ಮೊಬೈಲ್ ನಲ್ಲಿ ಅಲಾರಂ ಹೊಡೆದುಕೊಂಡು 5 ಗಂಟೆ ಆಯಿತೆಂದು ಎಚ್ಚರಿಸಿದಾಗ ಅದೆಷ್ಟೇ ಮಧುರವಾಗಿದ್ದರೂ, ಆಗದು ಅವಳಿಗೆ ಅಷ್ಟೇ ಕರ್ಕಶವಾಗಿ ಕೇಳಿಸಿತು. ಆಗ ಅವಳಿಗೆ ಸ್ಪಷ್ಟವಾಗಿ ಎಚ್ಚರವಾಯಿತು. ಅವಳು ತನ್ನ ಪಕ್ಕ ಮಲಗಿದ್ದ ಗಂಡ, ಇಬ್ಬರು ಮಕ್ಕಳನ್ನೂ ನೋಡಿದಳು. ಎಲ್ಲರೂ ಮುಂಜಾನೆಯ ಸೊಂಪಾದ ಸಕ್ಕರೆ ನಿದ್ದೆಯಲ್ಲಿ ಮುಳುಗಿದ್ದರು. ಅವಳಿಗೂ ತಾನು ಇನ್ನಷ್ಟು ಹೊತ್ತು ಮಲಗೋಣ ಎನಿಸಿತು. ಹಾಗೆಂದೇ ಬಲ ಮಗ್ಗುಲಿಗೆ ತಿರುಗಿ ಮಲಗಿದಳು.

ಆದರೆ ಹಾಳು ಮನಸ್ಸು, ಎಚ್ಚರಗೊಂಡು ಬೇಗ ಏಳು, ಕೆಲಸ ಶುರು ಮಾಡುವ, ಎನ್ನುತ್ತಿರುವಾಗ ದೇಹ ನಿದ್ದೆಗೆ ಜಾರಲು ಸಾಧ್ಯವೇ? ತನ್ನ ದೈನಂದಿನ ಕೆಲಸಗಳಲ್ಲಿ ನೆಮ್ಮದಿಯ ವಿಶ್ರಾಂತಿಗೆ ಅವಕಾಶವಾದರೂ ಎಲ್ಲಿ? ಈಗ ತುಸು ನಿಧಾನ ಮಾಡಿದರೆ ನಂತರ ತಾನು ಆಸ್ಪತ್ರೆಯ ಕೆಲಸಕ್ಕೆ ಹೊರಡಲು ಖಂಡಿತಾ ತಡವಾಗಿ ಹೋಗುತ್ತದೆ. ಆಗ ತನ್ನ ಮೇಲಧಿಕಾರಿ ಡಾ. ಮಯಂಕ್ ತಮ್ಮ ಕನ್ನಡಕದಿಂದ ದುರುಗುಟ್ಟಿಕೊಂಡು ನೋಡಿದರೆ ಭೂಮಿ ಅಲ್ಲೇ ಬಾಯಿ ತೆರೆಯಬಾರದೇ ಎಂಬಷ್ಟು ಕುಗ್ಗಿ ಹೋಗುತ್ತಾಳೆ. ಇವಳು ತಡವಾದಷ್ಟೂ ಒಳರೋಗಿಗಳಿಗೆ ಇನ್ನಷ್ಟು ಕಷ್ಟವಾಗುತ್ತದೆ. ಇದೆಲ್ಲ ಯೋಚಿಸಿ ಸಾಕಾಗಿಯೇ ಅವಳು ದಡಬಡಿಸಿ ಬೇಗ ಎದ್ದುಬಿಟ್ಟಳು. ಬೇಗ ಬೇಗ ಮುಖ ತೊಳೆದು, ಸೆರಗಿನಿಂದಲೇ ಮುಖ ಒರೆಸಿಕೊಳ್ಳುತ್ತಾ, ಕಾಫಿ ಡಿಕಾಕ್ಷನ್‌ಗೆ ಸಿದ್ಧಪಡಿಸಿದಳು. ಕಾಂಪೌಂಡ್‌ ಗೇಟ್‌ಗೆ ತಗುಲಿಹಾಕಿದ್ದ 2 ಲೀ. ಹಾಲಿನ ಪ್ಯಾಕೆಟ್‌ ತೆಗೆದುಕೊಂಡು ಬಂದು, ಬೇಗ ಹಾಲು ಕಾಯಿಸಲು ಇರಿಸಿದಳು. ಹೂಂ..... ಇನ್ನು ಬೆಳಗಿನ ತಿಂಡಿಗೆ ಏನಾದರೂ ಹವಣಿಸಿಕೊಳ್ಳಬೇಕು. ಅಷ್ಟರಲ್ಲಿ ಅವಳು ಗಡಿಯಾರ ನೋಡಿದಾಗ 6 ಗಂಟೆ ಆಯ್ತೆಂದು ಅದು ಎಚ್ಚರಿಸಿತು. ಮಕ್ಕಳನ್ನು ಬೇಗ ಏಳಿ ಎಂದು ಅಲ್ಲಿಂದಲೇ  ಕೂಗು ಹಾಕಿದಳು. ಬಾಯ್ಲರ್‌ ಸ್ವಿಚ್‌ ಆನ್‌ ಮಾಡಿ ಬಂದು, ಉಪ್ಪಿಟ್ಟಿನ ತಯಾರಿಗಾಗಿ ತೆಂಗಿನಕಾಯಿ ತುರಿದು, ಕ್ಯಾಪ್ಸಿಕಂ ಟೊಮೇಟೊ ಹೆಚ್ಚಿಕೊಂಡಳು. ತನಗೆಷ್ಟೇ ಕೆಲಸಗಳಿರಲಿ, ಬೆಳಗಿನ ತಿಂಡಿ ತನ್ನ ಕೈಯಾರೆ ತಯಾರಿಸಿ ಕೊಟ್ಟರೇನೇ ಅವಳಿಗೆ ತೃಪ್ತಿ. ಅಡುಗೆಯ ಸಾವಿತ್ರಮ್ಮ 7 ಗಂಟೆ ಹೊತ್ತಿಗೆ ಬಂದು ಇತರ ಕೆಲಸ ಗಮನಿಸುವವರು. ಅರುಂಧತಿಗೆ ಮಾತ್ರ ಮನೆಯವರಿಗೆ ತಾನೇ ತಿಂಡಿ ಮಾಡಿಕೊಡಬೇಕೆಂಬ ಹಂಬಲ ಮೊದಲಿನಿಂದಲೂ ರೂಢಿಯಾಗಿತ್ತು.

