ಅಂದು ಆಕಾಶನ ಮದುವೆ ಮುಗಿದು ಮೊದಲ ರಾತ್ರಿ ಘಳಿಗೆ ಸಮೀಪಿಸಿತ್ತು. ಅವನ ಚಿಕ್ಕ ಕೋಣೆಯನ್ನು ಆಕಾಶನ ಅತ್ತಿಗೆ ಮಾಲತಿ ಇದ್ದುದರಲ್ಲೇ ಹೇಗೋ ಒಂದಿಷ್ಟು ಸಿಂಗರಿಸಿ, ಮಂಚಕ್ಕೆ ಒಂದಿಷ್ಟು ಹೂಗಳ ಹಾರ ಇಳಿಬಿಟ್ಟು, ಹೊಸ ಹಾಸಿಗೆಯ ಮೇಲೆ ಮಲ್ಲಿಗೆಯ ಬಿಡಿ ಹೂಗಳನ್ನು ಉದುರಿಸಿ ಅಂತೂ ಆ ಕೋಣೆಗೆ ಮೊದಲ ರಾತ್ರಿಯ ಸ್ಪರ್ಶ ನೀಡುವಲ್ಲಿ ಯಶಸ್ವಿಯಾಗಿದ್ದಳು. ಅಲ್ಲಿ ಮೈ ತುಂಬಾ ಸೆರಗುಹೊದ್ದು, ತಲೆ ತಗ್ಗಿಸಿ ಗಂಡನ ನಿರೀಕ್ಷೆಯಲ್ಲಿರಬೇಕಾದ ನವ ವಧು ತನುಜಾ ನಾಚಿಕೊಳ್ಳುವುದಿರಲಿ, ಕಿಡಿಕಾರುತ್ತಾ ತಂದೆ ರಾಮರಾಯರಿಗೆ ಫೋನ್‌ ಮಾಡಿದ್ದಳು.

``ಡ್ಯಾಡಿ, ಇದ್ಯಾವ ಜನ್ಮದ ಸೇಡು ತೀರಿಸಿಕೊಳ್ಳಬೇಕೆಂದು ನನ್ನನ್ನು ಈ ನರಕದ ಕೂಪಕ್ಕೆ ತಳ್ಳಿದಿರಿ? ಈ ಹಾಳು ಕೊಂಪೆಯಲ್ಲಿ ಏನು ಸ್ವರ್ಗ ಸುಖ ಸುರಿದುಹೋಗುತ್ತಿದೆ ಎಂದು ನಾನು ಇಲ್ಲಿರಬೇಕು? ಬೇಸಿಗೆಯ ಧಗೆಯಿಂದ ಬೆಂದುಹೋಗುತ್ತಿದ್ದರೆ ಒಂದು ಎ.ಸಿ. ಇರಲಿ, ಧಾರಾಳ ಗಾಳಿ ನೀಡುವ ಫ್ಯಾನೂ ಗತಿಯಿಲ್ಲದೆ ಯಾವುದೋ ಡಕೋಟಾ ತರಹದ್ದು ಗಿರ್ರೆಂದು ಸೌಂಡ್‌ ಮಾಡುತ್ತಾ ತಲೆ ನೋವು ತರಿಸಿದೆ. ನನಗಂತೂ ಉಸಿರುಕಟ್ಟಿ ಸಾಯುವಂತಾಗಿದೆ....''

ಆ ಕಡೆಯಿಂದ ತಂದೆಯ ಮಾತು ಕೇಳಿಸಿಕೊಂಡ ನಂತರ ತಕ್ಷಣ ಸಿಡುಕಿದಳು, ``ಅದೆಲ್ಲ ನನಗೆ ಗೊತ್ತಿಲ್ಲ ಡ್ಯಾಡ್‌.... ನಾನೀಗಲೇ ಮವೆಗೆ ವಾಪಸ್ಸು ಬರ್ತಿದ್ದೀನಿ..... ಅಷ್ಟೆ!''

ಆಕಾಶ್‌ ಹೊಸ ಹೆಂಡತಿಯ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಅವಾಕ್ಕಾದ. ಯಾವತ್ತು ಶ್ರೀಮಂತರಾದ ರಾಮರಾಯರ ಮನೆಯಿಂದ ಅವರ ಒಬ್ಬಳೇ ಮಗಳು ತನುಜಾಳ ಸಂಬಂಧ ಆಕಾಶನಿಗೆ ಬಂದಿತ್ತೋ, ಆ ಮನೆಯವರೆಲ್ಲ ಮೂಕವಿಸ್ಮಿತರಾಗಿದ್ದರು. ಎಲ್ಲಿ ರಾಯರ ವೈಭವೋಪೇತ ಜೀವನಶೈಲಿ ಹಾಗೂ ಎಲ್ಲಿ  ಆಕಾಶನ ಮನೆಯವರ ಮಧ್ಯಮ ವರ್ಗದ ಜೀವನ! ಎರಡು ಮನೆತನಗಳಲ್ಲೂ ಅಜಗಜಾಂತರ ವ್ಯತ್ಯಾಸವಿತ್ತು. ಯಾವುದೇ ಆಸ್ತಿಪಾಸ್ತಿಗಳ ಬೆಂಬಲವಿಲ್ಲದ ಆಕಾಶ್‌, ತನ್ನ ಸ್ವಪ್ರತಿಭೆಯಿಂದ ವಿಶ್ವವಿದ್ಯಾನಿಲಯದಲ್ಲಿ ಲೆಕ್ಚರರ್‌ ನೌಕರಿ ಗಿಟ್ಟಿಸಿಕೊಂಡಿದ್ದ.

