ಸ್ನೇಹಿತೆ ಉಷಾಳ ಮನೆಯಲ್ಲಿ ಅವಳ ಮದುವೆಯ 25ನೇ ವಾರ್ಷಿಕೋತ್ಸದ ಪಾರ್ಟಿ ಇತ್ತು. ಅಂದಹಾಗೆ ಇತ್ತೀಚೆಗೆ ನನಗೆ ಮದುವೆಗಳಿಗೆ, ಬರ್ಥ್‌ಡೇ ಮುಂತಾದ ಪಾರ್ಟಿಗಳಿಗೆ ಹೋಗುವ ಆಸಕ್ತಿಯೇ ಇಲ್ಲ. ಆದರೆ ಉಷಾಳ ಆಗ್ರಹಕ್ಕೆ ಮಣಿದು ಹೋಗಲೇಬೇಕಾದ ಪ್ರಸಂಗ ಬಂದಿತು. ಪಾರ್ಟಿಯಲ್ಲಿ ಉಷಾ ನನ್ನ ಪರಿಚಯವನ್ನು ಅಪರಿಚಿತ ಮಹಿಳೆಯೊಬ್ಬಳಿಗೆ ಮಾಡಿಕೊಟ್ಟಾಗ ಆಕೆ, ``ನೀವೇನಾ ಸ್ನೇಹಾ?'' ಎಂದು ಒಮ್ಮೆಲೆ ಹೇಳಿಬಿಟ್ಟಳು.

ಆಕೆಯ ಬಾಯಿಂದ ನನ್ನ ಕುರಿತಾಗಿ ಈ ರೀತಿಯ ವ್ಯಂಗ್ಯಭರಿತ ಮಾತುಗಳನ್ನು ಕೇಳಿ ನಾನು ಆಕೆಯ ಕಡೆ ತದೇಕ ಚಿತ್ತದಿಂದ ನೋಡಿದೆ. ನಾನು ಆ ಮಹಿಳೆಯನ್ನು ಈ ಹಿಂದೆ ಎಂದೂ ನೋಡಿರಲಿಲ್ಲ. ಇದೇ ಮೊದಲ ಬಾರಿ ನಾನು ಮತ್ತು ಆಕೆ ಭೇಟಿಯಾಗಿದ್ದೆವು.

ತಲೆಯಲ್ಲಿ ಏಕಕಾಲಕ್ಕೆ ಹಲವು ಪ್ರಶ್ನೆಗಳು ಎದ್ದು ಕಾಡತೊಡಗಿದವು. ನಾನು ನನ್ನದೇ ಪ್ರಶ್ನೆಗಳಲ್ಲಿ ಮುಳುಗಿ ಸಾಕಷ್ಟು ಹೊತ್ತು ಅಲ್ಲಿದ್ದೂ ಇಲ್ಲದವಳಂತಾಗಿದ್ದೆ. ಮನಸ್ಸಿನಲ್ಲಿ ಮೇಲಿಂದ ಮೇಲೆ ಒಂದೇ ಪ್ರಶ್ನೆ ಏಳುತ್ತಿತ್ತು, `ಅವಳಿಗೆ ನನ್ನ ಬಗ್ಗೆ ಗೊತ್ತಾ? ನನ್ನ ಬಗ್ಗೆ ಅವಳು ಈ ರೀತಿ ವ್ಯಂಗ್ಯವಾಗಿ ಹೇಳಬೇಕಾದರೆ ಉಷಾ ಅವಳಿಗೆ ನನ್ನ ಬಗ್ಗೆ ಏನಾದರೂ ಹೇಳಿರಬಹುದಾ?'

