ವಿಶೇಷವಾಗಿ ಪ್ರಕೃತಿಯ ದೃಶ್ಯಗಳು ಹಾಗೂ ದುರ್ಲಭ ವನ್ಯ ಪ್ರಾಣಿಗಳಿಂದ ತುಂಬಿರುವ ಇಲ್ಲಿನ ನ್ಯಾಷನಲ್ ಪಾರ್ಕ್ ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಮಧ್ಯಪ್ರದೇಶದ ಮೂರನೇ ಒಂದು ಭಾಗ ವನ ಸಂಪತ್ತಿನ ರೂಪದಲ್ಲಿ ಸುರಕ್ಷಿತವಾಗಿದೆ. ಇಲ್ಲಿನ ಕಾಡುಗಳ ಮಾಂತ್ರಿಕತೆಯ ಆಕರ್ಷಣೆಯಿಂದ ಜನ ಪದೇ ಪದೇ ಇಲ್ಲಿಗೆ ಬರುತ್ತಾರೆ.
ಕೆಲವು ಪ್ರಮುಖ ನ್ಯಾಷನಲ್ ಪಾರ್ಕ್ಗಳು
ಕಾನ್ಹಾ : 940 ಸ್ಕ್ವೇರ್ ಕಿ.ಮೀ.ಗಳಲ್ಲಿ ಹರಡಿರುವ ಈ ಸ್ಥಳದಲ್ಲಿ ಕಾನ್ಹಾದ ಕಾಡು ಸಾಲ ವೃಕ್ಷ ಮತ್ತು ಬಿದಿರು ಮರಗಳಿಂದ ತುಂಬಿದೆ. ಈ ರಾಷ್ಟ್ರೀಯ ಉದ್ಯಾನನದಲ್ಲಿ ವಿವಿಧ ಪ್ರಾಚೀನ ಪ್ರಾಣಿಗಳಿವೆ. ಹುಲಿಗಳ ರಕ್ಷಣೆಗಾಗಿ ವಿಶೇಷ ಯೋಜನೆ `ಪ್ರಾಜೆಕ್ಟ್ ಟೈಗರ್’ಗೆ ಅನುಗುಣವಾಗಿ ಕಾನ್ಹಾ ಕಾಡಿನ ನಿರ್ಮಾಣವನ್ನು 1974ರಲ್ಲಿ ಮಾಡಲಾಗಿತ್ತು.
ಪ್ರೇಕ್ಷಣೀಯ ಸ್ಥಳಗಳು
ಬಮನಿದಾದ್ : ಅಸ್ತಾಂಚಲ ಬಿಂದು (ಸನ್‌ಸೆಟ್ ಪಾಯಿಂಟ್)ವಿನ ರೂಪದಲ್ಲಿ ಈ ಸ್ಥಳ ಈ ಕಾಡಿನ ಅತ್ಯಂತ ಸುಂದರ ಸ್ಥಳ. ಇಲ್ಲಿ ಮುಳುಗುವ ಸೂರ್ಯನನ್ನು ನೋಡಲು ಅತ್ಯಂತ ಆಹ್ಲಾದಕರವಾಗಿರುತ್ತದೆ.
ಸಸ್ತನಿ ಪ್ರಾಣಿಗಳು : ಕಾನ್ಹಾದಲ್ಲಿ 22 ರೀತಿಯ ಸಸ್ತನಿ ಪ್ರಾಣಿಗಳಿವೆ. ಅವುಗಳಲ್ಲಿ ಅಳಿಲು, ಕೋತಿ, ನರಿ, ಕಾಡುಹಂದಿ, ಚಿಗರೆ, ಸಾರಂಗ, ಕರೀಮೃಗ ಇತ್ಯಾದಿಗಳನ್ನು ನೋಡಬಹುದು.
ಭಾರತೀಯ ನರಿ, ಕುಂಟು ಬೆಕ್ಕು, ಚಿರತೆ, ಮುಳ್ಳುಹಂದಿ, ನಾಲ್ಕು ಕೊಂಬಿನ ಜಿಂಕೆ, ಕಾಡು ಬೆಕ್ಕು, ನೀರು ನಾಯಿ, ತೋಳ ಇತ್ಯಾದಿ ಹೆಚ್ಚು ಕಂಡುಬರುವುದಿಲ್ಲ.
