ವಿಶೇಷವಾಗಿ ಪ್ರಕೃತಿಯ ದೃಶ್ಯಗಳು ಹಾಗೂ ದುರ್ಲಭ ವನ್ಯ ಪ್ರಾಣಿಗಳಿಂದ ತುಂಬಿರುವ ಇಲ್ಲಿನ ನ್ಯಾಷನಲ್ ಪಾರ್ಕ್ ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಮಧ್ಯಪ್ರದೇಶದ ಮೂರನೇ ಒಂದು ಭಾಗ ವನ ಸಂಪತ್ತಿನ ರೂಪದಲ್ಲಿ ಸುರಕ್ಷಿತವಾಗಿದೆ. ಇಲ್ಲಿನ ಕಾಡುಗಳ ಮಾಂತ್ರಿಕತೆಯ ಆಕರ್ಷಣೆಯಿಂದ ಜನ ಪದೇ ಪದೇ ಇಲ್ಲಿಗೆ ಬರುತ್ತಾರೆ.
ಕೆಲವು ಪ್ರಮುಖ ನ್ಯಾಷನಲ್ ಪಾರ್ಕ್ಗಳು
ಕಾನ್ಹಾ : 940 ಸ್ಕ್ವೇರ್ ಕಿ.ಮೀ.ಗಳಲ್ಲಿ ಹರಡಿರುವ ಈ ಸ್ಥಳದಲ್ಲಿ ಕಾನ್ಹಾದ ಕಾಡು ಸಾಲ ವೃಕ್ಷ ಮತ್ತು ಬಿದಿರು ಮರಗಳಿಂದ ತುಂಬಿದೆ. ಈ ರಾಷ್ಟ್ರೀಯ ಉದ್ಯಾನನದಲ್ಲಿ ವಿವಿಧ ಪ್ರಾಚೀನ ಪ್ರಾಣಿಗಳಿವೆ. ಹುಲಿಗಳ ರಕ್ಷಣೆಗಾಗಿ ವಿಶೇಷ ಯೋಜನೆ `ಪ್ರಾಜೆಕ್ಟ್ ಟೈಗರ್'ಗೆ ಅನುಗುಣವಾಗಿ ಕಾನ್ಹಾ ಕಾಡಿನ ನಿರ್ಮಾಣವನ್ನು 1974ರಲ್ಲಿ ಮಾಡಲಾಗಿತ್ತು.
ಪ್ರೇಕ್ಷಣೀಯ ಸ್ಥಳಗಳು
ಬಮನಿದಾದ್ : ಅಸ್ತಾಂಚಲ ಬಿಂದು (ಸನ್‌ಸೆಟ್ ಪಾಯಿಂಟ್)ವಿನ ರೂಪದಲ್ಲಿ ಈ ಸ್ಥಳ ಈ ಕಾಡಿನ ಅತ್ಯಂತ ಸುಂದರ ಸ್ಥಳ. ಇಲ್ಲಿ ಮುಳುಗುವ ಸೂರ್ಯನನ್ನು ನೋಡಲು ಅತ್ಯಂತ ಆಹ್ಲಾದಕರವಾಗಿರುತ್ತದೆ.
ಸಸ್ತನಿ ಪ್ರಾಣಿಗಳು : ಕಾನ್ಹಾದಲ್ಲಿ 22 ರೀತಿಯ ಸಸ್ತನಿ ಪ್ರಾಣಿಗಳಿವೆ. ಅವುಗಳಲ್ಲಿ ಅಳಿಲು, ಕೋತಿ, ನರಿ, ಕಾಡುಹಂದಿ, ಚಿಗರೆ, ಸಾರಂಗ, ಕರೀಮೃಗ ಇತ್ಯಾದಿಗಳನ್ನು ನೋಡಬಹುದು.
ಭಾರತೀಯ ನರಿ, ಕುಂಟು ಬೆಕ್ಕು, ಚಿರತೆ, ಮುಳ್ಳುಹಂದಿ, ನಾಲ್ಕು ಕೊಂಬಿನ ಜಿಂಕೆ, ಕಾಡು ಬೆಕ್ಕು, ನೀರು ನಾಯಿ, ತೋಳ ಇತ್ಯಾದಿ ಹೆಚ್ಚು ಕಂಡುಬರುವುದಿಲ್ಲ.
