ನಕ್ಷತ್ರಗಳನ್ನು ನೋಡುವಾಗ ಮನುಷ್ಯ ಎಂದಾದರೂ ಬ್ರಹ್ಮಾಂಡದ ಲಕ್ಷಾಂತರ ಪ್ರಪಂಚಗಳಲ್ಲಿ ಯಾವುದಾದರೂ ಒಂದರ ಮೇಲೆ ತಲುಪುತ್ತಾನೆಯೇ ಎಂದು ವಿಚಾರ ಮಾಡಿ. ಚಂದ್ರನ ಮೇಲೆ ಕಾಲಿಟ್ಟ ಪ್ರಥಮ ಸಾಹಸ ಯಾತ್ರೆಯನ್ನು ಮತ್ತೊಮ್ಮೆ ಮಾಡಲಾದೀತೇ? ಎಂದಾದರೂ ಮನುಷ್ಯ ಮಂಗಳ ಗ್ರಹದ ಮೇಲೆ ತನ್ನ ಹೆಜ್ಜೆ ಇಡುತ್ತಾನೆಯೇ?

ಒಂದುವೇಳೆ ಎಂದಾದರೂ ಇನ್ನೊಂದು ಗ್ರಹದ ಮೇಲೆ ಹೋಗುವಂತಾದರೆ ವಿಜ್ಞಾನಿಗಳು ಈ ಕಾರ್ಯದಲ್ಲಿ ನಾಯಿಯ ಸಹಾಯವನ್ನು ನೆನೆಸಿಕೊಳ್ಳುತ್ತಾರೆ. ಅಂದಹಾಗೆ ರಷ್ಯಾದವರು ಮೊದಲ ಬಾರಿಗೆ ಅಂತರಿಕ್ಷಕ್ಕೆ ಹೋಗಲು ಪ್ರಯತ್ನಿಸಿದರು.

ಬಾಹ್ಯಾಕಾಶದ ಕಕ್ಷೆಗೆ ಕಳುಹಿಸಲಾದ ಪ್ರಾಣಿ ಒಂದು ನಾಯಿಯಾಗಿತ್ತು. ಸೈಬೀರಿಯನ್‌ ನಾಯಿ ಲೈಕಾವನ್ನು ಮಾಸ್ಕೋದ ಬೀದಿಯಿಂದ ಎತ್ತಿಕೊಂಡು 1957ರ ನವೆಂಬರ್‌ 3 ರಂದು `ಸ್ಪೂಟ್ನಿಕ್‌' ಹೆಸರಿನ ರಾಕೆಟ್‌ನಲ್ಲಿ ಕೂಡಿಸಲಾಯಿತು. ಆದರೆ ಅದು ಸುರಕ್ಷಿತವಾಗಿ ವಾಪಸ್‌ ಬರಲು ಯಾವುದೇ ವ್ಯವಸ್ಥೆ ಮಾಡಲಿಲ್ಲ. ರಾಕೆಟ್‌ನ ಒಳಗೆ ಹೆಚ್ಚುತ್ತಿದ್ದ ಉಷ್ಣತೆ ಮತ್ತು ಒತ್ತಡದಿಂದಾಗಿ ರಾಕೆಟ್‌ ಅಂತರಿಕ್ಷ ತಲುಪುವ ಮೊದಲೇ ಲೈಕಾ ಕೊನೆಯುಸಿರೆಳೆಯಿತು.

ರಾಕೆಟ್‌ನ ಸಣ್ಣ ಮೆಷಿನ್‌ನಲ್ಲಿ ಬಂಧಿಯಾಗಿದ್ದ ಲೈಕಾ ಸಾಯುವ ಮೊದಲಿನ 7 ಗಂಟೆಗಳ ಕಾಲ ಎಂತಹ ಭಯ ಹಾಗೂ ಒತ್ತಡ ಅನುಭವಿಸಿರಬೇಕು ಎಂಬುದನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಈ ಘಟನೆಯಾದ 40 ವರ್ಷಗಳ ನಂತರ 1998ರಲ್ಲಿ ಸೋವಿಯುತ್‌ನ ರಿಷ್ಠ ವಿಜ್ಞಾನಿ ಓಲೆಗ್‌ ಗೈಜೆಂಕೋ ಅದರ ಬಗ್ಗೆ ಕ್ಷಮೆ ಯಾಚಿಸಿದರು. ಲೈಕಾನನ್ನು ಬಾಹ್ಯಾಕಾಶಕ್ಕೆ ಕಳಿಸಿದ ನಿಯೋಗದಲ್ಲಿ ಗೈಜೆಂಕೋ ಸಹ ಭಾಗಿಯಾಗಿದ್ದರು.