ಕಾನ್ಹಾದ ಪಕ್ಷಿ ಪ್ರಪಂಚ : ಕಾನ್ಹಾದಲ್ಲಿ ಇನ್ನೂರಕ್ಕೂ ಹೆಚ್ಚು ಪ್ರಕಾರದ ಪಕ್ಷಿಗಳು ಕಂಡುಬರುತ್ತವೆ. ಪಕ್ಷಿ ಪ್ರೇಮಿಗಳು ಬೆಟ್ಟದ ಮೇಲೆ ಇಳಿದುಕೊಳ್ಳಬೇಕು. ಈ ಕಾಡು ಬಹಳಷ್ಟು ಪಕ್ಷಿಗಳಿಗೆ ಆಶ್ರಯ ಸ್ಥಾನವಾಗಿದೆ. ಶ್ರವಣತಾಲ್ ಮತ್ತು ಅಭಯಾರಣ್ಯದ ಹತ್ತಿರ ಸಣ್ಣ ಸಣ್ಣ ಕೆರೆಗಳಲ್ಲೂ ಇನ್ನು ನೋಡಬಹುದು. ದುರ್ಬೀನ್‌ನಿಂದ ಇವನ್ನು ಬೆಳಗ್ಗೆ ಹಾಗೂ ಸಂಜೆ ನೋಡುವುದು ಸುಲಭ. ಸಾಮಾನ್ಯವಾಗಿ ಕೊಕ್ಕರೆ, ಕರಿ ಮೇಕೆ, ಕೋಳಿ, ತುಪ್ಪಟವಿರುವ ಹಾವು, ಡ್ರೋಂಗೋ ಪಕ್ಷಿಗಳು, ವೈಟ್ ಕ್ರೌನ್ ಸ್ನೇಕ್, ಗಿಣಿಗಳು, ಮೈನಾ, ಬಕಪಕ್ಷಿ, ನವಿಲು, ಪಾರಿವಾಳ ಇತ್ಯಾದಿಗಳನ್ನು ನೋಡಬಹುದು.
ಜೀಪ್ ಮತ್ತು ಆನೆ ಸಫಾರಿ : ಪಾರ್ಕ್‌ನಲ್ಲಿ ಓಡಾಡಲು ಮಧ್ಯಪ್ರದೇಶ ಪ್ರವಾಸಿ ನಿಗಮದ ಜೀಪ್/ಜಿಪ್ಸಿ ಪಡೆಯಬಹುದು. ಹುಲಿಯನ್ನು ಹುಡುಕಲು ಆನೆಯನ್ನು ಉಪಯೋಗಿಸಬಹುದು.
ಹೇಗೆ ಹೋಗುವುದು? : ಕಾನ್ಹಾ ನ್ಯಾಷನಲ್ ಪಾರ್ಕ್‌ಗೆ ಹೋಗಲು 2 ಮುಖ್ಯ ದಾರಿಗಳಿವೆ. ಖಟಿಯಾ (ಕಿಸಲಿಯಿಂದ 3 ಕಿ.ಮೀ), ಮುಕ್ಕಿ ಜಬ್ಬಲ್ ಪುರ್‌ನಲ್ಲಿ ಚೀರಈಡೋಂಗರಿ ದಾರಿಯಲ್ಲಿ ಕಿಸಲಿ 165 ಕಿ.ಮೀ. ಆಗುತ್ತದೆ. ಮೇಲೆ ನಾವೆ ಮತ್ತು ಕೋಟೆಯ ರಸ್ತೆ ಮುಕ್ಕಿಯಿಂದ 203 ಕಿ.ಮೀ. ಆಗುತ್ತದೆ. ಮುಕ್ಕಿ ನ್ಯಾಷನಲ್ ಹೈವೇ ನಂ.26 ರಿಂದ ಸಾಗಿದರೆ ಅತ್ಯಂತ ಅನುಕೂಲ. ನಾಗಪುರ, ನೈನ್‌ಪುರ ಮತ್ತು ಚಿರಈಡೋಂಗರಿ ದಾರಿಯಲ್ಲಿ ಕಿಸಲಿ 159 ಮತ್ತು ಬಾಲಾ ಘಾಟ್ 289 ಕಿ.ಮೀ. ದೂರವಿದೆ.
ವಾಯು ಮಾರ್ಗ : ರಾಯ್‌ಪುರ (240), ನಾಗಪುರ(335), ಜಬ್ಬಲ್ ಪುರ (160) ಕಿ.ಮೀ ಹತ್ತಿರದ ಏರ್‌ಪೋರ್ಟ್‌ಗಳು.
