ಸ್ನೇಹಿತೆ ಉಷಾಳ ಮನೆಯಲ್ಲಿ ಅವಳ ಮದುವೆಯ 25ನೇ ವಾರ್ಷಿಕೋತ್ಸದ ಪಾರ್ಟಿ ಇತ್ತು. ಅಂದಹಾಗೆ ಇತ್ತೀಚೆಗೆ ನನಗೆ ಮದುವೆಗಳಿಗೆ, ಬರ್ಥ್‌ಡೇ ಮುಂತಾದ ಪಾರ್ಟಿಗಳಿಗೆ ಹೋಗುವ ಆಸಕ್ತಿಯೇ ಇಲ್ಲ. ಆದರೆ ಉಷಾಳ ಆಗ್ರಹಕ್ಕೆ ಮಣಿದು ಹೋಗಲೇಬೇಕಾದ ಪ್ರಸಂಗ ಬಂದಿತು. ಪಾರ್ಟಿಯಲ್ಲಿ ಉಷಾ ನನ್ನ ಪರಿಚಯವನ್ನು ಅಪರಿಚಿತ ಮಹಿಳೆಯೊಬ್ಬಳಿಗೆ ಮಾಡಿಕೊಟ್ಟಾಗ ಆಕೆ, “ನೀವೇನಾ ಸ್ನೇಹಾ?” ಎಂದು ಒಮ್ಮೆಲೆ ಹೇಳಿಬಿಟ್ಟಳು.

ಆಕೆಯ ಬಾಯಿಂದ ನನ್ನ ಕುರಿತಾಗಿ ಈ ರೀತಿಯ ವ್ಯಂಗ್ಯಭರಿತ ಮಾತುಗಳನ್ನು ಕೇಳಿ ನಾನು ಆಕೆಯ ಕಡೆ ತದೇಕ ಚಿತ್ತದಿಂದ ನೋಡಿದೆ. ನಾನು ಆ ಮಹಿಳೆಯನ್ನು ಈ ಹಿಂದೆ ಎಂದೂ ನೋಡಿರಲಿಲ್ಲ. ಇದೇ ಮೊದಲ ಬಾರಿ ನಾನು ಮತ್ತು ಆಕೆ ಭೇಟಿಯಾಗಿದ್ದೆವು.

ತಲೆಯಲ್ಲಿ ಏಕಕಾಲಕ್ಕೆ ಹಲವು ಪ್ರಶ್ನೆಗಳು ಎದ್ದು ಕಾಡತೊಡಗಿದವು. ನಾನು ನನ್ನದೇ ಪ್ರಶ್ನೆಗಳಲ್ಲಿ ಮುಳುಗಿ ಸಾಕಷ್ಟು ಹೊತ್ತು ಅಲ್ಲಿದ್ದೂ ಇಲ್ಲದವಳಂತಾಗಿದ್ದೆ. ಮನಸ್ಸಿನಲ್ಲಿ ಮೇಲಿಂದ ಮೇಲೆ ಒಂದೇ ಪ್ರಶ್ನೆ ಏಳುತ್ತಿತ್ತು, `ಅವಳಿಗೆ ನನ್ನ ಬಗ್ಗೆ ಗೊತ್ತಾ? ನನ್ನ ಬಗ್ಗೆ ಅವಳು ಈ ರೀತಿ ವ್ಯಂಗ್ಯವಾಗಿ ಹೇಳಬೇಕಾದರೆ ಉಷಾ ಅವಳಿಗೆ ನನ್ನ ಬಗ್ಗೆ ಏನಾದರೂ ಹೇಳಿರಬಹುದಾ?’

ಈ ಬಗ್ಗೆ ಯೋಚಿಸಿ ಯೋಚಿಸಿ ನನ್ನ ಮನಸ್ಸು ಗೊಂದಲದ ಗೂಡಾಗುತ್ತಿತ್ತು? `ಅವಳಿಗೆ ನನ್ನ ಬಗ್ಗೆ ಏನು ತಾನೆ ಗೊತ್ತಿದೆ? ನನ್ನ ಬಗ್ಗೆ ಅವಳಿಗೆ ಇವರು ದೂರಾದರೂ ಏನು?’ ನನ್ನ ಹೆಸರು ಕೇಳುತ್ತಿದ್ದಂತೆ ಆಕೆ ಈ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಏಕೆ? ‘ನನ್ನನ್ನು ನಾನು ತಡೆದುಕೊಳ್ಳಲು ಆಗಲಿಲ್ಲ. ಜೂಸ್‌ನ ಗ್ಲಾಸ್‌ ಕೈಯಲ್ಲಿ ಹಿಡಿದುಕೊಂಡು ಅತಿಥಿಗಳ ನಡುವೆ ದಾರಿ ಮಾಡಿಕೊಳ್ಳುತ್ತ ಆ ಮಹಿಳೆಯ ಬಳಿ ಹೋಗಿ ತಲುಪಿದೆ. ನನಗೆ ಆ ಮಹಿಳೆಯ ಹೆಸರು ಕೂಡ ನೆನಪಿಗೆ ಬರುತ್ತಿರಲಿಲ್ಲ. ಉಷಾ ಆಕೆಯನ್ನು ಪರಿಚಯಿಸುತ್ತಾ ಏನೋ ಹೇಳಿದ್ದಳು. ನಾನು ತಲೆ ಕೆರೆದುಕೊಂಡು ಯೋಚಿಸಲು ನೋಡಿದೆ. ಆದರೆ ಏನು ಮಾಡಿದರೂ ನನ್ನ ನೆನಪು ಸಾಥ್‌ ಕೊಡಲಿಲ್ಲ.

ನಾನು ಅವಳ ಬಳಿ ಹೋದೆ. ಆದರೆ ಮಾತನ್ನು ಹೇಗೆ ಆರಂಭಿಸಬೇಕೆಂದು ತಿಳಿಯಲಿಲ್ಲ. ನಾನು ಅವಳ ಬಳಿ ಹೋದದ್ದು ನೋಡಿ, ತಾನು ಹೂಡಿದ ಬಾಣ ನನಗೆ ಸರಿಯಾಗಿ ತಗುಲಿದೆ ಎಂದು ಅಕೆ ಭಾವಿಸಿದ್ದಳು. ನನ್ನ ಮುಖದಲ್ಲಿ ಪ್ರಕಟವಾಗಿದ್ದ ಭಾವನೆಗಳನ್ನು ಅವಳು ಆಗಲೇ ಓದಿ ಮುಗಿಸಿಬಿಟ್ಟಿದ್ದಳು. ಬಹುಶಃ ಅವಳಿಗೂ ಕೂಡ ನನ್ನೊಂದಿಗೆ ಮಾತನಾಡುವ ಅಭಿಲಾಷೆ ಇತ್ತು. ಆದರೂ ನಮ್ಮಿಬ್ಬರ ಮುಖದಲ್ಲಿ ಔಪಚಾರಿಕ ನಗೆಯ ಕಿಂಚಿತ್ತೂ ಸುಳಿವು ಕೂಡ ಪ್ರಕಟವಾಗಲಿಲ್ಲ.