ಹೀಗೆ ಒಂದು ಸೆಮಿನಾರ್‌ನಲ್ಲಿ ಆಕಾಶನ ವಿದ್ವತ್ತಿನಿಂದ ಪ್ರಭಾವಿತರಾದ ರಾಮರಾಯರು, ಅವನನ್ನೇ ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂದು ನಿರ್ಧರಿಸಿದರು. ಆಕಾಶ್‌ನಂಥ ಬುದ್ಧಿವಂತ ವ್ಯಕ್ತಿ, ಖಂಡಿತಾ ತಮ್ಮ ಬಿಸ್‌ನೆಸ್‌ನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗಬಲ್ಲ ಎಂಬ ಆತ್ಮವಿಶ್ವಾಸ ಮೂಡಿತು. ತಮ್ಮ ಯೌವನದಲ್ಲಿ ಎಲ್ಲರಿಗೂ ಅತಿ ಆದರ್ಶದ ಹುಚ್ಚು ನೆತ್ತಿಗೇರಿರುತ್ತದೆ. ಆದರೆ ಐಶ್ವರ್ಯದ ಪಾಕದಲ್ಲಿ ನೆನೆಯುತ್ತಿದ್ದಂತೆ ಆದರ್ಶ ತಾನಾಗಿ ಆವಿಯಾಗಿ ಹೋಗುತ್ತದೆ. ತಮ್ಮ ಮಗಳು ತನುಜಾಳ ಹಠಮಾರಿ ಬುದ್ಧಿಯಿಂದ ಖಂಡಿತಾ ಅಳಿಯ ಮುಂದೆ ಈ ಮನೆಗೆ ಬಂದು, ಮನೆ ಅಳಿಯನಾಗಿ ತಮ್ಮ ಆಸ್ತಿ ಸಂರಕ್ಷಿಸುತ್ತಾನೆ ಎಂದು ನಂಬಿದರು. ಆದರೆ ಆಕಾಶನಿಗೆ ಒಳಗೊಳಗೇ ಆತಂಕವಿತ್ತು. ತಾಯಿ ಲಲಿತಮ್ಮನೆದುರು ಹೇಳಿಕೊಂಡ, ``ಅಮ್ಮ, ಅತಿ ಶ್ರೀಮಂತರಾದ ರಾಯರ ಒಬ್ಬಳೇ ಮಗಳು ಈ ನಮ್ಮ ಮಧ್ಯಮ ವರ್ಗದ ಸಾಮಾನ್ಯ ಜೀವನಕ್ಕೆ ಅಡ್ಜಸ್ಟ್ ಆಗಬಲ್ಲಳೇ? ಅವಳು ಸಂಜೆ ಪೂರ್ತಿ ಕ್ಲಬ್ಬುಗಳಲ್ಲಿ ಕಳೆಯುತ್ತಾಳೆ ಅಂತಾರೆ. ಅವರಿಗೂ ನಮಗೂ ಏಣಿ ಇಟ್ಟರೂ ಸಂಬಂಧ ಎಟುಕಲಾರದು ಅಂತ್ಲೇ ಅನಿಸುತ್ತೆ.''

bin-patwar-story_1

``ಅದು ಹಾಗಲ್ಲಪ್ಪ, ಒಮ್ಮೆ ಮದುವೆ ಅಂತ ಆಗಿಬಿಟ್ಟರೆ ಹೆಣ್ಣುಮಕ್ಕಳು ತಮ್ಮನ್ನು ತಾವು ಹೊಸ ಜೀವನಕ್ಕೆ ತಕ್ಕಂತೆ ರೂಪಿಸಿಕೊಳ್ಳುತ್ತಾರೆ. ಅವಳ ವೈಯಕ್ತಿಕ ಕೆಲಸಗಳಿಗಾಗಿ ಒಬ್ಬ ಆಳನ್ನು ನೇಮಿಸಿಕೊಡ್ತೀನಿ ಅಂತ ರಾಯರು ಹೇಳಿದ್ದಾರೆ. ನಮ್ಮ ಮನೆಯಲ್ಲಿ ಅವಳೇನು ಅಡುಗೆ ಮಾಡಿ, ಪಾತ್ರೆ ತೊಳೆಯಬೇಕೇ?'' ಲಲಿತಮ್ಮ ಮಗನಿಗೆ ಸಲಹೆ ನೀಡಿದ್ದರು. ಸೊಸೆ ಜೊತೆ ಬರಲಿರುವ ದೊಡ್ಡ ಮೊತ್ತದ ವರದಕ್ಷಿಣೆಯಿಂದ ಹೇಗೋ ತಮ್ಮ ಇಬ್ಬರು ಅವಿವಾಹಿತ ಹೆಣ್ಣುಮಕ್ಕಳ ಮದುವೆಯ ಜವಾಬ್ದಾರಿ ಕಳೆದುಕೊಳ್ಳಬಹುದೆಂದು ಅವರು ದೂರದ ಲೆಕ್ಕಾಚಾರ ಹಾಕಿದ್ದರು. ಆಕಾಶ್‌ ಈ ಕುರಿತಾಗಿ ಇನ್ನೂ ಯೋಚಿಸುತ್ತಿರುವಾಗಲೇ  ಆ ಕಡೆಯಿಂದ ರಾಯರು ಅವನಿಗೆ ಫೋನ್‌ ಮಾಡಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