ಜಗತ್ತಿನ ಅತ್ಯಂತ ಶ್ರೀಮಂತನ ಹೆಸರು ಬಿಲ್‌ಗೇಟ್ಸ್. ಅವರ ಮನೆ ಇ-ಹೋಮ್ಸ್ ಗೊಂದು ಸೂಕ್ತ ಉದಾಹರಣೆ. ಕೇವಲ ಬಿಲ್‌ಗೇಟ್ಸ್ ಅಷ್ಟೇ ಅಲ್ಲ, ನೀವು ಕೂಡ ನಿಮ್ಮ ಮನೆಯನ್ನು ` ಇ-ಹೋಮ್’ ಎಂದು ಪರಿವರ್ತಿಸಿಕೊಳ್ಳಬಹುದು. ಅಂದರೆ ನಿಮ್ಮ ಆ ಮನೆ ವೈರ್‌ಲೆಸ್‌ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರಬೇಕು ಹಾಗೂ ಮನೆಯ ಎಲ್ಲ ಗ್ಯಾಜೆಟ್ಸ್ ಈ ವೈರ್‌ಲೆಸ್‌ ನೆಟ್‌ವರ್ಕ್‌ಗೆ ಜೋಡಣೆಗೊಂಡಿರಬೇಕು.

ಇಂತಹ ಮನೆಯನ್ನು ನೀವು 50,000 ರೂ.ಗಳಲ್ಲೇ ರೂಪಿಸಲು ಸಾಧ್ಯವಿದೆ. ಆದರೆ ಮನೆಯ ಕೋಣೆಗಳ ಸಂಖ್ಯೆ ಹಾಗೂ ಇತರೆ ಕಾರಣಗಳಿಂದ ಇ-ಹೋಮ್ ಮಾಡುವ ಖರ್ಚು ಹೆಚ್ಚಲೂಬಹುದು. ಇಂಟೀರಿಯರ್‌ ಡಿಸೈನರ್‌ ಮಧುಪ್ರಿಯಾ ಪ್ರಕಾರ, ಮನೆಯಲ್ಲಿ ತಂತಾನೇ ಸಂಚಾಲಿತಗೊಳ್ಳುವ ಸೌಲಭ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡರೆ ಇದಕ್ಕೆ ತಗಲುವ ಖರ್ಚು ಏನೇನೂ ಅಲ್ಲ ಎಂದೇ ಹೇಳಬಹುದು.

ಮೈಕ್ರೋಸಾಫ್ಟ್ ಕಂಪನಿ ಬಿಲ್‌ಗೇಟ್‌ ಕಂಪನಿ `ಜೀಯೋಸ್‌ ಇಂಟರ್‌ ನ್ಯಾಷನಲ್’ ಕಂಪನಿ ಜೊತೆಗೆ ಸೇರಿಕೊಂಡು ದೆಹಲಿ, ಮುಂಬೈ, ಹೈದರಾಬಾದ್‌, ಬೆಂಗಳೂರು, ಚೆನ್ನೈ, ಸೂರತ್‌ ಮುಂತಾದ ನಗರಗಳಲ್ಲಿ ` ಇ-ಹೋಮ್’ ರೂಪಿಸುತ್ತದೆ. ಬಳಿಕ ಇತರೆ 22 ನಗರಗಳಲ್ಲಿ ಈ ಸೌಲಭ್ಯ ನೀಡುವ ಯೋಜನೆ ಇದೆ.

ರಿಮೋಟ್‌ನಿಂದ ಪರದೆ ಎತ್ತುವುದರಿಂದ ಹಿಡಿದು, ನಿಮಗಿಷ್ಟವಾಗುವ ಸಿನಿಮಾ ನೋಡುವುದು ಹಾಗೂ ಸುರಕ್ಷಿತ ಉಪಾಯ ನೀಡುವ ಮೈಕ್ರೋಸಾಫ್ಟ್ ಕಂಪನಿಯ ಎಲ್ಲ ಉತ್ಪಾದನೆಗಳು ಇ-ಹೋಮ್ ನಲ್ಲಿ ಉಪಯೋಗಕ್ಕೆ ಬರುತ್ತವೆ. ಮೈಕ್ರೋಸಾಫ್ಟ್ ಸ್ಯಾಮ್ ಸಂಗ್‌, ಐರಿವರ್‌, ಜೀಯೋಸ್‌ ಇತರೆ ಕಂಪನಿಗಳ ಸಹಾಯದಿಂದ ನೀವು ಮನೆಯನ್ನು `ಇ-ಹೋವ್‌’

ಮಾಡಿಕೊಳ್ಳಬಹುದು.

ಇ-ಹೋಮ್ ವಿಂಡೋಸ್‌ ಆಧಾರಿತವಾಗಿದೆ. ವಿಂಡೋಸ್‌ ಮೀಡಿಯಾ ಸೆಂಟರ್‌ ಪ್ಲ್ಯಾಟ್‌ ಫಾರ್ಮ್ ಮೇಲೆ ಸಂಗೀತಕ್ಕಾಗಿ ಉಪಕರಣ (ಐಪಾಡ್‌ಗೆ ಪರ್ಯಾಯ) ಗೇಮ್ ಬಾಕ್ಸ್, ಗೇಮ್ ಬಾಕ್ಸ್ (ಗೇಮ್ ಸ್ಟೇಷನ್‌), ಎಂಎಸ್‌ಎನ್‌ ಹಾಗೂ ವಿಂಡೋಸ್ ಮೊಬೈಲ್ ಪರಸ್ಪರ ಸಂಪರ್ಕಿಸಲಾಗುತ್ತದೆ.