ಮೊದಲ ಭೇಟಿಯಲ್ಲಿಯೇ ಇಷ್ಟೊಂದು ವೈರತ್ವ, ಇಷ್ಟೊಂದು ಕಹಿ. ನನಗೆ ವಿಚಿತ್ರ ಎಂಬಂತೆ ಗೋಚರಿಸಿತು. ಆಕೆಯೇ ಮಾತಿಗೆ ಶುಭಾರಂಭ ಮಾಡಿದಳು, “ಬನ್ನಿ, ಬೇರೆ ಎಲ್ಲಿಯಾದರೂ ಕೂತು ಮಾತನಾಡೋಣ,” ಎಂದು ಹೇಳುತ್ತಾ ಆಕೆ ಟೆರೇಸ್‌ನತ್ತ ಹೆಜ್ಜೆ ಹಾಕಿದಳು. ಸಾಕಿದ ಬೆಕ್ಕಿನ ಹಾಗೆ ನಾನು ಅವಳ ಹಿಂದೆ ಹಿಂದೆಯೇ ನಿಧಾನವಾಗಿ ಹೋದೆ. ಅಲ್ಲಿದ್ದ ಕುರ್ಚಿಯ ಮೇಲೆ ಇಬ್ಬರೂ ಕುಳಿತೆ.

ಪಾರ್ಟಿಗೆ ಜನರು ಇನ್ನೂ ಬರುತ್ತಲೇ ಇದ್ದರು. ವೇಟರ್‌ ಸ್ನ್ಯಾಕ್ಸ್  ಮತ್ತು ಡ್ರಿಂಕ್ಸ್ ಸರ್ವ್ ‌ಮಾಡುತ್ತಿದ್ದ. ಡಿನ್ನರ್‌ಗೆ ಇನ್ನೂ ಸಾಕಷ್ಟು ಸಮಯವಿತ್ತು. ಅಲ್ಲಿಗೆ ಬಂದ ಬಹುತೇಕ ಜನರು ನನಗೆ ಪರಿಚಯವೇ ಇರಲಿಲ್ಲ. ಉಷಾ ಅತಿಥಿಗಳನ್ನು ಸ್ವಾಗತಿಸುವಲ್ಲಿ ಮಗ್ನಳಾಗಿದ್ದಳು. ಹೀಗಾಗಿ ನಮ್ಮನ್ನು ಡಿಸ್ಟರ್ಬ್‌ ಮಾಡುವವರು ಅಲ್ಲಿ ಯಾರೂ ಇರಲಿಲ್ಲ.

ನಾನು ಅತ್ಯಂತ ನಮ್ರತೆಯಿಂದ ಹೇಳಿದೆ, “ಕ್ಷಮಿಸಿ, ನನಗೆ ನಿಮ್ಮ ಪರಿಚಯ ಆಗಲಿಲ್ಲ. ನಾವು ಹಿಂದೆಂದಾದರೂ ಭೇಟಿ ಆಗಿದ್ದೆವಾ?”

“ನಾವು ವೊದಲು ಭೇಟಿ ಆಗಿಲ್ಲ. ಆದರೆ ನಾನು ನಿಮ್ಮನ್ನು ಚೆನ್ನಾಗಿ ಬಲ್ಲೇ.”

ಅವಳ ಧ್ವನಿಯಲ್ಲಿ ಇನ್ನೂ ವ್ಯಂಗ್ಯವಿತ್ತು. ಅದು ನನ್ನ ಅಂತರಂಗವನ್ನು ಭೇದಿಸಿತು. ಅವಳ ಮೊದಲ ಮಾತೇ ನನ್ನನ್ನು ಗೊಂದಲಕ್ಕೀಡು ಮಾಡಿತ್ತು. ಈಗಂತೂ ಅದು ಮೇರೆ ಮೀರಿತ್ತು. ನನ್ನನ್ನು ನಾನು ನಿಯಂತ್ರಣದಲ್ಲಿಟ್ಟುಕೊಳ್ಳಲಾಗಲಿಲ್ಲ.

“ನೀವು ಬಹುಶಃ ಮರೆತು ಮಾತನಾಡುತ್ತಿದ್ದೀರಿ ಅನಿಸುತ್ತೆ. ಇದೇ ನಮ್ಮ ಮೊದಲ ಭೇಟಿ,” ನನ್ನ ಧ್ವನಿ ಸ್ವಲ್ಪ ತೀಕ್ಷ್ಣವಾಗಿತ್ತು.

“ಇಲ್ಲ ಮೇಡಂ, ನಾನು ಏನನ್ನೂ ಮರೆತಿಲ್ಲ. ನಮ್ಮಿಬ್ಬರ ಮುಖಾಮುಖಿ ಆಗಿಲ್ಲ. ಆದರೆ ನಾವು ಪರಸ್ಪರರನ್ನು ಚೆನ್ನಾಗಿ ಬಲ್ಲೆವು.”

ನಾನು ಅವಳ ಹೆಸರನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದೆ. ಆದರೆ ಮನ ಮಸ್ತಿಷ್ಕದಲ್ಲಿ ಉಳಿಯುವಂತಹ ಹೆಸರಾಗಿರಲಿಲ್ಲವಾದ್ದರಿಂದ ಅದು ನೆನಪಿಗೆ ಬರಲೇ ಇಲ್ಲ.

ನಾನು ದಂಗುಬಡಿದವಳಂತಾಗಿರುವುದನ್ನು ನೋಡಿ ಅವಳೇ ಹೇಳಿದಳು, “ನಿಮಗೆ ನನ್ನ ಪತಿ ಶೇಖರ್‌ ಅವರ ಪರಿಚಯ ಇದೆಯಾ ಅಥವಾ?”

`ಶೇಖರ್‌…..’ ಹೆಸರು ಕೇಳುತ್ತಿದ್ದಂತೆ ಮೆದುಳಿನಲ್ಲಿ ಒಂದು ಜೋರಾದ ಮಿಂಚು ಹೊಳೆದಂತಾಯಿತು. ಅವಳು ಎಂತಹ ಒಂದು ದುಃಖದ ಗೆರೆಯ ಮೇಲೆ ಕೈ ಇಟ್ಟಿದ್ದಳೆಂದರೆ, ನಾನು ಅದೆಷ್ಟೋ ವರ್ಷಗಳ ಹಿಂದೆ ಅದನ್ನು ನನ್ನ ಮನಸ್ಸಿನಿಂದ ಹೂತು ಹಾಕಿದ್ದೆ. ನಾನು ಅವನನ್ನು ನೋಡಿ 15 ವರ್ಷಗಳೇ ಆಗಿತ್ತು. ಆದರೂ ಆ ಮಹಿಳೆ ಮುಚ್ಚಿದ ಬೂದಿಯಲ್ಲಿ ಇನ್ನೂ ಕೆಂಡ ಹುಡುಕುವ ಪ್ರಯತ್ನ ನಡೆಸಿದ್ದಳು. ಆಕೆ ನನ್ನ ಮುಖದ ಭಾವನೆಗಳನ್ನು ಓದಲು ಪ್ರಯತ್ನಿಸುತ್ತಿದ್ದಳು. ನನ್ನ ದೃಷ್ಟಿ ಅವಳ ಮುಖದ ಮೇಲೆಯೇ ಕೇಂದ್ರೀಕೃತವಾಗಿತ್ತು. ಅವಳ ಕಣ್ಣುಗಳಲ್ಲಿ ನನ್ನ ಕುರಿತು ತಿರಸ್ಕಾರದ ಭಾವನೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದರೆ ನನ್ನ ದೃಷ್ಟಿಯಲ್ಲಿ ಶೇಖರ್‌ ಸಜೀವನಾಗಿದ್ದ.