ಕಾನ್ಹಾದ ಪಕ್ಷಿ ಪ್ರಪಂಚ : ಕಾನ್ಹಾದಲ್ಲಿ ಇನ್ನೂರಕ್ಕೂ ಹೆಚ್ಚು ಪ್ರಕಾರದ ಪಕ್ಷಿಗಳು ಕಂಡುಬರುತ್ತವೆ. ಪಕ್ಷಿ ಪ್ರೇಮಿಗಳು ಬೆಟ್ಟದ ಮೇಲೆ ಇಳಿದುಕೊಳ್ಳಬೇಕು. ಈ ಕಾಡು ಬಹಳಷ್ಟು ಪಕ್ಷಿಗಳಿಗೆ ಆಶ್ರಯ ಸ್ಥಾನವಾಗಿದೆ. ಶ್ರವಣತಾಲ್ ಮತ್ತು ಅಭಯಾರಣ್ಯದ ಹತ್ತಿರ ಸಣ್ಣ ಸಣ್ಣ ಕೆರೆಗಳಲ್ಲೂ ಇನ್ನು ನೋಡಬಹುದು. ದುರ್ಬೀನ್‌ನಿಂದ ಇವನ್ನು ಬೆಳಗ್ಗೆ ಹಾಗೂ ಸಂಜೆ ನೋಡುವುದು ಸುಲಭ. ಸಾಮಾನ್ಯವಾಗಿ ಕೊಕ್ಕರೆ, ಕರಿ ಮೇಕೆ, ಕೋಳಿ, ತುಪ್ಪಟವಿರುವ ಹಾವು, ಡ್ರೋಂಗೋ ಪಕ್ಷಿಗಳು, ವೈಟ್ ಕ್ರೌನ್ ಸ್ನೇಕ್, ಗಿಣಿಗಳು, ಮೈನಾ, ಬಕಪಕ್ಷಿ, ನವಿಲು, ಪಾರಿವಾಳ ಇತ್ಯಾದಿಗಳನ್ನು ನೋಡಬಹುದು.
ಜೀಪ್ ಮತ್ತು ಆನೆ ಸಫಾರಿ : ಪಾರ್ಕ್‌ನಲ್ಲಿ ಓಡಾಡಲು ಮಧ್ಯಪ್ರದೇಶ ಪ್ರವಾಸಿ ನಿಗಮದ ಜೀಪ್/ಜಿಪ್ಸಿ ಪಡೆಯಬಹುದು. ಹುಲಿಯನ್ನು ಹುಡುಕಲು ಆನೆಯನ್ನು ಉಪಯೋಗಿಸಬಹುದು.
ಹೇಗೆ ಹೋಗುವುದು? : ಕಾನ್ಹಾ ನ್ಯಾಷನಲ್ ಪಾರ್ಕ್‌ಗೆ ಹೋಗಲು 2 ಮುಖ್ಯ ದಾರಿಗಳಿವೆ. ಖಟಿಯಾ (ಕಿಸಲಿಯಿಂದ 3 ಕಿ.ಮೀ), ಮುಕ್ಕಿ ಜಬ್ಬಲ್ ಪುರ್‌ನಲ್ಲಿ ಚೀರಈಡೋಂಗರಿ ದಾರಿಯಲ್ಲಿ ಕಿಸಲಿ 165 ಕಿ.ಮೀ. ಆಗುತ್ತದೆ. ಮೇಲೆ ನಾವೆ ಮತ್ತು ಕೋಟೆಯ ರಸ್ತೆ ಮುಕ್ಕಿಯಿಂದ 203 ಕಿ.ಮೀ. ಆಗುತ್ತದೆ. ಮುಕ್ಕಿ ನ್ಯಾಷನಲ್ ಹೈವೇ ನಂ.26 ರಿಂದ ಸಾಗಿದರೆ ಅತ್ಯಂತ ಅನುಕೂಲ. ನಾಗಪುರ, ನೈನ್‌ಪುರ ಮತ್ತು ಚಿರಈಡೋಂಗರಿ ದಾರಿಯಲ್ಲಿ ಕಿಸಲಿ 159 ಮತ್ತು ಬಾಲಾ ಘಾಟ್ 289 ಕಿ.ಮೀ. ದೂರವಿದೆ.
ವಾಯು ಮಾರ್ಗ : ರಾಯ್‌ಪುರ (240), ನಾಗಪುರ(335), ಜಬ್ಬಲ್ ಪುರ (160) ಕಿ.ಮೀ ಹತ್ತಿರದ ಏರ್‌ಪೋರ್ಟ್‌ಗಳು.