ನಿಮ್ಮ ಇ-ಹೋಮ್ ನಲ್ಲಿ ಯಾರಾದರೂ ಪ್ರವೇಶ ಮಾಡುತ್ತಿದ್ದಂತೆಯೇ ನಿಮ್ಮ ಮೊಬೈಲ್‌ನಲ್ಲಿ ಈ ಕುರಿತಂತೆ ಸೂಚನೆ ದೊರೆಯುತ್ತದೆ. ನೀವು ಅಳವಡಿಸಿದ ಪ್ರೋಗ್ರಾಮ್ ಗೆ ಅನುಗುಣವಾಗಿ ಯಾರಾದರೂ ಮನೆಗೆ ಬಂದರೆ ಅಲಾರ್ಮ್ ಆಗಲಾರಂಭಿಸುತ್ತದೆ. ಮನೆಯಲ್ಲಿ ಅಳವಡಿಸಿದ ಕ್ಯಾಮೆರಾ ಹಾಗೂ ಆ ವ್ಯಕ್ತಿಯ ಎಲ್ಲ ಆಗುಹೋಗುಗಳ ಬಗ್ಗೆ ಫೋಟೋ ಕ್ಲಿಕ್ ಮಾಡಲಾರಂಭಿಸುತ್ತದೆ. ನಿಮ್ಮ ಮನೆಗೆ ಯಾರು ಬಂದಿದ್ದಾರೆ ಮತ್ತು ಆ ವ್ಯಕ್ತಿ ಏನು ಮಾಡುತ್ತಿದ್ದಾನೆ ಎಂಬುದರ ಬಗ್ಗೆ ನಿಮ್ಮ ಮೊಬೈಲ್‌ಗೂ ಮಾಹಿತಿ ಲಭಿಸತೊಡಗುತ್ತದೆ. ನಿಮ್ಮ ಮನೆಯ ಸೆಕ್ಯುರಿಟಿ ಸರ್ವೀಸ್‌ ಪೊಲೀಸ್‌ ಠಾಣೆಗೂ ಕೂಡ ಇದರ ಬಗೆಗೆ ಮಾಹಿತಿ ನೀಡುತ್ತದೆ.

ಮನೆಯಲ್ಲಿ ಹೆಂಡತಿ, ಮಕ್ಕಳು ಏನು ಮಾಡುತ್ತಿದ್ದಾರೆ ಇದರ ಬಗೆಗೂ ಕ್ಷಣಕ್ಷಣಕ್ಕೆ ಮಾಹಿತಿ ನಿಮ್ಮ ಮೊಬೈಲ್‌‌ಗೆ ಲಭಿಸುತ್ತಿರುತ್ತದೆ. ಮನೆ ಕೆಲಸದವರು ನೀವು ಹೇಳಿದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಎಂಬುದು ಕೂಡ ನಿಮಗೆ ತಿಳಿಯುತ್ತಿರುತ್ತದೆ.

ಹಗಲು ಹೊತ್ತಿನಲ್ಲಿ ನಿಮ್ಮ ಮನೆಯ ಎಲ್ಲ ಕಿಟಕಿಗಳು ತೆರೆದಿರುತ್ತವೆ. ರಾತ್ರಿಯಾಗುತ್ತಿದ್ದಂತೆ ಅವು ತಂತಾನೇ ಲಾಕ್‌ ಆಗಿಬಿಡುತ್ತವೆ. ಇ-ಹೋಮ್ ಮುಖಾಂತರ ನೀವು ಆಫೀಸಿನಲ್ಲೇ ಕುಳಿತುಕೊಂಡು ನಿಮಗಿಷ್ಟ ಬಂದಂತೆ ಮನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಮನೆಯಲ್ಲಿ ಅಳವಡಿಸಿದ ಮೀಡಿಯಾ ಸೆಂಟರ್‌ ನಿಮಗೆ ಸಂಗೀತ, ವೀಡಿಯೋ, ರೇಡಿಯೋ, ಟಿ.ವಿ. ಡಿವಿಡಿ, ಇಂಟರ್‌ನೆಟ್‌ ಡೌನ್ ಲೋಡ್‌, ಇಂಟರ್‌ನೆಟ್‌ ಚಾಟ್‌, ಸರ್ಚ್‌ ಮತ್ತು ಇಮೇಲ್ ಕಳಿಸುವ, ಪಡೆಯುವ ಸೌಲಭ್ಯವನ್ನು ದೊರಕಿಸಿಕೊಡುತ್ತದೆ. ನೀವು ರಿವೋಟ್‌ ಕಂಟ್ರೋಲ್‌ನ ಸಹಾಯದಿಂದ ಆನ್‌ಸ್ಕ್ರೀನ್‌ ಮೆನುಗೆ ಹೋಗಿ ಮ್ಯೂಸಿಕ್‌ನಿಂದ ಹಿಡಿದು ಚಾಟಿಂಗ್‌ ಹಾಗೂ ಬ್ಲಾಗಿಂಗ್‌ನ ಮಜಾ ಪಡೆದುಕೊಳ್ಳಬಹುದು.

SM141919

ಡಿಸೈನರ್ಮನೆ ಹೇಗೆ ರೂಪುಗೊಳ್ಳುತ್ತದೆ?

