ಪ್ಯಾಚ್ ಮತ್ತು ಗೋಲ್ಡನ್ ವರ್ಕ್ನಿಂದ ಸಜ್ಜುಗೊಳಿಸಲಾದ ಬ್ಯೂಟಿಫುಲ್ ಬ್ಲ್ಯಾಕ್ ಸೂಟ್ ಹಾಗೂ ಕಾಂಟ್ರಾಸ್ಟ್ ದುಪಟ್ಟಾ, ಪಾರ್ಟಿಗೆ ಹೇಳಿ ಮಾಡಿಸಿದಂತಿದೆ.
ಕಟ್ ವರ್ಕ್ ಹಾಗೂ ಮುತ್ತುಗಳಿಂದ ಸಿಂಗರಿಸಲಾದ ಡೀಪ್ ರೆಡ್, ಬ್ಲ್ಯಾಕ್ ಮತ್ತು ಗೋಲ್ಡನ್ ಕಾಂಬಿನೇಷನ್ನಿನ ಈ ಸೂಟ್ ಮತ್ತು ಮ್ಯಾಚಿಂಗ್ ದುಪಟ್ಟಾ ಕಣ್ಮನ ಸೆಳೆಯುವಂತಿವೆ.
ಆರೆಂಜ್ಮೆಜೆಂತಾ ಬಣ್ಣದ ಕಾಂಬಿನೇಷನ್ ಇರುವ ಕಶೀದಾಕಾರಿ ಕಸೂತಿಯಿಂದ ಸಿಂಗರಿಸಲಾದ ಡಬಲ್ ಶೇಡೆಡ್ ಲಾಂಗ್ ಸೂಟ್, ಆತಿಥೇಯಳಾಗಿ ಅತಿಥಿಗಳನ್ನು ಬರಮಾಡಿಕೊಳ್ಳಲು ಬಲು ಸೂಕ್ತವಾಗಿದೆ.
ಹೆವಿ ಸೀಕ್ವೆನ್ಸ್ ವರ್ಕ್ ಮತ್ತು ಗೋಲ್ಡನ್ ವರ್ಕ್ನಿಂದ ಸಜ್ಜುಗೊಳಿಸಲಾದ ಈ ಕೆಂಪು ನೀಲಿ ಸೂಟ್, ಪಾರ್ಟಿಗೆ ಗಾರ್ಜಿಯಸ್ ಲುಕ್ಸ್ ನೀಡಲಿದೆ ಗೋಲ್ಡನ್ ವರ್ಕ್ನಿಂದ ಶೃಂಗರಿಸಲಾದ ಈ ಕಲರ್ಫುಲ್ ಅನಾರ್ಕಲಿ ಸೂಟ್ ನಿಮಗೆ ಪಾರ್ಟಿ ಮಧ್ಯೆ ವಿಭಿನ್ನ ಗೆಟಪ್ ತಂದುಕೊಡಲಿದೆ.
ನೆಟ್ ಫ್ಯಾಬ್ರಿಕ್ ಮೇಲೆ ಗೋಲ್ಡನ್ ಲೇಸ್ ಮತ್ತು ಕಶೀದಾಕಾರಿ ಎಂಬ್ರಾಯಿಡರಿಯಿಂದ ಸಜ್ಜುಗೊಳಿಸಲಾದ ಬ್ಯೂಟಿಫುಲ್ ಬ್ಲೂ ಸೂಟ್ ನಯನ ಮನೋಹರವಾಗಿದೆ. ನೆಟ್ ಸ್ಲೀವ್ ಮೇಲೆ ರೆಡ್ ಫ್ಲವರ್ಸ್ ಈ ಉಡುಗೆಯನ್ನು ಮತ್ತಷ್ಟು ಆಕರ್ಷಕಗೊಳಿಸಿದೆ.