ಚಾಕಲೇಟ್ಶೇಕ್

ಸಾಮಗ್ರಿ : 1 ದೊಡ್ಡ ಬಾರ್‌ ಚಾಕಲೇಟ್‌, 3 ಸಣ್ಣ ಚಮಚ ಚಾಕಲೇಟ್‌ ಅಕ್ರೋಟ್‌ (ಹೇಝಲ್ ನಟ್ಸ್) (ರೆಡಿಮೇಡ್‌ ಲಭ್ಯ), 2 ಕಪ್ ಕ್ರೀಂ, 1 ಕಪ್‌ ಹಾಲು, ಅಲಂಕರಿಸಲು ಒಂದಿಷ್ಟು ಚಾಕಲೇಟ್‌ ಚಿಪ್ಸ್.

ವಿಧಾನ : ಚಾಕಲೇಟ್‌ ಬಾರ್‌ನ್ನು ಮೈಕ್ರೋವೇವ್ ‌ನಲ್ಲಿರಿಸಿ, ಕರಗಿಸಿ. ನಂತರ ಇದಕ್ಕೆ ಉಳಿದ ಸಾಮಗ್ರಿ ಬೆರೆಸಿ ಚೆನ್ನಾಗಿ ಕದಡಿಕೊಂಡು 2-3 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.

ಫ್ರ್ಯಾಪೆ ಟೀ

ಸಾಮಗ್ರಿ : 1 ಕಪ್‌ ನೀರು, ಅರ್ಧ ಕಪ್‌ ಹಾಲು, 1 ಚಮಚ ಟೀ ಪುಡಿ, 2 ಚಿಟಕಿ ದಾಲ್ಚಿನ್ನಿ ಪುಡಿ, ರುಚಿಗೆ ತಕ್ಕಷ್ಟು ಸಕ್ಕರೆ, ಐಸ್ ಕ್ಯೂಬ್ಸ್.

ವಿಧಾನ : ಮೊದಲು ನೀರನ್ನು ಬಿಸಿ ಮಾಡಿ, ಟೀ ಪುಡಿ ಬೆರೆಸಿ ಅದನ್ನು 2-3 ನಿಮಿಷ ಚೆನ್ನಾಗಿ ಕುದಿಸಬೇಕು. ನಂತರ ಒಂದೊಂದಾಗಿ ಉಳಿದೆಲ್ಲ ಸಾಮಗ್ರಿ ಬೆರೆಸಿ, ಮತ್ತಷ್ಟು ಕುದಿಸಿ, ಕೆಳಗಿಳಿಸಿ ಆರಲು ಬಿಡಿ. ಇದನ್ನು ಸೋಸಿಕೊಂಡು, ಉದ್ದದ ಗ್ಲಾಸಿಗೆ ಸುರಿದು, ಐಸ್‌ ಕ್ಯೂಬ್ಸ್ ಬೆರೆಸಿ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

cookry-B

ಚೀಸ್ಫಿಂಗರ್ಸ್

ಸಾಮಗ್ರಿ : 1 ಕಪ್‌ ಮೈದಾ, 2-3 ಚಿಟಕಿ ಬೇಕಿಂಗ್‌ ಪೌಡರ್‌, ಒಂದಿಷ್ಟು ಬ್ರೆಡ್‌ ಕ್ರಂಬ್ಸ್, ಬ್ರೆಡ್‌ ಸ್ಲೈಸಸ್‌, ಹೆಚ್ಚಿದ 2-3 ಎಸಳು ಬೆಳ್ಳುಳ್ಳಿ, 3-4 ಹಸಿ ಮೆಣಸು, 1 ಮೊಟ್ಟೆ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, 1-2 ಚಿಟಕಿ ಹುರಿದು ಪುಡಿ ಮಾಡಿದ ಸಾಸುವೆ, ಅರ್ಧ ಕಪ್‌ ತುರಿದ ಚೀಸ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಕರಿಯಲು ಎಣ್ಣೆ.

ವಿಧಾನ : ಒಂದು ಬಟ್ಟಲಿಗೆ ಮೊಟ್ಟೆ ಒಡೆದು ಹಾಕಿಕೊಂಡು ಗೊಟಾಯಿಸಿ. ಇದಕ್ಕೆ ನೀರಿನೊಂದಿಗೆ ಉಳಿದೆಲ್ಲ ಸಾಮಗ್ರಿ ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಬ್ರೆಡ್‌ ಸ್ಲೈಸ್‌ನ್ನು 3 ಭಾಗವಾಗಿ ಉದ್ದಕ್ಕೆ ಕತ್ತರಿಸಿ. ಪ್ರತಿಯೊಂದನ್ನೂ ಇದರಲ್ಲಿ ಅದ್ದಿಕೊಂಡು, ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಕರಿಯಬೇಕು. ನಂತರ ಚಿತ್ರದಲ್ಲಿರುವಂತೆ ಹೆಚ್ಚಿದ ಎಲೆಕೋಸು, ಟೊಮೇಟೊ ಕೆಚಪ್‌ ಜೊತೆ ಸವಿಯಲು ಕೊಡಿ.

cookry-C

ತೆಂಗಿನ ಐಸ್ಕ್ರೀಂ

ಸಾಮಗ್ರಿ : 1 ಗಿಟುಕು ತೆಂಗಿನ ತುರಿ, ಅರ್ಧ ಕಪ್‌ ಪುಡಿ ಸಕ್ಕರೆ, ಅರ್ಧ ಲೀ. ಕಾದಾರಿದ ಗಟ್ಟಿ ಹಾಲು.

