ಮನೆ ಖರೀದಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ನಮ್ಮ ದೇಶದಲ್ಲಂತೂ ಸಾಲ ಪಡೆಯುವುದು ಸರಿಯಲ್ಲ ಎಂದು ತಿಳಿಯಲಾಗಿದೆ. ಆದರೆ ನಿಮ್ಮ ಪೋರ್ಟ್ ಪೋಲಿಯೋದಲ್ಲಿ ಹೋಮ್ ಲೋನ್ ಇದ್ದರೆ ಅದು ಒಳ್ಳೆಯ ಗುರುತಾಗಿದೆ. ಅಂದಹಾಗೆ ಹೋಮ್ ಲೋನ್ ಇತರ ಲೋನ್‌ಗಳಿಗಿಂತ ಭಿನ್ನವಾಗಿದೆ. ಕಾರಣವೇನೆಂದರೆ ಹೋಮ್ ಲೋನ್ ತೆಗೆದುಕೊಳ್ಳುವುದೆಂದರೆ ನಿಮ್ಮ ಬಳಿ ಒಂದು ಸಂಪತ್ತನ್ನು ಮಾಡಿಕೊಂಡಂತೆ. ಅದರ ಬೆಲೆ ಯಾವಾಗಲೂ ಹೆಚ್ಚುತ್ತಿರುತ್ತದೆ. ಇನ್ನೊಂದು ಕಡೆ ಬಾಕಿ ಸಾಲ ಸಾಲಗಾರನಿಗೆ ಆಮಂತ್ರಣ ನೀಡುತ್ತದೆ. ನೀವು ಹೋಮ್ ಲೋನ್ ಪಡೆದು ಮನೆ ಖರೀದಿಸಿದರೆ ಅದು ಬುದ್ಧಿವಂತಿಕೆ. ಆದರೆ ಅದರ ಸೂಕ್ಷ್ಮತೆಗಳ ಬಗ್ಗೆ ಮಾಹಿತಿ ಇರಬೇಕು. ಅಗ್ಗದ ಹೋಮ್ ಲೋನ್ ಹೇಗೆ ಸಿಗುತ್ತದೆ. ಒಟ್ಟಿಗೆ ಅಪ್ಲೈ ಮಾಡಿ :
ನೀವು ಮತ್ತು ನಿಮ್ಮ ಹಲವಾರು ಮಿತ್ರರು ಒಟ್ಟಿಗೆ ಹೋಮ್ ಲೋನ್ ಪಡೆದರೆ ಈ ಲೋನ್ ನಿಮಗೆ ಅಗ್ಗವಾಗುವುದು. ಒಟ್ಟಿಗೆ ಲೋನ್ ತೆಗೆದುಕೊಂಡಾಗ ಬ್ಯಾಂಕ್ ಅಥವಾ ವಿತ್ತೀಯ ಸಂಸ್ಥೆಗೆ ಅದರ ಪ್ರೋಸೆಸಿಂಗ್ ಮತ್ತು ಕಾನೂನು ಕಲಾಪಗಳಿಗೆ ಖರ್ಚು ಕಡಿಮೆ ಬೀಳುತ್ತದೆ. ಅದರ ಲಾಭ ನಿಶ್ಚಿತವಾಗಿ ಬ್ಯಾಂಕ್ ಗ್ರಾಹಕರಿಗೆ ಸಿಗುತ್ತದೆ. ಅಂದರೆ ಬ್ಯಾಂಕ್ ನಿಮ್ಮ ಪ್ರೋಸೆಸಿಂಗ್ ಫೀಸ್ ಮತ್ತು ಇತರ ಶುಲ್ಕಗಳನ್ನು ಮನ್ನಾ ಮಾಡುತ್ತದೆ.
