ಭಾರತದ ಮಹಿಳೆಯರು ವಿಶ್ವ ಮಟ್ಟದ ಕೇರಂ ಆಟದಲ್ಲಿ ದೊಡ್ಡ ಸಾಧನೆ ಮಾಡಿರುವುದನ್ನು ಕೇಂದ್ರ ಹಾಗೂ ಯಾವುದೇ ರಾಜ್ಯ ಸರ್ಕಾರಗಳು ಗುರುತಿಸಿ ಅವರನ್ನು ಪ್ರೋತ್ಸಾಹಿಸದಿರುವುದು ನಿಜಕ್ಕೂ ಬೇಸರದ ಸಂಗತಿಯೇ ಹೌದು. ಆದರೂ ಅನೇಕ ಸಂಘ ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳು ಈ ಕ್ರೀಡಾಪಟುಗಳನ್ನು ಗುರುತಿಸಿರುವುದು ಹೆಮ್ಮೆಯ ವಿಷಯ. ಈ ನಿಟ್ಟಿನಲ್ಲಿ ಎಲ್ಐಸಿ ಆಫ್ ಇಂಡಿಯಾ ಕೂಡ ಒಂದು. ಈ ಸಂಸ್ಥೆಯಲ್ಲಿ ಅಧಿಕಾರಿಗಳಾಗಿರುವ ಪರಿಣಿ ನಿರ್ಮಲಾ ಹಾಗೂ ಎಸ್‌. ಅಪೂರ್ವಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ಇವರಿಬ್ಬರೂ ಹೈದರಾಬಾದ್‌ ನಗರದವರಾಗಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ವಿಶ್ವ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ದಕ್ಷಿಣ ಭಾರತದ ಕೇರಂ ಆಟಗಾರರು ಇವರಾಗಿದ್ದಾರೆ.

ನಿರ್ಮಲಾ ತಮ್ಮ 9ನೇ ವಯಸ್ಸಿನಿಂದಲೂ ಕೇರಂ ಆಡುತ್ತಾ ಬಂದಿದ್ದಾರೆ. ಅಂದು ಸಬ್‌ ಜೂನಿಯರ್‌ ವಿಭಾಗದಲ್ಲಿ ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದರು.

ನಂತರ ಎಲ್ಐಸಿ ಆಫ್‌ ಇಂಡಿಯಾ ಸಂಸ್ಥೆಯಲ್ಲಿ ನೌಕರಿ ಆರಂಭಿಸಿ, ಆನಂತರ ಅಂತಾರಾಷ್ಟ್ರೀಯ ಮಟ್ಟದಲ್ಲೂ ನಾಲ್ಕು ಬಾರಿ ರನ್ನರ್‌ ಅಪ್‌ ಆಗಿ ವಿಶ್ವ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ.

ನಿರ್ಮಲಾರ ತಂದೆ ಬಾಲಕೃಷ್ಣ ಟೆನ್ನಿಸ್‌ ಹಾಗೂ ಫುಟ್‌ಬಾಲ್ ‌ಆಟಗಾರರಾಗಿದ್ದು ಮಗಳು ಕೇರಂ ಕ್ರೀಡೆಯಲ್ಲಿ ಮುಂದುವರಿಯಲು ಪ್ರೋತ್ಸಾಹ ನೀಡಿದ್ದಾರೆ. ನಾಲ್ಕು ವರ್ಷಕ್ಕೆ ಒಮ್ಮೆ ನಡೆಯುವ ಸಾರ್ಕ್‌ ಹಾಗೂ ಏಷ್ಯನ್‌ ಕೇರಂ ಚಾಂಪಿಯನ್‌ಶಿಪ್‌ಕ್ರೀಡಾಕೂಟಗಳಲ್ಲಿ ನಿರ್ಮಲಾ ನಾಲ್ಕು ಬಾರಿ ಎರಡನೇ ಸ್ಥಾನ ಪಡೆದಿದ್ದು, ಡಬಲ್ಸ್ ನಲ್ಲಿ ನಾಲ್ಕು ಬಾರಿ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಷ್ಟ್ರ ಮಟ್ಟದಲ್ಲಿ 6 ಬಾರಿ ಪ್ರಥಮ ಸ್ಥಾನ ಪಡೆದು ದಾಖಿ ನಿರ್ಮಿಸಿದ್ದಾರೆ.