ವಿಧಾನ : ಮೊದಲು ಮಿಕ್ಸಿಯಲ್ಲಿ ತೆಂಗಿನ ತುರಿ ನುಣ್ಣಗೆ ಮಾಡಿಕೊಂಡು ಅದಕ್ಕೆ ಸಕ್ಕರೆ, ಹಾಲು ಬೆರೆಸಿ ಚೆನ್ನಾಗಿ ಬ್ಲೆಂಡ್‌ ಮಾಡಿ. ಇದನ್ನು ಫ್ರೀಝರಿನಲ್ಲಿಟ್ಟು ಸೆಟ್‌ ಆಗಲು ಬಿಡಿ. ನಂತರ ದೊಡ್ಡ ಗ್ಲಾಸ್‌ಗೆ ಸುರಿದು, ಗುಲಾಬಿ ದಳಗಳಿಂದ ಅಲಂಕರಿಸಿ ಸವಿಯಲು ಕೊಡಿ.

ಚೀಸ್ಮಶ್ರೂಂ ಸ್ಯಾಂಡ್ವಿಚ್

ಸಾಮಗ್ರಿ : 4 ಚಮಚ ಬೆಣ್ಣೆ, ಅರ್ಧ ಪ್ಯಾಕೆಟ್‌ ಹೆಚ್ಚಿದ ಮಶ್‌ರೂಂ, 1 ದೊಡ್ಡ ಈರುಳ್ಳಿ, 1-1 ಸಣ್ಣ ಚಮಚ ಮಿಕ್ಸ್ಡ್ ಹರ್ಬ್ಸ್, ಬೆಳ್ಳುಳ್ಳಿ, ಶುಂಠಿ ಪೇಸ್ಟ್. ಒಂದಿಷ್ಟು ತುರಿದ ಚೀಸ್‌, ಬ್ರೆಡ್‌ ಸ್ಲೈಸಸ್‌, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.

ವಿಧಾನ : ಮೊದಲು ಬಾಣಲೆಯಲ್ಲಿ 2 ಚಮಚ ಬೆಣ್ಣೆ ಬಿಸಿ ಮಾಡಿ, ಹೆಚ್ಚಿದ ಈರುಳ್ಳಿ ಆಮೇಲೆ ಮಶ್‌ರೂಂ ಹಾಕಿ ಬಾಡಿಸಬೇಕು. ನಂತರ ಉಪ್ಪು, ಮಸಾಲೆಗಳನ್ನು ಒಂದೊಂದಾಗಿ ಬೆರೆಸಿ ಕೆದಕಬೇಕು. ಕೊನೆಯಲ್ಲಿ ಚೀಸ್‌ ಬೆರೆಸಿ, ಕೈಯಾಡಿಸಿ ಕೆಳಗಿಳಿಸಿ. ಆಮೇಲೆ ಬ್ರೆಡ್‌ ಸ್ಲೈಸ್‌ಗೆ ಬೆಣ್ಣೆ ಸವರಿಕೊಳ್ಳಿ. ಇದರ ಮೇಲೆ 2-3 ಚಮಚ ಮಶ್‌ರೂಂ ಮಿಶ್ರಣ ಹರಡಿ, ಸ್ಯಾಂಡ್‌ವಿಚ್‌ ಸಿದ್ಧಪಡಿಸಿ. ಇದನ್ನು ತ್ರಿಕೋನಾಕಾರವಾಗಿ ಕತ್ತರಿಸಿ, ಸ್ಯಾಂಡ್‌ವಿಚ್‌ ಮೇಕರ್‌ನಲ್ಲಿ ಗ್ರಿಲ್ ‌ಅಥವಾ ತವಾ ಮೇಲೆ ಟೋಸ್ಟ್ ಮಾಡಿ. ಬಿಸಿಬಿಸಿಯಾಗಿ ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

cookry-D

ಕೇಕ್ಶೇಕ್

ಸಾಮಗ್ರಿ : 2-3 ಫ್ರೂಟ್‌ ಕೇಕ್‌ ಸ್ಲೈಸ್‌, ಅರ್ಧರ್ಧ ಕಪ್‌ ಕ್ರೀಂ ಗಟ್ಟಿ ಹಾಲು, 4 ಚಮಚ ಸಕ್ಕರೆ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಮಿಕ್ಸಿಗೆ ಹಾಕಿ ಚೆನ್ನಾಗಿ ಬ್ಲೆಂಡ್‌ ಮಾಡಿ. ಇದನ್ನು ಫ್ರಿಜ್‌ನಲ್ಲಿರಿಸಿ ಕೂಲ್ ‌ಮಾಡಿ ಸವಿಯಲು ಕೊಡಿ.

