ರೋಹಿತ್‌ ಜೊತೆ ಶೀಲಾಳ ಮದುವೆಯಾಗಿ ಸುಮಾರು 3-4 ತಿಂಗಳುಗಳಾಗಿರಬಹುದು. ಒಮ್ಮೆ ಊಟದ ಸಮಯದಲ್ಲಿ ಸ್ಮಿತಾ ತಾನಾಗಿ ಹುಡುಕಿಕೊಂಡು ಶೀಲಾಳ ಆಫೀಸಿಗೆ ಬಂದಿದ್ದು. ತನ್ನ ಪರಿಚಯ ಹೇಳಿಕೊಂಡು ನಂತರ ಒಂಟಿಯಾಗಿ ಮಾತನಾಡಬೇಕೆಂದು ತಿಳಿಸಿದಳು. ಆಗ ಆಫೀಸಿಗೆ ಹತ್ತಿರದಲ್ಲಿದ್ದ ಪಾರ್ಕಿಗೆ ಶೀಲಾ ಸ್ಮಿತಾಳನ್ನು ಕರೆದುಕೊಂಡು ಹೋದಳು. ಅಲ್ಲಿದ್ದ ಒಂದು ಮರದ ಕೆಳಗೆ ಕಲ್ಲು ಬೆಂಚಿನ ಮೇಲೆ ಇಬ್ಬರೂ ಒರಗಿ ಕುಳಿತರು.

ಸ್ವಲ್ಪ ಹೊತ್ತು ಗಂಭೀರವಾಗಿ ಮೌನಕ್ಕೆ ಶರಣಾದ ಸ್ಮಿತಾ ನಂತರ ದೃಢಮನಸ್ಕಳಾಗಿ ಹೇಳತೊಡಗಿದಳು, “ಶೀಲಾ, ನಿಮಗೆ ನಾನೊಂದು ಶಾಕಿಂಗ್‌ ಸುದ್ದಿ ಹೇಳಬೇಕಿದೆ. ದಯವಿಟ್ಟು ಗಾಬರಿಯಾಗಬೇಡಿ… ಸ್ವಲ್ಪ ಸಮಾಧಾನದಿಂದ ಕೇಳಿಸಿಕೊಳ್ಳಿ. ನಾನು, ರೋಹಿತ್‌ ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ತನ್ನ ತಾಯಿ ತಂದೆಯರ ಒತ್ತಾಯಕ್ಕೆ ಮಣಿದು ಅವರನ್ನು ಎದುರಿಸಲಾಗದೆ ರೋಹಿತ್‌ ನಿಮ್ಮನ್ನು ಮದುವೆಯಾದರು. ನಮ್ಮಿಬ್ಬರ ಜಾತಿ, ಅಂತಸ್ತು ಬೇರೆ ಎಂಬುದೇ ಇಲ್ಲಿ ಸಮಸ್ಯೆ ಆಗಿತ್ತು. ನನ್ನಂಥ ಅತಿ ಸಾಧಾರಣ ಬಡವರ ಮನೆ ಹುಡುಗಿ, ಅದೂ ಬೇರೆ ಜಾತಿಯ ಹುಡುಗಿಯನ್ನು ಅವರ ಮನೆಯವರು ಸೊಸೆಯಾಗಿ ಒಪ್ಪಿಕೊಳ್ಳಲು ಸುತಾರಾಂ ಸಿದ್ಧರಿರಲಿಲ್ಲ. ಆದರೆ ನಮ್ಮಿಬ್ಬರ ಪವಿತ್ರ ಪ್ರೇಮ ಸಂಬಂಧ ಮಾತ್ರ ಹಾಗೇ ಮುಂದುವರಿಯಿತು. ಈ ವಿಷಯ ನಿಮಗೆ ತಿಳಿಸಬೇಕೆಂದೇ ನಾನು ಇಲ್ಲಿಗೆ ಬಂದದ್ದು ಶೀಲಾ…”

ಸ್ಮಿತಾಳ ಮಾತು ಕೇಳಿ ಶೀಲಾಳಿಗೆ ಕೆಲವು ಕ್ಷಣ ಮಂಕು ಕವಿದಂತಾಯಿತು. ಮನದಲ್ಲಿ ಇದ್ದಕ್ಕಿದ್ದಂತೆ ವಿಚಿತ್ರ ಭಯ, ಆತಂಕ ಆವರಿಸಿತು. ಶೀಲಾ ಹೇಗೋ ಸಾವರಿಸಿಕೊಂಡು ಹೇಳಿದಳು “ರೋಹಿತ್‌ ನನ್ನೊಂದಿಗೆ ಬಹಳ ಸಂತೋಷವಾಗಿದ್ದಾರೆ… ನನಗೆ ನಿಮ್ಮ ಮಾತು ನಂಬಲಾಗುತ್ತಿಲ್ಲ….”

ಅದಕ್ಕೆ ಉತ್ತರಾಗಿ ಸ್ಮಿತಾ ತನ್ನ ಪರ್ಸಿನಿಂದ ಹಲವಾರು ಫೋಟೋಗಳನ್ನು ತೆಗೆದು ಶೀಲಾಗೆ ಕೊಟ್ಟಳು.  ಅದನ್ನು ನೋಡಿದ ಮೇಲೆ ಸ್ಮಿತಾಳ ಮಾತುಗಳನ್ನು ನಂಬಲೇಬೇಕಾಯಿತು.

