ನಕ್ಷತ್ರಗಳನ್ನು ನೋಡುವಾಗ ಮನುಷ್ಯ ಎಂದಾದರೂ ಬ್ರಹ್ಮಾಂಡದ ಲಕ್ಷಾಂತರ ಪ್ರಪಂಚಗಳಲ್ಲಿ ಯಾವುದಾದರೂ ಒಂದರ ಮೇಲೆ ತಲುಪುತ್ತಾನೆಯೇ ಎಂದು ವಿಚಾರ ಮಾಡಿ. ಚಂದ್ರನ ಮೇಲೆ ಕಾಲಿಟ್ಟ ಪ್ರಥಮ ಸಾಹಸ ಯಾತ್ರೆಯನ್ನು ಮತ್ತೊಮ್ಮೆ ಮಾಡಲಾದೀತೇ? ಎಂದಾದರೂ ಮನುಷ್ಯ ಮಂಗಳ ಗ್ರಹದ ಮೇಲೆ ತನ್ನ ಹೆಜ್ಜೆ ಇಡುತ್ತಾನೆಯೇ?

ಒಂದುವೇಳೆ ಎಂದಾದರೂ ಇನ್ನೊಂದು ಗ್ರಹದ ಮೇಲೆ ಹೋಗುವಂತಾದರೆ ವಿಜ್ಞಾನಿಗಳು ಈ ಕಾರ್ಯದಲ್ಲಿ ನಾಯಿಯ ಸಹಾಯವನ್ನು ನೆನೆಸಿಕೊಳ್ಳುತ್ತಾರೆ. ಅಂದಹಾಗೆ ರಷ್ಯಾದವರು ಮೊದಲ ಬಾರಿಗೆ ಅಂತರಿಕ್ಷಕ್ಕೆ ಹೋಗಲು ಪ್ರಯತ್ನಿಸಿದರು.

ಬಾಹ್ಯಾಕಾಶದ ಕಕ್ಷೆಗೆ ಕಳುಹಿಸಲಾದ ಪ್ರಾಣಿ ಒಂದು ನಾಯಿಯಾಗಿತ್ತು. ಸೈಬೀರಿಯನ್‌ ನಾಯಿ ಲೈಕಾವನ್ನು ಮಾಸ್ಕೋದ ಬೀದಿಯಿಂದ ಎತ್ತಿಕೊಂಡು 1957ರ ನವೆಂಬರ್‌ 3 ರಂದು `ಸ್ಪೂಟ್ನಿಕ್‌’ ಹೆಸರಿನ ರಾಕೆಟ್‌ನಲ್ಲಿ ಕೂಡಿಸಲಾಯಿತು. ಆದರೆ ಅದು ಸುರಕ್ಷಿತವಾಗಿ ವಾಪಸ್‌ ಬರಲು ಯಾವುದೇ ವ್ಯವಸ್ಥೆ ಮಾಡಲಿಲ್ಲ. ರಾಕೆಟ್‌ನ ಒಳಗೆ ಹೆಚ್ಚುತ್ತಿದ್ದ ಉಷ್ಣತೆ ಮತ್ತು ಒತ್ತಡದಿಂದಾಗಿ ರಾಕೆಟ್‌ ಅಂತರಿಕ್ಷ ತಲುಪುವ ಮೊದಲೇ ಲೈಕಾ ಕೊನೆಯುಸಿರೆಳೆಯಿತು.