ಈಗ ದೊಡ್ಡ ನಗರಗಳಲ್ಲಿ ಡಿಸೈನರ್‌ ಪ್ಲ್ಯಾಟುಗಳ ಸಂಖ್ಯೆ ಹೆಚ್ಚಿದೆ. ಯಾವ ಗ್ರಾಹಕರು ಡಿಸೈನರ್‌ ಮನೆಗಳನ್ನು ಖರೀದಿಸಲು ಇಚ್ಛಿಸುತ್ತಾರೊ ಅವರು ಬಿಲ್ಡರ್‌ಗಳಿಂದ ನೇಕೆಡ್‌ ಫ್ಲ್ಯಾಟ್‌ ಖರೀದಿಸುತ್ತಾರೆ. ಲೋಕಪ್ರಿಯ ಹೋಮ್ಸ್ ಪ್ರೈವೇಟ್‌ ಲಿಮಿಟೆಡ್‌ನ ಅಜಿತ್‌ ಕುಮಾರ್‌ ಅವರ ಪ್ರಕಾರ, ನೇಕೆಡ್‌ ಫ್ಲಾಟ್‌ನ ಅರ್ಥ ಕಿಟಕಿ ಬಾಗಿಲುಗಳನ್ನು ಅಳವಡಿಸದ ಫ್ಲ್ಯಾಟ್‌. ಅದರಲ್ಲಿ ಅವರು ತಮ್ಮ ಇಚ್ಛೆಗನುಸಾರ ಬಾಗಿಲು ಕಿಟಕಿಗಳನ್ನು ಹಾಕಿಸಿಕೊಳ್ಳುತ್ತಾರೆ. ಫ್ಲ್ಯಾಟಿನ ಫ್ಲೋರ್‌ಗೆ ಬಿಲ್ಡರ್‌ಗಳು ಮಾರ್ಬಲ್ ಕೂಡ ಹಾಕಿಸುವುದಿಲ್ಲ. ಆದರೆ ಡಿಸೈನರ್‌ ಫ್ಲ್ಯಾಟಿನ  ಗ್ರಾಹಕರು ಇದರಲ್ಲಿ ಬಿಲ್ಡರ್‌ಗಳ ನೆರವನ್ನೇನೋ ತೆಗೆದುಕೊಳ್ಳುತ್ತಾರೆ. ಡಿಸೈನರ್‌ಮನೆಗಳ ಆಸಕ್ತರು ಪ್ರತಿವಾರ ತಮ್ಮ ಆರ್ಕಿಟೆಕ್ಟ್ ಗಳನ್ನು ಭೇಟಿಯಾಗಿ ಫ್ಲ್ಯಾಟ್‌ನಲ್ಲಿ ಬೇಕಾಗುವ ಅವಶ್ಯಕತೆಗಳ ಬಗ್ಗೆ ಸಮೀಕ್ಷೆ ಮಾಡುತ್ತಾರೆ. ಇವರು ಬಿಲ್ಡರ್‌ ಹಾಗೂ ಆರ್ಕಿಟೆಕ್ಟ್ ನಡುವೆ ಪಿಆರ್‌ಓ ಕೆಲಸವನ್ನು ಕೂಡ ಮಾಡುತ್ತಾರೆ.

ಸಾಮಾನ್ಯವಾಗಿ ಕಸ್ಟಮರ್‌ ಒಬ್ಬ ವ್ಯಕ್ತಿಗೆ ಹಗಲು ಹೊತ್ತಿನಲ್ಲಿ ಕೆಲಸ ನೋಡಿಕೊಳ್ಳುವ ಜವಾಬ್ದಾರಿ ವಹಿಸುತ್ತಾರೆ. ಆದರೆ ಇದೆಲ್ಲಕ್ಕೂ ಮುಂಚೆ ತನ್ನೆಲ್ಲ ಅಗತ್ಯಗಳನ್ನು ಆರ್ಕಿಟೆಕ್ಟ್ ಮುಂದೆ ತಿಳಿಸುತ್ತಾನೆ. ಆರ್ಕಿಟೆಕ್ಟ್ ಬಿಲ್ಡರ್‌ ಮುಖಾಂತರ ತಯಾರಿಸಲ್ಪಟ್ಟ ನಕ್ಷೆಯ ಇತಿಮಿತಿಯೊಳಗೆ ಎಷ್ಟರಮಟ್ಟಿಗೆ ಸಾಧ್ಯವೋ ಅಷ್ಟರಮಟ್ಟಿಗೆ ಡಿಸೈನರ್‌ ಫ್ಲ್ಯಾಟ್‌ ತಯಾರಿಸಲು ಸಾಧ್ಯವಾಗಿರಬೇಕು.

ಡಿಸೈನರ್‌ ಅಪಾರ್ಟ್‌ಮೆಂಟ್‌ ರೂಪಿಸಿಕೊಟ್ಟ ದೀಪಕ್‌ ಕುಮಾರ್‌ ಅವರ ಪ್ರಕಾರ, ಡಿಸೈನರ್‌ ಫ್ಲ್ಯಾಟ್‌ ಒಂದು ಹಂತದ ಬಳಿಕ ಗ್ರಾಹಕರಿಗೆ ಬಹಳ ಅಗ್ಗದ್ದು ಎಂಬಂತೆ ಭಾಸವಾಗುತ್ತದೆ. ಏಕೆಂದರೆ ಇದು ಒಂದು ರೀತಿಯಲ್ಲಿ ಹೂಡಿಕೆಯ ರೀತಿಯಲ್ಲಿ ಕೆಲಸ ಮಾಡುತ್ತದೆ.

“ಹಿರಿಯ ನಾಗರಿಕರಿಗೆ ಇದು ಒಂದು ಎಫ್‌.ಡಿ. ಇದ್ದಂತೆ,” ರಿಯಲ್ ಎಸ್ಟೇಟ್‌ ಇಂದಿನ ದಿನಗಳಲ್ಲಿ ಹೂಡಿಕೆಯ ಒಂದು ಉತ್ತಮ ಮಾಧ್ಯಮವಾಗುತ್ತಿದೆ ಎಂದು ದಾಲ್ ಸ್ಟ್ರೀಟ್‌ ಸಜರ್ನ್‌ನ ಕಾರ್ಯಕಾರಿ ಸಂಪಾದಕ ಜೆ.ಪಿ. ಸೇಠಿ ಹೇಳುತ್ತಾರೆ.