“ಆಗಿದ್ದಾಯ್ತು… ಈಗ ನೀವು ಬೇರೆ ಯಾರನ್ನಾದರೂ ಮದುವೆಯಾಗಿ  ರೋಹಿತ್‌ರನ್ನು ಮರೆಯುವುದೇ ಮೇಲು… ಇದರಿಂದ ಅವರ ಸಂಸಾರ ನೆಮ್ಮದಿಯಾಗಿ ಉಳಿಯುತ್ತದೆ. ನೀವು ಹಾಯಾಗಿ ನಿಮ್ಮದೇ ಆದ ಸಂಸಾರ ಹೂಡಿ ಮನೆಮಠ ಮಾಡಿಕೊಳ್ಳಿ, ಇನ್ನೊಂದು ಮುಖ್ಯ ವಿಷಯ ಎಂದರೆ ಆತ ನನ್ನ ಗಂಡ. ನನ್ನ ಗಂಡನಾದವನ ಮೇಲೆ ನಿಮ್ಮದೇನೂ ಹಕ್ಕಿರುವುದಿಲ್ಲ ಅನ್ನೋದು ನೆನಪಿಡಿ!” ಮಾತು ಮುಗಿಸುವಷ್ಟರಲ್ಲಿ ಶೀಲಾಳಿಗೆ ಅಳು ಉಕ್ಕಿಬಂದಿತ್ತು.

“ಶೀಲಾ ಇನ್ನೊಂದು ವಿಷಯ ಕೇಳಿ… ನಾನೊಬ್ಬ ವಿಚ್ಛೇದಿತ ಹೆಂಗಸು, ನನ್ನ ಕಷ್ಟದ ಸಮಯದಲ್ಲಿ ರೋಹಿ ನನಗೆ ಬಹಳ ಹೆಲ್ಪ್ ಮಾಡಿದ್ದಾನೆ. ಇಲ್ಲದಿದ್ದರೆ ನಾನಿಂದು ಬದುಕಿ ಉಳಿಯುತ್ತಿರಲಿಲ್ಲ. ಏನೋ ಕಾರಣಗಳಿಂದ ನಾವು ಮದುವೆ ಆಗಲಿಲ್ಲ, ಹೀಗಾಗಿ ನಾನು ಬೇರೆ ಮದುವೆ ಆಗಬೇಕಾಯ್ತು. ಆತ ದುಬೈಗೆ ಹೋಗಿ ಸೆಟಲ್ ಆಗಿ ಅಲ್ಲೇ ಬೇರೆ ಮದುವೆಯಾದ, ನಾನು ವಿಚ್ಛೇದನ ಪಡೆದೆ. ನಾನೀಗ ಹೊಸ ಮದುವೆಯ ಬಗ್ಗೆ ಖಂಡಿತಾ ಯೋಚಿಸಲಾರೆ. ನಾನು ನಿಮ್ಮಿಂದ ರೋಹಿ ಬೇರೆ ಆಗಲಿ ಎಂದು ಬಯಸುತ್ತಿಲ್ಲ. ಆದರೆ ಅವನನ್ನು ಬಿಟ್ಟು ನಾನು ಬದುಕಿರಲಾರೆ. ನಮ್ಮ ಮೂವರಿಗೂ ಲಾಭವಾಗುವ ಒಂದೇ ಉಪಾಯವೆಂದರೆ, ಈ ತ್ರಿಕೋನ ಸಂಬಂಧವನ್ನು ಮೂವರೂ ಒಪ್ಪುವುದು. ರೋಹಿಯನ್ನು ನನ್ನೊಂದಿಗೆ ಹಂಚಿಕೊಳ್ಳಲು ನೀವು ಒಪ್ಪಲೇಬೇಕು!”

ಅವಳು ಆಕ್ರಮಣ ಮಾಡುವವಳಂತೆ ಶೀಲಾ ಮೇಲೆ ಜೋರು ಮಾಡಿದಳು.

“ಖಂಡಿತಾ ಹಾಗಾಗಲು ಸಾಧ್ಯವೇ ಇಲ್ಲ…” ಇದ್ದಕ್ಕಿದ್ದಂತೆ ಶೀಲಾಳಿಗೆ ತೀವ್ರ ಕೋಪ ಉಕ್ಕಿಬಂತು.

“ಅನಗತ್ಯ ಕೋಪ ಮಾಡಿಕೊಂಡು ನೀನು ನಮ್ಮ ಮೂವರ ನೆಮ್ಮದಿ ಹಾಳು ಮಾಡಬೇಡ ಶೀಲಾ!” ಈ ಬಾರಿ ಸ್ಮಿತಾ ಜೋರಾಗಿ ಕಿರುಚಿದಳು.

