ಹೊಸ ವರ್ಷದಂದು ಮನೆಯ ಸಿಂಗಾರವಷ್ಟೇ ಸಾಲುವುದಿಲ್ಲ. ನಿಮ್ಮನ್ನು ನೀವು ಅಲಂಕರಿಸಿಕೊಳ್ಳುವುದು ಬಹಳ ಅಗತ್ಯ. ಅಂದು ಎಲ್ಲ ಕಡೆ ಸಡಗರ ಸಂಭ್ರಮ ತುಂಬಿರುತ್ತದೆ. ನೀವು ಸಿಂಗರಿಸಿಕೊಂಡರೆ ಹೊಸ ವರ್ಷದ ಉತ್ಸಾಹ ದ್ವಿಗುಣವಾಗುತ್ತದೆ. ಪತಿಯ ಹೃದಯ ಗೆಲ್ಲುವುದರೊಂದಿಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ಬನ್ನಿ, ಈ ಸಂದರ್ಭದಲ್ಲಿ ಸುಂದರ ನೆನಪುಗಳನ್ನು ತಾಜಾ ಆಗಿಸಲು ಕೆಳಗಿನ ಮೇಕಪ್ ಟಿಪ್ಸ್ ಅನುಸರಿಸಿ.
ನೇಲ್ ಪಾಲಿಶ್ ತೆಗೆಯಲು ನಾನ್ ಅಸಿಟೋನ್ ರಿಮೂವರ್ ಬಳಸಿ.
ಹೆವಿ ಬೇಸ್ ಫೌಂಡೇಶನ್‌ನ್ನು ಎಂದೂ ಉಪಯೋಗಿಸಬೇಡಿ.
ಕೂಲ್ ಹಾಗೂ ಫ್ಲರ್ಟಿ ಲುಕ್ಸ್ಗೆ ಲೋಯರ್ ಲಿಡ್‌ಮೇಲೆ ಸಿಲ್ವರ್ ಹಾಗೂ ಬ್ಲೂ ಲೈನರ್ ಉಪಯೋಗಿಸಿ.
ಕಣ್ಣುಗಳನ್ನು ದೊಡ್ಡದಾಗಿ ಕಾಣಿಸಲು ಲೈಟ್ ಲೈನರ್ ಉಪಯೋಗಿಸಿ.
ಕನ್ಸೀಲರ್‌ನ್ನು ಐಲಿಡ್ ಮೇಲೆ ಐ ಬೇಸ್‌ನ ರೂಪದಲ್ಲಿ ಉಪಯೋಗಿಸಬಹುದು.
ಪೋರ್ಸ್‌ಗಳನ್ನು ಮಿನಿಮೈಸ್ ಮಾಡಲು ಪೋರ್ ಮಿನಿಮೈಸ್ ಫೇಶಿಯಲ್ ಟೋನರ್‌ನ್ನು ಉಪಯೋಗಿಸಿ. ಅದು ಆಲ್ಕೋಹಾಲ್ ಫ್ರೀ ಆಗಿರಲಿ.
ಚೀಕ್ಸ್ ನ ಕಾಂಟೂರಿಂಗ್‌ಗೆ ಸ್ಕಿನ್ ಟೋನ್‌ನಿಂದ ಡಾರ್ಕರ್ ಶೇಡ್ ಮೇಟ್ ಪೌಡರ್ ಆರಿಸಿ ಹಾಗೂ ಅದನ್ನು ಬ್ರಶ್‌ನ ಸಹಾಯದಿಂದ ಟೆಂಪಲ್ ಏರಿಯಾದವರೆಗೆ ಬ್ಲೆಂಡ್ ಮಾಡಿ.
ಮೇಕಪ್‌ಗೆ ಲಾಂಗ್ ಲಾಸ್ಟಿಂಗ್ ಎಫೆಕ್ಟ್ ಕೊಡಲು ಮೇಕಪ್ ಸೀಲ್ ಉಪಯೋಗಿಸಿ.
ಡೈ ಇಲ್ಲದೆ ಹೇರ್ ಸ್ಟೈಲ್ ಮಾಡಿಕೊಳ್ಳಿ. ಫಂಕಿ ಲುಕ್ಸ್ ಕೊಡಲು ಬ್ರೈಟ್ ಬ್ಲಶರ್ ಶೇಡ್‌ನಿಂದ ಡ್ರೇಪ್ ಮಾಡಿ.
ನಿಮಗೆ ಮಾಯಿಶ್ಚರೈಸರ್ ಉಪಯೋಗಿಸಲು ಇಷ್ಟವಿಲ್ಲದಿದ್ದರೆ, ಮ್ಯಾಟಿ ಫಾರ್ಮ್ಸ್ ಮಾಯಿಶ್ಚರೈಸರ್ ಉಪಯೋಗಿಸಿ. ಇದು ನಿಮ್ಮ ತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ.
ಸುಂದರ ಕೇಶಕ್ಕಾಗಿ ಊಟದಲ್ಲಿ ಕ್ಯಾರೆಟ್ ಹಾಗೂ ಮೆಂತ್ಯ ಸೇರಿಸಿಕೊಳ್ಳಿ.
ಲಿಕ್ವಿಡ್ ಲೈನರ್ ಮತ್ತು ಮಸ್ಕರಾ 3 ತಿಂಗಳ ನಂತರ ಬದಲಿಸಬೇಕು.
