ಆಲಿವ್ ‌ಆಯಿಲ್ ‌(ಹಿಪ್ಪೆ ಎಣ್ಣೆ) ತುಂಬಾ ಗುಣಕಾರಿ ತೈಲ ಎಂದು ಹೇಳಲಾಗುತ್ತದೆ. ಇದು ಕೇವಲ ಅಡುಗೆ ಎಣ್ಣೆಯಾಗಿ ಮಾತ್ರವೇ ಬಳಕೆಯಾಗುವುದಿಲ್ಲ. ಇದರಿಂದ ಬೇರೆ ಲಾಭಗಳೂ ಇವೆ. ಹೀಗಾಗಿ ಇದನ್ನು ಕೂದಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಚಿಕಿತ್ಸೆಯಲ್ಲೂ ಬಳಸುತ್ತಾರೆ.

ಕೂದಲಿಗಾಗಿ ಮತ್ತು ಮುಖದ ಸುಕ್ಕುಗಳನ್ನು ನಿವಾರಿಸಲು ಇದೊಂದು ವರದಾನವೆಂದು ಭಾವಿಸಲಾಗುತ್ತದೆ. ಚಳಿಗಾಲದಲ್ಲಿ ಈ ತೈಲದಿಂದ ಚರ್ಮದ ಮೇಲೆ ಮಸಾಜ್‌ ಮಾಡಿದರೆ, ಚರ್ಮಕ್ಕೆ ಬಿಸಿಯ ಅನುಭೂತಿ ಕೊಡುತ್ತದೆ. ಇದನ್ನು ಮಸಾಜ್‌ ತೈಲದ ರೂಪದಲ್ಲಿಯೂ ಬಳಸಲಾಗುತ್ತದೆ. ಜೊತೆಗೆ ಇದು ಮಾಯಿಶ್ಚರೈಸಿಂಗ್‌ನ ರೀತಿಯಲ್ಲೂ ಕೆಲಸ ಮಾಡುತ್ತದೆ. ಇದರಿಂದ ಮಸಾಜ್ ಮಾಡಿದರೆ ಬ್ರೆಸ್ಟ್ನಲ್ಲಿ ಬಿಗುವು ಉಂಟಾಗುತ್ತದಲ್ಲದೆ, ಸರಿಯಾದ ಶೇಪ್‌ ಕೂಡ ಬರುತ್ತದೆ.

ಆಲಿವ್ ‌ಆಯಿಲ್‌‌ನ್ನು ನಿಂಬೆರಸದಲ್ಲಿ ಮಿಶ್ರಣ ಮಾಡಿ ವಾರದಲ್ಲಿ 3 ದಿನ ಮುಖಕ್ಕೆ ಲೇಪಿಸುತ್ತಿದ್ದರೆ ಮುಖಕ್ಕೆ ಸುಕ್ಕುಗಳಿಂದ ರಕ್ಷಣೆ ದೊರೆಯುತ್ತದಲ್ಲದೆ, ಮುಖದ ವರ್ಣದಲ್ಲೂ ಸಾಕಷ್ಟು ಬದಲಾವಣೆಯಾಗುತ್ತದೆ.

ಡ್ರೈ ಸ್ಕಿನ್

ನಿಮ್ಮದು ಶುಷ್ಕ ಚರ್ಮವಾಗಿದ್ದಲ್ಲಿ, ಒಂದು ಮೊಟ್ಟೆಯನ್ನು ಆಲಿವ್ ‌ಆಯಿಲ್‌‌ನಲ್ಲಿ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಲೇಪಿಸಿಕೊಳ್ಳಿ. 20 ನಿಮಿಷಗಳ ಬಳಿಕ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಒಂದು ವೇಳೆ ಮುಖದಲ್ಲಿ ಟ್ಯಾನಿಂಗ್‌ ಇದ್ದರೆ, ಆ ತೈಲದಲ್ಲಿ ನಿಂಬೆರಸ ಮಿಶ್ರಣ ಮಾಡಿಕೊಳ್ಳಿ.

ಫೇಸ್‌ ಮಾಸ್ಕ್

ಸಾಮಾನ್ಯ ಹಾಗೂ ಶುಷ್ಕ ತ್ವಚೆಗಾಗಿ 2 ಚಮಚ ಕಿತ್ತಳೆ ಸಿಪ್ಪೆಯ ಪೌಡರ್‌ನಲ್ಲಿ ಆಲಿವ್ ‌ಆಯಿಲ್ ‌ಮತ್ತು ಒಂದೊಂದು ಚಮಚ ಜೇನುತುಪ್ಪ ಹಾಗೂ ಮೊಸರು ಮಿಶ್ರಣ ಮಾಡಿಕೊಳ್ಳಿ. ಅರ್ಧ ಗಂಟೆಯತನಕ ಆ ಲೇಪನ ಹಚ್ಚಿಕೊಂಡು ನಂತರ ತೊಳೆಯಿರಿ. ಇದರಿಂದ ಮುಖದಲ್ಲಿ  ಹೊಳಪು ಬರುತ್ತದಲ್ಲದೆ, ಚರ್ಮದ ಶುಷ್ಕತನ ಕಡಿಮೆಯಾಗಿ ಮೃದುತ್ವ ಪಡೆದುಕೊಳ್ಳುತ್ತದೆ.

