ಅಕ್ಕಿಯನ್ನು ನೆನೆಹಾಕಿ ಅದನ್ನು ಹದವಾಗಿ ರುಬ್ಬಿಕೊಂಡು ಅದರಿಂದ ಚಿತ್ರಕಲೆ ರಚಿಸಬಹುದು ಎನ್ನುವ ಅಪರೂಪದ ಚಿತ್ರ ರಚನೆಯ ಬಗ್ಗೆ ನೀವು ಕೇಳಿದ್ದೀರಾ? ಮೈಸೂರಿನಲ್ಲಿ ಅಂಥ ಕಲಾವಿದರು ಇದ್ದಾರೆ ಎನ್ನುವುದು ಮತ್ತೊಂದು ಆಶ್ಚರ್ಯದ ಸಂಗತಿ.ಎಲೆಮರೆಯ ಕಾಯಿಯಂತೆ ತಾನಾಯಿತು ತನ್ನ ಪಾಡಾಯಿತು ಎಂಬಂತೆ ಈ ವಿಶೇಷವಾದ ಚಿತ್ರಕಲೆಯಲ್ಲಿ ಪಳಗಿರುವ ಅನಸೂಯಾ ರಂಗಸ್ವಾಮಿ ಮೈಸೂರಿನ ಸಿದ್ಧಾರ್ಥ ನಗರದ ನಿವಾಸಿ. ಕಳೆದ ಹತ್ತು ವರ್ಷಗಳಿಗೂ ಹಿಂದೆ ಈ ಕಲೆಯನ್ನು ಅಭ್ಯಾಸ ಮಾಡಿಕೊಂಡು ಬಂದಿದ್ದು ಇದೀಗ ಅದನ್ನು ಆಗೊಮ್ಮೆ ಈಗೊಮ್ಮೆ ಪ್ರದರ್ಶನ ಹಾಗೂ ಮಾರಾಟ ಮಾಡುತ್ತಾ ಬಂದಿದ್ದಾರೆ.

ಬಾಲ್ಯದಿಂದಲೇ ಈ ಕಲೆಯ ಕಡೆಗೆ ಹೆಚ್ಚು ಆಕರ್ಷಿತರಾದ ಅನಸೂಯಾ ದಾವಣಗೆರೆಯಲ್ಲಿ ಈ ಕಲೆಯ ಬಗ್ಗೆ ವಿವರವಾಗಿ ಅಭ್ಯಾಸ ಮಾಡಲು ಆರಂಭಿಸಿದರಂತೆ. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಅದನ್ನು ಗಂಭೀರವಾಗಿ ಅಭ್ಯಾಸ ಮಾಡಿಕೊಂಡು ನೂರಾರು ಚಿತ್ರಗಳನ್ನು ರಚಿಸಿದ್ದಾರೆ.

ಇದನ್ನು `ವಾರ್ಲಿ' ಚಿತ್ರಕಲೆ ಎಂದು ಕರೆಯುತ್ತಾರೆ. ಇದು ಹೆಚ್ಚಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಭಾಗಗಳಲ್ಲಿ ಕಂಡುಬರುತ್ತದೆ.  ಬಹುಶಃ ಮೈಸೂರು ಪ್ರಾಂತ್ಯದಲ್ಲೇ ಇದನ್ನು ಅಭ್ಯಾಸ ಮಾಡಿದ ಅಥವಾ ರಚಿಸಿದ ಕಲಾವಿದರು ಬಹಳ ವಿರಳ. ಇತ್ತೀಚಿನ ದಿನಗಳಲ್ಲಿ `ವಾರ್ಲಿ' ಕಲಾವಿದೆ ಎಂದರೆ ಅನುಸೂಯಾ ಒಬ್ಬರೇ ಎನ್ನಬಹುದು.