ಮುಖದಲ್ಲಿ ಇನ್‌ಸ್ಟೆಂಟ್ ಗ್ಲೋಗೆ ಮೇಕಪ್‌ನಲ್ಲಿ ಬ್ರಾಂಝರ್ ಉಪಯೋಗಿಸಿ.
ಲೈಟ್ ಐ ಮೇಕಪ್‌ಗೆ ಪೀಚ್, ಬ್ರೌನ್ ಶೇಡ್ ಉಪಯೋಗಿಸಿ. ರೆಪ್ಪೆಗಳ ಮೇಲೆ ಮಸ್ಕರಾ ಹಚ್ಚಿ ಕರ್ಲ್ ಮಾಡಿ ಮತ್ತು ಲೋಯರ್ ಲಿಡ್ ಮೇಲೆ ಕಾಜಲ್ ಹಚ್ಚಿ ಹಗುರ ಸ್ಮಜ್ ಮಾಡಿ.
ಬ್ಲೆಮಿಶ್ ಫ್ರೀ ಕಾಂಪ್ಲೆಕ್ಷನ್‌ಗೆ ಆ್ಯಂಟಿ ಆಕ್ಸಿಡೆಂಟ್ ಪಾಲಕ್, ಬ್ರೋಕ್ಲಿ, ಸಾಸುವೆ ಇತ್ಯಾದಿಗಳನ್ನು ನಿಮ್ಮ ಊಟದಲ್ಲಿ ಸೇರಿಸಿ.
ಸ್ಟ್ರೇಚ್ ಮಾರ್ಕ್ಸ್ ನ ಡಾರ್ಕ್‌ನೆಸ್ ಕಡಿಮೆಗೊಳಿಸಲು ಹೆವಿ ಎಸ್‌ಪಿಎಫ್ ಸನ್‌ಸ್ಕ್ರೀನ್‌ಉಪಯೋಗಿಸಿ.
ಡಾರ್ಕ್ ಸರ್ಕಲ್ ಸಮಸ್ಯೆಗೆ ಲೋಯರ್ ಲ್ಯಾಶಸ್ ಮೇಲೆ ಮಸ್ಕರಾವನ್ನು ಎಂದೂ ಹಾಕಬೇಡಿ. ಅದರಿಂದ ತೊಂದರೆಯಾಗುತ್ತದೆ.
ಐ ಮೇಕಪ್ ಮಾಡುವಾಗ ಶೇಡ್ಸ್ ನ್ನು ಚೆನ್ನಾಗಿ ಬ್ಲೆಂಡ್ ಮಾಡಿ. ಅದರಿಂದ ಕಣ್ಣುಗಳು ಅಟ್ರ್ಯಾಕ್ಟಿವ್ ಆಗಿ ಕಾಣುತ್ತದೆ.
ಫ್ರೆಶ್ ಗ್ಲೋಯಿಂಗ್ ಲುಕ್‌ಗೆ ಲೈಟ್ ಪಿಂಕ್ ಮತ್ತು ಲೈಟ್ ಪೀಚ್ ಐ ಶೇಡ್ಸ್ ಆರಿಸಿಕೊಳ್ಳಿ.
ಆಫೀಸ್ ಲುಕ್ಸ್ ಗೆ ಲೈಟ್ ಬೇಸ್ ಮೇಕಪ್, ಲೈಟ್ ಬ್ರೌನ್ ಐ ಶೇಡ್, ಕಾಜಲ್ ಮತ್ತು ಲಿಪ್ ಗ್ಲಾಸ್ ಉಪಯೋಗಿಸಿ.
ಮೇಕಪ್ ಪ್ರಾಡಕ್ಟ್ ಗಳನ್ನು ಎಂದೂ ಶೇರ್ ಮಾಡಿಕೊಳ್ಳಬೇಡಿ ಹಾಗೂ ಮೇಕಪ್ ಟೆಸ್ಟರ್‌ನ್ನು ಮುಖದ ಮೇಲೆ ಉಪಯೋಗಿಸಬೇಡಿ. ಅವು ಹೈಜೆನಿಕ್ ಆಗಿರುವುದಿಲ್ಲ.
ಮೇಕಪ್ ಪ್ರಾಡಕ್ಟ್ ಖರೀದಿಸುವಾಗ ಪ್ಯಾಕಿಂಗ್ ಮತ್ತು ಎಕ್ಸ್ ಪೈರಿ ಡೇಟ್ ಚೆಕ್ ಮಾಡಲು ಮರೆಯದಿರಿ.
ನಿಮ್ಮ ಸ್ಕಿನ್ ಗಮನದಲ್ಲಿಟ್ಟುಕೊಂಡು ಸ್ಕಿನ್ ಕೇರ್ ಪ್ರಾಡಕ್ಟ್ ನ್ನು ಉಪಯೋಗಿಸಿ.
ದೂರ ಪ್ರಯಾಣ ಮಾಡುವಾಗ ಹಗಲಿನಲ್ಲಿ ಸನ್‌ಸ್ಕ್ರೀನ್‌ನ್ನೇ ಉಪಯೋಗಿಸಿ.
ಮುಖದ ಜೊತೆಗೆ ಕಿವಿ, ಕತ್ತು, ಬೆನ್ನು ಮತ್ತು ಕೈಗಳಿಗೆ ಮೇಕಪ್ ಬೇಸ್ ಹಾಕಲು ಮರೆಯದಿರಿ. ಮುಖ ಬಿಟ್ಟು ಶರೀರದ ಇತರ ಭಾಗಗಳು ಕಪ್ಪಾಗಿ ಕಾಣಬಾರದು.
– ವನಿತಾ