ಸೆಕ್ಸ್, ಮಹಿಳೆ ಹಾಗೂ ಮೋಸ
ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗಳ ಪ್ರೌಢ ಹಾಗೂ ವಯಸ್ಸಾದ ನ್ಯಾಯಾಧೀಶರು ಎಷ್ಟೋ ಬಾರಿ ಇಂತಹ ತೀರ್ಪು ಕೊಡುತ್ತಿದ್ದಾರೆ. ಅವರ ವಯಸ್ಸಿನವರು ಅಂತಹ ತೀರ್ಪು ಕೊಡಲಾಗುವುದಿಲ್ಲ. ಅವರು ವ್ಯವಹಾರಿಕ ಮತ್ತು ವ್ಯಕ್ತಿಗತ ಸ್ವಾತಂತ್ರ್ಯದ ಸರ್ಕಾರ ಮತ್ತು ಕಂದಾಚಾರಿಗಳ ಮಧ್ಯೆ ಕಲ್ಲಿನ ಗೋಡೆಯಾಗಿ ನಿಲ್ಲುವುದನ್ನು ಕಂಡಾಗ ಸುಖದಾಯಕ ಆಶ್ಚರ್ಯ ಉಂಟಾಗುತ್ತದೆ.
ಮುಂಬೈ ಹೈಕೋರ್ಟ್‌ನ ನ್ಯಾಯಾಧೀಶೆ ಮೃದುಲಾ ಭಟ್ನಾಗರ್‌ರವರು ಒಂದು ತೀರ್ಪಿನಲ್ಲಿ ಹೀಗೆ ಹೇಳಿದ್ದಾರೆ. ಒಬ್ಬ ಮಹಿಳೆಗೆ ಸೆಕ್ಸ್ ನ ಹಕ್ಕು ಇರುವಾಗ, ತಾಯಿಯಾಗಲು ಅಥವಾ ಆಗದಿರಲು ಹಕ್ಕು ಇರುವಾಗ, ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕು ಇರುವಾಗ ವಿವಾಹಪೂರ್ವ ಸೆಕ್ಸ್ ಹೊಂದಲೂ ಸಹ ಹಕ್ಕಿದೆ. ಆದರೆ ಈ ಹಕ್ಕಿನ ಆಶ್ರಯದಲ್ಲಿ ಮೋಸದಿಂದ ಸಂಬಂಧ ಬೆಳೆಸುವ ಅಥವಾ ಬಲಾತ್ಕಾರದ ಆರೋಪ ಹೊರಿಸುವ ಹಕ್ಕಿಲ್ಲ. ಅವರೆದುರಿಗೆ ಒಬ್ಬ ಯುವಕನ ಕೇಸಿದೆ. ಆ ಯುವಕ ಒಬ್ಬ ಹುಡುಗಿಯೊಂದಿಗೆ ಹಲವಾರು ವರ್ಷಗಳ ಕಾಲ ಸೆಕ್ಸ್ ಸಂಬಂಧ ಇಟ್ಟುಕೊಂಡಿದ್ದ. ಆದರೆ ಅವಳನ್ನು ಮದುವೆ ಮಾಡಿಕೊಳ್ಳಲಿಲ್ಲ.
ತನ್ನನ್ನು ಮದುವೆ ಮಾಡಿಕೊಳ್ಳುತ್ತೇನೆಂದು ಮಾತು ಕೊಟ್ಟು ಅವನು ಸೆಕ್ಸ್ ಸಂಬಂಧ ಮಾಡಿದ್ದಾನೆ. ಅದು ಮೋಸದಿಂದ ನಡೆಸಿದ್ದಾಗಿದೆ. ಅದು ಬಲಾತ್ಕಾರ ಎಂದು ಹುಡುಗಿ ದೂರು ನೀಡಿದ್ದಾಳೆ. ಆ ಹುಡುಗನ ಮೇಲೆ ಪೊಲೀಸರು ಮೊಕದ್ದಮೆ ಹೂಡಿದರು. ಅದು ಹೈಕೋರ್ಟ್‌ಗೆ ಬಂದಿತ್ತು. ಸುಶಿಕ್ಷಿತಳಾದ ಈ ಹುಡುಗಿಗೆ ತಾನೇನು ಮಾಡುತ್ತಿದ್ದೇನೆಂದು ಅರಿವಿತ್ತು. ಅದು ಅವಳ ಶರೀರದ ಅವಶ್ಯಕತೆಯಾಗಿತ್ತು. ಅದಕ್ಕಾಗಿ ಅವಳು ಹುಡುಗನನ್ನು ದೋಷಿಯನ್ನಾಗಿ ಆರೋಪಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿತು.
