ರಾಜೇಶ್‌ : ನನ್ನ ಹೆಂಡತಿ ಎಂಥ ಸುಳ್ಳಿ ಗೊತ್ತಾ?

ಮಹೇಶ್‌ : ಎಂಥ ಸುಳ್ಳು ಹೇಳಿದಳು?

ರಾಜೇಶ್‌ : ಮೊನ್ನೆ ದಿನವಿಡೀ ತನ್ನ ತಂಗಿಯ ಜೊತೆ ಇದ್ದೆ ಅಂತ ಹೇಳ್ತಾಳೆ.

ಮಹೇಶ್‌ : ಇದ್ದಿರಬಹುದು, ಇದರಲ್ಲಿ ಸುಳ್ಳೇನು ಬಂತು?

ರಾಜೇಶ್‌ : ಏ.... ಅವಳ ತಂಗಿ ಜೊತೆ ಮೊನ್ನೆ ದಿನವಿಡೀ ಇದ್ದವನು ನಾನೇ!

 

ಕಮಲಮ್ಮ : ನಿಜಕ್ಕೂ ಕಾಲ ಕೆಟ್ಟೋಯ್ತು ಬಿಡ್ರಿ.

ವಿಮಲಮ್ಮ : ಯಾಕ್ರಿ ಹಾಗಂತೀರಿ?

ಕಮಲಮ್ಮ : ಅಲ್ಲ, ಮುಂಚೆ ತರಹ ಈ ಗಂಡಂದಿರು ಪೊರಕೆ ಕಂಡರೆ ಹೆದರೋದೇ ಇಲ್ವಲ್ಲಾ......?

ವಿಮಲಮ್ಮ : ಅದಕ್ಕೆ ಕಾರಣವೇನಿರಬಹುದು?

ಕಮಲಮ್ಮ : ಇನ್ಯಾರು? `ಆಪ್‌' ಪಕ್ಷದವರು ತಮ್ಮ ಚಿಹ್ನೆಯಾಗಿ ಪೊರಕೆ ಹಿಡಿದು ಗುಡಿಸಿದ್ದೇ ಬಂತು, ಈ ಗಂಡಂದಿರೆಲ್ಲ ಬಹಳ ಹೆಚ್ಕೊಂಡು ಬಿಟ್ಟಿದ್ದಾರೆ. ನಮ್ಮ ಮಹಿಳಾ ಸಂಘದ ಸದಸ್ಯರೆಲ್ಲ ಕೂಡಿ, ಕೇಜ್ರಿವಾಲ್‌ರ ಮನೆ ಮುಂದೆ ಧರಣಿ ಕುಳಿತು ಬುದ್ಧಿ ಕಲಿಸಬೇಕು!

 

ಪತ್ನಿ : ರೀ.... ನಂಗ್ಯಾಕೋ ಕೆಟ್ಟ ಕನಸು ಬಂದು ಹೆದರಿಕೆ ಆಗ್ತಿದೆ, ನೀವು ಅಷ್ಟು ದೂರ ಗೋಡೆ ಕಡೆ ತಿರುಗಿಕೊಂಡು ಮಲಗುವ ಬದಲು ನನ್ನ ಮುಖ ನೋಡುತ್ತಾ ಈ ಕಡೆ ತಿರುಗಿ ಮಲಗಿ.

ಪತಿ : ಹ್ಞೂಂ..... ಯಾಕ್‌ ಹೇಳ್ಬಿಡು, ಆಮೇಲೆ ಇಡೀ ರಾತ್ರಿ ನಾನು ನಿನ್ನ ಮುಖ ನೋಡುತ್ತಾ ಭಯದಲ್ಲಿ ನಡುಗಿ ಸಾಯಲಿ ಅಂತಾನಾ?

 

ಗುಂಡ ಸಂದರ್ಶನಕ್ಕಾಗಿ ಒಂದು ಖಾಸಗಿ ಸಂಸ್ಥೆಗೆ ಹೋಗಿದ್ದ.

ಮ್ಯಾನೇಜರ್‌ : ಏನ್ರಿ ನಿಮಗೆ ಮದುವೆ ಆಗಿದ್ಯಾ?