ಹಿಂದೆ ಆದಿವಾಸಿಗಳು ಸಗಣಿ, ಕೆಮ್ಮಣ್ಣು ಹಾಗೂ ಅಂಟು ಬೆರೆಸಿ ಅದನ್ನು ಗೋಡೆಗೆ ಬಳಿಯುತ್ತಿದ್ದರು. ನಂತರ ಅದನ್ನು ಅಕ್ಕಿ ಹಿಟ್ಟಿನೊಂದಿಗೆ ಸೇರಿಸಿ ಬಿದಿರಿನ ಕಡ್ಡಿಗಳನ್ನು ಕುಂಚವಾಗಿ ಬಳಸಿ ಚಿತ್ರ ರಚಿಸುತ್ತಿದ್ದರಂತೆ. ತಮ್ಮ ನಿತ್ಯ ಬದುಕಿನ ಚಿತ್ರಣವನ್ನೇ ಅವರು ಹೆಚ್ಚಾಗಿ ಚಿತ್ರಿಸಿದ್ದು, ಚಿತ್ರಗಳು ಬಹಳ ಅರ್ಥಗರ್ಭಿತವಾಗಿರುತ್ತವೆ. ಆಧುನಿಕ ಚಿತ್ರಕಲೆಗಳಂತೆ ಏನನ್ನು ಹೇಳುತ್ತವೆ ಎನ್ನುವ ಗೊಂದಲ ಇದರಲ್ಲಿ ಇರುವುದಿಲ್ಲ. ಮಾನವನ ಜೀವನ, ಪ್ರಾಣಿ ಪಕ್ಷಿಗಳು, ಕಾಡು, ಮರ ಇವುಗಳೇ ಅವರ ಚಿತ್ರ ವಿಚಾರಗಳಾಗಿದ್ದರಿಂದ ಇಂದಿಗೂ ಈ `ವಾರ್ಲಿ' ಕಲೆಯಲ್ಲಿ ಅವುಗಳನ್ನೇ ಚಿತ್ರಿಸಲಾಗುತ್ತಿದೆ.

`ವಾರ್ಲಿ' ಜೊತೆಗೆ `ಹಸೆ'ಯ ಚಿತ್ರವನ್ನೂ ಅನಸೂಯಾ ಅದ್ಭುತವಾಗಿ ಚಿತ್ರಿಸಿದ್ದಾರೆ. ಈ ಚಿತ್ರಕಲೆ ಕೇವಲ ಅಕ್ಕಿ ಹಿಟ್ಟಿನಿಂದ ಮಾತ್ರ ರಚಿಸಿರುವುದರಿಂದ ಇಂಥ ಚಿತ್ರಗಳ ಆಯುಷ್ಯ ಕೇವಲ ಮೂರು ವರ್ಷ. ಆದಿವಾಸಿಗಳು ಈ `ಹಸೆ' ರಚಿಸಿ ಅದನ್ನೇ ಅವರು ದೈವವೆಂದು ಪೂಜಿಸುವ ಪ್ರತೀತಿ ಇದೆ. ಇದರ ಮುಂದೆಯೇ ಅವರು ವಿವಾಹ ನಡೆಸುತ್ತಾರಂತೆ.

`ವಾರ್ಲಿ' ಕಲೆಯಲ್ಲಿ ಹೆಚ್ಚಾಗಿ ಆಯತ, ಚೌಕ, ವೃತ್ತ ಹಾಗೂ ತ್ರಿಕೋನ ಆಕಾರಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಮನುಷ್ಯ ಮತ್ತು ಪ್ರಾಣಿಗಳನ್ನು ಅದೇ ಆಕಾರದಲ್ಲಿ ಚಿತ್ರಿಸಲಾಗುತ್ತದೆ ಎನ್ನುತ್ತಾರೆ.

ಬಹುರೂಪಿಗೆ ಬರುವ ಕಲಾರಸಿಕರಿಗೆ `ವಾರ್ಲಿ' ವಿಶೇಷ ಆಕರ್ಷಣೆಯಾಗಿದೆ. ಈ ಕಲೆಯನ್ನು ಅವರು ಜೀನ್ಸ್, ಚೂಡಿದಾರ್‌ ಟಾಪ್, ಜುಬ್ಬಾ ಹಾಗೂ ಅಂಗಿಯ ಮೇಲೂ ಬಣ್ಣ ಬಳಸಿ ಚಿತ್ರಿಸಿರುವುದಕ್ಕೆ ಬೇಡಿಕೆಯೂ ಇತ್ತು. ಅನಸೂಯಾರ ಪತಿ ಡಾ. ಆರ್. ರಂಗಸ್ವಾಮಿ ನಂಜನಗೂಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಪ್ರಾಧ್ಯಾಪಕರಾಗಿದ್ದು, ಇವರಿಗೆ ಸಂಜನಾ ಹಾಗೂ ಜಯಂತ್‌ ಎಂಬ ಇಬ್ಬರು ಮಕ್ಕಳಿದ್ದಾರೆ. ಸಿಕ್ಕಿದ್ದ ಸರ್ಕಾರಿ ಕೆಲಸವನ್ನೂ ತೊರೆದು ಸಂಸಾರ ಜಂಜಾಟದ ನಡುವೆಯೂ ಅಪರೂಪದ ಕಲೆಯನ್ನು ಪೋಷಿಸುತ್ತಿರುವ ಅನಸೂಯಾರ ಚಿತ್ರಗಳು ವಿದೇಶಗಳಲ್ಲೂ ಮಾರಾಟವಾಗಿದ್ದು ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