ನೀವು ಇಷ್ಟಪಡುವವರಿಗೆ ನಿಮ್ಮ ಫೀಲಿಂಗ್ಸ್ ತಲುಪಿಸುವ ಅತ್ಯಂತ ಉತ್ತಮ ಮಾಧ್ಯಮ ಉಡುಗೊರೆ. ಹಾಗೆ ನೋಡಿದರೆ ಇಡೀ ವರ್ಷ ಅವನ್ನು ಕೊಡುವುದು, ಸ್ವೀಕರಿಸುವುದು ನಡೆದೇ ಇರುತ್ತದೆ. ಆದರೆ ವರ್ಷದ ಅತ್ಯಂತ ದೊಡ್ಡ ಹಬ್ಬ ದೀಪಾವಳಿ ಬಂದಾಗ ಎಲ್ಲ ಕಡೆ ಬೆಳಕು ಜಗಮಗಿಸುತ್ತದೆ. ಹೀಗಿರುವಾಗ ನಿಮ್ಮ ಜೀವನ ಸಂಗಾತಿಗೆ ವಿಶೇಷ ಉಡುಗೊರೆ ಕೊಡಬೇಕು. ಏಕೆಂದರೆ ಈ ಸಂದರ್ಭದಲ್ಲಿ ಉಡುಗೊರೆಯ ಮಹತ್ವ ಇನ್ನಷ್ಟು ಹೆಚ್ಚು. ವರ್ಷವಿಡೀ ನಿಮ್ಮ ಕುಟುಂಬದವರನ್ನು ಗಮನಿಸಿಕೊಂಡು ಪ್ರೀತಿ ಸಿಂಪಡಿಸುವ ಪತ್ನಿಗೆ ಕೃತಜ್ಞತೆ ವ್ಯಕ್ತಪಡಿಸುವ ಅವಕಾಶ ದೀಪಾವಳಿಗಿಂತ ಉತ್ತಮವಾದದ್ದು ಯಾವುದಿದೆ?

ಈ ದೀಪಾವಳಿಯಲ್ಲಿ ನಿಮ್ಮ ಬೆಟರ್‌ಹಾಫ್‌ಗೆ ಜ್ಯೂವೆಲರಿ ಗಿಫ್ಟ್ ಕೊಟ್ಟು ಹೇಗೆ ಒಂದು ದೀಪದ ರೂಪ ಕೊಡಬಹುದೆಂದು ತಿಳಿಯೋಣ. ನೀವು ತಂದುಕೊಟ್ಟ ಒಡವೆಗಳ ಉಡುಗೊರೆಯನ್ನು ಧರಿಸಿ ಆಕೆ ದೀಪಾವಳಿಯ ಪಾರ್ಟಿಯಲ್ಲಿ ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗುತ್ತಾರೆ. ಅಲ್ಲದೆ ನಿಮ್ಮ ಉಡುಗೊರೆ ನಿಮ್ಮ ಸಂಬಂಧವನ್ನು ಇನ್ನಷ್ಟು ಸದೃಡಗೊಳಿಸುತ್ತದೆ.

ಜ್ಯೂವೆಲರಿಯೇ ಬೆಟರ್ಗಿಫ್ಟ್

ಆಭರಣಗಳೆಂದರೆ ಮಹಿಳೆಯರಿಗೆ ವಿಶೇಷ ಒಲವೆಂದು ಎಲ್ಲರಿಗೂ ಗೊತ್ತು. ಆಭರಣಗಳೊಂದಿಗೆ ಅವರು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಏಕೆಂದರೆ ಆಭರಣಗಳು ಅವರನ್ನು ಸುಂದರವಾಗಿ ಕಾಣಿಸುವ ಜೊತೆಗೆ ಆರ್ಥಿಕವಾಗಿಯೂ ಸಂಪನ್ನರಾಗಿಸುವ ಅನುಭವ ಉಂಟುಮಾಡುತ್ತದೆ. ಆದ್ದರಿಂದ ಆಭರಣಕ್ಕಿಂತಲೂ ಉತ್ತಮವಾದ ಉಡುಗೊರೆ ಬೇರೆ ಯಾವುದಿದೆ?