ಗುಂಡ : ಇಲ್ಲ ಸಾರ್‌, ನಾನಿನ್ನೂ ಅವಿವಾಹಿತ.

ಮ್ಯಾನೇಜರ್‌ : ಹಾಗಿದ್ರೆ ಖಂಡಿತಾ ನಿಮಗೆ ಇಲ್ಲಿ ಕೆಲಸ ಇಲ್ಲ.

ಗುಂಡ : ಅದೇನು ಸಾರ್‌? ನಿಮ್ಮ ಆಫೀಸ್‌ನಲ್ಲಿ ಮದುವೆ ಆಗದವರಿಗೆ ಕೆಲಸ ಕೊಡೋದಿಲ್ವೇ?

ಮ್ಯಾನೇಜರ್‌ : ಇಲ್ಲ.... ಮದುವೆಯಾದ ಗಂಡಸರು ಎಂದೂ ರಜೆ ಹಾಕೋಲ್ಲ, ಸಂಜೆ ಬೇಗ ಮನೆಗೆ ಹೋಗಬೇಕು ಅಂತ ಅರ್ಜೆಂಟ್‌ ಮಾಡೋಲ್ಲ. ಮನೆಗಿಂತ ಆಫೀಸ್‌ ನೆಮ್ಮದಿಯ ಜಾಗ ಅಂತ ಅವರಿಗೆ ಮನವರಿಕೆ ಆಗಿರುತ್ತೆ.

 

ಸೇಲ್ಸ್ ಮ್ಯಾನ್‌ : ಸಾರ್‌, ಜಿರಲೆಗಳಿಗಾಗಿ ವಿಶೇಷ ಪೌಡರ್‌ ಬಂದಿದಿ. ತಗೊಂತೀರಾ?

ಗ್ರಾಹಕ : ಬೇಡಪ್ಪ ಬೇಡ! ನಮಗೆ ಅವುಗಳ ಮೇಲೆ ಅಂತಹ ವಿಶೇಷ ಪ್ರೀತಿ ಏನೂ ಇಲ್ಲ. ಇವತ್ತು ಪೌಡರ್‌ ಹಾಕಿದರೆ ಅವು ನಾಳೆ ಡಿಯೋಡರೆಂಟ್‌ ಬೇಕೆಂದು ಕೇಳುತ್ತವೆ.

 

ಉಮೇಶ್‌ ಬಹಳ ಹೊತ್ತಿನಿಂದ ಪಬ್ಲಿಕ್‌ ಟೆಲಿಫೋನ್‌ ಬೂತ್‌ ಹೊರಗೆ ನಿಂತು ತನ್ನ ಸರದಿ ಯಾವಾಗ ಬರುವುದೋ ಎಂದು ಕಾಯುತ್ತಲೇ ಇದ್ದ. ಒಳಗೆ ಹೋಗಿದ್ದ ಒಬ್ಬ ವ್ಯಕ್ತಿ ಬಹಳ ಹೊತ್ತಿನಿಂದ ಕೈಯಲ್ಲಿ ರಿಸೀವರ್‌ ಹಿಡಿದು ಹಾಗೇ ನಿಂತಿದ್ದ.

ಸ್ವಲ್ಪ ಹೊತ್ತಿನ ನಂತರ ಹೊರಗೇ ಕಾದು ಸಾಕಾದ ಉಮೇಶ್‌ ಒಳಗೆ ಹೋಗಿ ಆ ವ್ಯಕ್ತಿಗೆ ಹೇಳಿದ, ``ರೀ ಸ್ವಾಮಿ.... ಅರ್ಧ ಗಂಟೆಯಿಂದ ಕೈಲಿ ರಿಸೀವರ್‌ ಹಿಡಿದು ಹಾಗೆ ನಿಂತಿದ್ದೀರಲ್ಲ... ಒಂದು ಮಾತಾದ್ರೂ ಆಡುವುದು ಬೇಡವೇ.... ಹೀಗಾದರೆ ಬೇರೆಯವರ ಸರದಿ ಬರುವುದು ಯಾವಾಗ....?''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