ತಿಂಗಳ ಕೊನೆಯಲ್ಲಿ ಹೋಮ್ ಲೋನ್ಗೆ ಅಪ್ಲೈ ಮಾಡಿ : ಸಾಲ ಕೊಡಲು ಬ್ಯಾಂಕುಗಳ ತಿಂಗಳ ಆಧಾರದಲ್ಲಿ ಟಾರ್ಗೆಟ್ ಇರುತ್ತದೆ. ಒಂದು ವೇಳೆ ನೀವು 24ನೇ ತಾರೀಖಿನ ನಂತರ ಲೋನ್‌ಗೆ ಅರ್ಜಿ ಹಾಕುತ್ತಿದ್ದರೆ, ನಿಮಗೆ ಡಿಸ್ಕೌಂಟ್ ಸಿಗುವ ಸಂಭಾವ್ಯತೆ ಹೆಚ್ಚು. ಬ್ಯಾಂಕುಗಳು ತಮ್ಮ ಪ್ರತಿ ತಿಂಗಳ ಲೋನ್ ಟಾರ್ಗೆಟ್ ಪೂರೈಸಿದರೆ ಆ ಅವಧಿಯಲ್ಲಿ ಬ್ಯಾಂಕು ರಿಯಾಯಿತಿ ದರದಲ್ಲಿ ಹೋಮ್ ಲೋನ್ ಕೊಡಬಹುದು.
ಕ್ರೆಡಿಟ್ ರೇಟಿಂಗ್‌ನ್ನು ಸುಸ್ಥಿತಿಯಲ್ಲಿಡಿ : ಬ್ಯಾಂಕ್ ತಮ್ಮ ಹಳೆಯ ವಿಶ್ವಸನೀಯ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಹೋಮ್ ಲೋನ್ ಕೊಡಲು ಪ್ರಯತ್ನಿಸುತ್ತದೆ. ಒಂದು ವೇಳೆ ನೀವು ಬ್ಯಾಂಕಿನ ಹಳೆಯ ಗ್ರಾಹಕರಾಗಿದ್ದರೆ ಮತ್ತು ನಿಮ್ಮ ರೀಪೇಮೆಂಟ್ ರೆಕಾರ್ಡ್ ಚೆನ್ನಾಗಿದ್ದರೆ ಇತರ ಗ್ರಾಹಕರಿಗಿಂತ ಕಡಿಮೆ ದರದಲ್ಲಿ ನಿಮಗೆ ಲೋನ್ ಸಿಗುವ ಸಾಧ್ಯತೆ ಇದೆ.
ಗಮನಿಸಿ
ಬೆಸ್ಟ್ ಡೀಲ್ ಅಥವಾ ಅಗ್ಗದ ಡೀಲ್ ಯಾವಾಗಲೂ ಒಳ್ಳೆಯ ಡೀಲ್ ಆಗಬೇಕೆಂದೇನಿಲ್ಲ.
ಹೊಸ ಅಥವಾ ಹೆಚ್ಚು ಮಾಹಿತಿ ಇಲ್ಲದ ಸಾಲ ಕೊಡುವವರಿಂದ ಸಾಲ ಪಡೆಯಬೇಡಿ.
ಲೋನ್ ಪಡೆಯುವಾಗ ಕನಿಷ್ಠ 4-5 ಕಡೆ ಬೇರೆ ಬೇರೆ ಸಾಲ ಕೊಡುವವರ ಬಳಿ ಬಡ್ಡಿದರ, ಖರ್ಚು, ಅರ್ಜಿ ಪ್ರಕ್ರಿಯೆಯಲ್ಲಿ ಸರಳತೆ ಮತ್ತು ಸಾಲ ತೀರಿಸುವಿಕೆಯಲ್ಲಿ ಸರಳತೆ ಮತ್ತು ಹಳೆಯ ಸಾಲಗಾರರ ಅನುಭವಗಳ ಬಗ್ಗೆಯೂ ಅಗತ್ಯವಾಗಿ ತಿಳಿದುಕೊಳ್ಳಿ.