ಬೆಟರ್ಹಾಫ್ಗೆ ಜ್ಯೂವೆಲರಿ ಗಿಫ್ಟಿಂಗ್ಆಪ್ಶನ್‌ : ದೀಪಾವಳಿಯ ಪಾರ್ಟಿಯಲ್ಲಿ ನಿಮ್ಮ ಪತ್ನಿ ದೀಪದಂತೆ ಕಾಣಿಸಬೇಕು ಹಾಗೂ ಎಲ್ಲರ ದೃಷ್ಟಿ ಅವರ ಮೇಲೆ ಇರಬೇಕು ಅನ್ನಿಸಿದರೆ ಈ ದೀಪಾವಳಿಯಲ್ಲಿ ಇಬ್ಬರಿಗೂ ಸ್ಪೆಷಲ್ ಅನ್ನಿಸುವಂತಹ ಜ್ಯೂವೆಲರಿ ಗಿಫ್ಟ್ ನ್ನು ಪತ್ನಿಗೆ ಕೊಡಿ.

ಟ್ರೈಬಲ್ ಜೂವೆಲರಿ : ಒಂದು ವೇಳೆ ನಿಮ್ಮ  ಪತ್ನಿಗೆ ಗೋಲ್ಡ್ ಮತ್ತು ಡೈಮಂಡ್‌ ಜ್ಯೂವೆಲರಿಗಿಂತ ಡಿಫರೆಂಟ್‌ ಆಗಿರುವ ಗಿಫ್ಟ್ ಕೊಡುವ ಇಚ್ಛೆಯಿದ್ದರೆ ಟ್ರೈಬಲ್ ಜ್ಯೂವೆಲರಿ ಬೆಸ್ಟ್ ಆಪ್ಶನ್‌ ಆಗಿರುತ್ತದೆ. ಜ್ಯೂವೆಲರಿ ಡಿಸೈನರ್‌ ಜಾನಕಿ ಹೀಗೆ ಹೇಳುತ್ತಾರೆ, “ಟ್ರೈಬಲ್ ಜ್ಯೂವೆಲರಿ ಹೆಚ್ಚು ಎಕ್ಸ್ ಪೆನ್ಸಿವ್ ‌ಅಲ್ಲ. ಸ್ಟೈಲ್‌ನ ವಿಷಯದಲ್ಲಿ ಇದಕ್ಕೆ ಯಾವುದೂ ಸರಿಸಾಟಿಯಿಲ್ಲ. ಇದು ಹೈ ಸೊಸೈಟಿಯ ಮಹಿಳೆಯರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಹೀಗಾಗಿ ಇದು ದೀಪಾವಳಿ ಗಿಫ್ಟ್ ಆಗಿ ಉತ್ತಮ ಆಪ್ಶನ್‌ ಆಗಿದೆ. ಗೋಲ್ಡ್ ಮತ್ತು ಡೈಮಂಡ್‌ ಜ್ಯೂವೆಲರಿಯನ್ನು ದಿನ ಕ್ಯಾರಿ ಮಾಡುವುದು ಸುಲಭವಲ್ಲ. ಹೀಗಿರುವಾಗ ಜ್ಯೂವೆಲರಿಯಲ್ಲಿ ಸಿಲ್ವರ್‌, ಕಾಪರ್‌, ವುಡನ್‌, ಆನೆ ದಂತ, ಸ್ಟೋನ್ಸ್, ಕಲರ್‌ಫುಲ್ ಶೇಡ್ಸ್ ಗಳ ಸ್ಮಾರ್ಟ್‌ ಜ್ಯೂವೆಲರಿ ಲುಕ್ಸ್ ನ್ನು ಕಂಪ್ಲೀಟ್‌ ಮಾಡುತ್ತದೆ ಮತ್ತು ಸ್ಮಾರ್ಟ್‌ ಲುಕ್‌ ಕೊಡುತ್ತದೆ. ಗಮನಿಸಬೇಕಾದ ವಿಷಯವೇನೆಂದರೆ  ಟ್ರೈಬಲ್ ಜ್ಯೂವೆಲರಿ ಈಗ ಫ್ಯಾಷನ್‌ನಲ್ಲಿದೆ. ಸಿಲ್ವರ್ ಕಾಯಿನ್‌ಗಳ ವಿಕ್ಟೋರಿಯನ್‌ ಸ್ಟೈಲ್‌ನ ಜ್ಯೂವೆಲರಿ ಗಿಫ್ಟ್ ಮಾಡಿ ಈ ದೀಪಾವಳಿಯಲ್ಲಿ ಗಂಡಂದಿರು ತಮ್ಮ ತಮ್ಮ ಪತ್ನಿಯರ ಹೃದಯ ಗೆಲ್ಲಬಹುದು. ಸೂರ್ಯ, ಚಂದ್ರ, ನಕ್ಷತ್ರ, ಜಾಮಿಟ್ರಿಕ್‌ ಡಿಸೈನ್ಸ್ ಮತ್ತು ಅನಿಮಲ್ ಮೋಟಿಫ್ಸ್ ಇರುವ ಜ್ಯೂವೆಲರಿ ವೆಸ್ಟರ್ನ್‌ ವೇರ್‌ನ ಜೊತೆ ಜೊತೆಗೆ ಇಂಡಿಯನ್‌ ವೇರ್‌ನೊಂದಿಗೂ ಟ್ರೆಂಡಿ ಮತ್ತು ಕೂಲ್ ಲುಕ್‌ ಕೊಡುತ್ತದೆ.”