ರಾಕೆಟ್‌ನ ಸಣ್ಣ ಮೆಷಿನ್‌ನಲ್ಲಿ ಬಂಧಿಯಾಗಿದ್ದ ಲೈಕಾ ಸಾಯುವ ಮೊದಲಿನ 7 ಗಂಟೆಗಳ ಕಾಲ ಎಂತಹ ಭಯ ಹಾಗೂ ಒತ್ತಡ ಅನುಭವಿಸಿರಬೇಕು ಎಂಬುದನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಈ ಘಟನೆಯಾದ 40 ವರ್ಷಗಳ ನಂತರ 1998ರಲ್ಲಿ ಸೋವಿಯುತ್‌ನ ರಿಷ್ಠ ವಿಜ್ಞಾನಿ ಓಲೆಗ್‌ ಗೈಜೆಂಕೋ ಅದರ ಬಗ್ಗೆ ಕ್ಷಮೆ ಯಾಚಿಸಿದರು. ಲೈಕಾನನ್ನು ಬಾಹ್ಯಾಕಾಶಕ್ಕೆ ಕಳಿಸಿದ ನಿಯೋಗದಲ್ಲಿ ಗೈಜೆಂಕೋ ಸಹ ಭಾಗಿಯಾಗಿದ್ದರು.

ಅಮಾನವೀಯ ವರ್ತನೆ

50 ಮತ್ತು 60ರ ದಶಕದ ಮಧ್ಯೆ ಸೋವಿಯತ್‌ ವಿಜ್ಞಾನಿಗಳು, ಸುಮಾರು 5-7 ನಾಯಿಗಳನ್ನು ಬಾಹ್ಯಾಕಾಶಕ್ಕೆ ಕಳಿಸಿದ್ದರು. ಹೆಣ್ಣು ನಾಯಿಗಳಿಗೆ ಪ್ರಾಮುಖ್ಯತೆ ನೀಡಲಾಯಿತು. ಏಕೆಂದರೆ, ವಿಜ್ಞಾನಿಗಳ ಅಭಿಪ್ರಾಯದಂತೆ ಗಂಡು ನಾಯಿಗಳಿಗೆ ಹೋಲಿಸಿದರೆ ಹೆಣ್ಣು ನಾಯಿಗಳು ರಾಕೆಟ್‌ ಒಳಗೆ ಒತ್ತಡ ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಈ ಹೆಣ್ಣು ನಾಯಿಗಳನ್ನು ಟ್ರೇನಿಂಗ್‌ನಲ್ಲಿ 15-20 ದಿನಗಳವರೆಗೆ ಸಣ್ಣ ಬಾಕ್ಸ್ ಗಳಲ್ಲಿ ಮುಚ್ಚಿಡುತ್ತಿದ್ದರು. ಅವುಗಳನ್ನು ಬಾಹ್ಯಾಕಾಶಕ್ಕಾಗಿ ಆ್ಯಸ್ಟ್ರೋನಾಟ್‌ ಸೂಟ್‌ನಲ್ಲಿ ವಿಶೇಷ ರೂಪದಿಂದ ಸಿದ್ಧಪಡಿಸಲಾಯಿತು. ಬಾಕ್ಸ್ ಗಳಲ್ಲಿ ಮುಚ್ಚಿದ ನಾಯಿಗಳನ್ನು ಕೃತಕ ರಾಕೆಟ್‌ ಮೆಷಿನ್‌ನಲ್ಲಿ ಇಡಲಾಯಿತು. ಅದು ನಿಜವಾದ ರಾಕೆಟ್‌ನಂತೆ ಕೆಲಸ ಮಾಡುತ್ತಿತ್ತು. ನಿಜವಾದ ರಾಕೆಟ್‌ನ ಲಾಂಚ್‌ನ ಸಮಯದಲ್ಲಿ ಕೊಡಲಾದ ವೇಗವನ್ನು ಕೊಡಲಾಗಿತ್ತು. ಒಟ್ಟಿನಲ್ಲಿ ಪಂಜರದಂತಹ ಮುಚ್ಚಿದ ಬಾಕ್ಸ್ ಗಳಲ್ಲಿನ ನಾಯಿಗಳನ್ನು ಬಾಹ್ಯಾಕಾಶಕ್ಕೆ ಕಳಿಸಲು ಪೂರ್ಣ ತಯಾರಿ ನಡೆಸಲಾಯಿತು. ಈ ಟ್ರೇನಿಂಗ್‌ನಲ್ಲಿ ಆ ನಾಯಿಗಳು ಎಂತಹ ಯಾತನೆ ಅನುಭವಿಸಿರಬೇಕೆಂದು ಯೋಚಿಸಿದಾಗ ಮೈಯಲ್ಲಿ ನಡುಕವುಂಟಾಗುತ್ತದೆ.