ಈ ಬಗ್ಗೆ ಯೋಚಿಸಿ ಯೋಚಿಸಿ ನನ್ನ ಮನಸ್ಸು ಗೊಂದಲದ ಗೂಡಾಗುತ್ತಿತ್ತು? `ಅವಳಿಗೆ ನನ್ನ ಬಗ್ಗೆ ಏನು ತಾನೆ ಗೊತ್ತಿದೆ? ನನ್ನ ಬಗ್ಗೆ ಅವಳಿಗೆ ಇವರು ದೂರಾದರೂ ಏನು?' ನನ್ನ ಹೆಸರು ಕೇಳುತ್ತಿದ್ದಂತೆ ಆಕೆ ಈ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಏಕೆ? 'ನನ್ನನ್ನು ನಾನು ತಡೆದುಕೊಳ್ಳಲು ಆಗಲಿಲ್ಲ. ಜೂಸ್‌ನ ಗ್ಲಾಸ್‌ ಕೈಯಲ್ಲಿ ಹಿಡಿದುಕೊಂಡು ಅತಿಥಿಗಳ ನಡುವೆ ದಾರಿ ಮಾಡಿಕೊಳ್ಳುತ್ತ ಆ ಮಹಿಳೆಯ ಬಳಿ ಹೋಗಿ ತಲುಪಿದೆ. ನನಗೆ ಆ ಮಹಿಳೆಯ ಹೆಸರು ಕೂಡ ನೆನಪಿಗೆ ಬರುತ್ತಿರಲಿಲ್ಲ. ಉಷಾ ಆಕೆಯನ್ನು ಪರಿಚಯಿಸುತ್ತಾ ಏನೋ ಹೇಳಿದ್ದಳು. ನಾನು ತಲೆ ಕೆರೆದುಕೊಂಡು ಯೋಚಿಸಲು ನೋಡಿದೆ. ಆದರೆ ಏನು ಮಾಡಿದರೂ ನನ್ನ ನೆನಪು ಸಾಥ್‌ ಕೊಡಲಿಲ್ಲ.

ನಾನು ಅವಳ ಬಳಿ ಹೋದೆ. ಆದರೆ ಮಾತನ್ನು ಹೇಗೆ ಆರಂಭಿಸಬೇಕೆಂದು ತಿಳಿಯಲಿಲ್ಲ. ನಾನು ಅವಳ ಬಳಿ ಹೋದದ್ದು ನೋಡಿ, ತಾನು ಹೂಡಿದ ಬಾಣ ನನಗೆ ಸರಿಯಾಗಿ ತಗುಲಿದೆ ಎಂದು ಅಕೆ ಭಾವಿಸಿದ್ದಳು. ನನ್ನ ಮುಖದಲ್ಲಿ ಪ್ರಕಟವಾಗಿದ್ದ ಭಾವನೆಗಳನ್ನು ಅವಳು ಆಗಲೇ ಓದಿ ಮುಗಿಸಿಬಿಟ್ಟಿದ್ದಳು. ಬಹುಶಃ ಅವಳಿಗೂ ಕೂಡ ನನ್ನೊಂದಿಗೆ ಮಾತನಾಡುವ ಅಭಿಲಾಷೆ ಇತ್ತು. ಆದರೂ ನಮ್ಮಿಬ್ಬರ ಮುಖದಲ್ಲಿ ಔಪಚಾರಿಕ ನಗೆಯ ಕಿಂಚಿತ್ತೂ ಸುಳಿವು ಕೂಡ ಪ್ರಕಟವಾಗಲಿಲ್ಲ.

ಮೊದಲ ಭೇಟಿಯಲ್ಲಿಯೇ ಇಷ್ಟೊಂದು ವೈರತ್ವ, ಇಷ್ಟೊಂದು ಕಹಿ. ನನಗೆ ವಿಚಿತ್ರ ಎಂಬಂತೆ ಗೋಚರಿಸಿತು. ಆಕೆಯೇ ಮಾತಿಗೆ ಶುಭಾರಂಭ ಮಾಡಿದಳು, ``ಬನ್ನಿ, ಬೇರೆ ಎಲ್ಲಿಯಾದರೂ ಕೂತು ಮಾತನಾಡೋಣ,'' ಎಂದು ಹೇಳುತ್ತಾ ಆಕೆ ಟೆರೇಸ್‌ನತ್ತ ಹೆಜ್ಜೆ ಹಾಕಿದಳು. ಸಾಕಿದ ಬೆಕ್ಕಿನ ಹಾಗೆ ನಾನು ಅವಳ ಹಿಂದೆ ಹಿಂದೆಯೇ ನಿಧಾನವಾಗಿ ಹೋದೆ. ಅಲ್ಲಿದ್ದ ಕುರ್ಚಿಯ ಮೇಲೆ ಇಬ್ಬರೂ ಕುಳಿತೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