“ನಾನು ನನ್ನ ವೈವಾಹಿಕ ಜೀವನದ ಸಂತೋಷವನ್ನು ಹಾಳು ಮಾಡಿಕೊಳ್ಳಲಾರೆ ಸ್ಮಿತಾ, ಸರಿಯಾಗಿ ಕೇಳಿಸಿಕೋ. ರೋಹಿಯ ಕಂಗಳಲ್ಲಿ ನನಗಾಗಿ ನಿರ್ಮಲ ಪ್ರೇಮವನ್ನು ಗುರುತಿಸಿದ್ದೇನೆ… ನನಗಾಗಿ ಅವರೆಷ್ಟು ಕಾಳಜಿ ವಹಿಸುತ್ತಾರೆ ಎಂಬುದು ಚೆನ್ನಾಗಿ ಗೊತ್ತು. ಸರಿ, ನಿಮ್ಮಿಬ್ಬರ ಹಿಂದಿನ ಕಥೆ ಏನೇ ಇರಲಿ, ಅದು ಹಳೆಯ ಕಥೆ ಮಗಿದು ಹೋಯಿತು… ಹಿಂದೆ ಯಾವಾಗಲೋ ರೋಹಿ ನಿನ್ನವರಾಗಿದ್ದರು ಎಂಬುದು ಈಗ ಮುಖ್ಯವಲ್ಲ. ಈಗಂತೂ ನಿಮ್ಮಿಬ್ಬರ ನಡುವೆ ಯಾವ ಸಂಬಂಧ ಮೂಡಲಿಕ್ಕೂ ಸಾಧ್ಯವಿಲ್ಲ. ಇದನ್ನು ಮೀರಿ ರೋಹಿ ನಿನ್ನೊಂದಿಗೆ ಸಂಬಂಧ ಮುಂದುವರಿಸುತ್ತಾರೆ ಎಂದರೆ ನಾನು ಖಂಡಿತಾ ಅವರನ್ನು ಬಿಟ್ಟು ದೂರ ಹೋಗಿಬಿಡುತ್ತೇನೆ.” ಬಹಳ ಕೋಪದಿಂದ ಶೀಲಾ ಸ್ಮಿತಾಳನ್ನು ಗುಡುಗಿದಳು.

tarkeeb-story-p2

“ನೀನೂ ಹಾಗೆ ನೆನಪಿಟ್ಟುಕೊ… ರೋಹಿ ನನ್ನ ಬಿಟ್ಟುಬಿಟ್ಟರೆ ನಾನು….. ನಾನು…….. ಆತ್ಮಹತ್ಯೆ ಮಾಡಿಕೊಳ್ತೀನಿ!” ಎಂದು ದುರ್ದಾನ ಪಡೆದವಳಂತೆ ಸ್ಮಿತಾ ಅಲ್ಲಿಂದ ಸರಸರ ನಡೆದಳು. ಹೋಗುತ್ತಲೇ “ ಶೀಲಾ, ನೀನೇನಾದರೂ ರೋಹಿಗೆ ಹೇಳಿ ನನ್ನನ್ನು ಮರೆತುಬಿಡುವಂತೆ ಒತ್ತಾಯ ಹೇರಿದರೆ…. ಮುಂದೆ ನನ್ನಿಂದಾಗಿ ಬಹಳ ಪಶ್ಚಾತ್ತಾಪ ಪಡಬೇಕಾಗುತ್ತದೆ, ಹುಷಾರ್‌!” ಎಂದು ಬೆದರಿಸಲು ಮರೆಯಲಿಲ್ಲ.

ಸ್ಮಿತಾ ಹೋದ ಬಹಳ ಹೊತ್ತಿನವರೆಗೂ ಶೀಲಾ ಬೆಂಚಿನ ಮೇಲೆ ಹಾಗೇ ಕುಳಿತಿದ್ದಳು. ಇದ್ದಕ್ಕಿದ್ದಂತೆ ಧುತ್ತೆಂದು ಎದುರಾದ ಈ ಸಮಸ್ಯೆಯನ್ನು ಹೇಗೆ ಎದುರಿಸುವುದೋ ಎಂದು ತಿಳಿಯದೇ ಚಿಂತೆಗೊಳಗಾದಳು. ಸ್ಮಿತಾ ಹೋಗುವಾಗ ಅವಳ ಕಣ್ಣುಗಳು ಕೆಂಡಾಮಂಡಲ ಆಗಿದ್ದವು. ಇದರಿಂದ ಅವಳೆಷ್ಟು ಹಠಮಾರಿ ಎಂಬುದು ಗೊತ್ತಾಗುತ್ತಿತ್ತು. ಅವಳು ರೋಹಿತ್‌ ಜೊತೆಗಿನ ಫೋಟೋಗಳನ್ನು ಬೇಕೆಂದೇ ಅಲ್ಲೇ ಬಿಟ್ಟು ಹೋಗಿದ್ದಳು. ಅದನ್ನೇ ಮತ್ತೆ ಮತ್ತೆ ನೋಡುತ್ತಾ ಈ ಸಮಸ್ಯೆ ಗೆ ಒಂದು ಪರಿಹಾರ ಕಂಡುಹಿಡಿಯಬೇಕೆಂದು ನಿರ್ಧರಿಸಿದಳು. ಅಂದು ರಾತ್ರಿ ಊಟವಾದ ಮೇಲೆ ಶೀಲಾ ರೋಹಿತ್‌ಗೆ ಆ ಫೋಟೋಗಳನ್ನು ತೋರಿಸಿದಾಗ, ಅವನ ಮುಖದ ಬಣ್ಣ ಬದಲಾಯಿತು. “ಅಂದ್ರೆ… ಈ ಫೋಟೋಗಳನ್ನು ನಿನಗೆ ಆ ಸ್ಮಿತಾ ಕೊಟ್ಟುಹೋದಳೋ?” ಈ ಪ್ರಶ್ನೆ ಕೇಳುತ್ತಿದ್ದಾಗ ಅವನ ಸ್ವರ ತಾನಾಗಿ ಕಂಪಿಸಿತು.