ಬಡ್ಡಿ ದರಗಳು ಮತ್ತು ಇತರ ಶುಲ್ಕಗಳಿಗೆ ಹೋಲಿಸಿ ನೀವು ಆನ್‌ಲೈನ್ ಪೋರ್ಟ್‌ನ ಆಸರೆ ಪಡೆಯಬಹುದು.
ಸಾಲ ಕೊಡುವವರ ರೇಟ್ ರೀಸೆಟ್, ಫೋರ್ ಕ್ಲೋಷರ್‌ನ ಷರತ್ತುಗಳ ಅಧ್ಯಯನ ಬಹಳ ಅಗತ್ಯ.
ಪ್ರೀ ಪೇಮೆಂಟ್‌ನ ನಿಯಮಗಳು ಮತ್ತು ಷರತ್ತುಗಳು ಸುಲಭವಾಗಿರಬೇಕು. ಅಂತಹ ಸಾಲ ಕೊಡುವವರನ್ನು ಹುಡುಕಿ.
ಪ್ರತಿಸ್ಪರ್ಧೆ ಮತ್ತು ಬೇಸ್ ರೇಟ್‌ನ ನಿಯಮದಿಂದ ನೀವು ಲೋನ್‌ನಲ್ಲಿ ಹೆಚ್ಚೆಂದರೆ ಶೇ.0.25 ನಿಂದ ಶೇ.0.5 ರವರೆಗೆ ಮೌಲ್ಯ ಇಟ್ಟುಕೊಳ್ಳಬಹುದು. ಭವಿಷ್ಯದಲ್ಲಿ ಅದು ಇನ್ನಷ್ಟು ಕಡಿಮೆಯಾಗಬಹುದು. ರೇಟ್ ರೀಸೆಟ್‌ನಲ್ಲಿ ಫ್ಲೋಟಿಂಗ್ ಮತ್ತು ಫಿಕ್ಸೆಡ್
ಎರಡೂ ರೀತಿಯ ಲೋನ್ ಸಿಗುತ್ತದೆ.
ಹೋಮ್ ಲೋನ್ ಅರ್ಹತೆಗೆ ನಿರ್ಧಾರ ಬ್ಯಾಂಕುಗಳಿಗೆ ಕೆಲವು ಮಾನದಂಡಗಳಿರುತ್ತವೆ. ಅದನ್ನು ಪಾಲಿಸುವವರಿಗೆ ಒಂದು ನಿಶ್ಚಿತ ಅವಧಿಗೆ ಹೋಮ್ ಲೋನ್ ಕೊಡಲಾಗುತ್ತದೆ. ಸರ್ಟಿಫೈಡ್ ಫೈನಾನ್ಶಿಯಲ್ ಪ್ಲ್ಯಾನರ್ ಅಮಿತ್‌ರ ಪ್ರಕಾರ, ಒಬ್ಬ ವ್ಯಕ್ತಿಗೆ ಎಷ್ಟು ಲೋನ್ ಸಿಗುತ್ತದೆ ಎಂಬುದು ಆತನ ಗ್ರಾಸ್ ಸ್ಯಾಲರಿಯನ್ನು ಅವಲಂಬಿಸಿದೆ. ಉದಾಹರಣೆಗೆ ಸಂಬಳದ ವರ್ಗದವರಿಗೆ ವಾರ್ಷಿಕ ಆದಾಯದ ನಾಲ್ಕು ಪಟ್ಟು ಹೋಮ್ ಲೋನ್ ಕೊಡಲಾಗುತ್ತದೆ. ಇದಲ್ಲದೆ, ಚಾರ್ಟರ್ಡ್ ಅಕೌಂಟೆಂಟ್, ಡಾಕ್ಟರ್‌ರಂತಹ ವೃತ್ತಿಯವರಿಗೆ ಅವರ ವಾರ್ಷಿಕ ಆದಾಯದ 7 ಪಟ್ಟು ಲೋನ್ ಕೊಡಲಾಗುತ್ತದೆ. ಆದಾಗ್ಯೂ ಲೋನ್ ಕೊಡುವಾಗ ಬ್ಯಾಂಕ್ ಆ ವ್ಯಕ್ತಿಯ ಟೇಕ್ ಹೋಮ್ ಸ್ಯಾಲರಿ ಅಥವಾ ನೆಟ್ ಸ್ಯಾಲರಿ, ಗ್ರಾಸ್ ಸ್ಯಾಲರಿಯ ಶೇ.40ಕ್ಕಿಂತ ಕಡಿಮೆ ಇರಬಾರದು ಎಂದು ಕೂಡ ಗಮನಿಸುತ್ತದೆ.
