ಒಂದು ಸಮೀಕ್ಷೆಯ ಪ್ರಕಾರ, ಭಾರತೀಯ ಮಹಿಳೆಯರು ತಮ್ಮ ಆರೋಗ್ಯದ ಕುರಿತಂತೆ ಹೆಚ್ಚು ಖುಷಿಯಿಂದ ಇರುತ್ತಾರೆ. ಹಾಲಿಡೇ ಬುಕ್ಕಿಂಗ್‌ ಮಾಡುವ ಸಂದರ್ಭದಲ್ಲಿ ಅವರು ಈ ಕುರಿತಂತೆ ಹೆಚ್ಚಿನ ಗಮನಕೊಡುತ್ತಾರೆ.

ಪುರುಷರು ಟೂರ್‌ ಪ್ಯಾಕೇಜ್‌ ಬುಕ್ಕಿಂಗ್‌ ಮಾಡುವ ಸಂದರ್ಭದಲ್ಲಿ ಡಿಸ್‌ಕೌಂಟ್‌ ಮುಂತಾದವುಗಳ ಬಗ್ಗೆ ಹೆಚ್ಚಿಗೆ ಗಮನಹರಿಸುತ್ತಾರೆ. ಅವರು ಪ್ರವಾಸದ ಖರ್ಚನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಾರೆ. ಇದರಿಂದ ಸ್ಪಷ್ಟವಾಗುವ ವಿಷಯವೆಂದರೆ, ಮಹಿಳೆಯರು ಸುತ್ತಾಡುವ ಬಾಬತ್ತಿನಲ್ಲಿ ಹಾಗೂ ಆರೋಗ್ಯದ ಕುರಿತಂತೆ ಯಾವುದೇ ಖರ್ಚಿನ ಚಿಂತೆ ಮಾಡುವುದಿಲ್ಲ. ಅವರು ಒತ್ತಡಮುಕ್ತರಾಗಿ ಪ್ರವಾಸದ ಆನಂದ ಪಡೆಯುತ್ತಾರೆ.

ಇಂದಿನ ಪ್ರೊಫೆಷನಲ್ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿರುವುದರ ಹೊರತಾಗಿಯೂ ಏಕಾಂಗಿಯಾಗಿರುವ ಕಾರಣದಿಂದ ದೇಶದಲ್ಲಿ ಅಥವಾ ದೇಶದ ಹೊರಗಡೆ ಹೋಗಲು ಹಿಂದೇಟು ಹಾಕುತ್ತಾರೆ. ವಿವಾಹಿತ ಮಹಿಳೆಯರು ರಜೆ ದಿನಗಳಲ್ಲಿ ಸುತ್ತಾಡಲು ತನ್ನ ಪತಿ ಅಥವಾ ಕುಟುಂಬದ ಇತರೆ ಸದಸ್ಯರ ಮೇಲೆ ಅವಲಂಬಿತರಾಗಬೇಕಾಗುತ್ತದೆ.

ಅದ್ಭುತ ಮತ್ತು ಸುರಕ್ಷಿತ ಉಪಾಯ

ತಾವೇ ಸ್ವತಃ ಸುತ್ತಾಡಲು ಹೋಗಬೇಕೆನ್ನುವ ಅವಿವಾಹಿತರಿಗೆ, ವಿವಾಹಿತರಿಗೆ, ನಿವೃತ್ತ ಮಹಿಳೆಯರಿಗೆ ವುಮನ್‌ ಟೂರ್‌ ಪ್ಯಾಕೇಜ್‌ಗಳು ತುಂಬಾ ಉಪಯುಕ್ತವಾಗಿವೆ. ಅವು ಮಹಿಳೆಯರನ್ನು ಗುಂಪು ಗುಂಪಾಗಿ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತವೆ. ಈ ರೀತಿ ಮಹಿಳೆಯರು ಭಯಮುಕ್ತರಾಗಿ ಸುತ್ತಾಡುವ ಆನಂದವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ನೀವು ಏಕಾಂಗಿಯಾಗಿ ಪ್ರವಾಸ ಮಾಡಲೇನೋ ಇಚ್ಛಿಸುತ್ತೀರಿ, ಆದರೆ ಪ್ರವಾಸದ ಸಂದರ್ಭದಲ್ಲಿ ಏಕಾಂಗಿತನದಿಂದ ಭಯಪಡುತ್ತಿದ್ದಲ್ಲಿ ವುಮನ್‌ ಟೂರ್‌ ಪ್ಯಾಕೇಜ್‌ನ ಸದಸ್ಯರಾಗಿ. ಒಂದು ಖಾಸಗಿ ಸಂಸ್ಥೆಯಲ್ಲಿ ಎಚ್‌.ಆರ್‌. ಹುದ್ದೆಯಲ್ಲಿರುವ ಅನುಪ್ರಿಯಾ, ವುಮನ್‌ ಟೂರ್‌ ಪ್ಯಾಕೇಜ್‌ಗಳ ಮೂಲಕ ದೇಶ ವಿದೇಶಗಳ ಅನೇಕ ಸ್ಥಳಗಳನ್ನು ಸುರಕ್ಷಿತವಾಗಿ ಸುತ್ತಿದ್ದಾರೆ.