ಆ ನಾಯಿಗಳಲ್ಲಿ ಕೆಲವು ಟ್ರೇನಿಂಗ್‌ ಹಂತದಲ್ಲಿ ಸತ್ತಿರುತ್ತವೆ. ಬಹುಶಃ ಸೋವಿಯತ್‌ ವಿಜ್ಞಾನಿಗಳು ಈ ವಿಷಯ ಬಹಿರಂಗ ಮಾಡಲಿಲ್ಲ. ಏಕೆಂದರೆ ಲೈಕಾ ಸತ್ತಿದ್ದು ಜನರಲ್ಲಿ ಸಂಚಲನ ಮೂಡಿಸಿತ್ತು. ಅವುಗಳಲ್ಲಿ ಕೆಲವು ರಾಕೆಟ್‌ನ ಟೆಕ್ನಿಕಲ್ ಹಾಳಾಗಿದ್ದರಿಂದ ಸತ್ತುಹೋದವು. ಉಳಿದ ನಾಯಿಗಳನ್ನು ಮತ್ತೊಮ್ಮೆ ಉಪಯೋಗಿಸಿ ಕೊಳ್ಳಲಾಯಿತು. ಅವುಗಳ ಆಹಾರದಲ್ಲಿ ಪ್ರೋಟೀನ್‌ ಜೆಲ್ಲಿಯನ್ನು ಸೇರಿಸಲಾಯಿತು. ಅದರಿಂದಾಗಿ ಶೇ.60ರಷ್ಟು ನಾಯಿಗಳು ಮಲಬದ್ಧತೆ ಮತ್ತು ಪಿತ್ತಕೋಶದಲ್ಲಿ ಕಲ್ಲು ಇತ್ಯಾದಿ ತೊಂದರೆಗಳನ್ನು ಅನುಭವಿಸಬೇಕಾಯಿತು.