ಹೋಮ್ ಲೋನ್‌ನ ಅರ್ಹತೆ ಹೆಚ್ಚಳ
ನಿಮ್ಮ ಲೋನ್‌ನ ಅವಧಿ ಎಷ್ಟು ದೊಡ್ಡದಾಗಿರುತ್ತದೋ ಅಷ್ಟು ಹೆಚ್ಚು ಲೋನ್ ನಿಮಗೆ ಸಿಗುತ್ತದೆ. ಪ್ರತಿ ಲಕ್ಷ ರೂ.ಗಳಿಗೆ ಮಾಸಿಕ ಕಂತು ದೀರ್ಘಾವಧಿಗಾಗಿ ಕಡಿಮೆ ಬೀಳುತ್ತದೆ. ಅಂತಹ ಸ್ಥಿತಿಯಲ್ಲಿ ಬ್ಯಾಂಕ್ ಆ ಆದಾಯಕ್ಕೆ ಹೆಚ್ಚಿನ ಲೋನ್ ಕೊಡುತ್ತದೆ. ಲೋನ್ ಪಡೆಯುವ ತಮ್ಮ ಅರ್ಹತೆ ಹೆಚ್ಚಿಸಿಕೊಳ್ಳುವ ಇನ್ನೊಂದು ವಿಧಾನವೆಂದರೆ ಬ್ಯಾಂಕ್ ಪರ್ಮಿಶನ್ ಕೊಡುವ ಸಂಬಂಧಿಕರು ಹಾಗೂ ನಿಮ್ಮ ಆದಾಯ ಸೇರಿಸಿ ಜಾಯಿಂಟ್ ಲೋನ್ ಪಡೆಯಬಹುದು. ಇದರಲ್ಲಿ ನಿಮ್ಮ ಸಂಗಾತಿ, ಮಕ್ಕಳು, ಆಪ್ಪ, ಅಮ್ಮ, ಅಣ್ಣ, ತಂಗಿ ಸೇರಿಕೊಳ್ಳಬಹುದು. ಒಬ್ಬ ವಿವಾಹಿತ ಮಹಿಳೆಯೂ ತನ್ನ ಅತ್ತೆ, ಮಾವ ಅಥವಾ ಪತಿಯ ಆದಾಯ ಸೇರಿಸಿ ಜಾಯಿಂಟ್ ಲೋನ್‌ಪಡೆಯಬಹುದು. ಆದಾಗ್ಯೂ ಆಕೆ ತನ್ನ ಅಪ್ಪ, ಅಮ್ಮನ ಜೊತೆ ಜಾಯಿಂಟ್ ಲೋನ್ ಪಡೆಯಲು ಆಗುವುದಿಲ್ಲ.