“ಹ್ಞೂಂ ಲಂಚ್‌ ಟೈಂನಲ್ಲಿ ನಮ್ಮ ಆಫೀಸ್‌ ಹುಡುಕಿಕೊಂಡು ಅಲ್ಲಿಗೆ ಬಂದಿದ್ದಳು.” ರೋಹಿತ್‌ನ ಮನದ ಭಾವಗಳನ್ನು ಓದುವವಳಂತೆ ನಿಧಾನವಾಗಿ ಅವನ ಮುಖವನ್ನೇ ಗಮನಿಸಿದಳು. ರೋಹಿತ್‌ ಬಾಯಿಂದ ತಕ್ಷಣ ಒಂದು ಕೆಟ್ಟಮಾತು ಕೇಳಿಸಿತು. ನಂತರ ಅವನು ಶೀಲಾಳನ್ನು ಸಂತೈಸುತ್ತಾ, “ಶೀಲಾ, ನೀನು ಆ ಹಾಳಾದವಳ ಮಾತುಗಳಿಗೆ ಗಮನ ಕೊಡಬೇಡ. ನಾನೀಗ ಅವಳೊಂದಿಗೆ ಯಾವುದೇ ವಿದಧ ಫ್ರೆಂಡ್‌ಶಿಪ್‌ ಇಟ್ಟುಕೊಂಡಿಲ್ಲ. ಆದರೆ…”

“ಆದರೆ ಏನು?”

“ಅವಳೊಂದು ತರಹ ಹುಚ್ಚು ಹೆಂಗಸು. ಅಗತ್ಯಕ್ಕಿಂತಲೂ ಅತಿ ಹೆಚ್ಚು ಭಾವುಕಳು… ನಾನೇ ಈಗ ಅವಳಿಗೆ ತಿಳಿಯಹೇಳುತ್ತೇನೆ. ನನ್ನನ್ನು ನಂಬು, ನಾನು ಕೇವಲ ನಿನಗೆ ಸೇರಿದವನು ಶೀಲಾ,” ಎನ್ನುತ್ತಾ ರೋಹಿತ್‌ ಬಲು ಭಾವುಕತೆಯಿಂದ ಶೀಲಾಳ ಕೈಯನ್ನು ಹಿಡಿದು ಚುಂಬಿಸಿದ. ಶೀಲಾ ರೋಹಿತ್‌ನ ಕಂಗಳನ್ನು ದಿಟ್ಟಿಸಿದಾಗ ಅಲ್ಲಿ ಪ್ರಾಮಾಣಿಕತೆ ಕಂಡುಬಂದಿತು. ಶೀಲಾಳ ಮನದಲ್ಲಿ ಆತಂಕ ತಂತಾನೇ ಕಡಿಮೆಯಾಯಿತು. ಅವಳೀಗ ನಿರಾಳವಾಗಿ ಉಸಿರಾಡಿದಳು.

ತಕ್ಷಣ ಅವನನ್ನು ಗಾಢವಾಗಿ ಚುಂಬಿಸಿ ಶೀಲಾ ಹೇಳಿದಳು, “ಸ್ಮಿತಾಳ ಮಾತು ಕೇಳಿದ ನಂತರ ನನಗೆ ನಿಮ್ಮ ಮೇಲೇನೂ ಅನುಮಾನ ಬರಲಿಲ್ಲ ಅಥವಾ ವಿಶ್ವಾಸ ಹೋಗಿಬಿಡಲಿಲ್ಲ. ಆದರೆ ಒಂದು ವಿಷಯ ನನಗೆ ಅರ್ಥವಾಗಲಿಲ್ಲ, ಅವಳೇಕೆ ಬಂದು ನನ್ನನ್ನು ಭೇಟಿಯಾದದ್ದು?”

“ನಾನು ಅವಳಿಗೆ ಇದೇ ಕುರಿತಾಗಿ ಮತ್ತೆ ಮತ್ತೆ ಎಚ್ಚರಿಕೆ ನೀಡಿದ್ದೆ….. ಹಾಗೆ ಮಾಡಬೇಡಾಂತ, ಆದರೆ ಅವಳು ಕೇಳಬೇಕಲ್ಲ…”

“ನೀವು ಅಳಿಂದ ದೂರ ಸರಿಯುವ ನಿರ್ಧಾರ ಮಾಡಿರುವುದು ನಿಜ ತಾನೇ?”