ಆ್ಯಂಟಿಕ್ಜ್ಯೂವೆಲರಿ : ಆ್ಯಂಟಿಕ್‌ ಜ್ಯೂವೆಲರಿ ಸಿಲ್ವರ್‌ನಲ್ಲಿ ಬರುತ್ತದೆ. ಅದು ಟ್ರೆಡಿಶನಲ್ ಲುಕ್‌ ಕೊಡುವ ಜೊತೆಗೆ ಮಾಡರ್ನ್‌ ಟಚ್‌ ಕೂಡ ಕೊಡುತ್ತದೆ. ಸಿಲ್ವರ್‌ನಲ್ಲಿ ತಯಾರಿಸಿದ ಆ್ಯಂಟಿಕ್‌ ಜ್ಯೂವೆಲರಿಯ ವಿಶೇಷತೆ ಏನೆಂದರೆ ಅದರಲ್ಲಿ ಎಥ್ನಿಕ್‌ ಮತ್ತು ಪಾರಂಪರಿಕ ಎಲಿಮೆಂಟ್‌ ಇರುತ್ತದೆ. ಅದು ಇಂಡಿಯನ್‌ ವೇರ್‌ಗೆ ಗಾರ್ಜಿಯಸ್‌ ಲುಕ್‌ ಕೊಡುತ್ತದೆ ಹಾಗೂ ವೆಸ್ಟರ್ನ್ ವೇರ್‌ಗೆ ಫ್ಯೂಶನ್‌ ಸ್ಟೇಟ್‌ಮೆಂಟ್‌ ಕೊಡುತ್ತದೆ. ಸಿಲ್ವರ್‌ನಿಂದ ತಯಾರಾದ ಆ್ಯಂಟಿಕ್‌ ಜ್ಯೂವೆಲರಿಯಲ್ಲಿ ನೀವು ಪತ್ನಿಗೆ ಆಕ್ಸಿಡೈಸ್ಡ್ ನೆಕ್ಲೇಸ್‌, ರಿಂಗ್‌, ಕಫ್ಸ್ ಮತ್ತು ಕಲರ್ಡ್‌ ಸ್ಟೋನ್‌ ಖಚಿತ ಸಿಲ್ವರ್‌ ಜ್ಯೂವೆಲರಿಯನ್ನೂ ಗಿಫ್ಟ್ ಮಾಡಬಹುದು. ಜಾನಕಿ ಹೀಗೆ ಹೇಳುತ್ತಾರೆ, “ಡೈಮಂಡ್‌ ಮತ್ತು ಗೋಲ್ಡನ್‌ ಜ್ಯೂವೆಲರಿಗಳು ದುಬಾರಿಯಾದ್ದರಿಂದ ಪ್ರತಿಬಾರಿ ಕೊಳ್ಳಲಾಗುವುದಿಲ್ಲ. ಪ್ರೆಶಸ್‌ ಸಿಲ್ವರ್ ಜ್ಯೂವೆಲರಿ ಅಲರ್ಜಿ ಫ್ರೀ ಆಗಿದ್ದು ಅಗ್ಗ ಆಗಿರುತ್ತದೆ. ಆ್ಯಂಟಿಕ್‌ ಜ್ಯೂವೆಲರಿಯಲ್ಲಿ ಗಂಡಂದಿರು ಸಿಲ್ವರ್‌ ಬೇ,ಡ್ ಟರ್ಕಿಶ್ ಜ್ಯೂವೆಲರಿಯನ್ನು ಗಿಫ್ಟ್ ಮಾಡಬಹುದು. ಅದರ ಕಲರ್‌ ಗೋಲ್ಡನ್‌ ಆಗಿದ್ದು ಸ್ಟೈಲಿಶ್‌ ಲುಕ್‌ ಕೊಡುತ್ತದೆ.”