ನಾನು ಕೆಲಸ ಮಾಡುತ್ತಿದ್ದ ಆಫೀಸ್‌ನಲ್ಲಿ ಶೇಖರ್‌ ಕೂಡ ಕೆಲಸ ಮಾಡುತ್ತಿದ್ದ. ಸ್ಮಾರ್ಟ್‌ ಯುವಕ. ಮಿತಭಾಷಿ, ಸಮಯ ಪಾಲನೆಯನ್ನು ಚಾಚೂ ತಪ್ಪದೇ ಅನುಸರಿಸುತ್ತಿದ್ದ. ನಗುಮುಖ ಸ್ವಭಾವದ ಅವನು ಬೇರೆಯವರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದ. ಹೀಗೆ ಅವನ ಬಗ್ಗೆ ಅದೆಷ್ಟೋ ವಿಶೇಷಗಳಿದ್ದವು. ಆಫೀಸಿನ ಪ್ರತಿಯೊಬ್ಬ ಮಹಿಳೆಯರು, ಪುರುಷರು ಅವನ ಜೊತೆ ಮಾತನಾಡಲು, ಸ್ನೇಹ ಬೆಳೆಸಲು ಹೆಮ್ಮೆ ಪಡುತ್ತಿದ್ದರು. ಆಫೀಸಿನ ಮೇಲಾಧಿಕಾರಿ ಕೂಡ ಅವನ ಜೊತೆ ಕುಳಿತು ಚಹಾ ಸೇವಿಸುವ ಅವಕಾಶಕ್ಕಾಗಿ ಕಾಯುತ್ತಿದ್ದರು. ಆದರೆ ಅವನ ಬಳಿ ಯಾರ ಜೊತೆಗೂ ವ್ಯರ್ಥವಾಗಿ ಮಾತನಾಡಲು ಸಮಯವೇ ಇರುತ್ತಿರಲಿಲ್ಲ. ಆಫೀಸಿನಿಂದ ಹೊರಗೆ ಕೂಡ ಅವನು ಸದಾ ವ್ಯಸ್ತನಾಗಿರುತ್ತಿದ್ದ.

ಜೊತೆ ಜೊತೆಗೆ ಕೆಲಸ ಮಾಡುತ್ತ ನಾನು ಯಾವಾಗ ಅವನಿಗೆ ಇಷ್ಟವಾದೆನೋ ಗೊತ್ತೇ ಆಗಲಿಲ್ಲ.

ಇತ್ತ ಕಡೆ ನನಗೆ ಉದ್ಯೋಗ ಸಿಗುತ್ತಿದ್ದಂತೆಯೇ ಅತ್ತ ಕಡೆ ನನ್ನ ತಂದೆತಾಯಿ ನನಗಾಗಿ ವರನ ಬೇಟೆ ಆರಂಭಿಸಿದ್ದರು. 6 ತಿಂಗಳಷ್ಟರಲ್ಲಿಯೇ ನನ್ನ ಮದುವೆ ನಿಶ್ಚಯವಾಯಿತು. ಸಂಕೋಚದಿಂದಲೇ ನಾನು ಕಾರ್ಡ್‌ ಹಿಡಿದುಕೊಂಡು ಆಫೀಸ್‌ಗೆ ಹೋದೆ.  ಮದುವೆಯ ಸುದ್ದಿ ಕೇಳಿ ಎಲ್ಲರೂ ಖುಷಿಪಟ್ಟರೆ, ಶೇಖರನ ಮುಖದಲ್ಲಿ ಮಾತ್ರ ಏಕೋ ಏನೋ ಖುಷಿಯ ಭಾವನೆಯೇ ಇರಲಿಲ್ಲ. ಅವನು ಮಾತ್ರ ನನಗೆ ಶುಭ ಹಾರೈಸಲಿಲ್ಲ. ಮದುವೆಗೆ ಇಷ್ಟೊಂದು ಆತುರ ಏಕಿತ್ತು ಎಂದು ಬಡಬಡಿಸಿದ.

ಆ ದಿನ ಮೊದಲ ಬಾರಿಗೆ ಅವನಿಗೆ ನನ್ನ ಬಗ್ಗೆ ಏಕೆ ಈ ಕಾಳಜಿ? ಎಂದೆನಿಸಿತ್ತು. ನಾನು ಏನನ್ನೂ ಹೇಳದೆಯೇ ಅವನು ನನ್ನ ತೊಂದರೆ ಅರ್ಥ ಮಾಡಿಕೊಳ್ಳುತ್ತಿದ್ದನೇ? ಆಫೀಸ್‌ನಲ್ಲಿ ನನ್ನ ಅನುಪಸ್ಥಿತಿ ಅವನಿಗೆ ಕಾಡುತ್ತಿತ್ತೇ? ನನ್ನ ಹಾಗೂ ಆಫೀಸಿನ ರಾಜಕೀಯ, ಷಡ್ಯಂತ್ರ ಮತ್ತು ಹೆಚ್ಚುವರಿ ಕೆಲಸದ ಒತ್ತಡದ ನಡುವೆ ಅವನು ಬಲಿಷ್ಠ ಗೋಡೆಯಂತೆ ಇರುತ್ತಿದ್ದ. ಆದರೆ ಈಗ ಸಾಕಷ್ಟು ವಿಳಂಬವಾಗಿತ್ತು.

ನಾನು ಮರುದಿನದಿಂದಲೇ ಮದುವೆಯ ಸಿದ್ಧತೆಗಾಗಿ ಒಂದು ತಿಂಗಳ ರಜೆಯ ಮೇಲೆ ಹೋಗುವವಳಿದ್ದೆ. ನನ್ನ ಕಣ್ಣುಗಳಲ್ಲಿ ಸುಂದರ ಕನಸುಗಳು ತುಂಬಿಕೊಂಡಿದ್ದವು. ಆ ಕನಸುಗಳನ್ನು ನನಸಾಗಿಸಿಕೊಳ್ಳಲು ಹೋಗುವವಳಿದ್ದೆ. ವಿಧಿವಿಧಾನಗಳು, ಮದುವೆ, ಹನಿಮೂನ್‌ ಎಲ್ಲವೂ ನನಗೆ ಹೊಸತು. ಹಳೆಯ ಜೀವನ ಹಳೆಯ ನೆನಪು ಎಲ್ಲವೂ ಹಿಂದೆ ಹಿಂದೆಯೇ ಹೋಗಿದ್ದವು.

1 ತಿಂಗಳು ರಜೆ ಹೇಗೆ ಕಳೆದುಹೋಯಿತೋ ಗೊತ್ತೇ ಆಗಲಿಲ್ಲ. ನಾನು ಸ್ವೀಟ್‌ ಬಾಕ್ಸ್ ಹಿಡಿದುಕೊಂಡು ಖುಷಿಖುಷಿಯಿಂದಲೇ ಆಫೀಸಿಗೆ ತಲುಪಿದೆ. ಆಫೀಸ್‌ನಲ್ಲಿ ಕಾಲಿಡುತ್ತಿದ್ದಂತೆಯೇ ನನಗೆ ಅಭಿನಂದನೆಗಳ ಸುರಿಮಳೆಯೇ ಆಯಿತು. ಮದುವೆಗೆ ಬಂದವರು ಆ ಸಮಾರಂಭದ ಕುರಿತಂತೆ ಮಾತನಾಡತೊಡಗಿದರು. ಮದುವೆಗೆ ಬರದೇ ಇದ್ದವರು ನನ್ನ ಬಳಿ ಕ್ಷಮೆ ಯಾಚಿಸಲು ಅದು ಇದು ಅಂತಾ ಕಾರಣ ಹೇಳತೊಡಗಿದರು. ಆದರೆ ಶೇಖರ್‌ ಕಾಣಿಸಲೇ ಇಲ್ಲ.