ಚೀಸ್ಆಮ್ಲೆಟ್

ಸಾಮಗ್ರಿ : 4-5 ಮೊಟ್ಟೆ, ಅಗತ್ಯವಿದ್ದಷ್ಟು ಉಪ್ಪು, ಮೆಣಸು, ಬೆಣ್ಣೆ, 1 ಕಪ್‌ ತುರಿದ ಚೀಸ್‌.

ವಿಧಾನ : ಒಂದು ಬಟ್ಟಲಿಗೆ ಮೊಟ್ಟೆಗಳನ್ನು ಒಡೆದು ಹಾಕಿ ಅದಕ್ಕೆ ಉಪ್ಪು, ಮೆಣಸು ಬೆರೆಸಿ ಚೆನ್ನಾಗಿ ಗೊಟಾಯಿಸಿ. ಒಲೆಯ ಮೇಲೆ ತಾವು ಇರಿಸಿ, ಮೊದಲು ಬೆಣ್ಣೆ ಹರಡಿ. ಅದರ ಮೇಲೆ 3-4 ಚಮಚಗಳಷ್ಟು ಮೊಟ್ಟೆ ಮಿಶ್ರಣ ಹರಡಬೇಕು. ಇದರ ಮೇಲೆ ಒಂದಷ್ಟು ತುರಿದ ಚೀಸ್‌ ಉದುರಿಸಿ. ಇದನ್ನು ಎರಡೂ ಬದಿ ಚೆನ್ನಾಗಿ ಬೇಯಿಸಿ, ಬಿಸಿ ಬಿಸಿಯಾಗಿ ಟೊಮೇಟೊ ಕೆಚಪ್‌ ಜೊತೆ, ಬ್ರೆಡ್‌ ಸ್ಯಾಂಡ್‌ವಿಚ್‌ ಮಾಡಿ ಸವಿಯಲು ಕೊಡಿ.

ಗಾರ್ಲಿಕ್ಚೀಸ್ರಾಪ್

ಸಾಮಗ್ರಿ : 1-2 ಕ್ಯೂಬ್‌ ಬೆಣ್ಣೆ, 2 ಕಪ್‌ ತುರಿದ ಚೀಸ್‌, 1 ಮೊಟ್ಟೆ, 4-5 ಎಸಳು ಬೆಳ್ಳುಳ್ಳಿ (ಸಣ್ಣಗೆ ಹೆಚ್ಚಿಡಿ), ರುಚಿಗೆ ತಕ್ಕಷ್ಟು ಉಪ್ಪು, ಪುಡಿ ಮೆಣಸು, ಶುಂಠಿ/ಹಸಿಮೆಣಸಿನ ಪೇಸ್ಟ್, ಹೆಚ್ಚಿದ ಕೊ.ಸೊಪ್ಪು, ಒಂದಿಷ್ಟು ಫಾಯಿಲ್ ‌ಪೇಪರ್‌.

ವಿಧಾನ : ಒಂದು ಬಟ್ಟಲಿಗೆ ಮೊಟ್ಟೆ ಒಡೆದು ಹಾಕಿ ಬೀಟ್‌ ಮಾಡಿಕೊಳ್ಳಿ. ಇದಕ್ಕೆ ತುರಿದ ಚೀಸ್‌, ಕೊ.ಸೊಪ್ಪು ಹಾಕಿ ಗೊಟಾಯಿಸಿ. ಒಂದು ಚಿಕ್ಕ ಪ್ಯಾನಿನಲ್ಲಿ ಬೆಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ಉಪ್ಪು, ಮೆಣಸು, ಉಳಿದ ಮಸಾಲೆ ಹಾಕಿ ಕೆದಕಿ ಕೆಳಗಿಳಿಸಿ. ಮೊಟ್ಟೆಯಿಂದ ಆಮ್ಲೆಟ್‌ತಯಾರಿಸಿ, ಅದರ ಮೇಲೆ ಈ ಬೆಣ್ಣೆಯ ಮಿಶ್ರಣ ಹರಡಬೇಕು. ಅದನ್ನು ಕೆಳಗಿಳಿಸಿ, ಮೇಲೆ ಇನ್ನಷ್ಟು ಬೆಣ್ಣೆ ಸವರಿ, ನೀಟಾಗಿ ಫಾಯಿಲ್ ಕವರ್‌ನಲ್ಲಿ ಸುತ್ತಿಕೊಂಡು, 4 ಭಾಗವಾಗಿ ಕತ್ತರಿಸಿ 10-12 ನಿಮಿಷ ಬೇಕ್‌ ಮಾಡಿ. ನಂತರ ಬಿಸಿಯಾಗಿ ಸರ್ವ್ ‌ಮಾಡಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