ರೈಲು ಮಾರ್ಗ : ಜಬ್ಬಲ್ ಪುರ್ ಮತ್ತು ಬಿಲಾಸ್‌ಪುರ್‌ವರೆಗೆ ರೈಲಿನಿಂದ ತಲುಪಬಹುದು.
ರಸ್ತೆ ಮಾರ್ಗ : ಜಬ್ಬಲ್ ಪುರ್‌ನಿಂದ ಕಿಸಲಿ ಮತ್ತು ಮುಕ್ಕಿಗೆ ದಿನನಿತ್ಯ ಬಸ್ ಸೌಲಭ್ಯ ಇದೆ. ಜಬ್ಬಲ್ ಪುರ್, ಬಿಲಾಸ್‌ಪುರ್ ಮತ್ತು ರಾಯ್‌ಪುರ್‌ನಿಂದ ಟ್ಯಾಕ್ಸಿಗಳೂ ಲಭ್ಯವಿವೆ.
ಎಲ್ಲಿ ತಂಗುವುದು? : ಕಾನ್ಹಾ ಸಫಾರಿ ಲಾಡ್ಜ್, ಮುಕ್ಕಿ ಬಫೀರಾ ಲಾಗ್ ಹಟ್ಸ್, ಕಿಸಲಿ ಟೂರಿಸ್ಟ್ ಹೋಟೆಲ್ ಇವೆಲ್ಲ ಮಧ್ಯಪ್ರದೇಶ ಟೂರಿಸಂ ರೆಸಾರ್ಟ್‌ಗಳು.
ಬಾಂಧ್ಗಡ್ : ಈ ದಟ್ಟ ರಾಷ್ಟ್ರೀಯ ಉದ್ಯಾನ ವನದಲ್ಲಿ ಇಡೀ ಭಾರತದ ರಾಷ್ಟ್ರೀಯ ಉದ್ಯಾನ ವನಗಳಲ್ಲಿರುವ ಸಿಂಹಗಳಿಗಿಂತ ಹೆಚ್ಚು ಸಿಂಹಗಳಿವೆ. ಬಿಳಿ ಹುಲಿಗಳ ತವರುಮನೆಯೂ ಇದೇ. ಹಿಂದೆ ರೀಲಾದಲ್ಲಿ ಅನೇಕ ವರ್ಷಗಳವರೆಗೆ ದುರ್ಲಭವಾದ ಸಿಂಹಗಳು ಸಿಗುತ್ತಿದ್ದವು. ಬಾಂಧ್‌ಗಡ್ ವಿಶಾಲವಾಗಿ ನಿಂತಿರುವ ಬಂಡೆಗಳಿಂದ ಸುತ್ತುವರೆದಿದೆ. ಎಲ್ಲಕ್ಕಿಂತ ಎತ್ತರದ ಬಂಡೆಗಳ ಮೇಲೆ ಸುಮಾರು 2 ಸಾವಿರ ವರ್ಷಗಳ ಹಳೆಯ ಬಾಂಧ್‌ಗ್ ಕೋಟೆ ಇದೆ. ಈ ಕೋಟೆಯ ಸುತ್ತಮುತ್ತಲೂ ಲೆಕ್ಕವಿಲ್ಲದಷ್ಟು ಗುಹೆಗಳಿವೆ. ಅವುಗಳಲ್ಲಿ ವೇದಗಳು ಹಾಗೂ ಪ್ರಾಚೀನ ಸಂಸ್ಕೃತ ಶಿಲಾಶಾಸನಗಳಿವೆ. ಉಮೆರಿಯಾ ಜಿಲ್ಲೆಯಲ್ಲಿ ವಿಂಧ್ಯ ಪರ್ವತ ಶ್ರೇಣಿಗಳಲ್ಲಿರುವ ಬಾಂಧ್‌ಗಡ್ ಪಾರ್ಕ್ 448 ಸ್ಕ್ವೇರ್ ಕಿ.ಮೀ.ವರೆಗೆ ಹರಡಿದೆ. ಸಮುದ್ರ ಮಟ್ಟದಿಂದ 81 ಮೀಟರ್ ಎತ್ತರದಲ್ಲಿ ಬಾಂಧ್‌ಗಡ್ ಇದೆ. ಅಲ್ಲಿ ಘಟ್ಟಗಳು ಮತ್ತು ಸಣ್ಣಪುಟ್ಟ ಸರೋವರಗಳಿವೆ. ಸ್ಥಳೀಯರು ಅವುಗಳನ್ನು `ಬೋಹೆರಾ’ ಎನ್ನುತ್ತಾರೆ.