ಕೆಲವು ಪಾರಾದವು, ಕೆಲವು ಸತ್ತವು

ಬಾಹ್ಯಾಕಾಶದ ಕಕ್ಷೆ ತಲುಪಿದ ಯಶಸ್ಸು ಲೈಕಾಗೆ ಮಾತ್ರ ಸಿಕ್ಕಿತು. ಬಾಹ್ಯಾಕಾಶದ ಕಕ್ಷೆಯ ಕೆಳಗೆ ಹಾರುವ ರಾಕೆಟ್‌ಗಳಲ್ಲಿ ಹಲವು ನಾಯಿಗಳನ್ನು ಕಳಿಸಲಾಯಿತು. ಇಂತಹ 29 ಹಾರಾಟಗಳನ್ನು 1951ರಿಂದ 1958ರ ನಡುವೆ ನಡೆಸಲಾಯಿತು. ಇಂತಹ ಹಾರಾಟಗಳಲ್ಲಿ ಡೆಜಿಕ್‌ ಮತ್ತು ಸೈಗನ್‌ ನಾಯಿಗಳು ಮೊದಲಿಗರಾಗಿದ್ದವು. ಅವು 1951ರಲ್ಲಿ 110 ಕಿ.ಮೀ.ರವರೆಗೆ ಹಾರಾಟ ನಡೆಸಿದ್ದವು. ಎರಡೂ ನಾಯಿಗಳು ಸುರಕ್ಷಿತವಾಗಿ ಹಿಂತಿರುಗಿದ. ಡೆಜಿಕ್‌ನ್ನು ಲೀಸಾ ಎಂಬ ನಾಯಿಯ ಜೊತೆ ಮತ್ತೊಮ್ಮೆ ಬಾಹ್ಯಾಕಾಶಕ್ಕೆ ಕಳಿಸಲಾಯಿತು. ಆದರೆ ಈ ಬಾರಿ ಇವೆರಡೂ ಸತ್ತುಹೋದವು. ಕೆಲವು ನಾಯಿಗಳು ಪ್ರಾಣ ಉಳಿಸಿಕೊಳ್ಳಲು ಓಡಿಹೋಗಲು ಪ್ರಯತ್ನ ಮಾಡಿದವು. ಮೇಲಾಯಾ ಎಂಬ ನಾಯಿ ಪ್ರಯಾಣದ 1 ದಿನ ಹಿಂದೆ ಓಡಿ ಹೋಗಲು ಪ್ರಯತ್ನಿಸಿತು. ಆದರೆ ಅದನ್ನು ಹಿಡಿಯಲಾಯಿತು ಮತ್ತು ಮೈಲಿಶಕಾ ಎಂಬ ನಾಯಿಯ ಜೊತೆಗೆ ರಾಕೆಟ್‌ನಲ್ಲಿ ಕಳಿಸಲಾಯಿತು. ಬೊಲಿಕ್‌ ಎಂಬ ಹೆಣ್ಣು ನಾಯಿ ತನ್ನ ಹಾರಾಟದ ಕೆಲವು ದಿನಗಳ ಮೊದಲು ಓಡಿಹೋಗುವಲ್ಲಿ ಯಶಸ್ವಿಯಾಯಿತು. ವಿಜ್ಞಾನಿಗಳು ಅದರ ಜಾಗದಲ್ಲಿ `ಜಿಬ್‌’ ಎಂಬ ಒಂದು ಬೀದಿ ನಾಯಿಯನ್ನು ಹಿಡಿದು ಹಾರಾಟಕ್ಕೆ ಕಳಿಸಿದರು. ಜಿಬ್‌ ಸಾಯಲಿಲ್ಲವಾದರೂ ಅದರ ಅನುಭವ ಭಯಂಕರಾಗಿತ್ತು.