ಅವರ ಪ್ರಕಾರ, ರಿಯಲ್ ಎಸ್ಟೇಟ್‌ ಮುಖಾಂತರ ಯಾವುದೇ ಒಬ್ಬ ವ್ಯಕ್ತಿ ವರ್ಗಾವಣೆಯ ಮುಖಾಂತರ ತನ್ನ ವೃದ್ಧಾಪ್ಯವನ್ನು ಸುರಕ್ಷಿತಗೊಳಿಸಿಕೊಳ್ಳಬಹುದು. ಈ ಯೋಜನೆಯಿಂದ ಆರ್ಥಿಕ ಸ್ವಾತಂತ್ರ್ಯ ದೊರೆಯುತ್ತದೆ. ಇಂದಿನ ಜಾಗತೀಕರಣದ ಯುಗದಲ್ಲಿ ಕುಟುಂಬಗಳ ಗಾತ್ರ ಕಡಿಮೆಯಾಗುತ್ತಿರುವುದರಿಂದ ಇದರ ಅವಶ್ಯಕತೆ ಇನ್ನಷ್ಟು ಹೆಚ್ಚಿದೆ.

iStock-000016019717Medium-web

ಕಲೆಯಲ್ಲ ಇದು ವಿಜ್ಞಾನ

ಇಂದಿನ ಸ್ಟೈಲಿಶ್‌ ಯುಗದ ಅವಶ್ಯಕತೆ ಇಂತಹ ಮನೆಗಳದ್ದಾಗಿದೆ. ಅಲ್ಲಿ ವಾಸಿಸುವುದರ ಮೂಲಕ ಮನೆ ಮಂದಿಯೆಲ್ಲ ನಿರಾಳತೆಯ ಅನುಭೂತಿ ಮಾಡಿಕೊಳ್ಳಬೇಕು. ತಮಗೆ ಬೇಕೆನಿಸಿದರೆ ಜೋಕಾಲಿಯಲ್ಲಿ ಕುಳಿತು ಹಾಯಾಗಿ ಸಂಗೀತದ ಮಜ ಪಡೆಯುವಂತಾಗಬೇಕು. ನಿಮ್ಮ ಪರ್ಸನಲ್  ವರ್ಕ್‌ ಸ್ಟೇಷನ್‌ನಲ್ಲಿ ಅಳವಡಿಸಲಾದ ಇಂಟರ್‌ನೆಟ್‌ ಕನೆಕ್ಶನ್‌ನಿಂದ ಸ್ಟ್ರೀಟ್‌ ಜರ್ನಲ್ ಸ್ಟೋರಿ ಆಲಿಸಬಹುದು. ನಿಮ್ಮ ಲಿವಿಂಗ್‌ ರೂಮ್ ನಲ್ಲಿ ಕುಳಿತು ಪ್ರಸಿದ್ಧ ಚಿತ್ರಕಾರರ ಚಿತ್ರಗಳನ್ನು ನಿಮ್ಮದೇ ಗೋಡೆಯ ಮೇಲೆ ಕಂಡು ಮಾನಸಿಕ ನೆಮ್ಮದಿ ತಂದುಕೊಳ್ಳಬಹುದು.

ಡಿಸೈನರ್‌ ಮನೆಯ ಅರ್ಥ ಇಷ್ಟೆ. ಮನೆಯ ಮಾಲೀಕ ಮತ್ತು ಕುಟುಂಬದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಒಂದು ಕಲಾತ್ಮಕ ಮನೆ ಅಥವಾ ಫ್ಲ್ಯಾಟ್‌.ಈಗ ಡಿಸೈನರ್‌ ಹೋಮ್ ನ ಮತ್ತೊಂದು ಅರ್ಥವೆಂದರೆ `ಗ್ರೀನ್‌ ಹೋಮ್’ ಮನೆ ಮತ್ತು ಫ್ಲ್ಯಾಟಿನ ಅಲಂಕಾರ ಮಾಡುವುದು ಈಗ ಕಲೆಯಾಗಿ ಉಳಿದಿಲ್ಲ. ಅದೊಂದು ವಿಜ್ಞಾನ ಎಂಬಂತಾಗಿದೆ. ಬಿಲ್ಡರ್‌, ಕಸ್ಟಮರ್‌, ಆರ್ಕಿಟೆಕ್ಟ್ ಮತ್ತು ಇಂಟರ್ನಲ್ ಆರ್ಕಿಟೆಕ್ಟ್ ಹಾಗೂ ಪಾರಂಪರಿಕ ಸಿವಿಲ್ ‌ಎಂಜಿನಿಯರ್‌ ಮತ್ತು ಮೇಸ್ತ್ರಿಗಳ ಪರಿಶ್ರಮದಿಂದ ಡಿಸೈನರ್‌ ಮನೆಯೊಂದು ರೂಪುಗೊಳ್ಳುತ್ತದೆ. ಇದೇ ಕಾರಣದಿಂದ ಇದನ್ನು ಗ್ರೀನ್‌ ಹೋಮ್ ಅಥವಾ ಫ್ಲ್ಯಾಟಿನ ರೂಪದಲ್ಲಿ ರೂಪಿಸುವ ಪ್ರಯತ್ನಗಳು ನಡೆದಿವೆ.

ಉತ್ತಮ ಆರೋಗ್ಯಕ್ಕಾಗಿ

ಕೆಲವು ನಗರಗಳಲ್ಲಿ ಡಿಸೈನರ್‌ ಮನೆಗಳಿಗಿಂತ ಡಿಸೈನರ್‌ ಫ್ಲ್ಯಾಟ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಒಂದು ಸಾಧಾರಣ ಅಪಾರ್ಟ್‌ಮೆಂಟ್‌ನ ಒಂದು ಜನರಲ್ ಫ್ಲ್ಯಾಟಿಗೆ ಹೋಲಿಸಿದಲ್ಲಿ, ಡಿಸೈನರ್‌ ಹೋಮ್ ಕಾನ್ಸೆಪ್ಟ್ ನಲ್ಲಿ ತಯಾರಾದ ಮನೆಯ ಬೆಲೆ ಎರಡು ಪಟ್ಟು ಹೆಚ್ಚಾಗುತ್ತದೆ. ಹಾಗೆ ನೋಡಿದರೆ, ಅಲ್ಲಿ, ವಾಸಿಸುವವರು ಅದಕ್ಕಿಂತ ಹೆಚ್ಚು ಖರ್ಚು ಕೂಡ ಮಾಡಬಹುದು. `ಐ ಆ್ಯಮ್ ಸ್ಪೆಷಲ್,’ `ಮೈ ಚಾಯ್ಸ್ ಈಸ್‌ ಸ್ಪೆಷಲ್’ ಎಂಬ ವಿಚಾರಧಾರೆಯುಳ್ಳವರಿಗೆ ಡಿಸೈನರ್‌ ಹೋಮ್ ಅಥವಾ ಡಿಸೈನರ್‌ ಫ್ಲ್ಯಾಟ್‌ ಒಂದು ವಿಶಿಷ್ಟ ಪರಿಚಯ ಮಾಡಿಕೊಡುತ್ತದೆ.