ರಾಷ್ಟ್ರೀಯ ಉದ್ಯಾನವನ ಆಗುವ ಮುಂಚೆ ಬಾಂಧ್‌ಗಡ್‌ನ ಕಾಡು ರೀಲಾ ಮಹಾರಾಜರಿಗೆ ಬೇಟೆಯ ಸ್ಥಳದ ರೂಪದಲ್ಲಿ ಸುರಕ್ಷಿತವಾಗಿ ಇಡಲಾಗುತ್ತಿತ್ತು. 1968ರಲ್ಲಿ ಈ ಪಾರ್ಕ್‌ನ್ನು ರಾಷ್ಟ್ರೀಯ ಉದ್ಯಾನದಲ್ಲಿ ಸೇರಿಸಲಾಯಿತು ಮತ್ತು ವನ್ಯ ಪ್ರಾಣಿಗಳಿಗಾಗಿ ಸಹಜ ಪ್ರಾಕೃತಿಕ ವಾಸಸ್ಥಾನವಾಗಿ ಮಾಡಲಾಯಿತು.
ಪ್ರೇಕ್ಷಣೀಯ ಸ್ಥಳಗಳು
ಕೋಟೆ : ಬಾಂಧ್‌ಗ್ ಕೋಟೆಯ ನಿರ್ಮಾಣ ಯಾವಾಗ ಆಯಿತೆಂದು ಎಲ್ಲೂ ಉಲ್ಲೇಖವಿಲ್ಲ. ಈ ಕೋಟೆಯಲ್ಲಿ ಅನೇಕ ರಾಜವಂಶಗಳು ಆಳ್ವಿಕೆ ನಡೆಸಿವೆ. 13ನೇ ಶತಮಾನದಲ್ಲಿ ಬಗೆಲ್ ರಾಜರು ಇದರ ಮೇಲೆ ನಿಯಂತ್ರಣ ಹೇರಿ 1617ರವರೆಗೆ ಆಡಳಿತ ನಡೆಸಿದರು. ರಾಜ ವಿಕ್ರಮಾದಿತ್ಯ ಸಿಂಹ ರೀಲಾವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ಇವರ ವಂಶದವರೇ 1935ರಲ್ಲಿ ಈ ಕೋಟೆಯನ್ನು ಬಿಟ್ಟುಕೊಟ್ಟರು.
ವನ್ಯಜೀವನ : ಇಲ್ಲಿ 22ಕ್ಕೂ ಹೆಚ್ಚು ಸಸ್ತನಿಗಳು ಮತ್ತು 250ಕ್ಕೂ ಹೆಚ್ಚಿನ ತಳಿಯ ಪಕ್ಷಿಗಳು ಕಂಡುಬರುತ್ತವೆ. ಮಾಂಸಾಹಾರಿ ಪ್ರಾಣಿಗಳಲ್ಲಿ ನರಿ, ಬಂಗಾಳದ ನರಿ, ಕರಡಿ, ಚಿಗರೆ, ಬಿಳಿ ಮುಂಗುಸಿ, ಗೆರೆಗಳುಳ್ಳ ಹೇಸರಗತ್ತೆ, ಕಾಡುಬೆಕ್ಕು, ಚಿರತೆ, ಹುಲಿ ಇತ್ಯಾದಿ ಸಿಗುತ್ತವೆ. ಸಸ್ತನಿಗಳಲ್ಲಿ ಕಾಡು ಹಂದಿ, ಚಿಗರೆ, ನಾಲ್ಕು ಕೊಂಬಿನ ಜಿಂಕೆ, ಕಿರುಬ, ನೀಲವರ್ಣದ ಜಿಂಕೆ ಇತ್ಯಾದಿ ಇಲ್ಲಿ ಕಂಡುಬರುತ್ತದೆ.
ಪಕ್ಷಿಗಳಲ್ಲಿ ಡುಬಡುವಿ, ಕೊಕ್ಕರೆ, ಬಕಪಕ್ಷಿಗಳು, ನವಿಲು, ಕರಿ ಕೊಕ್ಕರೆ, ಕಪ್ಪು ಹದ್ದು, ರಾಜ ಹದ್ದು, ಕಾಡುಕೋಳಿ, ಗಿಣಿ, ಮೈನಾ ಇತ್ಯಾದಿ ನೋಡಬಹುದು. ನೆಲದ ಮೇಲೆ ತೆವಳುವ ಜೀವಿಗಳಲ್ಲಿ ಕೋಬ್ರಾ, ವೈಪರ್, ಹೆಬ್ಬಾವು ಇತ್ಯಾದಿ ಸಿಗುತ್ತವೆ.