ನಾನು ಈ ತನಕ ಅವನ ಜೊತೆ ಯಾವುದೇ ಅಳುಕಿಲ್ಲದೆ ಮಾತುಕತೆ ನಡೆಸುತ್ತಿದ್ದೆ. ಆದರೆ ಈಗ ಅವನ ಮುಂದೆ ಹೋಗಲು ಹಿಂದೇಟು ಹಾಕತೊಡಗಿದೆ. ನಾನು ಅವನ ಹೃದಯದಲ್ಲಿ ಏಳುತ್ತಿದ್ದ ಬೆಂಕಿಗೆ ಗಾಳಿಯೂದಲು ಇಷ್ಟಪಡುತ್ತಿರಲಿಲ್ಲ. ನಾನು ಎಂತಹ ಒಂದು ಪ್ರಪಂಚಕ್ಕೆ ಸಾಗಿಬಿಟ್ಟಿದ್ದೆನೆಂದರೆ, ಅಲ್ಲಿ ಶೇಖರನ ಅಪೇಕ್ಷೆಗಳಿಗೆ ಯಾವುದೇ ಅವಕಾಶಗಳಿರಲಿಲ್ಲ. ಆ ದಿನಗಳಲ್ಲಿ ಹೊಸ ಸಂಸಾರ ಮತ್ತು ಹೊಸ ಸಂಬಂಧಗಳ ಅಪೇಕ್ಷೆಗಳು ನನ್ನ ಮನಸ್ಸು ಮತ್ತು ಮೆದುಳಿನಲ್ಲಿ ಆವರಿಸಲ್ಪಟ್ಟಿದ್ದವು. ಆದರೆ ಶೇಖರನ ಮನಸ್ಸು ಮೆದುಳಿನಲ್ಲಿ ಕೇವಲ ನಾನೇ ತುಂಬಿಬಿಟ್ಟಿದ್ದೆ.

ಅವನ ಮುಖಭಾವ, ಹಾವಭಾವಗಳು ಅದನ್ನೇ ಹೇಳುತ್ತಿದ್ದವು. ನನಗೆ, ಇದೆಲ್ಲದರಿಂದ ತಟಸ್ಠಳಾಗಿ ಉಳಿದುಬಿಡುವುದೇ ಸರಿ ಅನಿಸಿತು. ಒಂದಿಲ್ಲೊಂದು ದಿನ ಅವನು ತನ್ನ ದಾರಿ ಬದಲಿಸಿಕೊಳ್ಳಬಹುದು ಎಂದು ನನಗೆ ಅನಿಸಿತು.

ಮಾನಸಿಕವಾಗಿ ಸಾಕಷ್ಟು ಘಾಸಿಗೊಂಡಿದ್ದ ಶೇಖರ್‌, ನನ್ನತ್ತ ಸ್ನೇಹದ ಹಸ್ತ ಚಾಚುತ್ತಾ, “ನಾವು ಸಂಗಾತಿಗಳಾಗದಿದ್ದರೂ ಅಡ್ಡಿಯಿಲ್ಲ, ಒಳ್ಳೆಯ ಸ್ನೇಹಿತರಂತೂ ಆಗಬಹುದಲ್ಲ, ನಮ್ಮ ಸುಖದುಃಖ ಹಂಚಿಕೊಳ್ಳಬಹುದು, ಪರಸ್ಪರ ಮಾತುಕತೆ ನಡೆಸಬಹುದು,” ಎನ್ನುವುದು ಅವನ ಅಭಿಪ್ರಾಯವಾಗಿತ್ತು. ಆದರೆ ನಾನು ಅದಕ್ಕೆ ಒಪ್ಪಿಗೆ ಕೊಡಲಿಲ್ಲ. ಏಕೆಂದರೆ ಅದು ಮೊದಲಿನಂತಿರಲಿಲ್ಲ. ಏಕೆಂದರೆ ನನ್ನ ಮದುವೆಯಾಗಿ ಹೋಗಿತ್ತು. ನಾನು ಶೇಖರನ ಅಪೇಕ್ಷೆಯನ್ನು ಸ್ಪಷ್ಟವಾಗಿ ಗುರುತಿಸಬಲ್ಲವಳಾಗಿದ್ದೆ. ನಾನೀಗ ಅವನ ಜೊತೆ ಸಹಜವಾಗಿ ಬೆರೆಯಲು ಆಗುತ್ತಿರಲಿಲ್ಲ.

ಶೇಖರ್‌ ಸದಾ ಉದಾಸೀನನಾಗಿರುವುದನ್ನು ಕಂಡು ಅವನ ಮನೆಯವರು ಮದುವೆಗಾಗಿ ಅವನ ಮೇಲೆ ಒತ್ತಡ ಹೇರಲಾರಂಭಿಸಿದರು. ನನ್ನ ಮದುವೆಯ ಆಮಂತ್ರಣ ಪತ್ರಿಕೆ ನೋಡಿ ಅವನೆಷ್ಟು ದುಃಖಿತನಾಗಿದ್ದನೋ, ಅವನ ಮದುವೆ ಆಮಂತ್ರಣ ಪತ್ರಿಕೆ ನೋಡಿ ನನಗೆ ಅಷ್ಟೇ ಖುಷಿಯಾಯಿತು. ಅವನ ಈ ನಿರ್ಧಾರ ನನಗೆ ಬಹಳೇ ಸಂತಸವುಂಟು ಮಾಡಿತ್ತು. ಏಕೆಂದರೆ ಅವನು ಸದಾ ಉದಾಸೀನನಾಗಿರುವುದು ನನಗೆ ಬಹಳ ಕಿರಿಕಿರಿ ಉಂಟು ಮಾಡುತ್ತಿತ್ತು.

ಶೇಖರನ ಮದುವೆಯಾಯಿತು. ನಾನು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದೆ. ಅಷ್ಟರಲ್ಲಿ ನನ್ನ ಸಂಸಾರ ಗಾಳಿಗೆ ಸಿಕ್ಕ ದೋಣಿಯಂತೆ ಅದುರತೊಡಗಿತು. ಆರಂಭದ ದಿನಗಳ ಸುತ್ತಾಟ, ಲಂಚ್‌, ಡಿನ್ನರ್‌ ಎಲ್ಲ ಮುಗಿದು ಹೋದ ಮೇಲೆ ಜೀವನ ಬೇಸರ ಎನಿಸತೊಡಗಿತು. ಏಕೆಂದರೆ ಆ ಹೊಸ ವ್ಯಕ್ತಿಯ ಜೊತೆ ವಿಚಾರಗಳಲ್ಲಾಗಲೀ, ವರ್ತನೆಯಲ್ಲಾಗಲೀ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವಿರಲಿಲ್ಲ. ನಾನು ಮದುವೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದೆ. ಆದರೆ ನಾವಿಬ್ಬರೂ ನದಿಯ ಎರಡು ತೀರಗಳಂತಿದ್ದೆವು, ಒಂದಕ್ಕೊಂದು ಕೂಡದಂತೆ.ಪತಿಗೆ ಯಾವ ಮಾತು ಯಾವಾಗ ಕೆಡುಕೆನಿಸುತ್ತಿತ್ತೊ, ಅವರಿಗೆ ಯಾವಾಗ ಕೋಪ ಬರುತ್ತದೆ, ಯಾವಾಗ ಚೀರಾಡುತ್ತಾರೆ, ಬೈಗುಳದ ಮಳೆ ಸುರಿಸುತ್ತಾರೆ ಎಂದು ಹೇಳಲಾಗುತ್ತಿರಲಿಲ್ಲ. ನನ್ನ ಮನಸ್ಸು ಯಾವಾಗಲೂ ಇದನ್ನೇ ಯೋಚಿಸುವುದರಲ್ಲಿ ಕಳೆಯುತ್ತಿತ್ತು. ಸದಾ ಭಯದಲ್ಲೇ ಕಾಲ ಕಳೆಯುತ್ತಿದ್ದುದರಿಂದ ಆಫೀಸಿನ ಕೆಲಸದಲ್ಲಿ ಅನೇಕ ತಪ್ಪುಗಳು ಘಟಿಸಲಾರಂಭಿಸಿದವು. ನನ್ನ ತೊಂದರೆ ತಾಪತ್ರಯಗಳು ಯಾರಿಂದಲೂ ಮುಚ್ಚಿಡಲು ಆಗಲಿಲ್ಲ. ಶೇಖರ್‌ನಿಂದಲೂ ಕೂಡ.