ಓಟಿಜನಾಯೊ ಸಾಯುವ ಮೊದಲು 5 ಬಾರಿ ಹಾರಾಟ ನಡೆಸಿತ್ತು. ಅಲ್ಬಿನಾ ಮತ್ತು ಸೈಗಂಕಾ ತಮ್ಮ ಕ್ಯಾಪ್ಸೂಲ್‌ಗಳಿಂದ ಹೊರಬಂದು 85 ಕಿ.ಮೀ. ಎತ್ತರದಿಂದ ಕೆಳಗೆ ಬಿದ್ದವು. ಆದರೂ ಬದುಕುಳಿದವು. ಡಮಕಾ ಮತ್ತು ರಸಕಾಗಳಿಗೆ ಬಾಹ್ಯಾಕಾಶಕ್ಕೆ  ಹೋಗಲು 1960ರ ಡಿಸೆಂಬರ್‌ 22 ರಂದು ಸಿದ್ಧತೆ ನಡೆಸಲಾಗಿತ್ತು. ಅವರು ಹೊರಟಿದ್ದ ರಾಕೆಟ್‌ ಫೇಲ್ ‌ಆಯಿತು. ಆಗ ಅವರು ಇಂಜೆಕ್ಷನ್‌ ಸೀಟ್‌ನಿಂದ ಹೊರಗೆ ಬರಬೇಕಾಯಿತು. ಆದರೆ ಆ ಸಿಸ್ಟಂ ಕೂಡ ಫೇಲ್ ‌ಆಯಿತು. ರಾಕೆಟ್‌ ಕೆಳಗೆ ಬಿದ್ದು ಮಂಜಿನಾಳದೊಳಗೆ ನುಗ್ಗಿತು. ಆಗಲೂ ಎರಡೂ ನಾಯಿಗಳು ರಾಕೆಟ್‌ನ ಕ್ಯಾಪ್ಸೂಲ್‌ನಲ್ಲಿದ್ದ. ರಾಕೆಟ್‌ಗಳನ್ನು ಪತ್ತೆ ಮಾಡಲು ಕಳಿಸಿದ ಟೀಮ್ ನವರು ಕ್ಯಾಪ್ಸೂಲ್‌‌ನ್ನು 2 ದಿನಗಳವರೆಗೆ ತೆರೆಯಲೇ ಇಲ್ಲ. ಏಕೆಂದರೆ ಅದರಲ್ಲಿ ಯಾವುದೂ ಜೀವಂತವಾಗಿ ಉಳಿದಿಲ್ಲವೆಂದು ಅವರಿಗೆ ಹೇಳಲಾಗಿತ್ತು. ಆದರೆ 2 ದಿನಗಳ ನಂತರ ಟೀಮ್ ನವರು ಕ್ಯಾಪ್ಸೂಲ್‌ನ್ನು ತೆರೆದಾಗ ಅವರು ಆಶ್ಚರ್ಯಚಕಿತರಾದರು. ಏಕೆಂದರೆ ಎರಡೂ ನಾಯಿಗಳು ಜೀವಂತಾಗಿದ್ದವು ಮತ್ತು ಅವು ಹಸಿವಿನಿಂದ ಕಂಗೆಟ್ಟಿದ್ದವು. ನಂತರ ಅವನ್ನು ಮಾಸ್ಕೋಗೆ ತರಲಾಯಿತು. ಅಲ್ಲಿ ರಸಕಾ ನಾಯಿಯನ್ನು ಒಬ್ಬ ವಿಜ್ಞಾನಿ ತನ್ನೊಂದಿಗೆ ಇಟ್ಟುಕೊಂಡರು. ರಸಕಾ 14 ವರ್ಷಗಳ ಕಾಲ ಬದುಕಿತಲ್ಲದೆ, ಹಲವಾರು ಬಾರಿ ಮರಿಗಳನ್ನು ಹಾಕಿತು. ಈ ಘಟನೆಯ ಬಗ್ಗೆ ಯಾರ ಬಳಿಯೂ ಪ್ರಸ್ತಾಪಿಸಬಾರದು ಎಂದು ವಿಜ್ಞಾನಿಗಳಿಗೆ ಆದೇಶಿಸಲಾಗಿತ್ತು. ಏಕೆಂದರೆ ಬಾಹ್ಯಾಕಾಶ ಯಾತ್ರೆಯಲ್ಲಿ ನಾಯಿಗಳನ್ನು ಉಪಯೋಗಿಸಿಕೊಂಡ ಬಗ್ಗೆ ಜನ ಸಿಟ್ಟಾಗಬಹುದು.

ಇನ್ನಷ್ಟು ತ್ಯಾಗಗಳಿವೆ

ಬಾರ್ಸ್‌ ಮತ್ತು ಲಿಸಿಕಾ, ರಸಕಾದಂತೆ ಉಳಿಯಲಿಲ್ಲ. 28 ಸೆಕೆಂಡುಗಳ ಹಾರಾಟದಲ್ಲೇ ಅವರೆಡೂ ರಾಕೆಟ್‌ನಲ್ಲಿ ಸತ್ತುಹೋದವು.

ಬೆ್‌ಕಾ ಮತ್ತು ಸೆ್ಟ್ರ್‌ಕಾ 1960ರ ಆಗಸ್ಟ್ 19 ರಂದು ಸ್ಪೂಟ್ನಿಕ್‌ 5ರಲ್ಲಿ ಕುಳಿತು ಬಾಹ್ಯಾಕಾಶದಲ್ಲಿ ಇಡೀ 1 ದಿನ ಕಳೆದು ಸುರಕ್ಷಿತವಾಗಿ ಭೂಮಿಗೆ ಹಿಂತಿರುಗಿದ.