ಪಾರ್ಕ್‌ನಲ್ಲಿ ಪ್ರವಾಸಕ್ಕೆ ಸರ್ವೋತ್ತಮ ಸಮಯ ಪ್ರಾತಃಕಾಲ 10 ರಿಂದ ಸಂಜೆ 46ರವರೆಗೆ ಈ ಸಮಯದಲ್ಲಿ ಪ್ರಾಣಿಗಳು ಹೆಚ್ಚು ಸಕ್ರಿಯವಾಗಿರುತ್ತವೆ.
ಹೇಗೆ ತಲುಪುದು?
ವಾಯು ಮಾರ್ಗ : ಖಜುರಾಹೋ (235) ಮತ್ತು ಜಬ್ಬಲ್ ಪುರ್(190) ಕಿ.ಮೀ. ಹತ್ತಿರದ ಏರ್‌ಪೋರ್ಟ್‌ಗಳು.
ರೈಲ್ವೆ ಮಾರ್ಗ : ಜಬ್ಬಲ್ ಪುರ (190), ತಟನಿ (102), ಸತನಾ (120) ಮತ್ತು ಉಮರಿಯಾ (35) ಕಿ.ಮೀ. ಇವೆ.
ರಸ್ತೆ ಮಾರ್ಗ : ಸರ್ಕಾರಿ ಹಾಗೂ ಪ್ರೈವೇಟ್ ಬಸ್‌ಗಳು ಕಟನಿ, ಉಮರಿಯಾ, ರೀಲಾ ಮತ್ತು ಸತನಾದಿಂದ ಹೊರಡುತ್ತವೆ. ಜೊತೆಗೆ ಇಲ್ಲಿಂದ ಟ್ಯಾಕ್ಸಿಗಳು ಸಿಗುತ್ತವೆ.
ತಂಗುವ ಸ್ಥಳ : ವೈಟ್ ಟೈಗರ್ ಫಾರೆಸ್ಟ್ ಲಾಡ್ಜ್ (ಮಧ್ಯಪ್ರದೇಶ ಟೂರಿಸಂ) ಪೇಂಚ್ ಮಧ್ಯಪ್ರದೇಶದ ದಕ್ಷಿಣ ಭಾಗದಲ್ಲಿ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಈ ರಾಷ್ಟ್ರೀಯ ಉದ್ಯಾನ 757.90 ಚ.ಕಿ.ಮೀ. ಜಾಗದಲ್ಲಿ ಹರಡಿಕೊಂಡಿದೆ. ಈ ಕಾಡಿನ ಒಳಗೆ ಹರಿಯುವ ನದಿಯ ಕಾರಣದಿಂದಾಗಿ ಈ ಉದ್ಯಾನಕ್ಕೆ ಪೇಂಚ್ ಎಂಬ ಹೆಸರು ಬಂತು.
ರುಡ್ಯಾರ್ಡ್ ಕಿಪ್ಲಿಂಗ್‌ನ ಪ್ರಸಿದ್ಧ ಪುಸ್ತಕ `ದಿ ಜಂಗಲ್ ಬುಕ್’ ಪೇಂಚ್‌ನ ಕಾಡಿನ ಹಿನ್ನೆಲೆಯಲ್ಲಿ ಬರೆಯಲಾಗಿದೆ. ಪೇಂಚ್ ಕಾಡನ್ನು ನೋಡಿದವರಿಗೆ ಈ ಪುಸ್ತಕದ ಸಂಪೂರ್ಣ ಇತಿಹಾಸ ಸಾಕಾರಾಗುತ್ತದೆ. ಮೋಗ್ಲಿಯ ಬದುಕು ಸರ್ ವಿಲಿಯಂ ಹೆನ್ರಿ ಸ್ಲೀಮನ್‌ರ ಬರಹವನ್ನು ಆಧರಿಸಿದೆ. ಅದರಲ್ಲಿ 1831ರಲ್ಲಿ ಸಿನಿ ಜಿಲ್ಲೆಯ ಹತ್ತಿರದಲ್ಲಿದ್ದ ಸೇಂಟ್ ಬಾಓವರಿರಿಂದ ಪಡೆದ ಒಬ್ಬ ಜಂಗಲ್ ಬಾಯ್‌ನ ವರ್ಣನೆ ಇದೆ. ಜಂಗಲ್ ಬುಕ್‌ನಲ್ಲಿ ಹೇಳಲಾದ ಬಹಳಷ್ಟು ಜಾಗಗಳು ಪೇಂಚ್‌ನ ಕಾಡುಗಳಲ್ಲಿವೆ. ಲೈನ್ ಗಂಗಾ ನದಿಯ ಘಟ್ಟದಲ್ಲಿ ಶೇರ್‌ಖಾನ್‌ನನ್ನು ಸಾಯಿಸಲಾಗಿತ್ತು.