ಸ್ಟೇಟ್ಮೆಂಟ್ಜ್ಯೂವೆಲರಿ : ಸ್ಟೇಟ್‌ಮೆಂಟ್‌ ಜ್ಯೂವೆಲರಿ ಮಹಿಳೆಯ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತದೆ. ಅದು ಪ್ರತಿ ಮಹಿಳೆಯ ಖಾಸಗಿ ಮತ್ತು ಫ್ಯಾಷನೆಬಲ್ ಇಷ್ಟವಾಗಿದೆ. ನಿಮ್ಮ ಪತ್ನಿ ನೀವು ತಂದ ಸ್ಟೇಟ್‌ಮೆಂಟ್‌ ಜ್ಯೂವೆಲರಿ ಧರಿಸಿ ವಿಭಿನ್ನವಾಗಿ ಆತ್ಮವಿಶ್ವಾಸದಿಂದ ತುಂಬಿ ತುಳುಕುವಂತೆ ಕಾಣಿಸಲು ಅವರಿಗೆ ಸ್ಟೇಟ್‌ಮೆಂಟ್‌ ಜ್ಯೂವೆಲರಿಯನ್ನು ಉಡುಗೊರೆ ನೀಡಬಹುದು. ಸ್ಟೇಟ್‌ಮೆಂಟ್‌ ಜ್ಯೂವೆಲರಿ ಬರೀ ನೆಕ್‌ಪೀಸ್‌ನವರೆಗೆ ಮಾತ್ರ ಸೀಮಿತವಾಗಿಲ್ಲ. ಉಂಗುರಗಳು ಮತ್ತು ಇಯರ್‌ ರಿಂಗ್ಸ್ ಕೂಡ ಇದರ ಮಹತ್ವದ ಭಾಗವಾಗಿವೆ. ಸ್ಟೇಟ್‌ಮೆಂಟ್‌ ಜ್ಯೂವೆಲರಿ ಆರಿಸಿಕೊಳ್ಳುವಾಗ ಮುಖದ ಆಕಾರವನ್ನು ಗಮನಿಸಬೇಕು. ಒಂದು ತೂಗಾಡುವ ಶೇಪ್‌ನ ಇಯರ್‌ ರಿಂಗ್ಸ್ ಖರೀದಿಸಿ.

ಕಾಸ್ಟ್ಯೂಮ್ ಜ್ಯೂವೆಲರಿ : ತನ್ನ ಸೌಂದರ್ಯ ಮತ್ತು ಟೆಕ್ಸ್ ಚರ್‌ನಿಂದಾಗಿ ಕಾಸ್ಟ್ಯೂಮ್ ಜ್ಯೂವೆಲರಿ ಕ್ಲಾಸಿ ಜ್ಯೂವೆಲರಿಯಲ್ಲಿ ಬರುತ್ತದೆ. ಇದನ್ನು ಯಾವುದೇ ಔಟ್‌ಫಿಟ್‌ನೊಂದಿಗೆ ಕ್ಯಾರಿ ಮಾಡಬಹುದು. ಕಡಿಮೆ ಬೆಲೆಯ ಮತ್ತು ಅನೇಕ ಬಣ್ಣಗಳಲ್ಲಿ ಸಿಗುವ ಈ ಜ್ಯೂವೆಲರಿಯನ್ನು ಮಾಡರ್ನ್‌ ಮತ್ತು ಟ್ರೆಡಿಶನಲ್ ಯಾವುದೇ ಡ್ರೆಸ್‌ನೊಂದಿಗೆ ಧರಿಸಬಹುದು. ಜ್ಯೂವೆಲರಿ  ಬೀಡ್ಸ್, ಐರಿ, ರೋಲ್ಸ್, ಜ್ಯೂಟ್‌, ಟೆರಾಕೋಟಾ ಮತ್ತು ಇತರ ಲೋಹಗಳಲ್ಲಿ ಸಿಗುತ್ತದೆ. ಇಂಡೋವೆಸ್ಟರ್ನ್‌ ಔಟ್‌ಫಿಟ್‌ನೊಂದಿಗೆ ಎಥ್ನಿಕ್ ಜ್ಯೂವೆಲರಿಯಲ್ಲಿ ಟೆರಾಕೋಟಾ ಜ್ಯೂವೆಲರಿಗೆ ಯಾವುದೂ ಸರಿಸಾಟಿಯಿಲ್ಲ. ಬೊಹೆಮಿಯನ್‌ ಲುಕ್‌ಗೆ ವರ್ಣರಂಜಿತ ಬೀಡೆಡ್ ಜ್ಯೂವೆಲರಿ ಕೊಡಬಹುದು. ಬೀಡ್ಸ್ ಹಲವು ಮೆಟೀರಿಯ್‌ ಮತ್ತು ಬಣ್ಣಗಳಲ್ಲಿ ಸಿಗುವುದರಿಂದ ಇದನ್ನು ಎಲ್ಲ ಡ್ರೆಸ್‌ಗಳೊಂದಿಗೆ ಧರಿಸಬಹುದು.