ಅತ್ತ ಆಫೀಸಿನಲ್ಲಿ ಶೇಖರನ ಕಣ್ಣುಗಳು ನನ್ನನ್ನೇ ಹುಡುಕುತ್ತಿದ್ದವು. ನಾನು ಅವನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಅವನು ನನ್ನೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದ. ಆದರೆ ನಾನು ಕೆಲಸದ ನೆಪ ಹೇಳುತ್ತಿದ್ದೆ. ಅವನ ಅಪೇಕ್ಷೆ ಹಾಗೂ ನನ್ನ ಮರ್ಯಾದೆಯ ಸೀಮೆಯ ಅರಿವು ನನಗಿತ್ತು. ನಮ್ಮಿಬ್ಬರ ನಡುವೆ ಎಳೆದ ಸೂಕ್ಷ್ಮ ಲಕ್ಷ್ಮಣರೇಖೆಯ ಆ ಬದಿ ಅಲೆದಾಟವಿದೆ, ಚಡಪಡಿಕೆಯಿದೆ, ವಿರಸವಿದೆ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಏಕೆಂದರೆ ನನ್ನ ವೈವಾಹಿಕ ಜೀವನ ಸುಖಕರವಾಗಿರಲಿಲ್ಲ. ಹೀಗಾಗಿ ಶೇಖರನ ಅಪೇಕ್ಷೆ ನನ್ನ ಹೃದಯದಲ್ಲಿ ನೇಣಿನಂತೆ ನನಗೆ ಆಗಾಗ ಚುಚ್ಚುತ್ತಿತ್ತು.

ಖೇದದ ಸಂಗತಿಯೆಂದರೆ ನನಗೆ ನನ್ನ ಮದುವೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ನನ್ನ ಪ್ರಯತ್ನ, ನನ್ನ ನಂಬಿಕೆ, ನನ್ನ ಪ್ರಾಮಾಣಿಕತೆ, ನನ್ನ ಅಳು, ನನ್ನ ತಿಳಿವಳಿಕೆ ಯಾವುದೂ ಉಪಯೋಗಕ್ಕೆ ಬರಲಿಲ್ಲ. ನಿಜ ಹೇಳಬೇಕೆಂದರೆ ಆತ ನನ್ನನ್ನು ಮದುವೆಯಾದದ್ದು ತಮ್ಮ ಮನೆಯವರ ಒತ್ತಾಯಕ್ಕೆ ಮಣಿದು. ಅವರು ಈ ಬಂಧನದಿಂದ ಮುಕ್ತರಾಗಲು ಇಚ್ಛಿಸುತ್ತಿದ್ದರು. ಅವರಿಗೆ ಇಷ್ಟವಾದರು ಬೇರೆ ಯಾರೋ. ಅಂತಹದರಲ್ಲಿ ಅವರಿಗೆ ಈ ಬಂಧನ ವ್ಯರ್ಥವಾಗಿತ್ತು. ನಾನಾಗಿಯೇ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿಬಿಟ್ಟೆ. ಇಂತಹದರಲ್ಲಿ ನನ್ನ ಜೀವನದ ಏಕಾಂಗಿತನಕ್ಕೆ ಗಾಬರಿಗೊಂಡು ನಾನು ಶೇಖರನ ಕಡೆ ಸ್ನೇಹದ ಹಸ್ತ ಚಾಚಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ಏಕೆಂದರೆ ಆಗ ನನ್ನ ಎದುರಿಗೆ ಕುಳಿತ ಇದೇ ಮಹಿಳೆಯ ದುಃಖದ ಬಗ್ಗೆ ವಿಚಾರ ಬಂದಿತ್ತು. ಆಕೆ ನನ್ನ ಬಗ್ಗೆ ಸದಾ ವೈರತ್ವದ ಭಾವನೆ ಇಟ್ಟುಕೊಂಡಿದ್ದಳು. ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯೊಂದಿಗೆ ಏನೆಲ್ಲ ಹಂಚಬಹುದು, ವಿನಿಮಯ ಮಾಡಿಕೊಳ್ಳಬಹುದು. ಆದರೆ ಗಂಡನನ್ನವಲ್ಲ. ನಾನೂ ಕೂಡ ಹಂಚಿಕೊಳ್ಳಲು ಒಪ್ಪಲಿಲ್ಲ.

ಯಾವ ಮಹಿಳೆಯ ಮುಖ ನೋಡದೇ, ಅವಳ ಬಗ್ಗೆ  ತಿಳಿದುಕೊಳ್ಳದೇ ನಾನು ಅವಳ ದುಃಖ ನೋಡಿಕೊಂಡು ಅವಳ ಕುಟುಂಬಕ್ಕೆ ಧಕ್ಕೆ ತರಲಿಲ್ಲವೇ, ಅದೇ ಮಹಿಳೆ ಇಂದು ನನ್ನನ್ನು ತಪ್ಪಿತಸ್ಥೆ ಎಂದು ಹೇಳಿ ನನ್ನನ್ನು ದ್ವೇಷಿಸವಾರಂಭಿಸಿದ್ದಳು.

ನನ್ನ ಮದುವೆ ಮುರಿದು ಬಿದ್ದದ್ದರಿಂದ ಶೇಖರ್‌ಗೆ ಎಷ್ಟು ದುಃಖವಾಗಿತ್ತೊ, ನನ್ನ ಮದುವೆಯಾದಾಗಲೂ ಅವನಿಗೆ ಅಷ್ಟು ದುಃಖವಾಗಿರಲಿಲ್ಲ. ನನ್ನ ನೋವು, ತಾಪತ್ರಯ ಅವನ ಮುಖದ ಮೇಲೆ ಸ್ಪಷ್ಟವಾಗಿ ಪ್ರತಿಬಿಂಬಿತವಾಗತೊಡಗಿತ್ತು. ಅದೊಂದು ದಿನ ಶೇಖರ್‌ನಿಂದ ಇನ್ನೆಂದೂ ನೀನು ನನ್ನ ಜೀವನದ ದಾರಿಯಲ್ಲಿ ಬರಲೇಬಾರದು, ನಮ್ಮಿಬ್ಬರ ದಾರಿ ಬೇರೆ ಬೇರೆ ಎಂದು ಪ್ರಮಾಣ ಮಾಡಿಸಿಕೊಂಡೆ.