ಇಡೀ ಉದ್ಯಾನ ಕಾಡುಪ್ರಾಣಿಗಳಿಗೆ ಬಹಳ ಹಿತವಾಗಿರುತ್ತದೆ. ವಿಶೇಷವಾಗಿ ಇಲ್ಲಿ ಚಿಗರೆ, ಸಾರಂಗ, ಕಾಡುನಾಯಿ, ಕಾಡುಹಂದಿಗಳು ಇವೆ.
ಸ್ವಲ್ಪ ಹುಡುಕಿದರೆ ಚಿರತೆ, 4 ಕೊಂಬಿನ ಜಿಂಕೆ, ನರಿ, ಕಾಡು ಬೆಕ್ಕು ಮತ್ತು ಕಿರುಬಗಳು ಕಂಡುಬರುತ್ತವೆ. ಕಾಡಿನಲ್ಲಿ ಸುತ್ತಾಡಲು ಜೀಪ್ ಅಥವಾ ಜಿಪ್ಸಿ ಮತ್ತು ಆನೆಗಳನ್ನು ಬಳಸಬಹುದು. ಜೊತೆಗೆ ನದಿಯಲ್ಲಿ ಬೋಟಿಂಗ್ ಇತ್ಯಾದಿಗಳ ಆನಂದ ಅನುಭವಿಸಬಹುದು.
ಹೇಗೆ ಹೋಗುವುದು?
ವಾಯು ಮಾರ್ಗ : ನಾಗಪುರ (92) ಕಿ.ಮೀ. ಹತ್ತಿರದ ಏರ್‌ಪೋರ್ಟ್.
ರೈಲ್ವೆ ಮಾರ್ಗ : ನಾಗಪುರ ರೈಲ್ವೇ ಸ್ಟೇಷನ್ (92 ಕಿ.ಮೀ.)
ರಸ್ತೆ ಮಾರ್ಗ : ಛಿದ್ವಾಡಾ, ಖಾಸಾ, ಸಿನಿ ಮತ್ತು ನಾಗಪುರದಲ್ಲಿ ಟ್ಯಾಕ್ಸಿಗಳು ಲಭ್ಯವಿವೆ.
ತಂಗಲು ಸ್ಥಳ : ಮಧ್ಯಪ್ರದೇಶ ಟೂರಿಸಂನ ಕಿಪ್ಲಿಂಗ್ ಕೋರ್ಟ್ ಪನ್ನಾ ಪನ್ನಾ ರಾಷ್ಟ್ರೀಯ ಉದ್ಯಾನವನ 1981ರಲ್ಲಿ ಆರಂಭವಾಯಿತು. 1994ರಲ್ಲಿ ಇದನ್ನು ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ತರಲಾಯಿತು. ಪನ್ನಾ ರಾಷ್ಟ್ರೀಯ ಉದ್ಯಾನದಲ್ಲಿ ಪನ್ನಾ, ಭರತ್‌ಪುರ್ ಮತ್ತು ಬೀಜಾವರದ ಹಿಂದಿನ ಆಡಳಿತಗಾರರ ಬೇಟೆಯ ತಾಣಗಳಲ್ಲಿ ಸೇರಿಸಲಾಗಿದೆ. ಪನ್ನಾ ರಾಷ್ಟ್ರೀಯ ಉದ್ಯಾನ ಈ ದೃಷ್ಟಿಯಿಂದಲೂ ಮಹತ್ವಪೂರ್ಣವಾಗಿದೆ. ಏಕೆಂದರೆ ದಕ್ಷಿಣದಲ್ಲಿ ಕೇಪ್ ಕಾಮರಿನ್‌ನಿಂದ ಶುರುವಾದ ಕಾಡಿನ ಶೃಂಖಲೆ ಇಲ್ಲಿ ಸಮಾಪ್ತಿಯಾಗುತ್ತದೆ. ಗಂಗಾನದಿಯ ತಗ್ಗು ನೆಲ ಇಲ್ಲಿಂದಲೇ ಆರಂಭವಾಗುತ್ತದೆ.