ಅಮಾನವೀಯ ವರ್ತನೆ

50 ಮತ್ತು 60ರ ದಶಕದ ಮಧ್ಯೆ ಸೋವಿಯತ್‌ ವಿಜ್ಞಾನಿಗಳು, ಸುಮಾರು 5-7 ನಾಯಿಗಳನ್ನು ಬಾಹ್ಯಾಕಾಶಕ್ಕೆ ಕಳಿಸಿದ್ದರು. ಹೆಣ್ಣು ನಾಯಿಗಳಿಗೆ ಪ್ರಾಮುಖ್ಯತೆ ನೀಡಲಾಯಿತು. ಏಕೆಂದರೆ, ವಿಜ್ಞಾನಿಗಳ ಅಭಿಪ್ರಾಯದಂತೆ ಗಂಡು ನಾಯಿಗಳಿಗೆ ಹೋಲಿಸಿದರೆ ಹೆಣ್ಣು ನಾಯಿಗಳು ರಾಕೆಟ್‌ ಒಳಗೆ ಒತ್ತಡ ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಈ ಹೆಣ್ಣು ನಾಯಿಗಳನ್ನು ಟ್ರೇನಿಂಗ್‌ನಲ್ಲಿ 15-20 ದಿನಗಳವರೆಗೆ ಸಣ್ಣ ಬಾಕ್ಸ್ ಗಳಲ್ಲಿ ಮುಚ್ಚಿಡುತ್ತಿದ್ದರು. ಅವುಗಳನ್ನು ಬಾಹ್ಯಾಕಾಶಕ್ಕಾಗಿ ಆ್ಯಸ್ಟ್ರೋನಾಟ್‌ ಸೂಟ್‌ನಲ್ಲಿ ವಿಶೇಷ ರೂಪದಿಂದ ಸಿದ್ಧಪಡಿಸಲಾಯಿತು. ಬಾಕ್ಸ್ ಗಳಲ್ಲಿ ಮುಚ್ಚಿದ ನಾಯಿಗಳನ್ನು ಕೃತಕ ರಾಕೆಟ್‌ ಮೆಷಿನ್‌ನಲ್ಲಿ ಇಡಲಾಯಿತು. ಅದು ನಿಜವಾದ ರಾಕೆಟ್‌ನಂತೆ ಕೆಲಸ ಮಾಡುತ್ತಿತ್ತು. ನಿಜವಾದ ರಾಕೆಟ್‌ನ ಲಾಂಚ್‌ನ ಸಮಯದಲ್ಲಿ ಕೊಡಲಾದ ವೇಗವನ್ನು ಕೊಡಲಾಗಿತ್ತು. ಒಟ್ಟಿನಲ್ಲಿ ಪಂಜರದಂತಹ ಮುಚ್ಚಿದ ಬಾಕ್ಸ್ ಗಳಲ್ಲಿನ ನಾಯಿಗಳನ್ನು ಬಾಹ್ಯಾಕಾಶಕ್ಕೆ ಕಳಿಸಲು ಪೂರ್ಣ ತಯಾರಿ ನಡೆಸಲಾಯಿತು. ಈ ಟ್ರೇನಿಂಗ್‌ನಲ್ಲಿ ಆ ನಾಯಿಗಳು ಎಂತಹ ಯಾತನೆ ಅನುಭವಿಸಿರಬೇಕೆಂದು ಯೋಚಿಸಿದಾಗ ಮೈಯಲ್ಲಿ ನಡುಕವುಂಟಾಗುತ್ತದೆ.

ಆ ನಾಯಿಗಳಲ್ಲಿ ಕೆಲವು ಟ್ರೇನಿಂಗ್‌ ಹಂತದಲ್ಲಿ ಸತ್ತಿರುತ್ತವೆ. ಬಹುಶಃ ಸೋವಿಯತ್‌ ವಿಜ್ಞಾನಿಗಳು ಈ ವಿಷಯ ಬಹಿರಂಗ ಮಾಡಲಿಲ್ಲ. ಏಕೆಂದರೆ ಲೈಕಾ ಸತ್ತಿದ್ದು ಜನರಲ್ಲಿ ಸಂಚಲನ ಮೂಡಿಸಿತ್ತು. ಅವುಗಳಲ್ಲಿ ಕೆಲವು ರಾಕೆಟ್‌ನ ಟೆಕ್ನಿಕಲ್ ಹಾಳಾಗಿದ್ದರಿಂದ ಸತ್ತುಹೋದವು. ಉಳಿದ ನಾಯಿಗಳನ್ನು ಮತ್ತೊಮ್ಮೆ ಉಪಯೋಗಿಸಿ ಕೊಳ್ಳಲಾಯಿತು. ಅವುಗಳ ಆಹಾರದಲ್ಲಿ ಪ್ರೋಟೀನ್‌ ಜೆಲ್ಲಿಯನ್ನು ಸೇರಿಸಲಾಯಿತು. ಅದರಿಂದಾಗಿ ಶೇ.60ರಷ್ಟು ನಾಯಿಗಳು ಮಲಬದ್ಧತೆ ಮತ್ತು ಪಿತ್ತಕೋಶದಲ್ಲಿ ಕಲ್ಲು ಇತ್ಯಾದಿ ತೊಂದರೆಗಳನ್ನು ಅನುಭವಿಸಬೇಕಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