ಆದರೆ ಒಂದೇ ಕಡೆ ಕೆಲಸ ಮಾಡುವಾಗ ಮುಖಾಮುಖಿಯಾಗದೇ ಇರಲು, ಮಾತನಾಡದೇ ಇರಲು ಸಾಧ್ಯವಿರಲಿಲ್ಲ. ಶೇಖರ್ ನನಗೆ ಕೊಟ್ಟ ಮಾತನ್ನು ಉಳಿಸಿಕೊಂಡ. ಕೆಲವು ತಿಂಗಳುಗಳ ಬಳಿಕ ಅವನು ನಾನಿದ್ದ ಊರಿನಿಂದ ನೌಕರಿ ಬಿಟ್ಟು ಬೇರೊಂದು ಊರಿಗೆ ಹೊರಟುಹೋದ. ಇಂದು ಆಕಸ್ಮಿಕವಾಗಿ 15 ವರ್ಷಗಳ ಬಳಿಕ ಶೇಖರನ ಹೆಸರು ಕೇಳಿ ಹೃದಯದಲ್ಲಿ ಒಮ್ಮೆಲೆ ಜ್ವಲಿಸಿದಂತಾಯಿತು. ಹೃದಯದ ಯಾವುದೊ ಒಂದು ಮೂಲೆಯಲ್ಲಿ ಅವನು ಈಗಲೂ ಇದ್ದಾನೆಂಬುದು ಅನುಭೂತಿಯಾಯಿತು. ಈ ಮಹಿಳೆ 15 ವರ್ಷಗಳಿಂದ ದ್ವೇಷದಿಂದಾದರೂ ಸರಿ ನನ್ನ ನೆನಪನ್ನು ಇಟ್ಟುಕೊಂಡಿದ್ದಾಳೆಂದರೆ, ಶೇಖರ್‌ ಕೂಡ….

ಆದರೆ ಆಗ ಈ ಮಾತುಗಳಿಗೆ ಯಾವುದೇ ವಿಶೇಷ ಮಹತ್ವವಿರಲಿಲ್ಲ. ವಯಸ್ಸಿನ ಈ ಹಂತದಲ್ಲಿ ಆರಿದ ಬೆಂಕಿಯಲ್ಲಿ ಕಿಡಿ ಹುಡುಕುವುದರಿಂದ ಏನು ಲಾಭ? ಎಲ್ಲವೂ ಹಿಂದೆ ಹೊರಟುಹೋಗಿತ್ತು. ನಮ್ಮ ಕಣ್ಮುಂದೆ ಏನಿದೆಯೋ ಅದೇ ವಾಸ್ತವ. ನನ್ನ ಕಾರಣದಿಂದಾಗಿಯೇ ಆ ಮಹಿಳೆ ಇಷ್ಟೊಂದು ವರ್ಷದಿಂದ ಕಹಿ ತುಂಬಿಕೊಂಡಿದ್ದಾಳೆ. ತನ್ನ ಕುಟುಂಬ ಎಲ್ಲಿ ಒಡೆದುಹೋಗುತ್ತೋ ಎಂಬ ಭಯದ ಜೊತೆಗೇ ಜೀವನ ನಡೆಸುತ್ತಿದ್ದಾಳೆ. ನನಗೆ ನನ್ನ ಬಗ್ಗೆಯೇ ದುಃಖವಾಯಿತು.

ನಾನು ಅವಳಿಗೆ ಸಾಕಷ್ಟು ತಿಳಿ ಹೇಳಲು ಪ್ರಯತ್ನಿಸಿದೆ, “ನಿಮಗೆ ಏನೋ ತಪ್ಪುಕಲ್ಪನೆಯಾಗಿದೆ. ನಾವಿಬ್ಬರೂ ಎಂದೂ ಭೇಟಿಯಾಗಿಲ್ಲ.”

“ನನಗೆ ಎಲ್ಲ ಗೊತ್ತಿದೆ. ಒಂದು ದಿನ ಕುಡಿದ ಅಮಲಿನಲ್ಲಿ ಶೇಖರ್‌ ಎಲ್ಲವನ್ನೂ ಹೇಳಿದರು.”

“ಆದರೆ ನಮ್ಮ ನಡುವೆ ಅಂಥದ್ದೇನೂ ಇರಲಿಲ್ಲ. ನಾವಿಬ್ಬರು ಎಂದೂ ಒಳ್ಳೆಯ ಸ್ನೇಹಿತರೂ ಕೂಡ ಆಗಲಿಲ್ಲ.,” ಅವಳ ಸಂದೇಹ ನಿವಾರಿಸಲು ಏನು ಪುರಾವೆ ತೋರಿಸಬೇಕೋ ನನಗೇನೂ ಹೊಳೆಯಲಿಲ್ಲ.

“ಅದನ್ನೇ ನಾನು ಕೇಳುತ್ತಿದ್ದೇನೆ. ಅಂತಹ ವ್ಯಕ್ತಿಯ ಸ್ನೇಹವನ್ನು ನೀವೇಕೆ ತಿರಸ್ಕರಿಸಿದಿರಿ? ಬೇರೆಯವರು ಅವರ ಸ್ನೇಹಕ್ಕಾಗಿ ಹಾತೊರೆಯುತ್ತಾರೆ. ನೀವೇಕೆ ಹಾಗೆ ಮಾಡಿದಿರಿ?”

“ಆದರೆ ನಾನಂತೂ ನಿಮಗಾಗಿ…..” ನನ್ನ ಮಾತು ಇನ್ನೂ ಮುಗಿದಿರಲಿಲ್ಲ. ಅಷ್ಟರಲ್ಲಿಯೇ ಆಕೆ ಒಮ್ಮೆಲೇ ಚೀರಿದಳು, “ನನಗಾಗಿ…. ನನ್ನ ಸಲುವಾಗಿ ನೀವು ಅವರ ಸ್ನೇಹವನ್ನು ತಿರಸ್ಕರಿಸಿದಿರಾ? ನಿಮ್ಮ ಈ ನಿರ್ಧಾರದಿಂದಾಗಿ ನನಗೇನು ಸಿಕ್ಕಿತು ಎಂದು ನೀವೆಂದಾದರೂ ಹಿಂತಿರುಗಿ ನೋಡಿದ್ದೀರಾ?” ಆಕೆಯ ಕಣ್ಣುಗಳು ತುಂಬಿಬಂದವು.

ಅವಳು ನನ್ನಿಂದ ಏನು ಬಯಸುತ್ತಿದ್ದಾಳೆ ಎಂಬುದು ನನಗೇನೂ ತಿಳಿಯಲಿಲ್ಲ. ಅವಳಿಗೆ ಅವಳ ಪತಿಯನ್ನು ವಾಪಸ್‌ ಕೊಟ್ಟಿದ್ದೆ. ಆದರೂ ಅವಳಿಗೆ ನನ್ನ ಬಗ್ಗೆ ಏಕೆ ಈ ದೂರು?

“ನೀವೆಂದಾದರೂ ಆ ವ್ಯಕ್ತಿಯ ಬಗ್ಗೆ ಯೋಚಿಸಿದ್ದೀರಾ? ನೀವು ಅವರನ್ನು ನಿಮ್ಮವರನ್ನಾಗಿಯೂ ಮಾಡಿಕೊಳ್ಳಲಿಲ್ಲ ಹಾಗೂ ಅನಂತರ ಅವರು ಎಂದೂ ನನ್ನವರಾಗಿಯೂ ಉಳಿಯಲಿಲ್ಲ.”

“ನೀವೇನು ಹೇಳ್ತಿದ್ದೀರಿ? ನನಗೇನೂ ಅರ್ಥ ಆಗ್ತಿಲ್ಲ,” ಆಕೆ ಹೇಳಿದ್ದನ್ನು ನನಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.