ಲೋನ್ ಕೊಡುವಾಗ ಬ್ಯಾಂಕ್ ನಿಮ್ಮನ್ನು ಯಾವುದಾದರೂ ಹಳೆಯ ಲೋನ್ ರೀಪೇಮೆಂಟ್ ಬಗ್ಗೆ ಮಾಹಿತಿ ಕೇಳಬಹುದು. ಅದಕ್ಕೆ ನೀವು ಯಾವುದಾದರೂ ಹಳೆಯ ಲೋನ್‌ನ (ಕಾರ್ ಲೋನ್ ಅಥವಾ ಬೇರೆ ಲೋನ್) ರೀಪೇಮೆಂಟ್ ಪ್ರೂಫ್ ಕೊಡಬಹುದು. ಒಂದು ವೇಳೆ ನೀವು ಇದಕ್ಕೆ ಮುಂಚೆ ಯಾವುದೋ ಲೋನ್ ಪಡೆಯದೇ ಇದ್ದಲ್ಲಿ ಮತ್ತು ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದಲ್ಲಿ ಅದರ ರೀಪೇಮೆಂಟ್ ಬಗೆಗಿನ ಮಾಹಿತಿಯನ್ನು ಲೋನ್ ಕೊಡುವ ಬ್ಯಾಂಕ್ ಅಥವಾ ಸಂಸ್ಥೆಗೆ ಕೊಡಬೇಕು.
ಒಂದು ವೇಳೆ ಬ್ಯಾಂಕಿಗೆ ನಿಮ್ಮ ರೀಪೇಮೆಂಟ್ ಮಾಡುವ ಸಾಮರ್ಥ್ಯದ ಬಗ್ಗೆ ಭರವಸೆ ಇದ್ದರೆ, ನಿಮ್ಮ ಲೋನ್ ಪಡೆಯುವ ಅರ್ಹತೆಯನ್ನು ಹೆಚ್ಚಿಸಬಹುದು. ಇದಲ್ಲದೆ, ನಿಮ್ಮ ಈಗಿನ ಬ್ಯಾಂಕ್ ವಿಶೇಷವಾಗಿ ಪ್ರೈವೇಟ್ ಬ್ಯಾಂಕ್ ಆಗಿದ್ದು, ಅದರಲ್ಲಿ ನಿಮ್ಮ ಸೇವಿಂಗ್ಸ್ ಅಕೌಂಟ್ ಕೂಡ ಇದ್ದರೆ ಇತರ ಬ್ಯಾಂಕುಗಳು ಮತ್ತು ಫೈನಾನ್ಸ್ ಕಂಪನಿಗಳಿಗೆ ಹೋಲಿಸಿದರೆ ನಿಮ್ಮ ಹಳೆಯ ರೆಕಾರ್ಡ್ ಆಧಾರದ ಮೇಲೆ ನೋಡಿ ಹೆಚ್ಚು ಲೋನ್ ಸಿಗುತ್ತದೆ.
ಅಗ್ಗದ ಹೋಮ್ ಲೋನ್ಗಾಗಿ
ಹೋಮ್ ಲೋನ್ ಪಡೆಯುವ ಮೊದಲು ಹಲವಾರು ಬ್ಯಾಂಕುಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳ ದರಗಳು ಹಾಗೂ ಷರತ್ತುಗಳ ಬಗ್ಗೆ ತಿಳಿಯುವುದು ಮುಖ್ಯ. ಹಾಗೆ ನೋಡಿದರೆ ಹೆಚ್ಚಿನ ಬ್ಯಾಂಕುಗಳು ನಿಮ್ಮ ಪ್ರೊಫೈಲ್‌ಗೆ ತಕ್ಕಂತೆ ಲೋನ್‌ಗಳನ್ನು ಅತ್ಯಂತ ಒಳ್ಳೆಯ ದರಗಳಲ್ಲಿ ಪ್ರಸ್ತುತಪಡಿಸುತ್ತವೆ. ವಿಶೇಷವಾಗಿ ಯಾರಿಗೆ ತುರ್ತಾಗಿ ಲೋನ್ ಅಗತ್ಯ ಇದೆಯೋ ಅವರಿಗೆ ಬ್ಯಾಂಕ್ ತನ್ನ ಕಡೆಯಿಂದ ಅತ್ಯಂತ ಒಳ್ಳೆಯ ದರಗಳಲ್ಲಿ ಲೋನ್ ಆಫರ್ ಮಾಡುತ್ತದೆ. ನಿಮ್ಮೊಂದಿಗೆ ನಿಮ್ಮ ಕೆಲವು ಮಿತ್ರರು ಅಥವಾ ಬಂಧುಗಳು ಒಟ್ಟಿಗೆ ಹೋಮ್ ಲೋನ್‌ಗಳನ್ನು ಪಡೆಯಲು ಅರ್ಜಿ ಸಲ್ಲಿಸುತ್ತಿದ್ದರೆ ಬ್ಯಾಂಕಿಗೆ ಒಂದು ದೊಡ್ಡ ಲೋನ್‌ಪೋರ್ಟ್ ಪೋಲಿಯೋ ಸಿಗುತ್ತದೆ. ಒಂದೇ ಬಿಲ್ಡಿಂಗ್‌ನಲ್ಲಿ ಫ್ಲ್ಯಾಟ್ ಅಥವಾ ಅಪಾರ್ಟ್‌ಮೆಂಟ್ ಖರೀದಿಸಲು ಎಲ್ಲರೂ ಲೋನ್ ಪಡೆಯಲು ಇಚ್ಛಿಸಿದರೆ ಈ ವಿಧಾನ ಇನ್ನಷ್ಟು ಯಶಸ್ವಿಯಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಬ್ಯಾಂಕುಗಳ ಕಾನೂನು ಹಾಗೂ ಟೆಕ್ನಿಕ್‌ಗಳ ಖರ್ಚು ಕಡಿಮೆಯಾಗುತ್ತದೆ. ಅದರ ಲಾಭ ಹೋಮ್ ಲೋನ್ ಪಡೆಯುವವರಿಗೆ ಸಿಗುತ್ತದೆ.
ಅರ್ಜಿ ಹಾಕುವ ಮೊದಲಿನ ಸಿದ್ಧತೆ
`ಸಿಬಿಲ್’ ಅಂದರೆ ಕ್ರೆಡಿಟ್ ಇನ್‌ಫರ್ಮೇಶನ್ ಬ್ಯೂರೋ ಆಫ್ ಇಂಡಿಯಾ ಲಿಮಿಟೆಡ್‌ನಿಂದ ನಿಮ್ಮ ಕ್ರೆಡಿಟ್ ರಿಪೋರ್ಟ್‌ವತರಿಸಿ ನಿಮ್ಮ ರೆಕಾರ್ಡ್ ಮತ್ತು ಸ್ಕೋರ್ ಏನೆಂದು ತಿಳಿಯಬಹುದು. ವರ್ಷಕ್ಕೊಮ್ಮೆ 450 ರೂ. ಖರ್ಚು ಮಾಡಿ ಸಿಬಿಲ್‌ನಿಂದ ಕ್ರೆಡಿಟ್ ಸ್ಕೋರ್ ಪಡೆದ ನಂತರ ನಿಮಗೆ ಸಾಲ ಕೊಡುವವರು ನಿಮ್ಮ ಅರ್ಜಿಯನ್ನು ಯಾವ ರೀತಿ ನೋಡುತ್ತಾರೆಂದು ತಿಳಿಯಬಹುದು. ಒಂದು ವೇಳೆ ಕ್ರೆಡಿಟ್ ರಿಪೋರ್ಟ್‌ನಲ್ಲಿ ಏನಾದರೂ ತಪ್ಪು ಕಂಡುಬಂದರೆ, ಉದಾಹರಣೆಗೆ ನೀವು ಕ್ರೆಡಿಟ್ ಕಾರ್ಡ್‌ನ ಎಲ್ಲ ಬಿಲ್‌ಗಳನ್ನು ಪಾವತಿಸಿಲ್ಲ ಎಂದು ತೋರಿಸಿದ್ದು ಅದರಿಂದ ನಿಮ್ಮ ಕ್ರೆಡಿಟ್ ರಿಪೋರ್ಟ್ ಪ್ರಭಾವಿತವಾಗಿದ್ದರೆ ನೀವು ಪಾವತಿಸಿದ ರಸೀದಿಗಳೊಂದಿಗೆ ಸಂಬಂಧಿಸಿದ ಬ್ಯಾಂಕ್‌ನೊಂದಿಗೆ ಮಾತುಕಥೆ ನಡೆಸಬಹುದು. ಅಂತಹ ಸಾಕ್ಷ್ಯಗಳೊಂದಿಗೆ ನೀವು ನೇರವಾಗಿ ಸಿಬಿಲ್‌ನ್ನು ಸಂಪರ್ಕಿಸಿ ನಿಮ್ಮ ವರದಿ ಸರಿ ಮಾಡಿಸಬಹುದು.
