗಾಗಿ ಸಿಲ್ಕ್ ಹಾಗೂ ವಲ್ವೆಟ್‌ನ ಪರದೆಗಳನ್ನು ಆಯ್ಕೆ ಮಾಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