“ಖಂಡಿತಾ…. 100%… ಅವಳು ಸಾವಿರ ಪ್ರಯತ್ನ ಮಾಡಲಿ, ನಿನ್ನ ಮೇಲಿನ ಪ್ರೀತಿ ವಿಶ್ವಾಸ ಕಳೆದುಕೊಳ್ಳುವವನಲ್ಲ ನಾನು!”

“ಈ ಮಾತನ್ನು ನೀವು ಸ್ಮಿತಾಗೆ ಸ್ಪಷ್ಟವಾಗಿ ಹೇಳಿದ್ದೀರಿ ತಾನೇ?”

“ಎಷ್ಟೋ ಸಲ!”

“ಅರ್ಥ ಆಯ್ತು ಬಿಡಿ. ಅವಳು ಬೇಕೆಂದೇ ನನ್ನನ್ನು ಭೇಟಿಯಾಗಿ, ನಿಮ್ಮ ವಿರುದ್ಧ ನನ್ನಲ್ಲಿ ಕಹಿ ಭಾವನೆ ಬಿತ್ತಿ, ನಮ್ಮಿಬ್ಬರ ಸಂಬಂಧದಲ್ಲಿ ಬಿರುಕು ತರಿಸಲು ಯತ್ನಿಸುತ್ತಿದ್ದಾಳೆ. ಈ ಹಾಳು ಫೋಟೋಗಳನ್ನು ನೋಡಿ ನಾನು ನಿಮ್ಮ ಮೇಲೆ ಕೋಪಗೊಂಡು ಜಗಳ ಕಾಯುತ್ತೇನೆ, ಮನೆ ಬಿಟ್ಟು ಹೋಗುತ್ತೇನೆ ಅಂತೆಲ್ಲ ಅಂದುಕೊಂಡಿರಬೇಕು. ಅದಕ್ಕಾಗಿಯೇ ನಮ್ಮ ಸಂಸಾರದ ನೆಮ್ಮದಿ ಹಾಳುಮಾಡಲೆಂದು ಈ ಕುತಂತ್ರ ಹೂಡಿದ್ದಾಳೆ.”

“ಅದರೆ ಶೀಲಾ, ನೀನು ಅವಳ ಕುತಂತ್ರಕ್ಕೆ ಬಲಿಯಾಗಬಾರದಷ್ಟೇ” ರೋಹಿತ್‌ ಹೇಳಿದ.

“ನಾನು ಖಂಡಿತಾ ಅವಳ ಮಾತು ಒಪ್ಪುತ್ತೀನಿ, ಅವಳ ಇಷ್ಟದಂತೆಯೇ ನಡೆಯುತ್ತೀನಿ…”

“ಇದೇನು ಹೇಳ್ತಿದ್ದಿ ಶೀಲಾ?” ರೋಹಿತ್‌ ಜೋರಾಗಿ ಕೇಳಿದ.

“ನೀವು ಸ್ಮಿತಾಳನ್ನು ಪ್ರೇಮಿಸಿದ್ದೇ ನಿಜವಾದಲ್ಲಿ ನನ್ನನ್ನು ಯಾಕೆ ಮದುವೆ ಆದಿರಿ? ಅವಳಿಗೆ ನಿಮ್ಮ ಮೇಲೆ ಇನ್ನೂ ಬಹಳ ವಿಶ್ವಾಸವಿದೆ, ನೀವು ಅವಳಿಂದ ದೂರ ಸರಿಯಲ್ಲ ಅಂತಾನೇ ಹೇಳ್ತಾಳೆ. ಆದ್ದರಿಂದ ಅದು ನನಗೆ ಖಂಡಿತಾ ಒಪ್ಪಿಗೆಯಿಲ್ಲ. ನಾನು ಈ ಮನೆ ಬಿಟ್ಟು ಹೋಗುತ್ತಿದ್ದೀನಿ… ನನಗೆ ಭಾರಿ ಮೋಸ ಆಗಿದೆ, ನನಗೆ ಡೈವೋರ್ಸ್ ಬೇಕೇ ಬೇಕು!” ಕೋಪದಿಂದ ಶೀಲಾ ಸಿಡಿಯುತ್ತಿದ್ದಳು.

“ಇದೇನು ನಿನ್ನ ಹುಚ್ಚು ಮಾತುಗಳು?”“ಇದು ನನ್ನ ಹುಚ್ಚು ಮಾತುಗಳಲ್ಲ… ಬದಲಿಗೆ ನಾನು ಹೀಗೆ ಆಡಲಿ ಅಂತಾನೇ ಅವಳು ಕಾಯುತ್ತಿದ್ದಾಳೆ. ಅವಳಿಗೆ ಬೇಕಿರುವುದು ಅದೇ ತಾನೇ? ನಾವಿಬ್ಬರೂ ಜಗಳ ಆಡಿ ಬೇರಾಗಬೇಕು, ಮನಶ್ಶಾಂತಿ ಕಳೆದುಕೊಳ್ಳಬೇಕು. ಅವಳಿಗೆ ದಕ್ಕದ ಸಾಂಸಾರಿಕ ಸುಖ ನಿಮಗೂ ಇರಬಾರದು ಅಂತ,” ಶೀಲಾ ಹೇಳಿದಾಗ ರೊಹಿತ್‌ಗೆ ನಿಜಕ್ಕೂ ಆಶ್ಚರ್ಯವಾಯಿತು. ಏನಪ್ಪ ಇವಳು ಒಮ್ಮೆ ಹಾಗೆ ಒಮ್ಮೆ ಹೀಗೆ ಮಾತನಾಡುತ್ತಾಳೆ ಎಂದುಕೊಂಡ. ಅವಳ ಶಾಂತ ವರ್ತನೆಯಿಂದ ತನ್ನ ಕಡೆಗೇ ಇದ್ದಾಳೆ ಎಂದು ಅರ್ಥ ಮಾಡಿಕೊಂಡ.