“ನಮ್ಮಿಬ್ಬರ ನಡುವೆ ನೀವು ಯಾವಾಗಲೂ ಉಳಿದುಕೊಂಡುಬಿಟ್ಟಿದ್ದೀರಿ ಎನ್ನುವುದು ನಿಮಗೆ ಗೊತ್ತಾ? ನೀವು ಶೇಖರನ ಮನಸ್ಸಿನಲ್ಲಿ ಸುಪ್ತ ಆಸೆಯಾಗಿ ಹಾಗೂ ನನ್ನ ಮನಸ್ಸಿನಲ್ಲಿ ದ್ವೇಷದ ಕಿಡಿಯಾಗಿ ಉಳಿದುಕೊಂಡಿದ್ದೀರಿ.”

“ನಾನೆಂದೂ ನಿಮ್ಮಿಬ್ಬರ ನಡುವೆ ಬರಲು ಇಚ್ಛಿಸಲಿಲ್ಲ.. ನಿಮ್ಮಿಬ್ಬರ ಮದುವೆಗಿಂತ ಮೊದಲೇ ನನ್ನ ಮದುವೆಯಾಗಿತ್ತು ಎನ್ನುವುದನ್ನು ಬಹುಶಃ ನೀವು ಮರೆತಿದ್ದೀರಿ.”

“ನನಗೆ ಎಲ್ಲ ಗೊತ್ತಿದೆಯೆಂದು ನಾನು ನಿಮಗೆ ಮೊದಲೇ ಹೇಳಲಿಲ್ವಾ? ಶೇಖರ್‌ ನಿಮ್ಮಿಂದ ಬಯಸಿದ್ದಾದರೂ ಏನು? ಅವರು ಬಯಸಿದ್ದು ಕೇವಲ ನಿಮ್ಮ ಸ್ನೇಹ ತಾನೆ, ಅವರ ಜೊತೆಗೆ ನೀವು ಹಾಗೆ ವರ್ತಿಸಿದ್ದು ಏಕೆ? ನಿಮಗೆ ಯಾವ ಮಾತಿನ ಬಗ್ಗೆ ಹೆಮ್ಮೆ ಇದೆ? ಖುಷಿ ಖುಷಿಯಿಂದಿದ್ದ ಒಬ್ಬ ವ್ಯಕ್ತಿಯನ್ನು ಮದ್ಯದಲ್ಲಿ ಮುಳುಗಿಸಿಬಿಟ್ಟಿರಲ್ಲ?”

“ಏನು? ನೀವು ಅವರನ್ನು ಏಕೆ ತಡೆಯಲಿಲ್ಲ?” ನಾನು ಗಲಿಬಿಲಿಗೊಳಗಾಗಿದ್ದೆ.

“ಗಾಯದ ಮೇಲೆ ಉಪ್ಪು ಸವರ್ತಿದೀರಾ?” ಅವಳ ಮಾತಿನಲ್ಲಿ ತೀಕ್ಷ್ಣತೆ ಇತ್ತು.

ಈ ಮಹಿಳೆ ಏಕೆ ಹೀಗಿದ್ದಾಳೆ? ಅವಳ ಗಂಡನ ಸ್ನೇಹ ಸ್ವೀಕಾರ ಮಾಡಲಿಲ್ಲ ಎಂಬ ಕಾರಣದಿಂದ ನನ್ನನ್ನು ದ್ವೇಷಿಸುತ್ತಾಳೆ.

“ನಿಮಗೆ ನನ್ನದೊಂದು ಪ್ರಶ್ನೆ. ನೀವು ಪುನಃ ಮದುವೆಯನ್ನೇಕೆ ಮಾಡಿಕೊಳ್ಳಲಿಲ್ಲ?”

“ನಿಮ್ಮ ಮಾತುಗಳನ್ನು ದಯವಿಟ್ಟು ಇಲ್ಲಿಗೇ ನಿಲ್ಲಿಸ್ತೀರಾ?” ನಾನು ಒಮ್ಮೆಲೆ ಜೋರಾಗಿ ಕಿರುಚಿದೆ.

ಆಕೆ ನನ್ನ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡಿದ್ದಳು. ವರ್ಷಾನುವರ್ಷಗಳಿಂದ ಸುಪ್ತವಾಗಿದ್ದ ನನ್ನ ಗಾಯವನ್ನು ಕೆದಕಿದ್ದಳು. ನನ್ನ ಬಗ್ಗೆ ನನ್ನ ಜೀವನದ ಬಗ್ಗೆ ಅವಳಿಗೆ ಏನು ತಾನೆ ಗೊತ್ತಿದೆ? ಮದುವೆ ಮಾಡಿಕೊಳ್ಳುವುದು ಒಂದು ಆಟವೇ? ನಿಸರ್ಗ ನನ್ನ ಜೊತೆಗೆ ಎರಡೆರಡು ಸಲ ಆಟವಾಡಿದೆ? ನನ್ನ ನೋವನ್ನು ಆಕೆ ಹೇಗೆ ಅರ್ಥ ಮಾಡಿಕೊಳ್ಳಬಲ್ಲಳು? ತಾನು ಯಾರ ಪ್ರೀತಿಯನ್ನು ಬಯಸಿದ್ದೇನೋ ಅವನು ಅದನ್ನು ಸ್ವೀಕರಿಸಲಿಲ್ಲ. ತನ್ನನ್ನು ಯಾರು ಪ್ರೀತಿಸುತ್ತಿದ್ದರೋ, ಅವನು ಬೇರೆಯವಳ ಗಂಡನಾಗಿಬಿಟ್ಟ. ನನಗೆ ಕಣ್ಣೀರನ್ನು ತಡೆದುಕೊಳ್ಳಲು ಆಗಲಿಲ್ಲ.

ನಾವು ಉಷಾ ಮನೆಯ ಪಾರ್ಟಿಗೆ ಬಂದಿದ್ದೇವೆ ಎಂಬುದನ್ನು ಮರೆತೇಬಿಟ್ಟಿದ್ದೆವು. ಈವರೆಗೆ ಹಾಲ್ ‌ಅತಿಥಿಗಳಿಂದ ತುಂಬಿಹೋಗಿತ್ತು.

ನಾನು ಈ ರೀತಿ ದುಃಖದಲ್ಲಿ ಮುಳುಗಿರುವುದನ್ನು ನೋಡಿ ಅವಳು ಗಾಬರಿಗೊಂಡಳು. ಅವಳು ನಮ್ರ ಸ್ವರದಲ್ಲಿ ನನಗೆ ತಿಳಿವಳಿಕೆ ಕೊಡುವ ರೀತಿಯಲ್ಲಿ, “ನೀವು ಎಂದಾದರೂ ಯೋಚಿಸಿದ್ದೀರಾ? ಯಾರಾದರೂ ಅಪರಿಚಿತ ವ್ಯಕ್ತಿ ಮನಸ್ಸಿಗೆ ಅಷ್ಟೊಂದು ಹತ್ತಿರ ಏಕಾಗುತ್ತಾರೆ? ಕೆಲವೊಮ್ಮೆ ಕೆಲವು ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರವೇ ಇರುವುದಿಲ್ಲ. ಬಹುಶಃ ಶೇಖರ್‌ ಬಳಿಯೂ ಇರಲಿಲ್ಲ ಅನಿಸುತ್ತೆ. ಹೀಗಾಗಿ ಅವರು ನಿಮ್ಮ ಗೆಳೆತನ ಬಯಸಿದ್ದರು. ಅವರಿಗೇನು ಸ್ನೇಹಿತರ ಕೊರತೆಯಿತ್ತೇ?”