ನಂತರ ಸೆ್ಟ್ರ್‌ಕಾಗೆ 6 ಮರಿಗಳು ಹುಟ್ಟಿದವು. ಅದರ ಜೋಡಿಯಾದ ಪುಶೋಕ್‌ನ್ನು ಎಂದೂ ಬಾಹ್ಯಾಕಾಶಕ್ಕೆ ಕಳಿಸಲಿಲ್ಲ. ಆದರೆ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಭೂಮಿಯ ಮೇಲೆಯೇ ನಡೆಸಿದ ಹಲವಾರು ಪ್ರಯೋಗಗಳಲ್ಲಿ ಬಳಸಿಕೊಳ್ಳಲಾಯಿತು. ಸೆ್ಟ್ರ್‌ಕಾಳ ಒಂದು ಮರಿಗೆ ಪುಶಿನಕಾ ಎಂದು ಹೆಸರಿಡಲಾಯಿತು. ನಂತರ ರಷ್ಯಾದ ಪ್ರಧಾನಿ ನಿಕಿಟಾ ರಶ್‌ಕೇಲ್ ‌ರಲ್ಲಿ ಪ್ರೆಸಿಡೆಂಟ್‌ಜಾನ್‌ ಕೆನಡಿಯರ ಮಗಳು ಕ್ಯಾರಲೀನ್‌ಗೆ ಉಡುಗೊರೆಯಾಗಿ ಕೊಟ್ಟರು. ಆಮೇಲೆ ನಡೆದ ಕಥೆಯೇ ವಿಚಿತ್ರ. ಉಡುಗೊರೆಯಾಗಿ ಕೊಟ್ಟ ನಾಯಿ ಮರಿಯ ಶರೀರದಲ್ಲಿ ಗುಪ್ತವಾಗಿ ಟ್ರ್ಯಾನ್ಸ್ ಮೀಟರ್‌ ಅಳವಡಿಸಲಾಗಿದೆ ಎಂದು ಸಿಐಎಗೆ ಸಂದೇಹ. ಅದನ್ನು ಹುಡುಕಲು ನಾಯಿಮರಿಯನ್ನು ಸಾಯಿಸಿ ಡಿಸೆಕ್ಟ್ ಮಾಡಿ ತೆಗೆಯಬೇಕೆಂದು ಹೇಳಿದರು. ಆದರೆ ಕೆನಡಿ ಇದಕ್ಕೆ ಒಪ್ಪಲಿಲ್ಲ ಪುಶಿನಕಾ ಮತ್ತು ಕೆನಡಿಯ ನಾಯಿ ಚಾರ್ಲಿಯ ಮೇಟಿಂಗ್‌ನಿಂದ ಆದ ಮರಿಗಳನ್ನು ಕೆನಡಿ ಪಪ್‌ ನಿಕ್ಸ್ ಎಂದು ಕರೆಯುತ್ತಿದ್ದರು. ಪುಶಿನಕಾದ ವಂಶದ ನಾಯಿಗಳು ಇಂದಿಗೂ ಇವೆ.

ಅಮೂಲ್ಯ ಸಹಾಯ

ಮುಂದಿನ ಸ್ಪೂಟ್ನಿಕ್‌ನಲ್ಲಿ ಇತರ ಗಿಡಗಳು ಮತ್ತು ಪ್ರಾಣಿಗಳೊಂದಿಗೆ ಕಳಿಸಲಾದ ನಾಯಿಗಳು ಶ್ಯೋಲ್ಕಾ ಮತ್ತು ಮುಶ್ಕಾರ ರಾಕೆಟ್‌ ಗಾಳಿಯಲ್ಲೇ ಸಿಡಿದು ಎಲ್ಲ ಸವಾರರು ಮೃತರಾದರು. ಸ್ಪೂಟ್ನಿಕ್‌ 10ನ್ನು 1961ರ ಮಾರ್ಚ್‌ 25 ರಂದು ಲೆಡ್‌ ಡೋಚಕಾ ಎಂಬ ಹೆಣ್ಣು ನಾಯಿಯೊಂದಿಗೆ ಲಾಂಚ್‌ ಮಾಡಿದರು. ಈ ನಾಯಿಗೆ ಯೂರಿ ಗಗಾರಿನ್‌ ಹೆಸರಿಟ್ಟಿದ್ದರು. ಈ ನಾಯಿಯ ಒಂದು ಬಾಹ್ಯಾಕಾಶ ಪ್ರನೈಸ ಸಫಲನೈಗಿತ್ತು. ಈ ಪ್ರನೈಸದ ಕೆಲವು ದಿನಗಳ ನಂತರ ಏಪ್ರಿಲ್ 12 ರಂದು ಯೂರಿ ಗಗಾರಿನ್‌ ಲೆಡ್‌ಡೋಚಕಾ ಜೊತೆ ಬಾಹ್ಯಾಕಾಶ ಪ್ರವಾಸ ಮಾಡಿದ ಮೊದಲ ಮಾನವರಾದರು.