ಅಲ್ಲಿದ್ದ ಮೊಬೈಲ್ ‌ಅವನ ಕೈಗೆ ಕೊಡುತ್ತಾ, “ ಈಗಲೇ ಅವಳಿಗೆ ಫೋನ್‌ ಮಾಡಿ, ಒಂದು ಸುಳ್ಳು ಸುದ್ದಿ ಕೊಡಿ. ನಿಮ್ಮ  ಸಾಂಸಾರಿಕ ಜೀವನದಲ್ಲಿ ಬೆಂಕಿ ಬಿದ್ದಿದೆ, ನಮ್ಮಿಬ್ಬರ ನಡುವೆ ಬಿರುಕು ಮೂಡಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ಹುಳಿ ಹಿಂಡುವಲ್ಲಿ ಅವಳು ಯಶಸ್ವಿಯಾಗಿದ್ದಾಳೆ ಎಂದು ಸ್ವಲ್ಪ ಖಾರವಾಗಿ ಹೇಳಿ. ನಾನು ನಿಮ್ಮನ್ನು ಬಿಟ್ಟು ತವರಿಗೆ ಹೋಗಿಬಿಟ್ಟೆ ಎಂದು ಹೇಳಿ. ಅವಳು ಮಾಡಿದ ಈ ಪಾಪಿಷ್ಟ ಕೆಲಸಕ್ಕೆ ನೀವು ಎಂದೂ ಅವಳನ್ನು ಕ್ಷಮಿಸುವುದಿಲ್ಲ ಎಂದು ಹೇಳಿ.”

ಏನು, ಏಕೆ, ಹೇಗೆ ಎಂದು ಕಕ್ಕಾಬಿಕ್ಕಿಯಾಗಿದ್ದ ರೋಹಿತ್‌ಗೆ, ತಮ್ಮಿಬ್ಬರ ಹಿತದೃಷ್ಟಿಯಿಂದಲೇ ತಾನು ಈ ರೀತಿ ಮಾತನಾಡುತ್ತಿದ್ದೇನೆ ಎಂದು ತಿಳಿಸಿದಳು. ನಂತರ ರೋಹಿತ್‌ ಬೊಂಬಾಟ್‌ ಆಗಿ ಫೋನ್‌ನಲ್ಲಿ ಡೈಲಾಗ್‌ ಡೆಲಿವರಿ ನೀಡಿದ. ಅವನ ಸ್ವರದಲ್ಲಿ ತೀವ್ರ ಕೋಪ, ಆಕ್ಷೇಪಣೆ, ತಿರಸ್ಕಾರ, ದುಃಖ, ಅಸಹಾಯಕತೆಗಳು ಉಕ್ಕಿಹರಿದಿದ್ದವು.

“ನನ್ನ ಹೆಂಡತಿಯ ಮನದಲ್ಲಿ ನನ್ನ ನಡತೆಯ ವಿರುದ್ಧ ಸಂಶಯ ಹುಟ್ಟುವಂತೆ ಮಾಡಿ, ಅವಳ ದೃಷ್ಟಿಯಲ್ಲಿ ನನ್ನನ್ನು ಹೀನಾಯ ಮಾಡಿದ್ದಕ್ಕೆ ನಾನು ನಿನ್ನನ್ನು ಎಂದೂ ಕ್ಷಮಿಸುವುದಿಲ್ಲ…. ನೀನು ನನ್ನ ಮನೆ ಹಾಳು ಮಾಡಿದ್ದಂತೂ ಆಯ್ತು, ಆದರೆ ಇದಕ್ಕೆ ನಿನಗೂ ಶಿಕ್ಷೆ ಕೊಡದೆ ಬಿಡುವುದಿಲ್ಲ. ಸ್ಮಿತಾ, ನಿನ್ನನ್ನು ನಾನು ದ್ವೇಷಿಸುತ್ತೀನಿ, ಐ ಹೇಟ್‌ ಯೂ! ಇನ್ನೊಂದು ಸಲ ನೀನೇದರೂ ನನ್ನೆದುರಿಗೆ ಬಂದರೆ ನಾನು ನಿನ್ನ ಕುತ್ತಿಗೆ ಹಿಸುಕದೆ ಬಿಡುವುದಿಲ್ಲ…. ನನ್ನ ಸಂಸಾರ ನುಚ್ಚುನೂರು ಮಾಡಿ ನಿನಗೆ ಸಿಕ್ಕಿದ್ದೇನು? ನಿನ್ನಂಥ ದುಷ್ಟ ಹೆಂಗಸು ಬೇರೆ ಯಾರೂ ಇರೋಲ್ಲ. ಶೀಲಾ ನನ್ನನ್ನು ಬಿಟ್ಟು ಶಾಶ್ವತವಾಗಿ ಹೊರಟುಹೋಗಿದ್ದಾಳೆ… ಅವಳ ತವರಿಗೆ ಹೋಗಿ ನಾನು ಎಷ್ಟು ಕನ್ವಿನ್ಸ್ ಮಾಡಿದರೂ ಅವಳು ಒಪ್ಪುತ್ತಿಲ್ಲ.  ಅವಳನ್ನು ನನ್ನಿಂದ ಬೇರೆ ಮಾಡಿದ ನಿನ್ನನ್ನು ಏನು ಮಾಡಿದರೂ ತಪ್ಪಿಲ್ಲ ಅಂತೀನಿ… ನಿನ್ನಂಥವಳನ್ನು ಪ್ರೀತಿಸುತ್ತಿದ್ದೆನೇ ಅಂತ ಅಂದುಕೊಂಡರೇನೇ ಅಸಹ್ಯವಾಗುತ್ತೆ. ಎಲ್ಲಾದರೂ ಹಾಳಾಗಿ ಹೋಗೂ…”