55 ಕಿ.ಮೀ.ವರೆಗೆ ಪನ್ನಾ ರಾಷ್ಟ್ರೀಯ ಉದ್ಯಾನವನದಲ್ಲಿ ಹರಿಯುವ ಕ್ರೇನ್ ಅದ್ಭುತವಾದ ರಮ್ಯ ದೃಶ್ಯಾಗಿದೆ. ಇದು ಮೊಸಳೆಗಳ ಪ್ರಾಕೃತಿಕ ನಿವಾಸವಾಗಿದೆ. ಪನ್ನಾ ರಾಷ್ಟ್ರೀಯ ಉದ್ಯಾನ ಘಟ್ಟಗಳು ಹಾಗೂ ಪ್ರಸ್ಥಭೂಮಿಯಿಂದ ತುಂಬಿದೆ. ಅದರಲ್ಲಿ ತಾಲ್‌ಗಾಂವ್‌ನ ಪ್ರಸ್ಥಭೂಮಿ ಹಿನೌತಾದ ಪ್ರಸ್ಥಭೂಮಿ ಮತ್ತು ಕೇನ್‌ಘಟ್ಟ ಸೇರಿವೆ. ಪನ್ನಾದ ಅಸಾಧಾರಣ ಶಾಂತ ಮತ್ತು ಸುಂದರವಾದ ವನ, ಹಸಿರು ಹುಲ್ಲಿನ ಮೈದಾನ ಮತ್ತು ಎಲ್ಲ ಕಾಡುಗಳಿಂದ ಆಚ್ಛಾದಿತವಾಗಿವೆ. ಇಲ್ಲಿ ಸಾಗವಾನಿ ಮರಗಳು ಹೆಚ್ಚಿವೆ. ಈ ಉದ್ಯಾನ 209.53 ಚದರ ಮೈಲಿಯವರೆಗೆ ಹರಡಿಕೊಂಡಿದೆ.
ವನ್ಯಜೀವಿಗಳು : ಇದು ಹುಲಿಯ ಪ್ರಾಕೃತಿಕ ಆವಾಸಸ್ಥಾನವಾಗಿದೆ. ಜೊತೆಗೆ ಇಲ್ಲಿ ಚಿರತೆ, ಕಾಡು ನಾಯಿ, ಕತ್ತೆ ಕಿರುಬ, ಕರಡಿ ಮತ್ತು ಚಿಕ್ಕ ಬೆಕ್ಕು ಸಿಗುತ್ತದೆ. ಕಾಡಿನಿಂದ ಆವೃತವಾದ ಕ್ಷೇತ್ರಗಳಲ್ಲಿ ಜಿಂಕೆ, ಚಿಗರೆ, 4 ಕೊಂಬುಗಳ ಜಿಂಕೆ, ಚಿರತೆ ಇತ್ಯಾದಿ ನೋಡಬಹುದು. ಇಲ್ಲಿ ಹಾವು ಮತ್ತು ಹೆಬ್ಬಾವುಗಳು ಕಂಡುಬರುತ್ತವೆ.
ಪಕ್ಷಿಗಳು : ಇಲ್ಲಿ ಪಕ್ಷಿಗಳ 200 ತಳಿಗಳನ್ನು ಕಾಣಬಹುದು. ಗಿಣಿಗಳು, ಹದ್ದುಗಳು, ಕೊಕ್ಕರೆಗಳು, ಹಂಸಗಳು ಇತ್ಯಾದಿ. ಇದು ಪ್ರವಾಸಿ ಪಕ್ಷಿಗಳಿಗೂ ಬಹಳ ಅನುಕೂಲವಾದ ಜಾಗವಾಗಿದೆ. ಪನ್ನಾ ಟೈಗರ್ ರಿಸರ್ವ್ ನಲ್ಲಿ ಹದ್ದುಗಳ 7 ಜಾತಿಗಳು ಸಿಗುತ್ತವೆ.
ಪ್ರೇಕ್ಷಣೀಯ ಸ್ಥಳಗಳು
ಅಜಯ್ ಗಡ್ ಕೋಟೆ : 800 ಅಡಿಗಳ ಎತ್ತರದಲ್ಲಿರುವ ಈ ಕೋಟೆ 1765ರಲ್ಲಿ ನಿರ್ಮಾಣವಾಯಿತು. ಜೇತ್‌ಪುರದ ಮಹಾರಾಜರ ಅಣ್ಣನ ಮಗ ಗುಮಾನ್ ಸಿಂಗ್ ಇದನ್ನು ನಿರ್ಮಿಸಿದ. 1809ರಲ್ಲಿ ಈ ಕೋಟೆಯ ಆಡಳಿತ ಬ್ರಿಟಿಷರದ್ದಾಗಿತ್ತು.