ಡಿಸೈನರ್‌ ಹೋಮ್ ನಲ್ಲಿ ವಾಸಿಸುವ ವೀಣಾ ಗುಪ್ತಾ ಅವರ ಪ್ರಕಾರ, ಡಿಸೈನರ್‌ ಹೋಮ್ ಟೈಮ್ ಮ್ಯಾನೇಜ್‌ಮೆಂಟ್‌ ಹಾಗೂ ಡಿಸೈನರ್‌ ಲಿವಿಂಗ್‌ನ ಉದ್ದೇಶದಿಂದ ನಿರ್ಮಿಸಲಾಗುತ್ತದೆ. ಮನೆ ಅಥವಾ ಫ್ಲ್ಯಾಟ್‌ನಲ್ಲಿ ಗಿಡಗಳು ಇರುವುದು ಅತ್ಯವಶ್ಯಕ. ಗಿಡಗಳು ಮನೆಯಲ್ಲಿ ಹಸಿರಿನ ವಾತಾವರಣ ನಿರ್ಮಿಸುತ್ತವೆ, ಅದೇ ಮನುಷ್ಯರ ಒತ್ತಡವನ್ನು ಕಡಿಮೆಗೊಳಿಸುತ್ತದೆ.

ಜಾಗತೀಕರಣದ ಇಂದಿನ ದಿನಗಳಲ್ಲಿ ಕಟ್ಟಡಗಳ ರೇಟಿಂಗ್‌ನ್ನು ಯುಎಸ್‌ ಗ್ರೀನ್‌ ಬಿಲ್ಡಿಂಗ್‌ ರೇಟಿಂಗ್‌ ಸಿಸ್ಟಮ್ ನ ಪ್ರಕಾರವೇ ಕೈಗೊಳ್ಳಲಾಗುತ್ತದೆ.

ಹೀಗಾಗಿ ಬಿಲ್ಡರ್‌ಗಳು ತಮ್ಮ ಬಿಲ್ಡಿಂಗ್‌, ಕಾಂಪ್ಲೆಕ್ಸ್ ಅಥವಾ ಮಲ್ಟಿ ರೆಸಿಡೆನ್ಶಿಯಲ್ ಕಮ್ ಶಾಪಿಂಗ್‌ ಮಾಲ್ ಹಾಗೂ ಯೂರೊಪಾರ್ಕ್‌ನ ರೇಟಿಂಗ್‌ನ್ನು ಯು.ಎಸ್‌.ನ ರೇಟಿಂಗ್‌ ಏಜೆನ್ಸಿಯಿಂದ ಮಾಡಲು ಇಚ್ಛಿಸುತ್ತಾರೆ.

ಅಮೆರಿಕದ ಸಂಸ್ಥೆ ಭಾರತದಲ್ಲಿ ಹಲವು ಬಿಲ್ಡರ್‌ಗಳಿಗೆ ಗೋಲ್ಡ್ ರೇಟಿಂಗ್‌ ಕೂಡ ನೀಡಿದೆ. ಇದಕ್ಕೂ ಮೇಲ್ಮಟ್ಟದ ರೇಟಿಂಗ್ ಪ್ಲ್ಯಾಟಿನಂ ಭಾರತದ ಮುಂಬರುವ ಪ್ರಾಜೆಕ್ಟ್ ಗಳಿಗೆ ದೊರೆಯುವ ಸಾಧ್ಯತೆ ಇದೆ.

ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌ನ ಪ್ರಕಾರ, ಲೀಡ್‌ ಸರ್ಟಿಫಿಕೇಟ್‌ (ಯುಎಸ್‌)ನ ಗ್ರೀನ್‌ ಹೋಮ್ಸ್ ಈಗ ಸುಮಾರು 20,000 ಚದರ ಅಡಿ ಆಗಿದೆ. ಮುಂಬರುವ ವರ್ಷಗಳಲ್ಲಿ ಅದು 10,000 ದಶಲಕ್ಷ ಚದರ ಅಡಿಗೆ ಹೋಗುವ ಸಾಧ್ಯತೆ ಇದೆ.

ಕಡಿಮೆ ಖರ್ಚು ಈಗ ಡಿಸೈನರ್‌ಗಳು ಗ್ರೀನ್‌ ಬಿಲ್ಡಿಂಗ್‌ ಹೋಮ್ ಮುಂತಾದವುಗಳಲ್ಲಿ ಸೋಲಾರ್‌ ಪ್ಯಾನೆಲ್ ‌(ಸೌರಶಕ್ತಿ ಮತ್ತು ಮಳೆ ನೀರಿನ ಕೊಯ್ಲನ್ನು ಸರಿಯಾಗಿ ಬಳಸಿಕೊಳ್ಳಲು), ಹಾರುವ ಬೂದಿಯ (ಫ್ಲೈ ಆ್ಯಶ್‌) ಸಿಮೆಂಟ್‌, ಸೆರಾಮಿಕ್‌ ಟೈಲ್ಸ್, ಪುನರ್ ಬಳಕೆಯ ನೀರು ಮತ್ತು ಪರಿಸರಸ್ನೇಹಿ ರಾಸಾಯನಿಕ ಬಳಸುವುದರ ಜೊತೆಗೆ ಓವರ್‌ ಹೆಡ್‌ ಖರ್ಚುಗಳನ್ನು ಕಡಿಮೆ ಮಾಡಲು ಪ್ರಯತ್ನಗಳು ಜಾರಿಯಲ್ಲಿವೆ.