ಒಂದು ಬೋರ್ಡ್‌ ಆಟವನ್ನು ಕೇವಲ 4-5 ನಿಮಿಷಗಳಲ್ಲಿ ಆಡಿ ಮುಗಿಸುವ ಸಾಮರ್ಥ್ಯ ಹೊಂದಿರುವ ಇವರು 23 ಬಾರಿ ಅಖಿಲ ಭಾರತ ಎಲ್ಐಸಿ ಕೇರಂ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ, 17 ಬಾರಿ ಚಾಂಪಿಯನ್‌ ಹಾಗೂ 6 ಬಾರಿ ರನ್ನರ್‌ ಅಪ್‌ ಆಗಿದ್ದಾರೆ.

ಅದೇ ತರಹ ಅಪೂರ್ವಾ 2 ಬಾರಿ ವಿಶ್ವ ಚಾಂಪಿಯನ್‌ ಆಗಿದ್ದಾರೆ.

ನಾನು ಕೇರಂ ಕ್ರೀಡೆಯಲ್ಲಿ ಈ ಹಂತಕ್ಕೆ ಬರಲು ನಿರ್ಮಲಾ ಅವರೇ ಸ್ಛೂರ್ತಿ ಎಂದು ಮಾತಿಗೆ ಆರಂಭಿಸಿದ ಅಪೂರ್ವಾ, 2 ಬಾರಿ ವಿಶ್ವ ಚಾಂಪಿಯನ್‌ಶಿಪ್‌ ಪುರಸ್ಕಾರ ಪಡೆದುಕೊಂಡದ್ದನ್ನು ಖುಷಿಯಾಗಿ ಹಂಚಿಕೊಳ್ಳುತ್ತಾರೆ.

ಇವರಿಗೆ ತಂದೆ ಸಾಯಿಕುಮಾರ್‌ ಅವರೇ ಕೋಚ್‌. ತಮ್ಮ ಎಂಟನೇ ವಯಸ್ಸಿನಲ್ಲಿ ಟೈವ್‌ಪಾಸ್‌ಗಾಗಿ ಕೇರಂ ಆಡಲು ಪ್ರಾರಂಭಿಸಿ, ಸಬ್‌ ಜೂನಿಯರ್ಸ್ ವಿಭಾಗದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನಗಳನ್ನು ಪಡೆದ ಅಪೂರ್ವಾ ಭಾರತಕ್ಕೆ 2 ಬಾರಿ ವಿಶ್ವ ಕಪ್‌ ತಂದುಕೊಟ್ಟಿದ್ದಾರೆ.

ದಿನಕ್ಕೆ ಕನಿಷ್ಠ ಎರಡು ಗಂಟೆ ಆದರೂ ಅಭ್ಯಾಸ ಮಾಡುವ ಇವರು ಒಂದು ಬೋರ್ಡ್‌ನ್ನು 3-5 ನಿಮಿಷಗಳಲ್ಲಿ ಮುಗಿಸುತ್ತಾರಂತೆ. ಅಪೂರ್ವಾ ಅವರ ಪತಿ ಕಿಶೋರ್‌ ರಾಷ್ಟ್ರಮಟ್ಟದ ಬ್ಯಾಡ್‌ಮಿಂಟನ್‌ ಆಟಗಾರ. ಅವರೂ ಕೂಡ ಎಲ್ಐಸಿ ಅಧಿಕಾರಿ ಆಗಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