ಮೆನಿಕ್ಯೂರ್

ಕೈಗಳನ್ನು ಮೃದುಗೊಳಿಸಲು ಆಲಿವ್ ಆಯಿಲ್‌‌‌ನಿಂದ ಮಸಾಜ್‌ ಮಾಡಿ. ಆ ಬಳಿಕ ಅರ್ಧ ಚಮಚ ಸಕ್ಕರೆ ತೆಗೆದುಕೊಂಡು ಎಲ್ಲಿಯವರೆಗೆ, ಸ್ಕ್ರಬ್‌ ಮಾಡುತ್ತಿರಬೇಕೆಂದರೆ, ಅದು ಪೂರ್ತಿಯಾಗಿ ಚರ್ಮದಲ್ಲಿ ಮಿಶ್ರಣಗೊಳ್ಳಬೇಕು. ಸ್ವಲ್ಪ ಹೊತ್ತಿನ  ಬಳಿಕ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಿ.

ಸ್ಟ್ರೆಚ್‌ ಮಾರ್ಕ್ಸ್

ಮಗುವಿಗೆ ಜನ್ಮ ನೀಡಿದ ಬಳಿಕ ಮಹಿಳೆಯರ ಹೊಟ್ಟೆಯ ಮೇಲಾಗುವ ಹೊಲಿಗೆ ಗುರುತುಗಳು ಕಂಡುಬರದಂತೆ ಮಾಡಲು ಆಲಿವ್ ‌ಆಯಿಲ್ ‌ನೆರವಾಗುತ್ತದೆ. ಈ ತೈಲವನ್ನು ಲೇಪಿಸುವುದರಿಂದ ಮೊಡವೆ, ಗಾಯದ ಕಲೆಗಳು ಹಾಗೂ ಸುಟ್ಟ ಕಲೆಗಳು ಕ್ರಮೇಣ ಮಸುಕು ಮಸುಕಾಗಿ ಕೊನೆಗೊಮ್ಮೆ ನಿವಾರಣೆಯಾಗುತ್ತವೆ.

ಸೂಕ್ಷ್ಮ ಚರ್ಮದವರು ಅಂದರೆ ಬೇರಾವುದೇ ಬಗೆಯ ತೈಲಗಳು ಹೊಂದಾಣಿಕೆಯಾಗದಿದ್ದವರಿಗೆ ಆಲಿವ್ ‌ಆಯಿಲ್ ಉಪಯುಕ್ತವಾಗುತ್ತದೆ. ಆಲಿವ್ ಆಯಿಲ್‌‌ನಲ್ಲಿ ಕೆಲವು ಹನಿ ಟೀ ಟ್ರೀ ಆಯಿಲ್ ‌ಮಿಶ್ರಣ ಮಾಡಿಕೊಂಡು ಅದನ್ನು ಚರ್ಮದ ಮೇಲೆ ಮಸಾಜ್‌ ಮಾಡಿಕೊಳ್ಳಬಹುದು. ಇದರ ಜೊತೆ ಜೊತೆಗೆ ಇದು ಮೂಡ್‌ನ್ನು ಫ್ರೆಶ್‌ಗೊಳಿಸುತ್ತದೆ. ಅದಕ್ಕಾಗಿ ಆಲಿವ್ ‌ಆಯಿಲ್‌‌‌ನಲ್ಲಿ ಕೆಲನಿ ಹನಿ ಲ್ಯಾವೆಂಡರ್‌ ಆಯಿಲ್‌‌‌ನ್ನು ಮಿಶ್ರಣ ಮಾಡಿಕೊಂಡು ಹಣೆ, ಕಣ್ಣು, ತಲೆ ಹಾಗೂ ಕೈಕಾಲುಗಳ ಮೇಲೆ ಲೇಪಿಸಿಕೊಳ್ಳುವುದರಿಂದ ಮೂಡ್‌ ಫ್ರೆಶ್‌ ಆಗುತ್ತದೆ. ಇದನ್ನು ಬೇಬಿ ಆಯಿಲ್‌‌ನಲ್ಲೂ ಮಿಶ್ರಣ ಮಾಡಿಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