ಅಂದಹಾಗೆ ಸಿಬಿಲ್ ಬಳಿ ಇಂತಹ ಎಲ್ಲ ವರದಿಗಳು ತಲುಪಿ ಅವನ್ನು ಅರ್ಜಿದಾರರ ಟ್ರ್ಯಾಕ್ ರೆಕಾರ್ಡ್ ನೋಡಲು ಬಳಸುತ್ತಾರೆ. ಒಂದು ವೇಳೆ ಬ್ಯಾಂಕ್ ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ಹಳೆಯ ಲೋನ್‌ನ ಮರುಪಾವತಿಯ ವಿಷಯದಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ನಿಮ್ಮ ಲೋನ್ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಆದ್ದರಿಂದ ಲೋನ್ ಪಡೆಯುವ ಅರ್ಹತೆ ಹೆಚ್ಚಿಸಲು ಕ್ರೆಡಿಟ್ ಕಾರ್ಡ್, ಟೆಲಿಫೋನ್ ಬಿಲ್, ಲೋನ್‌ನ ಮಾಸಿಕ ಕಂತು ಇತ್ಯಾದಿಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ.
ಸಿಬಿಲ್ ಈಗೀಗ ಸಾಲ ಪಡೆಯುವಲ್ಲಿ ನಿಮಗೆ ಅತ್ಯಂತ ದೊಡ್ಡ ಶತ್ರುವಾಗಬಹುದು. ಏಕೆಂದರೆ ಅದರ ಆಧಾರದ ಮೇಲೆಯೇ ಬ್ಯಾಂಕ್ ನಿಮಗೆ ಮನಸ್ಸಿಗೆ ಬಂದಂತೆ ಬಡ್ಡಿ ಅಥವಾ ಚಾರ್ಜ್ ವಿಧಿಸುತ್ತದೆ. ಒಂದು ವೇಳೆ ನೀವು ಸರಿಯಾಗಿ ಪಾವತಿಸದಿದ್ದರೆ ಬ್ಯಾಂಕಿನವರು ಸಿಬಿಲ್‌ನಲ್ಲಿ ನಿಮ್ಮ ಲೋನ್ ತಡೆಹಿಡಿದು ನಿಮ್ಮ ರೆಕಾರ್ಡ್ ಹಾಳು ಮಾಡುತ್ತಾರೆ. ಸಿಬಿಲ್ ತನ್ನ ವಿರುದ್ಧ ಏನನ್ನು ಕೇಳಲೂ ಸಿದ್ಧವಿರುವುದಿಲ್ಲ. ಆರ್ಥಿಕ ಸ್ವಾತಂತ್ರ್ಯಕ್ಕೆ ಅಪಾಯಕಾರಿಯಾದ ಸಿಬಿಲ್ ಬ್ಯಾಂಕುಗಳಿಗೆ ಅಸ್ತ್ರವಾಗಿಬಿಟ್ಟಿದೆ.
– ಕೆ. ವಿಜಯಲಕ್ಷ್ಮಿ