ಸೆಕ್ಸ್ ಒಂದು ಪ್ರಾಕೃತಿಕ ಪ್ರಕ್ರಿಯೆಯಾಗಿದೆ. ಪ್ರತಿಯೊಬ್ಬರ ಶರೀರ ಇದನ್ನು ಅಪೇಕ್ಷಿಸುತ್ತದೆ. ಅವಿವಾಹಿತರು ಸೆಕ್ಸ್ ಹೊಂದುವುದನ್ನು ಅನೈತಿಕ ಅಥವಾ ಬಲಾತ್ಕಾರ ಎಂದು ತಿಳಿಯಲಾಗುವುದಿಲ್ಲ. ಸತತವಾಗಿ ನಡೆದ ಸಂಬಂಧ ಪರಸ್ಪರ ಒಪ್ಪಿಗೆಯ ಆಧಾರದಲ್ಲೇ ನಡೆಯುತ್ತದೆ. ಅದನ್ನು ತಪ್ಪೆನ್ನುವುದು ಖಂಡಿತಾ ಸರಿಯಲ್ಲ.
ಸೆಕ್ಸ್ ಸಂಬಂಧಗಳಲ್ಲಿ ಮಾಡುವ ಸಾಮಾಜಿಕ ತ್ಯಾಗಗಳು ವಾಸ್ತವದಲ್ಲಿ ಬಹಳ ಒತ್ತಡ ಉಂಟುಮಾಡುತ್ತವೆ. ಗರ್ಭಧಾರಣೆಯ ಸೂಚನೆ ಸಿಗುತ್ತಲೇ ಸಮಾಜ ನೈತಿಕತೆಯ ನಿಯಮ ಮತ್ತು ಕಾನೂನನ್ನು ಬದಲಿಸಲೇಬೇಕು. ಅಡಲ್ಟ್ರಿ ಅಂದರೆ ವಿವಾಹಬಾಹಿರ ಸಂಬಂಧಗಳನ್ನು ತಲಾಕ್‌ನ ಆಧಾರದಲ್ಲಿ ಅಥವಾ ಅಪರಾಧದಿಂದ ತೆಗೆಯಬೇಕು.
ನ್ಯಾಯಾಧೀಶೆ ಮೃದುಲಾ ಭಟ್ನಾಗರ್, ಸೆಕ್ಸ್ ಶರೀರದ ಅವಶ್ಯಕತೆಯಾಗಿದೆ. ಅವಿವಾಹಿತ ಮಹಿಳೆಯರಷ್ಟೇ ಅಲ್ಲ, ವಿವಾಹಿತೆಯರಿಗೂ ಇದು ಅನ್ವಯಿಸುತ್ತದೆ. ಪರಪುರುಷ ಅಥವಾ ಪರಸ್ತ್ರೀಯೊಂದಿಗೆ ಸಂಗಾತಿ ಸಂಬಂಧ ಇಟ್ಟುಕೊಂಡರೆ ವಿವಾಹದ ಸದೃಢತೆಗೆ ಹಾನಿಯುಂಟಾಗುತ್ತದೆ. ಆದರೆ ಇದು ಅನೈತಿಕವಲ್ಲ ಮತ್ತು ಸಾಮಾಜಿಕ ಪತನದ ಗುರುತೂ ಅಲ್ಲ ಎನ್ನುತ್ತಾರೆ.
ಒಂದುವೇಳೆ ವಿವಾಹಿತ ಮಹಿಳೆ ಅಥವಾ ಪುರುಷರ ಸಂಬಂಧ ಬೇರೆಲ್ಲಿಯಾದರೂ ಉಂಟಾದರೆ ಅದು ಸಾಮಾಜಿಕ ಅಥವಾ ಕಾನೂನಿನಂತೆ ಅಪರಾಧವಲ್ಲ. ಆದರೆ ಹಾಳಾಗುವ ಸ್ಥಿತಿಯಂತೂ ಖಂಡಿತಾ ಉಂಟಾಗುತ್ತದೆ. ಆದರೆ ಕುಡುಕರು, ಜಗಳಗಂಟಿಯರು, ದುಂದುವೆಚ್ಚ ಮಾಡುವ, ಸೋಮಾರಿ ಹೆಣ್ಣುಗಳಿಂದಲೂ ಮನೆಗಳು ಒಡೆಯುತ್ತವೆ. ಮತ್ತೆ ಹೊರಗಿನ ಸೆಕ್ಸ್ ಸಂಬಂಧಕ್ಕೆ ಏಕೆ ದೋಷ ಹೊರಿಸಬೇಕು?