ಆ ಕಡೆಯಿಂದ ಸ್ಮಿತಾ ಇದರಲ್ಲಿ ತನ್ನದೇನೂ ತಪ್ಪಿಲ್ಲ ಎಂದು ಸ್ಪಷ್ಟೀಕರಣ ನೀಡಲು ಯತ್ನಿಸುತ್ತಿದ್ದಳು. ಆದರೆ ರೊಹಿತ್‌ ಪದೇ ಪದೇ ಅವಳನ್ನು ಬೈಯುತ್ತಲೇ ಹೋದಾಗ, ಅವಳು ತನ್ನ ಪ್ರೀತಿಯ ಕುರಿತು ಮತ್ತೆ ಮತ್ತೆ ಹೇಳುತ್ತಾ ಅವನನ್ನು ಎಮೋಷನಲ್ ಬ್ಲ್ಯಾಕ್‌ ಮೇಲ್ ಮಾಡಲು ಯತ್ನಿಸಿದಳು. ಆದರೂ ರೋಹಿತ್‌ ಒಪ್ಪಲಿಲ್ಲ. ಕೊನೆಗೆ ಅವಳಿಗೂ ಕೋಪ ಬಂದು, “ನೀನು ನನಗೆ ಮಾಡಿದ ಮೋಸಕ್ಕೆ ಸರಿಯಾದ ಶಾಸ್ತಿ ಆಯ್ತು ಬಿಡು!” ಎಂದು ಗುಡುಗಿದಳು.

“ಈಗ ನಿನಗೂ ನನಗೂ ಯಾವ ಸಂಬಂಧ ಇಲ್ಲ. ನೀನು ಈ ಕ್ಷಣ ಸತ್ತರೂ ನನಗೆ ಯಾವ ದುಃಖ ಆಗುವುದಿಲ್ಲ.”

“ ನೀನು ಹೆಂಡತಿಯನ್ನು ಕಳೆದುಕೊಂಡು ಒಬ್ಬಂಟಿಯಾಗಿ ಸಂಕಟ ಪಡುವುದನ್ನು ನೋಡಲಿಕ್ಕೆಂದೇ ನಾನು ಬದುಕಿರುತ್ತೇನೆ.”

“ಗೋ ಟು ಹೆಲ್!” ಎನ್ನುತ್ತಾ ರೋಹಿತ್‌ ತಕ್ಷಣ ಫೋನ್‌ ಆಫ್‌ ಮಾಡಿದ. ನಂತರ ಆಳವಾಗಿ ನಿಟ್ಟುಸಿರಿಟ್ಟು, ಸೋಫಾದಲ್ಲಿ ಹಿಂದಕ್ಕೆ ಒರಗಿದ.

“ಗುಡ್‌… ವೆರಿ ಗುಡ್‌! ನಿಜಕ್ಕೂ ನಿಮ್ಮ ನಟನೆ ಬಲು ಬೊಂಬಾಟ್‌ ಆಗಿತ್ತು,” ಶೀಾ ಗಂಡನನ್ನು ಪ್ರಶಂಸಿಸಿದಳು.

“ನಾನು ಹೆಚ್ಚಿಗೇನೂ ನಟಿಸಲಿಲ್ಲ… ಅವಳು ಮಾಡಿದ್ದ ಕಚಡಾ ಕೆಲಸಕ್ಕೆ ನಿಜಕ್ಕೂ ನನಗೆ ಅವಳ ಮೇಲೆ ಕೆಂಡಾಮಂಡಲ ಸಿಟ್ಟು ಬಂದಿತ್ತು,” ಎಂದು ಮುಗ್ಧನಾಗಿ ಹೇಳುತ್ತಾ ಶೀಲಾ ಕಡೆ ಮಂದಹಾಸ ಬೀರಿದ.