ವೆಟೆರಾಕ್‌ ಮತ್ತು ಯೂಕೋ

1966ರ ಫೆಬ್ರವರಿ 22 ರಂದು ಕಾಸ್ಮಾಸ್‌ 110ರಿಂದ ಬಾಹ್ಯಾಕಾಶ ಪ್ರವಾಸಕ್ಕೆ ಹೊರಟು ಅಲ್ಲಿ 22 ದಿನ ಕಳೆದು ಮಾರ್ಚ್‌ 16 ರಂದು ವಾಪಸ್‌ ಬಂದರು. ಈ ರೆಕಾರ್ಡ್‌ 1971ರಲ್ಲಿ ಮಾನವನಿಂದ ಸೋಯಜ್‌ 11ರ ಪ್ರವಾಸದಿಂದ ಮುರಿಯಲ್ಪಟ್ಟಿತು. ಆದರೆ ಇಂದಿಗೂ ಇದು ನಾಯಿಗಳಿಂದ ಮಾಡಲ್ಪಟ್ಟ ಅತ್ಯಂತ ದೀರ್ಘ ಬಾಹ್ಯಾಕಾಶ ಪ್ರವಾಸವಾಗಿದೆ.

ಲೈಕಾ, ವೆಟೆರಾಕ್‌ ಮತ್ತು ಯೂಗೋಲ್ ಯಯೋಕ್‌ರ ಸ್ಟ್ಯಾಂಪ್‌ ಬಿಡುಗಡೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೆಲ್ಕಾ ಮತ್ತು  ಸೆ್ಟ್ರ್‌ಕಾಗಳ ಪಾರ್ಥಿವ ಶರೀರಗಳನ್ನು ಇತರ ದೇಶಗಳ ಪ್ರವಾಸಕ್ಕೆ ಕರೆದೊಯ್ಯಲಾಯಿತು. ನಮ್ಮ ಪೀಳಿಗೆಯವರ ನಂತರ ಇವುಗಳ ಬಲಿದಾನ ನೆನೆಸಿಕೊಳ್ಳುವುದು ಇನ್ನಷ್ಟು ಕಡಿಮೆಯಾಗುತ್ತದೆ.

ಇಂದು ಬಾಹ್ಯಾಕಾಶದಲ್ಲಿ ಆ್ಯಸ್ಟ್ರೋನಾಟ್‌ಗಳು ಹೋಗುವುದು ಬರುವುದು ಸಾಮಾನ್ಯವಾಗಿದೆ. ಮುಂದೆ ಮನುಷ್ಯ ಇನ್ನೊಂದು ಗ್ರಹದ ಮೇಲೆ ತಲುಪಬಹುದು. ಆದರೆ ನಾವು ಅಂತರಿಕ್ಷದಲ್ಲಿ ಹೆಜ್ಜೆ ಇಡುವಲ್ಲಿ ಸಹಾಯ ಮಾಡಿದ ಪ್ರಾಣಿಗಳ ತ್ಯಾಗ, ಅಸಹನೀಯ ಯಾತನೆಯನ್ನು ಎಂದಿಗೂ ಮರೆಯಬಾರದು.

ಮೇನಕಾ ಗಾಂಧಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