ಪೈಂಡ್ ಫಾಲ್ : ಈ ಫಾಲ್ ಖಜುರಾಹೋನಿಂದ 34 ಕಿ.ಮೀ. ಮತ್ತು ಮಂಡಲದಿಂದ 7 ಕಿ.ಮೀ. ದೂರದಲ್ಲಿ ಪನ್ನಾ ರಸ್ತೆಯಲ್ಲಿದೆ. ಪ್ರವಾಸಿಗರಿಗೆ ಇದು ರಮಣೀಯ ಸ್ಥಳವಾಗಿದೆ.
ಹೇಗೆ ಹೋಗುವುದು?
ವಾಯು ಮಾರ್ಗ : ಖಜುರಾಹೋ ಅತ್ಯಂತ ಹತ್ತಿರದ ಏರ್‌ಪೋರ್ಟ್.
ರೈಲ್ವೆ ಮಾರ್ಗ : ಹತ್ತಿರದ ರೈಲ್ವೆ ಸ್ಟೇಷನ್ ಖಜುರಾಹೋ (46 ಕಿ.ಮೀ.), ಸತನಾ (74 ಕಿ.ಮೀ) ದೂರದಲ್ಲಿದೆ.
ಬಸ್ ಮಾರ್ಗ : ಪನ್ನಾ ರಸ್ತೆ ಒಳ್ಳೆಯ ನೆಟ್‌ವರ್ಕ್ ಹೊಂದಿದೆ. ಖಜುರಾಹೋನಿಂದ ಮಡಾ (25 ಕಿ.ಮೀ.), ಸತನಾದಿಂದ ಮಡಾ (90 ಕಿ.ಮೀ.) ಮತ್ತು ಪನ್ನಾದಿಂದ ಮಡಾ (19 ಕಿ.ಮೀ.) ಇದೆ.
ಎಲ್ಲಿ ತಂಗುವುದು?
ಮಧ್ಯಪ್ರದೇಶದ ಟೂರಿಸಂನ ಜಂಗಲ್ ಕ್ಯಾಂಪ್ ಮಡಾ, ಪನ್ನಾ. ಇಲ್ಲಿ ತಂಗಲು ಮತ್ತು ಭೋಜನಕ್ಕೆ ಏರ್‌ಕಂಡೀಶನ್ಡ್ ಸ್ವಿಸ್ ಕಾಟೇಜ್ ಇದೆ. ರಿಸರ್ವ್ ಮಾಡಲು 07732275275 ಮತ್ತು 09827749975 ಸಂಪರ್ಕಿಸಿ.
ಉತ್ತಮ ವಾತಾವರಣ : ನವೆಂಬರ್‌ನಿಂದ ಜೂನ್, ಜುಲೈ 1 ರಿಂದ ಸೆಪ್ಟೆಂಬರ್‌ವರೆಗೆ ಮಾನ್‌ಸೂನ್ ಕಾರಣದಿಂದಾಗಿ ಪಾರ್ಕ್‌ನಲ್ಲಿ ಸುತ್ತುವುದನ್ನು ನಿಲ್ಲಿಸಲಾಗಿದೆ.
ಈ ಅಭಯಾರಣ್ಯಗಳಲ್ಲಿ ಮೊಜು ಅನುಭವಿಸಲು ಅಲ್ಲಿಗೆ ಹೋಗುವಾಗ ಸಡಿಲವಾದ ಉಡುಪುಗಳನ್ನು ಧರಿಸಿ. ಸುತ್ತಾಡುವಾಗ ಗೈಡ್‌ನ ಸಲಹೆಗಳನ್ನು ಪಾಲಿಸಿ. ಸಿಂಹ, ಕಾಡೆಮ್ಮೆ, ಜಿಂಕೆ, ಚಿಗರೆ, ಚಿರತೆ ಇತ್ಯಾದಿ ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸುವುದನ್ನು ಕಂಡಾಗ ಅವುಗಳನ್ನು ಬೇಟೆಯಾಡುವ ವಿಚಾರ ಬರುವುದಿಲ್ಲ. ವನ್ಯಜೀವಿಗಳು ದೇಶದ ಸಂಪತ್ತಾಗಿವೆ. ಇವುಗಳನ್ನು ನೋಡಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಿ.
– ಪ್ರಮೀಳಾ ರಾವ್