ಇಂತಹ ಅಪಾರ್ಟ್‌ಮೆಂಟ್‌ಗಳ ಅಥವಾ ಫ್ಲ್ಯಾಟುಗಳು ಅಥವಾ ಹೋಮ್ ಗಳ ಮಾದರಿ ಹೇಗಿರುತ್ತದೆಂದರೆ, ಅವರ ವಿದ್ಯುತ್‌ ಬಿಲ್ ಸಮಾನ ಚದರ ಅಡಿಯ ಕಟ್ಟಡಗಳಿಗೆ ಹೋಲಿಸಿದರೆ ಅರ್ಧದಷ್ಟು ಮಾತ್ರ ಬರುತ್ತದೆ. ಗ್ರೀನ್‌ ಹೌಸ್‌ ಆಗಿರುವ ಕಾರಣದಿಂದ ನೈಸರ್ಗಿಕ ಗಾಳಿ ಅಲ್ಲಿ ಸುಳಿಯುತ್ತಿರುತ್ತದೆ. ಇನ್ನೊಂದು ವಿಶೇಷವೆಂದರೆ ಇಲ್ಲಿ ವಾಸಿಸುವವರು ಬೇರೆ ಮನೆಗಳಿಗೆ ಹೋಲಿಸಿದರೆ ಕಡಿಮೆ ಅನಾರೋಗ್ಯ ಪೀಡಿತರಾಗುತ್ತಾರೆ, ಇದು ಸುನಿಲ್ ಕುಮಾರ್‌ ಅವರ ಹೇಳಿಕೆ.

ಡಿಸೈನರ್‌ ಗ್ರೀನ್‌ ಹೋಮ್ ಅಥವಾ ಫ್ಲ್ಯಾಟ್‌ ರೂಪಿಸಲು ಬಿಲ್ಡರ್‌ ಎಂಜಿನಿಯರ್‌ಗಳು ಮತ್ತು ಆರ್ಕಿಟೆಕ್ಟ್ ಗಳ ಹೊರತು ಪರಿಸರ ತಜ್ಞರನ್ನು ಕೂಡ ಇದರಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ಇದರ ಹೊರತಾಗಿ ಎನರ್ಜಿ ಸೇವಿಂಗ್ಸ್ ಡಿವೈಸ್‌ ಮಾರಾಟ ಮಾಡುವ ಕಂಪನಿಗಳ ಅಧಿಕಾರಿಗಳ ನೆರವನ್ನು ಕೂಡ ಪಡೆಯಲಾಗುತ್ತದೆ. ಸೋಲಾರ್‌ ಎನರ್ಜಿ ಅಗ್ಗದ ದರದಲ್ಲಿ ದೊರೆಯುತ್ತದೆ. ಈ ಕಾರಣದಿಂದ ಡಿಸೈನರ್‌ ಹೋಮ್ ಅಥವಾ ಫ್ಲ್ಯಾಟಿನಲ್ಲಿ ಸೋಲಾರ್‌ ಸಿಸ್ಟವ್‌ನ್ನು ಸಹ ಬಳಸಿಕೊಳ್ಳಬೇಕು,” ಎಂದು ವಿದ್ಯುತ್‌ಮಂಡಳಿಯಲ್ಲಿ ಕಾರ್ಯ ನಿರ್ವಹಿಸುವ ಜಗದೀಶ್‌ ಪ್ರಸಾದ್‌ ಹೇಳುತ್ತಾರೆ.

ಕ್ಲಾಸಿಕ್‌ ಕಂಪನಿಯ ಬಿಲ್ಡರ್‌ ದೀಪಕ್‌ ಕುಮಾರ್‌ ಅವರ ಪ್ರಕಾರ, ಡಿಸೈನರ್‌ ಹೋಮ್ ಅಥವಾ ಫ್ಲ್ಯಾಟ್‌ ಪರಿಸರಸ್ನೇಹಿ ಆಗಿರುವುದರ ಜೊತೆಗೆ ಭೂಕಂಪರೋಧಕ ಕೂಡ ಆಗಿರಬೇಕು.

ಈಕ್ವಿಟಿ ಹೋಮ್ ಯೋಜನೆ

ಭೂಕಂಪ ರೋಧಕ ಫ್ಲ್ಯಾಟ್‌ ನಿರ್ಮಾಣಕ್ಕೆ ಸಾಕಷ್ಟು ಖರ್ಚು ಬರುತ್ತದೆ. ಆದರೆ ಫ್ಲ್ಯಾಟ್‌ ಖರೀದಿಸಬೇಕೆನ್ನುವುರು ಆ ಫ್ಲ್ಯಾಟ್‌ಭೂಕಂಪ ರೋಧಕ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು.

ಭಾರತ ಸರ್ಕಾರ ಈಕ್ವಿಟಿ ಹೋಮ್ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈಕ್ವಿಟಿ ಹೋಮ್ ಯೋಜನೆಯನ್ವಯ ಫ್ಲ್ಯಾಟ್‌ ಅಥವಾ ಮನೆ ಖರೀದಿಸದೆಯೇ ನೀವು ಮನೆ ಹೊಂದಿದ ಸುಖ ದೊರಕಿಸಿಕೊಳ್ಳಬಹುದಾಗಿದೆ. ಭಾರತ ಸರ್ಕಾರಕ್ಕೆ ಈಕ್ವಿಟಿ ಹೋಮ್ ನ ಕಾನ್ಸೆಪ್ಟ್ ಅಮೆರಿಕಾದಿಂದ ದೊರಕಿದೆ.