ಅಷ್ಟಲ್ಲದೆ ಸಾವಿತ್ರಮ್ಮ ಒಮ್ಮೊಮ್ಮೆ ಉಪ್ಪುಖಾರದಲ್ಲಿ ವ್ಯತ್ಯಾಸ ಮಾಡಿಬಿಡುತ್ತಿದ್ದರು. ಮಕ್ಕಳು ಗೊಣಗುತ್ತಾರೆಂದು ಅವರನ್ನು ಬಿಡಿಸಿ ಹೊಸಬರಿಗೆ ಅವಕಾಶ ಕೊಟ್ಟಿದ್ದಾಯ್ತು. ಅವರುಗಳ ಕೈ ರುಚಿ ಇನ್ನೂ ಅಧ್ವಾನವಾಗಿತ್ತು. ಹೀಗಾಗಿ ಸಾವಿತ್ರಮ್ಮನವರೇ ಮೇಲು ಎಂದು ವಾಪಸ್ಸು ಅವರನ್ನೇ ಕರೆಸಿದ್ದಾಯ್ತು.

ಹೀಗೆ ಯೋಚಿಸುತ್ತಲೇ ಅವಳು ಬೇಗ ಬೇಗ ರವೆ ಹುರಿದು, ಉಪ್ಪಿಟ್ಟಿನ ಕಥೆ ಪೂರೈಸಿದಳು. ಅಷ್ಟರಲ್ಲಿ ಮಕ್ಕಳು ಎದ್ದಿದ್ದರು. ಅವರಿಗೆ ಹಾಲು ಕೊಟ್ಟು, ಉಳಿದಿರುವ ಹೋಂವರ್ಕ್‌ ಪೂರೈಸುವಂತೆ ಕೂರಿಸಿ, ಗಂಡನನ್ನು ಎಬ್ಬಿಸಲು ಹೊರಟಳು.

``ಗುಡ್‌ ಮಾರ್ನಿಂಗ್‌ ಪ್ರಸಾದ್‌.... ಏಳಿ ಏಳಿ. ಆಗಲೇ 7 ಗಂಟೆ ಆಗಿಹೋಯ್ತು.''

``ಓ..... ಗುಡ್‌ ಮಾರ್ನಿಂಗ್‌, ಈಗಲೇ ಏಳಬೇಕೇ? ಇನ್ನೂ ಸ್ವಲ್ಪ ಹೊತ್ತು....'' ಎಂದು ಅವಳನ್ನು ಆತ್ಮೀಯವಾಗಿ ಸೆಳೆದುಕೊಳ್ಳುತ್ತಿದ್ದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