ಪಿಂಕ್ಅಥವಾ ರೋಸ್ಗೋಲ್ಡ್ : ಈಗ ಇಂಟರ್‌ ನ್ಯಾಷನಲ್ ಟ್ರೆಂಡ್‌ನಲ್ಲಿ ಪಿಂಕ್‌ ಗೋಲ್ಡ್ ಮೇಲೆ ಡೈಮಂಡ್‌ ವರ್ಕ್ ಪ್ರಚಲಿತದಲ್ಲಿದೆ. ಒಂದು ವೇಳೆ ನೀವು ಡೈಮಂಡ್‌ ಇಲ್ಲದಿರುವ ಜ್ಯೂವೆಲರಿ ಬಯಸಿದರೆ ಗೋಲ್ಡ್ ಮೇಲೆ ಸೆಲ್ಫ್ ಡಿಸೈನ್‌ ಅಥವಾ ಟೆಕ್ಸ್ಚರ್ಡ್‌ ಡಿಸೈನ್‌ನ ಜ್ಯೂವೆಲರಿ ಖರೀದಿಸಬಹುದು. ಒಂದು ವೇಳೆ ಡೈಮಂಡ್‌ ಅಥವಾ ಪ್ರೆಶಸ್‌ ಸ್ಟೋನ್‌ನ ಡಿಸೈನ್‌ನ ಜ್ಯೂವೆಲರಿ ಇಚ್ಛಿಸಿದರೆ ಇರೆಗ್ಯುಲರ್‌ ಡಿಸೈನ್‌ನ ದೊಡ್ಡ ಸ್ಟೋನ್‌ ಇರುವ ಜ್ಯೂವೆಲರಿ ತೆಗೆದುಕೊಳ್ಳಿ. ಅದರಲ್ಲಿ ಸ್ಟೋನ್‌ನ ಶೇಪ್ ಒಂದೇ ರೀತಿ ಇರದೆ ಬೇರೆ ಬೇರೆ ಆಕಾರದಲ್ಲಿ ಇರುತ್ತದೆ. ಪಿಂಕ್‌ ಗೋಲ್ಡ್ ಈಗ ಹಾಲಿವುಡ್‌ ಸ್ಟಾರ್‌ಗಳಿಂದ ಹಿಡಿದು ಬಾಲಿವುಡ್‌ಸ್ಟಾರ್‌ಗಳವರೆಗೆ ಜನಪ್ರಿಯವಾಗಿದೆ. ಡೈಮಂಡ್‌ ಮತ್ತು ಇತರ ಪ್ರೆಶೆಸ್‌ ಸ್ಟೋನ್‌ ವರ್ಕ್‌ ಪಿಂಕ್‌ ಗೋಲ್ಡ್ ಗೆ ಅಟ್ರಾಕ್ಟಿವ್ ‌ಲುಕ್ ಕೊಡುತ್ತದೆ. ಒಂದು ವೇಳೆ ನಿಮ್ಮ ಬೆಟರ್‌ಹಾಫ್‌ ಈ ಫ್ಯಾಷನೆಬಲ್ ದೀಪದಂತೆ ಕಾಣಿಸಬೇಕೆಂದು ಬಯಸಿದರೆ ಈ ದೀಪಾವಳಿಯಲ್ಲಿ ಪಿಂಕ್‌ ಗೋಲ್ಡ್ ಜ್ಯೂವೆಲರಿಯನ್ನು ಗಿಫ್ಟ್ ಕೊಡಬಹುದು.