“ ಅವಳೆಲ್ಲಾದರೂ ಆತ್ಮಹತ್ಯೆ ಮಾಡಿಕೊಂಡಾಳು ಅಂತ ನಿಮಗೆ ಗಾಬರಿ ಆಗಲಿಲ್ಲ ತಾನೇ…?”

“ಅವಳು ಯಾವಾಗಲೂ ಇದನ್ನೇ ಬ್ರಹ್ಮಾಸ್ತ್ರವಾಗಿ ಬಳಸಿ ನನ್ನನ್ನು ಕಂಟ್ರೋಲ್ ನಲ್ಲಿ ಇಟ್ಟಿದ್ದಳು. ಈಗಲೂ ಬಹುಶಃ ಅವಳೇನಾದರೂ ಹಾಗೇ…..”

“ಖಂಡಿತ ಆ ವಿಚಾರವಾಗಿ ತಲೆ ಕೆಡಿಸಿಕೊಳ್ಳಬೇಡಿ. ಬೊಗಳುವ ನಾಯಿ ಕಚ್ಚುವುದಿಲ್ಲ ಅಂತ ಗೊತ್ತು ತಾನೇ? ಯಾರು ನಿಜವಾಗಿಯೂ ದುಃಖಿಗಳೋ ಅತ್ಯಧಿಕ ಖಿನ್ನತೆಗೆ ಒಳಗಾಗುತ್ತಾರೋ ಅಂಥವರು ಮಾತ್ರವೇ ಸಾವಿಗೆ ಶರಣಾಗುತ್ತಾರೆ.  ಈ ಸ್ಮಿತಾ ಅಂಥವಳಲ್ಲ, ಏನಿದ್ದರೂ ನಮ್ಮನ್ನು ಬೇರೆ ಮಾಡಿ ಅದರ ಮಜಾ ಪಡೆಯುವುದೇ ಅವಳ ಗುರಿ. ಅಸೂಯೆಯ ಬೆಂಕಿಯಲ್ಲಿ ಉರಿಯುತ್ತಿರುವ ಅವಳು ಇತರರನ್ನು ಕೊಲ್ಲಲು ಯತ್ನಿಸಬಹುದೇ ಹೊರತು ತಾನೇ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.”

“ನೀನು ಹೇಳುವುದು ಸರಿಯಾಗಿಯೇ ಇದೆ,” ಎಂದು ರೊಹಿತ್‌ ಶೀಲಾಳನ್ನು ಹೊಗಳಿದ.

“ಥ್ಯಾಂಕ್ಸ್, ಆದರೆ ಒಂದು ಮಾತನ್ನು ನೀವು ಸದಾ ನೆನಪಿಡಬೇಕು,” ಶೀಾ ಎಚ್ಚರಿಸಿದಳು.

“ಯಾವ ವಿಷಯ ಹೇಳ್ತಿದ್ದಿ?”

“ಮುಂದಿನ ಸಲ ಆ ಸ್ಮಿತಾ ನಿಮ್ಮನ್ನು ಮೀಟ್‌ ಮಾಡಲು ಕರೆದರೆ ಅಥವಾ ಫೋನ್‌ ಮಾಡಿದರೆ, ನಿಮ್ಮ ಸಂಸಾರ ನುಚ್ಚುನೂರಾಗಿದೆ… ನೀವು ಒಬ್ಬಂಟಿಯಾಗಿ ಬಹಳ ಕಷ್ಟಪಡ್ತಿದ್ದೀರಿ, ಹೆಂಡತಿ ನಿಮ್ಮನ್ನು ಬಿಟ್ಟು ತವರಿಗೆ ಹೋಗಿ, ಮನೆಯಲ್ಲಿ ನೀವೇ ಎ್ಲಾ ಕೆಲಸ ಮಾಡುತ್ತಾ ಯಮಯಾತನೆ ಅನುಭವಿಸುತ್ತಿದ್ದೀರಿ, ಈ ರೀತಿ ಹೇಳುತ್ತಲೇ ಇರಬೇಕು…. ನಿಮ್ಮ ಈ ಎಲ್ಲಾ ಕಷ್ಟಗಳಿಗೆ ಅವಳೇ ಹೊಣೆ ಎಂದು ಹೇಳುತ್ತಿರಬೇಕು!”

“ಸರಿಯಾಗಿ ಹೇಳಿದೆ… ಅವಳು ಮುಂದೆ ಎಂದೂ ಕಾಟ ಕೊಡಬಾರದೆಂದರೆ ಇದೊಂದೇ ದಾರಿ!”

“ಸಂಗಾತಿ ಎಂಬುದರ ನಿಜವಾದ ಅರ್ಥ ಕಷ್ಟಕಾಲದಲ್ಲಿ ಬಿಟ್ಟುಕೊಡದೇ ಜೊತೆಗಿರುವುದೇ ತಾನೇ?”

ರೋಹಿತ್‌ ಅಭಿಮಾನದಿಂದ ಅವಳನ್ನು ಎದೆಗಚಿವುಕೊಂಡ. ಬುದ್ಧಿವಂತಿಕೆಯಿಂದ ಶೀಲಾ ತನ್ನ ಸಂಸಾರ ಉಳಿಸಿಕೊಂಡಿದ್ದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