ಈಕ್ವಿಟಿ ಹೋವ್‌ ಕಾನ್ಸೆಪ್ಟ್ ನಲ್ಲಿ ಹಣಕಾಸು ಸಂಸ್ಥೆಗಳು ಡೆವಲಪರ್ಸ್‌ಗಳಿಂದ ಬಿಲ್ಡಿಂಗ್‌, ಮನೆ ಅಥವಾ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿ, ಅಲ್ಲಿ ವಾಸಿಸುವವರಿಂದ ಬಾಡಿಗೆ ಹಣ ವಸೂಲಿ ಮಾಡುತ್ತವೆ. ಈ ಯೋಜನೆಯನ್ವಯ ಮನೆ ಖರೀದಿಸುವವರಿಗೆ ಬಾಡಿಗೆಯ ಹೊರತಾಗಿ ಸ್ವಲ್ಪ ಪ್ರೀಮಿಯಂನ್ನು ಕೂಡ ಪ್ರತಿ ತಿಂಗಳೂ ಕೊಡುತ್ತದೆ. ಹಣಕಾಸು ಸಂಸ್ಥೆಗಳಿಗೆ ಫ್ಲ್ಯಾಟ್‌ಗೆ ತಗಲುವ ಒಟ್ಟು ಖರ್ಚು ಸಂದಾಯವಾಗುತ್ತದೆ. ಅದರಲ್ಲಿ ವಾಸಿಸುವವರಿಗೆ ಮನೆಯ ಡೀಡ್‌ ತಯಾರಿಸಿ ಕೊಡಲಾಗುತ್ತದೆ.

ಈ ಯೋಜನೆಯ ಎಲ್ಲಕ್ಕೂ ದೊಡ್ಡ ಲಾಭವೆಂದರೆ, ಗ್ರಾಹಕನಿಗೆ ಒಂದೇ ಸಲಕ್ಕೆ ಒನ್‌ ಟೈಮ್ ಡೌನ್‌ ಪೇಮೆಂಟ್‌ ಮಾಡಬೇಕಾಗಿ ಬರುವುದಿಲ್ಲ. ಹಾಗಾದರೆ ನೀವು ಮಾಡರ್ನ್‌ ಆಗಿ ಮತ್ತು ಹೊಸ ಯುಗದ ಇ-ಹೋಮ್ಸ್ ನಲ್ಲಿ ವಾಸಿಸುವ ಆನಂದ ಅನುಭವಿಸಿ.

ಇದು ಬಹಳ ಸುಲಭ!

ನೀವು ಅದೆಷ್ಟೇ ಹಳೆಯ ವಿಚಾರದವರಾಗಿದ್ದರೂ ನೀವು ಇನ್ನೂ ಕಂಪ್ಯೂಟರ್‌ ಕಲಿತಿಲ್ಲವೆಂದರೆ ಏನೋ ಒಂದು ಕೊರತೆ ಎಂಬಂತೆ ಭಾಸವಾಗುತ್ತದೆ. ಕಂಪ್ಯೂಟರ್‌ ಕಲಿಯುವುದು ಅತ್ಯಂತ ಕಠಿಣ ಕೆಲಸ ಎಂದು ನಿಮಗೆ ಭಾಸವಾಗುತ್ತಿರಬಹುದು. ಆದರೆ ನಿಮ್ಮ ಯೋಚನೆ ಸರಿಯಲ್ಲ. ಕಂಪ್ಯೂಟರ್‌ ಕಲಿಯುವುದು ಅತ್ಯಂತ ಸುಲಭ. ಉಪ್ಪಿನಕಾಯಿ ತಯಾರಿಸುವುದು ಅಥವಾ ಸ್ವೆಟರ್ ಹೆಣೆಯುವುದಕ್ಕಿಂತಲೂ ಇದು ಸುಲಭ. ನೀವು ಪ್ರಯತ್ನ ಮಾಡುವುದು ಮುಖ್ಯ.

ಈಗ ಚಿಕ್ಕ ಚಿಕ್ಕ ಅದರಲ್ಲೂ 8-10 ವರ್ಷದ ಮಕ್ಕಳು ಮೊಬೈಲ್‌, ಕಂಪ್ಯೂಟರ್‌ಗಳನ್ನು ವೇಗವಾಗಿ ಉಪಯೋಗಿಸುತ್ತಾರೆ. ನೀವು ಮಕ್ಕಳಿಗಿಂತಲೂ ಕಡಿಮೆ ತಿಳಿವಳಿಕೆಯುಳ್ಳವರೆ? ಒಂದು ಆಟಿಕೆ ಸಾಮಾನಿನ ಹಾಗೆ ಕಂಪ್ಯೂಟರ್‌ ಮತ್ತು ಇತರೆ ಗ್ಯಾಜೆಟ್ಸ್ ಜೊತೆ ಆಟ ಆಡಿ. ಪ್ರತಿಯೊಂದು ಪ್ರಶ್ನೆಗೂ ನಿಮಗೆ ಸ್ವತಃ ಉತ್ತರ ದೊರಕುತ್ತದೆ. ಹೊಸ ತಂತ್ರಜ್ಞಾನವನ್ನು ತಿಳಿದುಕೊಳ್ಳಲು ಹೆದರಿಕೆ ಬೇಡ. ಅದನ್ನು ಮೈಗೂಡಿಸಿಕೊಳ್ಳಿ.

ನಾನು ಗೃಹಿಣಿ, ಕಾಲೇಜು ಹುಡುಗಿಯರು ತಿಳಿದುಕೊಳ್ಳುವಂಥದ್ದನ್ನು ನಾನು ತಿಳಿದುಕೊಂಡರೆ ಏನು ಪ್ರಯೋಜನ ಎಂದು ಯೋಚಿಸಲು ಹೋಗಬೇಡಿ. ಹೊಸ ತಂತ್ರಜ್ಞಾನದ ಬಳಕೆಯಿಂದ ನಿಮ್ಮನ್ನು ನೀವು ಸದಾ ಅಪ್‌ಡೇಟ್‌ ಆಗಿಟ್ಟುಕೊಳ್ಳಬಹುದು. ಗೂಗಲ್ ಆಗಿರಬಹುದು ಇಲ್ಲಿ ವಾಟ್ಸ್ಆ್ಯಪ್‌, ಹೊಸ ಗ್ಯಾಜೆಟ್ಸ್ ನಿಮ್ಮನ್ನು ಸ್ವಾವಲಂಬಿ ಆಗಿಸುತ್ತವೆ.