“ಶೇಖರನ ಪತ್ನಿಯಾಗಿ ನೀವು ಹೀಗೇಕೆ ಮಾತನಾಡುತ್ತಿರುವಿರಿ?”

“ನನ್ನ ಕುಟುಂಬ, ಪತಿಯ ಖುಷಿಯ ಬಗ್ಗೆ ಯೋಚಿಸುವುದು ತಪ್ಪೆ? ಗಂಡ ಆಫೀಸಿನಿಂದ ಖುಷಿಯಾಗಿ ಮನೆಗೆ ವಾಪಸ್‌ ಬಂದರೆ ಮನೆಯ ವಾತಾವರಣ ಕೂಡ ಖುಷಿಯಿಂದ ಇರುತ್ತದೆ ಅಲ್ವೇ?”

ಈ ಮಹಿಳೆಯ ಹೃದಯ ಅದೆಷ್ಟು ವಿಶಾಲವಾದದ್ದು. ಆಕೆ ತನ್ನ ಕುಟುಂಬದ ಖುಷಿಗಾಗಿ ಅದೆಷ್ಟು ಬೆಲೆ ತೆರಲು ಸಿದ್ಧಳಾಗಿದ್ದಳು.

“ಅಂದಹಾಗೆ ಇಬ್ಬರು ವ್ಯಕ್ತಿಗಳು 8 ಗಂಟೆಗಳ ಕಾಲ ಜೊತೆ ಜೊತೆಗೆ ಇದ್ದರೆ, ತಿಂಡಿ ಊಟ ಜೊತೆಗೆ ಮಾಡಿದರೆ, ಮಾತುಕತೆ ನಡೆಸಿದರೆ ಅವರು ಪರಸ್ಪರ ಕಷ್ಟಸುಖದಿಂದ ಹೇಗೆ ಅಪರಿಚಿತರಾಗಿ ಉಳಿಯುತ್ತಾರೆ. ನಾವು ಮನುಷ್ಯರು. ಯಂತ್ರ ಅಥವಾ ರೊಬೋಟ್‌ಗಳಲ್ಲ. ನೌಕರಿ ಮಾಡುವವರೆಲ್ಲ ಸಾಮಾನ್ಯವಾಗಿ ವಯಸ್ಕರಾಗಿರುತ್ತಾರೆ. ಮಕ್ಕಳಾಗಿರುವುದಿಲ್ಲ. ಇಂತಹರಲ್ಲಿ ಸ್ನೇಹ ತಪ್ಪೇನು?” ಅವಳ ವಿಚಾರ ತಿಳಿವಳಿಕೆಯಿಂದ ಕೂಡಿತ್ತು.

“ಆದರೆ ಮಹಿಳೆ ಹಾಗೂ ಪುರುಷನ ನಡುವೆ  ಸ್ನೇಹ?” ನಾನು ಜಗತ್ತಿಗೆ ಹೆದರಿ ನಡೆಯುವವಳಂತೆ ಯೋಚಿಸಿದೆ.

“ಮಹಿಳೆಯರಾದ ನಮಗೆ ನಮ್ಮ ಇತಿಮಿತಿಗಳು ಗೊತ್ತಿರುವುದಿಲ್ಲವೇನು? ಮಹಿಳೆಯರೆಂದರೆ ಪೆಟ್ರೋಲ್ ತುಂಬಿದ ಡಬ್ಬಗಳಂತೆಯೇ? ಪುರುಷನ ನೆರಳು ಬೀಳುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡುಬಿಡುತ್ತದೆಯೇ? ನೀವು ಓದುಬರಹ ಬಲ್ಲವರಾಗಿಯೂ ಯಾವ ಕಾಲದ ಮಾತನ್ನಾಡುತ್ತಿರುವಿರಿ?”

“ವಿಷಯ ಹೀಗಿದ್ದು, ನಿಮಗೆ ಎಲ್ಲ ವಿಷಯ ಗೊತ್ತಿದ್ದರೆ, ಶೇಖರ್‌ ವಾಪಸ್‌ ಬರಬಹುದಿತ್ತಲ್ಲ?”

“ಅದ್ಹೇಗೆ ವಾಪಸ್‌ ಬರುತ್ತಾರೆ? ನೀವು ಅವರಿಂದ ಮಾತು ತೆಗೆದುಕೊಂಡಿದ್ದೀರಂತಲ್ಲ?”

`ನನ್ನ ಒಂದು ಮಾತಿನಿಂದ ಅವನು ಇಡೀ ಜೀವನ…..’ ನನ್ನ ಮಾತುಗಳು ನನ್ನೊಳಗೆಯೇ ಉಳಿದವು. ಹೃದಯದಲ್ಲಿ ಒಂದು ಬಗೆಯ ಛಳುಕು ಹೊಡೆದಂತಾಯಿತು. ಇಷ್ಟು ವರ್ಷಗಳ ಬಳಿಕ ಹೃದಯದ ಒಂದು ಮೂಲೆಯಲ್ಲಿ ಅಪೇಕ್ಷೆಯ ನೋವು. ಅದನ್ನು ನಾನು ನನ್ನಿಂದಲೇ ಬಚ್ಚಿಟ್ಟಿದ್ದೆ. ನನಗೆ ಶೇಖರನನ್ನು ಭೇಟಿಯಾಗಬೇಕೆನ್ನಿಸಿತು. ಅವನು ನನ್ನನ್ನು ಈಗಲೂ ಅಷ್ಟೇ ಇಷ್ಟಪಡುತ್ತಾನೆಯೇ? ಅವನು ಈಗಲೂ ನನ್ನನ್ನು ಭೇಟಿಯಾಗಿ, ಮಾತನಾಡಲು ಅಪೇಕ್ಷೆ ಇಟ್ಟುಕೊಂಡಿದ್ದಾನೆಯೇ? ಇಲ್ಲ. ಬಹುಶಃ ಇಲ್ಲ. ಹೀಗಿದ್ದಿದ್ದರೆ ಈ 15 ವರ್ಷದಲ್ಲಿ ಅವನು ಒಂದು ಸಲವಾದರೂ ಹಿಂತಿರುಗಿ ನೋಡುತ್ತಿದ್ದ. ನಾನು ಅವನಿಗೆ ಅಂತಹದ್ದೇನನ್ನು ಹೇಳಿದ್ದೆ? ಒಂದು ಪ್ರಮಾಣ ಮಾತ್ರ ತೆಗೆದುಕೊಂಡಿದ್ದೆ. ಜನರಂತೂ ತಮ್ಮ ಅಪೇಕ್ಷೆಯಲ್ಲಿ ಜಗತ್ತಿನ ಪ್ರತಿಯೊಂದು ಗೋಡೆಯನ್ನು, ಪ್ರತಿಯೊಂದು ಪದ್ಧತಿಯನ್ನು ಮುರಿಯುತ್ತಾರೆ. ಅವನು ಒಂದೇ ಒಂದು ಪ್ರಮಾಣ ಮುರಿಯಲು ಏಕೆ ಆಗಲಿಲ್ಲ? ಅಂದಹಾಗೆ ನಾನು ಜೀವಿತನಾಗಿದ್ದಾದರೂ ಎಲ್ಲಿ? ಇಲ್ಲದಿದ್ದರೆ ಎಲ್ಲಿಯವರೆಗೆ ಜೀವಿತವಾಗಿರುತ್ತಿದ್ದೆನೊ, ಅಲ್ಲಿಯವರೆಗೆ ಜೀವಿಸುತ್ತಿದ್ದೆನಲ್ಲ………

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