ದೀಪಾವಳಿಯಲ್ಲಿ ಹಲವಾರು ಕಂಪನಿಗಳು ಒಡವೆಗಳ ಮೇಲೆ ವಿಶೇಷ ರಿಯಾಯಿತಿ ನೀಡುತ್ತಾರೆ. ನೀವು ಈ ಸದವಕಾಶ ಪಡೆದು ನಿಮ್ಮ ಪತ್ನಿಯ ಇಷ್ಟವನ್ನು ಗಮನದಲ್ಲಿಟ್ಟುಕೊಂಡು ಆಧುನಿಕ ಡಿಸೈನ್‌ಗಳು ಮತ್ತು ಪಾರಂಪರಿಕ ಒಡವೆಗಳ ಅದ್ಭುತ ಹೊಂದಾಣಿಕೆಯನ್ನು ಪ್ರಸ್ತುತಪಡಿಸಬಹುದು.

ಜ್ಯೂವೆಲರಿ ಖರೀದಿಸುವಾಗ

ಜ್ಯೂವೆಲರಿಯನ್ನು ಯಾವಾಗಲೂ ವಿಶ್ವಸನೀಯ ಅಂಗಡಿಯಿಂದಲೇ ಖರೀದಿಸಿ.

ಜ್ಯೂವೆಲರಿ ಖರೀದಿಸುವ ಮೊದಲು ಅದರ ಮೇಕಿಂಗ್‌ ಚಾರ್ಜಸ್‌ ಮತ್ತು ಇತರ ಟ್ಯಾಕ್ಸ್  ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳಿ.

ಜ್ಯೂವೆಲರಿಯ ಶುದ್ಧತೆ ಮತ್ತು ರೀಪ್ಲೇಸ್‌ಮೆಂಟ್‌ ನಂತರ ಸಿಗುವ ಬೆಲೆ ಬಗ್ಗೆ ತಿಳಿದುಕೊಳ್ಳಿ.

ಖರೀದಿಸಿದ ಒಡವೆಗಳ ಬಿಲ್ ‌ತೆಗೆದುಕೊಳ್ಳಲು ಮರೆಯದಿರಿ.

ಇಂತಹ ಅಲಂಕರಿಸಿದ ಜ್ಯೂವೆಲರಿಯನ್ನು ಮಾರಿದರೆ ಹಣ ಸಿಗುವುದಿಲ್ಲ, ಆದರೆ ಅದೇನೂ ಚಿಂತಿಸುವ ವಿಷಯವಲ್ಲ. ಏಕೆಂದರೆ ದಿನ ಜ್ಯೂವೆಲರಿಯನ್ನು ಮಾರುವಂತಹ ಪ್ರಸಂಗ ಬರುವುದು ಕಡಿಮೆ. ನೀವು ಆಕರ್ಷಕವಾಗಿ ಕಾಣುವುದು ಅಗತ್ಯ. ಹೂಡಿಕೆಗಾಗಿ ಹಣವನ್ನು ಬೇರೆ ಜಾಗದಲ್ಲಿ  ಹಾಕಿ ಜ್ಯೂವೆಲರಿಯ ಮೇಲೆ ಬೇಡ. ಅದರಲ್ಲಿ ಪರೀಕ್ಷೆ ಮಾಡಲು ಹಾಗೂ ಡಿಸೈನಿಂಗ್‌ ಮಾಡಲು ಹೆಚ್ಚು ಖರ್ಚಾಗುತ್ತದೆ. ಜ್ಯೂವೆಲರಿ ಆರ್ಟಿಫಿಶಿಯಲ್‌ದ್ದೇ ಆಗಿದ್ದರೂ ಅದರಲ್ಲಿ ದೇವತೆಗಳ ಚಿತ್ರ ಇರದಿರಲಿ. ಏಕೆಂದರೆ ಇಂತಹ ಜ್ಯೂವೆಲರಿ ಮೂಢನಂಬಿಕೆಯಿಂದ ಕೂಡಿದ್ದು ಅದನ್ನು ಎಸೆದರೆ ಧರ್ಮವಿರೋಧಿ ಎನ್ನುತ್ತಾರೆ. ನಿಮ್ಮ ಅಲಂಕಾರ ನಿಮ್ಮ ಮೌಲಿಕತೆ ಮತ್ತು ಆಲೋಚನೆ ಪ್ರದರ್ಶಿಸಲಿ, ಸವೆದುಹೋದ ರೀತಿ ರಿವಾಜುಗಳನ್ನಲ್ಲ.

ಸಿ.ಎಸ್‌. ವಿನುತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