ನೀವು ಮನೆಯಲ್ಲೇ ಕುಳಿತುಕೊಂಡು ಕಂಪ್ಯೂಟರ್‌ನಲ್ಲಿ ಕೆಲಸ ಮಾಡಿ ಸಾವಿರಾರು ರೂಪಾಯಿ ಗಳಿಸಬಹುದು. ಅಷ್ಟಿಷ್ಟು ಪರಿಚಯ ಇದ್ದರೆ ನೀವು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಂತಹ ಅನೇಕ ಆರ್ಡರ್‌ಗಳನ್ನು ಪಡೆಯಬಹುದು.

ನಿಮ್ಮ ಬಳಿ ಆ್ಯಂಡ್ರಾಯ್ಡ್ ಮೊಬೈಲ್ ‌ಇದ್ದರೆ ಹಲವು ಆ್ಯಪ್ಸ್ ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ಲೋಕೇಶನ್‌ ಯಾವುದು ಎಂಬುದರ ಬಗ್ಗೆ ಪರಿಚಯ ಮಾಡಿಕೊಡಬಹುದು. ನಿಮಗೆ ಯಾವುದಾದರೂ ಸಮಸ್ಯೆಯುಂಟಾದಾಗ ಅವರು ನಿಮ್ಮನ್ನು ಎಚ್ಚರಿಸಬಹುದು. ಏನಾದರೂ ಹೊಸದನ್ನು ಮಾಡಿ. ಇಂದಿನ ಆಧುನಿಕ ಯುಗದಲ್ಲಿ ಹೊಸ ತಂತ್ರಜ್ಞಾನದ ಉಪಕರಣಗಳನ್ನು ಭಾರಿ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತಿದೆ. ಮನುಷ್ಯ ಏಕಾಂಗಿಯಾಗಿದ್ದರೂ. ಕೂಡ ಏಕಾಂಗಿಯಂತಿಲ್ಲ. ಅವರ ಜೊತೆ ಏನೆಲ್ಲ ಸಂಪರ್ಕ ಸಾಧನಗಳಿವೆ.

ಮಕ್ಕಳು ಶಾಲೆಗೆ ಹೋಗಿದ್ದಾರೆ, ಗಂಡ ಆಫೀಸಿಗೆ. ನೀವು 8ನೇ ಮಹಡಿಯಲ್ಲಿ ನಿಮ್ಮ ಬಾಲ್ಕನಿಯಲ್ಲಿ ಏಕಾಂಗಿಯಾಗಿ ಕುಳಿತಿರುವಿರಿ. ಹಾಗೆಂದು ನೀವು ದಿಗಿಲುಗೊಳ್ಳುವ ಅಗತ್ಯವಿಲ್ಲ. ಹೊಸ ತಂತ್ರಜ್ಞಾನದ ರೂಪದಲ್ಲಿ ಬಂದಿರುವ ಮೊಬೈಲ್‌, ಲ್ಯಾಪ್‌ಟಾಪ್‌ ನಿಮಗೆ ಒಂದು ರೀತಿಯಲ್ಲಿ ಅಸ್ತ್ರಗಳಂತೆ ಇವುಗಳಿಂದ ನೀವು ನಿಮಗೆ ಸುರಕ್ಷತೆಯ ಗ್ಯಾರಂಟಿ ಕೊಡುವುದಷ್ಟೇ ಅಲ್ಲ, ಅವುಗಳಿಂದ ನಿಮ್ಮನ್ನು ನೀವು ಅಪ್‌ಡೇಟ್‌ ಆಗಿಟ್ಟುಕೊಳ್ಳಬಹುದು.

ಅಷ್ಟೇ ಅಲ್ಲ, ಬಹಳಷ್ಟು ಆಪ್ಶನ್‌ಗಳಿದ್ದು, ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್ಆ್ಯಪ್‌ ಮೂಲಕ ನಿಮ್ಮ ಸಾಮಾಜಿಕ ವಲಯದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲೂಬಹುದು. ನೀವು ಯಾವುದಾದರೊಂದು ಗುಂಪಿಗೆ ಸದಸ್ಯರಾಗುವುದರ ಮೂಲಕ ಹಾಡು, ವೀಡಿಯೋ, ಜೋಕ್ಸ್ ಮುಂತಾದವನ್ನು ವಿನಿಮಯ ಮಾಡಬಹುದು. `ಹಿಮ್ಮತ್‌’ನಂತಹ ಆ್ಯಪ್ಸ್ ಡೌನ್‌ಲೋಡ್‌ ಮಾಡಿಕೊಂಡು ಸುರಕ್ಷತೆಯ ಮತ್ತಷ್ಟು ಖಚಿತತೆ ಮಾಡಿಕೊಳ್ಳಬಹುದು. ನಿಮ್ಮ ಜೊತೆ ಯಾರಾದರೂ ಅನುಚಿತವಾಗಿ ನಡೆದುಕೊಂಡರೆ, ಅವು ಅವಸರ ಧ್ವನಿ ಅಥವಾ ವೀಡಿಯೋ ರೆಕಾರ್ಡ್‌ ಮಾಡಿಕೊಂಡು ಅಂಥವರ ವಿರುದ್ಧ ಪುರಾವೆ ಸಹಿತ ದೂರು ದಾಖಲಿಸಲು ಅನುಕೂಲವಾಗುತ್ತದೆ. ನಿಮ್ಮ ಮನೆ ಹೊರಗಡೆ ಅಷ್ಟಿಷ್ಟು ಸದ್ದಾದರೂ ನೀವು ತಕ್ಷಣವೇ ಜಾಗೃತರಾಗಬಹುದು. ಇದಕ್ಕಾಗಿ ನೀವು `ಟೆಕ್ನೊಸೆವಿ’ ಆಗುವುದು ಅತ್ಯವಶ್ಯ. ಮನೆಯನ್ನು ಹೊಸ ತಂತ್ರಜ್ಞಾನದ ಅಧೀನಕ್ಕೊಳಪಡಿಸಲು ಇ-ಹೋವ್‌ ಆಪ್ಶನ್‌ಗೆ ಕ್ಲಿಕ್ ಮಾಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