ಅವರು ಈ ಕುರಿತಂತೆ ಹೀಗೆ ಹೇಳುತ್ತಾರೆ, ``ನಾನು ಪ್ರತಿವರ್ಷ ದೇಶದಲ್ಲಿ ಅಥವಾ ದೇಶದ ಹೊರಗಡೆ ಸುತ್ತಾಡಲು ಹೋಗುತ್ತೇನೆ. ಇದರಿಂದ ನನಗೆ ಸ್ವತಂತ್ರವಾಗಿ ಸುತ್ತಾಡುವ ಅವಕಾಶ ದೊರಕುತ್ತದೆ. ಅಷ್ಟೇ ಅಲ್ಲ, ಇದರಿಂದ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಬೇರೆ ಮಹಿಳೆಯರನ್ನು ಅರಿಯಲು, ನನ್ನ ಗುಣಸ್ವಭಾವ ಬದಲಿಸಿಕೊಳ್ಳಲು ಅವಕಾಶ ದೊರೆಯುತ್ತದೆ.''

ಅನುಪ್ರಿಯಾ ಇದನ್ನು ಒಂದು ಸುರಕ್ಷಿತ ಹಾಗೂ ಉಪಯುಕ್ತ ಉಪಾಯ. ನಾನು ನನ್ನ ಕುಟುಂಬದರ ಅನುಪಸ್ಥಿತಿಯ ಮಧ್ಯೆಯೂ ಸುರಕ್ಷಿತ ಮತ್ತು ನಿಶ್ಚಿಂತ ಪ್ರವಾಸ ಕೈಗೊಳ್ಳುತ್ತೇನೆ, ಎನ್ನುತ್ತಾರೆ.

ವುಮನ್ಟೂರ್ಆಪರೇಟರ್ಗಳು

ಅನೇಕ ಬಗೆಯ ಪ್ಯಾಕೇಜ್‌ ಆಫರ್‌ಗಳನ್ನು ಕೊಡುತ್ತಾರೆ. ಪ್ಯಾಕೇಜ್‌ ಖರ್ಚು ಸುತ್ತಾಡುವ ಸ್ಥಳಗಳ ಆಯ್ಕೆ ಮಾಡುವುದನ್ನು ಅವಲಂಬಿಸಿರುತ್ತದೆ. ಬೇಸಿಗೆ ದಿನಗಳಲ್ಲಿ ಕಾಶ್ಮೀರ ಹಾಗೂ ಇತರೆ ಪರ್ವತ ಪ್ರದೇಶಗಳಿಗೆ ಹೋಗಲು ಸ್ವಲ್ಪ ಹೆಚ್ಚಿನ ದರ ತೆರಬೇಕಾಗಿ ಬರಬಹುದು. ಅದೇ ರೀತಿ ಚಳಿಗಾಲದಲ್ಲಿ ಕೇರಳ ಮತ್ತು ಗೋವಾದಲ್ಲಿ ಪ್ರವಾಸ ಹೋಗಲು ನೀವು ತುಸು ಹೆಚ್ಚು ಮೊತ್ತ ಕೊಡಬೇಕಾಗಿ ಬರುತ್ತದೆ.

ಪ್ಯಾಕೇಜ್‌ ಆಧಾರದಲ್ಲಿ ಒಂದು ಗ್ರೂಪ್‌ನಲ್ಲಿ 4-5 ಅಥವಾ 10 ರಿಂದ 20 ಮಹಿಳೆಯರು ಕೂಡ ಇರಬಹುದು. ಕೆಲವು ಟೂರ್‌ ಪ್ಯಾಕೇಜ್‌ಗಳು ವಿಶೇಷವಾಗಿ ತಾಯಿ ಮಗ ಅಥವಾ ತಾಯಿಮಗಳಿಗಾಗಿಯೇ ರೂಪಿಸಲ್ಪಟ್ಟಿರುತ್ತವೆ. ಫ್ಯಾಮಿಲಿ ಪ್ಯಾಕೇಜ್‌ಗಳಲ್ಲಿ ಹಲವು ಕುಟುಂಬಗಳನ್ನು ಒಗ್ಗೂಡಿಸಿ 80-100 ಜನರ ಒಂದು ಗ್ರೂಪ್‌ ಮಾಡಲಾಗುತ್ತದೆ. ಅದರಲ್ಲಿ ಅವರು ಹಲವು ಅಪರಿಚಿತ ಮಹಿಳೆಯರನ್ನು ಭೇಟಿಯಾಗುತ್ತಾರೆ ಮತ್ತು ಜಗತ್ತಿನ ಬಗ್ಗೆ ಸಾಕಷ್ಟು ತಿಳಿದುಕೊಳ್ಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